Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದ್ವೇಷದ ಏಜೆಂಟರಿಂದ ದೇಶ ಸುಡುವುದನ್ನು...

ದ್ವೇಷದ ಏಜೆಂಟರಿಂದ ದೇಶ ಸುಡುವುದನ್ನು ತಪ್ಪಿಸುವತ್ತ ಮುಹಮ್ಮದ್ ದೀಪಕ್ ಮಾದರಿ

ಪಿ.ಎಚ್. ಅರುಣ್ಪಿ.ಎಚ್. ಅರುಣ್26 Feb 2026 10:34 AM IST
share
ದ್ವೇಷದ ಏಜೆಂಟರಿಂದ ದೇಶ ಸುಡುವುದನ್ನು ತಪ್ಪಿಸುವತ್ತ ಮುಹಮ್ಮದ್ ದೀಪಕ್ ಮಾದರಿ

ಭಾರತದಲ್ಲಿ ಇಂತಹ ಕೋಮು ದ್ವೇಷ ಎಷ್ಟು ಸಾಮಾನ್ಯವಾಗಿದೆಯೆಂದರೆ, ಸಾಮಾನ್ಯ ಜನರು ಸಹ ಇನ್ನೊಬ್ಬ ವ್ಯಕ್ತಿಗೆ ಸಹಾಯ ಮಾಡಲು ಹೆದರುತ್ತಾರೆ. ಆದರೆ ಕೋಟ್ದ್ವಾರದ ದೀಪಕ್ ಯಾವಾಗ ವೃದ್ಧ ಮುಸ್ಲಿಮ್ ವ್ಯಾಪಾರಿಯ ಪರವಾಗಿ ನಿಂತು ಧ್ವನಿ ಎತ್ತಿದರೋ ಅಂದಿನಿಂದ ಎಂಥದೋ ಒಂದು ಬದಲಾವಣೆ ಕಾಣುತ್ತಿದೆ.

ಎಲ್ಲರೂ ಪ್ರಶ್ನಿಸಲು ನಿಂತರೆ, ಭಯ ಮತ್ತು ದ್ವೇಷದ ವ್ಯವಹಾರದಿಂದ ಜೀವನ ಸಾಗಿಸುವವರು ಹಾಗೆ ಮಾಡಲು ಸಾಧ್ಯವಾಗುವುದಿಲ್ಲ.

ಈಗ ಅಂಥದೇ ಸಾಧ್ಯತೆ ತೆರೆಯುತ್ತಿರುವ ಹಾಗೆ ತೋರುತ್ತಿದೆ.

ಮುಹಮ್ಮದ್ ದೀಪಕ್ ಮುಸ್ಲಿಮ್ ದ್ವೇಷದ ವಿರುದ್ಧ ದಿಟ್ಟತನದಿಂದ ನಿಂತ ಒಂದು ತಿಂಗಳ ಬಳಿಕ ಹಿಂದೂಗಳಲ್ಲಿ ಕೆಲವರಲ್ಲಾದರೂ ಒಂದು ಕಿಡಿಯನ್ನು ಹೊತ್ತಿಸಿದಂತೆ ಕಾಣುತ್ತದೆ. ನಿಧಾನವಾಗಿಯಾದರೂ ಖಂಡಿತವಾಗಿಯೂ ದೀಪಕ್‌ರಂತಹವರು ಧಾರ್ಮಿಕ ದ್ವೇಷ ಮತ್ತು ಹಿಂದುತ್ವ ಭಯೋತ್ಪಾದನೆಯನ್ನು ವಿರೋಧಿಸುತ್ತಿದ್ದಾರೆ. ಬಜರಂಗದಳದಂಥ ಕೆಟ್ಟ ಶಕ್ತಿಗಳನ್ನು ಬಹಿರಂಗವಾಗಿ ಪ್ರಶ್ನಿಸಲಾಗುತ್ತಿದೆ.

ತಮ್ಮ ಅಸಮರ್ಥತೆ ಮರೆಮಾಡಲು ಧಾರ್ಮಿಕ ಭಯ ಹುಟ್ಟಿಸುವ ಮತ್ತು ದ್ವೇಷವನ್ನು ಬಳಸುವವರ ಪಾಲಿಗೆ ಮುಹಮ್ಮದ್ ದೀಪಕ್ ಅವರ ಮಾದರಿ ನಿಜಕ್ಕೂ ಒಂದು ಸವಾಲಾಗಿದೆ.

