ಹಿಂದೂ ಜಾಗೃತನಾಗಿದ್ದಾನೆ, ಮುಂದೇನು?

ಹಿಂದುತ್ವವು ಹಿಂದೂಗಳ ವಿರುದ್ಧವೇ ತಿರುಗಿಬಿದ್ದಾಗ, ಅದು ಇಡೀ ಮನೆಗೆ ಬೆಂಕಿ ಹಚ್ಚಿತು. ಒಂದು ಕಾಲದಲ್ಲಿ ಆತನ ‘ದಿವ್ಯ ಸಹವಾಸ’ದ ಭಾಗವಾಗಿದ್ದ ಜನರೇ, ಇಂದು ತಮ್ಮನ್ನು ಜೈವಿಕವಾಗಿ ಜನಿಸಿದವರಲ್ಲ ಎಂದು ಹೇಳಿಕೊಂಡ ವ್ಯಕ್ತಿಯನ್ನು ರಾಷ್ಟ್ರೀಯ ಮಟ್ಟದ ಹಾಸ್ಯಾಸ್ಪದ ವಸ್ತುವನ್ನಾಗಿ ಮಾಡಿದ್ದಾರೆ. ಇಂತಹ ದಿನವನ್ನು ನೋಡಲು ತಮ್ಮ ಯೌವನವನ್ನೇ ಹೋರಾಟದಲ್ಲಿ ಕಳೆದುಕೊಂಡ ಮಿಲೇನಿಯಲ್‌ಗಳಿಗೆ ಇದರಿಂದ ಸಿಕ್ಕಿದ್ದಾದರೂ ಏನು? ತಲೆಮಾರುಗಳಿಂದ ನಡೆದ ಹೋರಾಟಗಳಿಗೆ ಇದರಿಂದ ಸಿಗುವ ಉತ್ತರವೇನು? ಮುಖ್ಯವಾಗಿ, ಇಲ್ಲಿಂದ ಮುಂದೆ ಪರಿಸ್ಥಿತಿ ಯಾವ ರೂಪ ಪಡೆಯಲಿದೆ?
ಬಹುಸಂಖ್ಯಾತ ರಾಜಕಾರಣದ ಅತ್ಯಂತ ದೊಡ್ಡ ವ್ಯಂಗ್ಯವೆಂದರೆ, ಅದು ಯಾವ ‘ಬಹುಸಂಖ್ಯಾತರನ್ನು’ ರಕ್ಷಿಸುವುದಾಗಿ ಪ್ರಮಾಣ ಮಾಡಿತೋ, ಕೊನೆಗೆ ಅದೇ ಬಹುಸಂಖ್ಯಾತರನ್ನು ನಾಶಪಡಿಸುತ್ತದೆ. ಇತಿಹಾಸದ ವಿವಿಧ ಕಾಲಘಟ್ಟಗಳ ಬಲಪಂಥೀಯ ಸರ್ವಾಧಿಕಾರಿಗಳಾದ ಅಡಾಲ್ಫ್ ಹಿಟ್ಲರ್, ಬೆನಿಟೊ ಮುಸ್ಸೋಲಿನಿ ಮತ್ತು ನಮ್ಮ ನೆರೆಯ ದೇಶದ ಮಹಿಂದ ರಾಜಪಕ್ಸೆ ಇವರೆಲ್ಲರನ್ನೂ ಈ ಮೂಲಭೂತ ವಿರೋಧಾಭಾಸವೇ ಒಂದಾಗಿಸುತ್ತದೆ.
ಈ ನಾಯಕರು ತಮ್ಮ ಬೆಂಬಲಿತ ಸಮುದಾಯಕ್ಕೆ ಜನಾಂಗೀಯ ಶ್ರೇಷ್ಠತೆ, ಆರ್ಥಿಕ ಪ್ರಗತಿ ಮತ್ತು ರಾಷ್ಟ್ರೀಯ ಹೆಮ್ಮೆಯ ಮರುಸ್ಥಾಪನೆಯ ಭರವಸೆ ನೀಡಿದ್ದರು. ಆದರೆ, ಕೊನೆಗೆ ತಾವೇ ಹಚ್ಚಿದ ಬೆಂಕಿಯಲ್ಲಿ ಬೆಂದು ಹೋದರು.
ಗುಜರಾತ್ ಸಿಎಂ ಮತ್ತು ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಆಡಳಿತ ತಂದೊಡ್ಡಿದ ದುರಂತದ ಅರಿವು ಜಾತಿ, ಮತ, ಧರ್ಮ, ಲಿಂಗ ಹಾಗೂ ಪ್ರದೇಶಗಳನ್ನು ಮೀರಿ ಭಾರತೀಯರಿಗೆ ಆಗತೊಡಗಿದೆ. ಈ ಮೂಲಕ ಮೋದಿ ಕೂಡ ಈ ಸರ್ವಾಧಿಕಾರಿಗಳ ಪಟ್ಟಿಗೆ ವೇಗವಾಗಿ ಸೇರುತ್ತಿದ್ದಾರೆ.
