Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘ಡೊಂಬಾರಿ’ ಎಂಬ ವಿಶಿಷ್ಟ ಸಮುದಾಯ!

‘ಡೊಂಬಾರಿ’ ಎಂಬ ವಿಶಿಷ್ಟ ಸಮುದಾಯ!

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್13 May 2026 10:19 AM IST
share
‘ಡೊಂಬಾರಿ’ ಎಂಬ ವಿಶಿಷ್ಟ ಸಮುದಾಯ!

ಈಗಲೂ ಹೆಣ್ಣುಮಕ್ಕಳು ಶ್ರಮದ ಕೆಲಸಗಳನ್ನೇ ಮಾಡುತ್ತಾರೆ. ಕೆಲಸ ಇಲ್ಲದಿದ್ದಾಗ ದೊಡ್ಡದೊಡ್ಡ ಚೀಲಗಳನ್ನು ಹೆಗಲಿಗೆ ಹಾಕಿಕೊಂಡು ಚಿಂದಿ ಆಯಲು ಹೋಗುತ್ತಾರೆ. ಇಡೀ ಕುಟುಂಬಗಳು ಒಂದಷ್ಟು ಹಂದಿ ಸಾಕುತ್ತವೆ. ಇವರೆಲ್ಲ ಸೇರಿ ಒಂದು ಸಹಕಾರ ಸಂಘವನ್ನೂ ಮಾಡಿಕೊಂಡಿದ್ದಾರೆ. ಕೇಂದ್ರದ ಡಿ.ಎನ್.ಟಿ. ಆಯೋಗ ಇವರನ್ನು ಅತಿಅಲೆಮಾರಿಗಳೆಂದು ಗುರುತಿಸಿದೆ. ಈಗಲೂ ಇವರಿಗೆ ಸರಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ.

ಸುಮಾರು ಹದಿನೆಂಟು ವರ್ಷಗಳ ಹಿಂದೆ ನಾನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಬೆಳಗಾವಿಗೆ ಬೆಟ್ಟಿಕೊಟ್ಟಾಗ, ನನ್ನ ಆತ್ಮೀಯ ಗೆಳೆಯ ಮತ್ತು ಕನ್ನಡದ ಪ್ರಸಿದ್ಧ ಬರಹಗಾರ ಡಾ. ಸರಜೂ ಕಾಟ್ಕರ್ ಅವರು ಡೊಂಬಾರಿಗಳನ್ನು ನೋಡಲು ಕರೆದೊಯ್ದಿ ದ್ದರು. ಬೆಳಗಾವಿಯ ಹೊರವಲಯ ದಲ್ಲಿದ್ದ ಗಣೇಶಪುರದ ಡೊಂಬಾರಿ ಕಾಲನಿಗೆ ಹೋದಾಗ ಟಾರು ಡಬ್ಬಗಳನ್ನು ಸಿಗಿದು ಸಮ ಮಾಡಿ ಅದರಲ್ಲೇ ಶೆಡ್ಡುಗಳನ್ನು ಮಾಡಿಕೊಂಡು ಅಲ್ಲಿನ ಡೊಂಬಾರಿಗಳು ವಾಸಿಸುತ್ತಿದ್ದರು! ಹೆಂಗಸರು ಲಗುಬಗೆಯಿಂದ ಕೆಲಸ ಮಾಡುತ್ತಿದ್ದರೆ, ಗಂಡಸರು ಹಗಲೇ ನಿಶೆ ಏರಿಸಿಕೊಂಡು ತೂರಾಡುತ್ತಾ ತೂಕಡಿಸುತ್ತಾ ಬಿಸಿಲು ಕಾಯುತ್ತಿದ್ದರು.

ನಾವು ಡೊಂಬಾರಿಗಳೊಂದಿಗೆ ಮಾತಾಡುತ್ತಾ ಕುಳಿತಾಗ ಅನೇಕ ಕುತೂಹಲದ ವಿಷಯಗಳು ಹೊರಬಂದವು.

