Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನಕ್ಸಲ್ ಚಳವಳಿ ಹುಟ್ಟಿಗೆ ಕಾರಣವಾದ...

ನಕ್ಸಲ್ ಚಳವಳಿ ಹುಟ್ಟಿಗೆ ಕಾರಣವಾದ ಸಮಸ್ಯೆಗಳು ಇನ್ನೂ ಜೀವಂತ!

ವಿಕ್ರಂ ಗೌಡ ಹುಟ್ಟಿದ ಕೂಡ್ಲು, ಜೀವತೆತ್ತ ಪೀತ್‌ಬೈಲಿನಲ್ಲಿ ಅಭಿವೃದ್ಧಿ ಶೂನ್ಯ

ನಝೀರ್ ಪೊಲ್ಯನಝೀರ್ ಪೊಲ್ಯ25 Nov 2024 11:46 AM IST
share
Photo of  Peethbail

ಉಡುಪಿ: ಪಶ್ಚಿಮ ಘಟ್ಟದಲ್ಲಿ ಗುಂಡಿನ ಸದ್ದು ಮತ್ತೆ ಮತ್ತೆ ಮೊಳಗುತ್ತಲೇ ಇದೆ. ಇದರಿಂದ ನೆತ್ತರು ಹರಿದು ಬಹಳಷ್ಟು ಜೀವಗಳೂ ಪ್ರಾಣ ತೆತ್ತಿವೆ. ಆದರೆ ಇಲ್ಲಿನ ಅರಣ್ಯವಾಸಿಗಳ ಸಮಸ್ಯೆಗಳಿಗೆ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ. ವ್ಯವಸ್ಥೆ ವಿರುದ್ಧ ಹುಟ್ಟಿಕೊಂಡ ನಕ್ಸಲ್ ಚಳವಳಿಯನ್ನು ಇಲ್ಲವಾಗಿಸುವ ಪ್ರಯತ್ನ ಮಧ್ಯೆ ಅಭಿವೃದ್ಧಿ ಮರೀಚಿಕೆಯಾಗಿದೆ.

ನಕ್ಸಲ್ ನಿಗ್ರಹ ಪಡೆಯು ಇತ್ತೀಚೆಗೆ ನಡೆಸಿದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ನಕ್ಸಲ್ ನಾಯಕ ವಿಕ್ರಂ ಗೌಡ ಹುಟ್ಟಿ ಬೆಳೆದು ಕೊನೆಗೆ ಪ್ರಾಣಬಿಟ್ಟ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮ ಈಗಲೂ ಸಮಸ್ಯೆಗಳ ಆಗರಗಳಾಗಿವೆ. ವಿಕ್ರಂ ಗೌಡ ಕಾಡಿಗೆ ತೆರಳಲು ಕಾರಣವಾದ ಕಾಡಿನ ಜನರ ಸಮಸ್ಯೆಗಳು 20 ವರ್ಷಗಳ ನಂತರವೂ ಜೀವಂತವಾಗಿಯೇ ಉಳಿದಿವೆ.

ದಟ್ಟ ಅರಣ್ಯದ ಬೆಟ್ಟ ಗುಡ್ಡಗಳ ಮಧ್ಯೆ ಹೊರಜಗತ್ತಿಗೆ ತೆರೆದುಕೊಳ್ಳದೆ ಕಾಡನ್ನೇ ನಂಬಿ ಬದುಕುತ್ತಿರುವ ಬೆರಳೆಣಿಕೆಯ ಆದಿವಾಸಿ ಕುಟುಂಬಗಳು ಇಲ್ಲಿವೆ. ನಾಡ್ಪಾಲು ಗ್ರಾಮದ ಕೂಡ್ಲು, ಮೇಗದ್ದೆ, ಅಲ್ಲೊಳ್ಳಿ, ತೆಂಗುಮಾರ್, ತಿಂಗಳಮಕ್ಕಿ, ಪೀತ್‌ಬೈಲಿನಲ್ಲಿ ಮನೆ ಕಟ್ಟಿಕೊಂಡಿರುವ ಇವರೆಲ್ಲರೂ ಮೂಲಭೂತ ಸೌಲಭ್ಯಗಳಾದ ರಸ್ತೆ, ಸೇತುವೆ, ವಿದ್ಯುತ್, ಆಸ್ಪತ್ರೆ, ಶಾಲೆಗಳಿಂದ ವಂಚಿತರು.

