Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಂತೂ ಇಂತೂ ಸಮೀಕ್ಷೆ ಮುಗಿದಿದೆ: ಆಯೋಗದ...

ಅಂತೂ ಇಂತೂ ಸಮೀಕ್ಷೆ ಮುಗಿದಿದೆ: ಆಯೋಗದ ಮುಂದಿನ ಪ್ರಕಾರ್ಯವೇನು?

ಕೆ.ಎನ್. ಲಿಂಗಪ್ಪಕೆ.ಎನ್. ಲಿಂಗಪ್ಪ4 Nov 2025 9:58 AM IST
share
ಅಂತೂ ಇಂತೂ ಸಮೀಕ್ಷೆ ಮುಗಿದಿದೆ: ಆಯೋಗದ ಮುಂದಿನ ಪ್ರಕಾರ್ಯವೇನು?

31 ಲಕ್ಷದ 4 ಸಾವಿರ ಜನವಸತಿ ಮನೆಗಳು ಖಾಲಿ ಇವೆ ಎಂಬುದಾಗಲಿ ಅಥವಾ ಬೀಗ ಹಾಕಲಾಗಿದೆ ಎಂಬುದಾಗಲಿ ನಂಬಲಸಾಧ್ಯ. ಇದನ್ನು ಯಾರು ದೃಢೀಕರಿಸಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಸಂಬಂಧಿಸಿದ ಗಣತಿದಾರರು ಪ್ರಾಮಾಣಿಕವಾಗಿ ಹೇಳಿದ್ದಾರೆ ಎಂಬುದನ್ನು ನಂಬಲು ಹೇಗೆ ಸಾಧ್ಯ?

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಆಯೋಗವೊಂದು ಕಳೆದ ಮೂರು ದಶಕಗಳಿಂದ ಅಸ್ತಿತ್ವದಲ್ಲಿದೆ. ಈ ಆಯೋಗ ಸುಖಾಸುಮ್ಮನೆ ಆವಿರ್ಭೂತವಾದುದಲ್ಲ. ಇದೊಂದು ಶಾಸನಬದ್ಧ ಸಂಸ್ಥೆಯಾಗಿ ರೂಪು ತಳೆದಿದೆ. ಈ ಶಾಸನಬದ್ಧ ಸಂಸ್ಥೆಯೊಂದರ ಇರುವಿಕೆಗೆ ದೇಶಾದ್ಯಂತ ಮಂಡಲ್ ಪ್ರಕರಣವೆಂದು ಪ್ರಖ್ಯಾತಗೊಂಡಿರುವ ಇಂದ್ರಾ ಸಹಾನಿ vs ಭಾರತ ಒಕ್ಕೂಟ ಮೊಕದ್ದಮೆಯಲ್ಲಿ ಸರ್ವೋಚ್ಚ ನ್ಯಾಯಾಲಯದ 9 ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠ ಹಿಂದುಳಿದ ವರ್ಗಗಳಿಗೆ ಕೇಂದ್ರ ಸರಕಾರ ಮೀಸಲಾತಿ ದೊರಕಿಸಿ ಕೊಟ್ಟದ್ದನ್ನು ಪುರಸ್ಕೃತಗೊಳಿಸಿ ನೀಡಿದ ತೀರ್ಪಿನ ಭಾಗವಾಗಿ ಕೊಟ್ಟ ಸೂಚನೆಯಂತೆ ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಗಳು ಅಗತ್ಯ ಕಾಯ್ದೆಗಳನ್ನು ರಚಿಸುವುದರ ಮೂಲಕ ಅಸ್ತಿತ್ವಕ್ಕೆ ಬಂದವು ಎಂಬುದು ಹಳತಾದ ವಿಷಯ.

