Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪಶ್ಚಿಮ ಬಂಗಾಳ ಜನತೆಯ ನ್ಯಾಯಯುತ...

ಪಶ್ಚಿಮ ಬಂಗಾಳ ಜನತೆಯ ನ್ಯಾಯಯುತ ಹಕ್ಕನ್ನೇ ಕಸಿಯುತ್ತಿರುವ ಎಸ್‌ಐಆರ್ ಪ್ರಕ್ರಿಯೆ

ಅಜಿತ್ ಕೆ.ಸಿ.ಅಜಿತ್ ಕೆ.ಸಿ.6 March 2026 4:14 PM IST
share
ಪಶ್ಚಿಮ ಬಂಗಾಳ ಜನತೆಯ ನ್ಯಾಯಯುತ ಹಕ್ಕನ್ನೇ ಕಸಿಯುತ್ತಿರುವ ಎಸ್‌ಐಆರ್ ಪ್ರಕ್ರಿಯೆ

ದೇಶದಲ್ಲಿ ಒಬ್ಬ ವ್ಯಕ್ತಿ, ಒಂದು ಮತ ಎಂಬುದು ಬಹಳ ಮಹತ್ವ ಪಡೆದಿರುವ ತತ್ವ. ಅದಕ್ಕಿರುವ ಪಾವಿತ್ರ್ಯವೇ ನಮ್ಮ ಗಣರಾಜ್ಯದ ಅಡಿಪಾಯ.

ಆದರೆ ನಿಜವಾಗಿಯೂ ಇಲ್ಲಿ ಏನಾಗುತ್ತಿದೆ?

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಸುತ್ತಲಿನ ಬೆಳವಣಿಗೆಗಳು ಈ ಅಡಿಪಾಯವನ್ನೇ ವ್ಯವಸ್ಥಿತವಾಗಿ ಕಿತ್ತುಹಾಕಲಾಗುತ್ತಿರುವುದನ್ನು ಸೂಚಿಸುತ್ತವೆ. ವಿಧಾನಸಭೆ ಚುನಾವಣೆ ನಡೆಯಲಿರುವಾಗ ಒಟ್ಟು ಮತದಾರರಲ್ಲಿ ಸರಿಸುಮಾರು ಶೇ. 8.3, ಅಂದರೆ 63.66 ಲಕ್ಷಕ್ಕೂ ಹೆಚ್ಚು ಮತದಾರರನ್ನು ಅಳಿಸಲಾಗಿದೆ.

ಇದು ಕೇವಲ ಅಧಿಕಾರಶಾಹಿ ಕಸರತ್ತಲ್ಲ. ಬದಲಾಗಿ, ಇದು ಪ್ರಜಾಪ್ರಭುತ್ವದ ಪ್ರಾತಿನಿಧಿಕ ಸ್ವರೂಪಕ್ಕೇ ಬೆದರಿಕೆಯಾಗಿದೆ. ಬಂಗಾಳದಲ್ಲಿನ ಬೆಳವಣಿಗೆಗಳು ಕಾನೂನಾತ್ಮಕ ಹಕ್ಕುಗಳನ್ನೇ ಕಸಿಯುವ ನಡೆಯಾಗಿ ಕಾಣುತ್ತವೆ.

ಇಡೀ ಸರಕಾರಿ ವ್ಯವಸ್ಥೆಯನ್ನೇ ತಮಗೆ ಬೇಕಿರದ ಮತದಾರರನ್ನು ತೆಗೆದುಹಾಕಲು ಅಸ್ತ್ರವಾಗಿ ಬಳಸಲಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ಗಿಂತ ಮೊದಲು ಇದ್ದ ಒಟ್ಟು ಮತದಾರರು 7.66 ಕೋಟಿ. ಎಸ್‌ಐಆರ್ ನಂತರದ ಒಟ್ಟು ಮತದಾರರು 7.04 ಕೋಟಿ. ಅಂದರೆ, ಒಟ್ಟು ತೆಗೆಯಲಾದ ಮತದಾರರು 63.66 ಲಕ್ಷ.

