Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಂದು ನೋಟು-ಇಂದು ವೋಟು

ಅಂದು ನೋಟು-ಇಂದು ವೋಟು

ಎಂ.ಜಿ. ಹೆಗಡೆಎಂ.ಜಿ. ಹೆಗಡೆ3 Oct 2026 12:48 PM IST
share
ಅಂದು ನೋಟು-ಇಂದು ವೋಟು

ಕೇಸ್ ಜಡಿಯಲು ವ್ಯವಸ್ಥೆ

ಇಲ್ಲಿ ಇನ್ನೊಂದು ಗಂಭೀರ ವಿಷಯ ಇದೆ

ಫಾರಂ ನಂಬರ್ 8.

ನಾನು ಮೊದಲ ಬಾರಿಗೆ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸುತ್ತಿದ್ದು, ಈ ಹಿಂದೆ ಮತ ಹಾಕಿಲ್ಲ ಎಂದು ಘೋಷಣೆ ಮಾಡಬೇಕು. ಈ ಮೇಲಿನ ವಿಷಯ ಸುಳ್ಳು ಆಗಿದ್ದರೆ ಶಿಕ್ಷೆಗೆ, ಅರ್ಹ ಎಂದೂ ಸಹಿ ಹಾಕಬೇಕು.

ನಿಜವಾಗಿ ನಾನು ಈ ಹಿಂದೆ ಮತ ಹಾಕಿದವನೇ, ಆ ದಾಖಲೆ ಅವರ ಬಳಿ ಇದೆ. ಈಗ ಸುಳ್ಳು ಘೋಷಣೆ ಅವರೇ ಮಾಡಿಸುವುದು. ಮುಂದೆ ಸರಕಾರ/ಯಾವುದೇ ವ್ಯಕ್ತಿ ನಾನು ಸುಳ್ಳು ಹೇಳಿದ್ದೇನೆ

ಎಂದು ದೂರು ಕೊಟ್ಟರೆ? ನನಗೆ ಶಿಕ್ಷೆ!

ಯಾವುದೇ ರೀತಿಯಲ್ಲಿ ತೊಂದರೆ ಕೊಡಬೇಕು ಅಂತಾದರೆ, ಇದರಲ್ಲಿ ಸಿಕ್ಕಿಸಿ ಹಾಕಿದರೆ ಮುಗಿಯಿತು.

ಅಂದು ಸಂಜೆ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ 500, 1000 ರೂ. ಮುಖಬೆಲೆಯ ನೋಟ್ ಅಮಾನ್ಯ ಎಂದು ಘೋಷಿಸಿದರು. ಆ ಕ್ಷಣದ ವಾದಗಳು ನೆನಪಿರಲಿ. ಪಾಕಿಸ್ತಾನ ನಕಲಿ ನೋಟ್ ಮುದ್ರಿಸುತ್ತಿದೆ, ಇದರಿಂದ ಭಯೋತ್ಪಾದನೆಗೆ ಹಣಕಾಸು ನಿಲ್ಲುತ್ತದೆ, ಭಯೋತ್ಪಾದಕರು ಅನ್ನ ನೀರು ಇಲ್ಲದೇ ಸಾಯುತ್ತಾರಂತೆ, ಕಪ್ಪು ಹಣ ಹೊರಗೆ ಬರುತ್ತದೆ, ನೋಟಿನಲ್ಲಿ ಚಿಪ್ ಇದೆ ಎಂದೆಲ್ಲಾ ಹೇಳಲಾಯಿತು.

ಆನಂತರ ಏನಾಯಿತು ಎಂಬುದು ಇತಿಹಾಸ.

ಗುಜರಾತ್ ಸೊಸೈಟಿಗಳ ಬೆನ್ನು ಬಿದ್ದರೆ, ಅದು ಅಲ್ಲಿಂದ ಕೆಲವು ವಿದೇಶಗಳ ಅಂಗಳ ತಲುಪಬಹುದು.

ಆರ್ಥಿಕ ತಜ್ಞರ ಪ್ರಕಾರ ಶೇ. 99.3ರಷ್ಟು ನೋಟುಗಳು ವಾಪಸ್ ಬ್ಯಾಂಕಿಗೆ ಬಂದವು. ಅಂದರೆ ಕಪ್ಪು ಹಣ ಹೊರಗೆ ಬರಲಿಲ್ಲ ಎಂದಲ್ಲವೇ?

