Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪಠ್ಯಪುಸ್ತಕ ಸಂಪಾದನೆಯ ಅವಸರ ಮತ್ತು...

ಪಠ್ಯಪುಸ್ತಕ ಸಂಪಾದನೆಯ ಅವಸರ ಮತ್ತು ಅಪಸ್ವರ

ಡಾ. ಸಂಪತ್ ಬೆಟ್ಟಗೆರೆಡಾ. ಸಂಪತ್ ಬೆಟ್ಟಗೆರೆ6 Feb 2025 11:21 AM IST
share
ಪಠ್ಯಪುಸ್ತಕ ಸಂಪಾದನೆಯ ಅವಸರ ಮತ್ತು ಅಪಸ್ವರ

ಪ್ರತೀ ಮೂರು ವರ್ಷಗಳಿಗೊಮ್ಮೆ ಹಾಗೂ ಆಯಾ ಸಂದರ್ಭದ ಶಿಕ್ಷಣ ನೀತಿಗೆ ಅನುಗುಣವಾಗಿ ಕನ್ನಡ ಭಾಷಾ ಪಠ್ಯಗಳನ್ನು ಬಿಎ, ಬಿಕಾಂ, ಬಿಬಿಎ, ಬಿಎಸ್ಸಿ, ಬಿಸಿಎ ಮುಂತಾದ ಪದವಿ ತರಗತಿಗಳಿಗೆ ಹೊಸದಾಗಿ ರೂಪುಗೊಳಿಸಲಾಗುತ್ತದೆ. ಅದರಂತೆ ರಾಜ್ಯದ ಸಂಬಂಧಿಸಿದ ವಿಶ್ವವಿದ್ಯಾನಿಲಯಗಳ ಪಠ್ಯಪುಸ್ತಕ ಅಧ್ಯಯನ ಮಂಡಳಿಯ ಮುಂದೆ ಮೂಲ ಲೇಖಕರು, ಸಂಪಾದಕರು, ಪ್ರಕಾಶಕರ ಅನುಮತಿಯ ಮೇರೆಗೆ ಪಡೆದ ಕಥೆ, ಕವನ, ನಾಟಕ, ವಿಮರ್ಶೆ, ವಿಚಾರ ಮುಂತಾದ ಬರಹಗಳಿಂದ ತಾವು ಸಿದ್ಧಪಡಿಸಿದ ಪಠ್ಯಪುಸ್ತಕದ ಕರಡನ್ನು ಸಲ್ಲಿಸಲಾಗುತ್ತದೆ. ಅದರಂತೆ ಸರ್ವ ಸದಸ್ಯರ ಸಹಸಮ್ಮತಿಯ ಮೇರೆಗೆ ಆ ಪಠ್ಯಪುಸ್ತಕಗಳ ಸಂಪಾದಕರು ಅದನ್ನು ವಿದ್ಯಾರ್ಥಿಗಳ ಅಭ್ಯಾಸಕ್ಕೆ ಪೂರಕವಾಗಿ ಸಂಪಾದಿಸಿಕೊಡುವುದು ವಾಡಿಕೆ. ಆದರೆ ಈಗ ಬಹುತೇಕ ಈ ರೀತಿ ಆಗುತ್ತಿಲ್ಲ ಎಂದೇ ಹೇಳಬಹುದಾಗಿದೆ. ಸಂಪಾದಕರು ಅವರ ಆಸಕ್ತಿಗೆ ಅನುಕೂಲವಾದ ಕೈಗೆ ಸಿಕ್ಕಿದ ಪಠ್ಯಕ್ರಮಗಳನ್ನು ಮಾತ್ರ ಅವಸರವಸರವಾಗಿ ಸಂಪಾದಿಸಿ ಸಾಂಪ್ರದಾಯಿಕ ಎಂಬಂತೆ ಅಧ್ಯಯನ ಮಂಡಳಿಯ ತಾಂತ್ರಿಕವಾಗಿ ಮಾತ್ರ ಒಪ್ಪಿಗೆಪಡೆದಿರುವಂತೆ ಅನುಮಾನಕ್ಕೆ ಎಡೆಮಾಡಿಕೊಟ್ಟಿರುವಂತಹ ಪಠ್ಯಪುಸ್ತಕಗಳು ಇಂದಿನ ದಿನಮಾನದಲ್ಲಿ ರೂಪಿತವಾಗಿರುತ್ತವೆ. ಅದರಂತೆ ಅದನ್ನು ನೇರವಾಗಿ ವಿದ್ಯಾರ್ಥಿಗಳಿಗೆ ಮುದ್ರಿಸಿಕೊಡುತ್ತಿರುವರೇನೋ ಎಂದೆನಿಸುತ್ತದೆ.