ಇವರದು ಪ್ರಮೀಳಾ ರಾಜ್ಯ, ಇಡೀ ಕುಟುಂಬವನ್ನು ನಿರ್ವಹಿಸುವುದು ಹೆಣ್ಣೇ, ಹೆಣ್ಣು ಯಾವುಯಾವುದೋ ಶ್ರಮದ ಕೆಲಸಗಳಿಗೆ ಹೊರಹೋದಾಗ ಗಂಡು ಮನೆಯಲ್ಲೇ ಇರುತ್ತಾನೆ, ಯಾವುದೂ ಕೆಲಸ ಸಿಗದಿದ್ದರೆ ಹೆಣ್ಣು ಚಿಂದಿ ಆಯಲಿಕ್ಕೋ, ಭಿಕ್ಷೆಗೋ ಹೋಗುತ್ತಾಳೆ. ಅವರಲ್ಲಿ ಒಂದು ವಿಶಿಷ್ಟ ಪದ್ಧತಿ ಇದೆ. ಹೆಂಗಸರು ಭಿಕ್ಷೆಗೆ ಹೋದಾಗ ದೊಡ್ಡ ಪಾತ್ರೆಯೊಂದನ್ನು ಕೊಂಡೊಯ್ಯುತ್ತಾರೆ. ಭಿಕ್ಷೆಯಲ್ಲಿ ಸಿಹಿ, ಉಪ್ಪು, ಖಾರ, ಹುಳಿ, ಸಸ್ಯಾಹಾರ, ಮಾಂಸಾಹಾರ ಏನನ್ನೇ ಹಾಕಲಿ ಅದನ್ನೆಲ್ಲ ಒಂದೇ ಪಾತ್ರೆಗೆ ಹಾಕಿಸಿಕೊಂಡು, ಮನೆಗೆ ಬಂದ ನಂತರ ಆ ಭಿಕ್ಷಾಪಾತ್ರೆಯನ್ನು ಒಲೆಯ ಮೇಲಿಟ್ಟು ದೀರ್ಘವಾಗಿ ಬೇಯಿಸುತ್ತಾರೆ. ಆ ಪಾತ್ರೆಯಲ್ಲಿರುವ ಆಹಾರ ಚೆನ್ನಾಗಿ ಕುದಿಯುವವರೆಗೂ ಬೇಯಿಸುತ್ತಾರೆ. ಈ ಬೆರಕೆ ಆಹಾರವನ್ನು ಅವರ ಭಾಷೆಯಲ್ಲಿ ‘ಗಾಂಬಟ್’ ಎಂದು ಕರೆಯುತ್ತಾರೆ. ಇದನ್ನೇ ತಿನ್ನುವ ಡೊಂಬಾರಿಗಳು ಅತ್ಯಂತ ಆರೋಗ್ಯವಾಗಿದ್ದು, ಯಾವುದೇ ಕಾಯಿಲೆಗೆ ಒಳಗಾಗಿ ಇವರು ಆಸ್ಪತ್ರೆಗೆ ಹೋಗುವುದೇ ಇಲ್ಲವಂತೆ!