ಇಂದೋ ನಾಳೆಯೋ ಕುಸಿಯುವ ಸ್ಥಿತಿಯಲ್ಲಿರುವ ಮಣ್ಣಿನ ಗೋಡೆಯ ಮನೆಗಳು, ದಾಖಲೆಗಳಲ್ಲಿ ತಮ್ಮದಲ್ಲದ ಜಮೀನು, ತೋಟ, ಗದ್ದೆಗಳನ್ನು ಹೊಂದಿರುವ ಇವರ ಅತಂತ್ರ ಬದುಕಿಗೆ ಇನ್ನೂ ಸರಿಯಾದ ದಾರಿ ಸಿಕ್ಕಿಲ್ಲ. ‘ಸುಮಾರು 90 ಮಲೆ ಕುಡಿಯರ ಕುಟುಂಬಗಳು ಇಲ್ಲಿ ವಾಸವಾಗಿವೆ. ಇವರಲ್ಲಿ ಹೆಚ್ಚಿನವರಿಗೆ ಹಕ್ಕುಪತ್ರ ಸಹಿತ ಯಾವುದೇ ದಾಖಲೆಗಳೇ ಇಲ್ಲ. ಹಾಗಾಗಿ ಇಲ್ಲಿನ ಬಹಳಷ್ಟು ಮಂದಿ ಸರಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ’ ಎನ್ನುತ್ತಾರೆ ಕಬ್ಬಿನಾಲೆಯ ರಾಜು ಗೌಡ.

ನಕ್ಸಲ್ ವಿಕ್ರಂ ಗೌಡ ಹುಟ್ಟಿದ್ದು ನಾಡ್ಪಾಲು ಗ್ರಾಮದ ಕೂಡ್ಲುವಿನಲ್ಲಿ ಮತ್ತು ಗುಂಡಿಗೆ ಎದೆಯೊಡ್ಡಿ ಪ್ರಾಣ ಕಳೆದುಕೊಂಡಿರುವುದು ಅದೇ ಗ್ರಾಮದ ಹುಟ್ಟೂರಿನಿಂದ ಸುಮಾರು ನಾಲ್ಕೈದು ಕಿ.ಮೀ. ದೂರದ ಪೀತ್‌ಬೈಲಿನಲ್ಲಿ. ಕೂಡ್ಲುವಿನಲ್ಲಿ ಸುಪ್ರಸಿದ್ಧ ಜಲಪಾತವಿದ್ದು, ಇಲ್ಲಿಗೆ ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ ಕಚ್ಚಾ ರಸ್ತೆಯನ್ನು ನಿರ್ಮಿಸಲಾಗಿದೆ.

ಆದರೆ, ಅಲ್ಲೇ ಸಮೀಪದಲ್ಲಿ ಜನವಾಸ ಇರುವ ಅಲ್ಲೊಳ್ಳಿ, ಮೇಗದ್ದೆಗಳಿಗೆ ರಸ್ತೆಯೇ ಇಲ್ಲ. ತೆಂಗುಮಾರ್, ತಿಂಗಳಮಕ್ಕಿ, ಪೀತಬೈಲ್‌ನಲ್ಲಿ ನಡೆದುಕೊಂಡು ಹೋಗುವುದಕ್ಕೂ ಅಸಾಧ್ಯವಾಗಿರುವ ರಸ್ತೆಯ ರಚನೆ ಇದೆ. ತೀರಾ ಬಡವರಾಗಿರುವ ಇಲ್ಲಿನ ನಿವಾಸಿಗಳ ಪೈಕಿ ಬಹುತೇಕ ಮಂದಿಯಲ್ಲಿ ದ್ವಿಚಕ್ರ ವಾಹನ ಅಲ್ಲ, ಸೈಕಲ್ ಕೂಡ ಇಲ್ಲ. ಹಾಗಾಗಿ ಇವರು ಪೇಟೆಗೆ ಬರಬೇಕಾದರೆ 7-8 ಕಿ.ಮೀ. ನಡೆಯಬೇಕು. ಇಲ್ಲವೇ ಬೇರೆಯವರ ದ್ವಿಚಕ್ರ ವಾಹನಗಳನ್ನು ನಂಬಿಕೊಂಡು ಇರಬೇಕಾದ ಪರಿಸ್ಥಿತಿ ಇದೆ.