ಜನಸಾಮಾನ್ಯರು ದಿನಗಟ್ಟಲೆ ಕ್ಯೂನಲ್ಲಿ ನಿಂತರು. ಸಣ್ಣ ವ್ಯಾಪಾರ, ಕೃಷಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬಿತ್ತು. ಮೋದಿಯವರ ಮಾಸ್ಟರ್ ಸ್ಟ್ರೋಕ್ ಜನರ ಬದುಕಿಗೆ ಸ್ಟ್ರೋಕ್ ಆಗುವಂತಾಯಿತು.

ಆಯ್ತು, ಆಮೇಲೆ ಏನಾಯಿತು..?

ಚುನಾವಣಾ ಆಯೋಗದ ಪ್ರಕಾರ 2024ರ ಲೋಕಸಭಾ ಚುನಾವಣೆಯಲ್ಲಿ 4,650 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶವಾಯಿತು - ಇದು 75 ವರ್ಷಗಳ ಇತಿಹಾಸದಲ್ಲೇ ದೊಡ್ಡದು. 2026ರಲ್ಲಿ 5 ರಾಜ್ಯಗಳಲ್ಲಿ 1,445 ಕೋಟಿ ರೂ. ಸಿಕ್ಕಿದ್ದು, 2021ಕ್ಕಿಂತ ಶೇ. 40 ಹೆಚ್ಚು.

ಅಂದರೆ ನೋಟು ಬ್ಯಾನ್‌ನಿಂದ ಕಪ್ಪು ಹಣ ಹೋಗಿದ್ದರೆ ಚುನಾವಣೆಯಲ್ಲಿ ಅದರ ಹರಿವು ದ್ವಿಗುಣವಾದದ್ದು ಹೇಗೆ? ಹರಿದು ಬಂದ ಕಪ್ಪು ಹಣ ಎಲ್ಲಿಂದ ಬಂತು? ನಂತರದ ದಿನಗಳಲ್ಲಿ ಕೆಲವು ಉದ್ಯಮಿಗಳ/ರಾಜಕಾರಣಿಗಳ ಮೇಲೆ ಈ.ಡಿ. ನಡೆಸಿದ ದಾಳಿಯಲ್ಲಿ ಸಿಕ್ಕ ಕಪ್ಪು ಹಣ ಯಾವುದು? (ಈಗ ಬಹುತೇಕರು ಬಿಜೆಪಿಯಲ್ಲಿದ್ದಾರೆ.) ಎನ್ನುವ ಸರಳ ಪ್ರಶ್ನೆಗೆ ಉತ್ತರ ಹುಡುಕಿದರೆ ಇಡೀ ಪ್ರಕರಣ ಕೆಲವರ ಹಿತಾಸಕ್ತಿಯ ಈಡೇರಿಕೆ ನೇರವೇರಿಸಲು ನಡೆದ ಒಂದು ಪ್ರಹಸನ ಎಂಬುದು ಅರ್ಥವಾಗುತ್ತದೆ.

ಇರಲಿ.. ಜನ ಅಂತೂ ಕ್ಯೂ ನಿಂತು.. ಬೆವರು ಇಳಿಸಿಕೊಂಡರು, ಸತ್ತರು.

ಅಂತೂ ಮೋದಿಯವರ ಮಾಸ್ಟರ್ ಸ್ಟ್ರೋಕ್ ಭಾರತದ ಜನರ ಬದುಕಿನ ಪಾಲಿಗೆ ಸರಿಯಾದ ಸ್ಟ್ರೋಕನ್ನೇ ಕೊಟ್ಟಿತ್ತು.

ಈಗ ವೋಟ್ ವಿಷಯಕ್ಕೆ ಬರೋಣ.

ಎಸ್‌ಐಆರ್ ಅಗತ್ಯವೇ?