ಜನವರಿ 26ರಂದು ಸಂಘಪರಿವಾರದ ಬಜರಂಗದಳದ ಕಾರ್ಯಕರ್ತರು ಉತ್ತರಾಖಂಡದ ಕೋಟ್ದ್ವಾರದಲ್ಲಿ 70 ವರ್ಷದ ವಕೀಲ್ ಅಹ್ಮದ್ ಅವರನ್ನು ಬಾಬಾ ಎಂದು ಅಂಗಡಿಗೆ ಹೆಸರಿಟ್ಟಿದ್ದಕ್ಕೆ ಟಾರ್ಗೆಟ್ ಮಾಡಿದ್ದರು. 30 ವರ್ಷಗಳ ಕಾಲ ಇಲ್ಲದ ತಕರಾರನ್ನು ಅವತ್ತು ಎತ್ತಲಾಗಿತ್ತು. ತಕ್ಷಣವೇ ಹೆಸರು ಬದಲಾಯಿಸಲು ಒತ್ತಾಯಿಸಲಾಯಿತು. ಆಗ ಮುಂದೆ ಬಂದು ಅಹ್ಮದ್ ಪರವಾಗಿ ನಿಂತವರೇ ದೀಪಕ್ ಕುಮಾರ್.

ಆಗ ಬಜರಂಗದಳದವರು ಹೆಸರು ಕೇಳಿದಾಗ, ‘ಮುಹಮ್ಮದ್ ದೀಪಕ್’ ಎಂದು ಉತ್ತರಿಸಿದ್ದರು.

ದೀಪಕ್ ಮುಸ್ಲಿಮ್ ವ್ಯಾಪಾರಿಯನ್ನು ಬೆಂಬಲಿಸಿದ ಬಳಿಕ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು. ಅವರನ್ನು ಕೊಲ್ಲುವ ಬೆದರಿಕೆಯನ್ನೂ ಪೊಲೀಸರೆದುರೇ ಒಡ್ಡಲಾಯಿತು. ಅವರು ನಡೆಸುತ್ತಿದ್ದ ಜಿಮ್‌ಗೆ ಹೋಗುತ್ತಿದ್ದವರ ಸಂಖ್ಯೆ 150ರಿಂದ 10-12ಕ್ಕೆ ಇಳಿಯಿತು. ಆದರೆ ಯಾವ ಬೆದರಿಕೆಗೂ ದೀಪಕ್ ಹೆದರಲಿಲ್ಲ. ಜಿಮ್ ಬಗ್ಗೆ ತಲೆಕೆಡಿಸಿಕೊಳ್ಳದೆ ತನ್ನ ನಿಲುವಿಗೆ ಗಟ್ಟಿಯಾಗಿ ನಿಂತರು.

ಇಡೀ ದೇಶದಿಂದ ದೀಪಕ್‌ಗೆ ಪ್ರೀತಿ ಸಿಕ್ಕಿತು. ಲಕ್ಷಾಂತರ ಜನರು ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಫಾಲೋ ಮಾಡತೊಡಗಿದರು.

ಕೇರಳದ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಕೂಡ ದೀಪಕ್ ಅವರ ಬೆಂಬಲಕ್ಕೆ ಹೋದರು. ಜಾರ್ಖಂಡ್ ಸಚಿವ ಡಾ. ಇರ್ಫಾನ್ ಅನ್ಸಾರಿ ತಮ್ಮ ಸಂಬಳದಿಂದ ಎರಡು ಲಕ್ಷ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.

ಇದರ ನಂತರ, ದೀಪಕ್ ಒಂದು ವೀಡಿಯೊ ಮಾಡಿ, ಈ ಹಣವನ್ನು ನನಗೆ ನೀಡಬೇಡಿ. ಇನ್ನೂ ಜೀವನ ಸಾಗಿಸಲು ಕಷ್ಟಪಡುತ್ತಿರುವ ಅಂಕಿತಾ ಭಂಡಾರಿ ಅವರ ಕುಟುಂಬಕ್ಕೆ ನೀಡಿ ಎಂದು ಹೇಳಿದರು.

