Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕಮ್ಯುನಿಸ್ಟ್ ಕ್ರಾಂತಿಕಾರಿ ಫಿಡೆಲ್...

ಕಮ್ಯುನಿಸ್ಟ್ ಕ್ರಾಂತಿಕಾರಿ ಫಿಡೆಲ್ ಮತ್ತು ಫುಟ್ಬಾಲ್ ದಂತಕತೆ ಮರಡೋನ ಸ್ನೇಹ ಸಂಬಂಧದ ಇನ್‌ಸೈಡ್ ಸ್ಟೋರಿ

ಬಿ.ಕೆ.ಇಮ್ತಿಯಾಝ್ಬಿ.ಕೆ.ಇಮ್ತಿಯಾಝ್25 Nov 2025 2:34 PM IST
share
ಕಮ್ಯುನಿಸ್ಟ್ ಕ್ರಾಂತಿಕಾರಿ ಫಿಡೆಲ್ ಮತ್ತು ಫುಟ್ಬಾಲ್ ದಂತಕತೆ ಮರಡೋನ ಸ್ನೇಹ ಸಂಬಂಧದ ಇನ್‌ಸೈಡ್ ಸ್ಟೋರಿ

ಫುಟ್ಬಾಲ್ ದಂತಕತೆೆ, ಫುಟ್ಬಾಲ್ ಅಭಿಮಾನಿಗಳ ದೇವರು, ಫುಟ್ಬಾಲ್ ಕ್ಷೇತ್ರದಲ್ಲಿ ಅನೇಕ ದಾಖಲೆಗಳ ಸರದಾರ ತನ್ನ ಎಡಗಾಲಿನಲ್ಲಿ ಚಮತ್ಕಾರಗಳನ್ನೇ ಸೃಷ್ಟಿಸಿದ್ದ ಅರ್ಜೆಂಟೀನದ ಡೀಗೊ ಮರಡೋನ ತನ್ನ ಅದೇ ಎಡಗಾಲಿನಲ್ಲಿ ಅಮೆರಿಕಾ ಸಾಮ್ರಾಜ್ಯ ಶಾಹಿಗಳ ವಿರುದ್ಧದ ಕ್ರಾಂತಿಕಾರಿ ಹೋರಾಟಗಾರ ಕ್ಯೂಬಾದ ಮಾಜಿ ಅಧ್ಯಕ್ಷ, ಕಾಮ್ರೆಡ್ ಫಿಡೆಲ್ ಕ್ಯಾಸ್ಟ್ರೋ ಅವರ ಚಿತ್ರವನ್ನು ಟಾಟೂ ಹಾಕಿಸಿಕೊಂಡಿದ್ದರು. ಬಲಗೈಯಲ್ಲಿ ಮತ್ತೊರ್ವ ಕ್ರಾಂತಿಕಾರಿ ಚೆಗುವೇರಾರ ಟಾಟೂ ಹಾಕಿಸಿ ಕೊಂಡಿದ್ದರು. ಚೆಗುವೇರಾ ಮತ್ತು ಕ್ಯಾಸ್ಟ್ರೋ ಅವರ ಟಾಟೂವನ್ನು ಮರಡೋನ ಬೂಟಾಟಿಕೆಗೋ, ಫ್ಯಾಷನಿಗಾಗಿಯೋ ಹಾಕಿಸಿಕೊಂಡಿರಲಿಲ್ಲ. ತನ್ನ ಸಾಮ್ರಾಜ್ಯಶಾಹಿ ವಿರೋಧಿ ರಾಜಕೀಯ ಸಿದ್ದಾಂತದಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಲು ಇಬ್ಬರು ಹೋರಾಟಗಾರರ ಟಾಟೂವನ್ನು ಹಾಕಿಸಿಕೊಂಡಿದ್ದರು ಎಂಬುದು ಜಗಜ್ಜಾಹೀರಾಗಿದ್ದ ಸಂಗತಿ.

ಮರಡೋನ, ಫಿಡೆಲ್ ಅವರನ್ನು ಮೊದಲ ಬಾರಿ ಭೇಟಿ ಆಗಿದ್ದು 1987ರಲ್ಲಿ ಅರ್ಜೆಂಟೀನ ಫುಟ್ಬಾಲ್ ವಿಶ್ವಕಪ್ ಗೆದ್ದ ಸಂದರ್ಭದಲ್ಲಿ. ಆ ನಂತರ ಅವರಿಬ್ಬರು ಸ್ನೇಹಿತರಾಗಿದ್ದರು.

