Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೇ ಸಾಹಿತ್ಯ ಸಮ್ಮೇಳನವೆಂಬ ಸಾಂಸ್ಕೃತಿಕ...

ಮೇ ಸಾಹಿತ್ಯ ಸಮ್ಮೇಳನವೆಂಬ ಸಾಂಸ್ಕೃತಿಕ ಬದ್ಧತೆಯ ಅಭಿವ್ಯಕ್ತಿ

ಕೆ.ಪಿ. ಸುರೇಶಕೆ.ಪಿ. ಸುರೇಶ16 May 2026 12:49 PM IST
share
ಮೇ ಸಾಹಿತ್ಯ ಸಮ್ಮೇಳನವೆಂಬ ಸಾಂಸ್ಕೃತಿಕ ಬದ್ಧತೆಯ ಅಭಿವ್ಯಕ್ತಿ
ಇಂದಿನಿಂದ ಹುಬ್ಬಳ್ಳಿಯಲ್ಲಿ ಮೇ ಸಾಹಿತ್ಯ ಸಮ್ಮೇಳನ

ಇದು ಆರಂಭವಾದಾಗ ಸಾಹಿತ್ಯ ಸಂಭ್ರಮಕ್ಕೆ ಪ್ರತಿಕ್ರಿಯೆಯೋ ಎಂಬಂತೆ ಕೆಲವರಿಗೆ ಭಾಸವಾಗಿರಬಹುದು. ಹಾಗೆಯೇ ಬಂಡಾಯ ಸಾಹಿತ್ಯ ಕೂಟದ ಪುನರುಜ್ಜೀವನ ಎಂದೂ ಭಾಸವಾಗಿರಬಹುದು. ಆದರೆ ಈ ಸಾಂದರ್ಭಿಕತೆಯನ್ನು ಮೀರಿ ಮೇ ಸಾಹಿತ್ಯ ಸಮ್ಮೇಳನ ವರ್ಷ ವರ್ಷ ತನ್ನ ಕಾಲದ ತುಮುಲ, ತಲ್ಲಣಗಳನ್ನು ಒಂದು ಚರ್ಚೆ ಸಂವಾದ, ಹೊರದಾರಿಗಳ ಪ್ರಸ್ತುತಿಯಾಗಿ ನಡೆಸಿಕೊಂಡು ಬಂದಿದೆ. ಈ ಕಾರಣಕ್ಕೇ ಅದು ಜಡವಾಗದೆ ಸ್ಪಂದಿಸುವ ಉತ್ಕಟತೆಯನ್ನು ಎಲ್ಲರಲ್ಲೂ ಸೃಷ್ಟಿಸಿದೆ.

ಮೇ ಸಾಹಿತ್ಯ ಮೇಳ ಕರ್ನಾಟಕದ ಸಾಂಸ್ಕೃತಿಕ ಜವಾಬ್ದಾರಿಯ ಸೂಚಿಯಂತೆ ಕಾಣುತ್ತಿದೆ.

ಕಳೆದ 11 ವರ್ಷಗಳಿಂದ ಈ ಸಾಹಿತ್ಯ ಸಮ್ಮೇಳನ ಜರಗುತ್ತಿದೆ. ಪ್ರತೀ ವರ್ಷ ಒಂದು ಕಾಡುವ ಥೀಮ್ಸ್ ಅನ್ನು ಆರಿಸಿಕೊಂಡು ಅದರ ಸುತ್ತ ಚರ್ಚೆ, ಸಂವಾದ ನಡೆಸಲಾಗುತ್ತಿದೆ. ಇದರ ವೈಶಿಷ್ಟ್ಯಗಳನ್ನು ಪಟ್ಟಿ ಮಾಡುವುದು ಹೆಗ್ಗಳಿಕೆಗಾಗಿ ಅಲ್ಲ; ಬದಲು ಒಂದು ಸಾಂಸ್ಕೃತಿಕ ಕೊಡು-ಕೊಳು, ಕ್ರಿಯಾಶೀಲತೆಯ ಹೆಜ್ಜೆ ಗತಿಯನ್ನು ಇದು ಪ್ರತಿನಿಧಿಸುತ್ತಿದೆ.