ಅವರ ಜಿಮ್ ಸದಸ್ಯತ್ವ ಕುಸಿದಾಗ, ಸುಪ್ರೀಂ ಕೋರ್ಟ್ ನ 15 ಮಂದಿ ವಕೀಲರು ಜಂಟಿಯಾಗಿ, ಜಿಮ್ ತರಬೇತಿ ಪಡೆಯಲು ಸಾಧ್ಯವಾಗದ ಸ್ಥಳೀಯ ಯುವಕರಿಗೆ ಸದಸ್ಯತ್ವ ವ್ಯವಸ್ಥೆ ಮಾಡಿದರು. ಅಲ್ಲದೆ, ಭವಿಷ್ಯದಲ್ಲಿ ಕಾನೂನು ಸಹಾಯ ಬೇಕಾದರೆ ತಾವು ಜೊತೆಗಿರುವುದಾಗಿ ದೀಪಕ್‌ಗೆ ಭರವಸೆ ನೀಡಿದರು.

ಮುಹಮ್ಮದ್ ದೀಪಕ್, ಬಜರಂಗದಳ ಎಂದಿಗೂ ಮಾತನಾಡದ ಹಿಂದೂ ಅಂಕಿತಾ ಭಂಡಾರಿ ಅವರ ಕುಟುಂಬವನ್ನು ಭೇಟಿಯಾದರು.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ದೀಪಕ್ ಅವರನ್ನು ಹೊಗಳಿದರು. ಈ ದೇಶದಲ್ಲಿ ಅವರಂತೆ ದ್ವೇಷದ ವಿರುದ್ಧ ಮಾತನಾಡುವ ದೀಪಕ್ ಮಾದರಿ ನಮಗೆ ಬೇಕು, ಪ್ರೀತಿಯ ಬಗ್ಗೆ ಮಾತನಾಡುವವರು ನಮಗೆ ಬೇಕು ಎಂದು ರಾಹುಲ್ ಹೇಳಿದರು. ಫೆಬ್ರವರಿ 23ರಂದು ರಾಹುಲ್ ಗಾಂಧಿ ಸ್ವತಃ ದೀಪಕ್ ಅವರನ್ನು ಭೇಟಿಯಾದರು.

ಪ್ರಯಾಗರಾಜ್‌ನಲ್ಲಿರುವ ಜನರು ಈಗ ದೀಪಕ್ ಅವರ ಅಭಿಮಾನಿಗಳಾಗಿದ್ದಾರೆ. ದೀಪಕ್ ಅವರ ಧೈರ್ಯ ಮತ್ತು ಸತ್ಯದ ಮೇಲಿನ ನಂಬಿಕೆ ಒಂದು ಕಿಡಿಯನ್ನು ಹೊತ್ತಿಸಿದೆ. ಈ ಕಿಡಿ ಹೊತ್ತಿಕೊಂಡರೆ, ದ್ವೇಷ ಹರಡುವವರ ಆಟ ದೊಡ್ಡ ಮಟ್ಟದಲ್ಲಿ ಮುಗಿಯುತ್ತದೆ.

12 ವರ್ಷಗಳಿಂದ ಸುಳ್ಳು, ವಂಚನೆ ಮತ್ತು ದ್ವೇಷವನ್ನೇ ಹರಡುತ್ತ ಬರಲಾಗಿದೆ. ಆದರೆ ಎಷ್ಟೋ ಹಿಂದೂಗಳಿಗೆ ಸತ್ಯ ಏನೆಂಬುದು ಗೊತ್ತಾಗಿದೆ. ಹಿಂದುತ್ವದ ಜ್ವಾಲೆ ತಮ್ಮ ಧರ್ಮವನ್ನು ದ್ವೇಷದ ಕಡೆಗೆ ಹೇಗೆ ತಳ್ಳುತ್ತಿದೆ ಎಂಬುದನ್ನು ಅವರು ನೋಡುತ್ತಿದ್ದಾರೆ.

ಈ ಬೆಳವಣಿಗೆಯ ನಂತರ ಸಂಖ್ಯೆ ಸಣ್ಣದೇ ಆದರೂ ದ್ವೇಷದ ವಿರುದ್ಧ ನಿಲ್ಲಲು ಧೈರ್ಯ ಮಾಡುತ್ತಿರುವ ಮತ್ತಷ್ಟು ಮುಹಮ್ಮದ್ ದೀಪಕ್ ಮಾದರಿಗಳನ್ನು ನಾವು ನೋಡುತ್ತಿದ್ದೇವೆ.