ಇಲ್ಲಿ ಶಾಲೆ, ಆಸ್ಪತ್ರೆ, ಅಂಗಡಿಗಳೇ ಇಲ್ಲ. ಇದಕ್ಕಾಗಿ ಇವರೆಲ್ಲ ಹತ್ತಾರು ಕಿ.ಮೀ. ದೂರ ಸಾಗಬೇಕು. ಕೆಲವರ ಬಳಿ ಮೊಬೈಲ್ ಫೋನ್‌ಗಳಿದ್ದರೂ ನೆಟ್‌ವರ್ಕ್ ಸಮಸ್ಯೆಯಿಂದ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಆಗಿದೆ. ಹೊರಗಿನ ಸಂಪರ್ಕ ಸಾಧಿಸಬೇಕಾದರೂ ಮೂರು ನಾಲ್ಕು ಕಿ.ಮೀ. ದೂರ ಸಾಗಬೇಕು. ಆಗುಂಬೆಯಲ್ಲಿ ಬಿಎಸ್ಸೆನ್ನೆಲ್ ಟವರ್ ಇದ್ದರೂ ಸಿಗ್ನಲ್ ಸಿಗದೆ ಇಲ್ಲಿನ ಜನ ಪರದಾಡುವಂತಾಗಿದೆ.

ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಯಾವಾಗ ಎಂಬುದು ಅರಣ್ಯವಾಸಿಗಳ ಪ್ರಶ್ನೆಯಾಗಿದೆ.

ನಾಡ್ಪಾಲು ಗ್ರಾಮದಲ್ಲಿ ನಕ್ಸಲರ ಹೆಜ್ಜೆ!

ಪಶ್ಚಿಮ ಘಟ್ಟದ ದಟ್ಟ ಕಾನನದಲ್ಲಿ ನೆತ್ತರಿನ ಕಲೆಗಳು ಕಾಣಿಸಿಕೊಳ್ಳಲಾರಂಭಿಸಿ ಈಗಾಗಲೇ 22 ವರ್ಷಗಳು ಸಂದಿವೆ. ಇದರಲ್ಲಿ ನಾಡ್ಪಾಲು ಗ್ರಾಮದಲ್ಲೇ 16 ವರ್ಷಗಳಿಂದ ಕೆಲವೊಂದು ಘಟನೆಗಳು ಘಟಿಸಿವೆ.

2008ರ ಮೇ 15ರಂದು ಹೆಬ್ರಿ ನಾಡ್ಪಾಲು ಗ್ರಾಮದ ಸೀತಾನದಿ ಬಳಿ ನಕ್ಸಲರ ಗುಂಡಿಗೆ ಶಿಕ್ಷಕ ಭೋಜ ಶೆಟ್ಟಿ ಹಾಗೂ ಆತನ ಗೆಳೆಯ ಕೃಷಿಕ ಸುರೇಶ್ ಶೆಟ್ಟಿ ಬಲಿಯಾಗಿದ್ದರು. 2008ರ ಜು.7ರಂದು ನಾಡ್ಪಾಲು ಗ್ರಾಮದ ತಿಂಗಳ ಮಕ್ಕಿಯಲ್ಲಿ ನಕ್ಸಲರ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು.

2011ರ ಡಿ.28ರಂದು ನಾಡ್ಪಾಲು ಗ್ರಾಮದ ತೆಂಗಿನಮಾರಿನಲ್ಲಿ ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕಾಗಿ ಸದಾಶಿವ ಗೌಡರನ್ನು ನಕ್ಸಲರು ಹತ್ಯೆ ಮಾಡಿದ್ದರು. ಇದೀಗ 2024ರ ನ.18ರಂದು ವಿಕ್ರಂ ಗೌಡ ಎನ್‌ಕೌಂಟರ್ ಕೂಡ ನಾಡ್ಪಾಲು ಗ್ರಾಮದ ಪೀತ್‌ಬೈಲಿನಲ್ಲೇ ನಡೆದಿದೆ.