ಇನ್ನೂ ವಿಶೇಷವೆಂದರೆ ಬಸುರಿಯಾದ ಹೆಣ್ಣುಮಗಳದು! ಬಸುರಿಯಾದ ಹೆಣ್ಣುಮಗಳು ಶೆಡ್‌ನಲ್ಲೇ ಇದ್ದು, ಸುತ್ತಮುತ್ತಲ ಶೆಡ್ಡುಗಳಲ್ಲಿ ಯಾರೂ ಇಲ್ಲದಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡರೆ ಯಾರ ಸಹಾಯವನ್ನೂ ಬೇಡದೆ ತನ್ನ ಹೆರಿಗೆಯನ್ನು ತಾನೇ ಮಾಡಿಕೊಂಡು ಎಲ್ಲವನ್ನೂ ತಾನೇ ಶುದ್ಧೀಕರಣ ಮಾಡಿ, ಆಗ ಹುಟ್ಟಿದ ಮಗುವನ್ನು ತಬ್ಬಿಕೊಂಡೇ ಅಡುಗೆ ಮಾಡಿಕೊಳ್ಳುತ್ತಾಳಂತೆ! ಒಮ್ಮೆ ಪ್ರೊ. ನಾಗಲೋತಿಮಠ ಅವರು ಡೊಂಬಾರಿಗಳ ಹೆರಿಗೆ ಪದ್ಧತಿಯನ್ನು ಅರಿಯಲು ಸ್ಥಳೀಯ ಆಸ್ಪತ್ರೆಗೆ ಹೋಗಿ ‘‘ಯಾರಾದರೂ ಡೊಂಬಾರಿ ಹೆಣ್ಣುಮಕ್ಕಳು ಹೆರಿಗೆಗೆ ಬಂದರೆ ನನಗೆ ತಿಳಿಸಿ’’ ಎಂದಿದ್ದರಂತೆ. ‘‘ಸಾಧಾರಣವಾಗಿ ಯಾರೂ ಆಸ್ಪತ್ರೆಗೆ ಬರಲ್ಲ ಸರ್’’ ಎಂದು ಆಸ್ಪತ್ರೆಯವರು ತಿಳಿಸಿ ಹಾಗೇನಾದರೂ ಆಕಸ್ಮಿಕವಾಗಿ ಬಂದರೆ ತಿಳಿಸುತ್ತೇವೆ ಅಂದರು. ಒಮ್ಮೆ ಆಕಸ್ಮಿಕವಾಗಿ ಡೊಂಬಾರಿ ಹೆಣ್ಣುಮಗಳೊಬ್ಬಳು ಹೆರಿಗೆಗಾಗಿ ಆಸ್ಪತ್ರೆಗೆ ಬಂದಳು, ಆಸ್ಪತ್ರೆಯವರು ಪ್ರೊ.ನಾಗಲೋತಿಮಠ ಅವರಿಗೆ ಫೋನ್ ಮಾಡಿ ಬರಹೇಳಿದರು. ಪ್ರೊ.ನಾಗಲೋತಿಮಠ ರೆಡಿಯಾಗಿ ಕಾರ್ ಓಡಿಸಿಕೊಂಡು ಆಸ್ಪತ್ರೆಗೆ ಬರುವ ವೇಳೆಗೆ ಆ ಡೊಂಬಾರಿ ಹೆಣ್ಣುಮಗಳು ಹೆರಿಗೆ ಮಾಡಿಸಿಕೊಂಡು ಮಗುವನ್ನು ಎತ್ತಿಕೊಂಡು ಹೊರಟುಹೋಗಿದ್ದಳಂತೆ!!