ಸರ್ವೋಚ್ಚ ನ್ಯಾಯಾಲಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಗಳನ್ನು ಅಸ್ತಿತ್ವಗೊಳಿಸಲು ನೀಡಿರುವ ಮುಖ್ಯ ಕಾರಣವೆಂದರೆ-ನಾಗರಿಕರ ಯಾವುದೇ ವರ್ಗವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ಬಂದ ಕೋರಿಕೆಗಳನ್ನು ಪರಿಶೀಲಿಸುವುದು ಮತ್ತು ಯಾವುದೇ ಅನರ್ಹ ಹಿಂದುಳಿದ ವರ್ಗವನ್ನು ಅಂತಹ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅಥವಾ ಅರ್ಹ ಹಿಂದುಳಿದ ವರ್ಗವನ್ನು ಸೇರಿಸಲಾಗಿಲ್ಲವೆಂದು ಬಂದ ದೂರುಗಳ ವಿಚಾರಣೆ ಮಾಡುವುದು ಹಾಗೂ ಸರಕಾರಕ್ಕೆ ಅದು ಸಮುಚಿತವೆಂದು ಭಾವಿಸುವಂಥ ಸಲಹೆಯನ್ನು ನೀಡುವುದು. ಇವೇ ನುಡಿಗಟ್ಟುಗಳನ್ನು ಕರ್ನಾಟಕದ ಕಾಯ್ದೆಯಲ್ಲಿಯೂ ಅಳವಡಿಸಲಾಗಿದೆ. ಈ ನುಡಿಗಟ್ಟಿನಲ್ಲಿ ಒಂದು ಅಂಶವಂತೂ ಸ್ಪಷ್ಟವಾಗುತ್ತದೆ. ನಾಗರಿಕರ ಯಾವುದೇ ವರ್ಗ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಬಹುದು. ಹಾಗೆ ಪಟ್ಟಿಯಲ್ಲಿ ಸೇರಲು ಇಂಥದೇ ಜಾತಿ ಎಂಬುದಿಲ್ಲ. ಸಂವಿಧಾನದ ವಿಧಿ 15 (4)ರ ಅನ್ವಯ ಯಾವುದೇ ಜಾತಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಅಂಥ ಜಾತಿಯು ವಿಧಿ 16(4)ರಂತೆ ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲದಿದ್ದಲ್ಲಿ, ಅಂಥ ನಾಗರಿಕ ವರ್ಗಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲವಕಾಶವಿದೆ.

ಮತ್ತೊಂದು ಪ್ರಮುಖವಾದ ಅಂಶವನ್ನು ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. ಯಾವುದೇ ರಾಜ್ಯ ಈಗಾಗಲೇ ಮೀಸಲಾತಿ ಪಟ್ಟಿಯನ್ನು ಹೊಂದಿದ್ದಲ್ಲಿ ಅಂಥ ಪಟ್ಟಿಯನ್ನು ಪ್ರತೀ 10 ವರ್ಷಕ್ಕೊಮ್ಮೆ ಪುನರ್ ವಿಮರ್ಶೆ ಮಾಡಬೇಕು ಎಂಬುದೇ ಆ ಸೂಚನೆ. ಈ ಸೂಚನೆಯನ್ನು ಪಾಲಿಸಲು ಅಗತ್ಯವಾಗಿ ಪ್ರಾಯೋಗಿಕ ದತ್ತಾಂಶಗಳು ಬೇಕೇ ಬೇಕು. ಈ ದತ್ತಾಂಶಗಳ ಜೊತೆಗೆ ರಾಜ್ಯದ ಅಧೀನದಲ್ಲಿರುವ ಸೇವೆಯ ಜಾತಿವಾರು ಪ್ರಾತಿನಿಧ್ಯದ ದ್ವಿತೀಯ ಮೂಲದ ಮಾಹಿತಿಗಳ ಅವಶ್ಯಕತೆಯೂ ಇದೆ. ಪ್ರಾರಂಭಿಕವಾಗಿ ಕರ್ನಾಟಕದ ಎಲ್ಲ ಜನವರ್ಗಗಳ ಸ್ಥಿತಿಗತಿಗಳನ್ನೊಳಗೊಂಡ ದತ್ತಾಂಶಗಳು ಬೇಕು.

ಈ ದತ್ತಾಂಶಗಳನ್ನು ಪಡೆಯುವ ಉದ್ದೇಶದಿಂದಲೇ ಕಾಯ್ದೆಯ ಉಪ ಪ್ರಕರಣ 9(2)ರಲ್ಲಿ ನಿರ್ದಿಷ್ಟ ಪಡಿಸಿರುವಂತೆ, ಅಸ್ತಿತ್ವದಲ್ಲಿರುವ ಪಟ್ಟಿಯನ್ನು ಪರಿಶೀಲನೆಗೊಳಪಡಿಸಲು (ಉಪ ಪ್ರಕರಣ 11) ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಕೈಗೊಳ್ಳುವುದು ಅತ್ಯಗತ್ಯ.