ನಾಡ್ಪಾಲು ಗ್ರಾಮದ ನಕ್ಸಲ್ ಬಾಧಿತ ಪ್ರದೇಶಗಳಲ್ಲಿನ ಮೂರು ಕಡೆಗಳಲ್ಲಿ ಸೇತುವೆ ಅಗತ್ಯವಾಗಿ ಆಗಬೇಕಾಗಿದೆ. ಈಗಾಗಲೇ ಅಲ್ಲಿ ಕಿರು ಸೇತುವೆ ಇದೆ. ಆದರೆ ವಾಹನಗಳು ಸಾಗಲು ಆಗುವುದಿಲ್ಲ. ಅದೇ ರೀತಿ ಕೆಲವು ಕಡೆಗಳಲ್ಲಿ ರಸ್ತೆ ಕೂಡ ನಿರ್ಮಾಣ ಆಗಬೇಕಾಗಿದೆ.

-ದಿನೇಶ್ ಹೆಗ್ಡೆ, ಮಾಜಿ ಅಧ್ಯಕ್ಷರು, ನಾಡ್ಪಾಲು ಗ್ರಾಪಂ


ನಮಗೆ ಇಲ್ಲಿಗೆ ಮುಖ್ಯವಾಗಿ ಬೇಕಾಗಿರುವುದು ರಸ್ತೆ. ಸದ್ಯ ಈಗ ಇರುವ ರಸ್ತೆಯಲ್ಲಿ ಬೊಲೇರೋ ಅಥವಾ ಪಿಕ್‌ಅಪ್ ವಾಹನ ಬಿಟ್ಟರೆ ಬೇರೆ ಯಾವುದೇ ವಾಹನ ಓಡಿಸಲು ಕಷ್ಟ. ಇದನ್ನು ಬಾಡಿಗೆ ಮಾಡಿಕೊಂಡು ಹೋಗುವಷ್ಟು ಇಲ್ಲಿನ ಜನ ಸ್ಥಿತಿವಂತರಲ್ಲ. ಮಕ್ಕಳನ್ನು 3-4 ಕಿ.ಮೀ. ದೂರದ ಶಾಲೆಗೆ ಬಿಡಲು ಬೈಕ್‌ನಲ್ಲಿ ಸರ್ಕಸ್ ಮಾಡಿಕೊಂಡು ಹೋಗಬೇಕು. ಮಳೆಗಾಲದಲ್ಲಿ ಅಂತೂ ನಮ್ಮ ಪರಿಸ್ಥಿತಿ ಹೇಳಲು ಆಗುವುದಿಲ್ಲ.

-ಸದಾಶಿವ ಗೌಡ, ಕುಚ್ಚೂರು, ಕಬ್ಬಿನಾಲೆ

ಹೆಬ್ರಿ ತಾಲೂಕಿನ ಪಶ್ಚಿಮಘಟ್ಟದಲ್ಲಿ ವಾಸವಾಗಿರುವವರಿಗೆ ಸರಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಇಲ್ಲಿನ ಕೆಲವು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ತಾಂತ್ರಿಕ ಸಮಸ್ಯೆಗಳಿವೆ. ಇವರು ಕಾಡಿನಿಂದ ಹೊರಗಡೆ ಬಂದು ಬದುಕು ನಡೆಸುವುದಾದರೆ ಪುನರ್ವಸತಿ ಕಲ್ಪಿಸಲು ನಾವು ಸಿದ್ಧರಿದ್ದೇವೆ. ಆದರೆ, ಅವರು ಅದಕ್ಕೆಲ್ಲ ಒಪ್ಪುವುದಿಲ್ಲ. ಇವರ ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಅನುದಾನ ನೀಡುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.

-ಡಾ.ಕೆ.ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ, ಉಡುಪಿ


ಮೇಲ್ಛಾವಣಿ ಇಲ್ಲದ ಕಬ್ಬಿನಾಲೆ ಬಸ್ ತಂಗುದಾಣ!


ಪೀತ್‌ಬೈಲಿಗೆ ಹೋಗಬೇಕಾದರೆ ಕಬ್ಬಿನಾಲೆ ಮಾರ್ಗವಾಗಿಯೇ ಸಾಗಬೇಕು. ಆದರೆ ಕಬ್ಬಿನಾಲೆ ಗ್ರಾಮದ ಪ್ರಮುಖ ರಸ್ತೆಯಲ್ಲಿರುವ ಬಸ್ ತಂಗುದಾಣಕ್ಕೆ ಮೇಲ್ಛಾವಣಿಯೆ ಇಲ್ಲ.

