Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಸಣ ಕಾಯುವ ‘ಸುಡುಗಾಡು ಸಿದ್ದರು’

ಮಸಣ ಕಾಯುವ ‘ಸುಡುಗಾಡು ಸಿದ್ದರು’

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್22 Oct 2025 12:01 PM IST
share
ಮಸಣ ಕಾಯುವ ‘ಸುಡುಗಾಡು ಸಿದ್ದರು’

ಸಿದ್ದ ಸಿದ್ದರುಗಳೆಲ್ಲ ರಸವಾದವ ಕಲಿತು

ಬಂಧನಕ್ಕೆ ಗುರಿಯಾದರು

ಅಮೃತದ ಸೇವಿಸಿದ ಸುರರೆಲ್ಲ

ಪ್ರಶಕ್ಕೆ ಗುರಿಯಾದರು

ನಮ್ಮ ಕಪಿಲ ಸಿದ್ದ ಮಲ್ಲಿಕಾರ್ಜುನನ

ಅರಿಯದವರೆಲ್ಲ

ಬಯಲಿಗೆ ಬಯಲಾದರು

ವಚನದಲ್ಲಿ ವಚನಕಾರರಲ್ಲಿ ಮುಖ್ಯರಾದ ಸಿದ್ದರಾಮ, ಸುಡುಗಾಡು ಸಿದ್ದರನ್ನು ಹೀಗೆ ಸ್ಮರಿಸುತ್ತಾರೆ. ಅಲ್ಲಮಪ್ರಭುಗಳು ತಮ್ಮ ಒಂದು ವಚನದಲ್ಲಿ ‘‘ಕೊಂಕಣದ್ವೀಪದಲ್ಲಿ ಒಂದು ಕಪಿ ಹುಟ್ಟಿತ್ತು. ತಪವ ಮಾಡಿ ಸಪ್ತ ಋಷಿಯರ ನುಂಗಿತ್ತು, ನವನಾಥ ಸಿದ್ದರ ತೊತ್ತಳದುಳಿದಿತ್ತು’’ ಎಂದು ಸುಡುಗಾಡು ಸಿದ್ದರನ್ನು ಸ್ಮರಿಸುತ್ತಾರೆ. ನವನಾಥಸಿದ್ದರ ಹುಟ್ಟಿನ ಬಗ್ಗೆ ಒಂದು ಐತಿಹ್ಯವಿದೆ. ಶಿವ ತಪಸ್ಸು ಮಾಡುವಾಗ ಆತನ ಸೇವೆಗಾಗಿ ಪಾರ್ವತಿ ನವನಾಥ ಸಿದ್ದರನ್ನು ಸೃಷ್ಟಿಸಿದಳೆಂದೂ ಆ ಕಾರ್ಯಮುಗಿದ ನಂತರ ವಿಭೂತಿ, ಕಾವಿ, ಕಮಂಡಲ, ರುದ್ರಾಕ್ಷಿ, ಶಿವಗಂಟೆಯನ್ನು ಕೊಟ್ಟು ಭೂಲೋಕಕ್ಕೆ ಕಳುಹಿಸಿದಳೆಂದೂ, ಅವರೇ ಸುಡುಗಾಡುಸಿದ್ದರೆಂದು ಹೇಳುತ್ತಾರೆ. ಅಂತೆಯೇ ಬಸವಣ್ಣನವರ ವಚನವೊಂದರಲ್ಲಿ ‘‘ಒಲೆಯಡಿಯರುಹಿದಡೆ ಹೊಗೆ ಗೋರಕನಾಥನ ಕೊರಳಸುತ್ತಿತ್ತು. ಮಹೀತಳನ ಜಡೆಸೀಯಿತ್ತು ಮಾರೀಚನ ಸಿರಬೆಂದಿತ್ತು’’ ಎಂದು ಗೋರಕನಾಥನನ್ನು ಉಲ್ಲೇಖಿಸುತ್ತಾರೆ. ಅಲ್ಲಮರು ನಾಥಸಿದ್ದರನ್ನು, ಬಸವಣ್ಣ ಗೋರಕನಾಥನ ರಸಸಿದ್ದರನ್ನು ಹೀಗೆ ಪ್ರಸ್ತಾಪಿಸುತ್ತಾರೆ!