ಸರ್ವೋಚ್ಚ ನ್ಯಾಯಾಲಯದ ಆದೇಶ ಮತ್ತು ಕಾಯ್ದೆ ಅನುಸಾರ ರಾಜ್ಯದ ಸಮಸ್ತ ಜನರ ಪಾಲ್ಗೊಳ್ಳುವಿಕೆಯ ಅನಿವಾರ್ಯತೆಯನ್ನು ಸೂಚಿಸುತ್ತದೆ. ಪ್ರಸ್ತುತ ಸಮೀಕ್ಷೆಯ ಹಿನ್ನೆಲೆಯ ವಿವರವನ್ನು ಮತ್ತೆ ಹೇಳುವ ಅವಶ್ಯಕತೆ ಇಲ್ಲ. ಅದು ತಿಳಿದಿರುವುದೇ ಆಗಿದೆ. 2015ರಲ್ಲಿ ಎಚ್. ಕಾಂತರಾಜು ಆಯೋಗ ಸಮೀಕ್ಷೆ ನಡೆಸಲಣಿಯಾಗುತ್ತಿರುವ ಸಂದರ್ಭದಲ್ಲಿ ಬೀದರಿನ ನಾಗರಿಕರೊಬ್ಬರು ಉಚ್ಚ ನ್ಯಾಯಾಲಯದ ಕದ ತಟ್ಟಿದರು. ಆದರೆ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಮಧ್ಯಪ್ರವೇಶಿಸಲಿಲ್ಲ. ಸಮೀಕ್ಷೆ ನಡೆಯಲು ಅವಕಾಶ ಮಾಡಿಕೊಟ್ಟಿತು, ಜೊತೆಗೆ ಯಾವ ನಿಬಂಧನೆಯನ್ನೂ ವಿಧಿಸಲಿಲ್ಲ ಎಂಬುದು ಗಮನೀಯ ಅಂಶ.

ಆಯೋಗ 2015 ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸಮೀಕ್ಷೆ ಕಾರ್ಯ ಪೂರೈಸಿತು. 2011ರ ರಾಷ್ಟ್ರೀಯ ಜನಗಣತಿ ಪ್ರಕಾರ ಕರ್ನಾಟಕದ ಜನಸಂಖ್ಯೆ 6 ಕೋಟಿ 10 ಲಕ್ಷ. ಜನಸಂಖ್ಯಾ ಬೆಳವಣಿಗೆಯನ್ನು 3 ವರ್ಷಕ್ಕೆ ಶೇ. 1ರಂತೆ 2015ಕ್ಕೆ ಅಂದಾಜಿಸಿದರೆ 6 ಕೋಟಿ 28 ಲಕ್ಷದ 30 ಸಾವಿರ. ಎಚ್. ಕಾಂತರಾಜು ಆಯೋಗ ನಡೆಸಿರುವ ಸಮೀಕ್ಷೆಯಲ್ಲಿ 5 ಕೋಟಿ 98 ಲಕ್ಷ ಜನಸಂಖ್ಯೆ ಇದೆ. ಗುರಿ ಇದ್ದದ್ದು 6 ಕೋಟಿ 28 ಲಕ್ಷದ 30 ಸಾವಿರ. ಅನೇಕ ಅಧಿಕಾರಿ ನೌಕರರ(ವಿಶೇಷವಾಗಿ ಬಿಬಿಎಂಪಿಯಲ್ಲಿ) ಅಸಹಕಾರದ ನಡುವೆಯೂ ಪ್ರತಿಶತ 95ರಷ್ಟು ಜನಸಂಖ್ಯೆ ಎಣಿಕೆಯಾಗಿದೆ ಎಂಬುದು ಖಚಿತವಾಯಿತು. ಸಮೀಕ್ಷೆಯ ದತ್ತಾಂಶ ಅನೇಕ ರಾಜಕೀಯ ಏಳು ಬೀಳುಗಳನ್ನು ಕಂಡು 2024ರ ಫೆಬ್ರವರಿಯಲ್ಲಿ ಸರಕಾರದ ಕೈ ಸೇರಿತು. ಮುಖ್ಯಮಂತ್ರಿಗಳು ಸಮೀಕ್ಷೆಯ ದತ್ತಾಂಶಗಳ ಜೊತೆಗೆ, ಹೊಸದಾಗಿ ಸಿದ್ಧಪಡಿಸಿದ್ದ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡುವವರಿದ್ದರು ಎಂಬ ಅಂಶ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತು. ಜೊತೆಗೆ ಕಾಂಗ್ರೆಸ್ ಪಕ್ಷದ ವರಿಷ್ಠರ ಬೆಂಬಲ ಕೂಡ ಇತ್ತು ಎಂದು ಹೇಳಲಾಗಿತ್ತು.

