Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಯುಗಾದಿಯ ಸಂಭ್ರಮಕ್ಕೆ ವರ್ಷ ತೊಡಕಿನ...

ಯುಗಾದಿಯ ಸಂಭ್ರಮಕ್ಕೆ ವರ್ಷ ತೊಡಕಿನ ಮೆರುಗು

ಗೋವಿಂದರಾಜು ಪಟೇಲ್, ಬೆಂಗಳೂರುಗೋವಿಂದರಾಜು ಪಟೇಲ್, ಬೆಂಗಳೂರು19 March 2026 12:22 PM IST
share
ಯುಗಾದಿಯ ಸಂಭ್ರಮಕ್ಕೆ ವರ್ಷ ತೊಡಕಿನ ಮೆರುಗು

ಹಿಂದೂ ಪಂಚಾಂಗದಂತೆ ಹೊಸ ಸಂವತ್ಸರದ ಮೊದಲ ದಿನ ಯುಗಾದಿ ಹಬ್ಬ ಆಚರಿಸಲಾಗುತ್ತದೆ. ಯುಗಾದಿ ಹಬ್ಬದಂದು ಮನೆಯ ಮುಖ್ಯದ್ವಾರಗಳನ್ನು ಮಾವು-ಬೇವುಗಳ ತಳಿರು ತೋರಣಗಳಿಂದ ಅಲಂಕರಿಸಲಾಗುವುದು. ಮನೆಮಂದಿಯೆಲ್ಲಾ ಅಭ್ಯಂಜನ ಸ್ನಾನ ಮಾಡಿ, ಹೊಸ ಉಡುಗೆಯನ್ನು ತೊಟ್ಟು ತಮ್ಮ ತಮ್ಮ ಕುಲದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸುತ್ತಾರೆ. ಕಷ್ಟ ಸುಖಗಳ ಸಾಂಕೇತಿಕವಾಗಿ ಬೇವು-ಬೆಲ್ಲದ ಮಿಶ್ರಣವನ್ನು ಸೇವಿಸುವುದರ ಮೂಲಕ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವಂತೆ ಮನಸ್ಸನ್ನು ಸಜ್ಜುಗೊಳಿಸಿಕೊಳ್ಳಲಾಗುತ್ತದೆ! ಹೊಸ ಸಂವತ್ಸರದ ಮೊದಲ ದಿನ ವಿಶೇಷವಾಗಿ ಹೋಳಿಗೆ ತುಪ್ಪದ ಜೊತೆಗೆ ಕೋಸಂಬರಿ, ತರಕಾರಿ ಪಲ್ಯಗಳ ಸಾಂಪ್ರದಾಯಿಕ ಊಟದೊಂದಿಗೆ ಸಂಭ್ರಮ ಸಡಗರದಿಂದ ಆಚರಿಸಲ್ಪಡುವ ಹಬ್ಬ ಯುಗಾದಿ. ಯುಗಾದಿಗಿಂತಲೂ ಮಾರನೇ ದಿನದ ಹೊಸ್ತೊಡಕು ಮಾಂಸಾಹಾರಿಗಳ ಪಾಲಿಗೆ ಬಾಡೂಟದ ದೊಡ್ಡ ಹಬ್ಬವಾಗಿದೆ.