ಸುಡುಗಾಡುಸಿದ್ದ ಸಮುದಾಯದ ಕುರಿತು ಬರೆಯುವಾಗ ಇವನ್ನೆಲ್ಲ ಯಾಕೆ ಪ್ರಸ್ತಾಪಿಸುತ್ತಿದ್ದೇನೆ ಎಂದರೆ ನಮ್ಮ ‘ಸಭ್ಯ’ ಸಮಾಜ ಅತ್ಯಂತ ನಿಕೃಷ್ಟವಾಗಿ ನೋಡುತ್ತಿರುವ ಸಮುದಾಯವೊಂದರ ಬೇರುಗಳು ನಾಥಪಂಥ ಮತ್ತು ಹನ್ನೆರಡನೇ ಶತಮಾನದ ಶರಣ ಚಳವಳಿಯಲ್ಲಿ ಇರಬಹುದಾದ ಸಾಂಸ್ಕೃತಿಕ ಹಿರಿಮೆ ಮತ್ತು ಐತಿಹಾಸಿಕ ಶ್ರೀಮಂತಿಕೆಯನ್ನು ಗುರುತಿಸುವ ಉದ್ದೇಶದಿಂದಷ್ಟೆ.

ಅವೈದಿಕ ಸಮುದಾಯವೊಂದು ಹನ್ನೆರಡನೇ ಶತಮಾನದಿಂದೀಚೆಗೆ ಶೈವ ಪರಂಪರೆಯ ಮೂಲಕ ಭಾರತೀಯ ಸಾಮಾಜಿಕ ಜಾತಿ ವ್ಯವಸ್ಥೆಯಲ್ಲಿ ಗುರುತಿಸಿಕೊಳ್ಳುವ ಪ್ರಯತ್ನವನ್ನು ಮಾಡಿರುವ ಪ್ರಯತ್ನಗಳು ಇಲ್ಲಿ ಗಮನಾರ್ಹ. ಸುಡುಗಾಡು ಸಿದ್ದ ಸಮುದಾಯದ ಪರಂಪರೆಯಲ್ಲಿ ಒಂದು ಮೌಖಿಕ ಕಥನವಿದೆ. ಸುಡುಗಾಡು ಸಿದ್ದರ ಜಾತಿ, ಕುಲ, ಬೆಡಗುಗಳನ್ನು ಸೃಷ್ಟಿ ಮಾಡತೊಡಗಿದಾಗ ಶ್ರೀಶೈಲದ ಮುಖ್ಯಪೀಠಾಧಿಕಾರಿಯಾದ ಸಚ್ಚಿದಾನಂದ ಶ್ರೀವೀರ, ಭಿಕ್ಷಾವೃತ್ತಿ ಸದಾನಂದ ಮಹಾಸ್ವಾಮಿಗಳಲ್ಲಿಗೆ ತೆರಳಿ ಸುಡುಗಾಡುಸಿದ್ದರ ಆಗುಹೋಗುಗಳನ್ನು ಕೇಳಲು, ಆ ಗುರುಗಳು ಹೀಗೆ ಹೇಳುತ್ತಾರೆ. ‘‘ಸಿದ್ದಯೋಗೀಶ್ವರ ನಾನು ಆಭರಣಗಳನ್ನು ಕೊಡುತ್ತೇನೆ. ಅದರ ವಿಧಿವಿಧಾನಗಳನ್ನು ತಿಳಿಸುತ್ತೇನೆ. ಆ ಪ್ರಕಾರವಾಗಿ ನೀನು ಮಾಡಿದರೆ, ನಿಮ್ಮ ಜಾತಿಯ ಕುಲ, ಬೆಡಗು, ಪಂಗಡಗಳು ಸಿದ್ದಿಯಾಗಿ ಜಾತಿಗಳೇ ಬುನಾದಿಗಳಾಗಿ ಉಳಿದುಕೊಳ್ಳುತ್ತವೆ.’’ ಅವರ ಜಾತಿಗೆ ಗುರು, ದೇವರು ಪಂಚಗೋತ್ರಗಳು ಜನನ, ಮರಣ, ಮದುವೆ, ಕಾಯಕ ವೃತ್ತಿ, ವಿಧಿವಿಧಾನಗಳು ಜಾತಿ ಪಂಗಡಗಳು, ಮಾಡುವ ಉನ್ನತ ಕಸುಬು ಹೀಗೆ ಇನ್ನೂ ಅನೇಕ ತರದ ಮಾಹಿತಿಯನ್ನು ತಿಳಿಸಿ ಆಭರಣಗಳನ್ನು ಗುರುಗಳು ನೀಡಿದರು. ಅವುಗಳೆಂದರೆ ವಿಭೂತಿ, ಗಂಟೆ, ಶಂಖ, ಪತ್ರೆ, ರುದ್ರಾಕ್ಷಿ, ಈ ಐದೂ ಆಭರಣಗಳೇ ಈ ಸಮುದಾಯದ ಕುಲಗೋತ್ರಗಳಾದವು. ಈ ಐದೂ ಗೋತ್ರಗಳು ಮತ್ತೆ ಉಪಪಂಗಡಗಳಾದವು. ಅವೆಂದರೆ ಸುಡುಗಾಡುಸಿದ್ದ, ಆದಿವಾಸಿ ಸಿದ್ದ, ಚೆಂಚುವಾರರು, ರಾಮುಕೊಂಡ, ಗೊಂಬೆಯಾಟದವರು ಎಂದು.

