Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ...

ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ವಿಶ್ವಸಂಸ್ಥೆ

ಹರೀಶ್ ಕುಮಾರ್ ಕುಡ್ತಡ್ಕಹರೀಶ್ ಕುಮಾರ್ ಕುಡ್ತಡ್ಕ10 May 2026 12:14 PM IST
share
ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ವಿಶ್ವಸಂಸ್ಥೆ

ಜಗತ್ತಿನ ಅನೇಕ ರಾಷ್ಟ್ರಗಳ ನಡುವೆ ಇತ್ತೀಚೆಗಿನ ದಿನಗಳಲ್ಲಿ ನಡೆಯುತ್ತಿರುವ ಅಂತರ್‌ಯುದ್ಧ, ಸಂಘರ್ಷಗಳ ಸಂದರ್ಭಗಳಲ್ಲಿ ವಿಶ್ವಸಂಸ್ಥೆ ನಿಜಕ್ಕೂ ಏನು ಮಾಡಿದೆ ಎಂಬ ಪ್ರಶ್ನೆ ಹಲವರಲ್ಲಿದೆ. ಕೆಲವೊಂದು ಸಾಂದರ್ಭಿಕ ಹೇಳಿಕೆಗಳನ್ನು ಬಿಟ್ಟರೆ ವಿಶ್ವಸಂಸ್ಥೆಯಿಂದ ಯಾವುದೇ ಪರಿಣಾಮಕಾರಿ ಕ್ರಮಗಳು ಜರುಗಿರುವ ಮಾಹಿತಿಗಳು ಮೇಲ್ನೋಟಕ್ಕೆ ಕಂಡು ಬಂದಂತಿಲ್ಲ. ಅಷ್ಟಕ್ಕೂ ಕೆಲವರಿಗೆ ವಿಶ್ವಸಂಸ್ಥೆಗೆ ಇಂತಹ ಸಂದರ್ಭಗಳಲ್ಲಿ ನಿರ್ಣಾಯಕ ಹೊಣೆಗಾರಿಕೆಯಿದೆ ಎಂಬುದೇ ಮರೆತು ಹೋಗಿದ್ದರೆ ಆಶ್ಚರ್ಯವಿಲ್ಲ.

ಯುದ್ಧ, ಸಂಘರ್ಷ, ಬಿಕ್ಕಟ್ಟುಗಳಲ್ಲಿ ಮುಳುಗಿರುವ ರಾಷ್ಟ್ರಗಳಲ್ಲಿ ಹೊಸ ಬೆಳವಣಿಗೆಗಳು ನಡೆದಿವೆ. ಇದೀಗ ಪಶ್ಚಿಮ ಏಶ್ಯ ಬಿಕ್ಕಟ್ಟು ಪರಿಹಾರಗೊಳ್ಳುವ ನಿಟ್ಟಿನಲ್ಲಿ ಇರಾನ್ ಜೊತೆ ನಡೆಯುತ್ತಿರುವ ಮಾತುಕತೆಯಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ಹೇಳಿಕೆ ನೀಡಿದೆ. ಇದಕ್ಕೆ ಪೂರಕವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆ ಪೂರ್ಣ ಹಾಗೂ ಅಂತಿಮ ಒಪ್ಪಂದ ಏರ್ಪಡಲಿದೆ ಎಂದೇನೋ ಹೇಳಿದ್ದಾರೆ. ಆದರೆ ಅದೇ ಉಸಿರಲ್ಲಿ ‘‘ಒಂದು ವೇಳೆ ಇರಾನ್ ಒಪ್ಪದಿದ್ದರೆ ಬಾಂಬ್ ದಾಳಿ ಮಾಡಲಾಗುವುದು’’ ಎಂಬ ಬೆದರಿಕೆಯನ್ನೂ ಒಡ್ಡಿದ್ದಾರೆ. ಇದೇ ಸಮಯದಲ್ಲಿ ಇತ್ತ ರಶ್ಯವು ಉಕ್ರೇನ್ ಮೇಲೆ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ 27 ಮಂದಿ ಸಾವನ್ನಪ್ಪಿದ್ದಾರೆ ಮತ್ತು 120 ಮಂದಿ ಗಾಯ ಗೊಂಡಿದ್ದಾರೆ. ಈ ಅನಿಶ್ಚಿತತೆ ಎಲ್ಲಿಯವರೆಗೆ ಮುಂದುವರಿಯಲಿದೆ? ಅಪಾರ ಸಾವು-ನೋವು ಮತ್ತು ಆರ್ಥಿಕ ಸಂಕಷ್ಟಕ್ಕೆ ಎಡೆ ಮಾಡಿಕೊಟ್ಟಿರುವ ಈ ಸಂಘರ್ಷ, ಸಮರಗಳಿಗೆ ಕೊನೆಯಿಲ್ಲವೇ? ನಾಗರಿಕ ಜಗತ್ತು ಬಯಸುವ ಶಾಂತಿ ನೆಲೆಸಲು ಇನ್ನೂ ತಡವಾದೀತೇ? ಇಂತಹ ಪ್ರಶ್ನೆಗಳು ಹಲವರನ್ನು ಕಾಡುತ್ತಿರುವುದು ನಿಜ. ಯಾಕೆಂದರೆ ಇಂದು ಎರಡು ಅಥವಾ ಮೂರು ದೇಶಗಳ ನಡುವಿನ ಕದನ ಅವುಗಳಿಗೆ ಮಾತ್ರ ಸೀಮಿತವಾಗಿ ಉಳಿಯುವುದಿಲ್ಲ. ಅದು ಜಾಗತಿಕವಾಗಿ ಪರಿಣಾಮವನ್ನು ಉಂಟು ಮಾಡುತ್ತದೆ. ಹೀಗಾಗಿ ಜಗತ್ತಿನ ಆಯ ಕಟ್ಟಿನ ಪ್ರದೇಶಗಳ ಅಥವಾ ಪ್ರಭಾವಶಾಲಿ ದೇಶಗಳಲ್ಲಿನ ಪ್ರಕ್ಷುಬ್ಧತೆ ಎಲ್ಲರ ಕಾಳಜಿಯ ವಿಚಾರವಾಗಿ ಪರಿವರ್ತಿತವಾಗಿ ಬಿಡ ಬಲ್ಲದು.

ಕೆಲ ಸಮಯದ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧ ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸುವುದಾಗಿ ಘೋಷಿಸಿದಾಗ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರು, ‘‘ಈ ಕದನ ವಿರಾಮ ಘೋಷಣೆಯು ಅಮೆರಿಕ ಮತ್ತು ಇರಾನ್ ನಡುವೆ ರಾಜತಾಂತ್ರಿಕ ಸಂಬಂಧ ಮತ್ತು ವಿಶ್ವಾಸ ವೃದ್ಧಿಗೆ ನೆರವಾಗಲಿದೆ’’ ಎಂಬ ಹೇಳಿಕೆಯೊಂದನ್ನು ನೀಡಿದ್ದರು. ಪ್ರಧಾನ ಕಾರ್ಯದರ್ಶಿಯವರ ಹೇಳಿಕೆಯೇನೋ ಸರಿಯಾಗಿತ್ತು. ಆದರೆ ವಿಶ್ವಸಂಸ್ಥೆ ಇಂತಹ ಸಾಂದರ್ಭಿಕ ಹೇಳಿಕೆಗಳನ್ನು ನೀಡುವುದಕ್ಕೆ ಮಾತ್ರ ಸೀಮಿತವೇ? ಯಾಕೆ ಅದು ಯುದ್ಧ ನಿರತ ರಾಷ್ಟ್ರಗಳ ನಡುವೆ ಮಧ್ಯ ಪ್ರವೇಶಿಸಿ ಯುದ್ಧ ನಿಲ್ಲಿಸಲು ಪ್ರಯತ್ನಿಸುವುದಿಲ್ಲ ಎಂಬ ಪ್ರಶ್ನೆಯನ್ನು ಸಹಜವಾಗಿ ಹುಟ್ಟು ಹಾಕುತ್ತದೆ. ಜಗತ್ತಿನ ಅನೇಕ ರಾಷ್ಟ್ರಗಳ ನಡುವೆ ಇತ್ತೀಚೆಗಿನ ದಿನಗಳಲ್ಲಿ ನಡೆಯುತ್ತಿರುವ ಅಂತರ್‌ಯುದ್ಧ, ಸಂಘರ್ಷಗಳ ಸಂದರ್ಭಗಳಲ್ಲಿ ವಿಶ್ವಸಂಸ್ಥೆ ನಿಜಕ್ಕೂ ಏನು ಮಾಡಿದೆ ಎಂಬ ಪ್ರಶ್ನೆ ಹಲವರಲ್ಲಿದೆ. ಕೆಲವೊಂದು ಸಾಂದರ್ಭಿಕ ಹೇಳಿಕೆಗಳನ್ನು ಬಿಟ್ಟರೆ ವಿಶ್ವಸಂಸ್ಥೆಯಿಂದ ಯಾವುದೇ ಪರಿಣಾಮಕಾರಿ ಕ್ರಮಗಳು ಜರುಗಿರುವ ಮಾಹಿತಿಗಳು ಮೇಲ್ನೋಟಕ್ಕೆ ಕಂಡು ಬಂದಂತಿಲ್ಲ. ಅಷ್ಟಕ್ಕೂ ಕೆಲವರಿಗೆ ವಿಶ್ವಸಂಸ್ಥೆಗೆ ಇಂತಹ ಸಂದರ್ಭಗಳಲ್ಲಿ ನಿರ್ಣಾಯಕ ಹೊಣೆಗಾರಿಕೆಯಿದೆ ಎಂಬುದೇ ಮರೆತು ಹೋಗಿದ್ದರೆ ಆಶ್ಚರ್ಯವಿಲ್ಲ.

ಇಸ್ರೇಲ್ ಮತ್ತು ಫೆಲೆಸ್ತೀನ್ ಸಂಘರ್ಷ, ರಶ್ಯ ಮತ್ತು ಉಕ್ರೇನ್ ಯುದ್ಧ ಹಾಗೂ ಅಮೆರಿಕವು ಇಸ್ರೇಲ್ ಜೊತೆ ಸೇರಿ ಇರಾನ್ ಮೇಲೆ ನಡೆಸಿದ ಸಮರ ಇವೆಲ್ಲ ಶಾಶ್ವತ ಪರಿಹಾರ ಕಾಣದೆ ಮುಂದುವರಿದಿರುವಾಗ ವಿಶ್ವಸಂಸ್ಥೆಯ ಪಾತ್ರದ ಕುರಿತು ಯಾರೂ ಗಂಭೀರವಾಗಿ ಚಿಂತಿಸಿದಂತೆ ಕಾಣುವುದಿಲ್ಲ. ಜಾಗತಿಕ ಶಾಂತಿ ಮತ್ತು ಭದ್ರತೆಯಂತಹ ಉದ್ದೇಶಕ್ಕಾಗಿಯೇ ಜನ್ಮ ತಳೆದ ವಿಶ್ವಸಂಸ್ಥೆಗೆ ಮಹತ್ವದ ಹೊಣೆಗಾರಿಕೆಯಿದೆ. ಅದು ಯುದ್ಧ ಪೀಡಿತ ರಾಷ್ಟ್ರಗಳ ನಡುವೆ ಸಂಧಾನ ಮಾತುಕತೆ ಏರ್ಪಡಿಸುವುದರ ಮೂಲಕ ಶಾಂತಿ ಸ್ಥಾಪನೆ ಮಾಡ ಬೇಕಾಗುತ್ತದೆ. ವಿಶ್ವಸಂಸ್ಥೆ ಈ ನಿಟ್ಟಿನಲ್ಲಿ ವಿಫಲವಾಗಿದೆ. ಬಹುಶಃ ವಿಶ್ವಸಂಸ್ಥೆಯ ಮಾತಿಗೆ ಇಂದು ಮನ್ನಣೆಯೇ ಸಿಗುತ್ತಿಲ್ಲ. ಭದ್ರತಾ ಮಂಡಳಿಯೊಳಗೆ ಬಲಿಷ್ಠ ರಾಷ್ಟ್ರಗಳದ್ದೇ ದರ್ಬಾರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳು ವಿಫಲವಾಗುವಂತಿವೆ. ಇದರಿಂದ ರಾಷ್ಟ್ರಗಳ ನಡುವಿನ ಸಂಘರ್ಷಗಳು, ಮಿಲಿಟರಿ ಆಕ್ರಮಣಗಳು ನಡೆಯುವಾಗ ವಿಶ್ವಸಂಸ್ಥೆ ಮೂಕ ಪ್ರೇಕ್ಷಕನಾಗಿ ನಿಲ್ಲವಂತಾಗಿದೆ. ಅದರಲ್ಲೂ ಜಗತ್ತಿನ ಬಲಿಷ್ಠ ರಾಷ್ಟ್ರಗಳ ಒಳಗೊಳ್ಳುವಿಕೆಯೇನಾದರೂ ಇದ್ದಲ್ಲಿ ವಿಶ್ವಸಂಸ್ಥೆ ಪೂರ್ಣ ಅಸಹಾಯಕ ಸ್ಥಿತಿಗೆ ತಳ್ಳಲ್ಪಡುತ್ತದೆ. ಎರಡನೇ ಜಾಗತಿಕ ಮಹಾಯುದ್ಧದ ಘೋರ ಪರಿಣಾಮಗಳ ಅರಿವಿನ ಬೆಳಕಲ್ಲಿ ಅಸ್ತಿತ್ವಕ್ಕೆ ಬಂದ ವಿಶ್ವಸಂಸ್ಥೆ ಜಾಗತಿಕ ಶಾಂತಿ, ಸಾಮರಸ್ಯವನ್ನು ಖಾತರಿ ಪಡಿಸುವಂತಹ ಬಲಿಷ್ಠ ಸಂಸ್ಥೆಯಾಗಿ ಬೆಳೆಯ ಬೇಕಾಗಿತ್ತು. ಆದರೆ ಇಲ್ಲಿ ಆದದ್ದೇ ಬೇರೆ. ಈಗಾಗಲೇ 80 ವರ್ಷಗಳನ್ನು ಪೂರೈಸಿರುವ ವಿಶ್ವಸಂಸ್ಥೆಗೆ ಈ ದುರ್ಗತಿ ಬಂದೊದಗಬಹುದು ಎಂದು ಅದರ ಸ್ಥಾಪಕರಾರು ಊಹಿಸಿರಲಾರರು.

ಕಳೆದ ಕೆಲವು ವರ್ಷಗಳಿಂದ ರಶ್ಯ ಮತ್ತು ಉಕ್ರೇನ್ ಯುದ್ಧ ನಡೆಯುತ್ತಿದೆ. ಇಸ್ರೇಲ್ ಮತ್ತು ಫೆಲೆಸ್ತೀನ್ ಸಮರವೂ ನಿರಂತರವಾಗಿ ನಡೆಯುತ್ತಿದ್ದು ಈ ಯುದ್ಧದ ಕರಾಳತೆಯನ್ನು ಪ್ರಪಂಚ ಮರೆಯಲಾಗದು. ಅಮೆರಿಕದ ನಿರಂತರ ದಾಳಿಯಿಂದ ಇರಾನ್‌ನ ನೂರಾರು ಮುಗ್ಧ ಮಕ್ಕಳು ಸೇರಿದಂತೆ ಹಲವಾರು ಮಂದಿ ನಾಗರಿಕರು ಬಲಿಯಾಗಿದ್ದಾರೆ. ಯುದ್ಧ ನಿರತ ದೇಶಗಳ ಹಲವಾರು ಸೈನಿಕರು ಪ್ರಾಣ ತೆತ್ತಿದ್ದಾರೆ. ಒಟ್ಟಿನಲ್ಲಿ ಸಹಸ್ರಾರು ಮಂದಿ ಪ್ರಾಣ ಕಳೆದು ಕೊಂಡರು. ಲಕ್ಷಾಂತರ ಜನರು ನಿರ್ಗತಿಕರಾದರು. ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಯುದ್ಧ ಸಾರಿ ಅನೇಕ ತಿಂಗಳುಗಳು ಉರುಳಿದವು. ಇದು ಪಶ್ಚಿಮ ಏಶ್ಯದ ರಾಷ್ಟ್ರಗಳ ನಿದ್ದೆ ಕೆಡಿಸಿದ್ದು ಮಾತ್ರವಲ್ಲದೆ ಜಾಗತಿಕವಾಗಿ ಆರ್ಥಿಕ ತಲ್ಲಣವನ್ನೂ ಸೃಷ್ಟಿಸಿದೆ. ಈ ಸಂದರ್ಭಗಳಲ್ಲಿ ವಿಶ್ವಸಂಸ್ಥೆಯ ಸಕಾರಾತ್ಮಕ ಪಾತ್ರದ ಸುಳಿವಿಲ್ಲದಂತಿದೆ. ವಿಶ್ವಸಂಸ್ಥೆ ಕೇವಲ ಮಾತುಕತೆಗೆ ಸಲಹೆ, ಶಾಂತಿಗಾಗಿ ಕರೆ ನೀಡುವಂತಹ ಹೇಳಿಕೆಗಳಿಗೆ ಮಾತ್ರ ಸೀಮಿತವಾದಂತಿದೆ.

ವಿಶ್ವಸಂಸ್ಥೆಯಂತಹ ಜಾಗತಿಕ ಮಹತ್ವದ ಸಂಸ್ಥೆಗೆ ಯಾಕೆ ಈ ಅಸಹಾಯಕ ಪರಿಸ್ಥಿತಿ? ಈ ಸಂಸ್ಥೆ ಅಷ್ಟೊಂದು ದುರ್ಬಲವೇ? ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳುವುದಕ್ಕಾಗಿ 1945ರಲ್ಲಿ ಸ್ಥಾಪನೆಗೊಂಡ ಈ ಪ್ರತಿಷ್ಠಿತ ಸಂಸ್ಥೆ 193 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು ಬರೀ ಹೆಸರಿಗೆ ಮಾತ್ರ ಎಂಬಂತಾಯಿತೇ? ಇಂತಹ ಪ್ರಶ್ನೆಗಳಿಗೆ ಕಾರಣಗಳು ಇಲ್ಲದಿಲ್ಲ.

ವಿಶ್ವಸಂಸ್ಥೆಯ ಸ್ಥಾಪನೆಯ ಹಿನ್ನೆಲೆ ಎಲ್ಲರಿಗೂ ಗೊತ್ತು. ಎರಡನೆಯ ಮಹಾಯುದ್ಧದಲ್ಲಿ ಮಾನವ ಜನಾಂಗಕ್ಕೆ ಮಾರಕವಾದ ಅಣ್ವಸ್ತ್ರ ಬಳಕೆಯಾಯಿತು. ಅಸಂಖ್ಯಾತ ಜನರು ಪ್ರಾಣ ಕಳೆದು ಕೊಂಡರು. ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಯಿತು. ಭವಿಷ್ಯದಲ್ಲಿ ಇಂತಹ ಸನ್ನಿವೇಶ ಬರ ಬಾರದೆಂಬ ಎಚ್ಚರ ಹಾಗೂ ಕಾಳಜಿಯಿಂದ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂತು. ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ಕಾಯ್ದು ಕೊಳ್ಳುವುದರೊಂದಿಗೆ ಇನ್ನಿತರ ಘನ ಉದ್ದೇಶಗಳನ್ನಿಟ್ಟುಕೊಂಡಿದ್ದ ಸಂಸ್ಥೆ ಕೆಲವೊಂದು ಸಾಧನೆಗಳನ್ನು ಮಾಡಿದೆ. 