Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರಾಜ್ಯ ನಾಯಕತ್ವದ ಪ್ರಶ್ನೆ: ಬಗೆಹರಿಸಲಾಗದ...

ರಾಜ್ಯ ನಾಯಕತ್ವದ ಪ್ರಶ್ನೆ: ಬಗೆಹರಿಸಲಾಗದ ಸಮಸ್ಯೆಯೇ?

ಹರೀಶ್ ಕುಮಾರ್ ಕುಡ್ತಡ್ಕಹರೀಶ್ ಕುಮಾರ್ ಕುಡ್ತಡ್ಕ12 Jan 2026 11:30 AM IST
share
ರಾಜ್ಯ ನಾಯಕತ್ವದ ಪ್ರಶ್ನೆ: ಬಗೆಹರಿಸಲಾಗದ ಸಮಸ್ಯೆಯೇ?

ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ತಣ್ಣಗಾಗುತ್ತಿದೆ ಎಂದು ಕೊಳ್ಳುವಾಗಲೇ ಮತ್ತೆ ಗರಿಗೆದರಿ ಕೊಂಡಿದೆ. ಕೆಲ ಸಮಯದ ಹಿಂದೆ ನಿರಂತರ ಸುದ್ದಿಯಲ್ಲಿದ್ದ ಈ ವಿಚಾರ ಇದ್ದಕ್ಕಿದ್ದಂತೆ ತೆರೆಮರೆಗೆ ಸರಿದದ್ದು ಕೊಂಚ ಅಚ್ಚರಿ ಹುಟ್ಟಿಸಿತ್ತು. ಸಿದ್ದರಾಮಯ್ಯನವರು ದೇವರಾಜ ಅರಸು ಅವರ ಅಧಿಕಾರಾವಧಿ ದಾಖಲೆಯನ್ನು ಮುರಿದ ದಿನದಂದೇ ‘ಹೈಕಮಾಂಡ್ ಆಶೀರ್ವಾದವಿದ್ದರೆ ನಾನು ಪೂರ್ಣವಾಧಿ ಮುಖ್ಯಮಂತ್ರಿಯಾಗಿ ಇರುತ್ತೇನೆ.’ ಎಂದಿದ್ದಾರೆ. ಇದಕ್ಕೆ ಅವರ ಬೆಂಬಲಿಗರು ಧ್ವನಿಗೂಡಿಸಿದ್ದಾರೆ. ಆದರೆ ಇದು ಇಲ್ಲಿಗೆ ಮುಗಿಯಿತು ಎನ್ನುವಂತಿಲ್ಲ. ಬಹುಶಃ ಇದೊಂದು ಮುಖ್ಯಮಂತ್ರಿ ಬದಲಾವಣೆ ವಿಷಯದ ಇನ್ನೊಂದು ಮಜಲು ಎನ್ನಬಹುದು. ಆದರೆ ಹೈಕಮಾಂಡ್ ಮೇಲ್ನೋಟಕ್ಕೆ ಯಾವುದೇ ಸ್ಟಷ್ಟ ನಿರ್ಧಾರಕ್ಕೆ ಬಂದಂತಿಲ್ಲ ಎಂದು ಕಾಣುತ್ತಿದೆ.