ಸುಡುಗಾಡುಸಿದ್ದರ ಮುಖ್ಯ ಕಾಯಕ

1. ಸ್ಮಶಾನ ಕಾಯುವುದು, 2. ಕಾವಿಬಟ್ಟೆ ಧರಿಸಿ ಶಂಖ ಊದುತ್ತಾ ಮನೆಮನೆಗೂ ಹೋಗಿ ಧರ್ಮಬೋಧನೆ ಮಾಡುವುದು. 3. ರುದ್ರಾಕ್ಷಿ ಧರಿಸಿ ಶಿವಭಜನೆ ಮಾಡುತ್ತಾ ಪ್ರಶ್ನಾಫಲಗಳನ್ನು ಹೇಳುವುದು. 4. ಬಿಳಿಬಟ್ಟೆ ಧರಿಸಿ ಕಚ್ಚೆಪಂಚೆ ಹಾಕಿ ಚಿಂತಾಮಣಿ ಕಾಡಿ ಪ್ರಶ್ನೆ ಹೇಳುವುದು. 5. ವಿಭೂತಿ, ಗಂಧ, ಭಸ್ಮ ಧರಿಸಿ ಮಾನವರಿಗೆ ಅಂಟಿಕೊಂಡಿರುವ ವ್ಯಾಧಿಗಳನ್ನು ಗುಣಪಡಿಸುವುದು. ಇವುಗಳೊಂದಿಗೆ ಗಿಡಮೂಲಿಕೆಗಳಿಂದ ಔಷಧಿಯನ್ನು ತಯಾರಿಸುವುದು, ವಿಷ ಜಂತುಗಳು ಕಚ್ಚಿದಾಗ ಇವುಗಳ ಮೂಲಕ ವಿಷ ತೆಗೆದು ಗುಣಪಡಿಸುವುದೇ ಮುಂತಾದ ವೈದ್ಯವೃತ್ತಿಯಾಗಿತ್ತು. ಇದೀಗ ಆಧುನಿಕ ಕಾಲಘಟ್ಟದಲ್ಲಿ ಸುಡುಗಾಡುಸಿದ್ದರ ಕುಲವೃತ್ತಿಗಳು ನಶಿಸಿಹೋಗಿ ಇವರ ಬದುಕು ಈಗ ಬೀದಿಗೆ ಬಿದ್ದಿದೆ.

ಸುಡುಗಾಡು ಸಿದ್ದರಿಗೆ ಕಡಗದವರು, ಕಲ್ಯಾಣದವರು,. ಡೊಕ್ಕಣ್ಣನವರು, ಸಿರಿಗೆರೆಯವರು, ಮದ್ದಿಯವರು ಮುಂತಾಗಿ ಮೂವತ್ತೈದು ಬೆಡಗುಗಳಿವೆ. ಈ ಬೆಡಗಿನವರೆಲ್ಲಾ ಸೇರಿ ಗುರುಮನೆಯವರು, ಕಟ್ಟೆಮನೆಯವರು, ಬುದ್ದವಂತರ ಮನೆ,ನ್ಯಾಯದ ಮನೆ, ವಾಲಿಕಾರ ಮನೆ ಎಂಬ ಐದು ಮನೆತನಗಳಾದವು ಎಂದು ಸುಡುಗಾಡು ಸಿದ್ದ ಸಮುದಾಯದ ಕುರಿತು ಸಂಶೋಧನೆ ಮಾಡಿರುವ ಡಾ.ನಾಗಭೂಷಣ ಬಗ್ಗನಡು ಅವರು ಅತ್ಯಂತ ವಿಸ್ತೃತವಾಗಿ ಈ ಸಮುದಾಯದ ಕುರಿತು ಬರೆದಿದ್ದಾರೆ.