1945ರ ಬಳಿಕ ಅಣ್ವಸ್ತ್ರ ಬಳಕೆಯಾಗದಿರುವಂತೆ ಕ್ರಮ ವಹಿಸಿದ್ದು ಅದರ ಒಂದು ಪ್ರಮುಖ ಸಾಧನೆಯೆನ್ನಬಹುದು. ಸದಸ್ಯ ರಾಷ್ಟ್ರಗಳ ನೆರವಿನಿಂದ ಸಂಘರ್ಷ ಪೀಡಿತ ಪ್ರದೇಶಗಳಿಗೆ ಶಾಂತಿ ಪಾಲನಾ ಪಡೆಗಳನ್ನು ಕಳುಹಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿರುವಂತಹ ಅನೇಕ ಉದಾಹರಣೆಗಳಿವೆ. ಮಾನವ ಹಕ್ಕುಗಳ ಘೋಷಣೆಯಲ್ಲಿ ವಿಶ್ವಸಂಸ್ಥೆಯ ಪಾತ್ರ ಹಿರಿದಾದುದು. ಜಾಗತಿಕವಾಗಿ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಯಾವತ್ತೂ ನೆನಪಿಸಿ ಕೊಳ್ಳ ಬಹುದಾದ ಅದರ ಅನೇಕ ಕೊಡುಗೆಗಳಿವೆ. ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಪಾತ್ರವನ್ನು ವಿಶ್ವಸಂಸ್ಥೆ ನಿರ್ವಹಿಸಿರುವುದನ್ನು ಮರೆಯುವಂತಿಲ್ಲ.

ವರ್ಷಗಳು ಕಳೆದಂತೆ ವಿಶ್ವಸಂಸ್ಥೆ ಜಾಗತಿಕ ಶಾಂತಿ ಮತ್ತು ಸಾಮರಸ್ಯದ ನಿಟ್ಟಿನಲ್ಲಿ ಹಿನ್ನಡೆ ಅನುಭವಿಸಿರುವುದನ್ನು ಕಾಣ ಬಹುದು. ರುವಾಂಡ ನರಮೇಧ, ಸೊಮಾಲಿಯಾ, ಸುಡಾನ್ ಆಂತರಿಕ ಸಂಘರ್ಷ, ಬೋಸ್ನಿಯಾ ಯುದ್ಧ ಮುಂತಾದವುಗಳನ್ನು ನಿಭಾಯಿಸುವುದರಲ್ಲಿ ವಿಶ್ವಸಂಸ್ಥೆ ದಯನೀಯವಾಗಿ ಸೋತಿದೆ. ಇವುಗಳ ಪರಿಣಾಮದಿಂದ ಲಕ್ಷಾಂತರ ಮಂದಿ ಹತರಾಗಿದ್ದಾರೆ. ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ದೀರ್ಘ ಕಾಲದ ಸಂಘರ್ಷದಲ್ಲಿ ಅದು ಕೇವಲ ಮೂಕ ಪ್ರೇಕ್ಷಕ. ಈ ಪಟ್ಟಿಗೆ ಭಾರತದ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಪಾಕ್ ಪ್ರಾಯೋಜಿತ ಭಯೋತ್ಪಾದನೆಯನ್ನು ಸೇರಿಸಬಹುದು. ಬರ ಬರುತ್ತ ಈ ಮಾದರಿಯ ವೈಫಲ್ಯವನ್ನು ಕಾಣುವಂತಹದ್ದಾಗಿದ್ದು ದುರದೃಷ್ಟಕರ.