ಈ ತೆಗೆದುಹಾಕುವಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದು ಭಯಾನಕ ಮಾದರಿ ಗಮನಕ್ಕೆ ಬರುತ್ತದೆ.

ಮಾಲ್ಡಾ, ಮುರ್ಷಿದಾಬಾದ್ ಮತ್ತು ಉತ್ತರ, ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿನ ಎಸ್‌ಐಆರ್ ಪ್ರಕ್ರಿಯೆ ಅತ್ಯಂತ ಆಕ್ರಮಣಕಾರಿಯಾಗಿದೆ. ಅವು ಮುಸ್ಲಿಮ್ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಮತ್ತು ಫಲಿತಾಂಶಗಳನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗಿರುವ ಪ್ರದೇಶಗಳು.

ಆ ಜಿಲ್ಲೆಗಳಲ್ಲಿ ಒಳನುಸುಳುಕೋರರನ್ನು ಹೊರಹಾಕುವ ನಿರೂಪಣೆಯನ್ನು ಮುಂದೆ ಮಾಡಲಾಗುತ್ತಿದೆ. ಅದರ ಮೂಲಕ ನಿರ್ದಿಷ್ಟ ಧಾರ್ಮಿಕ ಮತ್ತು ನಿರ್ದಿಷ್ಟ ಭಾಷೆಯ ಜನರಿಗೆ ಮತದಾನದ ಹಕ್ಕು ನಿರಾಕರಿಸುವುದು ನಡೆದಿದೆ.

ಮೋದಿ ಸರಕಾರದ ಈ ಅಸಲಿ ಉದ್ದೇಶ, ಮಥುರಾಪುರದಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಅಮಿತ್ ಶಾ ಮಾಡಿದ ಘೋಷಣೆಗಳಲ್ಲಿ ಬಯಲಾಗಿದೆ. ಎಸ್‌ಐಆರ್ ಪ್ರಕ್ರಿಯೆ ಮೂಲಕ ಒಳನುಸುಳುಕೋರರನ್ನು ಇಲ್ಲವಾಗಿಸುವ ಬಗ್ಗೆ ಅವರು ಹೇಳಿದ್ದಾರೆ.

ನುಸುಳುಕೋರರ ನೆಪದಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರನ್ನು ಹೊರಹಾಕುವ ಪ್ರಕ್ರಿಯೆಯ ಮೂಲಕ, ಯಾವುದರ ಬಗ್ಗೆ ಆತಂಕ ವ್ಯಕ್ತವಾಗುತ್ತಿತ್ತೋ ಅದೇ ಆಗಲಿರುವುದನ್ನು ಅವರು ಖಚಿತಪಡಿಸಿದ್ದಾರೆ.

ಕಠಿಣ ಹಿಂದುತ್ವ ಅಜೆಂಡಾದ ಜಾರಿಗೆ ಸರಕಾರದ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.

1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಪರಿಣಾಮವಾಗಿ ಭಾರತಕ್ಕೆ ನಿರಾಶ್ರಿತರು ದೊಡ್ಡ ಪ್ರಮಾಣದಲ್ಲಿ ಬಂದರೆಂಬುದು ನಿಜ. ಆದರೆ ಈಗ ಬಿಜೆಪಿ ಆಡುತ್ತಿರುವ ಆಟ, ಹಾಗೆ ಬಂದವರಲ್ಲೇ ಕೋಮುವಾದಿ ದೃಷ್ಟಿಯಿಂದ ವಿಭಜನೆ ಮಾಡುತ್ತಿದೆ.