ಒಂದು ಹಂತದಲ್ಲಿ ರಾಜ್ಯದ ಎಲ್ಲ ಸಮಸ್ಯೆಗಳಿಗಿಂತ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ದೊಡ್ಡ ಸಮಸ್ಯೆಯೆಂಬಂತೆ ಬಿಂಬಿತವಾಗಿದ್ದು ಹಳೆಯ ವಿದ್ಯಮಾನ. ದಿನಕ್ಕೊಂದು ಹೇಳಿಕೆ, ಅಭಿಪ್ರಾಯ ಎಂಬಂತೆ ಸಾಗಿದ ಈ ಚರ್ಚೆ ಜನತೆಯಲ್ಲಿ ರೇಜಿಗೆ ಹುಟ್ಟಿಸಿದ್ದಂತೂ ನಿಜ. ಎಲ್ಲದಕ್ಕೂ ಪೂರ್ಣ ವಿರಾಮ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಒಂದು ಹಂತದಲ್ಲಿ ನಾಯಕತ್ವ ಬದಲಾವಣೆ ಕುರಿತು ರಾಹುಲ್‌ಗಾಂಧಿಯವರು ತೀರ್ಮಾನಿಸಲಿ ಹಾಗೂ ಅವರ ತೀರ್ಮಾನಕ್ಕೆ ತಾವು ಬದ್ಧ ಎಂಬ ಪರಿಹಾರ ಸೂತ್ರವನ್ನು ಬಹಿರಂಗ ಹೇಳಿಕೆ ನೀಡುವ ಮೂಲಕ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಳ್ಳಬಹುದು. ಮುಖ್ಯಮಂತ್ರಿಯವರ ಈ ಹೇಳಿಕೆಯ ಹಿಂದಿನ ದಿನ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಈ ಬಿಕ್ಕಟ್ಟಿನಲ್ಲಿ ಹೈಕಮಾಂಡ್‌ಕೈ ಹಾಕುವುದಿಲ್ಲವೆಂದೂ ಅದನ್ನು ಸ್ಥಳೀಯ ನಾಯಕರೇ ಬಗೆಹರಿಸಿ ಕೊಳ್ಳ ಬೇಕೆಂಬ ಸಲಹೆಯನ್ನು ನೀಡಿ ಕೈ ತೊಳೆದು ಕೊಳ್ಳಲು ಪ್ರಯತ್ನಿಸಿದ್ದರು. ವಾಸ್ತವದಲ್ಲಿ ಇದು ಕಾರ್ಯಸಾಧುವಲ್ಲದ ಸಲಹೆಯಾಗಿತ್ತು. ರಾಜ್ಯ ಮಟ್ಟದಲ್ಲಿ ಪರಿಹಾರ ಕಾಣುವ ಸಮಸ್ಯೆಯಾಗಿದ್ದರೆ ಇಷ್ಟು ಸಮಯ ಅದು ಎಳೆದಾಡುತ್ತಿತ್ತೇ?

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತ ಪಡೆದು ಅಧಿಕಾರಕ್ಕೇರಿದ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಪಕ್ಷಾಧ್ಯಕ್ಷ ಡಿ.ಕೆ . ಶಿವಕುಮಾರ್ ನಡುವಿನ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಅದೇ ಕಾರಣದಿಂದ ಸರಕಾರ ರಚನೆಯಲ್ಲಿ ಉಂಟಾಗಿದ್ದ ಕೊಂಚ ವಿಳಂಬವನ್ನು ರಾಜ್ಯದ ಜನತೆ ಮರೆತಿರಲಿಕ್ಕಿಲ್ಲ. ಕೊನೆಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮತ್ತು ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಕೊಂಡರು. ಆ ಬಳಿಕ ಸರಕಾರ ಟೇಕಾಫ್ ಆಗಿ ಯಾವುದೇ ಸಮಸ್ಯೆ, ಗೊಂದಲಗಳಿಲ್ಲದೆ ಸಾಗಿದ್ದು ಎಲ್ಲರಿಗೂ ಗೊತ್ತೇ ಇರುವಂತಹದ್ದು. ಅಧಿಕಾರಾವಧಿ ಎರಡೂವರೆ ವರ್ಷಕ್ಕೆ ಹತ್ತಿರವಾಗುತ್ತಿದ್ದಂತೆ ಈ ಹಿಂದೆ ಪ್ರಾರಂಭದಲ್ಲಿ ಕಾಡಿದ್ದ ಬಾಲಗ್ರಹ ಪೀಡೆ ಮತ್ತೆ ಮರುಕಳಿಸಿತು. ಹೈಕಮಾಂಡ್‌ಮತ್ತು ಈ ನಾಯಕರಿಬ್ಬರ ನಡುವೆ ನಡೆದಿದೆ ಎನ್ನಲಾದ ಒಪ್ಪಂದ; ನಾಯಕರಿಬ್ಬರ ಬೆಂಬಲಿಗರ ತರಹೇವಾರಿ ಹೇಳಿಕೆಗಳು; ಬೆಂಬಲಿಗ ಸಚಿವರ ಔತಣಕೂಟಗಳು ಇತ್ಯಾದಿ ಸುದ್ದಿ ಮಾಡ ತೊಡಗಿದವು. ಈ ಅಹಿತಕಾರಿ ಬೆಳವಣಿಗೆಗಳಿಗೆಲ್ಲ ಪೂರ್ಣ ವಿರಾಮ ಬಿತ್ತು ಎಂಬಂತೆ ಹೈಕಮಾಂಡ್ ಸೂಚನೆಯಂತೆ, ಮುಖ್ಯಮಂತ್ರಿಯವರ ಮನೆಯಲ್ಲಿ ಉಪಮುಖ್ಯಮಂತ್ರಿಯವರು ಉಪಹಾರ ಸೇವಿಸಿದರು. ಹಾಗೆಯೇ ಉಪಮುಖ್ಯಮಂತ್ರಿಯವರ ಮನೆಯಲ್ಲಿ ಮುಖ್ಯಮಂತ್ರಿಯವರು ಊಟ ಮಾಡಿದರು. ಸಮಸ್ಯೆ ಪರಿಹಾರಗೊಂಡಿತು ಎಂದು ರಾಜ್ಯದ ಜನತೆ ನಿಟ್ಟುಸಿರು ಬಿಡುತ್ತಿದ್ದಂತೆ ಬೆಳಗಾವಿ ವಿಧಾನ ಮಂಡಲಗಳ ಅಧಿವೇಶನದುದ್ದಕ್ಕೂ ಮುಖ್ಯಮಂತ್ರಿ ಬದಲಾವಣೆ ಕುರಿತಾದ ಪ್ರಶ್ನೆ ಮತ್ತೆ ರಾಡಿ ಎಬ್ಬಿಸಿತು.