2023ರಲ್ಲಿ ಭಾರೀ ಮಳೆಯಿಂದ ಗುಡ್ಡ ಕುಸಿದ ಪರಿಣಾಮ ಬಸ್ ತಂಗುದಾಣದ ಮೇಲ್ಛಾವಣಿ ಕಿತ್ತು ಹೋಗಿತ್ತು. ಇದೀಗ ಬಸ್ ತಂಗುದಾಣಕ್ಕೆ ಮೇಲ್ಛಾವಣಿ ಇಲ್ಲದೆ ವರ್ಷಗಳೇ ಕಳೆದರೂ ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಕಬ್ಬಿನಾಲೆ ಗ್ರಾಮದ ನೀರಣಿ ಪ್ರದೇಶದಲ್ಲಿ ಹೊಸ ಬಸ್ ತಂಗುದಾಣ ನಿರ್ಮಿಸಬೇಕೆಂಬುದು ಸ್ಥಳೀಯರ ಆಗ್ರಹ. ಈಗಿರುವ ಮೇಲ್ಛಾವಣಿ ಇಲ್ಲದ ಬಸ್ ತಂಗುದಾಣ ಸಮೀಪದಲ್ಲಿ ಗುಡ್ಡ ಇರುವುದರಿಂದ ಮತ್ತೆ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಆದುದರಿಂದ ಉತ್ತಮ ಸ್ಥಳ ಗುರುತಿಸಿ ಹೊಸ ಬಸ್ ತಂಗುದಾಣ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

‘ಈ ಪರಿಸರದ ಸುತ್ತಮುತ್ತಲಿನ ಗ್ರಾಮಗಳ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಶಿಕ್ಷಣಕ್ಕಾಗಿ ಹೆಬ್ರಿ, ಕಾರ್ಕಳ, ಮುದ್ರಾಡಿ ಭಾಗಗಳಿಗೆ ಹೋಗುತ್ತಾರೆ. ಅದರಲ್ಲಿ ಹೆಚ್ಚಿನವರು ಇದೇ ಬಸ್ ತಂಗುದಾಣದಲ್ಲಿ ಬಸ್‌ಗಾಗಿ ಕಾಯುತ್ತಾರೆ. ಮಳೆಗಾಲದಲ್ಲಿ ಮಳೆ ಬಂದರೆ ನೆನೆಯುತ್ತ ನಿಲ್ಲಬೇಕಾದ ಪರಿಸ್ಥಿತಿ ಇವರದ್ದಾಗಿದ್ದು, ಇಲ್ಲಿ ಸರಿಯಾದ ಮೂಲ ಸೌಕರ್ಯವೇ ಇಲ್ಲ’ ಎನ್ನುತ್ತಾರೆ ಸ್ಥಳೀಯರಾದ ಸುದೇಶ್.



ದಟ್ಟ ಅರಣ್ಯದೊಳಗೆ ವಿಕಲಚೇತನನ ಏಕಾಂಗಿ ವಾಸ!


ನಕ್ಸಲ್ ವಿಕ್ರಂ ಗೌಡರ ಎನ್‌ಕೌಂಟರ್‌ನಿಂದ ಇದೀಗ ಸುದ್ದಿಯಲ್ಲಿರುವ ಪೀತ್‌ಬೈಲ್ ದುರ್ಗಮ ಕಾಡಿನ ಮಧ್ಯೆ ಏರು ಇಳಿಜಾರಿನ ರಸ್ತೆಯಿಂದ ಕೂಡಿರುವ ಪ್ರದೇಶವಾಗಿದೆ. ಇದು ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಇಲ್ಲಿ ಬಹುತೇಕ ಮಲೆಕುಡಿಯ ಸಮುದಾಯದವರೇ ವಾಸವಿದ್ದಾರೆ.

