Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕರಾವಳಿಗೆ ಈ ಆತಂಕ ಶಾಶ್ವತ

ಕರಾವಳಿಗೆ ಈ ಆತಂಕ ಶಾಶ್ವತ

ರಾಜಾರಾಂ, ತಲ್ಲೂರುರಾಜಾರಾಂ, ತಲ್ಲೂರು1 Oct 2026 9:20 AM IST
share
ಕರಾವಳಿಗೆ ಈ ಆತಂಕ ಶಾಶ್ವತ

ಮಂಗಳೂರು : ಬುಧವಾರ ನಡುಮಧ್ಯಾಹ್ನದ ಆಸುಪಾಸು ಮಂಗಳೂರಿನ ಎಂಆರ್‌ಪಿಎಲ್ ಕೋಕರ್ ಹೈಡ್ರೊಸಂಸ್ಕರಣ ಘಟಕದ (CHT ಯೂನಿಟ್) ಕೋಲ್ಡ್ ಸೆಪರೇಟರಿನಲ್ಲಿ ಉಂಟಾದ ಬಿರುಕಿನ ಕಾರಣಕ್ಕೆ ಭಾರೀ ಸ್ಫೋಟ ಮತ್ತು ಬೆಂಕಿ ಅವಘಡ ಸಂಭವಿಸಿದೆ. ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡಿರುವುದರಿಂದ ಕಾರ್ಖಾನೆಯ ಒಳಗೆ ಮತ್ತು ಹೊರಗಿನ ಆಸುಪಾಸಿನಲ್ಲಿ ಯಾವುದೇ ಆತಂಕ ಬೇಡ ಎಂದು ಕಾರ್ಖಾನೆ ಹಾಗೂ ಜಿಲ್ಲಾಡಳಿತ ನಾಗರಿಕರಿಗೆ ಭರವಸೆ ನೀಡಿವೆ. ಆದರೆ ಈ ದುರ್ಘಟನೆಯಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ.

ತೈಲ ರಿಫೈನರಿಗಳು ದೈನಂದಿನ ಚಟುವಟಿಕೆಗಳ ವೇಳೆ ಭಾರೀ ಪ್ರಮಾಣದಲ್ಲಿ ದಹನಶೀಲ ಅನಿಲಗಳು, ವಿಷಕಾರಿ ರಾಸಾಯನಿಕಗಳನ್ನು ನಿಭಾಯಿಸುವುದರಿಂದ ಅಲ್ಲಿ ಸ್ವಾಭಾವಿಕವಾಗಿಯೇ ಸ್ಫೋಟಗಳ, ಅಗ್ನಿ ಅವಘಡಗಳ ಮತ್ತು ಅನಿಲ ಸೋರಿಕೆಗಳ ಅಪಾಯ ಇದ್ದೇ ಇರುತ್ತದೆ. ಜೊತೆಗೆ, ಕಾರ್ಖಾನೆಯ ಕಾರ್ಯಾಚರಣೆಗಳ ಕಾರಣದಿಂದ ವಾತಾವರಣಕ್ಕೆ ಬಿಡುಗಡೆ ಆಗುವ ವಿಷಾನಿಲಗಳು, ತ್ಯಾಜ್ಯ ನೀರು ಆ ಪರಿಸರದ ನೆಲ-ಜಲ- ವಾಯುಗಳನ್ನೆಲ್ಲ ಕಲುಷಿತಗೊಳಿಸುವುದು ಕೂಡ ಸಹಜ. ಈ ಕಾರಣಕ್ಕಾಗಿಯೇ ಇಂತಹ ಕಾರ್ಖಾನೆಗಳನ್ನು ಜನನಿಬಿಡ ಪ್ರದೇಶಗಳಲ್ಲಿ ಸ್ಥಾಪಿಸುವ ಪರಿಪಾಠ ಇಲ್ಲ. ಕರಾವಳಿಗರ ದುರದೃಷ್ಟಕ್ಕೆ, 1988ರಲ್ಲೇ ಈ ಕಾರ್ಖಾನೆ ಇಲ್ಲಿ ಸ್ಥಾಪನೆಗೊಂಡಿದೆ. ಈಗದರ ಉಪೋತ್ಪನ್ನಗಳ ಮತ್ತು ಲಾಜಿಸ್ಟಿಕ್ಸ್‌ಗಳ ಕಾರಣಕ್ಕೆ ಸನ್ಯಾಸಿ ಸಂಸಾರವೂ ಹಿಗ್ಗಿದೆ. ಆರಂಭದಲ್ಲಿ ವಾರ್ಷಿಕ ಕೇವಲ 30 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಸ್ಥಾವರ ಆಗಿದ್ದ ಎಂಆರ್‌ಪಿಎಲ್, ಇಂದು ವಾರ್ಷಿಕ 1.5 ಕೋಟಿ ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿದೆ. ಇವೆಲ್ಲವೂ ಈಗ ಅದೇ ಜನನಿಬಿಡ ಪ್ರದೇಶದಲ್ಲೇ ಇಡಕಿರಿದಿವೆ.