ಖಂಡಿತವಾಗಿಯೂ ಅಗತ್ಯವಿದೆ. ಮತದಾರರ ಪಟ್ಟಿ ಶುದ್ಧವಾಗಿರಬೇಕು. ಸತ್ತವರು, ಶಾಶ್ವತವಾಗಿ ವಲಸೆ ಹೋದವರು, ನಕಲಿ ನೋಂದಣಿ ತೆಗೆಯಬೇಕು. ಈ ಪ್ರಕ್ರಿಯೆ 1952ರಿಂದಲೂ ನಡೆಯುತ್ತಿದೆ. ಕೊನೆಯ ತೀವ್ರ ಪರಿಷ್ಕರಣೆ 2002-2004ರಲ್ಲಿ ನಡೆದಿತ್ತು. ಹಾಗಾಗಿ ಈಗ ಪರಿಷ್ಕರಣೆ ಆಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಶ್ನೆ ಇರುವುದು ಅದನ್ನು ಮಾಡುತ್ತಿರುವ ರೀತಿಯ ಬಗ್ಗೆ.

ಅದನ್ನು ಚುನಾವಣಾ ಆಯೋಗ ತನ್ನ ಪಾಡಿಗೆ ತಾನು ಮಾಡಿದ್ದರೆ ಮುಗಿಯುತ್ತಿತ್ತು. ಆದರೆ ಇಲ್ಲಿ ತಾವು ಚುನಾವಣೆ ಗೆಲ್ಲಲು ಅಡ್ಡ ದಾರಿಯೊಂದು ಇದೆ ಎಂದು ಆರೆಸ್ಸೆಸ್, ಬಿಜೆಪಿ, ಶಾ ತಲೆಗೆ ಹೊಳೆದ, ಪರಿಣಾಮವೇ ಎಸ್‌ಐಆರ್ ಈ ಸ್ಥಿತಿಗೆ ತಲುಪಿದೆ.

ಇದನ್ನು ಕಾರ್ಯರೂಪಕ್ಕೆ ತರಲು ಜ್ಞಾನೇಶ್‌ಕುಮಾರ್‌ರನ್ನು ಹುಡುಕಿ ತರಲಾಯಿತು.

ಈ ತರಲೆ ಕೆಲಸದಲ್ಲಿ ಆತ ಜೈಲಿಗೆ ಹೋಗುವಂತಾದರೆ..? ಅದಕ್ಕಾಗಿ ಜೀವನ ಪೂರ್ತಿ ಅವರ ಮೇಲೆ ಯಾವುದೇ ಪ್ರಕರಣ ದಾಖಲು ಮಾಡದಂತೆ ಈ ವರೆಗೂ ಇರದ ಹೊಸ ಕಾನೂನಿನ ರಕ್ಷಣಾ ಜಾಕೆಟ್ ತೊಡಿಸಲಾಯಿತು.

ಆಗಲೇ ಅಸಲಿ ಆಟ ಶುರುವಾದದ್ದು.

ಆರೆಸ್ಸೆಸ್ ಪರಿವಾರ ಬಾಂಗ್ಲಾ ನುಸುಳುಕೋರರು ಮತದಾರ ಪಟ್ಟಿಯಲ್ಲಿ ಕೋಟಿ ಲೆಕ್ಕದಲ್ಲಿ ಇದ್ದಾರೆ ಎಂಬ ಗುಲ್ಲನ್ನು ಜೋರಾಗಿ ಹಬ್ಬಿಸಿ, ಜನ ಸಾಮಾನ್ಯರು ಕೂಡಾ ಸಹಜವಾಗಿ ಹೌದು, ಇವರನ್ನು ಗುರುತಿಸಿ ಹೊರಕ್ಕೆ ಹಾಕಬೇಕು ಎಂದು ಸಹಜವಾಗಿ ಒತ್ತಾಯಿಸುವ ವಾತಾವರಣ ಸೃಷ್ಟಿಯಾಯಿತು.

ಇದರಲ್ಲಿ ಸಣ್ಣ ಅನುಮಾನ ಬಂದು ಮಾತನಾಡಿದವರನ್ನು ಪರಿವಾರದ ಭಕ್ತರು ತಕ್ಷಣ ರಾಷ್ಟ್ರ ದ್ರೋಹಿಗಳು ಎಂದು ಮೊದಲೇ ಸಿದ್ಧಗೊಳಿಸಿದ್ದ ಕಟಕಟೆಯಲ್ಲಿ ನಿಲ್ಲಿಸಿಬಿಟ್ಟರು.

ನಿರಾಳವಾದ ಉಸಿರು ಎಳೆದು ಕುಳಿತ ಜ್ಞಾನೇಶ್ ಕುಮಾರ್ ಮೊದಲು ಮಾಡಿಸಿದ್ದು ಒಂದು ಸಾಫ್ಟ್‌ವೇರ್.