ವಾರಣಾಸಿಯಲ್ಲಿ ಫೆಬ್ರವರಿ 17ರಂದು ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠ ವಿಶ್ವವಿದ್ಯಾನಿಲಯದ 20 ವಿದ್ಯಾರ್ಥಿಗಳ ಗುಂಪು ವಾರಣಾಸಿಯ ಮೇಕೆ ಮಾರುಕಟ್ಟೆಯಲ್ಲಿ ಕೆಲ ಅಂಗಡಿಗಳನ್ನು ಮುಚ್ಚಿಸಲು ಪ್ರಯತ್ನಿಸಿತು. ಅವರು ಕಾಶಿ ಮಹಾನಗರ ಎಬಿವಿಪಿ ಕಾರ್ಯದರ್ಶಿ ಶಿವಂ ತಿವಾರಿ ನೇತೃತ್ವದಲ್ಲಿ ಎಬಿವಿಪಿಗೆ ಸೇರಿದ ವಿದ್ಯಾರ್ಥಿಗಳು ಎಂದು ವರದಿಯಾಗಿದೆ.

ಅಕ್ರಮ ಕಸಾಯಿಖಾನೆಗಳಿವೆ ಮತ್ತು ಆ ಪ್ರದೇಶದಲ್ಲಿ ಸತ್ತ ಮೇಕೆಯನ್ನು ತೋರಿಸುವ ವೀಡಿಯೊ ಇದೆ ಎಂದು ಗುಂಪು ಆರೋಪಿಸಿತ್ತು. ಈ ಯುವಕರು ಬಾಗಿಲು ಬಡಿಯುತ್ತಾ ಅಂಗಡಿಗಳನ್ನು ಮುಚ್ಚಲು ಒತ್ತಾಯಿಸುತ್ತಿರುವುದು ಕಂಡುಬಂದಿರುವ ಬಗ್ಗೆ ವರದಿಯಾಗಿದೆ.

ಈ ಮಾರುಕಟ್ಟೆ ಕಾಶಿ ವಿಶ್ವನಾಥ ದೇವಾಲಯದಿಂದ 2 ಕಿ.ಮೀ. ವ್ಯಾಪ್ತಿಯಲ್ಲಿದೆ. ಈ ಮಾರುಕಟ್ಟೆ ಕಳೆದ 100 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಪ್ರದೇಶದಾದ್ಯಂತ ಜನರು ಇಲ್ಲಿ ಮೇಕೆಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ.

ಈ ವಿದ್ಯಾರ್ಥಿಗಳನ್ನು ಅವರ ಗುರುತಿನ ಚೀಟಿಗಳನ್ನು ತೋರಿಸಲು ಕೇಳಿದಾಗ ತಬ್ಬಿಬ್ಬಾದರು. ಅವರು ತಮ್ಮ ಗುರುತಿನ ಚೀಟಿಗಳನ್ನು ತೋರಿಸಲು ಸಾಧ್ಯವಾಗಲಿಲ್ಲ. ಬದಲಾಗಿ, ಅವರು ಮಾರುಕಟ್ಟೆಯನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದರು. ಆದರೆ ಕೆಲವು ಜನರು ಅವರ ವಿರುದ್ಧ ನಿಂತಾಗ, ಅವರು ದಿಗಿಲುಗೊಂಡರು. ಅವರು ಓಡಿಹೋಗಬೇಕಾಯಿತು.

ಅಂಗಡಿಯ ಹೆಸರನ್ನು ಬದಲಾಯಿಸುವುದರಿಂದ ಅಥವಾ ಮಾರುಕಟ್ಟೆ ಮುಚ್ಚುವುದರಿಂದ ಹಿಂದೂ ಸಮಾಜದ ಎಲ್ಲಾ ನೋವುಗಳು ಕೊನೆಗೊಳ್ಳುತ್ತವೆಯೇ? ಈ ಎಲ್ಲಾ ಅಸಂಬದ್ಧತೆಯ ಮೂಲಕ ಹಿಂದೂ ಸಮಾಜ ಹೇಗೆ ಸುಧಾರಿಸುತ್ತದೆ ಎಂಬುದಕ್ಕೆ ಅಂಗಡಿಗಳನ್ನು ಮುಚ್ಚಿಸಲು ಬರುವ ಯುವಕರ ಬಳಿಯಾಗಲಿ, ಬಜರಂಗದಳದವರ ಬಳಿಯಾಗಲಿ ಉತ್ತರ ಇರುವುದಿಲ್ಲ.