ಅಲ್ಲಿನ ಪರಿಸರದ ಜನತೆ ಆರಂಭದಿಂದಲೂ ಎಂಆರ್‌ಪಿಎಲ್ ಕಾರಣಕ್ಕೆ ಅನುಭವಿಸುತ್ತಿರುವ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುತ್ತಲೇ ಇದ್ದಾರೆ, ಆದರೆ ಅದನ್ನು ಕೇಳಿಸಿಕೊಳ್ಳುವವರು ಇಲ್ಲದ ಸ್ಥಿತಿ ಇದೆ. ಎಂಆರ್‌ಪಿಎಲ್‌ನಲ್ಲಿ ಇಂತಹ ಅವಘಡಗಳು ಸಂಭವಿಸಿರುವುದು ಇದೇ ಮೊದಲೇನಲ್ಲ. 2011ರ ಅಕ್ಟೋಬರ್‌ನಲ್ಲಿ ಮೂರನೇ ಹಂತದ ನಿರ್ಮಾಣ ಸೈಟ್‌ನಲ್ಲಿ ಉಂಟಾದ ಸ್ಫೋಟಕ್ಕೆ ಒಬ್ಬ ವ್ಯಕ್ತಿ ಜೀವ ತೆತ್ತಿದ್ದು, ಮೂವರು ಗಾಯಗೊಂಡಿದ್ದರು. ಕಳೆದ ವರ್ಷ (2025) ಜುಲೈ ತಿಂಗಳಿನಲ್ಲಿ, ರಿಫೈನರಿ ಸಂಕೀರ್ಣದ ಒಳಗೇ ಹೈಡ್ರೋಜನ್ ಸಲ್ಫೆ ಡ್ ಅನಿಲದ ವಿಷಕ್ಕೆ ಇಬ್ಬರು ಕಾರ್ಖಾನೆ ಸಿಬ್ಬಂದಿ ಬಲಿ ಆಗಿದ್ದರು. ಕಾರ್ಖಾನೆಯಿಂದ ಆಗಾಗ ಅಸಹಜ ಸ್ಫೋಟದ ಸಣ್ಣ-ಪುಟ್ಟ ಸದ್ದುಗಳು ಸ್ಥಳೀಯರಿಗೆ ಕೇಳಿಸುತ್ತಿರುವುದು ಕೂಡ ಇದೇ ಹೊಸದೇನಲ್ಲ. ಆದರೆ ಬುಧವಾರದ ಸ್ಫೋಟ, ಅದರ ತೀವ್ರತೆ, ಅದು ಎಬ್ಬಿಸಿದ ಆಗಸದೆತ್ತರದ ಹೊಗೆ ಇಡಿಯ ನಗರವನ್ನು ಒಂದೆರಡು ತಾಸು ಆತಂಕಕ್ಕೆ ದೂಡಿದ್ದು ಸತ್ಯ. ಇದಕ್ಕೆ ಕಾರಣ ಏನೆಂಬುದನ್ನು ತಿಳಿಯುವ ಹಕ್ಕು ಸ್ಥಳೀಯ ಜನತೆಗೆ ಇದೆ. ಜೊತೆಗೆ, ಪರಿಸರದಲ್ಲಿ ಸ್ಫೋಟದ ತೀವ್ರತೆಯಿಂದ ಉಂಟಾಗಿರುವ ಹಾನಿಗಳಿಗೆ ಪರಿಹಾರ ಒದಗಿಸುವ ಹೊಣೆಯೂ ಕಾರ್ಖಾನೆಯದು.

ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕ-ಇರಾನ್ ಕದನ ಮತ್ತು ರಶ್ಯ-ಉಕ್ರೇನ್ ಕದನಗಳ ಕಾರಣದಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಇರುವ ಒತ್ತಡ ಯಾವ ಪ್ರಮಾಣದ್ದೆಂದರೆ, ಈ ತಿಂಗಳ ಆದಿಯಲ್ಲಿ APPEC ಸಮ್ಮೇಳನದಲ್ಲಿ ಮಾತನಾಡಿದ ಎಂಆರ್‌ಪಿಎಲ್ ನಿರ್ದೇಶಕರೊಬ್ಬರು, ಕಳೆದ ಆರು ತಿಂಗಳುಗಳಿಂದ ತಮ್ಮ ಸಂಸ್ಥೆ ತನ್ನ ಸಾಮರ್ಥ್ಯದ 105 ಶೇ.ದಿಂದ 108 ಶೇ.ದಷ್ಟು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ನಡೆಸುತ್ತಿದೆ ಮತ್ತು ಈ ಸ್ಥಿತಿ 2027ರ ಮಾರ್ಚ್ ತನಕವೂ ಮುಂದುವರಿಯಲಿದೆ ಎಂದು ಹೇಳಿದ್ದು ಮಾಧ್ಯಮಗಳಲ್ಲಿ ವರದಿ ಆಗಿತ್ತು. ಹೀಗೆ, ಸಾಮರ್ಥ್ಯ ಮೀರಿ ದುಡಿದ ಯಂತ್ರಗಳು ಕೈಕೊಟ್ಟ ಕಾರಣಕ್ಕೆ ಬುಧವಾರದ ಅವಘಡ ಸಂಭವಿಸಿದೆಯೇ ಎಂಬುದು ಪರಿಶೀಲಿಸಬೇಕಾಗಿರುವ ಅಂಶ.

ಎಂಆರ್‌ಪಿಎಲ್‌ನಿಂದ ಬರೇ 10-15 ಕಿ.ಮೀ. ವ್ಯಾಪ್ತಿಯ ಒಳಗೆ ISPRLನ ತೈಲ ಸಂಗ್ರಹಾಗಾರ, HPCLನ LPG ಸಂಗ್ರಹಾಗಾರ, ವಾಣಿಜ್ಯ ಸ್ಟೋರೇಜ್ ಘಟಕ ಇತ್ಯಾದಿಗಳೆಲ್ಲ ಇವೆ. ಇವೆಲ್ಲವೂ ಅತ್ಯಂತ ದಹನಶೀಲ ಸಂಗ್ರಹಗಳೇ ಆಗಿವೆ ಎಂಬುದು ಗಮನಾರ್ಹ ಸಂಗತಿ. ಹಾಗಾಗಿ ಇಂದು ಮಂಗಳೂರು ತಾಲೂಕು ವಸ್ತುಶಃ ಅಗ್ನಿಕುಂಡದ ಮೇಲಿದೆ ಎಂದರೆ ತಪ್ಪಾಗದು. ಒಮ್ಮೆ ಜನವಸತಿ ಪ್ರದೇಶದಲ್ಲಿ ಮೂಗು ತೂರಿಸಲು ಬಿಟ್ಟಮೇಲೆ, ಈ ಕೈಗಾರಿಕೆಗಳಿಗೆ ಅವುಗಳದೇ ಮರ್ಜಿ.

ಚಾರಿತ್ರಿಕವಾಗಿಯೂ ವಾಣಿಜ್ಯ ಕೇಂದ್ರವಾಗಿದ್ದ ಕರ್ನಾಟಕ ಕರಾವಳಿಯು ನವಮಂಗಳೂರು ಬಂದರು 1975ರಲ್ಲಿ ಕಾರ್ಯಾಚರಣೆ ಆರಂಭಿಸಿದ ಬಳಿಕ, ತನ್ನ ಹಳೆಯ ವೈಭವ ಮರುಕಳಿಸಬಹುದೆಂಬ ನಿರೀಕ್ಷೆಯಲ್ಲಿತ್ತು. ಅಲ್ಲಿನ ಯೋಜನಾ ನಿರಾಶ್ರಿತರನ್ನೇ ಒಕ್ಕಲೆಬ್ಬಿಸಿ JSPI ಬಂದಾಗಲೂ ಜನತೆ ತಮ್ಮ ಯುವಕರಿಗೆ ಇಲ್ಲೇ ಉದ್ಯೋಗಾವಕಾಶಗಳು ಸಿಗಲಿವೆ ಎಂದೆಲ್ಲ ಕನಸು ಕಂಡಿದ್ದರು. ಆದರೆ ಈಗ ಕಳೆದ 50 ವರ್ಷಗಳಲ್ಲಿ ಈ ಪರಿಯ ಕೈಗಾರಿಕೀಕರಣದಿಂದ ಕರಾವಳಿಗೆ ನಿಜಕ್ಕೂ ದೊರೆತದ್ದೇನು?