ಈ ಆ್ಯಪ್ ಹೇಗೆ ಇದೆಯೆಂದರೆ, ಮತದಾರನ ಹೆಸರು, ವಿಳಾಸ ಮಾತ್ರ ಅಲ್ಲ ಒಂದು ಪೂರ್ಣ ವಿರಾಮ, ಅಲ್ಪ ವಿರಾಮ ವ್ಯತ್ಯಾಸ ಇದ್ದರೂ ಪಟ್ಟಿಯಿಂದ ಗೇಟ್ ಔಟ್ ಅನ್ನುತ್ತದೆ.

ಹೆಸರು, ತಂದೆ, ಅಜ್ಜ, ಮುತ್ತಜ್ಜ ಹೀಗೆ ಎಲ್ಲರೂ ಒಂದೇ ಸಾಲಿನಲ್ಲಿ ಬಂದು ನಿಲ್ಲಬೇಕು, ಅದರಲ್ಲಿ ಕೊಂಚ ತಪ್ಪಿದ್ದರೂ ‘ಹೊರಕ್ಕೆ ಹೋಗಿ, 50 ವರ್ಷ ಹಿಂದಿನ ದಾಖಲೆ ಹುಡುಕಿ ತೆಗೆದು ಕೊಂಡು ಬಾ’ ಎನ್ನುವ ಧಿಮಾಕಿ ಸಾಫ್ಟ್‌ವೇರ್..

ಇದು ಇಷ್ಟೆಲ್ಲಾ ಕಿರಿಕಿರಿ ಮಾಡುತ್ತದೆ ಅನ್ನುವುದು ಆಯೋಗದ ಮಂದಿಗೆ ತಿಳಿಯಲಿಲ್ಲವೇ? ತಿಳಿದಿತ್ತು. ಆದರೆ ಆ ಕಿರಿಕಿರಿಯಿಂದಲೇ ಜನರ ಹೆಸರು ಪಟ್ಟಿಯಿಂದ ಹೊರಗೆ ಹೋಗಬೇಕು ಎಂಬುದು ಅವರ ಉದ್ದೇಶವಾಗಿತ್ತು. ‘ಕೆಲವರ’ ವೋಟ್ ನಿರಾಕರಣೆ ಚಳವಳಿಯ ಒಂದು ಭಾಗ ಇದು.

ಬಿಹಾರ ಚುನಾವಣೆಯಲ್ಲಿ ಆಕ್ರಮ ನುಸುಳುಕೋರ ಮತದಾರರನ್ನು ಹಿಡಿದು ಹೊರಕ್ಕೆ ತಳ್ಳುತ್ತೇವೆ ಎಂದು ಶಾ ಘೋಷಣೆ ಮಾಡಿದರು.

ಆದರೆ ಈವರೆಗೆ ಚುನಾವಣಾ ಆಯೋಗ ಅಧಿಕೃತವಾಗಿ ‘‘ಇಷ್ಟು ಬಾಂಗ್ಲಾ ನುಸುಳುಕೋರರು ಸಿಕ್ಕಿದ್ದಾರೆ’’ ಎಂದು ವರ್ಗೀಕರಿಸಿ ಅಂಕಿ ಕೊಟ್ಟಿಲ್ಲ. ಪಶ್ಚಿಮ ಬಂಗಾಳದಲ್ಲಿ 14 ಪ್ರಕರಣಗಳಲ್ಲಿ ಎರಡು ದೇಶದ ದಾಖಲೆ ಇರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ.

ಆದರೆ ‘ಕೋಟಿ ಲೆಕ್ಕದಲ್ಲಿ’ ಎಂಬ ಹೇಳಿಕೆಗೆ ಅಧಿಕೃತ ದಾಖಲೆ ಇನ್ನೂ ಬಂದಿಲ್ಲ.

ಇಷ್ಟು ಕಠಿಣ ನಿಯಮದ ಆ್ಯಪ್ ಬಳಕೆ ಯಾಕೆ ಅಂದರೆ, ಬಾಂಗ್ಲಾ ಮುಸ್ಲಿಮರನ್ನು ಪತ್ತೆ ಹಚ್ಚಲು. ಅವರ ಅಪ್ಪ ಅಮ್ಮ, ಅಜ್ಜ ಅಜ್ಜಿ, ಹುಟ್ಟಿದ ದಿನಾಂಕ.. ಹೀಗೆ ಆಳವಾದ ತನಿಖೆಯ ಕ್ರಮ ಎಂಬುದು ಅವರ ಬಹಿರಂಗ ಹೇಳಿಕೆ.