ಈ ಎಲ್ಲ ಬೆಳವಣಿಗೆಗಳು ಪ್ರತಿಪಕ್ಷಗಳ ಟೀಕೆ, ಲೇವಡಿಗಳಿಗೆ ಆಹಾರ ಒದಗಿಸಿತು. ಪ್ರತಿಪಕ್ಷಗಳ ಧೋರಣೆ, ಟೀಕೆಗಳೆಲ್ಲ ಸಹಜವಾದದ್ದೇ. ಇದಕ್ಕಿಂತ ಮುಖ್ಯವಾಗಿ ರಾಜ್ಯದ ಜನತೆಯ ಬೇಸರ, ನಿರಾಸೆಗಳು ಇಲ್ಲಿ ಗಮನಾರ್ಹ. ಕಾಂಗ್ರೆಸ್ ಪಕ್ಷವನ್ನು ಚುನಾವಣೆಯಲ್ಲಿ ಮನಪೂರ್ವಕವಾಗಿ ಹರಸಿದ ಜನತೆ ಇಂತಹ ಅಹಿತಕರ ಬೆಳವಣಿಗೆಯನ್ನು ನಿರೀಕ್ಷಿಸಿರಲಿಲ್ಲ. ಇದನ್ನು ಆ ಪಕ್ಷದ ಜವಾಬ್ದಾರಿ ಹೊತ್ತವರು ಅರ್ಥ ಮಾಡಿಕೊಳ್ಳಬೇಕಾಗಿತ್ತು. ಅಧಿಕಾರದಲ್ಲಿರುವವರಿಗೆ ಇದೊಂದು ಹುದ್ದೆಗೆ ಸಂಬಂಧಿಸಿದ ಸವಾಲು ಅಥವಾ ಪ್ರತಿಷ್ಠೆಯ ಪ್ರಶ್ನೆಯಾಗಿರಬಹುದು, ಅದರೆ ಜನರಿಗೆ ಇವೆಲ್ಲ ಅಸಹನೆ, ನಿರಾಸೆ, ಜಿಗುಪ್ಸೆಗಳನ್ನು ಉಂಟು ಮಾಡುವ ವಿದ್ಯಮಾನವೆನ್ನುವುದರಲ್ಲಿ ಸಂದೇಹವಿಲ್ಲ.

