Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಾಮಾಜಿಕ ನ್ಯಾಯದ ಆಶಯವು ರಾಜಕೀಯ...

ಸಾಮಾಜಿಕ ನ್ಯಾಯದ ಆಶಯವು ರಾಜಕೀಯ ಲೆಕ್ಕಾಚಾರಕ್ಕೆ ಬಲಿಯಾಗಬಾರದು

ರುದ್ರು ಪುನೀತ್ರುದ್ರು ಪುನೀತ್1 March 2026 12:45 PM IST
share
ಸಾಮಾಜಿಕ ನ್ಯಾಯದ ಆಶಯವು ರಾಜಕೀಯ ಲೆಕ್ಕಾಚಾರಕ್ಕೆ ಬಲಿಯಾಗಬಾರದು

2019 ರಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪ.ವರ್ಗಗಳ ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ ರಚನೆಯಾದ ಆಯೋಗದ ಮುಂದೆ ಅನೇಕ ಸಂಘಟನೆಗಳು ಸಲ್ಲಿಸಲಾದ ಮನವಿಯಲ್ಲಿ ಈ ಅಂಶಗಳನ್ನು ಸ್ಪಷ್ಟವಾಗಿ ತಿಳಿಸಲಾಗಿತ್ತು. ಭಾರತದ ಹಲವಾರು ರಾಜ್ಯಗಳು ಈಗಾಗಲೇ ಶೇ. 50ರ ಮಿತಿಯನ್ನು ಮೀರಿ ಮೀಸಲಾತಿ ಜಾರಿಗೊಳಿಸಿರುವುದು. ತಮಿಳುನಾಡಿನಲ್ಲಿ 69ಶೇ., ಮಹಾರಾಷ್ಟ್ರದಲ್ಲಿ 68ಶೇ., ಛತ್ತೀಸ್‌ಗಡದಲ್ಲಿ 82ಶೇ., ಮಧ್ಯಪ್ರದೇಶದಲ್ಲಿ 73ಶೇ., ರಾಜಸ್ಥಾನದಲ್ಲಿ 68ಶೇ. ಮೀಸಲಾತಿ ಜಾರಿಯಲ್ಲಿದೆ ಎಂದು ಉಲ್ಲೇಖಿಸಲಾಗಿದೆ. ಇವುಗಳನ್ನು ಈಗಾಗಲೇ ಸಂವಿಧಾನದ 9th Schedule ನಲ್ಲಿ ಸೇರಿಸಲ್ಪಟ್ಟಿದೆ. ನ್ಯಾಯಾಲಯದ ಹಸ್ತಕ್ಷೇಪದಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ಆ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಕರ್ನಾಟಕ ರಾಜ್ಯದ ವಿಷಯದಲ್ಲಿ 50ಶೇ. ಮಿತಿಯನ್ನು ಮೀರಬಾರದು ಎಂದು ಹೇಳುವುದರಲ್ಲಿ ನ್ಯಾಯವಿದೆಯೇ?. ಖಂಡಿತ ಇಲ್ಲ.

