Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘ಪೊಮ್ಮಲರು’ ಎಂಬ ವಿಶಿಷ್ಟ ಸಮುದಾಯ

‘ಪೊಮ್ಮಲರು’ ಎಂಬ ವಿಶಿಷ್ಟ ಸಮುದಾಯ

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್16 Sept 2026 10:27 AM IST
share
‘ಪೊಮ್ಮಲರು’ ಎಂಬ ವಿಶಿಷ್ಟ ಸಮುದಾಯ

ಈ ಜನಾಂಗವು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ಎಲ್ಲಾ ತರಹದ ಅರ್ಹತೆ ಹೊಂದಿದ್ದರೂ ಸಹ ಆ ಸೌಲಭ್ಯ ದೊರೆಯದೆ ಸರ್ವರಿಗೂ ಸಮಪಾಲು-ಸಮಬಾಳು ಎಂಬ ನ್ಯಾಯಪರ ತತ್ವದಿಂದ ವಂಚನೆಗೊಳಪಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇಂತಹ ಸಮಾಜವನ್ನು ಈವರೆಗೂ ಗುರುತಿಸದಿರುವುದು ಸಂವಿಧಾನದತ್ತ ಆಶಯಗಳಿಗೆ ವ್ಯತಿರಿಕ್ತವಾಗಿದೆ.

ಇದು ಅಪರೂಪದಲ್ಲಿ ಅಪರೂಪದ ಅಲೆಮಾರಿ ಸಮುದಾಯ, ಅನೇಕರಿಗೆ ಇಂತಹದೊಂದು ಸಮುದಾಯ ಇದೆ ಎಂದು ಗೊತ್ತೇ ಇಲ್ಲ. ಆದ್ದರಿಂದಲೇ ಇವರ ಅಸ್ತಿತ್ವ, ಅಸ್ಮಿತೆಯ ಬಗ್ಗೆ ಗೊಂದಲವೂ ಇದೆ. ಕೆಲವು ಹೇಳಿಕೆಗಳ ಪ್ರಕಾರ ಇವರ ಸಾಂಪ್ರದಾಯಿಕ ವೃತ್ತಿ ಜೋತಿಷ್ಯ, ಗಿಳಿ ಶಾಸ್ತ್ರ, ಕವಡೆ ಹಾಕುವುದರ ಮೂಲಕ ಜ್ಯೋತಿಷ್ಯ ಹೇಳುವುದು ಮುಂತಾಗಿ. ಇವರನ್ನು ಪೊಮ್ಮಳ, ಡೊಂಬ, ದೊಂಬಿದಾಸರು ಎಂದೂ ಕರೆಯುತ್ತಾರೆ ಎಂದು ಇನ್ನೂ ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ಮೇಲಿನ ಯಾವುದೇ ಹೇಳಿಕೆಗಳಲ್ಲೂ ಒಮ್ಮತವಿಲ್ಲ ಮತ್ತು ಈ ಹೇಳಿಕೆಗಳಿಗೆ ಸ್ಷಷ್ಟ ಆಧಾರಗಳಿಲ್ಲ.

ಪೊಮ್ಮಲರು ಗಿಳಿ ಶಾಸ್ತ್ರದ ಮೂಲಕ ಭವಿಷ್ಯ ಹೇಳುವ ಅಲೆಮಾರಿ ದಲಿತ ಸಮುದಾಯ, ಹನೂರು, ಕೊಳ್ಳೇಗಾಲ, ಚಾಮರಾಜನಗರದ ಗಡಿಯಲ್ಲಿ ಕಾಣಸಿಗುವ ಅಪರೂಪದ ಸಮುದಾಯವಿದೆಂದು ಕೆಲವರು ಹೇಳುತ್ತಾರೆ.

ಆದರೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕೆ.ಎನ್. ಲಿಂಗಪ್ಪನವರ ಲೇಖನವೊಂದು ಪೊಮ್ಮಲರ ಬಗ್ಗೆ ಒಂದಷ್ಟು ವಿಭಿನ್ನವಾದ ಬೆಳಕು ಚೆಲ್ಲುತ್ತದೆ! ‘‘ಬದುಕನ್ನು ಅರಸಿ ನಾಲ್ಕೈದು ತಲೆಮಾರುಗಳ ಹಿಂದೆಯೇ, ಆಂಧ್ರಪ್ರದೇಶದ ಗಡಿ ಭಾಗದಿಂದ ಬಂದು ನೆಲೆಸಿದವರೇ ‘ಪೊಮ್ಮಲರು’. ಸುಮಾರು ಹತ್ತಾರು ಕುಟುಂಬಗಳು ಕರ್ನಾಟಕದ ಚಿಂತಾಮಣಿ ತಾಲೂಕಿನ ಕುಗ್ರಾಮ ಕೃಷ್ಣರಾಜಪುರಕ್ಕೆ ಆಂಧ್ರದಿಂದ ಬಂದು ನೆಲೆಸಿದ್ದಾರೆ. ಹಾಗೆ ಬಂದವರು ಮೊದ ಮೊದಲಿಗೆ ಕೃಷಿ ಕೂಲಿಯ ಜೊತೆಗೆ ಇನ್ನಿತರ ಸಣ್ಣಪುಟ್ಟ ಮನೆ ಕೆಲಸಗಳನ್ನು ಮಾಡಿಕೊಂಡು ಹೇಗೋ ಜೀವ ಹೊರೆದು ಕೊಳ್ಳುತ್ತಿದ್ದರು ಎಂದ ಮೇಲೆ ಅವರ ಕಡು ಬಡತನದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸದ್ಯ ಕೃಷ್ಣರಾಜಪುರದಲ್ಲಿ 30ರಿಂದ 40 ಮನೆಗಳಿದ್ದು, 200ರಿಂದ 250 ಮಂದಿ ಪೊಮ್ಮಲರ ಜಾತಿಯವರಿರಬಹುದು. ಬಹುತೇಕ ಇವರು ಕಚ್ಚಾ ಮನೆ ಅಥವಾ ಗುಡಿಸಲು ವಾಸಿಗಳು. ಪೊಮ್ಮಲರನ್ನು ‘ಪಂಬಲ’ ‘ಪಂಲಾ’ ‘ಪೊಮ್ಲ’ ‘ಪೊಮ್ಮಲ’ ಎಂಬೆಲ್ಲ ಹೆಸರುಗಳಿಂದ ಕರೆಯುತ್ತಾರೆ’’ ಎಂದು ಲಿಂಗಪ್ಪನವರು ಸ್ಥಳ ಪರಿಶೀಲನೆ ಮಾಡಿ ಹೇಳುತ್ತಾರೆ.

‘‘ಎಡ್ಗರ್ ಥರ್ಸ್ಟನ್ ಮತ್ತು ರಂಗಾಚಾರಿ ಅವರ ‘ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟುಗಳು’ ಎಂಬ ಪುಸ್ತಕದಲ್ಲಿ ಇವರ ಹೆಸರು ಪಂಬಲ ಎಂದೇ ನಮೂದಾಗಿದೆ. ದಕ್ಷಿಣ ಕನ್ನಡದಲ್ಲಿ ನೆಲೆಸಿರುವ ‘ಪಂಬದ’ರಿಗೂ ಪಂಬಲರಿಗೂ ಯಾವುದೇ ಸಂಬಂಧವಿಲ್ಲ. ಬಹುಶಃ ಗ್ರಾಮೀಣರ ಬಾಯಲ್ಲಿ ಉಚ್ಚಾರಣೆಯ ಪ್ರಮಾದದಿಂದ ಹೆಸರುಗಳು ಬದಲಾಗಿರುವ ಸಾಧ್ಯತೆಯೂ ಇದೆ. ಇವರ ಪ್ರವೃತ್ತಿ ಚರ್ಮದಿಂದ ತಯಾರಿಸಿದ ತಮಟೆಯಾಕಾರದ ವಾದ್ಯ ಬಾರಿಸುವುದು. ಆ ವಾದ್ಯವನ್ನು ಪಂಬ ಅಥವಾ ಡೋಲು ಎಂದು ಕರೆಯುವರು. ಇತರ ಚರ್ಮ ವಾದ್ಯವಾದ ‘ಮದ್ದಲೆ’ ಹಾಗೂ ‘ಕವಾಡಿ’ಯನ್ನು ಬಾರಿಸುವ ಕಲೆಯೂ ಇವರಿಗೆ ಸಿದ್ಧಿಸಿದೆ. ಆಡು ಮಾತಿನಲ್ಲಿ ಈ ಉಪ ಕಸುಬಿನ ಕಲೆಯನ್ನು ‘ಪಂಬಲ’ ಅಥವಾ ‘ಪೊಮ್ಮಲ’ ಎಂದು ಕರೆಯುತ್ತಾರೆ. ಅದೇ ಕಾರಣದಿಂದ ಇವರು ಜಾತಿಯಿಂದ ಪೊಮ್ಮಲರಾಗಿ ಗುರುತಿಸಿಕೊಂಡಿದ್ದಾರೆ. ಈ ವಾದ್ಯಗಳನ್ನು ಗ್ರಾಮದ ಹಬ್ಬ, ಹರಿದಿನ, ಜಾತ್ರಾ ಮಹೋತ್ಸವಗಳಲ್ಲಿ ನುಡಿಸುವ ಸಂಪ್ರದಾಯ ಇವರದು’’ ಎಂದು ಲಿಂಗಪ್ಪನವರು ದಾಖಲಿಸುತ್ತಾರೆ.