ಆದರೆ ಅದೇ ಕಾಂಗ್ರೆಸ್ ಪಕ್ಷದ ವರಿಷ್ಠರು ಸಮೀಕ್ಷೆಯ ದತ್ತಾಂಶವನ್ನು ಬಿಡುಗಡೆ ಮಾಡದಂತೆ ತಡೆಯೊಡ್ಡಿದ್ದಾರೆ ಎಂಬ ಸಂಗತಿಯನ್ನು ಜನ ಹಾದಿ ಬೀದಿಯಲ್ಲಿ ಮಾತನಾಡಿಕೊಳ್ಳುತ್ತಿದ್ದರು. ರಾಜ್ಯದ ರಾಜಕೀಯದಲ್ಲಿ ಪ್ರಬಲರಾಗಿರುವ ಎರಡು ಜಾತಿಗಳ ಕೈವಾಡ ಈ ತಡೆಯ ಹಿಂದಿದೆ ಎಂಬುದೂ ಕೂಡ ಬೆಳಕಿಗೆ ಬಂದಿತು. ಆ ಜಾತಿಗಳ ಮುಖಂಡರುಗಳು ಮಾಧ್ಯಮಗಳಲ್ಲಿ ಸುದ್ದಿ ಮಾಡುವುದರ ಮೂಲಕ ಅದು ಬಯಲಾಯಿತು. ಈ ಎರಡು ಬಲಾಢ್ಯ ಜಾತಿಗಳ ವಿರುದ್ಧ ಹೆಣಗಲು ಸುತಾರಾಂ ಸಿದ್ಧರಿಲ್ಲದ ಮುಖ್ಯಮಂತ್ರಿಗಳಿಗೆ ದೇವರೇ ಕರುಣಿಸಿದ ವರವಾಯಿತದು. ಬಲಹೀನ (ಈ ಪದ ಬಳಸಲು ನನಗೆ ನಾಚಿಕೆಯಾಗುತ್ತದೆ) ಮುಗ್ಧ ಹಿಂದುಳಿದವರ ಆರ್ತಧ್ವನಿ ಅರಣ್ಯ ರೋದನವಾಯಿತು. ಎಚ್. ಕಾಂತರಾಜ ಆಯೋಗದ ಸಮೀಕ್ಷೆಯ ದತ್ತಾಂಶಗಳು ವಿಧಾನಸೌಧದ ಗಟಾರದಲ್ಲಿ ಕೊಚ್ಚಿ ಹೋದವು. ಜೊತೆಗೆ ರಾಜ್ಯ ಬೊಕ್ಕಸದ ರೂ. 160 ಕೋಟಿಯೂ ನಿರರ್ಥಕವಾಯಿತು.