ಕೇವಲ ಶಿಕ್ಷಣ ವ್ಯವಸ್ಥೆಯಷ್ಟೇ ಅಲ್ಲ, ದೇಶದಲ್ಲಿ ಪ್ರತಿಯೊಂದೂ ಕುಸಿದುಬಿದ್ದಿದೆ ಎಂಬ ತೀವ್ರ ಭಾವನೆ ಮೂಡಿದೆ. ಜಾತ್ಯತೀತತೆ, ಸಾಮಾಜಿಕ ನ್ಯಾಯ, ಪತ್ರಿಕಾ ಸ್ವಾತಂತ್ರ್ಯ, ಮಾನವ ಹಕ್ಕುಗಳು, ಸಾಂವಿಧಾನಿಕ ಮೌಲ್ಯಗಳು, ಚುನಾವಣೆಗಳ ಪವಿತ್ರತೆ, ಒಕ್ಕೂಟ ವ್ಯವಸ್ಥೆ ಮತ್ತು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ವಿಚಾರಗಳು ಮಾತ್ರವಲ್ಲದೆ, ದೇಶದ ಇತರ ಕ್ಷೇತ್ರಗಳೂ ಪತನ ಕಂಡಿವೆ.
ತೈಲ ಸಂಸ್ಕರಣಾ ಸಾಮರ್ಥ್ಯದಲ್ಲಿ ಭಾರತ ಜಗತ್ತಿನಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ. ಪ್ರಧಾನಿಯವರ ಸ್ವಂತ ರಾಜ್ಯದಲ್ಲಿ ವಿಶ್ವದ ಅತಿದೊಡ್ಡ ಸಿಂಗಲ್-ಸೈಟ್ ರಿಫೈನರಿ (ಅಂಬಾನಿ ಒಡೆತನದ) ಇದೆ. ಆದರೆ, ಈ ಒಟ್ಟಾರೆ ಗುಣಮಟ್ಟದ ಕುಸಿತದಿಂದ ಇಂಧನದ ಗುಣಮಟ್ಟವೂ ಉಳಿದುಕೊಂಡಿಲ್ಲ.
ಆರ್ಥಿಕತೆ, ರೂಪಾಯಿ ಮೌಲ್ಯ, ಗಡಿ ಭದ್ರತೆ, ಸಾರ್ವಜನಿಕ ಆರೋಗ್ಯ, ಪರಿಸರ, ಮೂಲಸೌಕರ್ಯ, ಕಾನೂನು-ಸುವ್ಯವಸ್ಥೆ ಹಾಗೂ ಅಂತರ್‌ರಾಷ್ಟ್ರೀಯ ಸಂಬಂಧಗಳು ಎಲ್ಲವೂ ಕುಸಿದಿವೆ.
ಹಿಂದುತ್ವದ ಅತ್ಯಂತ ಪ್ರೀತಿಯ ದೇವರಿಗೆ ಅರ್ಪಿತವಾದ ಭವ್ಯ ಮಂದಿರದ ಹುಂಡಿಯೂ ಇದರಿಂದ ತಪ್ಪಿಸಿಕೊಂಡಿಲ್ಲ. ಜೆನ್ ಝಿ ಪ್ರತಿಭಟನೆಯನ್ನು ಬೆಂಬಲಿಸುತ್ತಿರುವವರಲ್ಲಿ, ಶ್ರೀರಾಮ ಲಲ್ಲಾನೇ ಈ ಸರಕಾರಕ್ಕೆ ಶಾಪ ನೀಡಿದ್ದಾನೆ ಎಂದು ನಂಬುವ ಭಕ್ತರೂ ಇದ್ದಾರೆ.
ಈ ಪರಿಸ್ಥಿತಿಯು ನಾಝಿ ಕಾಲದ ಪ್ರಸಿದ್ಧ ಹೇಳಿಕೆಗೆ ಹೊಸ ತಿರುವು ನೀಡುತ್ತದೆ-‘‘ಅವರು ಕಮ್ಯುನಿಸ್ಟರು, ಯೂನಿಯನ್ ವಾದಿಗಳು ಮತ್ತು ಯಹೂದಿಗಳನ್ನು ಹುಡುಕಿ ಬಂದಾಗ ನಾನು ಮಾತನಾಡಲಿಲ್ಲ, ಏಕೆಂದರೆ ನಾನು ಯಹೂದಿ, ಕಮ್ಯುನಿಸ್ಟ್ ಅಥವಾ ಯೂನಿಯನ್ ವಾದಿ ಆಗಿರಲಿಲ್ಲ’’.