ಶೇ. 50ರ ಮಿತಿಯನ್ನು ಮೀರಬಾರದು ಎನ್ನುವ ವಿಚಾರ ಮೊದಲಿಗೆ M. R. Balaji v/s State of Mysore (28.9.1962) ತೀರ್ಪಿನಲ್ಲಿ ಹೊರಬಂದಿತ್ತು. ನಂತರ Indra Sawhney v/s Union of India(16.11.1992) ತೀರ್ಪಿನಲ್ಲಿ ಅದನ್ನು ಪುನರುಚ್ಚರಿಸಿದರೂ, ಅದೇ ತೀರ್ಪಿನಲ್ಲಿ “compelling extraordinary circumstances” ಇದ್ದಲ್ಲಿ ಈ ಮಿತಿಯನ್ನು ಮೀರಿ ಹೋಗಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಅಂದರೆ, ಸಾಮಾಜಿಕ ಹಿಂದುಳಿದಿರುವಿಕೆಯ ಗಂಭೀರತೆ, ಜನಸಂಖ್ಯೆಯ ಪ್ರಮಾಣ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಪ್ರತಿನಿಧಿತ್ವದ ಕೊರತೆಯಂತಹ ಅಸಮತೋಲನ ಪರಿಸ್ಥಿತಿಗಳು ಎದುರಾದಂತಹ ಸಮಯದಲ್ಲಿ ಮೀರಬಹುದು ಎಂದರ್ಥ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಸುಮಾರು 17ಶೇ. ಕ್ಕಿಂತ ಹೆಚ್ಚು, ಪರಿಶಿಷ್ಟ ಪಂಗಡಗಳು ಸುಮಾರು 7ಶೇ. ಕ್ಕಿಂತ ಹೆಚ್ಚು ಇದೆ. ಐತಿಹಾಸಿಕವಾಗಿ ಹಿಂದುಳಿದ ಈ ಸಮುದಾಯಗಳಿಗೆ ಸಮರ್ಪಕ ಪ್ರಾತಿನಿಧಿತ್ವ ಸಿಗದಿರುವುದನ್ನು ಸುಪ್ರೀಂಕೋರ್ಟ್ ಹೇಳಿದಂತೆ “compelling extraordinary circumstances” ಎಂದೇ ಪರಿಗಣಿಸಬಹುದಾಗಿದೆ ಎನ್ನುವುದು ವಾಸ್ತವಿಕತೆ.

ಇದಕ್ಕೆ ವಿರುದ್ಧವಾಗಿ, 103ನೇ ಸಂವಿಧಾನ ತಿದ್ದುಪಡಿ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (EWS) ೧೦ಶೇ. ಮೀಸಲಾತಿ ಜಾರಿಗೆ ತರಲಾಯಿತು. ಈ ತಿದ್ದುಪಡಿ Janhit Abhiyan v/s Union of India ತೀರ್ಪಿನಲ್ಲಿ ಬಹುಮತದಿಂದ ಮಾನ್ಯತೆ ಪಡೆದರೂ, ಅದು ಮೀಸಲಾತಿಯ ಮೂಲ ತತ್ವಕ್ಕೇ ವಿರುದ್ಧವಾಗಿದೆ.Articles ೧೫(೪), ೧೬(೪) ಮತ್ತು ೪೬ ರ ಆಶಯವು ಶತಮಾನಗಳ ಕಾಲ ಸಾಮಾಜಿಕ ದಮನಕ್ಕೆ ಒಳಗಾದವರಿಗೆ ಪರಿಹಾರ ಒದಗಿಸುವುದು. ಆದರೆ EWS ಮೀಸಲಾತಿ ಸ್ಪಷ್ಟವಾಗಿ ಆರ್ಥಿಕ ಹಿಂದುಳಿದಿರುವಿಕೆಯ ಮಾನದಂಡದ ಮೇಲೆ ರೂಪುಗೊಂಡಿದೆ. ಆರ್ಥಿಕ ಹಿಂದುಳಿದಿರುವಿಕೆಯ ನಿವಾರಣೆಗೆ ಕಲ್ಯಾಣ ಯೋಜನೆಗಳನ್ನು ತರಬಹುದಾಗಿತ್ತು. ಆ ರೀತಿಯ ಅನೇಕ ಕಲ್ಯಾಣ ಯೋಜನೆಗಳನ್ನು ಈಗಾಗಲೇ ತರಲಾಗಿದೆ. ಆದರೆ ಅದನ್ನು ಮೀಸಲಾತಿಯ ಪರಿಕಲ್ಪನೆಗೆ ಜೋಡಿಸುವುದು ಸಂವಿಧಾನ ಬೋಧಿಸುವ ಸಾಮಾಜಿಕ ನ್ಯಾಯ, ಸಮಾನ ಪ್ರಾತಿನಿಧಿತ್ವ ಎನ್ನುವ ಮೂಲ ಆಶಯಕ್ಕೆ ವಿರುದ್ಧವಾಗಿದೆ.