ಯುಗಾದಿ ಹಬ್ಬದ ಮಾರನೆಯ ದಿನದ ಹೊಸ್ತೊಡಕು ಹಬ್ಬ, ಬಹುಜನರು ಬಹು ಸಂಭ್ರಮದಿಂದ ಅನಾದಿಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಹಬ್ಬವಾಗಿದೆ. ವರ್ಷ ತೊಡಕು, ಹೊಸ್ತೊಡಕು, ಹೊಸ್ದುಡುಕು ಹೀಗೆಲ್ಲ ಕರೆಯಲ್ಪಡುವ ತೊಡಕು ಪದಕ್ಕೆ ಅಡಚಣೆ, ಅಡೆತಡೆ, ನಿಷೇಧ, ಕಠಿಣ ಹೀಗೆ ವಿವಿಧ ಅರ್ಥಗಳಿವೆಯಾದರೂ ಇಲ್ಲಿವರೆಗೂ ವರ್ಷತೊಡಕಿನ ಆಚರಣೆಗೂ ತೊಡಕು ಪದಕ್ಕೂ ನಿರ್ದಿಷ್ಟವಾದ ಸಂಬಂಧ ಕಲ್ಪಿಸಲು ಸಾಧ್ಯವಾಗಿಲ್ಲ. ಹೊಸ ಯೋಜನೆಗಳಲ್ಲಿ ತೊಡಗು, ವರ್ಷದ ಮೊದಲ ಬಾಡೂಟದಲ್ಲಿ ತೊಡಗು ಹೀಗೆಲ್ಲಾ ಅರ್ಥೈಸಿಕೊಂಡರು, ಹೊಸ್ತಡಗು ಹೊಸ+ಅಡಗು ಎಂಬ ಪದ ಅಡಗು ಅರ್ಥಾತ್ ಮಾಂಸ ಎಂಬ ಮೂಲದ್ದು ಎಂದು ಹೇಳುತ್ತಾರಾದರೂ ವರ್ಷತೊಡಕು ಅರ್ಥವನ್ನು ಅವರವರ ಭಾವಕ್ಕೆ ತಕ್ಕಂತೆ ಅರ್ಥೈಸಿಕೊಂಡು ಬರಲಾಗುತ್ತಿದೆ.

ಬಹುಜನರು ಆಚರಿಸಲ್ಪಡುವ ಹೊಸ್ತಡಗು ಹಬ್ಬ, ಶ್ರಮಜೀವಿಗಳು ಅನಾದಿಕಾಲದಲ್ಲಿ ಕಾಡು ಪ್ರಾಣಿ, ಪಕ್ಷಿಗಳನ್ನು ಬೇಟೆಯಾಡಿ ಮಾಂಸದಡುಗೆ ಮಾಡಿ ತಿಂದುಂಡು, ಎಲ್ಲರೂ ಒಟ್ಟಾಗಿ ಕಲೆತು ಸಂಭ್ರಮದಿಂದ ಹಲವಾರು ಮನರಂಜನೆಯಾಟವಾಡಿ ಖುಷಿಪಡುತ್ತಿದ್ದ ಪರಿಪಾಟ ಕಾಲಾನುಕಾಲಕ್ಕೆ ಬದಲಾವಣೆಗಳನ್ನು ಕಂಡಿದೆ.

ವರ್ಷ ತೊಡಕು ಆಚರಣೆ ಎಂಬುದು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡಬಹುದು. ಹಳೆ ಮೈಸೂರು ಪ್ರಾಂತದಲ್ಲಂತೂ ವರ್ಷ ತೊಡಕಿನ ಕಾರುಬಾರು! ಜೋರೇ ಜೋರು. ಮುಂದಿನ ವರ್ಷದ ಹಬ್ಬಕ್ಕೆ ಈ ವರ್ಷದ ಹಬ್ಬ ಮುಗಿದ ದಿನದಿಂದಲೇ ಯೋಜನೆಗಳು ಪ್ರಾರಂಭವಾಗುತ್ತವೆ! ಎಂದರೇ ನಾವೇ ಊಹಿಸಿಕೊಳ್ಳಬಹುದು ವರ್ಷ ತೊಡಕಿಗಿರುವ ಅಗಾಧತೆಯನ್ನು! ಹಬ್ಬ ಮುಗಿಯಿತು ಎಂದು ಗ್ರಾಮೀಣ ಜನರು ಮರೆತು ಸುಮ್ಮನಾಗುವುದಿಲ್ಲ. ವರ್ಷ ತೊಡಕು ಮುಗಿದ ಒಂದೆರಡು ದಿನಗಳಲ್ಲಿ ಅಥವಾ ಸಮಯಾವಕಾಶವನ್ನು ಮಾಡಿಕೊಂಡು ತಮ್ಮದೇ ಜನರ ಒಂದೊಂದು ಗುಂಪುಗಳು ಒಂದೆಡೆ ಸೇರಿ ಮುಂದಿನ ವರ್ಷ ತೊಡಕಿಗೆ ಯೋಜನೆಯನ್ನು ರೂಪಿಸಲು ತೊಡಗಿಕೊಳ್ಳುತ್ತಾರೆ. ಗುಂಪಿನ ಪ್ರತೀ ಸದಸ್ಯರು ಇಂತಿಷ್ಟು ಹಣ ಹೂಡಿ (ಮಟನ್ ಚೀಟಿ) ಮರಿ (ಆಡು ಅಥವಾ ಕುರಿ ಮರಿಗಳು) ತರಬೇಕಾಗುತ್ತದೆ. ಮರಿ ತರಲು ಅನುಭವಿಯೊಬ್ಬನನ್ನು ನಿಯೋಜಿಸಲಾಗುತ್ತದೆ. ಆತ ಸುತ್ತಮುತ್ತಲ ವಾರದ ಸಂತೆಗಳಿಗೆ ಹೋಗಿ ತನ್ನ ಚಾಣಕ್ಷತೆಯಿಂದ ಕಣ್ಣಳತೆಯಲ್ಲೇ ಮರಿಯ ತೂಕವನ್ನು ಅಂದಾಜಿಸಿ ನಿಖರ ಬೆಲೆಯನ್ನು ಕಟ್ಟಿ ವ್ಯಾಪಾರ ಮುಗಿಸಿಕೊಂಡು ಮರಿಗಳನ್ನು ತರುತ್ತಾನೆ. ಮರಿಗಳನ್ನು (ಆಡು-ಕುರಿ) ತಂದ ನಂತರ ಅವುಗಳನ್ನು ದಷ್ಟಪುಷ್ಟವಾಗಿ ಸಾಕಿ ಸಲಹಬಹುದಾದ ಸೂಕ್ತ ವ್ಯಕ್ತಿಯನ್ನು ಅವುಗಳನ್ನು ಮೇಯಿಸಲು ನಿಯೋಜಿಸಲಾಗುತ್ತದೆ. ಆ ವ್ಯಕ್ತಿಗೆ ಹಬ್ಬದಂದು ಒಂದು ಗುಡ್ಡೆ ಮಾಂಸವನ್ನು ಉಚಿತವಾಗಿ ಕೊಡಲಾಗುತ್ತದೆ. ಮತ್ತೊಂದು ವಿಧಾನವೂ ಇದೆ. ಅದೇನೆಂದರೆ ಗುಂಪಿನ ಪ್ರತೀ ಸದಸ್ಯರು ಪ್ರತೀ ತಿಂಗಳು ಇಂತಿಷ್ಟು ಹಣ ಹೂಡಿಕೆ ಮಾಡಿ, ಪ್ರತಿಯೊಬ್ಬರು ಹೂಡಿಕೆ ಹಣವನ್ನು ಬಡ್ಡಿಗೆ ಸಾಲವಾಗಿ ತೆಗೆದುಕೊಂಡು ಹಣವನ್ನು ಬೆಳೆಸಿ ಕೊನೆಯಲ್ಲಿ ಆ ಹಣಕ್ಕೆ ಮರಿ ತಂದು ಪಾಲು ಹಾಕಲಾಗುತ್ತದೆ. ಮರಿ ಪಾಲು ಅರ್ಥಾತ್ ಹಂಚಿಕೆಯ ಕೆಲಸದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕಾಗುತ್ತದೆ.