ಹಿಂದುತ್ವವು ಹಿಂದೂಗಳ ವಿರುದ್ಧವೇ ತಿರುಗಿಬಿದ್ದಾಗ, ಅದು ಇಡೀ ಮನೆಗೆ ಬೆಂಕಿ ಹಚ್ಚಿತು. ಒಂದು ಕಾಲದಲ್ಲಿ ಆತನ ‘ದಿವ್ಯ ಸಹವಾಸ’ದ ಭಾಗವಾಗಿದ್ದ ಜನರೇ, ಇಂದು ತಮ್ಮನ್ನು ಜೈವಿಕವಾಗಿ ಜನಿಸಿದವರಲ್ಲ ಎಂದು ಹೇಳಿಕೊಂಡ ವ್ಯಕ್ತಿಯನ್ನು ರಾಷ್ಟ್ರೀಯ ಮಟ್ಟದ ಹಾಸ್ಯಾಸ್ಪದ ವಸ್ತುವನ್ನಾಗಿ ಮಾಡಿದ್ದಾರೆ. ಇಂತಹ ದಿನವನ್ನು ನೋಡಲು ತಮ್ಮ ಯೌವನವನ್ನೇ ಹೋರಾಟದಲ್ಲಿ ಕಳೆದುಕೊಂಡ ಮಿಲೇನಿಯಲ್‌ಗಳಿಗೆ ಇದರಿಂದ ಸಿಕ್ಕಿದ್ದಾದರೂ ಏನು? ತಲೆಮಾರುಗಳಿಂದ ನಡೆದ ಹೋರಾಟಗಳಿಗೆ ಇದರಿಂದ ಸಿಗುವ ಉತ್ತರವೇನು? ಮುಖ್ಯವಾಗಿ, ಇಲ್ಲಿಂದ ಮುಂದೆ ಪರಿಸ್ಥಿತಿ ಯಾವ ರೂಪ ಪಡೆಯಲಿದೆ?
ಪ್ರಗತಿಪರ ಚಳವಳಿಗಳ ಅನೇಕ ಹಿರಿಯ ಹೋರಾಟಗಾರರು ಈ ಐತಿಹಾಸಿಕ ಕ್ಷಣದ ಬಗ್ಗೆ ಏಕೆ ಎಚ್ಚರಿಕೆಯ ನಿಲುವು ತಳೆದಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಈ ಬದಲಾವಣೆ ಎಷ್ಟು ದಿನ ಉಳಿಯುತ್ತದೆ ಮತ್ತು ಭಾರತವನ್ನು ಎಷ್ಟು ಮಟ್ಟಿಗೆ ಬದಲಾಯಿಸುತ್ತದೆ ಎಂಬುದು ಅವರಿಗೆ ಸ್ಪಷ್ಟವಾಗಿಲ್ಲ.
ಪ್ರತಿಯೊಂದು ದಂಗೆಯೂ ಕ್ರಾಂತಿಯಾಗುವುದಿಲ್ಲ ಎಂಬುದನ್ನು ಗ್ರಹಿಸುವಷ್ಟು ಅನುಭವ ಅವರಿಗೆ ಇದೆ. ಆದರೆ, ಈಗ ನಡೆಯುತ್ತಿರುವುದು ಏನೆಂಬುದರ ಬಗ್ಗೆ ಅವರಿಗೆ ಸಂಪೂರ್ಣ ಖಚಿತತೆಯಿಲ್ಲ.
ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು ಮತ್ತು ಆದಿವಾಸಿಗಳ ಮೇಲೆ ದೌರ್ಜನ್ಯ ನಡೆದಾಗ, ಇಂದು ದೇಶದಾದ್ಯಂತ ರಸ್ತೆಗಿಳಿದಿರುವ ಲಕ್ಷಾಂತರ ಜನರು ಮತ್ತೆ ಧ್ವನಿ ಎತ್ತುತ್ತಾರೆಯೇ? ಇಂದು ಭಗತ್ ಸಿಂಗ್ ಅವರ ಪೋಸ್ಟರ್ ಗಳನ್ನು ಹಿಡಿದು, ಅದಾನಿ ಮತ್ತು ಅಂಬಾನಿಯಂತಹ ಬಂಡವಾಳಶಾಹಿಗಳನ್ನು ಟೀಕಿಸುತ್ತಿರುವವರು ಈ ವರ್ಗ ಸಂಘರ್ಷದಲ್ಲಿ ಕೈಜೋಡಿಸುತ್ತಾರೆಯೇ? ಎಂದು ಅವರು ಪ್ರಶ್ನಿಸುತ್ತಿರುವುದು ಸಹಜವಾಗಿದೆ.