ಸದರಿ ಡೊಂಬಾರಿ ಸಮುದಾಯದ ವಿಶಿಷ್ಟ ಬದುಕು, ಆಚರಣೆಗಳನ್ನು ಅರಿಯಲು ಜರ್ಮನ್ ಸಂಶೋಧಕಿ ಮತ್ತು ಬರಹಗಾರ್ತಿ ಗುಡ್ರನ್ ಮೊಯರ್ (Gudrun Moer) ಎಂಬವರು ಬೆಳಗಾವಿ ಜಿಲ್ಲೆಯ ಡೊಂಬಾರಿ ಸಮುದಾಯದ ಮೇಲೆ ಸುದೀರ್ಘ ಸಂಶೋಧನೆ ನಡೆಸಿ ಅವರ ಜೀವನಶೈಲಿ ಮತ್ತು ಸಂಸ್ಕೃತಿಯ ಬಗ್ಗೆ ಬರೆದಿದ್ದಾರೆ. ಬೆಳಗಾವಿಯ ಗಣೇಶಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಡೊಂಬಾರಿ ಸಮುದಾಯದ ಜನರೊಂದಿಗೆ ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಒಡನಾಟ ಹೊಂದಿದ್ದು, ಡೊಂಬಾರಿ ಜನಾಂಗದವರು ಆಧುನಿಕ ಜಗತ್ತಿನಲ್ಲಿ ಹೇಗೆ ಬದುಕುತ್ತಿದ್ದಾರೆ ಹಾಗೂ ಈ ಸಮುದಾಯ ಎದುರಿಸುತ್ತಿರುವ ಸಾಮಾಜಿಕ ಸ್ಥಿತ್ಯಂತರಗಳ (‘Cultural Shock’ ಅಥವಾ ಸಾಂಸ್ಕೃತಿಕ ಪಲ್ಲಟ) ಬಗ್ಗೆ ಅವರು ಸುದೀರ್ಘವಾಗಿ ಬರೆದಿದ್ದಾರೆ. ಅವರು ಕೇವಲ ಪುಸ್ತಕ ಬರೆಯಲಿಕ್ಕಷ್ಟೇ ಸೀಮಿತವಾಗದೆ, ಇವರ ಸಮುದಾಯದ ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿಗಾಗಿ ಕೂಡ ಸಾಕಷ್ಟು ಕೆಲಸ ಮಾಡಿದ್ದಾರೆ.

ಡೋಲಕ್ ಬಾರಿಸುತ್ತಾ ಹಗ್ಗದ ಮೇಲೆ ನಡೆಯುವ ದೊಂಬರು ಮತ್ತು ಬೆಳಗಾವಿಯಲ್ಲಿ ನೆಲೆಸಿರುವ ಡೊಂಬಾರಿಗಳದು ಮೇಲ್ನೋಟಕ್ಕೆ ಒಂದೇ ಜಾತಿಯಂತೆ ಕಂಡರೂ ಇವರಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ, ದೊಂಬರು ನಾಡಿನಾದ್ಯಂತ ಇದ್ದಾರೆ ಆದರೆ ಡೊಂಬಾರಿಗಳು ಕೇವಲ ಬೆಳಗಾವಿಯಲ್ಲಿ ಇದ್ದಾರೆ. ಡೊಂಬಾರಿಗಳನ್ನು ದೊಂಬರಿಂದ ಬೇರ್ಪಡಿಸಿದರೂ ಮೂಲದಲ್ಲಿ ಈ ಎರಡೂ ಜಾತಿಗಳು ಒಂದೇ ಎನ್ನುವವರೂ ಇದ್ದಾರೆ. ಈ ಡೊಂಬಾರಿಗಳನ್ನು ಕಳಕವಾಡಿ ಮತ್ತು ಕುಂಚವಾಡಿ ಅಂತಲೂ ಕರೆಯುತ್ತಾರೆ. ಈ ಸಮುದಾಯ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿಯೂ ಇದೆ. ಡೊಂಬಾರಿಗಳನ್ನೂ ಕೂಡ ದೊಂಬರೊಂದಿಗೆ ಅಪರಾಧಿ ಬುಡಕಟ್ಟುಗಳ ಪಟ್ಟಿಗೆ ಸೇರಿಸಿದ್ದರು. ಡೊಂಬಾರಿಗಳದೂ ಕೂಡ ತಮ್ಮದೇ ಆದ ಮರಗುಭಾಷೆಯಿದೆ. ಇದನ್ನು ‘ಕಲಕ’ ಭಾಷೆ ಎನ್ನುತ್ತಾರೆ. ಇತರ ಸಮುದಾಯಗಳೊಂದಿಗೆ ಇವರು ಈ ಮರಗುಭಾಷೆ ಮಿಶ್ರಿತ ಕನ್ನಡದಲ್ಲೇ ವ್ಯವಹರಿಸುತ್ತಾರೆ.