ನಿಜ, ಭಿನ್ನಾಭಿಪ್ರಾಯವೆಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಸ್ವಾಭಾವಿಕ. ಇದನ್ನು ಉದಾರವಾದ ನೆಲೆಯಲ್ಲಿ ಪ್ರಜಾಪ್ರಭುತ್ವದ ಜೀವಾಳ ಎಂಬುದಾಗಿಯೂ ಗುರುತಿಸಲಾಗುತ್ತದೆ. ಆದರೆ ಇಲ್ಲಿ ಇಂತಹ ಭಿನ್ನಾಭಿಪ್ರಾಯಗಳಿಗೆ ಕಾರಣಗಳು ಮುಖ್ಯವಾಗುತ್ತವೆ. ನೀತಿ-ನಿರ್ಧಾರ, ತಾತ್ವಿಕ, ಸೈದ್ಧಾಂತಿಕ ಭಿನ್ನಮತಗಳನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಪ್ರತಿಷ್ಠೆ, ಅಧಿಕಾರ, ಸ್ಥಾನಮಾನಗಳ ಕುರಿತಾದ ಭಿನ್ನಮತಗಳಿಗೆ ಸಮರ್ಥನೆಗಳಿಲ್ಲ. ಇವೆಲ್ಲ ಕ್ರಮೇಣ ಗುಂಪುಗಾರಿಕೆ, ಒಳ ಜಗಳಗಳಿಗೆ ತಿರುಗುವ ಸಾಧ್ಯತೆಗಳಿರುವುದರಿಂದ ಇವುಗಳನ್ನು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವೆಂದೇ ಪರಿಗಣಿಸಲಾಗುತ್ತದೆ. ಪ್ರಸ್ತುತ ರಾಜ್ಯದ ನಾಯಕತ್ವದ ಕುರಿತಾದ ಪ್ರಶ್ನೆ ಕೂಡ ಇದೇ ಮಾದರಿಯಲ್ಲಿ ತಿರುವು ತೆಗೆದುಕೊಳ್ಳುವ ಲಕ್ಷಣಗಳಿವೆ ಎಂಬುದನ್ನು ಇಲ್ಲಿ ಗಮನಿಸಬಹುದು.

ಕರ್ನಾಟಕ ರಾಜಕಾರಣದಲ್ಲಿ ಭಿನ್ನಮತದ ವಿದ್ಯಮಾನ ಹೊಸತೇನಲ್ಲ. ಅನೇಕ ಬಾರಿ ಭಿನ್ನಮತದ ಪ್ರಕರಣಗಳು ಮುಖ್ಯಮಂತ್ರಿ ಹುದ್ದೆಗೇನೇ ಸಂಬಂಧಿಸಿದ್ದಾಗಿತ್ತು. ಇದು ಆಡಳಿತ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ದುಬಾರಿಯಾಗಿ ಪರಿಣಮಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆಡಳಿತ ಪಕ್ಷಗಳು ಎಷ್ಟೇ ಜನೋಪಯೋಗಿ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರೂ ಜನರು ಅದನ್ನು ಮರೆಯುತ್ತಾರೆ. ಅವರು ಆಡಳಿತ ಪಕ್ಷದೊಳಗಿನ ಒಳ ಜಗಳ, ಕಚ್ಚಾಟ, ತಿಕ್ಕಾಟಗಳನ್ನು ಖಂಡಿತವಾಗಿಯೂ ಇಷ್ಟ ಪಡಲಾರರು, ಅವುಗಳನ್ನು ಅವರು ನೆನಪಿಡುತ್ತಾರೆ ಕೂಡ. ಜನರ ಅತೃಪ್ತಿ, ಅಸಹನೆ ಹೆಚ್ಚಾಗುತ್ತ ಸಾಗುತ್ತಿದ್ದಂತೆ ಆಡಳಿತ ಪರ ಒಲವು ಇಳಿಮುಖವಾಗಿ ಆಡಳಿತ ವಿರೋಧಿ ಅಲೆ ರೂಪುಗೊಳ್ಳುತ್ತದೆ.