’ಜೈ ಭೀಮ್’ ಘೋಷಣೆಯನ್ನು ಮೈಗೂಡಿಸಿಕೊಂಡಿರುವವರು, ಈಗ ಉದ್ಯೋಗ, ಶಿಕ್ಷಣ ಮತ್ತು ಚುನಾವಣಾ ರಾಜಕೀಯದಲ್ಲಿ ಹಿಂದುಳಿದ ಹಾಗೂ ಶೋಷಿತ ಜಾತಿಗಳಿಗೆ ಮೀಸಲಾತಿ ಮತ್ತು ಹೆಚ್ಚುವರಿ ರಕ್ಷಣೆಯನ್ನು ಬೆಂಬಲಿಸುತ್ತಾರೆಯೇ? ಲಿಂಗಸಮಾನತೆಯ ಪರ ಧ್ವನಿ ಎತ್ತುವ ಈ ಪೀಳಿಗೆಯು ಬ್ರಾಹ್ಮಣಶಾಹಿ ಮಾದರಿಯ ಪಿತೃಪ್ರಭುತ್ವವನ್ನು ಪ್ರಶ್ನಿಸುತ್ತದೆಯೇ?
ಧರ್ಮೇಂದ್ರ ಪ್ರಧಾನ್ ಅವರನ್ನು ಹುದ್ದೆಯಿಂದ ತೆಗೆದುಹಾಕಿದ ತಕ್ಷಣವೇ ಈ ಲಕ್ಷಾಂತರ ಜನರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂಬುದು ಸ್ಪಷ್ಟ. ಅವರು ಬಿಜೆಪಿ ಆಡಳಿತವನ್ನೇ ಬುಡಮೇಲು ಮಾಡಿದರೂ, ಹಿಂದುತ್ವದ ಉದಯಕ್ಕೆ ಕಾರಣವಾದ ಭಾರತೀಯ ರಾಜಕೀಯದ ಮೂಲಭೂತ ವಿರೋಧಾಭಾಸ ಕೊನೆಗೊಳ್ಳುತ್ತದೆಯೇ?
ಇವು ಅಸಂಬದ್ಧ ಆತಂಕಗಳೇನಲ್ಲ. ಏಕೆಂದರೆ, ವಿರೋಧ ಪಕ್ಷಗಳಲ್ಲೂ ಅಷ್ಟಾಗಿ ಬೆಂಬಲ ಸಿಗದ ವಿಷಯಗಳ ಪರವಾಗಿ ನಿಂತು ತೀವ್ರ ತ್ಯಾಗ ಮಾಡಿದ ಜನರಿಂದಲೇ ಈ ಪ್ರಶ್ನೆಗಳು ಮೂಡುತ್ತಿವೆ.
ಭಾರತದ ಪ್ರಗತಿಪರ ಚಳವಳಿಗಳು, ವಿಶೇಷವಾಗಿ ಎಡಪಂಥೀಯ ಮತ್ತು ಜಾತಿವಿರೋಧಿ ಪರಂಪರೆಯವರು, ಭವಿಷ್ಯದ ಕುರಿತು ಹೆಚ್ಚು ಆತಂಕಗೊಳ್ಳಲು ಸಾಕಷ್ಟು ಕಾರಣಗಳಿವೆ.
ಆಧುನಿಕ ಜಾತಿವಿರೋಧಿ ಮತ್ತು ಎಡಪಂಥೀಯ ಚಳವಳಿಗಳು ದಕ್ಷಿಣ ಏಶ್ಯದಲ್ಲಿ ವಸಾಹತುಶಾಹಿ ವಿರೋಧಿ ರಾಷ್ಟ್ರೀಯತಾವಾದಿ ಹೋರಾಟದ ಜೊತೆಯಲ್ಲೇ ಹುಟ್ಟಿಕೊಂಡವು. ಸ್ವಾತಂತ್ರ್ಯ ಪೂರ್ವದಲ್ಲಿ ಈ ಕ್ರಾಂತಿಕಾರಿ ಚಳವಳಿಗಳು ಮತ್ತು ಮುಖ್ಯವಾಹಿನಿಯ ಸ್ವಾತಂತ್ರ್ಯ ಹೋರಾಟದ ನಡುವಿನ ಸಂಬಂಧವು ಸ್ಪರ್ಧೆ ಹಾಗೂ ಸಹಕಾರಗಳ ನಡುವೆ ಸದಾ ಬದಲಾಗುತ್ತಿತ್ತು.
ಯುರೋಪಿಯನ್ನರು ನಿರ್ಗಮಿಸಿದ ನಂತರ, ಆಡಳಿತ ಜಾತಿಗಳಿಗೆ ಸೇರಿದ ವಸಾಹತುಶಾಹಿ ವಿರೋಧಿಗಳು ಜನಾಂಗೀಯ-ರಾಷ್ಟ್ರೀಯತಾವಾದಿಗಳಾಗಿ ಬದಲಾದರು. ಅವರ ರಾಜಕೀಯವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಈ ಪ್ರದೇಶವನ್ನು ಸುಳ್ಳು ರಾಷ್ಟ್ರೀಯತೆಗಳಾಗಿ ವಿಭಜಿಸಿತು.