ಮರಿಗಳನ್ನು ತರುವುದು ಮತ್ತು ಮರಿಗಳನ್ನು ಸಾಕುವುದು ಒಂದು ಭಾಗವಾದರೆ, ಮರಿ ಕುಯ್ದು ಪಾಲು ಅಥವಾ ಗುಡ್ಡೆ ಹಾಕುವುದಕ್ಕೂ ಕೂಡ ನೈಪುಣ್ಯ ಬೇಕಾಗುತ್ತದೆ. ಗುಡ್ಡೆ ಬಾಡು ಎಂದರೆ, ಮೇಕೆ ಅಥವಾ ಕುರಿಯ ಪ್ರತಿಯೊಂದು ಭಾಗಗಳನ್ನು ಪ್ರತೀ ಗುಡ್ಡೆಗಳಿಗೂ ಸರಿಯಾಗಿ ಹಂಚಿಕೆ ಮಾಡಲಾಗುತ್ತದೆ. ಅಷ್ಟೂ ಸದಸ್ಯರಿಗೆ ತೂಕ ಮತ್ತು ಮಾಂಸದ ತುಂಡುಗಳ ನ್ಯಾಯ ಒದಗಿಸಲಾಗುತ್ತದೆ. ಗುಡ್ಡೆ ಬಾಡು ಮಾದರಿ ಈಗ ನಗರ ಪ್ರದೇಶಗಳಿಗೂ ವಿಸ್ತರಿಸಿಕೊಂಡು ಜನರು ಗುಡ್ಡೆ ಬಾಡಿಗೆ ಮುಗಿಬೀಳುತ್ತಿದ್ದಾರೆ. ಗುಡ್ಡೆ ಬಾಡಿನಲ್ಲಿ ಸರ್ವಾಂಗಗಳು ಸಲ್ಲುವುದರಿಂದ ಸಾಂಬಾರ್ ರುಚಿ ಹೆಚ್ಚಾಗುತ್ತದೆ ಎಂದು ರುಚಿ ಕಂಡುಕೊಂಡ ಜನರು ಹೇಳುತ್ತಾರೆ. ಗುಡ್ಡೆ ಬಾಡು ಇಷ್ಟವಾಗದ ಜನರು ಪ್ರತ್ಯೇಕವಾಗಿ ಮಾಂಸದಂಗಡಿಗಳಲ್ಲಿ ತಮಗಿಷ್ಟವಾದ ಮಾಂಸ ತಂದು ವರ್ಷತೊಡಕು ಆಚರಿಸಿಕೊಳ್ಳುತ್ತಾರೆ.

ವರ್ಷ ತೊಡಕಿಗೆ ಮೂರ್ನಾಲ್ಕು ದಿನಗಳ ಮುಂಚೆಯೇ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ನಗರ ಪ್ರದೇಶಗಳ ಮಾಂಸದಂಗಡಿಗಳು ನಾಟಿ ಮರಿಯ ಹೆಸರಿನಲ್ಲಿ ವ್ಯಾಪಾರ ಸೃಷ್ಟಿಸಿಕೊಳ್ಳುತ್ತವೆ. ಬಹಳ ಮುಖ್ಯವಾಗಿ ಈ ಹಬ್ಬದಲ್ಲಿ ಮಾಂಸದ ಬೆಲೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಕಡಿಮೆ ಅದೇ ಪರಿಷ್ಕರಣೆಗೊಂಡ ಬೆಲೆಯೇ ನಿಗದಿಯಾಗುತ್ತದೆ.