ಇದು ಆರಂಭವಾದಾಗ ಸಾಹಿತ್ಯ ಸಂಭ್ರಮಕ್ಕೆ ಪ್ರತಿಕ್ರಿಯೆಯೋ ಎಂಬಂತೆ ಕೆಲವರಿಗೆ ಭಾಸವಾಗಿರಬಹುದು. ಹಾಗೆಯೇ ಬಂಡಾಯ ಸಾಹಿತ್ಯ ಕೂಟದ ಪುನರುಜ್ಜೀವನ ಎಂದೂ ಭಾಸವಾಗಿರಬಹುದು. ಆದರೆ ಈ ಸಾಂದರ್ಭಿಕತೆಯನ್ನು ಮೀರಿ ಮೇ ಸಾಹಿತ್ಯ ಸಮ್ಮೇಳನ ವರ್ಷ ವರ್ಷ ತನ್ನ ಕಾಲದ ತುಮುಲ, ತಲ್ಲಣಗಳನ್ನು ಒಂದು ಚರ್ಚೆ ಸಂವಾದ, ಹೊರದಾರಿಗಳ ಪ್ರಸ್ತುತಿಯಾಗಿ ನಡೆಸಿಕೊಂಡು ಬಂದಿದೆ. ಈ ಕಾರಣಕ್ಕೇ ಅದು ಜಡವಾಗದೆ ಸ್ಪಂದಿಸುವ ಉತ್ಕಟತೆಯನ್ನು ಎಲ್ಲರಲ್ಲೂ ಸೃಷ್ಟಿಸಿದೆ.

ಈ ಸಮ್ಮೇಳನದ ಕಳೆದ ಕೆಲವು ವರ್ಷಗಳ ಮುಖ್ಯ ಥೀಮ್ಸ್ ಗಮನಿಸಿ

2017: ಫ್ಯಾಶಿಸಂ ಚಹರೆಗಳು: ಅಪಾಯ-ಪ್ರತಿರೋಧ

2018: ಬಹುತ್ವ ಭಾರತ: ಇಂದು ಮತ್ತು ನಾಳೆ

2019: ಅಭಿವೃದ್ಧಿ ಭಾರತ: ಕವಲು ದಾರಿಗಳ ಮುಖಾಮುಖಿ

2022: ಸ್ವಾತಂತ್ರ್ಯ 75; ನೆಲದ ದನಿಗಳು

2023: ಭಾರತೀಯ ಪ್ರಜಾತಂತ್ರ: ಸವಾಲು-ಮೀರುವ ಹಾದಿಗಳು

2024: ಸಂವಿಧಾನ ಭಾರತ-ಧರ್ಮ ರಾಜಕಾರಣ

2025: ಅಸಮಾನ ಭಾರತ-ಸಮಾನತೆಗಾಗಿ ಸಂಘರ್ಷ

ಆಯಾ ವರ್ಷದಲ್ಲಿ ಅತ್ಯಂತ ಘನೀಭೂತವಾಗಿ ನಮ್ಮ ಆಕ್ಟಿವಿಸಂ ಮತ್ತು ಬೌದ್ಧಿಕ ಸ್ಪಷ್ಟತೆಗಳನ್ನು ಬೇಡಿದ ವಿಷಯಗಳಿವು. ಈ ವಿಷಯದ ಸುತ್ತ ಅದರ ಒಂದೊಂದು ಆಯಾಮದ ಬಗ್ಗೆಯೂ ಸಾಧ್ಯವಾದಷ್ಟು ಸ್ಪಷ್ಟತೆಯ ವಿಚಾರ ಗೋಷ್ಠಿಗಳು ಎರಡೂ ದಿನಗಳೂ ಪ್ರಸ್ತುತಗೊಳ್ಳುತ್ತಾ ಬಂದಿವೆ. ಈ ಗೋಷ್ಠಿಗಳಲ್ಲಿ ಭಾಗವಹಿಸಿದವರು, ಮಾತಾಡಿದವರ ಪಟ್ಟಿ ನೋಡಿದರೆ ಕನ್ನಡದ ಎಲ್ಲರೂ ಇಲ್ಲಿ ಬೆರೆತಿದ್ದಾರೆ. ಇದು ಕನ್ನಡ ಮನಸ್ಸಿನ ಹೆಗ್ಗಳಿಕೆ.