ಆದರೆ ಅವರಿಬ್ಬರೂ ಅತ್ಯಂತ ಆಪ್ತ ಸ್ನೇಹಿತರಾಗುವುದು 2000 ಇಸವಿಯಲ್ಲಿ. ಮರಡೋನ ಅತಿಯಾದ ಕೊಕೇನ್ ಅಮಲು ಪದಾರ್ಥ ಸೇವಿಸಿ ಸಾವಿನ ಅಂಚಿಗೆ ತಳ್ಳಲ್ಪಟ್ಟಾಗ ಅರ್ಜೆಂಟೀನದ ಆಸ್ಪತ್ರೆಗಳಲ್ಲಿ ಮರಡೋನರ ರೋಗಕ್ಕೆ ಚಿಕಿತ್ಸೆ ಲಭ್ಯವಿಲ್ಲ ಎಂದು ಮರಡೋನರನ್ನು ಆಸ್ಪತ್ರೆಯಿಂದ ಆಚೆ ಕಳುಹಿಸಿದರು. ಚಿಕಿತ್ಸಾ ವೈಫಲ್ಯದಿಂದ ಮರಡೋನ ಅರ್ಜೆಂಟೀನದಲ್ಲಿ ಸಾಯುವುದು ಅರ್ಜೆಂಟೀನ ಆಡಳಿತಕ್ಕೂ ಇಷ್ಟ ಇರಲಿಲ್ಲ . ಅದಕ್ಕಾಗಿ ವಿದೇಶಕ್ಕೆ ತೆರಳಲು ಅರ್ಜೆಂಟೀನ ಉಚಿತ ಸಲಹೆ ಕೊಡುತ್ತಿತ್ತು ಮತ್ತು ವಿಪರೀತ ಕೊಕೇನ್ ಸೇವಿಸುತ್ತಿದ್ದ ಕಾರಣಕ್ಕೆ ಅರ್ಜೆಂಟೀನ ಆಸ್ಪತ್ರೆಗಳ ಬಾಗಿಲುಗಳು ನನಗೆ ಮುಚ್ಚಿ ದ್ದವು ಎಂದು ಮರಡೋನ ತನ್ನ ಆತ್ಮಕತೆಯಲ್ಲಿ ನಂತರ ತಿಳಿಸಿದ್ದರು. ಮರಡೋನರ ಆರೋಗ್ಯ ಸ್ಥಿತಿಯ ಮಾಹಿತಿ ಪಡೆದ ಕ್ಯೂಬಾ ಅಧ್ಯಕ್ಷ ಕ್ಯಾಸ್ಟ್ರೋ ಕ್ಯೂಬಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮರಡೋನ ಅವರನ್ನು ಕ್ಯೂಬಾಕ್ಕೆ ಆಹ್ವಾನಿಸಿದರು.

ನಾಲ್ಕು ವರ್ಷ ಕ್ಯೂಬಾದಲ್ಲಿ ನೆಲೆಸಿದ್ದ ಮರಡೋನ ಚಿಕಿತ್ಸೆ ಪಡೆದು ಮಾದಕ ವ್ಯಸನದಿಂದ ಸಂಪೂರ್ಣ ಮುಕ್ತರಾಗಿ ಆರೋಗ್ಯವಂತರಾದರು. ಹವಾನದ ಲಾ ಪೆಡ್ರೇರ ಆಸ್ಪತ್ರೆಯಲ್ಲಿ ಮರಡೋನ ಅವರಿಗೆ ಕ್ಯೂಬಾದ ಪ್ರಸಿದ್ದ ತಜ್ಞ ವೈದ್ಯರು ಚಿಕಿತ್ಸೆ ನೀಡಿದರು. ಸಾವಿನ ಭೀತಿಯಲ್ಲಿದ್ದ ಮರಡೋನ ಸಂಪೂರ್ಣ ಚೇತರಿಸಿಕೊಂಡಿದ್ದರು. ಕ್ಯೂಬಾದ ವೈದ್ಯರು ನೀಡಿದ ಚಿಕಿತ್ಸೆ ಮರಡೋನಗೆ ಪುನರ್ಜನ್ಮ ನೀಡಿತು. ಮರಡೋನ ರೋಗ ಮತ್ತು ಮಾದಕ ವ್ಯಸನದಿಂದ ಸಂಪೂರ್ಣ ಮುಕ್ತರಾಗಿದ್ದರು.