ಭಾರತವನ್ನು ‘ಹಿಂದಿ-ಹಿಂದೂ-ಹಿಂದುತ್ವ’ ರಾಷ್ಟ್ರವನ್ನಾಗಿ ಮಾಡಲು ಬಿಜೆಪಿ ಒಂದೇ ಹೊಣೆಗಾರನಲ್ಲ. ‘UAPA’, ‘AFSPA’ ಮತ್ತು ‘FCRA’ನಂತಹ ಕಾಯ್ದೆಗಳು ಈಗಾಗಲೇ ಜಾರಿಯಲ್ಲಿದ್ದ ದೇಶವನ್ನು ಅವರು ಪರಂಪರೆಯಾಗಿ ಪಡೆದರು. ಕಾರ್ಮಿಕ ಸಂಘಟನೆಗಳು, ಗೋಹತ್ಯೆ ಮತ್ತು ‘ಜಲ್-ಜಂಗಲ್-ಜಮೀನ್’ (ನೀರು-ಕಾಡು-ಭೂಮಿ) ಹೋರಾಟಗಳನ್ನು ಈಗಾಗಲೇ ಅಪರಾಧೀಕರಿಸಲಾಗಿತ್ತು. ಮುಸ್ಲಿಮರನ್ನು ಕೆಟ್ಟದಾಗಿ ಚಿತ್ರಿಸುವ ಸಾಂಸ್ಕೃತಿಕ ತಳಹದಿ ಈಗಾಗಲೇ ನಿರ್ಮಾಣವಾಗಿತ್ತು. ಬಾಬಾಗಳು ಮತ್ತು ಧರ್ಮಗುರುಗಳ ಪ್ರಭಾವವಿತ್ತು ಹಾಗೂ ರೈತರ ಆತ್ಮಹತ್ಯೆಗಳು ಮಿತಿಮೀರಿದ್ದವು.
ಈ ಪ್ರಸ್ತುತ ಆಡಳಿತ ಅಧಿಕಾರಕ್ಕೆ ಬರುವ ಬಹಳ ಮುಂಚೆಯೇ, ಸಾರ್ವಜನಿಕ ವಲಯ, ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣವನ್ನು ಖಾಸಗೀಕರಣಕ್ಕೆ ಒಪ್ಪಿಸಲಾಗಿತ್ತು. ಸಾಮಾಜಿಕ ನ್ಯಾಯದ ನಡೆವಳಿಗಳನ್ನು ಬಹಿರಂಗವಾಗಿ ದುರ್ಬಲಗೊಳಿಸಲಾಗಿತ್ತು ಹಾಗೂ ಸರಕಾರದ ನೀತಿಗಳನ್ನು ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ಸ್ಥಳೀಯ ಬಂಡವಾಳಶಾಹಿಗಳು ನಿಯಂತ್ರಿಸುತ್ತಿದ್ದರು.
ಬಾಂಗ್ಲಾದೇಶದಲ್ಲಿ ನಡೆದಂತೆ, ದೇಶದ ಈ ಅಧೋಗತಿಯ ವಿರುದ್ಧ ಸದಾ ಹೋರಾಡುತ್ತಾ ಬಂದವರಿಗೆ ವಿರೋಧ ಪಕ್ಷಗಳು ಮತ್ತೆ ಆಡಳಿತಕ್ಕೆ ಬರುವುದರ ಬಗ್ಗೆ ಆತಂಕವಿರುವುದು ಸಹಜ.
ಇಂತಹ ಸಮಯದಲ್ಲಿ ಈ ಎಲ್ಲಾ ಕಳವಳಗಳು ಸಮಂಜಸವಾಗಿವೆ. ಆದರೆ, ಜನರ ಸ್ವಯಂಪ್ರೇರಿತ ದಂಗೆಯಿಂದ ಸಂಪೂರ್ಣ ವೈಚಾರಿಕ ಶುದ್ಧತೆಯನ್ನು ನಿರೀಕ್ಷಿಸುವುದು ಸೂಕ್ತವಲ್ಲ.
ಈ ಪ್ರತಿಭಟನೆಯು ನಿಜವಾದ ಬದಲಾವಣೆ ತರಬೇಕಾದರೆ, ನದಿಯಲ್ಲಿ ತೇಲಿಬಂದ ಬುಟ್ಟಿಯಲ್ಲಿರುವ ಮಗುವನ್ನು ಯಾರಾದರೂ ಸ್ವೀಕರಿಸಲೇಬೇಕು. ಈ ಶಿಶುವು ಸರ್ವಾಧಿಕಾರಿಗಳ ಆಡಳಿತದಿಂದ ನಮ್ಮನ್ನು ಮುಕ್ತಗೊಳಿಸುವ ರಕ್ಷಕ ಆಗಬಹುದು.