ಇದು ನಿಜವೇ ಆಗಿದ್ದಲ್ಲಿ ವಿದ್ಯಾರ್ಥಿಗಳ ಸಂಬಂಧಿಸಿದ ಶಿಕ್ಷಣಕ್ರಮಕ್ಕೆ ಇದು ಎಷ್ಟು ಪೂರಕ ಎಂದು ಸ್ವತಃ ಸಂಪಾದಕರುಗಳು ತಾವೂ ಓದಿ ಅರಿತು ತದನಂತರ ಅದನ್ನು ಪಠ್ಯವನ್ನಾಗಿ ಅಳವಡಿಸದೇ ಇರುವುದು ದುರಂತವೇ ಸರಿ. ಇಂತಹವಕ್ಕೆಲ್ಲ ಸ್ಪಷ್ಟ ನಿದರ್ಶನಗಳೆಂದರೆ ವಿಶ್ವವಿದ್ಯಾನಿಲಯಗಳ ವಿವಿಧ ವಿಭಾಗಗಳ ಬಹುತೇಕ ಕನ್ನಡ ಪಠ್ಯಪುಸ್ತಕಗಳಲ್ಲಿ ಕಾಗುಣಿತ ದೋಷಗಳೂ ಒಳಗೊಂಡಂತೆ ವಿವಾದಾತ್ಮಕ ಸಂಗತಿಗಳು ನುಸುಳಿಕೊಂಡಿರುವುದರೊಂದಿಗೆ ವಿವಾದಕ್ಕೆ ಒಳಗಾಗುತ್ತಿರುವುದು. ಅದರಂತೆ ಇತ್ತೀಚೆಗೆ ಮಾಧ್ಯಮಗಳಲ್ಲಿ ಇಂತಹ ವಿಚಾರಗಳು ತುಂಬಾ ಸುದ್ದಿಯಾಗುತ್ತಿವೆ, ಕೂಡ. ಜೊತೆಗೆ ನಾಲ್ಕು ತಿಂಗಳ ಬೋಧನಾವಧಿಯ ಸೆಮಿಸ್ಟರ್‌ನ ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ಒಂದೆರಡು ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಕೆಲವು ವಿಶ್ವವಿದ್ಯಾನಿಲಯಗಳು ಪೂರೈಕೆ ಮಾಡಿರುವುದಿಲ್ಲ. ಇದು ಕಳೆದ ಕೆಲವು ವರ್ಷಗಳಿಂದ ಮಾಮೂಲಿ ಎಂಬಂತಾಗಿದೆ. ಇಷ್ಟು ಮಾತ್ರವಲ್ಲದೆ ಸೆಮಿಸ್ಟರ್ ಅವಧಿ ಎಂದು ಗೊತ್ತಿದ್ದರೂ ಸುದೀರ್ಘ ಪಠ್ಯಗಳನ್ನು ಸಂಕ್ಷಿಪ್ತಗೊಳಿಸಿಕೊಡದೆ ಹಾಗೂ ವಿದ್ಯಾರ್ಥಿಗಳಿಗೆ ಪೂರಕವಾದ ಶಿಕ್ಷಣ ಕ್ರಮಗಳಿಗೆ ಅನುಗುಣವಾಗಿ ಅಳವಡಿಸದೇ ಇರುವುದೂ ಕೂಡ ಇರುತ್ತದೆ. ಇದರಿಂದಲೂ ಸಹ ಪಠ್ಯಗಳು ನೀರಸ ಎಂದೆನಿಸಿ ವಿದ್ಯಾರ್ಥಿಗಳಲ್ಲಿನ ಮೂಲ ಆಸಕ್ತಿಯನ್ನೂ ಕಳೆದುಕೊಳ್ಳುವಂತೆ ಮಾಡುತ್ತಿವೆ. ಜೊತೆಗೆ ನಿಗದಿತ ಅವಧಿಯೊಳಗೆ ಇಂತಹ ಪಠ್ಯಗಳನ್ನು ಪೂರ್ಣವಾಗಿ ಬೋಧಿಸಲಾಗದೆ ಕೊನೆಗೆ ಉಳಿದಿರುವುದನ್ನು ನೀವೇ ಓದಿಕೊಳ್ಳಿ ಎಂಬ ಸಂದಿಗ್ಧತೆಗೆ ಅಧ್ಯಾಪಕರೂ ಒಳಗಾಗುವಂತಿರುತ್ತವೆ.