ಇನ್ನು ಎರಡನೇ ಕಥಾನಕದತ್ತ ಹೋಗೋಣ. ಮೊದಲನೇ ಸಮೀಕ್ಷೆಯ ದತ್ತಾಂಶ ರಾಜಕಾರಣದ ರಾಡಿಯಲ್ಲಿ ಹುದುಗಿದ ನಂತರ ಸರಕಾರ ಎರಡನೇ ಸಮೀಕ್ಷೆಯನ್ನು ಮರುಸಮೀಕ್ಷೆ ಎಂದು ನಾಮಕರಣ ಮಾಡಿ ಸಮೀಕ್ಷೆಗೆ ಸಿದ್ಧವಾಯಿತು. ಅದಕ್ಕಾಗಿಯೇ, ಅವಸರವಸರದಲ್ಲಿ ಆಯೋಗದ ಪದಾಧಿಕಾರಿಗಳನ್ನು ನೇಮಕ ಮಾಡಿ ಸಾಕಷ್ಟು ಹಣವನ್ನೂ ಬಿಡುಗಡೆ ಮಾಡಿತು. ಸಮೀಕ್ಷೆ ಮಾಡಲು ಶಿಕ್ಷಕರ ಅವಶ್ಯಕತೆ ಇದೆ. ಆದರೆ ಅವರನ್ನು ಸಮೀಕ್ಷೆ ಕಾರ್ಯಕ್ಕಾಗಿ ಬೇಸಿಗೆ ರಜಾದಿನ ಹೊರತುಪಡಿಸಿ ಬೇರೆ ಸಂದರ್ಭದಲ್ಲಿ ಬಳಸಿಕೊಳ್ಳಲು ಕಷ್ಟ ಸಾಧ್ಯ ಎಂಬ ಮಾತಿತ್ತು. ಆದರೂ ಸರಕಾರದ ಧಾವಂತ ಏನಿತ್ತೋ ತಿಳಿಯದು. ದಸರಾ ರಜಾ ಅವಧಿಯಲ್ಲಿ ಸಮೀಕ್ಷೆ ಮಾಡಿ ಮುಗಿಸಬೇಕೆಂಬ ಏಕೈಕ ಕಾರಣದಿಂದ ಆಯೋಗ ಪ್ರಾರಂಭಿಕ ಕೆಲಸಗಳನ್ನು ಅತ್ಯವಸರದಲ್ಲಿಯೇ ಕೈಗೊಂಡು ಸಮೀಕ್ಷೆಗೆ ಸಿದ್ಧವಾಗ ತೊಡಗಿತು. ಅದಾಗ ತಾನೇ ಪರಿಶಿಷ್ಟ ಜಾತಿಯ ಒಳಮೀಸಲಾತಿಗಾಗಿ ನಡೆಸಿದ್ದ ಸಮೀಕ್ಷೆಯ ಮಾದರಿಯನ್ನೇ ಅನುಸರಿಸಲು ಹಿಂದುಳಿದ ವರ್ಗಗಳ ಆಯೋಗ ಯೋಚಿಸಿತ್ತು. ಆದರೆ ಮತದಾರರ ಪಟ್ಟಿಯ ಹಗರಣದಿಂದಾಗಿ ಅದನ್ನು ಕೈ ಬಿಟ್ಟು ವಿದ್ಯುಚ್ಛಕ್ತಿ ಮಂಡಳಿಯ ಮೀಟರ್ ಆಧರಿಸಿ ಸಮೀಕ್ಷೆ ನಡೆಸುವುದೆಂದು ತೀರ್ಮಾನಿಸಿತು. ಅದೇ ಸಮಯಕ್ಕೆ ಎರಡು ಬಲಶಾಲಿ ಜಾತಿಗಳ ಸಂಘಗಳು ಉಚ್ಚ ನ್ಯಾಯಾಲಯದಲ್ಲಿ ಸಮೀಕ್ಷೆಯ ಕಾನೂನು ಬದ್ಧತೆಯನ್ನು ಪ್ರಶ್ನಿಸಿದವು. ಆದರೆ ನ್ಯಾಯಾಲಯ ಸಮೀಕ್ಷೆ ನಡೆಯಲು ಅವಕಾಶ ನೀಡಿತಾದರೂ ಎರಡು ಅಧಿಷರತ್ತು ವಿಧಿಸಿತು. ಒಂದನೆಯದು, ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಯಾವುದೇ ನಾಗರಿಕರನ್ನು ಒತ್ತಾಯಿಸುವ ಹಾಗಿಲ್ಲ. ಎರಡನೆಯದು, ದತ್ತಾಂಶಗಳನ್ನು ಆಯೋಗ ಯಾರೊಡನೆಯೂ ಹಂಚಿ ಕೊಳ್ಳುವ ಹಾಗಿಲ್ಲ. ಮೊದಲನೆಯ ಅಧಿಷರತ್ತಿನ ಕಾರಣ ಬಹುತೇಕ ವಿಪ್ರರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲಿಲ್ಲ. ಆಯೋಗ ನ್ಯಾಯಾಲಯ ವಿಧಿಸಿರುವ ಈ ಅಧಿಷರತ್ತುಗಳನ್ನು ರದ್ದುಪಡಿಸುವಂತೆ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕಾಗಿತ್ತು. ನ್ಯಾಯಾಲಯದ ಆ ಅಧಿಷರತ್ತೇ ಕೆಲವು ನಾಗರಿಕರಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಯಿತು. ಆಯೋಗ ದಸರಾ ರಜಾ ಅವಧಿಯಲ್ಲಿಯೇ ಸಮೀಕ್ಷಾ ಕಾರ್ಯವನ್ನು ಪ್ರಾರಂಭಿಸಿತು. ಅದು ಸೆಪ್ಟಂಬರ್ 22ರಿಂದ ಪ್ರಾರಂಭಗೊಂಡು ಅಕ್ಟೋಬರ್ 31ಕ್ಕೆ ಮುಕ್ತಾಯವಾಯಿತು. ಮೊಬೈಲ್ ಆ್ಯಪ್ ಬಳಸಿ ದತ್ತಾಂಶಗಳನ್ನು ಸಂಗ್ರಹಿಸಿದ್ದುದರಿಂದ ಪ್ರತಿದಿನವೂ ಸಮೀಕ್ಷೆಯ ಪ್ರಗತಿ ದೊರೆಯುತ್ತಿತ್ತು. ಸಮೀಕ್ಷೆಯನ್ನು ಮತ್ತೆ ವಿಸ್ತರಿಸಿ ನವೆಂಬರ್ 1ರಿಂದ 10ರ ತನಕ ಆನ್‌ಲೈನ್‌ನಲ್ಲಿ ಮಾಹಿತಿ ಸಂಗ್ರಹಿಸಲು ಆಯೋಗ ನಿರ್ಧರಿಸಿದೆ. ಆದರೆ ಪ್ರತಿಶತ 0.5ರಷ್ಟು ಸಾಧ್ಯವಿಲ್ಲ ಎಂಬುದನ್ನು ಹಿಂದಿನ ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ.