ಪ್ರೇಮಿಗಳ ದಿನದಂದು ಕೂಡ ಅಂಥದೇ ಮತ್ತೊಂದು ಮುಹಮ್ಮದ್ ದೀಪಕ್ ಎಫೆಕ್ಟ್ ಸನ್ನಿವೇಶ ಕಂಡಿತು.

ರಾಜಸ್ಥಾನದ ಜೈಪುರದಲ್ಲಿ ಪ್ರೇಮಿಗಳ ದಿನದಂದು, ಬಜರಂಗದಳದವರೆಂದು ಹೇಳಿಕೊಂಡ ಮಂದಿ ಪಾರ್ಕ್‌ನಲ್ಲಿದ್ದ ಜೋಡಿಗೆ ಕಿರುಕುಳ ನೀಡಲು ಬಂದರು. ಆಗ ಸ್ಥಳೀಯರೇ ಆ ಗುಂಪನ್ನು ಎದುರಿಸಿ ಪ್ರಶ್ನಿಸಿದ ಘಟನೆ ನಡೆಯಿತು. ಜನರು ಕೋಪಗೊಳ್ಳತೊಡಗಿದಂತೆ, ಪಾರ್ಕ್‌ನಲ್ಲಿದ್ದ ಜೋಡಿಯನ್ನು ಬೆದರಿಸಲು ಬಂದವರು ಓಡಿಹೋಗತೊಡಗಿದರು.

ಒಬ್ಬ ವ್ಯಕ್ತಿ ಮತಾಂಧತೆ ಮತ್ತು ದಬ್ಬಾಳಿಕೆ ವಿರುದ್ಧ ನಿಂತರೂ, ಅದು ಅನೇಕರಿಗೆ ಜೀವದಾನ ನೀಡುತ್ತದೆ ಎಂಬುದು ಸ್ಪಷ್ಟ. ಜನರು ಅದರಿಂದ ಸ್ಫೂರ್ತಿ ಪಡೆಯುತ್ತಾರೆ, ಅದರಿಂದ ಕಲಿಯುತ್ತಾರೆ ಮತ್ತು ಅದು ಅವರಿಗೆ ಶಕ್ತಿಯನ್ನು ನೀಡುತ್ತದೆ.

ಹಿಂದೂಗಳು ಎಚ್ಚರಗೊಂಡು ಒಗ್ಗೂಡಿದರೆ ಬಜರಂಗದಳದಂಥ ಜನರ ದ್ವೇಷದ ದಿನಗೂಲಿ ನಿಂತುಹೋಗುತ್ತದೆ.

ಇತ್ತೀಚೆಗೆ ಬಿಜೆಪಿಯ ಗುರುಗ್ರಾಮದ ಮಾಜಿ ಸಂಸದ ಸುಖ್‌ಬೀರ್ ಸಿಂಗ್, ಧರ್ಮದ ಬಗ್ಗೆ ಕೇಳಿ ಮುಸ್ಲಿಮ್ ಮಹಿಳೆಯರಿಗೆ ಕೊಟ್ಟ ಕಂಬಳಿ ವಾಪಸ್ ಪಡೆಯುತ್ತಾರೆ. ಮುಸ್ಲಿಮ್ ಮಹಿಳೆಯರನ್ನು ಹೊರಹೋಗುವಂತೆ ಹೇಳಲಾಗುತ್ತದೆ.

ಜನರು ಈ ಬಗ್ಗೆ ಅವರನ್ನು ಪ್ರಶ್ನಿಸಿ, ಪ್ರಜಾಪ್ರಭುತ್ವದಲ್ಲಿ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದಾಗ, ಆ ಮಾಜಿ ಸಂಸದ ಕೋಪಗೊಳ್ಳುತ್ತಾರೆ.

ಈ ನಾಯಕನ ಅಸಭ್ಯತೆ ನೋಡಿ, ಗ್ರಾಮದವರೆಲ್ಲರೂ ತಮಗೆ ದಾನ ಮಾಡಿದ ಎಲ್ಲಾ ಕಂಬಳಿಗಳು ಮತ್ತು ಸಿಹಿತಿಂಡಿಗಳನ್ನು ಸುಖ್‌ಬೀರ್‌ಗೆ ಹಿಂದಿರುಗಿಸಲು ನಿರ್ಧರಿಸಿದರು ಮತ್ತು ತಮ್ಮ ಹಳ್ಳಿಗೆ ಕಾಲಿಡಬೇಡಿ ಎಂದು ಹೇಳಿದ್ದು ವರದಿಯಾಗಿದೆ.