ಸ್ಥೂಲವಾಗಿ Left off the centre ಎಂಬ ನಿಲುವಿರುವ ಎಲ್ಲರೂ ಇಲ್ಲಿ ಬಂದಿದ್ದಾರೆ, ಬರುತ್ತಲೇ ಇದ್ದಾರೆ. ಇದು ನಾವೆಲ್ಲ ಸೇರಿ ಸಂಘಟಿಸುವ ಸಮ್ಮೇಳನ, ಆಕ್ಟಿವಿಸಂ ಮತ್ತು ಸಾಂಸ್ಕೃತಿಕ ನಿಲುವನ್ನು ಮತ್ತೆ ಮತ್ತೆ ಸಾರಿ ಹೇಳುವ ಕಾಮ್ರೇಡರಿ ಎಂಬ ಭಾವ ಇಲ್ಲಿ ಭಾಗವಹಿಸುವ ಎಲ್ಲರಲ್ಲೂ ಇರುವುದನ್ನು ಕಂಡಿದ್ದೇನೆ.

ಈ ಮುಕ್ತತೆ, ಪಾರದರ್ಶಕತೆ ಅನನ್ಯವಾದದ್ದು.

ಲಡಾಯಿ ಬಸು, ಡಾ. ಅನುಪಮಾ, ಶ್ರೀನಿವಾಸ್ ಮುಂತಾದ ಗೆಳೆಯರು ಹೆಚ್ಚಿನ ಹೆಜ್ಜೆಗತಿಯ ಜವಾಬ್ದಾರಿ ತೆಗೆದುಕೊಂಡರೂ ಮೂಲತಃ ನೂರಾರು ಸಂಗಾತಿಗಳ ನೇರ ಪಾಲ್ಗೊಳ್ಳುವಿಕೆ ಇಲ್ಲಿದೆ.

ಈ ಸಮ್ಮೇಳನದಲ್ಲಿ ಜರುಗುವ ಅನುಭವ ಕಥನ ಅಪೂರ್ವವಾದದ್ದು. ಕಲ್ಲಂಗಡಿಯಿಂದ ನಷ್ಟಕ್ಕೊಳಗಾದ ಸಂಗಾತಿಯಿಂದ ಹಿಡಿದು ಬಹುತೇಕ ಹೋರಾಟಗಾರರ ಅನುಭವ ಕಥನ ಇಲ್ಲಿ ಹಂಚಿಕೆಯಾಗಿದೆ.

ಹಾಗೆಯೇ ಕರ್ನಾಟಕದ ಹೊರಗಿನ ಬಹುಮುಖ್ಯ ಚಿಂತಕರು, ಲೇಖಕರು ಈ ಸಮ್ಮೇಳನದಲ್ಲಿ ಅದೊಂದು ಅಪೂರ್ವ ಅವಕಾಶ ಎಂಬಂತೆ ಭಾಗಿಯಾಗಿದ್ದಾರೆ. ಜಸ್ಟಿಸ್ ಚಂದ್ರು ಮತ್ತು ಸಾಯಿನಾಥ್ ಭಾಗವಹಿಸಿದಾಗ ಅವರ ಮಾತುಗಳಲ್ಲಿ ಕಂಡ ಕೃತಕೃತ್ಯತೆ ಅಚ್ಚರಿ ಹುಟ್ಟಿಸಿತ್ತು.

ಮೇ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯವೇ ಇಲ್ಲ ಎಂಬ ಮಾತು ಸಹಜವಾಗಿ ಬಂದಿದೆ. ಆ ಬಗ್ಗೆ ಯಾರಿಗೂ ಗೊಂದಲ ಇದ್ದಂತಿಲ್ಲ. ಸಾಹಿತ್ಯದ ಚರ್ಚೆಯ ವೇದಿಕೆ ಅಲ್ಲ. ನಿನ್ನೆಯ ವರೆಗೂ ಸಾಹಿತ್ಯ ಓದಿದ, ಬರೆದ ಮನಸ್ಸುಗಳು ವೈಚಾರಿಕ ಚರ್ಚೆಯ ಮೂಲಕ ಕೊಟ್ಟು ಪಡೆದು ಮತ್ತೆ ಕ್ರಿಯಾಶೀಲವಾಗುವ ವೇದಿಕೆ ಇದು. ಈ ವೈಚಾರಿಕ ಮಥನ, ಸ್ಪಷ್ಟತೆ ಪಡೆವ ಬಗೆ -ಒಂಥರಾ ದೀಕ್ಷಾ ವಿಧಿಯ ಹಾಗೆ ನನಗೆ ಕಂಡದ್ದಿದೆ. ಮತ್ತೆ rededicating ourselves ಅಂತಾರಲ್ಲ ಹಾಗೆ.