ಅದಿರಲಿ, ಪ್ರಸ್ತುತ ಆಯೋಗ ಸಮೀಕ್ಷೆಯ ದತ್ತಾಂಶಗಳ ವಿವರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಆಯೋಗದ ಗುರಿ ಇದ್ದದ್ದು 6 ಕೋಟಿ 85 ಲಕ್ಷದ 38 ಸಾವಿರ. ಆದರೆ ಗುರಿಯ ಸಮೀಪಕ್ಕೂ ಬರಲಾಗಿಲ್ಲ ಎಂಬುದು ಖೇದಕರ. ಇದು ಸರಕಾರಿ ನೌಕರ ಮತ್ತು ಅಧಿಕಾರಿಗಳ ಜವಾಬ್ದಾರಿ ಮತ್ತು ಪ್ರಾಮಾಣಿಕತೆಯ ಕೊರತೆಯನ್ನೂ ಎತ್ತಿ ತೋರಿಸುತ್ತದೆ. ಕೆಲವು ಗಣತಿದಾರರ ಮನೋಧೋರಣೆಗೆ ಒಂದು ಚಿಕ್ಕ ಉದಾಹರಣೆ: ಈ ಲೇಖಕನ ಮನೆ ಸಮೀಕ್ಷೆ ಆಗಿರುವ ಹಾಗೆ ಬರೆದುಕೊಳ್ಳಲಾಗಿತ್ತು. ಕೊನೆಯ ದಿನವಾದರೂ ಗಣತಿದಾರರು ಬರಲಿಲ್ಲ. ಸಂಬಂಧಿಸಿದ ಅಧಿಕಾರಿಗೆ ಕರೆ ಹೋದ ನಂತರ, ಪಾಲಿಕೆಯ ಕಂದಾಯ ನಿರೀಕ್ಷಕ ಮನೆಗೇ ಬಂದು ಸಮೀಕ್ಷೆ ಮಾಡಿದರು.

ವಾಸ್ತವವಾಗಿ ಈವರೆಗೆ ಆಗಿರುವ ಸಮೀಕ್ಷೆಯಲ್ಲಿ ಕಂಡು ಬಂದ ಜನಸಂಖ್ಯೆ 6 ಕೋಟಿ 13 ಲಕ್ಷದ 83 ಸಾವಿರ. ಪ್ರತಿಶತ 89ರಷ್ಟು ಸಮೀಕ್ಷೆಯಾಗಿದೆ. ಗುರಿ ತಲುಪಲಾಗದಿರುವುದಕ್ಕೆ ಆಯೋಗ ಹೇಳಿರುವ ಕಾರಣಗಳಿವು- 4 ಲಕ್ಷದ 22 ಸಾವಿರ ಕುಟುಂಬಗಳು ಮಾಹಿತಿ ನೀಡಿಲ್ಲ. 34 ಲಕ್ಷದ 49 ಸಾವಿರ ಮನೆಗಳಿಗೆ ಬೀಗ ಹಾಕಲಾಗಿತ್ತು ಅಥವಾ ಮನೆಗಳು ಖಾಲಿ ಇದ್ದವು ಎಂಬುದು. ಬೆಂಗಳೂರು ನಗರದಲ್ಲಿ 29 ಲಕ್ಷ ಮನೆಗಳು ಖಾಲಿ ಅಥವಾ ಬೀಗ ಅಥವಾ ಸಮೀಕ್ಷೆ ಮಾಡಲಾಗದವು ಎಂದು ಗುರುತಿಸಲಾಗಿದೆ. ಇದು ಜಿ.ಬಿ.ಎ. ಅಧಿಕಾರಿಗಳ ಕಾರ್ಯ ತತ್ಪರತೆಯನ್ನು ಖಂಡಿತ ಎತ್ತಿ ತೋರಿಸುತ್ತದೆ.