ದಂಗೆಯಿಂದ ಕ್ರಾಂತಿಯತ್ತ
ರೂಪುಗೊಳ್ಳುತ್ತಿರುವ ಜಾಗತಿಕ ವ್ಯವಸ್ಥೆಯ ಮುಖ್ಯ ಲಕ್ಷಣವೆಂದರೆ, ಫ್ಯಾಶಿಸಂ ವಿರುದ್ಧದ ಹೋರಾಟ ತೀವ್ರಗೊಳ್ಳುತ್ತಿದೆ. ಆದರೆ, ಈ ಭಾವನಾತ್ಮಕ ಕ್ಷೋಭೆಯ ಕಾಲದಲ್ಲಿ ಹಳೆಯ ವ್ಯವಸ್ಥೆಯ ಗಣ್ಯರ ಮೇಲೆ ಯಾರಿಗೂ ಒಲವಿಲ್ಲ. ಮುಖ್ಯವಾಹಿನಿಯ ದ್ವಿಪಕ್ಷೀಯ ರಾಜಕೀಯವು ಇನ್ನು ಮುಂದೆ ಆಕರ್ಷಕವಾಗಿ ಉಳಿದಿಲ್ಲ.
ಇಂದು ಚುನಾವಣಾ ಪ್ರಜಾಪ್ರಭುತ್ವ ಹೊಂದಿರುವ ದೇಶಗಳ ಮುಂದೆ ಇರುವ ಜಾಗತಿಕ ಪ್ರಶ್ನೆಯನ್ನೇ ಭಾರತವೂ ಎದುರಿಸುತ್ತಿದೆ. ಮಧ್ಯಮ ಮಾರ್ಗದ ರಾಜಕೀಯವೇ ಬಲಪಂಥದತ್ತ ವಾಲಿ, ಸಾಂಪ್ರದಾಯಿಕ ಎಡಪಂಥವು ತನ್ನ ಸತ್ವ ಕಳೆದುಕೊಂಡಿರುವಾಗ, ಬಲಪಂಥೀಯರನ್ನು ಸೋಲಿಸುವುದರಿಂದ ಏನು ಪ್ರಯೋಜನ?
‘ಬ್ಯಾಸ್ಟಿಲ್ ಜೈಲಿನ ಮೇಲಿನ ದಾಳಿ’ಯೊಂದಿಗೆ ಫ್ರಾನ್ಸ್ ನಲ್ಲಿ 1789ರಲ್ಲಿ ಆರಂಭವಾದ ಸ್ವಯಂಪ್ರೇರಿತ ದಂಗೆ ತಕ್ಷಣವೇ ‘ಫ್ರೆಂಚ್ ಕ್ರಾಂತಿ’ಯಾಗಲಿಲ್ಲ. ರಾಜಪ್ರಭುತ್ವವನ್ನು ಸಂಪೂರ್ಣವಾಗಿ ಕಿತ್ತೊಗೆದು ‘ಸ್ವಾತಂತ್ರ್ಯ-ಸಮಾನತೆ -ಭ್ರಾತೃತ್ವ’ದ ಹೊಸ ಸಂವಿಧಾನವನ್ನು ಅಳವಡಿಸಿಕೊಳ್ಳಲು ಇನ್ನೂ ಕೆಲವು ವರ್ಷಗಳು ಮತ್ತು ರಕ್ತಪಾತ ಬೇಕಾಯಿತು.
ಝಾರ್ ರಾಜನ ಆಡಳಿತದಲ್ಲಿದ್ದ ರಶ್ಯ ಕ್ರಾಂತಿಗೆ ಸಿದ್ಧವಾಗಿದೆ ಎಂದು ಜನರನ್ನು ಒಪ್ಪಿಸಲು ವ್ಲಾದಿಮಿರ್ ಲೆನಿನ್ ತಮ್ಮ ಯೌವನವನ್ನು ವಿನಿಯೋಗಿಸಿದರು. ಆದರೆ, ರಶ್ಯದ ಪರಿಸ್ಥಿತಿ ತಲೆಕೆಳಗಾಗುವ ಕೆಲವೇ ವಾರಗಳ ಮುಂಚಿನವರೆಗೂ ಅವರನ್ನು ಒಬ್ಬ ಸುಳ್ಳು ಪ್ರವಾದಿ ಎಂದೇ ಜನ ತಿರಸ್ಕರಿಸಿದ್ದರು ಹಾಗೂ ಅವರು ಝೂರಿಚ್‌ನಲ್ಲಿ ಗಡಿಪಾರು ಜೀವನ ನಡೆಸುತ್ತಿದ್ದರು.