ಎಂಆರ್‌ಪಿಎಲ್‌ಗೆ ಪೂರಕವಾದ ಹಲವು ಕಾರ್ಖಾನೆಗಳು, ಉಪ ಉತ್ಪನ್ನ ಸಂಸ್ಕರಣಾ ಘಟಕಗಳು, ಬಂದರಿನ ಲಾಜಿಸ್ಟಿಕ್ಸ್ ಆಸೆಗೆ ಬಂದು ನೆಲೆಯೂರಿದ ಹತ್ತಾರು ‘ಆನಿ’ ಕಂಪೆನಿಗಳು ಈಗ ಯಾವ ಮಟ್ಟಿಗೆ ಕರಾವಳಿಯನ್ನು ಆವರಿಸತೊಡಗಿವೆ ಎಂದರೆ, ಇಲ್ಲಿನ ಸ್ಥಳೀಯರೇ ಇಲ್ಲಿ ಪರಕೀಯರಾಗತೊಡಗಿದ್ದಾರೆ. ಅವರಿಗೆ ಯಾವ ಧ್ವನಿಯೂ ಉಳಿದಿಲ್ಲ. ಇಲ್ಲಿನ ನೆಲ, ಜಲ, ಆಕಾಶ- ಎಲ್ಲಕ್ಕೂ ಈಗ ಆನಿಗಳೇ ಒಡೆಯರು. ದಾಖಲೆಗಳು ಮತ್ತು ಕಾಗದ ಪತ್ರಗಳ ಮೇಲೆ ಅತ್ಯಂತ ಪರಿಸರ ಸಹ್ಯವಾಗಿರುವ ಈ ಕಂಪೆನಿಗಳು ಹೇಳುವ ಬಿಳಿಸುಳ್ಳುಗಳಿಗೆ ಲೆಕ್ಕವಿಲ್ಲ. ಸರಕಾರದ ಪರವಾಗಿ ಜನರ ಹಿತರಕ್ಷಣೆ ಮಾಡಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತದರ ಅಧಿಕಾರಿಗಳು ಈ ಸುಳ್ಳಿನ ಎಕೊಸಿಸ್ಟಮ್‌ಗೆ ರಕ್ಷಣೆ ಒದಗಿಸುವ ವಸೂಲಿ ಕೇಂದ್ರಗಳಾಗಿ ಮಾರ್ಪಟ್ಟಿದ್ದಾರೆ. ಕಳೆದ 50 ವರ್ಷಗಳಿಂದೀಚೆಗೆ ಕರಾವಳಿಯ ಉದ್ದಗಲಕ್ಕೂ ಈ ಆನಿ ಕಂಪೆನಿಗಳ ಕಾರಣದಿಂದಾಗಿ ಹೆಚ್ಚುತ್ತಿರುವ ಚರ್ಮ ರೋಗಗಳು, ಅಲರ್ಜಿ, ಶ್ವಾಸಕೋಶದ ತೊಂದರೆಗಳು, ಕ್ಯಾನ್ಸರ್ ಮತ್ತಿತರ ಮಾರಣಾಂತಿಕ ಕಾಯಿಲೆಗಳ ಪ್ರಮಾಣಕ್ಕೆ ಕಾರಣ ಪತ್ತೆ ಮಾಡುವ ಗೋಜಿಗೆ ಯಾರೂ ಹೋಗುತ್ತಿಲ್ಲ. ಏಕೆಂದರೆ, ಇಲ್ಲಿ ಜನವಸತಿ ಇರುವುದು ಅವರಿಗೆ ಬೇಕಿಲ್ಲ. 90ರ ದಶಕದಲ್ಲಿ ಕರಾವಳಿಯ ಧಾರಣ ಸಾಮರ್ಥ್ಯದ ಬಗ್ಗೆ ಚರ್ಚೆ ವ್ಯಾಪಕವಾಗಿ ನಡೆಯುತ್ತಿತ್ತು. ಆದರೆ ಇಂದು ಆ ಬಗ್ಗೆ ಯಾರೆಂದರೆ ಯಾರೂ ಸೊಲ್ಲೆತ್ತುತ್ತಿಲ್ಲ. ಕರಾವಳಿ ಜನವಸತಿಯ ಕೇಂದ್ರವಾಗಿ ಉಳಿಯುವುದು ಅವರಿಗೆ ಬೇಕಿಲ್ಲ.

ಕರಾವಳಿಗೆ ಈ ರೀತಿಯ ಆತಂಕಗಳು ಇನ್ನು ಶಾಶ್ವತ. ಪಕ್ಷ ರಾಜಕೀಯಗಳಿಂದ ಮೇಲೆದ್ದು ಬಂದು ಕರಾವಳಿಯನ್ನು ಬದುಕಲು ಯೋಗ್ಯಗೊಳಿಸಿಕೊಳ್ಳದೇ ಹೋದರೆ, ಭವಿಷ್ಯದ ತಲೆಮಾರುಗಳು ನಮ್ಮನ್ನು ಕ್ಷಮಿಸುವುದಿಲ್ಲ.

Tags

MRPLMangaluru
share
ರಾಜಾರಾಂ, ತಲ್ಲೂರು
ರಾಜಾರಾಂ, ತಲ್ಲೂರು
Next Story
X