‘‘ಎಡ್ಗರ್ ಥರ್ಸ್ಟನ್ ಮತ್ತು ರಂಗಚಾರಿಯವರ ಗ್ರಂಥದಲ್ಲಿ ಪಂಬಲರು ಅಥವಾ ಡೋಲು (ಪಂಬ) ಜನರನ್ನು ಮಾಲ ಎಂದು ಕರೆಯುತ್ತಾರೆ. ಮಾಲಾ ವಿವಾಹಗಳಲ್ಲಿ ಮತ್ತು ಅವರ ದೇವತೆಗಳ ಗೌರವಾರ್ಥವಾಗಿ ಆಚರಿಸುವ ಉತ್ಸವಗಳಲ್ಲಿ ಸಂಗೀತಗಾರರಾಗಿ ಕಾರ್ಯ ನಿರ್ವಹಿಸುತ್ತಾರೆ. ಅಂಕಮ್ಮನ ಕಥೆಯ ನಿರೂಪಣೆಯಲ್ಲಿ ಮತ್ತು ಗಮಲ್ಲರ ಪೆದ್ದದಿನವು ಮರಣ ಧಾರ್ಮಿಕ ಕ್ರಿಯೆಯಲ್ಲಿ ಮುಗ್ಗು (ರಂಗೋಲಿ) ಹಾಕುವುದರಲ್ಲೂ ಅವರು ಭಾಗವಹಿಸುತ್ತಾರೆ’’ಎನ್ನುತ್ತಾರೆ.

ತೆಲುಗು ಮಾತನಾಡುವ ಆಂಧ್ರ ಮೂಲದವರಾದ್ದರಿಂದ ಇವರ ಮಾತೃಭಾಷೆ ತೆಲುಗು. ಕರ್ನಾಟಕಕ್ಕೆ ವಲಸೆ ಬಂದ ನಂತರದಲ್ಲಿ ವ್ಯಾವಹಾರಿಕ ದೃಷ್ಟಿಯಿಂದ ಅಸ್ಪಷ್ಟವಾಗಿ ಕನ್ನಡ ಮಾತನಾಡುವರು. ಇತ್ತೀಚಿನ ದಿನಗಳಲ್ಲಿ ಇವರ ಮಕ್ಕಳು ಕನ್ನಡ ಶಾಲೆಯಲ್ಲಿ ಓದುತ್ತಿರುವುದರಿಂದ ಕನ್ನಡವನ್ನು ಚೆನ್ನಾಗಿ ಮಾತನಾಡುವರು. ಶಿಕ್ಷಣಕ್ಕೆ ಹೆಚ್ಚು ಹೊತ್ತು ಕೊಡದಿರುವುದರಿಂದ ಶೈಕ್ಷಣಿಕವಾಗಿ ಬಹಳ ಹಿಂದುಳಿದಿದ್ದಾರೆ. ಇತ್ತೀಚೆಗೆ ಒಬ್ಬಿಬ್ಬರು ಎಸೆಸೆಲ್ಸಿ ತೇರ್ಗಡೆ ಹೊಂದಿದವರು ಇದ್ದಾರೆ. ಸರಕಾರವು ಕಡ್ಡಾಯವಾಗಿ ಕೊಡ ಮಾಡುವ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಪಡೆದುಕೊಂಡಿರುವರಾದರೂ, ಪಡಿತರ ಚೀಟಿಗಳನ್ನು ಪಡೆಯಲು ಪಡಿಪಾಟಲು ಪಡುತ್ತಿದ್ದಾರೆ.

‘‘ಮೇಲ್ಜಾತಿಯವರು ಮನೆಯ ಒಳಗಡೆ ನಮ್ಮನ್ನು ಬಿಟ್ಟುಕೊಳ್ಳುವುದಿಲ್ಲ, ಹಾಗಾಗಿ ನಾವು ಅಸ್ಪಶ್ಯರು’’ ಎಂದು ಯಾವ ಸಂಕೋಚವೂ ಇಲ್ಲದೆ ಹೇಳಿಕೊಳ್ಳುತ್ತಾರೆ. ಸಾಮಾಜಿಕವಾಗಿ ಅತಿ ಕೆಳಸ್ತರ ದಲ್ಲಿರುವ ಇವರು ಅತ್ಯಂತ ಹಿಂದುಳಿದವರಾಗಿದ್ದು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ತೀರಾ ಕೆಳಮಟ್ಟದಲ್ಲಿದ್ದಾರೆ. ಆಂಧ್ರಪ್ರದೇಶದಲ್ಲಿ ಪಂಬಲ ಜಾತಿಯನ್ನು ಅತ್ಯಂತ ಹಿಂದುಳಿದ ವರ್ಗದ ‘ಎ’ ಪಟ್ಟಿಯಲ್ಲಿ ಸೇರಿಸಿದ್ದಾರೆ. ಕರ್ನಾಟಕದಲ್ಲಿ ಯಾವ ಪಟ್ಟಿಯಲ್ಲಿಯೂ ಇವರು ಸೇರಿಲ್ಲ.