ಸುಡುಗಾಡುಸಿದ್ದರನ್ನು ಕಾಡುಸಿದ್ದರು, ಮಸಣದ ಒಡೆಯರು, ಸಿದ್ದಯ್ಯಗಳು, ಕಾಟಿಪಾಪುಲಿ, ಸ್ಮಶಾನ ಜೋಗಿಗಳು, ಕಾಡುಪಾಪರು, ತೆಲುಗು ಜಂಗಮರು, ಭಿಕ್ಷಾಗಾಳ್ಳು, ಜಂಗಮದೇವರು, ಕಟೇರಿಪಾಲಾಯತಕ, ವಲ್ಲಿಕಾಟೋಳ, ಜಂಗಾಲರು ಮುಂತಾಗಿ ಕರೆಯುತ್ತಾರೆ.

ಶ್ರೀಶೈಲ ಈ ಸಮುದಾಯದ ಮೂಲಸ್ಥಾನವಾಗಿದ್ದು, ಆಂಧ್ರದ ಕರ್ನೂಲು ಜಿಲ್ಲೆಯಲ್ಲಿ ಇವರ ಜನಸಂಖ್ಯೆ ಹೆಚ್ಚು ಇದೆ. ಅಲ್ಲಿಂದ ಕೆಲವು ಗುಂಪುಗಳು ಕರ್ನಾಟಕ, ಮಹಾರಾಷ್ಟ್ರಕ್ಕೆ ವಲಸೆ ಬಂದಿದ್ದಾರೆ. ಕೆಲವು ಕುಟುಂಬಗಳು ಅನಂತಪುರದ ಮೂಲಕ ಚಿತ್ರದುರ್ಗದ ಕಡೆ ಬಂದಿವೆ. ಕರ್ನೂಲು ಮತ್ತು ಮೆಹಬೂಬನಗರ್ ಜಿಲ್ಲೆಗಳಿಂದ ರಾಯಚೂರು ಮತ್ತು ಬಳ್ಳಾರಿ ಜೆಲ್ಲೆಗಳಿಗೆ ಬಂದಿದ್ದಾರೆ. ಈ ಜಿಲ್ಲೆಗಳಿಂದ ಬಂದವರು ಹರಪನಹಳ್ಳಿಯನ್ನು ತಮ್ಮ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡರು. ನಂತರ ಸುಡುಗಾಡುಸಿದ್ದರು ಇಡೀ ನಾಡಿನಾದ್ಯಂತ ಅಲೆಮಾರಿಗಳಾಗಿ ಬದುಕನ್ನು ಆರಿಸಿಕೊಂಡು ಹೊರಟು ಅಲ್ಲಲ್ಲಿ ಟೆಂಟು, ಗುಡಾರ, ಗುಡಿಸಲುಗಳನ್ನು ಹಾಕಿಕೊಂಡು ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಮೂಲತಹ ನಾಥಪಂಥಕ್ಕೆ ಸೇರಿದ ಸುಡುಗಾಡುಸಿದ್ದರ ಚುಂಚನಗಿರಿ ಪೀಠವನ್ನು ‘ದೊಡ್ಡವರು’ ಆಕ್ರಮಿಸಿಕೊಂಡಿದ್ದಾರೆ ಎಂದು ಸುಡುಗಾಡುಸಿದ್ದರ ಹಿರಿಯರು ದೂರುತ್ತಾರೆ. ಒಂದು ಕಾಲದಲ್ಲಿ ನಾಟಿವೈದ್ಯರಾಗಿ, ಮಸಣಯೋಗಿಗಳಾಗಿ, ಶೈವಾರಾಧಕರಾಗಿ ಸಾಂಸ್ಕೃತಿಕ ಅನನ್ಯತೆಗಳನ್ನು ಮೆರೆದವರು ಇಂದು ಭಿಕ್ಷುಕರಾಗಿದ್ದಾರೆ. ಅಪ್ಪಟ ಅಲೆಮಾರಿಗಳಾಗಿರುವ ಸುಡುಗಾಡುಸಿದ್ದರ ಪಾರಂಪರಿಕ ಕಸುಬು ಈಗಾಗಲೇ ನಶಿಸಿಹೋಗಿದೆ. ಸ್ಮಶಾನ ಕಾಯುವುದು, ನಿರಂಜನ ಕಾಯಕ ಅಂದರೆ ಕಾವಿವೇಷ ಧರಿಸಿ ಭಿಕ್ಷೆ ಬೇಡುವುದು, ಹಸ್ತಮುದ್ರಿಕೆ ಶಾಸ್ತ್ರ ಹೇಳುವುದು, ಸಿದ್ದಾಟಿಕೆ ಮಾಡುವುದೇ ಮುಂತಾದ ಕಸುಬುಗಳು ಈ ಆಧುನಿಕ ಯುಗದಲ್ಲಿ ಮಾಯವಾಗಿವೆ. ಈಗ ಇವರ ಬದುಕೇ ದುಸ್ತರವಾಗಿದೆ. ‘ಸುಡುಗಾಡುಸಿದ್ದ’ ಎಂಬ ಶಬ್ದವೇ ಈ ಸಮುದಾಯದ ಮೇಲೆ ಮಾನವೀಯತೆ ಇರುವವರಿಗೆ ಕರುಣೆ ಹುಟ್ಟಿಸುತ್ತದೆ. ಇದೇ ಕಾರಣಕ್ಕೆ ಇತರ ಅಸ್ಮಿತೆಯಿಲ್ಲದ ಅಲೆಮಾರಿ ಸಮುದಾಯಗಳು ಸುಡುಗಾಡುಸಿದ್ದರ ಹೆಸರಲ್ಲಿ ಜಾತಿಪ್ರಮಾಣಪತ್ರ ಪಡೆಯುತ್ತಿದ್ದಾರೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಈ ಸಮುದಾಯ ಅಸಂಘಟಿತ ಸಮುದಾಯವಾಗಿದೆ. ಈಚೆಗಷ್ಟೇ ಈ ಸಮುದಾಯದ ಹನುಮಂತಪ್ಪ ಎಂಬ ಪ್ರಜ್ಞಾವಂತರು ಸುಡುಗಾಡುಸಿದ್ದ ಮಹಾಸಭಾ ಎಂಬ ಸಂಘಟನೆಯನ್ನು ಕಟ್ಟಿಕೊಂಡು, ಈ ಸಮುದಾಯದಲ್ಲಿ ಅತ್ಯಂತ ಅಮಾನುಷವಾಗಿದ್ದ ಕುಲಪಂಚಾಯಿತಿ ಪದ್ಧತಿಯ ವಿರುದ್ಧ ಸಮುದಾಯದಲ್ಲಿ ಪ್ರಜ್ಞೆ ಮೂಡಿಸುತ್ತಾ, ಸಮುದಾಯಕ್ಕೆ ಸರಕಾರದಿಂದ ಸಿಗಬಹುದಾದ ಜಾತಿಪ್ರಮಾಣಪತ್ರ, ಸರಕಾರಿ ಅನುದಾನ, ಸಾಲಸೋಲ, ನಿವೇಶನ, ವಸತಿ ಮುಂತಾದುವನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.