ಹಿಂದೂ ನಿರಾಶ್ರಿತರಿಗೆ ಪೌರತ್ವದ ಹಾದಿ ಸುಗಮಗೊಳಿಸಲಾಗುತ್ತಿದೆ. ಆದರೆ ಬಂಗಾಳಿ ಮಾತನಾಡುವ ಮುಸ್ಲಿಮರಲ್ಲಿ ಹೆಚ್ಚಿನವರು ದಶಕಗಳಿಂದ ಭಾರತದಲ್ಲಿ ವಾಸಿಸುತ್ತಿದ್ದರೂ, ಅಗತ್ಯ ದಾಖಲೆಗಳು ಅವರ ಬಳಿ ಇದ್ದರೂ, ಅವರನ್ನು ಒಳನುಸುಳುಕೋರರು ಎಂದು ವ್ಯವಸ್ಥಿತವಾಗಿ ಬ್ರಾಂಡ್ ಮಾಡಲಾಗುತ್ತಿದೆ.

ಅಸ್ಸಾಮಿನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸರಕಾರ ಈ ಹಿಂದೆ ಮಾಡಿದಂತೆ ತಾರತಮ್ಯದ ದೃಷ್ಟಿಯಿಂದ ಅವರನ್ನು ಒಳನುಸುಳುಕೋರರು ಎಂದು ಊಹಿಸಲಾಗುತ್ತದೆ. ಅವರ ವಿರುದ್ಧ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಇಂಥದೊಂದು ತಾರತಮ್ಯದ ದೃಷ್ಟಿಯಿಂದ ಸರಕಾರ ನಡೆದುಕೊಳ್ಳುತ್ತಿರುವಾಗ, ಚುನಾವಣಾ ಆಯೋಗದ ನಡೆ ಕೂಡ ಅದಕ್ಕೆ ತಕ್ಕಂತಿರುವುದು ಬಹಳ ಅಪಾಯಕಾರಿಯಾಗಿದೆ.

ಪ್ರಜಾಪ್ರಭುತ್ವದ ತಟಸ್ಥ ಅಂಪೈರ್ ಆಗಿರಬೇಕಿದ್ದ ಚುನಾವಣಾ ಆಯೋಗ ಇಲ್ಲಿ ಸರಕಾರಕ್ಕೆ ಏನು ಬೇಕೋ ಅದಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತ, ತನ್ನ ಸಾಂವಿಧಾನಿಕ ಘನತೆಯನ್ನು ಮರೆತಿದೆ.

ಅದು ಮತದಾರರ ಇಂಥ ಸಾಮೂಹಿಕ ಅಳಿಸುವಿಕೆಗಳನ್ನು ಪರಿಶೀಲಿಸುವ ವ್ಯವಸ್ಥೆಯಾಗಿ ನಿಲ್ಲಬೇಕಿತ್ತು. ಆದರೆ ಈಗ ಅದರ ಬದಲಾಗಿ ಸರಕಾರಕ್ಕೆ ಬೇಕಾದ ರೀತಿಯಲ್ಲಿ ಸಾಮೂಹಿಕ ಅಳಿಸುವಿಕೆಯನ್ನು ಸುಗಮಗೊಳಿಸುವ ಆಯೋಗವಾಗಿಬಿಟ್ಟಿದೆ.

ಸುಪ್ರೀಂ ಕೋರ್ಟ್‌ನ ಹಸ್ತಕ್ಷೇಪ ಮತ್ತು ನ್ಯಾಯಾಂಗ ಸಮಿತಿಯ ನೇಮಕಾತಿ ಹೊರತಾಗಿಯೂ, ತೆಗೆದುಹಾಕಲಾಗಿರುವ ಮತದಾರರ ಸಂಖ್ಯೆ 63.66 ಲಕ್ಷ ಆಗಿರುವುದು ಆತಂಕಕಾರಿ.

ಇದು ಸರಕಾರಕ್ಕೆ ಬೇಕಾದ ಪೂರ್ವನಿರ್ಧರಿತ ಪಟ್ಟಿ ತಯಾರಾಗಲು ಬರೀ ಹೌದಪ್ಪನಾಗಿ ಆಯೋಗ ಕೆಲಸ ಮಾಡಿದೆ ಎಂಬುದನ್ನು ಸೂಚಿಸುತ್ತದೆ.

