Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಏಕಕಾಲಕ್ಕೆ ಎರಡು ಕಂಗಳಲ್ಲಿ ನೋಡುವ...

ಏಕಕಾಲಕ್ಕೆ ಎರಡು ಕಂಗಳಲ್ಲಿ ನೋಡುವ ದೂರದರ್ಶಕ ಆವಿಷ್ಕಾರ!

ಸಂಶೋಧಕ ಮನೋಹರ್ ಸಾಧನೆಯ ಹೊಸ ಮೈಲುಗಲ್ಲು

ವಾರ್ತಾಭಾರತಿವಾರ್ತಾಭಾರತಿ25 March 2024 3:59 PM IST
share
ಏಕಕಾಲಕ್ಕೆ ಎರಡು ಕಂಗಳಲ್ಲಿ ನೋಡುವ ದೂರದರ್ಶಕ ಆವಿಷ್ಕಾರ!

ಉಡುಪಿ: ಮಣಿಪಾಲ ಎಂಐಟಿಯ ಉದ್ಯೋಗಿ, ಪರ್ಕಳದ ನಿವಾಸಿ ಸಂಶೋಧಕ ಆರ್.ಮನೋಹರ್ ತನ್ನದೇ ಸೂತ್ರ ಬಳಸಿ ಏಕಕಾಲಕ್ಕೆ ಎರಡು ಕಣ್ಣುಗಳಲ್ಲಿ ನೇರವಾಗಿ ಆಕಾಶದಲ್ಲಿ ಗ್ರಹಗಳನ್ನು ನೋಡುವಂತಹ ದೂರದರ್ಶಕವನ್ನು ಆವಿಷ್ಕರಿಸಿದ್ದಾರೆ. ಇದೊಂದು ದೂರದರ್ಶಕದ ಆವಿ ಷ್ಕರಣೆಯಲ್ಲಿ ಹೊಸ ಮೈಲುಗಲ್ಲು ಎನ್ನ ಲಾಗುತ್ತಿದೆ.

ಇವರು ಈಗಾಗಲೇ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪೇಟೆಂಟ್ ಪಡೆದು ಒಂದು ಕಣ್ಣಿನಲ್ಲಿ ನೇರವಾಗಿ ನೋಡುವ ದೂರದರ್ಶಕವನ್ನು ಆವಿಷ್ಕರಿಸಿದ ಜಗತ್ತಿನ ಒಂಭತ್ತು ಸಾಧಕರಲ್ಲಿ ಒಬ್ಬರಾಗಿದ್ದಾರೆ. ಇದೀಗ ಈ ಹೊಸ ಆವಿಷ್ಕಾರದ ಮೂಲಕ ಆರ್.ಮನೋಹರ್‌ರ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.

‘‘ಈ ದೂರದರ್ಶಕವು ಸುಮಾರು 80 ಎಕ್ಸ್ ದೂರದ ವಸ್ತುಗಳನ್ನು ಕಾಣುವ ತಂತ್ರಜ್ಞಾನ ಹೊಂದಿದ್ದು, ಚಂದ್ರನನ್ನು ಮನಮೋಹಕನಾಗಿ ವೀಕ್ಷಿಸಲು ಇದರಿಂದ ಸಾಧ್ಯವಾಗುತ್ತದೆ. ಈ ನವೀಕರಿಸಲ್ಪಟ್ಟ ದೂರದರ್ಶಕ ಎಚ್‌ಡಿ ಕ್ವಾಲಿಟಿಯನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಸಿಗುವಂತಹ ದೂರದರ್ಶಕದಲ್ಲಿ ಬಾಗಿ ಒಂದು ಕಣ್ಣಿನಲ್ಲಿ ನೋಡಬೇಕಾದರೆ, ಈ ಹೊಸ ಆವಿಷ್ಕಾರದ ದೂರದರ್ಶಕದಲ್ಲಿ ಆ ಕಷ್ಟ ಇರುವುದಿಲ್ಲ. ಇಲ್ಲಿ ಬಾಗಿ ನಿಂತು ನೋಡುವ ಬದಲು ನೇರವಾಗಿ ನಿಂತು ನೋಡಬಹುದಾಗಿದೆ. ಅದಕ್ಕಾಗಿ ಬೆಳಕಿನ ಪರಿವರ್ತನೆ ಮಾಡಿ ದೂರದರ್ಶಕವನ್ನು ನಿರ್ಮಿಸಿ ಪೇಟೆಂಟ್ ಪಡೆಯಲಾಗಿದೆ’’ ಎನ್ನುತ್ತಾರೆ ಸಂಶೋಧಕ ಮನೋಹರ್.

ಈ ದೂರದರ್ಶಕದ ಮೂಲಕ ಹೋಳಿ ಹುಣ್ಣಿಮೆಯ ಚಂದ್ರ ಬಹಳ ಸುಂದರವಾಗಿ ಕಾಣುತ್ತಿದ್ದು, ಪರ್ಕಳದ ರಥೋತ್ಸವದಂದು ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಕಾರ್ಯಕ್ರಮ ಸಂಘಟಕ ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳಬೆಟ್ಟು ತಿಳಿಸಿದ್ದಾರೆ.

ಅಯೋಧ್ಯೆ ರಾಮ ಮಂದಿರದ ಭದ್ರತಾ ವ್ಯವಸ್ಥೆಗಾಗಿ ಮನೋಹರ್ ಇತ್ತೀಚೆಗೆ ಸುಮಾರು ೫೦ ದೂರದರ್ಶಕಗಳನ್ನು ಸಿದ್ಧಪಡಿಸಿ ಉತ್ತರ ಪ್ರದೇಶ ಸರಕಾರಕ್ಕೆ ಕೊಟ್ಟಿದ್ದಾರೆ.

ಅದೇರೀತಿ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಇವರ ದೂರದರ್ಶಕ ಮಾನ್ಯತೆ ಪಡೆದಿರುವುದು ಇವರ ಸಾಧನೆಯ ಮೈಲುಗಲ್ಲು ಆಗಿದೆ. ಈ ದೂರದರ್ಶಕದ ಮೂಲಕ ಗ್ರಹ ಗಳನ್ನು ನೋಡುವ ಖಗೋಳ ಆಸಕ್ತರಿಗೆ ಉತ್ತಮ ಅವಕಾಶ ಕಲ್ಪಿಸಲಾಗಿದೆ.

ಎರಡು ಕಣ್ಣುಗಳಲ್ಲಿ ನೋಡುವಂತಹ ಲೆನ್ಸ್‌ಗಳು ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವುದರಿಂದ ನನ್ನ ಸೂತ್ರ, ಕಲ್ಪನೆ ಮತ್ತು ಪ್ರಯತ್ನಕ್ಕೆ ಇದೀಗ ಫಲ ಸಿಕ್ಕಿದೆ. ಸುಮಾರು 25 ವರ್ಷಗಳ ಸತತ ಪ್ರಯತ್ನದಿಂದ ಎರಡು ಕಣ್ಣುಗಳಲ್ಲಿ ಏಕಕಾಲದಲ್ಲಿ ನೋಡುವಂತಹ ದೂರದರ್ಶಕವನ್ನು ಸಿದ್ಧಪಡಿಸಲಾಗಿದೆ.

ಆರ್.ಮನೋಹರ್, ಸಂಶೋಧಕ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X