ಸುಡುಗಾಡುಸಿದ್ದ ಸಮುದಾಯದ ಜನಸಂಖ್ಯೆ ಈಚಿನ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯಂತೆ ಸುಮಾರು 36,431 ಇದೆ. ಇವರು ಸರಕಾರಿ ಉದ್ಯೋಗ, ಮೆರಿಟ್ ಸೀಟುಗಳನ್ನು ಪಡೆಯಬೇಕಾದರೆ ಎಸ್.ಸಿ.ಪಟ್ಟಿಯಲ್ಲಿರುವ ಬಲಿಷ್ಠ ಜಾತಿಗಳೊಂದಿಗೆ ಸ್ಪರ್ಧಿಸಬೇಕಿದೆ. ಇದು ಅಸಾಧ್ಯ, ಈಚೆಗೆ ಒಳಮೀಸಲಾತಿ ನೀಡುವ ಸಂಬಂಧ ಸರಕಾರ ನ್ಯಾ.ನಾಗಮೋಹನದಾಸ್ ಆಯೋಗವನ್ನು ಮಾಡಿತ್ತು. ಇದರ ವರದಿಯಲ್ಲಿ ಸುಮಾರು 59 ಅಸ್ಪಶ್ಯ ಅಲೆಮಾರಿಗಳ ಪಟ್ಟಿ ಮಾಡಿ ಆ ಪಟ್ಟಿಯಲ್ಲಿ ಸುಡುಗಾಡುಸಿದ್ದರೂ ಇದ್ದರು. ದುರಂತವೆಂದರೆ ಸಿದ್ದರಾಮಯ್ಯನವರ ಸರಕಾರ ಈ ಒಂದು ಪರ್ಸೆಂಟ್ ಮೀಸಲಾತಿಯನ್ನೂ ಇವರಿಂದ ಕಸಿದು ಕೊಲಂಬೋ ಸಮುದಾಯಗಳಿಗೆ ನೀಡಿ, ನೀವು ಅವರೊಂದಿಗೆ ಹಂಚಿಕೊಳ್ಳಿ ಎಂದು ಆದೇಶ ನೀಡಿದ್ದು ಸುಡುಗಾಡುಸಿದ್ದರಂತಹ ಅಲೆಮಾರಿ ಸಮುದಾಯಗಳಿಗೆ ಮರಣಶಾಸನವೇ ಆಯಿತು.

share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X