ಅರೆಅಲೆಮಾರಿಗಳಾಗಿ ಬದುಕುತ್ತಿರುವ ಈ ಪಂಬಲರ ಸ್ಥಿತಿ-ಗತಿಗಳನ್ನು ಅವಲೋಕಿಸಿದಾಗ ಅವರಲ್ಲಿ ಇನ್ನೂ ಅರೆಅಲೆಮಾರಿತನ ಉಳಿದುಕೊಂಡಿದೆ ಎಂದು ತಿಳಿದು ಬರುತ್ತದೆ. ಯಾವುದೇ ಒಂದು ಸಮೂಹ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಅದಕ್ಕೊಂದು ನಿಶ್ಚಿತವಾದ ನೆಲೆ, ಆರ್ಥಿಕವಾದ ಅವಲಂಬನೆ, ಸಾಮಾಜಿಕವಾದ ಭದ್ರತೆ, ಖಂಡಿತ ಬೇಕು. ಇಂತಹದು ಯಾವುದೇ ಇಲ್ಲದಿದ್ದಾಗ ಅಂತಹ ಸಮೂಹ ಅಲೆಮಾರಿಯಾಗಿಯೋ ಅಥವಾ ಅರೆಅಲೆಮಾರಿಯಾಗಿಯೋ ಉಳಿಯಲೇ ಬೇಕಾಗುತ್ತದೆ. ನೂರಿನ್ನೂರು ವರ್ಷಗಳ ಹಿಂದೆ ಸುಸ್ಥಿರ ಬದುಕನ್ನು ಕಟ್ಟಿಕೊಳ್ಳಲು ವಲಸೆ ಬಂದ ಇವರ ಸ್ಥಿತಿ ಇಂದಿಗೂ ಕಿಂಚಿತ್ತೂ ಬದಲಾಗಿಲ್ಲ.

ಈ ಜನಾಂಗವು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ಎಲ್ಲಾ ತರಹದ ಅರ್ಹತೆ ಹೊಂದಿದ್ದರೂ ಸಹ ಆ ಸೌಲಭ್ಯ ದೊರೆಯದೆ ಸರ್ವರಿಗೂ ಸಮಪಾಲು-ಸಮಬಾಳು ಎಂಬ ನ್ಯಾಯಪರ ತತ್ವದಿಂದ ವಂಚನೆಗೊಳಪಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇಂತಹ ಸಮಾಜವನ್ನು ಈವರೆಗೂ ಗುರುತಿಸದಿರುವುದು ಸಂವಿಧಾನದತ್ತ ಆಶಯಗಳಿಗೆ ವ್ಯತಿರಿಕ್ತವಾಗಿದೆ. ‘‘ಪಂಬಲ ಅಥವಾ ಪೊಮ್ಮಲ ಜಾತಿಯನ್ನು ಗುರುತಿಸಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿದ್ದಲ್ಲಿ ಈ ಜನಾಂಗದ ಮುಂದಿನ ಪೀಳಿಗೆಯು ಶೈಕ್ಷಣಿಕವಾಗಿ ಸ್ವಲ್ಪಮಟ್ಟಿಗಾದರೂ ಅಭಿವೃದ್ಧಿ ಹೊಂದಬಹುದೆಂಬ ಒತ್ತಾಸೆಯಿಂದ ಮತ್ತು ಶೈಕ್ಷಣಿಕವಾಗಿ ಮುಂದೆ ಬರುವುದರಿಂದ ಔದ್ಯೋಗಿಕವಾಗಿಯೂ ಸಹ ಅನುಕೂಲವಾಗಬಹುದೆಂಬ ಅಂಶಗಳನ್ನೂ ಮನಗಂಡು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಪಂಬಲ(pambala) ಅಥವಾ ಪೊಮ್ಮಲ(pommala) ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ-1ರಲ್ಲಿ ಸೇರಿಸಲು ಸರಕಾರಕ್ಕೆ ಶಿಫಾರಸು ಮಾಡಿದೆ.

ಸರಕಾರ ಮಾತ್ರ ಈ ದಿಸೆಯಲ್ಲಿ ಕುಂಭಕರ್ಣ ನಿದ್ದೆಯಲ್ಲಿದೆ’’ ಎಂದು ಲಿಂಗಪ್ಪನವರು ಬೇಸರ ವ್ಯಕ್ತಪಡಿಸುತ್ತಾರೆ.

(ಅಂಕಣಗಾರರು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಹಿರಿಯ ವಕೀಲರು, ಚಿಂತಕರು)

Tags

communityPommalaru
share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X