ಡೊಂಬಾರಿಗಳು ಈಗ ಹೇಗಿದ್ದಾರೆ ಎಂದು ಬೆಳಗಾವಿಯಲ್ಲೇ ಇರುವ ಸರಜೂ ಕಾಟ್ಕರ್ ಅವರನ್ನು ಕೇಳಿದೆ. ‘‘ಡೊಂಬಾರಿಗಳು ಈಗ ಬಹಳಷ್ಟು ಸುಧಾರಿಸಿದ್ದಾರೆ ಸರ್’’ ಎಂದ ಸರಜೂ ಅವರು ಮುಂದುವರಿಸಿ ‘‘ಹಿಂದೆ ದೇವರಾಜ ಅರಸು ಅವರ ಕಾಲದಲ್ಲಿ ಈ ಡೊಂಬಾರಿಗಳಲ್ಲಿ ಒಬ್ಬರು ಶಾಲಾ ಮಾಸ್ತರರಾಗಿದ್ದರು, ಈ ಸಮುದಾಯದ ಮೊದಲ ಅಕ್ಷರಸ್ಥರಿವರು, ಅರಸು ಅವರ ಸರಕಾರದಲ್ಲಿ ಮಂತ್ರಿಗಳಾಗಿದ್ದ ಕಿತ್ತೂರು ಅವರು ಈ ಶಾಲಾ ಮಾಸ್ತರರನ್ನು ಸನ್ಮಾನಿಸಿದರು. ಆಗ ಈ ಮಾಸ್ತರರು ‘ನಾನು ಶಾಲೆ ಕಲಿಯಲು ನಮ್ಮವ್ವ ಕಾರಣ.. ಆದ್ದರಿಂದ ಅವಳಿಗೆ ಸನ್ಮಾನ ಮಾಡ್ರಿ’ ಎಂದು ಅವರ ಅವ್ವನಿಗೆ ಸನ್ಮಾನ ಮಾಡಿಸಿದರು. ಆನಂತರ ಈ ಶಾಲಾ ಮಾಸ್ತರರು ಈ ಗಣೇಶಪುರದ ಡೊಂಬಾರಿ ಮಕ್ಕಳಿಗೆಲ್ಲ ಅಕ್ಷರ ಕಲಿಸಿದರು’’ ಎಂದರು. ಈಗ ಈ ಸಮುದಾಯದಲ್ಲಿ ಅರಿವು ಬಂದಿದೆ. ಈಗಲೂ ಹೆಣ್ಣುಮಕ್ಕಳು ಶ್ರಮದ ಕೆಲಸಗಳನ್ನೇ ಮಾಡುತ್ತಾರೆ. ಕೆಲಸ ಇಲ್ಲದಿದ್ದಾಗ ದೊಡ್ಡದೊಡ್ಡ ಚೀಲಗಳನ್ನು ಹೆಗಲಿಗೆ ಹಾಕಿಕೊಂಡು ಚಿಂದಿ ಆಯಲು ಹೋಗುತ್ತಾರೆ. ಇಡೀ ಕುಟುಂಬಗಳು ಒಂದಷ್ಟು ಹಂದಿ ಸಾಕುತ್ತವೆ. ಇವರೆಲ್ಲ ಸೇರಿ ಒಂದು ಸಹಕಾರ ಸಂಘವನ್ನೂ ಮಾಡಿಕೊಂಡಿದ್ದಾರೆ. ಕೇಂದ್ರದ ಡಿ.ಎನ್.ಟಿ. ಆಯೋಗ ಇವರನ್ನು ಅತಿಅಲೆಮಾರಿಗಳೆಂದು ಗುರುತಿಸಿದೆ. ಈಗಲೂ ಇವರಿಗೆ ಸರಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ. ಸರಕಾರದಿಂದ ಯಾವುದೇ ಫಲಾಪೇಕ್ಷೆ ಪಡೆಯದಿದ್ದರೂ ಇವರು ಸ್ವಾವಲಂಬಿಗಳಾಗಿ ಬದುಕಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಪ್ರಶಂಸಾರ್ಹ.

Tags

Dombaricommunity
share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X