ತೀವ್ರ ನಿರಾಶೆಗೊಂಡಿದ್ದ ಅವರು, ತಮ್ಮ ಜೀವಿತಾವಧಿಯಲ್ಲಿ ಕಾರ್ಮಿಕ ವರ್ಗದ ಕ್ರಾಂತಿಯನ್ನು ನೋಡಲು ಸಾಧ್ಯವೇ ಇಲ್ಲ ಎಂದು ಝೂರಿಚ್‌ನ ಯುವ ಸೋಷಿಯಲಿಸ್ಟ್‌ಗಳಿಗೆ ಬೇಸರದಿಂದಲೇ ಬೋಧಿಸುತ್ತಾ ದಿನ ಕಳೆಯುತ್ತಿದ್ದರು.
1917ರ ಫೆಬ್ರವರಿಯಲ್ಲಿ ಪೆಟ್ರೋಗ್ರಾಡ್‌ನಲ್ಲಿ ದಂಗೆ ಆರಂಭವಾಗಿ, ಕೆಲವೇ ದಿನಗಳಲ್ಲಿ ಝಾರ್ ರಾಜ ಅಧಿಕಾರ ತೊರೆದಾಗ, ಮೊದಲ ಕಮ್ಯುನಿಸ್ಟ್ ಕ್ರಾಂತಿಯ ಪಿತಾಮಹನೇ ಸಂಪೂರ್ಣವಾಗಿ ದಿಗ್ಭ್ರಮೆಗೊಂಡಿದ್ದರು.
ಆದರೆ, ಲೆನಿನ್ ಮತ್ತು ಅವರ ಬೋಲ್ಶೆವಿಕ್ ಪಕ್ಷವು ನೂತನ ಸೋವಿಯತ್ ಸೋಷಿಯಲಿಸ್ಟ್ ಗಣರಾಜ್ಯವನ್ನು ಸ್ಥಾಪಿಸಲು ಇನ್ನೂ ಆರು ವರ್ಷಗಳು ಹಾಗೂ ಹಳೆಯ ವ್ಯವಸ್ಥೆಯ ಉಳಿಕೆಗಳ ವಿರುದ್ಧ ಅಂತರ್ಯುದ್ಧವನ್ನೇ ನಡೆಸಬೇಕಾಯಿತು.
‘ಜೆನ್ ಝಿ’ ಪ್ರತಿಭಟನಾಕಾರರು ತೀವ್ರವಾದ ಪ್ರೀತಿ ಮತ್ತು ನಿಷ್ಠೆ ಹೇಗಿರುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕ್ರಾಂತಿಗಳು ರಕ್ತಸಿಕ್ತವಾಗಿಯೇ ಇರಬೇಕಿಲ್ಲ ಎಂಬ ನಂಬಿಕೆಗೆ ಅವರು ಭರವಸೆ ನೀಡಿದ್ದಾರೆ. ಆದರೆ, ಈ ಕ್ಷಣದ ಸ್ವಯಂಪ್ರೇರಿತ ಉತ್ಸಾಹವು ಕೇವಲ ಶಿಕ್ಷಣ ಸಚಿವರ ರಾಜೀನಾಮೆ ಅಥವಾ ಮೋದಿ ಆಡಳಿತದ ಅಂತ್ಯಕ್ಕಷ್ಟೇ ಸೀಮಿತವಾಗದೆ, ಅದಕ್ಕಿಂತ ದೊಡ್ಡದಾದ ಧ್ಯೇಯೋದ್ದೇಶದೊಂದಿಗೆ ಸಾಗಬೇಕಿದೆ.
ಕಲಿಯಬೇಕಾದ ಪಾಠಗಳು
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣದ ಖಾಸಗೀಕರಣ, ಕೇಸರೀಕರಣ ಹಾಗೂ ಗುಣಮಟ್ಟದ ಒಟ್ಟಾರೆ ಕುಸಿತದ ನಡುವಿನ ಕೊಂಡಿಯನ್ನು ಯಾರು ಬೆಸೆಯುತ್ತಾರೆ?
ಅವರು ಭಗತ್ ಸಿಂಗ್, ಅಶ್ಫಾಕುಲ್ಲಾ ಖಾನ್ ಮತ್ತು ರಾಮಪ್ರಸಾದ್ ಬಿಸ್ಮಿಲ್ ಅವರನ್ನು ಸ್ಮರಿಸುತ್ತಿರುವುದನ್ನು ನೋಡುವುದು ಆಶಾದಾಯಕವಾಗಿದೆ. ಆದರೆ, ಯುರೋಪಿಯನ್ನರು ಹೊರಟುಹೋದ ನಂತರ ಪ್ರಾರಂಭವಾದ ಎರಡನೇ ಸ್ವಾತಂತ್ರ್ಯ ಹೋರಾಟದ ನಾಯಕರನ್ನು ಈ ಪೀಳಿಗೆಗೆ ಪರಿಚಯಿಸುವವರು ಯಾರು?
