Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಆಡಳಿತ ಪಕ್ಷದ ದ್ವಿಮುಖ ನೀತಿ

ಆಡಳಿತ ಪಕ್ಷದ ದ್ವಿಮುಖ ನೀತಿ

ವಿನಯ್ ಕೆ.ವಿನಯ್ ಕೆ.16 Oct 2026 10:34 AM IST
share
ಆಡಳಿತ ಪಕ್ಷದ ದ್ವಿಮುಖ ನೀತಿ

ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಅತಿದೊಡ್ಡ ವಿಪರ್ಯಾಸವೆಂದರೆ ಅಧಿಕಾರದಲ್ಲಿರುವವರಿಗೆ ಪ್ರತಿಭಟನೆಗಳು ಅರಾಜಕತೆಯಾಗಿ ಕಾಣುತ್ತವೆ, ಅದೇ ವಿರೋಧ ಪಕ್ಷದಲ್ಲಿದ್ದಾಗ ಅದೇ ಪ್ರತಿಭಟನೆಗಳು ಪವಿತ್ರ ಕರ್ತವ್ಯವಾಗಿ ಮಾರ್ಪಡುತ್ತವೆ.

ಇತ್ತೀಚೆಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ‘ಇಂಡಿಯಾ’ ಬಣ ನಡೆಸಿದ ದಿಲ್ಲಿ ಚಲೋ ಮತ್ತು ಸುಪ್ರೀಂ ಕೋರ್ಟ್ ಕಡೆಗಿನ ಪ್ರತಿಭಟನಾ ಮೆರವಣಿಗೆಯನ್ನು ಕೇಂದ್ರ ಸರಕಾರ ಹಾಗೂ ಆಡಳಿತಾರೂಢ ಬಿಜೆಪಿ ಅತ್ಯಂತ ಕಠಿಣವಾಗಿ ಟೀಕಿಸುತ್ತಿದೆ.

ಪ್ರತಿಪಕ್ಷಗಳ ಈ ನಡವಳಿಕೆ ದೇಶದಲ್ಲಿ ಅಸ್ಥಿರತೆ ಸೃಷ್ಟಿಸುವ ಹುನ್ನಾರ, ಸಾಂವಿಧಾನಿಕ ಸಂಸ್ಥೆಗಳನ್ನು ಕೀಳಾಗಿ ಕಾಣುವ ಷಡ್ಯಂತ್ರ ಮತ್ತು ವಿದೇಶಿ ಶಕ್ತಿಗಳ ಕೈಗೊಂಬೆ ಆಟ ಎಂದು ಆಡಳಿತ ಪಕ್ಷ ಬಣ್ಣಿಸಿದೆ. ಬಿಜೆಪಿ ಬೆಂಬಲಿಗರೂ ಅದನ್ನೇ ಪ್ರಚಾರ ಮಾಡುತ್ತಿದ್ದಾರೆ

ಚುನಾವಣೆಗಳಲ್ಲಿ ಮತಗಳ ತಿರುಚುವಿಕೆ ಮತ್ತು ಚುನಾವಣಾ ಆಯೋಗದ ಪಾರದರ್ಶಕತೆಯ ಮೇಲಿನ ನೇರ ಆರೋಪಗಳಿಗೆ ಉತ್ತರಿಸುವ ಬದಲು, ಆಡಳಿತ ಪಕ್ಷ ಈ ಪ್ರತಿಭಟನೆಯನ್ನು ದೇಶದ್ರೋಹದ ಕೆಲಸ ಎಂದು ಅಪಪ್ರಚಾರ ಮಾಡಲು ಯತ್ನಿಸುತ್ತಿದೆ.

ಪ್ರತಿಭಟನಾಕಾರರಿಗೆ ಜಾರ್ಜ್ ಸೊರೊಸ್ ಬೆಂಬಲವಿದೆ ಎನ್ನುವ ಹಳೆಯ ಆರೋಪ ಸವಕಲಾದ ಮೇಲೆ, ಈಗ ಪಾಕಿಸ್ತಾನದ ಐಎಸ್‌ಐ ಟೂಲ್‌ಕಿಟ್ ಹೊಸದಾಗಿ ಕಣಕ್ಕಿಳಿದಿದೆ.