ಇದೆಲ್ಲದಕ್ಕಿಂತ ಮುಖ್ಯವಾಗಿ ಗೋಚರಿಸುವುದು ಹೊಸ ತಲೆಮಾರಿನ ಭಾಗವಹಿಸುವಿಕೆ. ಆರಂಭದ ವರ್ಷಗಳಲ್ಲಿ ಜೆಎನ್‌ಯುನ ವಿದ್ಯಾರ್ಥಿಗಳು ಹಾಜರಾದ ಕಾರಣವೋ ಏನೋ, ಹೊಸ ತಲೆಮಾರಿನ ಭಾಗವಹಿಸುವಿಕೆಗೆ, ಅಭಿವ್ಯಕ್ತಿಗೆ ಇದೊಂದು ಅಪೂರ್ವ ಚಪ್ಪರವಾಗಿದೆ.

ಇಷ್ಟು ವರ್ಷವೂ ಈ ಸಮ್ಮೇಳನ ಸರಕಾರ, ಸಂಸ್ಥೆಗಳ ಬಳಿ ಕೈ ಚಾಚಿಲ್ಲ. ಪ್ರತೀ ವರ್ಷವೂ ಸಂಗಾತಿಗಳ, ಹಿತೈಷಿಗಳ ಕೊಡುಗೆ ಮೂಲಕ ಜರುಗಿದೆ. ಕಾರ್ಮಿಕರಿಂದ ಹಿಡಿದು ಸಣ್ಣ ವ್ಯಾಪಾರಸ್ಥರು ತಮ್ಮ ಕೈಲಾದಷ್ಟು ಅಭಿಮಾನದಿಂದ ವಸ್ತು, ನಗದು ಕೊಡುತ್ತಿರುವ ಬಗೆ ಅನನ್ಯ. ಪುಟ್ಟ ಹುಡುಗಿಯೊಬ್ಬಳು ತನ್ನ ಗೋಲಕದ 200 ಚಿಲ್ಲರೆ ರೂಪಾಯಿ ನೀಡಿದ್ದೂ ಇದೆ. ಇವೆಲ್ಲಾ ಜನ ಶಕ್ತಿಯ ಮೇಲಿರುವ ನಂಬಿಕೆಯನ್ನು ಗಟ್ಟಿಗೊಳಿಸುತ್ತದೆ. ಈ ಕೃತಜ್ಞತೆಯೇ ಸಮ್ಮೇಳನದ ದೃಢತೆಯ ಬೇರು.

ಇದು ಸಂಘಟಕರ ಜವಾಬ್ದಾರಿಯನ್ನು ಯಾವ ಪರಿ ಹೆಚ್ಚಿಸಿದೆ ಮತ್ತು ಅವರು ಎಷ್ಟು ಬದ್ಧತೆಯಿಂದ ಸ್ಪಂದಿಸುತ್ತಿದ್ದಾರೆ ಅಂದರೆ ಸಮ್ಮೇಳನ ಮುಗಿದು ವಾರವೆರಡರ ಒಳಗೆ ಎಲ್ಲಾ ಲೆಕ್ಕಪತ್ರ ಸಾರ್ವಜನಿಕಗೊಳಿಸಲಾಗುತ್ತಿದೆ. ಗುಪ್ತ ಕೊಡುಗೆ, ಲೆಕ್ಕಗಳು ಇಲ್ಲಿಲ್ಲ.

ಈ ಬಗೆಯ ಇನ್ನೊಂದು ಸಮ್ಮೇಳನ ಸಾಧ್ಯವೇ? ಸಾಧ್ಯ. ಆದರೆ ಅದಕ್ಕೆ ಅಪಾರ ಸಂಗಾತಿಗಳ ನಿರ್ವ್ಯಾಜ ಸಂಪರ್ಕ ಮತ್ತು ಬದ್ಧತೆ ಬೇಕು. ಬೆಂಗಳೂರಿನ ಹತ್ತು ಹಲವು ಸಮ್ಮೇಳನಗಳು ‘ದೊಡ್ಡವರ’ ಕೊಡುಗೆ ಮೂಲಕ ಸಲೀಸಾಗಿ ನಡೆದುಕೊಂಡು ಬಂದಿದ್ದನ್ನು ನೋಡಿದ್ದೇನೆ. ಕೆಲವು ಸೈದ್ಧಾಂತಿಕ ಬೆಂಬಲದಿಂದ ಆದರೂ ಅದು ಕೊನೆಗೂ ಉಳ್ಳವರ ಕೊಡುಗೆಯ ಋಣಕ್ಕೆ ಬೀಳುವ ಅಪಾಯದ ಹಗ್ಗದ ನಡಿಗೆಯಲ್ಲೇ ಇರುತ್ತದೆ. ಮೇ ಸಾಹಿತ್ಯ ಸಮ್ಮೇಳನ ಈ ಅಪಾಯವನ್ನು ತನ್ನ ಸಂಗಾತಿಗಳ ಸಂಘಟಿತ ಬಲದಿಂದಲೇ ಮೀರಿದೆ.