ಜನರು ಯಾಕೆ ಇಂತಹ ಅಧಿಕಾರದ ಮೇಲಾಟವನ್ನು ಸಹಿಸುವುದಿಲ್ಲ ಎಂಬುದಕ್ಕೆ ಸರಿಯಾದ ಕಾರಣಗಳೂ ಇವೆ. ನಾಯಕರಾದವರು ಸದಾ ಒಳ ಜಗಳ, ಕಚ್ಚಾಟ, ಗುಂಪುಗಾರಿಕೆ ಇತ್ಯಾದಿಗಳಲ್ಲಿ ತೊಡಗಿದರೆ ರಾಜ್ಯದ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆ. ಇದರಿಂದ ರಾಜ್ಯದ ಪ್ರಗತಿ, ಅಭಿವೃದ್ಧಿ ಕುಂಠಿತಗೊಳ್ಳುತ್ತವೆ. ಹೀಗೆ ಯಾಕೆಂದರೆ ಆಯಕಟ್ಟಿನ ಸ್ಥಾನದಲ್ಲಿರುವ ಅಧಿಕಾರಿಗಳಿಗೆ ಬಿಗು ಆಡಳಿತದಲ್ಲಿರುವ ಕಾಲಿಕ ನಿರ್ದೇಶನ, ಸೂಚನೆಗಳು ಲಭ್ಯವಾಗುವುದಿಲ್ಲ. ಮುಖ್ಯಮಂತ್ರಿ ಹಾಗೂ ಸಚಿವರು ಹುದ್ದೆಗಳ ಬೆನ್ನು ಹತ್ತಿ ಕರ್ತವ್ಯವನ್ನು ಕಡೆಗಣಿಸಿದರೆ ಅಧಿಕಾರಿಗಳೂ ಮೈ ಮರೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಆಡಳಿತ ಸಡಿಲ ಗೊಳ್ಳುವುದು ಅಥವಾ ಹಳಿ ತಪ್ಪುವುದು ಸಹಜ ತಾನೆ?

ಆದ್ದರಿಂದ ನಾಯಕತ್ವದ ಕುರಿತಾದ ಸಮಸ್ಯೆಯನ್ನು ರಾಜ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸುವುದು ಅಗತ್ಯ. ಇದನ್ನು ಆ ಪಕ್ಷದ ಮೇಲೆ ರಾಜ್ಯದ ಜನತೆ ಇರಿಸಿದ ವಿಶ್ವಾಸದ ದೃಷ್ಟಿಯಿಂದ ಆದ್ಯತೆಯ ವಿಚಾರವಾಗಿ ಪರಿಗಣಿಸ ಬೇಕು. ಇದರಿಂದ ಪಕ್ಷಕ್ಕೂ ಒಳ್ಳೆಯದು. ರಾಜ್ಯದ ಜನಪ್ರಿಯ ಹಾಗೂ ಪ್ರಭಾವಿ ನಾಯಕರಿಬ್ಬರ ನಡುವಿನ ನಾಯಕತ್ವದ ಪ್ರಶ್ನೆಯನ್ನು ಅವರಿಬ್ಬರೇ ಬಗೆಹರಿಸಿ ಕೊಳ್ಳುತ್ತಾರೆ ಅಥವಾ ಸ್ಥಳೀಯ ನಾಯಕರೆಲ್ಲ ಸೇರಿ ಇತ್ಯರ್ಥ ಪಡಿಸಬಲ್ಲರು ಎನ್ನುವ ನಿಲುವು ಪ್ರಾಯೋಗಿಕವಾಗಿ ಯಶಸ್ವಿಯಾಗಲಾರದು. ಇಲ್ಲಿ ಹೈಕಮಾಂಡ್ ಮಧ್ಯ ಪ್ರವೇಶ ಅನಿವಾರ್ಯ. ಈ ಸಮಸ್ಯೆ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿಯೇ ಪರಿಹಾರವಾಗುವುದು ಮುಖ್ಯ. ಒಟ್ಟಿನಲ್ಲಿ ರಾಜ್ಯದ ಜನತೆ ಸರಕಾರದ ಬಗ್ಗೆ ಭ್ರಮನಿರಸನಗೊಳ್ಳುವ ಮೊದಲು ನಾಯಕತ್ವದ ಪ್ರಶ್ನೆ ಶಾಶ್ವತವಾಗಿ ಇತ್ಯರ್ಥಗೊಳ್ಳುವುದು ರಾಜ್ಯದ ಹಿತದೃಷ್ಟಿಯಿಂದ ಅಪೇಕ್ಷಣೀಯ. ಇದಕ್ಕೆ ತಪ್ಪಿದರೆ ಪಕ್ಷ ಆಡಳಿತ ವಿರೋಧಿ ಅಲೆಯನ್ನು ಎದುರಿಸುವುದು ಅನಿವಾರ್ಯವಾದೀತು.

Tags

SiddaramaiahDK Sivakumar
share
ಹರೀಶ್ ಕುಮಾರ್ ಕುಡ್ತಡ್ಕ
ಹರೀಶ್ ಕುಮಾರ್ ಕುಡ್ತಡ್ಕ
Next Story
X