ನಮ್ಮಲ್ಲಿ ಸರಕಾರದ ನೀತಿಯನ್ನು ಸಾಮಾನ್ಯ ಪ್ರಜೆ ಸ್ವಂತ ಬುದ್ಧಿಯಿಂದ ವಿರೋಧಿಸಲು ಸಾಧ್ಯವೇ ಇಲ್ಲ, ಪ್ರತೀ ಪ್ರಶ್ನೆಯ ಹಿಂದೆಯೂ ಯಾವುದೋ ವಿದೇಶಿ ಕೈ ಇರಲೇಬೇಕು ಎನ್ನುವ ವಿಚಿತ್ರ ತರ್ಕ ದಿನನಿತ್ಯ ಚಲಾವಣೆಯಲ್ಲಿದೆ.

ಯಾವುದೇ ವಿರೋಧ ಪ್ರದರ್ಶನವನ್ನು ತಕ್ಷಣವೇ ಅರಾಜಕತೆ ಎಂದು ಕರೆಯುವ ಮುನ್ನ, ರಾಜಕೀಯ ಪಕ್ಷಗಳು ತಮ್ಮ ಸ್ವಂತ ಹಿನ್ನೆಲೆಯನ್ನು ನೆನಪಿಸಿಕೊಳ್ಳುವುದು ಬಹಳ ಮುಖ್ಯ.

ಭಾರತೀಯ ಜನತಾ ಪಕ್ಷದ ಇತಿಹಾಸವನ್ನು ಗಮನಿಸಿದರೆ, ಅದರ ಹುಟ್ಟು ಮತ್ತು ಬೆಳವಣಿಗೆಯೇ ಬೀದಿ ಹೋರಾಟ, ಪ್ರತಿಭಟನೆ ಮತ್ತು ನಿಯಮಗಳ ಉಲ್ಲಂಘನೆಯ ಮೇಲೆ ನಿಂತಿದೆ.

ಬಿಜೆಪಿಯ ಸೈದ್ಧಾಂತಿಕ ಸಂಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರು 1953ರಲ್ಲಿ ಜಮ್ಮು-ಕಾಶ್ಮೀರಕ್ಕೆ ಪ್ರವೇಶಿಸಲು ಅಂದು ಜಾರಿಯಲ್ಲಿದ್ದ ಸರಕಾರದ ಅಧಿಕೃತ ಪರವಾನಿಗೆ ಅಥವಾ ಪರ್ಮಿಟ್ ವ್ಯವಸ್ಥೆಯನ್ನು ಸ್ಪಷ್ಟವಾಗಿ ಧಿಕ್ಕರಿಸಿ ಗಡಿ ದಾಟಿದ್ದರು.

ಒಂದು ದೇಶದಲ್ಲಿ ಎರಡು ಸಂವಿಧಾನ, ಇಬ್ಬರು ಪ್ರಧಾನಿಗಳು ಮತ್ತು ಎರಡು ಧ್ವಜಗಳು ಇರಲು ಸಾಧ್ಯವಿಲ್ಲ ಎಂದು ಕಾನೂನು ಮುರಿದು ಬಂಧನಕ್ಕೊಳಗಾದರು.

ಅವರ ಆ ಕಾನೂನು ಉಲ್ಲಂಘನೆಯ ಹೋರಾಟವೇ ಅಂತಿಮವಾಗಿ ಆ ನಿರ್ಬಂಧಿತ ಪರ್ಮಿಟ್ ವ್ಯವಸ್ಥೆಯನ್ನು ರದ್ದುಗೊಳಿಸಲು ಕಾರಣವಾಯಿತು ಮತ್ತು ಆ ತ್ಯಾಗವನ್ನು ಬಿಜೆಪಿ ಇಂದಿಗೂ ಬಲಿದಾನ ದಿವಸ ಎಂದು ಗೌರವಿಸುತ್ತದೆ.

ಅಂದು ಸರಕಾರದ ನಿಯಮ ಮುರಿದು ಹೋರಾಡಿದ ಮಹನೀಯರನ್ನು ಮಹಾ ದೇಶಭಕ್ತರೆಂದು ಪೂಜಿಸುವ ವ್ಯವಸ್ಥೆಯು, ಇಂದು ಪ್ರಜೆಗಳು ಸರಕಾರದ ವಿರುದ್ಧ ಧ್ವನಿ ಎತ್ತಿದರೆ ಅವರನ್ನು ತಕ್ಷಣವೇ ಅರ್ಬನ್ ನಕ್ಸಲರು ಎಂದು ಕರೆಯುವುದು ಇತಿಹಾಸದ ದೊಡ್ಡ ವ್ಯಂಗ್ಯ.