ಬಿಹಾರದಲ್ಲಿ ಭಾರತೀಯ ಮುಸ್ಲಿಮರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರು. ಅವರ ಹೆಸರುಗಳು, ಅಪ್ಪ, ಅಜ್ಜನ ಹೆಸರುಗಳು ಕೂಡಾ ಸರಳವಾಗಿಲ್ಲ. ಹಿಂದೂ ಬಡವರು, ವಲಸಿಗರು, ಬುಡಕಟ್ಟು ಜನರು ದಾಖಲೆಗಳನ್ನು ಇಟ್ಟುಕೊಂಡಿಲ್ಲ. ಈ ಬಾಂಗ್ಲಾ ಮುಸ್ಲಿಮರ ಶೋಧನೆ ಹೆಸರಿನಲ್ಲಿ, ಭಾರತೀಯ ಮುಸ್ಲಿಮರನ್ನು ಮತ್ತು ಬುಡಕಟ್ಟು, ವಲಸೆ ಜನರನ್ನು ಕಟ್ಟಿ ಹಾಕಲಾಯಿತು. ಇದು ಆರೆಸ್ಸೆಸ್ ಅಂತರಂಗದ ಉದ್ದೇಶ.

ಇಂತಹವರಿಗೆ ಸಾಫ್ಟ್‌ವೇರ್ ಗೆಟ್‌ಔಟ್ ಎಂದಿತು. ಪರಿಷ್ಕರಣೆ ಗೊಂದಲದ ಗೂಡಾಯಿತು.

ಇದು ಗೊತ್ತಿದ್ದೂ, ಕೇಂದ್ರ ಸರಕಾರದ ಅಧಿಕಾರ ದುರುಪಯೋಗ ಮಾಡಿ ಪಶ್ಚಿಮ ಬಂಗಾಳದಲ್ಲಿ ಪರಿಷ್ಕರಣೆ ಮಾಡಿ ಚುನಾವಣೆ ಗೆದ್ದೂ ಆಯಿತು. ನನ್ನ ವಾದದ ಬಗ್ಗೆ ತಕರಾರು ಇರುವವರು, ಈ ವರೆಗೆ ಎಷ್ಟು ಬಾಂಗ್ಲಾ ದೇಶಿಗರ ಪತ್ತೆಯಾಗಿದೆ ಎಂಬ ಪಟ್ಟಿ ಕೊಟ್ಟರೆ ಸಾಕು.

ರಾಹುಲ್ ಗಾಂಧಿ ಈ ಪರಿಷ್ಕರಣೆ ಪ್ರಾರಂಭ ಆದ ತಕ್ಷಣ ಎಚ್ಚರಿಕೆ ನೀಡಿದ ಮೊದಲ ವ್ಯಕ್ತಿ. ಮಾಮೂಲಿಯಾಗಿ ಅವರನ್ನು ಪಪ್ಪು, ಮುಸ್ಲಿಮ್ ಪರ, ಇತ್ಯಾದಿ ಹೇಳಿ ನಿರ್ಲಕ್ಷ್ಯ ಮಾಡಿದರು. ಯಾವಾಗ ಪಶ್ಚಿಮ ಬಂಗಾಳದಲ್ಲಿ ಇದು ತೀವ್ರ ಸ್ವರೂಪ ಪಡೆಯಿತೋ ಆಗ ಜನ ತಿರುಗಿ ಬೀಳಲು ಪ್ರಾರಂಭಿಸಿದರು. ದೀದಿ ಕೋರ್ಟ್ ಪ್ರವೇಶ, ನೂರಾರು ಕೇಸ್ ದಾಖಲೆ, ಸಂವಾದ ಶುರುವಾಯಿತು.