ಎನ್‌ಕೌಂಟರ್ ನಡೆದ ಮನೆಯ ಯಜಮಾನ ಜಯಂತ್ ಗೌಡರ ತಮ್ಮ ಲಕ್ಷ್ಮಣ ಗೌಡ ಜನವಸತಿ ಇರುವ ಕಬ್ಬಿನಾಲೆಯಿಂದ ಸುಮಾರು ನಾಲ್ಕೈದು ಕಿ.ಮೀ. ದೂರ ಕಾಡಿನೊಳಗೆ ಏಕಾಂಗಿಯಾಗಿ ವಾಸ ಮಾಡಿಕೊಂಡಿದ್ದಾರೆ. ಅದರಲ್ಲೂ ಇವರು ಬಾಲ್ಯದಲ್ಲೇ ಪೋಲಿಯೊಗೆ ತುತ್ತಾಗಿ ಎರಡು ಕಾಲಿನ ಬಲವನ್ನು ಕಳೆದುಕೊಂಡಿದ್ದಾರೆ. ಕೈಗಳೇ ಇವರಿಗೆ ಆಧಾರ. ಈ ಮೂಲಭೂತ ಸೌಲಭ್ಯ ವಂಚಿತ ಅರಣ್ಯದೊಳಗೆ ಇವರ ಬದುಕು ದಿಗ್ಭ್ರಮೆ ಮೂಡಿಸುತ್ತದೆ. ಅವಿವಾಹಿತರಾಗಿರುವ ಇವರು ಎಲ್ಲದಕ್ಕೂ ಬೇರೆಯವರನ್ನೇ ಅವಲಂಬಿಸಬೇಕಾಗಿದೆ.

‘ನಾನು ಹುಟ್ಟಿದ್ದು ತಾಯಿಮನೆ ಕೂಡ್ಲುವಿನಲ್ಲಿ. ಬೆಳೆದದ್ದು ಪೀತ್‌ಬೈಲಿನಲ್ಲಿರುವ ತಂದೆಯ ಮನೆಯಲ್ಲಿ. ಇದೀಗ ಪಂಚಾಯತ್‌ನವರು ತಿಂಗಳಮಕ್ಕಿಯಲ್ಲಿ ನಿರ್ಮಿಸಿ ಕೊಟ್ಟ ಮನೆಯಲ್ಲಿ ಒಬ್ಬನೇ ವಾಸ ಮಾಡಿಕೊಂಡಿದ್ದೇನೆ. ಅಂಗಡಿಗೆ ಹೋಗಬೇಕಾದರೆ ನಾಲ್ಕೈದು ಕಿ.ಮೀ. ದೂರ ಹೋಗಬೇಕು. ತಿಂಗಳಿಗೊಮ್ಮೆ ಮಾತ್ರ ಹೋಗುತ್ತಿದ್ದೇವೆ. ಅಲ್ಲಿಗೆ ಹೋಗಬೇಕಾದರೂ ಸಂಬಂಧಿಕರ ಬೈಕಿಗೆ ಕಾಯಬೇಕು’ ಎಂದು ಲಕ್ಷ್ಮಣ ಗೌಡ ತಿಳಿಸಿದರು.

‘ನನಗೆ ಬೇರೆ ಯಾವುದೇ ಆದಾಯ ಇಲ್ಲ. ಸರಕಾರದಿಂದ ಸಿಗುವ 1,400 ರೂ. ವಿಕಲಚೇತನ ಮಾಸಿಕ ಹಣವನ್ನೇ ನಂಬಿಕೊಂಡಿದ್ದೇನೆ. ಅದರಲ್ಲಿ ಜೀವನ ನಡೆಸುವುದು ಬಹಳ ಕಷ್ಟ. ವಿದ್ಯುತ್‌ಗಾಗಿ ಸೋಲಾರ್ ವ್ಯವಸ್ಥೆ ಇದೆ. ಮೊಬೈಲ್ ನೆಟ್‌ವರ್ಕ್ ಸಿಗುವುದೇ ಕಷ್ಟ. ಮೋಡ ಇದ್ದರೆ ಸಂಪರ್ಕವೇ ಸಿಗಲ್ಲ. ಇಲ್ಲಿ ಜನರ ಓಡಾಟವೇ ಇಲ್ಲ. ಆದುದರಿಂದ ಇಲ್ಲಿ ಉತ್ತಮ ರಸ್ತೆ ನಿರ್ಮಿಸಿದರೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

share
ನಝೀರ್ ಪೊಲ್ಯ
ನಝೀರ್ ಪೊಲ್ಯ
Next Story
X