Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಾತೃಭಾಷಾ ಮಾಧ್ಯಮ ಶಿಕ್ಷಣದ ಹೆಸರಿನಲ್ಲಿ...

ಮಾತೃಭಾಷಾ ಮಾಧ್ಯಮ ಶಿಕ್ಷಣದ ಹೆಸರಿನಲ್ಲಿ ಬಡವರನ್ನು ಅವಕಾಶಗಳಿಂದ ವಂಚಿಸುವುದು ಬೇಡ

ಡಾ.ಚಂದ್ರಶೇಖರ್ ಆರ್.ವಿ.ಡಾ.ಚಂದ್ರಶೇಖರ್ ಆರ್.ವಿ.11 July 2025 11:12 AM IST
share
ಮಾತೃಭಾಷಾ ಮಾಧ್ಯಮ ಶಿಕ್ಷಣದ ಹೆಸರಿನಲ್ಲಿ ಬಡವರನ್ನು ಅವಕಾಶಗಳಿಂದ ವಂಚಿಸುವುದು ಬೇಡ

ತಳಸಮುದಾಯಗಳನ್ನು ಐತಿಹಾಸಿಕವಾಗಿ ಜಾತಿಯ ಹೆಸರಿನಲ್ಲಿ, ಸಂಸ್ಕೃತಿ ಹೆಸರಿನಲ್ಲಿ, ಆಚರಣೆಯ ಹೆಸರಿನಲ್ಲಿ, ಪರಂಪರೆ ಹೆಸರಿನಲ್ಲಿ ಇಲ್ಲಿವರೆಗೂ ಶೋಷಣೆ ಮಾಡುತ್ತಾ ಬಂದು ಈಗ ಭಾಷೆಯ ಹೆಸರಿನಲ್ಲಿ, ಮಾತೃ ಭಾಷೆ ಶಿಕ್ಷಣದ ಹೆಸರಿನಲ್ಲಿ ಶೋಷಣೆ ಮಾಡಲು ಹುನ್ನಾರಗಳನ್ನು ರೂಪಿಸುತ್ತಿದ್ದಾರೆ. ಇದನ್ನು ನಾವೆಲ್ಲರೂ ಸೇರಿ ಈ ಬೌದ್ಧಿಕ ಪಂಡಿತರ ಆಲೋಚನೆ ಕ್ರಮವನ್ನು ವಿರೋಧಿಸಬೇಕಾಗುತ್ತದೆ. ಎಲ್ಲರಿಗೂ ಒಂದೇ ಮಾಧ್ಯಮದ ಗುಣಮಟ್ಟದ ಶಿಕ್ಷಣವನ್ನು ನೀಡಲು ಒತ್ತಾಯಿಸಬೇಕಾಗುತ್ತದೆ. ಸರಕಾರಿ ಶಾಲೆಗಳಿಗೆ ಮಾತ್ರ ಒಂದು ನಿಯಮ. ಖಾಸಗಿ ಶಾಲೆಗಳಿಗೆ ಇನ್ನೊಂದು ನಿಯಮ ಎಂದು ಹೇಳುತ್ತಿದ್ದಾರೆ. ಈ ಪ್ರಕ್ರಿಯೆಯಿಂದ ತಳಸಮುದಾಯಗಳನ್ನು ಅವಕಾಶಗಳಿಂದ ವಂಚಿಸಿ ಮತ್ತಷ್ಟು ಹಿಂದೆ ತಳ್ಳುತ್ತಾರೆ. ಯಾವುದೇ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ಪಡೆದರೂ ಮಾತೃಭಾಷೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಶ್ರೀಮಂತರು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಇವರ ಭಾಷೆ ಉಳಿಯುತ್ತದೆ. ಆದರೆ ಬಡವರ ಮಕ್ಕಳು ಮಾತ್ರ ಸರಕಾರಿ ಶಾಲೆಗಳಲ್ಲಿ ಕನ್ನಡದಲ್ಲಿ ಶಿಕ್ಷಣ ಪಡೆಯಬೇಕು ಎಂದು ಹೇಳುತ್ತಾರೆ. ಈ ರೀತಿಯ ನಿಲುವುಗಳು ಶೋಷಣೆಯನ್ನು ಮುಂದುವರಿಸುವ ಹೊಸ ತಂತ್ರಗಾರಿಕೆಯೂ ಆಗಿದೆ.