ಬಹುಶಃ 4 ಲಕ್ಷದ 22 ಸಾವಿರ ಮನೆಗಳವರು ವಿಪ್ರರೇ ಇರಬೇಕು. ಅವರ ಸಂಖ್ಯೆ ಆಜು ಬಾಜು 15ರಿಂದ 16 ಲಕ್ಷ ವಿದೆ. ಆ ಮೊದಲೇ ಭಾಗವಹಿಸಬಾರದೆಂದು ಅವರು ನಿರ್ಧರಿಸಿಯಾಗಿತ್ತು. ಮತ್ತೆ, 34 ಲಕ್ಷದ 49 ಸಾವಿರ ಮನೆಗಳಿಗೆ ಬೀಗ ಹಾಕಲಾಗಿತ್ತು ಅಥವಾ ಖಾಲಿ ಇದ್ದವು ಎಂದು ಹೇಳಲಾಗಿದೆ. ಇವುಗಳಲ್ಲಿ ಪ್ರತಿಶತ 10ರಷ್ಟು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರಬಹುದು ಎಂದು ಇಟ್ಟುಕೊಂಡರೂ ಉಳಿದ 31 ಲಕ್ಷದ 4 ಸಾವಿರ ಜನವಸತಿ ಮನೆಗಳು ಎಂದು ಪರಿಗಣಿಸಬಹುದು. ಇಷ್ಟು ಮನೆಗಳು ಖಾಲಿ ಇವೆ ಎಂಬುದಾಗಲಿ ಅಥವಾ ಬೀಗ ಹಾಕಲಾಗಿದೆ ಎಂಬುದಾಗಲಿ ನಂಬಲಸಾಧ್ಯ. ಇದನ್ನು ಯಾರು ದೃಢೀಕರಿಸಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಸಂಬಂಧಿಸಿದ ಗಣತಿದಾರರು ಪ್ರಾಮಾಣಿಕವಾಗಿ ಹೇಳಿದ್ದಾರೆ ಎಂಬುದನ್ನು ನಂಬಲು ಹೇಗೆ ಸಾಧ್ಯ? ಹಾಗೆ ಬೆಂಗಳೂರಿನಲ್ಲಿಯೂ ಕೂಡ ಅದೇ ಅಪ್ರಾಮಾಣಿಕತೆ ಎದ್ದು ಕಾಣಿಸುವುದು.

ಈ ಅಂಕಿ ಅಂಶಗಳೇ ಸಾರಿ ಹೇಳುತ್ತಿವೆ ಋಜು ಮಾರ್ಗದಲ್ಲಿ ಸಮೀಕ್ಷೆ ನಡೆದಿಲ್ಲ ಎಂಬುದನ್ನು. ಇದಕ್ಕೆ ಮತ್ಯಾವ ಪುರಾವೆಯೂ ಬೇಕಿಲ್ಲ. ಒಟ್ಟಿನಲ್ಲಿ ಸಮೀಕ್ಷೆಗೆ ಅಂತ ಖರ್ಚಾದದ್ದು ರೂ. 450 ಕೋಟಿಗೂ ಅಧಿಕ.

2015ರ ಸಮೀಕ್ಷೆಯಲ್ಲಿ ಕಂಡುಬಂದ ಜನಸಂಖ್ಯೆ ಶೇ. 95ರಷ್ಟಿತ್ತು. 2025ರ ಪ್ರಸ್ತುತ ನಡೆದ ಸಮೀಕ್ಷೆಯಲ್ಲಿ ಶೇ. 89ರಷ್ಟು ಜನಸಂಖ್ಯೆ ಇದೆ.ಶೇ. 6ರಷ್ಟು ವ್ಯತ್ಯಾಸವಿದೆ.