ಇಲ್ಲಿ ಮುಖ್ಯವಾದ ಪ್ರಶ್ನೆ ಉದ್ಭವಿಸುವುದೇನೆಂದರೆ, EWS 10ಶೇ. ಮೀಸಲಾತಿಗೆ ಕೇಂದ್ರ ಸರಕಾರ ತ್ವರಿತವಾಗಿ ಸಂವಿಧಾನ ತಿದ್ದುಪಡಿ ಮಾಡಿ, ರಾಷ್ಟ್ರಪತಿ ಅಂಕಿತ ಪಡೆದು ಜಾರಿಗೊಳಿಸಿರುವಾಗ, ಕರ್ನಾಟಕದ ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿ ಹೆಚ್ಚಳದ ವಿಷಯದಲ್ಲಿ ಯಾಕೆ ಉತ್ಸಾಹ ತೋರುತ್ತಿಲ್ಲ? 50ಶೇ. ಮಿತಿ ಮೀರಬಾರದು ಎನ್ನುವ ವಿಚಾರದಲ್ಲಿ ಈಗ ಕಠಿಣ ನಿಲುವು ತಾಳುವವರು, EWS ವಿಷಯದಲ್ಲಿ ಅದನ್ನು ಯಾಕೆ ಮೀರಿದರು?. ಇದು ಕೇಂದ್ರ ಸರಕಾರದ ಮಲತಾಯಿ ಧೋರಣೆ ಎನ್ನಿಸುವುದಿಲ್ಲವೇ?.

ಇದಕ್ಕಿಂತ ಹೆಚ್ಚು ಆತಂಕಕಾರಿ ಎನ್ನಿಸುವುದು, ಕರ್ನಾಟಕದಿಂದ ಆಯ್ಕೆಯಾದ ಬಿಜೆಪಿಯ ಸಂಸದರು ಮತ್ತು ಪ್ರಮುಖ ನಾಯಕರು ಈ ವಿಷಯದಲ್ಲಿ ಮೌನ ವಹಿಸಿರುವುದು. ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸುವುದು ಅವರ ಸಂವಿಧಾನಾತ್ಮಕ ಮತ್ತು ನೈತಿಕ ಹೊಣೆಗಾರಿಕೆಯಾಗಬೇಕು. ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಸರಕಾರ ಶಿಫಾರಸು ಮಾಡಿದಾಗ, ರಾಜ್ಯದ ಎಲ್ಲಾ ಪಕ್ಷಗಳ ಸಂಸದರು ಒಗ್ಗೂಡಿ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕಾಗಿತ್ತು. 9th Scheduleಗೆ ಸೇರಿಸಲು ಅಗತ್ಯವಾದ ಸಂವಿಧಾನ ತಿದ್ದುಪಡಿ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕಾಗಿತ್ತು.

ಆದರೆ ಈ ವಿಷಯದಲ್ಲಿ ಮೌನವೇ ಹೆಚ್ಚಾಗಿ ಗೋಚರಿಸುತ್ತಿದೆ. ಈ ಮೌನವು ಅನುಕೂಲಸಿಂಧು ರಾಜಕಾರಣ ಅಂತ ಅನ್ನಿಸುವುದಿಲ್ಲವೇ?

ಸಂವಿಧಾನ ತಮಗೆ ನೀಡಿರುವ ಹಕ್ಕನ್ನು ಕೇಳುವುದಕ್ಕೆ ಇವರು ಮೋದಿ-ಶಾ ಗಳಿಗೆ ಹೆದರುವ ಅವಶ್ಯಕತೆ ಇದೆಯೇ. ರಾಜ್ಯದ ಹಿತಕ್ಕಿಂತ ಪಕ್ಷವೇ ಮುಖ್ಯವೆಂದು ಭಾವಿಸುವ ಮನೋಭಾವವಿದು ಎನ್ನುವಂತಹ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಜನಪ್ರತಿನಿಧಿಗಳ ಕರ್ತವ್ಯವು ಕೇವಲ ಪಕ್ಷಕ್ಕೆ ನಿಷ್ಠರಾಗಿರುವುದಷ್ಟೇ ಅಲ್ಲ, ತಮ್ಮ ಸಮುದಾಯಗಳ ನ್ಯಾಯಸಮ್ಮತ ಬೇಡಿಕೆಗಾಗಿ ಧ್ವನಿ ಎತ್ತುವುದಾಗಿದೆ.

Tags

Social justicepolitical
share
ರುದ್ರು ಪುನೀತ್
ರುದ್ರು ಪುನೀತ್
Next Story
X