ಅನಿತಾ, ರೋಹಿತ್ ವೇಮುಲಾ, ಪಾಯಲ್ ತಡ್ವಿ, ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ಹೋರಾಟದ ಪರಂಪರೆಯನ್ನು ತಾವೇ ಮುಂದುವರಿಸುತ್ತಿರುವುದಾಗಿ ಈ ಯುವಪೀಳಿಗೆಗೆ ತಿಳಿಸುವವರು ಯಾರು?
ಹಿಂದುತ್ವದಿಂದ ವಂಚಿತರಾಗಿದ್ದೇವೆ ಎಂದು ಭಾವಿಸುವ ಹಿಂದೂಗಳನ್ನು ‘ಮೃದು ಹಿಂದುತ್ವ’ ಹಾಗೂ ‘ಉದಾರವಾದಿ ಬ್ರಾಹ್ಮಣಶಾಹಿ’ಯ ಆಕರ್ಷಕ ರಾಜಕೀಯದಿಂದ ರಕ್ಷಿಸಬೇಕಿದೆ. ಅವರಿಗೆ ತಮ್ಮನ್ನು ಬಂಧಿಸಿರುವ ಸಂಕೋಲೆಗಳ ಅರಿವು ಮೂಡಿಸಬೇಕಿದೆ. ತಮ್ಮ ಆಧ್ಯಾತ್ಮಿಕ ಮತ್ತು ಆರ್ಥಿಕ ಮುಕ್ತಿ ಎಂಬುದು ಇತರ ಸಮುದಾಯಗಳೊಂದಿಗಿನ ಸೋದರತ್ವದಿಂದ ಮಾತ್ರ ಸಾಧ್ಯ ಎಂಬುದನ್ನು ಅವರು ಗ್ರಹಿಸಬೇಕಿದೆ. ಎಲ್ಲ ಸಮಸ್ಯೆಗಳ ಮೂಲ ಇರುವುದು ಕೇವಲ ಎರಡೇ ವಿಷಯಗಳಲ್ಲಿ ‘ಬಂಡವಾಳಶಾಹಿ’ ಮತ್ತು ‘ಬ್ರಾಹ್ಮಣಶಾಹಿ’.
ದೇಶಾದ್ಯಂತ ನಡೆಯುತ್ತಿರುವ ಈ ಪ್ರತಿಭಟನೆಗಳ ರಾಜಕೀಯ ರಹಿತ ಸ್ವರೂಪವನ್ನು ವಿಮರ್ಶಿಸುವವರು, ಇದನ್ನು ಕಂಡು ಹತಾಶರಾಗಿ ಈ ಐತಿಹಾಸಿಕ ಅವಕಾಶವನ್ನು ಕಳೆದುಕೊಳ್ಳಬಹುದು ಅಥವಾ ಈ ಹೊಸ ಪೀಳಿಗೆಯೊಂದಿಗೆ ನಿಜವಾದ ಬಾಂಧವ್ಯ ಬೆಳೆಸಿಕೊಳ್ಳುವ ಹಾದಿ ಕಂಡುಕೊಳ್ಳಬಹುದು.
ಈ ಯುವಜನತೆ ಈಗಾಗಲೇ ಮಾರ್ಕ್ಸ್‌ವಾದ, ಅಂಬೇಡ್ಕರ್ ವಾದ ಮತ್ತು ಸ್ತ್ರೀವಾದದ ಆಶಯಗಳನ್ನು ತಮ್ಮಲ್ಲಿ ಮೈಗೂಡಿಸಿಕೊಂಡಿದ್ದಾರೆ. ಆದರೂ ಅವರಿಗೆ ಈ ಸಿದ್ಧಾಂತಗಳ ಬೋಧನೆಯ ಅಗತ್ಯವಿದೆ. ಅವರಿಗೆ ಈ ಸಿದ್ಧಾಂತಗಳ ಸಾರವನ್ನು ಪರಿಚಯಿಸಬೇಕಿದೆ. ಈ ವಿಚಾರಗಳನ್ನು ತಲುಪಿಸಲು ‘ಕಾಸ್‌ಪ್ಲೇ’ (Cosplay) ಕಾರ್ಯಕ್ರಮದಲ್ಲಿ ವೈಚಾರಿಕ ತರಗತಿಗಳನ್ನು ನಡೆಸಬೇಕಾಗಿ ಬಂದರೂ ಸರಿ, ಬನ್ನಿ ನಾವು ‘ದಿ ಅವೆಂಜರ್ಸ್’ ಉಡುಗೆಯಲ್ಲೇ ಹೋಗೋಣ!
ಸೌಜನ್ಯ: thenewsminute.com