ಆನಂತರ ಅನೇಕ ರಾಜ್ಯಗಳಲ್ಲಿ ಈ ಪರಿಷ್ಕರಣೆ ನಡೆದಿದೆ. 20 ರಾಜ್ಯಗಳಲ್ಲಿ ಮುಗಿದಿದೆ. ಇದುವರೆಗಿನ ಇಸಿಐ ಅಂಕಿ ಪ್ರಕಾರ ದೇಶಾದ್ಯಂತ ಇದುವರೆಗೆ 13.3 ಕೋಟಿ ಮತದಾರರ ಹೆಸರನ್ನು ಕರಡು ಪಟ್ಟಿಯಿಂದ ತೆಗೆಯಲಾಗಿದೆ. ಇದರಲ್ಲಿ ಶೇ. 71.5 ಅಂದರೆ ಸುಮಾರು 9.5 ಕೋಟಿ ಜನರನ್ನು ‘ಗೈರು, ಶಾಶ್ವತವಾಗಿ ವಲಸೆ’ ಎಂಬ ಕಾರಣಕ್ಕೆ ತೆಗೆಯಲಾಗಿದೆ. ಸತ್ತವರು 2.7 ಕೋಟಿ, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿ 1.01 ಕೋಟಿ.

ದಿಲ್ಲಿಯಲ್ಲಿ 1.45 ಕೋಟಿ ಇದ್ದ ಪಟ್ಟಿ 97 ಲಕ್ಷಕ್ಕೆ ಇಳಿದಿದೆ. ಕರ್ನಾಟಕದಲ್ಲಿ 1.07 ಕೋಟಿ ಜನರು ಎಎಸ್‌ಡಿ ಪಟ್ಟಿಗೆ ಸೇರಿದ್ದಾರೆ.

ಇಲ್ಲಿ ಇನ್ನೊಂದು ಮೂಲಭೂತ ಪ್ರಶ್ನೆಯಿದೆ.

ಎಲ್ಲಾ ಮತದಾರರ ಹಕ್ಕು ಅಂತಿಮವಾಗುವ ತನಕ ಚುನಾವಣೆ ನಡೆಯಬಾರದು. ಅಲ್ಲಿಯ ವರೆಗೂ ಹಳೆಯ ಮತದಾರರ ಪಟ್ಟಿಯನ್ನು ಪರಿಗಣಿಸಬೇಕಲ್ಲವೇ? ಇರಲಿ.

ಕೆಲವು ರಾಜ್ಯದಲ್ಲಿ ಅಷ್ಟು ಸಮಸ್ಯೆ ಕಾಣಿಸಲಿಲ್ಲ ಹೇಗೆ ಅನ್ನುವ ಪ್ರಶ್ನೆ. ಈ ಚಿದಂಬರ ರಹಸ್ಯ ಪ್ರಶ್ನೆಗೆ ಉತ್ತರ ಸರಳವಾಗಿದೆ.

ಮತದಾರರ ಹೆಸರುಗಳ ಪಟ್ಟಿ ಅಂತಿಮಗೊಳಿಸುವ ವ್ಯವಸ್ಥೆ ಕೇಂದ್ರೀಕೃತವಾಗಿದೆ. ಅಂದರೆ, ಈಗ ಅದು ಸ್ಥಳೀಯ ಮಟ್ಟದ ಅಧಿಕಾರಿ ನಿರ್ಧಾರ ಮಾಡುವುದಲ್ಲ. ದಿಲ್ಲಿ ಅಧಿಕಾರಿಗಳ ನಿರ್ಧಾರವೇ ಅಂತಿಮ. ಇಲ್ಲಿ ಈಗಾಗಲೇ ಸರಿ ಇದೆ ಎಂದು ಹೋಗಿದ್ದರೂ ಅಲ್ಲಿ ತಿರಸ್ಕಾರ ಮಾಡಬಹುದು. ತಮಿಳುನಾಡು, ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಅತಿಯಾದರೆ ಜನರಿಗೆ ಅನುಮಾನ ಬರುತ್ತದೆ ಅನ್ನುವ ಕಾರಣಕ್ಕೆ ಕೇಂದ್ರದ ಆ್ಯಪ್ ಹೇಗೆ ಬೇಕೋ ಹಾಗೆ ಆದೇಶ ಪಾಲಿಸಿದೆ. ಜೊತೆಗೆ ದಕ್ಷಿಣ ಭಾರತ ಶೈಕ್ಷಣಿಕವಾಗಿ ಹೆಚ್ಚು ಮುಂದುವರಿದಿದೆ. ಜನರ ಬಳಿ ಅಗತ್ಯ ದಾಖಲೆಗಳೂ ಇವೆ.