ಇತಿಹಾಸದ ಪುಟಗಳನ್ನು ತಿರುವಿದರೆ, 1973ರಲ್ಲಿ ಇಂಧನ ದರ ಏರಿಕೆಯಾದಾಗ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಎತ್ತಿನ ಬಂಡಿಯನ್ನೇರಿ ಸಂಸತ್ತಿಗೆ ತೆರಳಿ ಪ್ರದರ್ಶನಾತ್ಮಕ ಪ್ರತಿಭಟನೆ ನಡೆಸಿದ್ದರು. ಅಂದು ಪಶ್ಚಿಮ ಏಶ್ಯದ ಯುದ್ಧದ ಕಾರಣದಿಂದ ತೈಲ ಬೆಲೆ ಏರಿದ್ದರೂ, ವಾಜಪೇಯಿ ಅವರ ನಾಟಕೀಯ ವಿರೋಧವನ್ನು ಯಾರೂ ಸಿಐಎ ಏಜೆಂಟ್ ಎಂದು ಕರೆಯಲಿಲ್ಲ. 1974ರಲ್ಲಿ ಗುಜರಾತಿನಲ್ಲಿ ಕಾಲೇಜು ಹಾಸ್ಟೆಲ್ ಊಟದ ದರ ಏರಿಕೆಯಿಂದ ಆರಂಭವಾದ ನವನಿರ್ಮಾಣ ಆಂದೋಲನವು ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಚಿಮನ್‌ಭಾಯಿ ಪಟೇಲ್ ಅವರ ಸರಕಾರವನ್ನೇ ಬೀಳಿಸಿತು. ಸ್ವತಃ ನರೇಂದ್ರ ಮೋದಿಯವರು ತಮ್ಮ ಸಾರ್ವಜನಿಕ ಜೀವನದ ಆರಂಭಿಕ ಹಂತದಲ್ಲಿ ಆ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅದೇ ರೀತಿ 1975ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ ಮರುದಿನವೇ, ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಅರುಣ್ ಜೇಟ್ಲಿ ಪ್ರಧಾನಿಯ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿ ಜೈಲು ಸೇರಿದ್ದರು.

ಆ ಘಟನೆಯನ್ನು ಜೇಟ್ಲಿ ತಮ್ಮ ಜೀವನದ ಹೆಮ್ಮೆಯ ಸತ್ಯಾಗ್ರಹವೆಂದು ಕರೆದುಕೊಂಡಿದ್ದರು. ಇಂದು ಅದೇ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ವಿದ್ಯಾರ್ಥಿ ಸರಕಾರದ ವಿರುದ್ಧ ಪ್ರತಿಕೃತಿ ದಹಿಸಿದರೆ, ಆತನಿಗೆ ಸಿಗುವುದು ಸತ್ಯಾಗ್ರಹಿ ಎಂಬ ಪಟ್ಟವಲ್ಲ, ಬದಲಿಗೆ ದೇಶದ್ರೋಹದ ಪ್ರಕರಣ ಮತ್ತು ಜೈಲುವಾಸ.

ಯುಪಿಎ ಸರಕಾರದ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ಬಿಜೆಪಿಯು ವಿರೋಧ ಪಕ್ಷವಾಗಿ ನಡೆಸಿದ ಹೋರಾಟಗಳು ದೊಡ್ಡ ಪರಿಣಾಮ ಬೀರಿದ್ದವು

2006ರಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾದಾಗ ಇಡೀ ದೇಶದಲ್ಲಿ ಚಕ್ಕಾ ಜಾಮ್ ಮತ್ತು ರೈಲು ತಡೆ ಚಳವಳಿಗಳನ್ನು ಬಿಜೆಪಿ ನಡೆಸಿತ್ತು.

2010ರಲ್ಲಿ ನಿತಿನ್ ಗಡ್ಕರಿಯವರು ತರಕಾರಿ ಹಾರ ಧರಿಸಿ ಜಂತರ್ ಮಂತರ್‌ನಲ್ಲಿ ಕೃಷಿ ಸಚಿವರ ವಿರುದ್ಧ ಬೃಹತ್ ರ್ಯಾಲಿ ನಡೆಸಿ ದಿಲ್ಲಿಯನ್ನೇ ಸ್ತಬ್ಧಗೊಳಿಸಿದ್ದರು.