ಇಂತಹ ಪರ್ಯಾಯ ಸಮ್ಮೇಳನಗಳು ಕೆಲವೆಡೆ ನಡೆದರೂ ಸತತವಾಗಿ ನಡೆಸಲು ಸಾಧ್ಯವಾಗಿಲ್ಲದ್ದರ ಬಗ್ಗೆ ನನಗೂ ದುಃಖವಿದೆ. ಐಡಿಯಲೀ ರಾಜ್ಯದ ನಾಲ್ಕೈದು ಕಡೆ ಬೇರೆ ಬೇರೆ ಸಮಯಗಳಲ್ಲಿ ಇಂತಹ ಸಮ್ಮೇಳನಗಳು ನಡೆಯಬೇಕಿದೆ. ಹೆಚ್ಚು ಹೆಚ್ಚು ಸಂಪರ್ಕ, ಸಂವಾದಗಳ ಮೂಲಕ ಕ್ರಿಯಾಶೀಲ ಸಾಂಸ್ಕೃತಿಕ ನಡೆಗಳು ಜರುಗಬೇಕಾಗಿದೆ.

ಮೇ ಸಾಹಿತ್ಯ ಮೇಳಕ್ಕೆ ಬರುವ ಸಾವಿರಾರು ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ವಲಯದ ಸಂಗಾತಿಗಳಿಗೆ ಪ್ರಯಾಣ ವೆಚ್ಚ ನೀಡುವುದಿಲ್ಲ. ವಸತಿ ಮತ್ತು ಊಟದ ವ್ಯವಸ್ಥೆ ಇರುತ್ತದೆ. ಈ ಬದ್ಧತೆ ಕನ್ನಡದ ಮಟ್ಟಿಗಷ್ಟೇ ಅಲ್ಲ ದೇಶದ ಮಟ್ಟಿಗೂ ಒಂದು ಅಪರೂಪದ ಸಂಗತಿ.

ಈ ಬಾರಿಯ ಸಮ್ಮೇಳನ ಹುಬ್ಬಳ್ಳಿಯಲ್ಲಿ ಇದೇ 16-17ರಂದು ನಡೆಯಲಿದೆ. ಸಾಂವಿಧಾನಿಕ ಪ್ರಜಾಸತ್ತೆಯ ಮೇಲಿನ ದಾಳಿ-ಚಹರೆಗಳು ಮತ್ತು ಹೊರದಾರಿಗಳು ಮುಖ್ಯ ಥೀಮ್. ಇದರ ಒಳ ವಿವರಗಳ ಗೋಷ್ಠಿಗಳು ಇದರ ವ್ಯಾಪಕತೆಯನ್ನೂ ಇದರ ಪ್ರಾಮುಖ್ಯತೆಯನ್ನೂ ಮುನ್ನೆಲೆಗೆ ತಂದಿದೆ.

ಮೇ ಸಾಹಿತ್ಯ ಸಮ್ಮೇಳನ ಚರ್ಚಿಸುವ ವಿಷಯವನ್ನು ಮುಂದಿನ ದಿನಗಳಲ್ಲಿ ಇಡೀ ಕರ್ನಾಟಕವೇ ಚರ್ಚಿಸುತ್ತದೆ ಎಂದು ನಾನು ಹೇಳಿದ್ದಿದೆ. ಹೋರಾಟ, ಸೈದ್ಧಾಂತಿಕ ಬದ್ಧತೆಯ ಎಲ್ಲ ಮನಸ್ಸುಗಳು ಇಲ್ಲಿ ಪಾಲ್ಗೊಳ್ಳುತ್ತಿರುವುದೇ ಈ ಮಾತಿಗೆ ಸ್ಫೂರ್ತಿ.

Tags

HubliMay Literary Conference
share
ಕೆ.ಪಿ. ಸುರೇಶ
ಕೆ.ಪಿ. ಸುರೇಶ
Next Story
X