ಯುಗಾದಿಯು ಮೊದಲದಿನದ ರಾತ್ರಿಯೇ ಗುಡ್ಡೆ ಬಾಡಿನ ಅಥವಾ ಮಾಂಸದಂಗಡಿಗಳ ಚಟುವಟಿಕೆಗಳು ಗರಿಗೆದರತ್ತವೆ. ಮಾಂಸ ಪ್ರಿಯರು ಬೆಳಗಿನ ಜಾವ ಮೂರುಗಂಟೆಗೆ ಜಾಗರೂಕರಾಗಿ ಮಾಂಸದಂಗಡಿಗಳತ್ತ ಸಾಗುವುದು ಸಾಮಾನ್ಯವಾಗಿರುತ್ತದೆ. ಇತ್ತ ಮಾಂಸದಂಗಡಿಗಳು ಜನಜಂಗುಳಿಯ ಒತ್ತಡದಿಂದ ತಪ್ಪಿಸಿಕೊಳ್ಳಲು ಟೋಕನ್ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತವೆ. ಈಗಾಗಲೇ ಜನಪ್ರಿಯತೆ ಗಳಿಸಿರುವ ಮಾಂಸದಂಗಡಿಗಳ ಮುಂದೆಯಂತೂ ಬೆಳಗಿನ ಜಾವದಿಂದ ಮಧ್ಯಾಹ್ನದ ಬೇಸಿಗೆಯ ಬಿಸಿಲ ಝಳಕ್ಕೂ ಜಗ್ಗದೆ ಸರತಿ ಸಾಲುಗಳಲ್ಲಿ ಜನರು ನಿಲ್ಲುವ ನೋಟ ಸಾಮಾನ್ಯವಾಗಿರುತ್ತದೆ. ಕೆಲವರು ತಮ್ಮ ಲಾಭಕ್ಕಾಗಿ ಹಲಾಲ್-ಜಟ್ಕಾ ಹೆಸರಿನಲ್ಲಿ ಪ್ರತ್ಯೇಕಿಸಲು ಪ್ರಯತ್ನಿಸಿದರೂ ಅತ್ತ ಕಡೆ ಗಮನಹರಿಸದ ಜನರು ಒಳ್ಳೆ ಮಾಂಸ ಮತ್ತು ಸರಿಯಾದ ಬೆಲೆಗಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ. ಇನ್ನು ಆರೋಗ್ಯ ದೃಷ್ಟಿಯಿಂದಲೋ, ಹಣದ ಲೆಕ್ಕಾಚಾರದಿಂದಲೋ ಅಥವಾ ಅವರಿಗೆ ರುಚಿಸದ ಕಾರಣ ಅವರವರ ರುಚಿಗೆ ತಕ್ಕಂತೆ, ಕೋಳಿ, ಮೀನು, ಹಂದಿ ಮಾಂಸಗಳಿಗೆ ಮೊರೆ ಹೋಗುತ್ತಾರೆ

ಈಗಿನ ಕಾಲಕ್ಕೆ ತಕ್ಕಂತೆ ಅಡುಗೆ ವಿಧಾನಗಳು ಬದಲಾದಂತೆ ಮಾಂಸದಡುಗೆಯೆಂದರೆ ಅದರಲ್ಲೂ ವರ್ಷತೊಡಕಿನಲ್ಲಿ ನಾಲ್ಕಾರು ವಿಧಗಳು ಸಾಮಾನ್ಯವಾಗಿರುತ್ತವೆ. ಇಡೀ ದಿನ ಮಾಂಸದೂಟದ ರಸಾನುಭವವನ್ನೂ ಸ್ವಾದಿಸುತ್ತಾ ವರ್ಷ ತೊಡಕನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ. ಜೊತೆಗೆ ಅನೇಕ ಆಟೋಟಗಳಲ್ಲೂ ತೊಡಗಿಸಿಕೊಳ್ಳುತ್ತಾರೆ. ಹೀಗೆ ವರ್ಷ ತೊಡಕು ಮಾಂಸದೂಟದ ಸಡಗರದಿಂದ ಪ್ರಾರಂಭವಾಗಿ ಮನರಂಜನೆಯ ಆಟಗಳೂ ಸೇರಿ ಸಂಪೂರ್ಣವಾಗಿ ಸಂಪನ್ನವಾಗುತ್ತದೆ.

Tags

Ugadi
share
ಗೋವಿಂದರಾಜು ಪಟೇಲ್, ಬೆಂಗಳೂರು
ಗೋವಿಂದರಾಜು ಪಟೇಲ್, ಬೆಂಗಳೂರು
Next Story
X