ವಿಶ್ವಸಂಸ್ಥೆಯ ಹಿನ್ನಡೆಗೆ ಕಾರಣಗಳು ಅದರ ಒಡಲಲ್ಲಿಯೇ ಇದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಿರ್ಣಾಯಕ ಸ್ಥಾನಮಾನವನ್ನು ಹೊಂದಿರುವ ಅಂಗ ಸಂಸ್ಥೆ. ಅಲ್ಲಿ ಜಗತ್ತಿನ ಬಲಿಷ್ಠ ರಾಷ್ಟ್ರಗಳದ್ದೇ ಆಧಿಪತ್ಯ. ಅಮೆರಿಕ, ರಶ್ಯ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್ ರಾಷ್ಟ್ರಗಳು ತಮ್ಮ ವಿಟೋ ಅಧಿಕಾರದಿಂದ ತಮ್ಮ ಸ್ವಹಿತಾಸಕ್ತಿಯನ್ನು ಸಾಧಿಸುವುದರೊಂದಿಗೆ ತಮ್ಮ ತಮ್ಮ ಮಿತ್ರ ರಾಷ್ಟ್ರಗಳ ಹಿತವನ್ನೂ ಕಾಪಾಡಿಕೊಳ್ಳುತ್ತಿವೆ. ರಶ್ಯ ಮತ್ತು ಉಕ್ರೇನ್‌ಯುದ್ಧ, ಇಸ್ರೇಲ್ ಮತ್ತು ಫೆಲೆಸ್ತೀನ್ ಸಮರಗಳಲ್ಲಿ ಇಂತಹ ರಾಷ್ಟ್ರಗಳ ವಿಟೋ ಕ್ರಮಗಳು ಹಸ್ತಕ್ಷೇಪ ಮಾಡಿವೆ. ಭದ್ರತಾ ಮಂಡಳಿ ಸಭೆಗಳ ನಿರ್ಣಯಗಳು ಇದರತ್ತ ಬೆಟ್ಟು ಮಾಡುವುದನ್ನು ನಾವು ಕಾಣಬಹುದು. ಅಮೆರಿಕ ವಿಶ್ವಸಂಸ್ಥೆಗೆ ಹಿಂದೆ ಹೆಚ್ಚು ಧನ ಸಹಾಯ ಮಾಡುತ್ತಿತ್ತು. ಅದು ಈ ವರ್ಷದಿಂದ ಇಂತಹ ನೆರವನ್ನು ಕಡಿಮೆ ಮಾಡುವುದಾಗಿ ಬೆದರಿಕೆ ಹಾಕಿದೆ. ವಿಶ್ವಸಂಸ್ಥೆಯಂತಹ ಅಂತರ್‌ರಾಷ್ಟ್ರೀಯ ಮಹತ್ವವುಳ್ಳ ಸಂಸ್ಥೆಗೆ ಆರ್ಥಿಕ ಸ್ವಾವಲಂಬನೆ ಬಹಳ ಅಗತ್ಯ. ಯಾವುದೋ ಒಂದು ಬಲಿಷ್ಠ ದೇಶದ ಹಂಗಿನಲ್ಲಿದ್ದರೆ ಅದರಿಂದ ಪಕ್ಷಪಾತ ರಹಿತ ಧೋರಣೆಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ? ಈ ಅಂಶವನ್ನು ಸಮರ್ಥಿಸುವಂತಹ ಬೆಳವಣಿಗೆಗಳು ಕಣ್ಣೆದೆರುಗಿದೆ. ಮಾದಕ ಪದಾರ್ಥಗಳ ವ್ಯವಹಾರವನ್ನು ಕಾರಣವಾಗಿಟ್ಟು ಕೊಂಡು ಅಮೆರಿಕ ನೆರೆಯ ವೆನೆಝುವೆಲಾ ದೇಶದೊಳಗೆ ನುಗ್ಗಿ ಅಲ್ಲಿನ ಅಧ್ಯಕ್ಷರನ್ನು ಅಪಹರಿಸಿ ತನ್ನ ದೇಶದಲ್ಲಿ ಬಂಧನದಲ್ಲಿರಿಸಿದ್ದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದು. ಇಂತಹ ಬೆಳವಣಿಗೆಗಳು ಜಗತ್ತಿನ ಉಳಿದ ದೇಶಗಳ ಪಾಲಿಗೂ ಆತಂಕಕಾರಿ. ಇದೀಗ ವಿಶ್ವಸಂಸ್ಥೆ ಬಲಿಷ್ಠ ದೇಶಗಳಿಗೊಂದು ನೀತಿ, ದುರ್ಬಲ ದೇಶಗಳಿಗೊಂದು ನೀತಿಯನ್ನು ಅನುಸರಿಸುವಂತಹ ಟೀಕೆಗೂ ಒಳಗಾಗಿದೆ.