ಹಿಂದಿನ ಸಮೀಕ್ಷೆ ಶೇ. 95ರಷ್ಟಿದ್ದರೂ ಅವರವರ ಜನಾಂಗದ ಜನಸಂಖ್ಯೆಯು ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದು ಎರಡು ರಾಜಕೀಯ ಬಲಿಷ್ಠ ಜಾತಿಗಳು ಸಮೀಕ್ಷೆ ಅವೈಜ್ಞಾನಿಕವಾಗಿದೆ ಎಂದು ವರಾತ ತೆಗೆದು, ಸಮೀಕ್ಷೆಯ ದತ್ತಾಂಶವನ್ನು ಮೂಲೆಗುಂಪು ಮಾಡಿದರು. ಈಗಿನ ದತ್ತಾಂಶದ ಬಗ್ಗೆಯೂ ಮತ್ತೆ ಅಪಸ್ವರ ತೆಗೆಯುವುದಿಲ್ಲ ಎಂಬ ಗ್ಯಾರಂಟಿ ಆಯೋಗ ಮತ್ತು ಸರಕಾರಕ್ಕೆ ಇದೆಯೇ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಎಂತಾದರೂ ಇರಲಿ ಸಮೀಕ್ಷೆ ಕಾರ್ಯವಂತೂ ಪೂರ್ಣಗೊಂಡಿದೆ. ಹಾಗಂತ ಆಯೋಗವೇ ಹೇಳಿದೆ. ಡಿಜಿಟಲ್ ಮೂಲಕ ದತ್ತಾಂಶ ಸಂಗ್ರಹಿಸಿರುವುದರಿಂದ ಪ್ರಾಯೋಗಿಕ ಮಾಹಿತಿಗಳು ಆಯೋಗದ ಬೆರಳ ತುದಿಯಲ್ಲಿಯೇ ಇವೆ. ಸರಕಾರದ ಅಧೀನದಲ್ಲಿರುವ ಸೇವೆಗಳ ದ್ವಿತೀಯ ಮೂಲದ ಮಾಹಿತಿಗಳನ್ನು ಪಡೆದುಕೊಳ್ಳುವುದು ಅತ್ಯವಶ್ಯಕ. ಸರಕಾರದ ಎಲ್ಲಾ ಇಲಾಖೆಗಳು, ನಿಗಮ-ಮಂಡಳಿಗಳು, ಆಯೋಗಗಳು, ತರಬೇತಿ ಸಂಸ್ಥೆಗಳು, ನಿರ್ದೇಶಕ-ಆಯುಕ್ತಾಲಯಗಳು, ವಿಶ್ವವಿದ್ಯಾನಿಲಯಗಳು, ಪುರಸಭೆ-ಪಾಲಿಕೆಗಳು ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಮಾಹಿತಿಗಳು ಸಂಬಂಧಿಸಿವೆ.

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಪ್ರಸ್ತುತ ಇರುವ ಮೀಸಲಾತಿ ಪಟ್ಟಿಯು ಜಾರಿಗೆ ಬಂದದ್ದು 1994ರಲ್ಲಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ-1995 ಉಪ ಪ್ರಕರಣ 11ರ ರೀತ್ಯ ಪ್ರತೀ 10 ವರ್ಷಗಳಿಗೊಮ್ಮೆ ಮೀಸಲಾತಿ ಪಟ್ಟಿಯನ್ನು ನಿಯತಕಾಲಿಕ ಪರಿಷ್ಕರಣೆ ಮಾಡಬೇಕಾಗಿದೆ. ಆದರೆ, ಈವರೆಗೂ ಆಯೋಗ ಪರಿಷ್ಕರಣೆ ಕಾರ್ಯ ಕೈಗೊಂಡಿಲ್ಲ. ಈ ಪ್ರಕಾರ್ಯ ನ್ಯಾಯಾಲಯದಲ್ಲಿ ಪ್ರಶ್ನಾರ್ಹವಾಗಿರುವುದರಿಂದ ಆಯೋಗ ಕಡ್ಡಾಯವಾಗಿ ಕೈಗೊಳ್ಳಬೇಕಾಗಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿ ಜಾರಿಯಲ್ಲಿರುವುದರಿಂದ ಹೊಸದಾಗಿ ಜಾತಿಗಳನ್ನು ಹಿಂದುಳಿದ ವರ್ಗಗಳಾಗಿ ವರ್ಗೀಕರಿಸಬೇಕಾದ ಅಗತ್ಯವಿಲ್ಲ ಸದ್ಯ.

ಉಚ್ಚ ನ್ಯಾಯಾಲಯ ನೀಡಿರುವ ಎರಡು ನಿಬಂಧನೆಗಳ ಬಗ್ಗೆ ಮುಂದಿನ ವಿಚಾರಣೆಯೊಳಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ, ‘ಸರಕಾರಕ್ಕೂ ಸಮೀಕ್ಷೆಯ ದತ್ತಾಂಶಗಳನ್ನು ಕೊಡುವ ಹಾಗಿಲ್ಲ’ ಎಂಬ ನಿಬಂಧನೆಯನ್ನು ಹಿಂದೆಗೆದುಕೊಳ್ಳುವಂತೆ ಕೋರಬೇಕಾಗಿದೆ. ಜೊತೆಗೆ, ದತ್ತಾಂಶಗಳು ಸಾರ್ವಜನಿಕರಿಗೂ ಲಭ್ಯವಾಗುವಂತೆ ನೋಡಿಕೊಳ್ಳಬೇಕಾದ ಅವಶ್ಯಕತೆಯಂತೂ ಇದ್ದೇ ಇದೆ.

share
ಕೆ.ಎನ್. ಲಿಂಗಪ್ಪ
ಕೆ.ಎನ್. ಲಿಂಗಪ್ಪ
Next Story
X