ಚುನಾವಣೆಯಲ್ಲಿ ಸ್ಪರ್ಧಿಸುವುದು ಹಾಗಿರಲಿ, ಅವರು ಇಲ್ಲಿಗೆ ಪ್ರವೇಶಿಸಲೂ ಸಾಧ್ಯವಿಲ್ಲ. ಜಾಟ್‌ಗಳು, ಮೀನಾಗಳು ಮತ್ತು ಗುರ್ಜರರು ಈ ಮುಸ್ಲಿಮ್ ಸಹೋದರರೊಂದಿಗೆ ನಿಲ್ಲುತ್ತಾರೆ ಎಂದು ಸ್ಪಷ್ಟಪಡಿಸಲಾಯಿತು.

ಇದು ಕೇವಲ ಒಂದು ಸಣ್ಣ ಹಳ್ಳಿಯ ಕಥೆ. ದೇಶಾದ್ಯಂತ ಜನರು ಹಿಂದೂಗಳು ಮತ್ತು ಮುಸ್ಲಿಮರನ್ನು ವಿಭಜಿಸುವ ನಾಯಕರ ವಿರುದ್ಧ ಹೀಗೆಯೇ ನಿಲ್ಲಲು ಪ್ರಾರಂಭಿಸಿದರೆ, ಅಂಥ ನಾಯಕರು ಖಂಡಿತ ವಿಪತ್ತು ಎದುರಿಸಬೇಕಾಗುತ್ತದೆ. ಅಂಥ ಒಗ್ಗಟ್ಟು, ಸೋದರತೆಯ ಬಗ್ಗೆಯೇ ಬಿಜೆಪಿ, ಆರೆಸ್ಸೆಸ್ ಮತ್ತು ಬಜರಂಗದಳದವರು ಭಯಪಡುತ್ತಾರೆ.

ಇದು ಮುಹಮ್ಮದ್ ದೀಪಕ್ ಪರಿಣಾಮ.

ಲಕ್ನೊ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಪ್ರಕಾರ, ನವೀಕರಣ ಕಾರ್ಯ ಪ್ರಾರಂಭಿಸಲು ವಿಶ್ವವಿದ್ಯಾಲಯದ ಆಡಳಿತ ಯಾವುದೇ ಸೂಚನೆಯಿಲ್ಲದೆ ಕ್ಯಾಂಪಸ್‌ನಲ್ಲಿರುವ ಲಾಲ್ ಬರಾದರಿ ಮಸೀದಿಯ ಗೇಟ್‌ಗಳನ್ನು ಮುಚ್ಚಿದೆ. ಮಸೀದಿ 200 ವರ್ಷ ಹಳೆಯದು ಮತ್ತು ಭಾರತೀಯ ಪುರಾತತ್ವ ಸಮೀಕ್ಷೆ ಎಎಸ್ ವ್ಯಾಪ್ತಿಗೆ ಬರುತ್ತದೆ. ಮಸೀದಿಯನ್ನು ಯಾವುದೇ ನವೀಕರಣ ಯೋಜನೆ ಅಥವಾ ಸೂಚನೆ ಇಲ್ಲದೆ ಮುಚ್ಚಲಾಗಿದೆ ಎಂದು ಅಲ್ಲಿನ ವಿದ್ಯಾರ್ಥಿಗಳು ಹೇಳುತ್ತಾರೆ.

ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುವವರೆಗೆ ಅಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಮುಂದುವರಿಸುವುದಾಗಿ ಮುಸ್ಲಿಮ್ ವಿದ್ಯಾರ್ಥಿಗಳು ಹೇಳುತ್ತಾರೆ.

ಮುಸ್ಲಿಮ್ ವಿದ್ಯಾರ್ಥಿಗಳನ್ನು ಒಳಗೆ ಬಿಡಲು ನಿರಾಕರಿಸಿದಾಗ, ಹಿಂದೂ ವಿದ್ಯಾರ್ಥಿಗಳು ತಮ್ಮ ಮುಸ್ಲಿಮ್ ಸಹೋದರರು ಪ್ರಾರ್ಥನೆ ಸಲ್ಲಿಸಲು ರಕ್ಷಣೆಗಾಗಿ ಮಾನವ ಸರಪಳಿ ರಚಿಸಿದರು.