ಈ ವ್ಯವಸ್ಥೆಯನ್ನು ಅತ್ಯಂತ ಸರಳ ಮಾಡಬಹುದಿತ್ತು.

ಈಗಾಗಲೇ ನಡೆದ ಗೊಂದಲ, ತಕರಾರು, ಹೋರಾಟ, ಸಿಬ್ಬಂದಿಯ ಅಸಹಾಯಕತೆ ಪರಿಣಾಮವಾಗಿ ಕರ್ನಾಟಕದಲ್ಲಿ ಹಿಂದೂ-ಮುಸ್ಲಿಮ್ ವ್ಯತ್ಯಾಸ ಇಲ್ಲದೇ, ತಲೆ ಕೆಟ್ಟ ಆ್ಯಪ್ ತನ್ನ ಪಾಡಿಗೆ ತಾನು ನೋಟಿಸ್ ನೀಡ ತೊಡಗಿತ್ತು. ಎಲ್ಲವೂ ನಿಯಂತ್ರಣ ತಪ್ಪಿತ್ತು.

ಇಷ್ಟಾದರೂ ಜನ ತಮ್ಮ ದಾಖಲೆ ನೀಡಿಯೇ ವ್ಯವಸ್ಥೆಗೆ ಪ್ರತಿರೋಧ ತೋರಿದಾಗ ಕಂಗಾಲಾದ ಆಯೋಗ ನಿಯಮ ಸಡಿಲ ಮಾಡತೊಡಗಿದೆ.

2002ರ ಮತ್ತು 2025ರ ದಾಖಲೆಯಲ್ಲಿ ಸಣ್ಣ ಪುಟ್ಟ ದೋಷ ಇದ್ದರೆ, ಎಮ್ಯುನರೇಷನ್ ಅರ್ಜಿಯಲ್ಲಿಯೇ ಬಿಎಲ್‌ಒ ಮೂಲಕ ಸರಿ ಮಾಡಿಸಿ ಅಗತ್ಯ ಸರಳ ದಾಖಲೆ ಪಡೆದಿದ್ದರೆ, ಶೇ. 90 ಸಮಸ್ಯೆ ಮುಗಿದು ಹೋಗುತ್ತಿತ್ತು. ಈಗ ಗಲಾಟೆ ಆದ ಮೇಲೆ ಮಾಡುತ್ತಿರುವುದು ಅದನ್ನೇ. ಅವಳಿ ಮಕ್ಕಳಿಗೆ, ಹೆಸರಿನಲ್ಲಿ ಪದ ದೋಷ ಇದ್ದವರಿಗೆ, ಈ ಲಕ್ಷಾಂತರ ನೋಟಿಸ್, ವಿಚಾರಣೆ ಅಗತ್ಯವಿರಲಿಲ್ಲ. ಸಮಯ ಮತ್ತು ಹಣ ವ್ಯರ್ಥ.

ಅದು ಪ್ರಾಮಾಣಿಕ ಆಗಿದ್ದರೆ, ಒಂದು ರಾಜ್ಯದಲ್ಲಿ ಗೊಂದಲ ಆದಾಗಲೇ ತನ್ನ ತಪ್ಪುಗಳನ್ನು ತಿದ್ದುಪಡಿ ಮಾಡಬೇಕಿತ್ತು. ಆದರೆ ಅದೇ ಧಿಮಾಕಿನಿಂದ ಮುಂದುವರಿಯಿತು. ಈಗ ನಾಲ್ಕು ದಿಕ್ಕಿನಿಂದ ಜನ ತಿರುಗಿ ಬಿದ್ದರು.

ಆಯೋಗ ಕಾನೂನು ಬಾಹಿರವಾಗಿ ವರ್ತಿಸಿದ ವಿಚಾರ ದಾಖಲೆ ಸಹಿತ ಹೊರಗೆ ಬಂದು, ಜ್ಞಾನೇಶ್ ಕುಮಾರ್‌ರಾಜೀನಾಮೆಗೆ ವ್ಯಾಪಕ ಒತ್ತಡ ಬಂದಿದೆ.