ಮೇಲ್ಜಾತಿಗಳು ಮತ್ತು ಮೇಲ್ವರ್ಗದವರು ಯಾವಾಗಲೂ ದೇಶ ರಕ್ಷಣೆ ಎಂದರೆ ಅದು ಬಡವರಿಂದಲೇ ಆಗಬೇಕು. ಸಂಸ್ಕೃತಿಯ ರಕ್ಷಣೆ, ಪರಂಪರೆಯ ರಕ್ಷಣೆ, ಆಚಾರ, ವಿಚಾರ, ನಂಬಿಕೆ ಮತ್ತು ಧರ್ಮಗಳ ರಕ್ಷಣೆಯಾಗಬೇಕಾದರೆ ಅದು ಬಡವರಿಂದಲೇ ಆಗಬೇಕು ಎಂದು ಏಕೆ ಬಯಸುತ್ತಾರೆ? ಇತರ ಮೇಲ್ವರ್ಗಗಳಿಂದ ಏಕೆ ಸಾಧ್ಯವಾಗುವುದಿಲ್ಲ? ಎಲ್ಲದರಿಂದ ಲಾಭ ಪಡೆಯುವವರು ಅವುಗಳ ರಕ್ಷಣೆಗೆ ಮಾತ್ರ ಬರುವುದಿಲ್ಲ. ಈ ದೇಶದಲ್ಲಿ ಮತ್ತು ರಾಜ್ಯದಲ್ಲಿ ಭಾಷೆಯ ರಕ್ಷಣೆ, ತಮ್ಮ ಗಡಿಯ ರಕ್ಷಣೆ, ನೀರಿನ ರಕ್ಷಣೆ ಎಂದ ತಕ್ಷಣ ಇದನ್ನು ಬಡವರೇ ಮಾಡಬೇಕು ಎನ್ನುವ ಮನಸ್ಥಿತಿ ಬೌದ್ಧಿಕ ವಲಯದಲ್ಲಿ ಅಸ್ತಿತ್ವದಲ್ಲಿದೆ. ಮಾತೃ ಭಾಷೆಯಲ್ಲಿ ಎಲ್ಲ ಸರಕಾರಿ ಶಾಲೆಗಳಲ್ಲಿ ಶಿಕ್ಷಣ ನೀಡಬೇಕು. ಅದರಿಂದ ಭಾಷೆ ಉಳಿಯುತ್ತದೆ ಎಂದು ಹೇಳುತ್ತಿದ್ದಾರೆ. ಆ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಎಲ್ಲ ಜಾತಿಯ ಅತ್ಯಂತ ಬಡ ಮಕ್ಕಳು. ಉಳಿದವರಿಗೆ ಆಂಗ್ಲ ಮಾಧ್ಯಮ ಶಿಕ್ಷಣ. ಆದರೆ ಅವರಿಬ್ಬರೂ ವಿದ್ಯಾಭ್ಯಾಸ ಪೂರೈಸಿದ ನಂತರ ಉದ್ಯೋಗಕ್ಕೆ ಸೇರುವಾಗ ಒಟ್ಟಿಗೆ ಸ್ಪರ್ಧೆ ಮಾಡಬೇಕು. ಆಗ ಅವರಿಗೆ ಭಾಷೆ ಬರುವುದಿಲ್ಲ, ಸಾಮರ್ಥ್ಯವಿಲ್ಲವೆಂದು ಅವಕಾಶಗಳಿಂದ ವಂಚಿತರಾಗುತ್ತಾರೆ.

ಬಡವರಿಗೆ ಈ ಹಿಂದೆ ಸಾವಿರಾರು ವರ್ಷಗಳ ಕಾಲ ಶಿಕ್ಷಣ ಪಡೆಯುವ ಹಕ್ಕಿರಲಿಲ್ಲ. ಸಂಸ್ಕೃತ ಭಾಷೆ ಕಲಿಯುವ ಹಕ್ಕಿರಲಿಲ್ಲ. ಈಗ ನವ ಮೂಲಭೂತವಾದ ಬಡವರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬಾರದು ಎಂದು ಹೇಳುತ್ತಿದೆ. ಸದ್ಯದಲ್ಲಿ ಸರಕಾರದ ಯಾವ ಯೋಜನೆಗಳಿಂದಲೂ ಶಾಶ್ವತವಾದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದೆ, ಶಿಕ್ಷಣದಿಂದ ಮಾತ್ರ ಸಾಧ್ಯವಾಗುತ್ತಿರುವುದು ಕಂಡು ಬರುತ್ತಿದೆ. ಈ ಸುಧಾರಣೆಯಿಂದ ಬಡವರನ್ನು ವಂಚಿಸುವ ಹುನ್ನಾರ ಇದರೊಂದಿಗಿದೆ. ಎಲ್ಲ ಜಾತಿಗಳಲ್ಲಿರುವ ಬಡವರು ಒಟ್ಟಾಗಬೇಕು. ಎಲ್ಲ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಒತ್ತಾಯಿಸಬೇಕು. ಆಧುನೀಕರಣ, ಜಾಗತೀಕರಣ, ಉದಾರೀಕರಣ, ಆರ್ಟಿಫಿಸಿಯಲ್‌ತಂತ್ರಜ್ಞಾನದ ಕಾಲಘಟ್ಟದಲ್ಲಿ ಈ ಮಾತೃ ಭಾಷಾ ಶಿಕ್ಷಣ ಕೊಡಿಸುತ್ತೇವೆಂದು ನಾವೇ ನಮ್ಮ ಮಕ್ಕಳನ್ನು ಅವಕಾಶದಿಂದ ವಂಚಿಸಿದಂತಾಗುತ್ತದೆ. ಉಳ್ಳವರು ಮತ್ತು ಬೌದ್ಧಿಕವಾಗಿರುವ ಪಂಡಿತರುಗಳು ಏನೇ ಹೇಳಿದರೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾವು ಆಂಗ್ಲ ಮಾಧ್ಯಮದ ಗುಣಮಟ್ಟದ ಶಿಕ್ಷಣವನ್ನು ಕೊಡಿಸಬೇಕು.