2011ರಲ್ಲಿ ಬಾಬಾ ರಾಮ್‌ದೇವ್ ಅವರ ರಾಮಲೀಲಾ ಮೈದಾನದ ಪ್ರತಿಭಟನೆಯ ಮೇಲೆ ಪೊಲೀಸರು ಮಧ್ಯರಾತ್ರಿ ಕ್ರಮ ಕೈಗೊಂಡಾಗ, ಅದನ್ನು ಅಘೋಷಿತ ತುರ್ತು ಪರಿಸ್ಥಿತಿ ಎಂದು ಕರೆದ ಬಿಜೆಪಿ ನಾಯಕರು ರಾಜ್‌ಘಾಟ್‌ನಲ್ಲಿ 24 ಗಂಟೆ ಧರಣಿ ಕುಳಿತಿದ್ದರು. ಅಂದು ರಾತ್ರಿ ಎರಡು ಗಂಟೆಗೆ ಸುಷ್ಮಾ ಸ್ವರಾಜ್ ಮತ್ತು ಅನುರಾಗ್ ಠಾಕೂರ್ ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕಿ ನರ್ತಿಸಿದ್ದರು. ಅಂದು ಅದು ರಾಷ್ಟ್ರೀಯತೆಯ ಸಂಕೇತವಾಗಿತ್ತು, ಆದರೆ ಇಂದು ಯಾವುದೇ ಪ್ರತಿಭಟನೆಯಲ್ಲಿ ಯಾರಾದರೂ ಹಾಡಿ ಕುಣಿದರೆ ಅದನ್ನು ರೇವ್ ಪಾರ್ಟಿ ಎಂದು ಬಿಜೆಪಿ ಹಾಗೂ ಮಡಿಲ ಮಾಧ್ಯಮಗಳು ಜರೆಯುತ್ತವೆ.

ಸಂಸತ್ತಿನ ಕಲಾಪಗಳನ್ನು ಸತತವಾಗಿ ನಿಲ್ಲಿಸುವುದು ಕೂಡ ವಿರೋಧ ಪಕ್ಷದ ಪ್ರಜಾಸತ್ತಾತ್ಮಕ ಹಕ್ಕು ಎಂದು ಅಂದು ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಸಾರ್ವಜನಿಕವಾಗಿ ಪ್ರತಿಪಾದಿಸಿದ್ದರು.

2013ರಲ್ಲಿ ರಕ್ಷಣಾ ಸಚಿವರ ಮನೆಯ ಮುಂದೆ ನುಗ್ಗಿ ಸರಕಾರವನ್ನು ಕಿತ್ತೊಗೆಯುತ್ತೇವೆ ಎಂದು ಅಬ್ಬರಿಸಿದ ಯುವಮೋರ್ಚಾ ನಾಯಕರು, ಇಂದು ಅಧಿಕಾರದಲ್ಲಿ ಕುಳಿತು ಪ್ರಶ್ನೆ ಕೇಳುವ ನಾಗರಿಕರನ್ನು ಗುಂಡಿಕ್ಕಿ ಕೊಲ್ಲುವ ಮಾತುಗಳನ್ನಾಡುತ್ತಿದ್ದಾರೆ.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ವಾರಣಾಸಿಯ ಬೆನಿಯಾ ಬಾಗ್‌ನಲ್ಲಿ ಮೋದಿ ಅವರ ಸಮಾವೇಶಕ್ಕೆ ಜಿಲ್ಲಾ ಚುನಾವಣಾಧಿಕಾರಿ ಅನುಮತಿ ನಿರಾಕರಿಸಿದಾಗ, ಬಿಜೆಪಿ ನಾಯಕರು ಚುನಾವಣಾ ಆಯೋಗದ ವಿರುದ್ಧವೇ ಬೀದಿಗಿಳಿದು ಧರಣಿ ಕುಳಿತಿದ್ದರು.

ಅಂದು ಚುನಾವಣಾ ಆಯೋಗವನ್ನು ಪಕ್ಷಪಾತಿ ಮತ್ತು ಹೇಡಿ ಎಂದು ಕರೆದು ಪ್ರತಿಭಟಿಸಿದ್ದು ಸತ್ಯಾಗ್ರಹ, ಆದರೆ 2026ರಲ್ಲಿ ಪ್ರತಿಪಕ್ಷಗಳು ಅದೇ ಚುನಾವಣಾ ಆಯೋಗದ ಮುಖ್ಯಸ್ಥರ ರಾಜೀನಾಮೆ ಕೇಳಿ ಶಾಂತಿಯುತ ಮೆರವಣಿಗೆ ನಡೆಸಿದರೆ ಅದು ದೇಶದ್ರೋಹ ಎಂಬ ವಿಚಿತ್ರ ವ್ಯಾಖ್ಯಾನ ಹುಟ್ಟಿಕೊಂಡಿದೆ.