ಈ ಬಗ್ಗೆ ಪ್ರಶ್ನೆಮಾಡಬೇಕಾದ ಕೆಲವು ಕನ್ನಡ ಅಧ್ಯಾಪಕರುಗಳು ಜಾಣ ಮೌನಕ್ಕೆ ಶರಣರಾದವರಂತೆ ಕಂಡುಬಂದು ಪುಸ್ತಕ ಇನ್ನೂ ಮುದ್ರಣ ಹಂತದಲ್ಲಿದೆ ಎಂದು ವಿದ್ಯಾರ್ಥಿಗಳಿಗೆ ಕೇವಲ ಪರಿವಿಡಿಯನ್ನು ಬರೆಸಿ ತಮಗೆ ಸಿಕ್ಕಿದ ಕೆಲವೇ ಕೆಲವು ಪಠ್ಯಗಳ ಝೆರಾಕ್ಸ್ ಪ್ರತಿಗಳನ್ನು ಇಟ್ಟುಕೊಂಡು ಕಾಲಹರಣದ ಪರಿಸ್ಥಿತಿಗೆ ಒಗ್ಗಿಕೊಂಡಿದ್ದರೇನೋ ಎಂಬಂತೆ ಕಂಡುಬರುತ್ತಿದ್ದಾರೆ. ಹೀಗೆ ಇವುಗಳಿಂದಲೇ ತರಗತಿಗಳನ್ನು ಹೇಗೋ ನಿರ್ವಹಣೆ ಮಾಡಿ ಮುಗಿಸುತ್ತಾರೆಂದು ಕೆಲವು ವಿದ್ಯಾರ್ಥಿಗಳೇ ಕನ್ನಡ ತರಗತಿಗಳ ಪ್ರಸಕ್ತ ಸಂದರ್ಭವನ್ನು ಆಗಾಗ ವಿಶ್ಲೇಷಣೆ ಮಾಡುತ್ತಿರುವುದನ್ನು ಕೇಳಿಸಿಕೊಂಡಾಗಲೆಲ್ಲಾ ನಿಜಕ್ಕೂ ಬೇಸರವಾಗುತ್ತದೆ. ಪಠ್ಯಪುಸ್ತಕಗಳನ್ನು ಮುದ್ರಿಸಿ ಸಕಾಲಕ್ಕೆ ವಿದ್ಯಾರ್ಥಿಗಳಿಗೆ ಕೊಡಬೇಕಾಗಿದ್ದ ಕೆಲವು ವಿಶ್ವವಿದ್ಯಾನಿಲಯಗಳ ಪ್ರಸರಾಂಗಗಳು ಇತ್ತೀಚೆಗೆ ಅದೇಕೋ ಗೊತ್ತಿಲ್ಲ; ಹಾಗೆ ಮಾಡುತ್ತಿಲ್ಲ. ಬದಲಿಗೆ ಸೂಚಿತ ಖಾಸಗಿ ಪ್ರಕಾಶಕರಿಗೆ ಮುದ್ರಣ ಮತ್ತು ಮಾರಾಟದ ಹಕ್ಕನ್ನು ಕೊಟ್ಟಿರುವುದೂ ಇದೆ. ಇದರಿಂದ ಅವರು ನಿಗದಿಪಡಿಸಿದ ಕವರ್‌ಪೇಜ್ ಬೆಲೆಗೆ ಸಾಕಷ್ಟು ಬೆಲೆತೆತ್ತು ಪುಸ್ತಕ ಕೊಂಡುಕೊಳ್ಳುವ ಅನಿವಾರ್ಯತೆಯ ದಯನೀಯ ಸ್ಥಿತಿ ವಿದ್ಯಾರ್ಥಿಗಳದ್ದಾಗಿದೆ ಎಂದರೆ ತಪ್ಪಾಗಲಾರದು. ಇದರಿಂದ ಬಹುತೇಕ ವಿದ್ಯಾರ್ಥಿಗಳ ಕೈಯಲ್ಲಿ ಪಠ್ಯಪುಸ್ತಕದ ಬದಲಿಗೆ ಗೈಡ್‌ಗಳು ಪ್ರಶ್ನೋತ್ತರವಾಗಿ ಗಮನಸೆಳೆಯುತ್ತವೆ. ಹೀಗೆ ಒಬ್ಬ ಕಾಲೇಜೊಂದರ ವಿದ್ಯಾರ್ಥಿಯನ್ನು ‘‘ಯಾಕೋ ಪುಸ್ತಕದ ಬದಲಿಗೆ ಗೈಡ್ ತಗೆದುಕೊಳ್ಳುತ್ತಿದ್ದಿ?’’ ಎಂದು ಪ್ರಶ್ನಿಸಿದಾಗ ‘‘ಈ ವರ್ಷದ ಪ್ರಥಮ ಸೆಮಿಸ್ಟರ್ ಎಸ್‌ಇಪಿ ಕನ್ನಡ ಪಠ್ಯಪುಸ್ತಕ ತುಂಬಾ ತಡವಾಗಿ ನಮ್ಮ ಕೈ ಸೇರಿತು. ಹಾಗೇ ಮೌಖಿಕವಾಗಿ ಮೇಷ್ಟರಿಂದ ಪಾಠ ಕೇಳಿದ್ದರಿಂದ ಅಷ್ಟೊಂದು ಅರ್ಥವಾಗಿರಲಿಲ್ಲ ಅದಕ್ಕೆ ತಗೋತ ಇದ್ದೀನಿ!’’ ಎಂದು ಪಠ್ಯಪುಸ್ತಕ ಸಕಾಲಕ್ಕೆ ಸಿಗದಿದ್ದುದರ ಎದೆಯಾಳದ ದುಃಖವನ್ನು ಅಷ್ಟೇ ದೃಢತೆಯಿಂದ ಅಭಿವ್ಯಕ್ತಿಸಿದ.

ಅದರಂತೆ ವಿಶ್ವವಿದ್ಯಾನಿಲಯವೊಂದರ ವಿವಿಧ ವಿಭಾಗಗಳ ಕನ್ನಡ ಪ್ರಥಮ ಸೆಮಿಸ್ಟರ್ ಪಠ್ಯಪುಸ್ತಕಗಳನ್ನು ಗಮನಿಸಿದಾಗ ಈ ಹಿಂದಿನ ಎನ್‌ಇಪಿಗೂ ಎಸ್‌ಇಪಿಯ ಪರಿಕಲ್ಪನೆಗೆ ಏನೂ ವ್ಯತ್ಯಾಸ ಕಂಡುಬಾರದೆ ಯಥಾವತ್ತು ನಾಲ್ಕು ಘಟಕಗಳಲ್ಲಿ ತಲಾ ನಾಲ್ಕುನಾಲ್ಕು ಪಠ್ಯಗಳನ್ನು ಜೋಡಿಸಲಾಗಿದೆ. ಆದರಿದು ಎನ್‌ಇಪಿಯಲ್ಲಿ ಚಿಂತನಾ ಘಟಕದ ಆಧಾರದಡಿಯಲ್ಲಿ ಪರಿಕಲ್ಪಿಸಿಕೊಡಲಾಗಿದೆ ಎಂಬ ಶೀರ್ಷಿಕೆಗಳು ಇದ್ದವು. ಆದರೆ ಎಸ್‌ಇಪಿಯವುಗಳಲ್ಲಿ ಇಲ್ಲ. ಆಗ ಬೋಧಿಸುವ ಅಧ್ಯಾಪಕರಿಗೆ ಹಾಗೂ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಇದನ್ನು ಯಾವ ವಿಚಾರವನ್ನು ಮನದಟ್ಟು ಮಾಡಿಸಲು ನಾಲ್ಕುನಾಲ್ಕು