ಲಾ ಪೆಡ್ರೇರ ಆಸ್ಪತ್ರೆ ವೈದ್ಯರ ಚಿಕಿತ್ಸೆ ಜೊತೆಯಲ್ಲಿ ಫಿಡೆಲ್ ಕ್ಯಾಸ್ಟ್ರೋ ತೋರಿದ ಪಿತೃ ವಾತ್ಸಲ್ಯದ ಪ್ರೀತಿ ಮತ್ತು ಆರೈಕೆಯೇ ಮರಡೋನ ಚೇತರಿಕೆಗೆ ಮುಖ್ಯ ಕಾರಣವಾಗಿತ್ತು. ಅವರು ಆಸ್ಪತ್ರೆಯಲ್ಲಿದ್ದಾಗ ಪ್ರತಿದಿನ ಮುಂಜಾನೆಯ ವಾಯು ವಿಹಾರಕ್ಕೆ ಜೊತೆಯಾಗುತ್ತಿದ್ದರು. ವಿಹಾರದ ಸಮಯದಲ್ಲಾಗಲಿ, ಪ್ರತಿಯೊಂದು ಭೇಟಿಯಲ್ಲಾಗಲಿ ಮರಡೋನಗೆ ರಾಜಕೀಯದ ಪಾಠಗಳನ್ನು ಮಾಡುತ್ತಲೇ ಮಾದಕ ವ್ಯಸನದ ಅಪಾಯ ಹಾಗೂ ಆರೋಗ್ಯದ ಕಾಳಜಿಯ ಬಗ್ಗೆ ಬೋಧನೆಯನ್ನು ಕ್ಯಾಸ್ಟ್ರೋ ಮಾಡುತ್ತಿದ್ದರು. ಕ್ಯೂಬಾ ಅಧ್ಯಕ್ಷರ ನಿವಾಸ ಮತ್ತು ಕಛೇರಿಯ ಬಾಗಿಲುಗಳು ಮರಡೋನಗೆ ಸದಾ ತೆರೆದಿದ್ದವು. ಫಿಡೆಲ್ ಮತ್ತು ಮರಡೋನ ಅವರ ಸ್ನೇಹ ಎಷ್ಟು ಗಾಢವಾಗಿತ್ತು ಎಂದರೆ ಅಧ್ಯಕ್ಷರ ನಿವಾಸದ ಶಿಷ್ಟಚಾರಗಳು ಅನ್ವಯಿಸದ ರೀತಿಯ ಸ್ವಾತಂತ್ರ್ಯ ವನ್ನು ಫಿಡೆಲ್, ಮರಡೋನಗೆ ನೀಡಿದ್ದರು.

2002ರಲ್ಲಿ ಕ್ಯೂಬಾದ ರಾಜಧಾನಿ ಹವಾನದಲ್ಲಿ ಮರಡೋನ ತನ್ನ ಆತ್ಮಕಥೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ, ನನ್ನ ಚರಿತ್ರೆ ಬರೆಯಲು ಮತ್ತು ಜಗತ್ತಿನ ಜನತೆಯ ಜತೆಗಿನ ಸ್ನೇಹ ಸಂಬಂಧಗಳಿಗೆ ದಾರಿ ಮಾಡಿಕೊಟ್ಟಿರುವುದು ಫುಟ್ಬಾಲ್. ಆದರೂ ನನಗೆ ಪುನರ್ಜನ್ಮ ನೀಡಿದ ಫಿಡೆಲ್ ಮತ್ತು ಕ್ಯೂಬಾ ಜನತೆಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಸಾಮಾನ್ಯ ಜನರು ದೇವರು ದೊಡ್ಡವರೆಂದು ಹೇಳುತ್ತಾರೆ.

ಆದರೆ ನನಗೆ ಫಿಡೆಲ್ ಕ್ಯಾಸ್ಟ್ರೋ ದೇವರಿಗಿಂತ ದೊಡ್ಡವರು ಎಂದು ಹೇಳುತ್ತಾ ಮರಡೋನ ಭಾವುಕರಾಗಿದ್ದರು. 2015ರ ನವೆಂಬರ್ 25 ಫಿಡೆಲ್ ಕ್ಯಾಸ್ಟ್ರೋ ನಿಧನರಾದಾಗ ಮರಡೋನ ಮಗುವಿನಂತೆ ಅತ್ತಿದ್ದರು, ಫಿಡೆಲ್‌ರ ಸ್ವಂತ ಮಗನಂತೆ ಸಂಕಟ ಅನುಭವಿಸಿದ್ದರು. ಫಿಡೆಲ್ ಮತ್ತು ಮರಡೋನರ ನಡುವಿನ ಅಗಾಧವಾದ ಪ್ರೀತಿ ವಾತ್ಸಲ್ಯಕ್ಕೆ ಕಾಕತಾಳೀಯ ಎಂಬಂತೆ ಫಿಡೆಲ್ ಕ್ಯಾಸ್ಟ್ರೋ ನಿಧನದ ನಾಲ್ಕು ವರ್ಷಗಳ ತರುವಾಯ ಡೀಗೋ ಮರಡೋನ ಅದೇ ನವೆಂಬರ್ 25 2020ರಂದು ನಿಧನರಾಗಿದ್ದರು.

ಅಮೆರಿಕನ್ ಸಾಮ್ರಾಜ್ಯಶಾಹಿಯ ವಿರೋಧಿ ಹೋರಾಟಗಾರ ಜಗತ್ತಿನ ಅಗ್ರ ಗಣ್ಯ ಕಮ್ಯುನಿಸ್ಟ್ ನಾಯಕ ಫಿಡೆಲ್ ಕ್ಯಾಸ್ಟ್ರೋ ಮತ್ತು ಜಾಗತಿಕ ಫುಟ್ಬಾಲ್ ಕ್ರೀಡೆಯ ದಂತಕತೆ ಡೀಗೋ ಮರಡೋನರ ಗಡಿ ಮೀರಿದ ಜೀವಪರವಾದ ಸ್ನೇಹ ಜಗತ್ತಿನಲ್ಲಿ ಅತ್ಯಂತ ಅಪೂರ್ವವಾದುದು.

share
ಬಿ.ಕೆ.ಇಮ್ತಿಯಾಝ್
ಬಿ.ಕೆ.ಇಮ್ತಿಯಾಝ್
Next Story
X