1993ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಬೋಟ್ ಕ್ಲಬ್‌ನಲ್ಲಿ ಬಿಜೆಪಿ ರ್ಯಾಲಿ ನಡೆಸಲು ಮುಂದಾದಾಗ ಪಿ.ವಿ. ನರಸಿಂಹ ರಾವ್ ಸರಕಾರ 25 ಸಾವಿರ ಕಾರ್ಯಕರ್ತರನ್ನು ಬಂಧಿಸಿತ್ತು.

ಅಂದು ಸರಕಾರದ ಆ ನೀತಿಯನ್ನು ಪ್ರಜಾಪ್ರಭುತ್ವದ ಕೊಲೆ ಎಂದು ಕರೆದಿದ್ದ ಅದೇ ಬಿಜೆಪಿ, ಇಂದು ಅಧಿಕಾರಕ್ಕೆ ಬಂದ ಮೇಲೆ ಪ್ರತಿಭಟನೆಗಳ ಕೇಂದ್ರವಾಗಿದ್ದ ಜಂತರ್ ಮಂತರ್ ಅನ್ನೇ ಪ್ರತಿಭಟನೆಗಳಿಂದ ಮುಕ್ತಗೊಳಿಸಲು ಹೊರಟಿದೆ.

ವಿರೋಧ ಪಕ್ಷದಲ್ಲಿದ್ದಾಗ ಪಶ್ಚಿಮ ಬಂಗಾಳದಲ್ಲಿ ರೈಲು ಹಳಿಗಳನ್ನು ಬಂದ್ ಮಾಡಿ ಮಮತಾ ಬ್ಯಾನರ್ಜಿ ಸರಕಾರದ ಪೊಲೀಸ್ ಕ್ರಮವನ್ನು ಖಂಡಿಸುವ ನಾಯಕರಿಗೆ, ದಿಲ್ಲಿಯಲ್ಲಿ ವಿದ್ಯಾರ್ಥಿಗಳು ಮತ್ತು ರಾಜಕೀಯ ನಾಯಕರು ರಸ್ತೆಗಿಳಿದರೆ ಮಾತ್ರ ಕಾನೂನು ಸುವ್ಯವಸ್ಥೆಯ ನೆನಪಾಗುತ್ತದೆ.

ಶಾಂತಿಯುತವಾಗಿ ಸೇರುವುದು ಮತ್ತು ಸರಕಾರದ ನೀತಿಗಳನ್ನು ಪ್ರಶ್ನಿಸುವುದು ಸಂವಿಧಾನದ 19ನೇ ವಿಧಿಯಡಿ ಪ್ರತಿಯೊಬ್ಬ ಪ್ರಜೆಗೂ ಸಿಕ್ಕಿರುವ ಮೂಲಭೂತ ಹಕ್ಕು.

ಸರಕಾರಗಳು ಪ್ರತಿಭಟನೆಗಳಿಗೆ ಪರವಾನಿಗೆಯ ನೆಪವೊಡ್ಡಿ ಸಾರ್ವಜನಿಕರ ಅಸಮಾಧಾನವನ್ನು ಹತ್ತಿಕ್ಕಲು ಯತ್ನಿಸಿದರೆ, ಪ್ರಜಾಪ್ರಭುತ್ವದ ಅಡಿಪಾಯವೇ ದುರ್ಬಲಗೊಳ್ಳುತ್ತದೆ. ಅಧಿಕಾರದ ಗದ್ದುಗೆಯಲ್ಲಿ ಕುಳಿತಾಗ ತಮ್ಮದೇ ಹೋರಾಟದ ಬೇರುಗಳನ್ನು ಮರೆಯುವುದು ಪ್ರಜಾಪ್ರಭುತ್ವದಲ್ಲಿ ಕ್ಷೇಮವಲ್ಲ.

Tags

Rulingruling party
share
ವಿನಯ್ ಕೆ.
ವಿನಯ್ ಕೆ.
Next Story
X