ವಿಶ್ವಸಂಸ್ಥೆಯನ್ನು ಈಗಿರುವ ವ್ಯವಸ್ಥೆಯೊಳಗೆ ಸುಧಾರಣೆ ಮಾಡುವುದು ಕಷ್ಟ ಸಾಧ್ಯ. ಭದ್ರತಾ ಮಂಡಳಿಯಲ್ಲಿ ಪ್ರಸ್ತುತ ಐದು ರಾಷ್ಟ್ರಗಳಿರುವ ವಿಟೋ ಅಧಿಕಾರವು ಜಾಗತಿಕ ಶಾಂತಿ ಮತ್ತು ಸೌರ್ಹಾದಕ್ಕೆ ಅಡ್ಡಿ ಉಂಟು ಮಾಡಿದ್ದೇ ಹೆಚ್ಚು. ಹಾಗಾಗಿ ವಿಟೋ ಅಧಿಕಾರವನ್ನು ರದ್ದು ಮಾಡಿ ಜಗತ್ತಿನ ಎಲ್ಲ ಸದಸ್ಯ ದೇಶಗಳಿಗೆ ಅಲ್ಲಿ ಸಮಾನ ಅವಕಾಶ, ಅಧಿಕಾರ ಕಲ್ಪಿಸುವುದು ಅಗತ್ಯ. ವಿಶ್ವಸಂಸ್ಥೆಗೆ ಆರ್ಥಿಕ ಸ್ವಾವಲಂಬನೆಯೂ ಮುಖ್ಯ. ಇನ್ನು ಯುದ್ಧ ಅಥವಾ ಸಂಘರ್ಷಗಳನ್ನು ತಡೆಗಟ್ಟಲು ಸದಸ್ಯ ರಾಷ್ಟ್ರಗಳ ನೆರವಿನಿಂದ ನಿಯೋಜಿಸುವ ಶಾಂತಿ ಪಾಲನಾ ಪಡೆಯ ವಿಚಾರ. ಈ ನಿಟ್ಟಿನಲ್ಲಿ ಸದಸ್ಯ ರಾಷ್ಟ್ರಗಳ ಸಹಕಾರದ ಕೊರತೆಯಿಂದ ಹಿನ್ನಡೆ ಅನುಭವಿಸಿರುವ ಉದಾಹರಣೆಗಳಿವೆ. ಈ ನಿಟ್ಟಿನಲ್ಲಿ ಹೆಚ್ಚಿನ ಸುಧಾರಣೆಗಳಿಗೆ ಅವಕಾಶ ಕಡಿಮೆಯಿರುವುದರಿಂದ ಪರ್ಯಾಯ ಕ್ರಮಗಳ ಬಗ್ಗೆ ಚಿಂತಿಸುವ ಅವಶ್ಯಕತೆಯಿದೆ ಎನ್ನ ಬಹುದು. ಜಾಗತಿಕ ಶಾಂತಿ ಮತ್ತು ಸಾಮರಸ್ಯವನ್ನು ಕಾಯ್ದು ಕೊಳ್ಳುವುದಕ್ಕಾಗಿ ವಿಶ್ವಸಂಸ್ಥೆಯಿಂದ ಪರಿಣಾಮಕಾರಿ ಕ್ರಮಗಳು ಬೇಕು. ಆದ್ದರಿಂದ ವಿಶ್ವಸಂಸ್ಥೆಯು ಒಂದು ಬಲಿಷ್ಠ ಹಾಗೂ ಪ್ರಭಾವಶಾಲಿಯಾದ ಜಾಗತಿಕ ಮೇಲ್ವಿಚಾರಣಾ ಸಂಸ್ಥೆಯಾಗಿ ರೂಪುಗೊಳ್ಳುವ ಅಗತ್ಯವಿದೆ.

Tags

United Nationscredibility
share
ಹರೀಶ್ ಕುಮಾರ್ ಕುಡ್ತಡ್ಕ
ಹರೀಶ್ ಕುಮಾರ್ ಕುಡ್ತಡ್ಕ
Next Story
X