ಈ ಬೌದ್ಧಿಕ ಪಂಡಿತರು ಮಾತೃಭಾಷಾ ಶಿಕ್ಷಣ ಎಂದರೆ ಕನ್ನಡ ಮಾಧ್ಯಮ ಎಂದು ಭಾವಿಸಿದ್ದಾರೆ. ಕರ್ನಾಟಕದಲ್ಲಿ ಶೇ.50ರಷ್ಟು ಜಾತಿಗಳಿಗೆ ತನ್ನದೇ ಆದ ಮಾತೃ ಭಾಷೆ ಇದೆ. ಅಲೆಮಾರಿಗಳು, ಆದಿವಾಸಿಗಳು ಹಾಗೂ ಇತರ ಅನೇಕ ಜಾತಿಗಳಿಗೆ ಪ್ರತ್ಯೇಕವಾದ ಮಾತೃ ಭಾಷೆಗಳಿವೆ.

ಕರ್ನಾಟಕದಲ್ಲಿ ಒಂದು ರೀತಿಯ ಕನ್ನಡ ಅಸ್ತಿತ್ವದಲ್ಲಿ ಇಲ್ಲ. ಜನರ ಅವಶ್ಯಕತೆ ಮತ್ತು ಅನಿವಾರ್ಯತೆಯ ಆಧಾರದ ಮೇಲೆ ತೆಲುಗು ಪ್ರಭಾವಿತ ಕನ್ನಡ, ತಮಿಳು ಪ್ರಭಾವಿತ ಕನ್ನಡ, ಮರಾಠಿ ಪ್ರಭಾವಿತ ಕನ್ನಡ, ಉತ್ತರ ಕನ್ನಡದ ಕನ್ನಡ, ಕರಾವಳಿ ಕನ್ನಡ ಬಳಕೆಯಲ್ಲಿದೆ. ಹಾಗಿದ್ದರೆ ಇಲ್ಲಿ ಎಲ್ಲರ ಮಾತೃ ಭಾಷೆ ಯಾವುದು ಎನ್ನುವುದು ಸಹ ಒಂದು ಪ್ರಶ್ನೆಯಾಗುತ್ತದೆ.

ಮಾತೃ ಭಾಷೆಯ ಮಾಧ್ಯಮದ ಶಿಕ್ಷಣದ ಚರ್ಚೆಗಿಂತ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಂತೆ ಒತ್ತಾಯಿಸಬೇಕು. ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಜಾಗತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಜೀವನಾಧಾರಗಳನ್ನು ಪಡೆದುಕೊಳ್ಳುವಂತಾಗಬೇಕು. ಸ್ವಂತ ಯೋಚಿಸುವಂತಹ ಕ್ರಿಯಾಶೀಲವಾದ ಕಲಿಕೆಗಳಿಗೆ ಆದ್ಯತೆ ನೀಡಬೇಕು. ತಳ ಸಮುದಾಯಗಳು ಜಾಗೃತಗೊಂಡು ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸಲು ಸಾಮೂಹಿಕವಾಗಿ ಪ್ರಯತ್ನಿಸಬೇಕು. ಕೇವಲ ಬೌದ್ಧಿಕ ಪಂಡಿತರ ಭಾವನಾತ್ಮಕ ಪ್ರಚೋದನೆಗಳಿಗೆ ಒಳಗಾಗಿ ತಮ್ಮ ಮಕ್ಕಳ ಭವಿಷ್ಯವನ್ನು ವಂಚಿಸಬಾರದು. ಶತಮಾನಗಳಿಂದ ಅವಕಾಶವಂಚಿತವಾಗಿರುವ ಸಮುದಾಯಗಳಿಗೆ ಬಿಡುಗಡೆಗೆ ಇರುವ ಒಂದೇ ಒಂದು ಮಾರ್ಗ ಅದು ಶಿಕ್ಷಣ.

share
ಡಾ.ಚಂದ್ರಶೇಖರ್ ಆರ್.ವಿ.
ಡಾ.ಚಂದ್ರಶೇಖರ್ ಆರ್.ವಿ.
Next Story
X