ಸಂಜೆ, ಜನರು ಮಸೀದಿಯ ಹೊರಗೆ ಇಫ್ತಾರ್ ಕೂಟವನ್ನು ಸಹ ನಡೆಸಿದರು.

ಕೋಮು ಉದ್ವಿಗ್ನತೆ ಹೆಚ್ಚಿಸಲು ನಡೆಯುತ್ತಿರುವ ಪ್ರಯತ್ನಗಳ ಹೊರತಾಗಿಯೂ ವಿಶ್ವವಿದ್ಯಾನಿಲಯದಲ್ಲಿ ಸಹೋದರತ್ವವನ್ನು ಕಾಪಾಡಿಕೊಳ್ಳುವ ಭರವಸೆ ನೀಡುವ ಸಂದೇಶ ಈ ಮೂಲಕ ಬಂತು.

ಭಾರತದಲ್ಲಿ ಇಂತಹ ಕೋಮು ದ್ವೇಷ ಎಷ್ಟು ಸಾಮಾನ್ಯವಾಗಿದೆ ಯೆಂದರೆ, ಸಾಮಾನ್ಯ ಜನರು ಸಹ ಇನ್ನೊಬ್ಬ ವ್ಯಕ್ತಿಗೆ ಸಹಾಯ ಮಾಡಲು ಹೆದರುತ್ತಾರೆ. ಆದರೆ ಕೋಟ್ದ್ವಾರದ ದೀಪಕ್ ಯಾವಾಗ ವೃದ್ಧ ಮುಸ್ಲಿಮ್ ವ್ಯಾಪಾರಿಯ ಪರವಾಗಿ ನಿಂತು ಧ್ವನಿ ಎತ್ತಿದರೋ ಅಂದಿನಿಂದ ಎಂಥದೋ ಒಂದು ಬದಲಾವಣೆ ಕಾಣುತ್ತಿದೆ.

ಎಲ್ಲರೂ ಪ್ರಶ್ನಿಸಲು ನಿಂತರೆ, ಭಯ ಮತ್ತು ದ್ವೇಷದ ವ್ಯವಹಾರದಿಂದ ಜೀವನ ಸಾಗಿಸುವವರು ಹಾಗೆ ಮಾಡಲು ಸಾಧ್ಯವಾಗುವುದಿಲ್ಲ.

ಈಗ ಅಂಥದೇ ಸಾಧ್ಯತೆ ತೆರೆಯುತ್ತಿರುವ ಹಾಗೆ ತೋರುತ್ತಿದೆ.

ಮುಹಮ್ಮದ್ ದೀಪಕ್ ಹಿಂದೂವಾಗಿ ತನ್ನ ಕರ್ತವ್ಯವನ್ನು ಪೂರೈಸಿದ್ದಾರೆ.

ಅಲ್ಲದೆ ಬೆಳೆಯುತ್ತಿರುವ ದ್ವೇಷದ ವಿರುದ್ಧ ಹೋರಾಡಲು ಅವರು ತಮ್ಮ ಸ್ನೇಹಿತನೊಂದಿಗೆ ಈಗ ಭಾರತದಾದ್ಯಂತ ಇನ್ಸಾನಿಯತ್ ಜೋಡೋ ಯಾತ್ರೆ ಆಯೋಜಿಸುವ ಬಗ್ಗೆ ಯೋಚಿಸಿದ್ದಾರೆ.

ದೇಶದ ಕಲ್ಯಾಣಕ್ಕಾಗಿ, ದ್ವೇಷದ ಏಜೆಂಟರನ್ನು ತಡೆಯಲು, ದ್ವೇಷವೇ ದೇಶವನ್ನು ಸುಡುವುದನ್ನು ತಪ್ಪಿಸಲು ಮಾಡಬೇಕಿರುವುದೇನು ಎಂಬುದಕ್ಕೆ ಮುಹಮ್ಮದ್ ದೀಪಕ್ ಅವರ ಈ ದಾರಿ ಒಂದು ಮಾದರಿ.

Tags

Muhammad Deepak
share
ಪಿ.ಎಚ್. ಅರುಣ್
ಪಿ.ಎಚ್. ಅರುಣ್
Next Story
X