ಈಗ ಒಟ್ಟಾರೆ ನೋಟಿಸ್ ನೀಡುವುದನ್ನು ಚುನಾವಣೆ ಆಯೋಗ ನಿಲ್ಲಿಸಿದೆ. ಇದು ತಪ್ಪಾಗಿದೆ ಎಂಬ ಕಾರಣಕ್ಕೆ ಅಲ್ಲ, ತಮ್ಮ ಆಟ ಜನರಿಗೆ ಅರ್ಥ ಆಗಿದೆ ಎಂಬ ಕಾರಣಕ್ಕೆ.

ಎಸ್‌ಐಆರ್ ಮಾಡಿರುವುದು ಮೃತ ವ್ಯಕ್ತಿಯ ಹೆಸರು ಅಳಿಸಲು, ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರವಾದವರ ಹೆಸರು ಅಳಿಸಲು, ಒಂದಕ್ಕಿಂತ ಹೆಚ್ಚು ಕಡೆ ಮತದಾರರಾಗಿ ನೋಂದಾಯಿಸಿರುವ ಹೆಸರು ಅಳಿಸಲು, ಅರ್ಹ ವಯಸ್ಸಿಲ್ಲದವರ, ಭಾರತೀಯ ನಾಗರಿಕರಲ್ಲದವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲು ಇಷ್ಟೆಲ್ಲಾ ಸರ್ಕಸ್ ಮಾಡಿ ಮುಗಿದ ಮೇಲೆ 25 ಸಾವಿರ ಫಾರಂ ನಂಬರ್ 7 ಮುದ್ರಿಸಿ, ಕೆಲವು ಬಿಜಿಪಿ ಕಾರ್ಯಕರ್ತರು ಮುಸ್ಲಿಮರ, ದಲಿತರ ಮತಗಳನ್ನು ತೆಗೆಯಲು ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದರೆ, ಆ ಫಾರಂ ಮುದ್ರಿಸಿದ್ದು ಯಾರು, ಹಂಚಿದ್ದು ಯಾರು, ಎಂಬುದು ಪ್ರಶ್ನೆ. ಹೀಗೆ ನೂರಾರು ಅರ್ಜಿ ತನಗೆ ಬರುವಾಗ ಆಯೋಗ ಯಾಕೆ ಎಚ್ಚರಗೊಂಡಿಲ್ಲ?

ಕಾಂಗ್ರೆಸ್ ಈ ಜಾಲವನ್ನು ಹಿಡಿದು ಕೊಟ್ಟಿದೆ. ಹಾಗಾದರೆ ಬೇರೆ ರಾಜ್ಯಗಳಲ್ಲಿ ಬಿಜೆಪಿ ಇದನ್ನು ಯಾವ ಪ್ರಮಾಣದಲ್ಲಿ ಮಾಡಿರಬಹುದು. ಇದು ಅಲ್ಪಸಂಖ್ಯಾತರ ವಿರುದ್ಧವೇ ಇದೆ ಅನ್ನುವುದಕ್ಕೆ ಇನ್ನು ಎಷ್ಟು ಸಾಕ್ಷಿ ಬೇಕು?

ಅಂದು ನೋಟು ಅಮಾನ್ಯದ ಉದ್ದೇಶ ಶುದ್ಧೀಕರಣ ಎಂದು ಹೇಳಲಾಯಿತು, ಆದರೆ ಹೊರೆ ಬಿದ್ದಿದ್ದು ಸಾಮಾನ್ಯ ಜನರ ಮೇಲೆ. ಇಂದು ವೋಟು ಶುದ್ಧೀಕರಣದ ಉದ್ದೇಶವೂ ಒಳ್ಳೆಯದೇ ಇರಬಹುದು, ಆದರೆ ಅದರ ವಿಧಾನದಿಂದ ಸಾಮಾನ್ಯ ಮತದಾರನೇ ಕ್ಯೂನಲ್ಲಿ ನಿಲ್ಲುವಂತಾಗಬಾರದು. ಮತದಾನದ ಹಕ್ಕು ಪ್ರಜಾಪ್ರಭುತ್ವದ ಜೀವ ಸೆಲೆ. ಅದು ಎಂದಿಗೂ ಬತ್ತಬಾರದು.

(ಲೇಖಕರು: ಸಾಹಿತಿ, ಚಿಂತಕ)

Tags

notesvotes
share
ಎಂ.ಜಿ. ಹೆಗಡೆ
ಎಂ.ಜಿ. ಹೆಗಡೆ
Next Story
X