ಲಕ್ಷಾಂತರ ಮತದಾರರನ್ನು ಹೀಗೆ ಹೊರಗಿಡಲಾಗುತ್ತಿರುವುದು ಸರಕಾರ ಬಯಸುತ್ತಿರುವ ಅನುಕೂಲತೆಗೆ ಪೂರಕವಾಗಿ ನಡೆದ ಪ್ರಕ್ರಿಯೆಯಾಗಿ ಕಾಣುತ್ತದೆ. ಅತ್ಯಂತ ನಿರ್ಣಾಯಕ ಅವಧಿಯಲ್ಲಿ ಆ ಜನರ ಮತದಾನದ ಹಕ್ಕನ್ನು ಕಸಿಯಲಾಗಿದೆ ಎಂಬುದು ಬಹಳ ಸ್ಪಷ್ಟವಾಗಿದೆ.

ಟಿಎಂಸಿ ಇದನ್ನು ತನ್ನ ಪ್ರಮುಖ ಮತಬ್ಯಾಂಕ್‌ಗೆ ನೇರ ಹೊಡೆತ ಎಂದು ಹೇಳಿದೆ. ಆದರೆ ಕಾಂಗ್ರೆಸ್ ಮತ್ತು ಸಿಪಿಐಎಂ, ಒಳನುಸುಳುಕೋರರ ರಕ್ಷಕರು ಎಂದು ಬಿಜೆಪಿ ತಮ್ಮನ್ನು ಬಿಂಬಿಸುವುದರಿಂದ ತಪ್ಪಿಸಿಕೊಳ್ಳುವ ತಂತ್ರವಾಗಿ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿವೆ.

ಆ ಪಕ್ಷಗಳು ಮೌನ ವಹಿಸಿರುವುದು, ಬಿಜೆಪಿ ತನಗೆ ಬೇಕಾದಂತೆ ಮತದಾರರ ಸ್ವರೂಪವನ್ನು ಮರುರೂಪಿಸಲು ಅವಕಾಶ ಮಾಡಿಕೊಟ್ಟಂತಾಗಿದೆ.

ಆದರೆ ಇದರಿಂದಾಗುವ ವಿಧ್ವಂಸಕ ಪರಿಣಾಮಗಳು ಸಾಮಾನ್ಯವಾಗಿರುವುದಿಲ್ಲ. ಹೊರಗಿಡಲಾದ ಶೇ. 8 ಮತದಾರರು ಹೆಚ್ಚಾಗಿ ವಿರೋಧ ಪಕ್ಷದ ಭದ್ರಕೋಟೆಗಳಿಗೆ ಸೇರಿದವರಾಗಿದ್ದಾರೆ.

ಅವರನ್ನು ತೆಗೆದುಹಾಕುವುದರಿಂದ ನ್ಯಾಯಯುತ ಚುನಾವಣೆ ಸಾಧ್ಯತೆಯೇ ಇಲ್ಲವಾಗುತ್ತದೆ. ಅಲ್ಲದೆ, ಇದು ಆ ಜನರ ಪೌರತ್ವ ಮತ್ತು ಘನತೆಯನ್ನು ಕಸಿದುಕೊಳ್ಳುವ ಮೊದಲ ಹಂತವಾಗಿದೆ.

ಅಧಿಕಾರ ಕಸಿಯುವ ಹೆಜ್ಜೆಯಾಗಿ, ಆ ಜನರ ನ್ಯಾಯಯುತ ಹಕ್ಕನ್ನೇ ಕಸಿಯಲಾಗಿದೆ.

Tags

SIRWest Bengal
share
ಅಜಿತ್ ಕೆ.ಸಿ.
ಅಜಿತ್ ಕೆ.ಸಿ.
Next Story
X