ಅಧ್ಯಯನಗಳಾಗಿ ಕೊಡಲಾಗಿದೆ ಎಂಬ ಗೊಂದಲದ ಗೂಡಾಗಿ ಕಾಣುತ್ತದೆ; ಜೊತೆಗೆ ಕಾಡುತ್ತದೆ ಕೂಡ. ಆದ್ದರಿಂದ ಮುಂದಿನ ಸೆಮಿಸ್ಟರ್‌ಗಳಲ್ಲಿ ಇನ್ನಾದರೂ ಸಂಪಾದನಾ ಬಳಗದ ಸೇವಾ ಹಿರಿತನದ ಕನ್ನಡ ಅಧ್ಯಾಪಕರೇ ಇರುವ ಪಠ್ಯಪುಸ್ತಕ ಅಧ್ಯಯನಮಂಡಳಿಗಳು ಒಂದಷ್ಟು ಪೂರ್ವಸಿದ್ಧತೆಯೊಂದಿಗೆ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳೇ ಸ್ವಯಂಪ್ರೇರಿತರಾಗಿ ಕೊಂಡುಕೊಳ್ಳುವಂತೆ ರೂಪುಗೊಳಿಸಿ ಒದಗಿಸಬೇಕಿದೆ. ಇದಕ್ಕೆ ತಮ್ಮ ಸಹೋದ್ಯೋಗಿ ಕಿರಿಯ ಅಧ್ಯಾಪಕರ ಸಹಾಯವನ್ನು ಪಡೆದುಕೊಳ್ಳುವ ನಿಟ್ಟಿನಲ್ಲೂ ಆಲೋಚಿಸಬೇಕಿದೆ. ತಮ್ಮ ಇತರ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಒತ್ತಡಗಳೂ ಸಾಕಷ್ಟು ಇದ್ದರೂ ಅದೇನೆ ಇರಲಿ, ಅದರಂತೆ ನಿಜವಾದ ಕನ್ನಡ ಕಾಯಕ ಎಂದರೆ ಮೊದಲು ಇದು ಎಂಬುದನ್ನು ಮನಗಾಣಬೇಕಿದೆ. ಹೀಗೆ ಮತ್ತೊಮ್ಮೆ ತಮಗೂ ಹಿಂದಿನ ಹಿರಿಯರಂತೆ ಕಾರ್ಯಗತವಾಗುವುದರ ಮುಖೇನ ಒತ್ತಡ ಹಾಗೂ ಆಲಸ್ಯವನ್ನು ತೊರೆದು ಕ್ರಿಯಾಶೀಲತೆಯಿಂದ ಮುಂದಿನ ಕಿರಿಯರಿಗೆ ಮಾರ್ಗದರ್ಶಕರೆಂಬಂತೆ ಮಾದರಿಯಾಗಬೇಕಿದೆ. ತನ್ಮೂಲಕ ವಿದ್ಯಾರ್ಥಿಗಳ ಹಿತಕಾಯುವುದು, ಕನ್ನಡ ಪ್ರಜ್ಞೆ ಬೆಳೆಸುವುದು ಅನಿವಾರ್ಯ ಹಾಗೂ ಅತ್ಯಗತ್ಯವಾಗಿದೆ.

share
ಡಾ. ಸಂಪತ್ ಬೆಟ್ಟಗೆರೆ
ಡಾ. ಸಂಪತ್ ಬೆಟ್ಟಗೆರೆ
Next Story
X