Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವೃದ್ಧ ದಂಪತಿಯ ಪೋಷಣೆಯಲ್ಲಿರುವ ಮೂವರು...

ವೃದ್ಧ ದಂಪತಿಯ ಪೋಷಣೆಯಲ್ಲಿರುವ ಮೂವರು ಮಕ್ಕಳಿಗೆ ಬೇಕಿದೆ ಅಭಯ ಹಸ್ತ

ದಸ್ತಗೀರ ನದಾಫ್ ಯಳಸಂಗಿದಸ್ತಗೀರ ನದಾಫ್ ಯಳಸಂಗಿ26 Nov 2025 10:39 AM IST
share
ವೃದ್ಧ ದಂಪತಿಯ ಪೋಷಣೆಯಲ್ಲಿರುವ ಮೂವರು ಮಕ್ಕಳಿಗೆ ಬೇಕಿದೆ ಅಭಯ ಹಸ್ತ

ಕಲಬುರಗಿ : ಉತ್ತರ ಕರ್ನಾಟಕದ ಏಕೈಕ ಶುಷ್ಕ ಅರಣ್ಯ ಪ್ರದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿಂಚೋಳಿ ವನ್ಯಜೀವಿಧಾಮದ ಪ್ರದೇಶ ಹಲವು ಸಮಸ್ಯೆಗಳಿಂದ ಕೂಡಿದೆ. ಸದ್ಯ ಅರಣ್ಯದೊಳಗಿರುವ ಗ್ರಾಮ, ತಾಂಡಾಗಳ ಪರಿಸ್ಥಿತಿ, ಯುವಕರ ನಿರುದ್ಯೋಗ, ಅನಕ್ಷರತೆ ನಡುವೆಯೇ ತಂದೆ ತಾಯಿ ಇಲ್ಲದ ಮೂವರು ಅನಾಥ ಮಕ್ಕಳ ಪರಿಸ್ಥಿತಿಯೂ ಕಷ್ಟಕರವಾಗಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿಯ ಶಾದಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೇವಾ ನಾಯಕ ತಾಂಡಾದಲ್ಲಿ ತಂದೆ-ತಾಯಿ ಕಳೆದುಕೊಂಡ ಮೂವರು ಚಿಕ್ಕ ಮಕ್ಕಳು, ಅಜ್ಜ ಅಜ್ಜಿಯ ಪೋಷಣೆಯಲ್ಲಿ ಈಗ ಭವಿಷ್ಯದ ಭರವಸೆಗಾಗಿ ಕಾದು ಕುಳಿತಿದ್ದಾರೆ.

ತಾಂಡಾದಲ್ಲಿ ಜೀವನ ಸಾಗಿಸುತ್ತಿರುವ ವೃದ್ಧ ದಂಪತಿಗಳಾದ ಚಂದ್ರ ಜಾಧವ್ ಹಾಗೂ ದೇವಿಬಾಯಿ ಎಂಬವರು ತಮ್ಮ ಮಕ್ಕಳ ಬದಲಿಗೆ ಮೊಮ್ಮಕ್ಕಳನ್ನು ಸಾಕುವಂತಹ ದಯನೀಯ ಸ್ಥಿತಿ ಬಂದೊದಗಿದೆ. ಜೀವನ ಸಾಗಿಸಲು ಆರ್ಥಿಕವಾಗಿ ಬಲ ತುಂಬುತ್ತಿದ್ದ ಪುತ್ರ ಹಾಗೂ ಸೊಸೆಯನ್ನು ಕಳೆದುಕೊಂಡ ಚಂದ್ರ ಜಾಧವ್ ದಂಪತಿ, ಈಗ ಮೊಮ್ಮಕ್ಕಳನ್ನು ಸಾಕುವುದು, ಅವರಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಲು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಮಕ್ಕಳ ಭವಿಷ್ಯ ರೂಪಿಸಲು ಅವರು ‘ಅಭಯ ಹಸ್ತ’ಕ್ಕಾಗಿ ಭರವಸೆಯಲ್ಲಿದ್ದಾರೆ.

ಮೊಮ್ಮಕ್ಕಳನ್ನು ಸಾಕುತ್ತಿರುವ ವೃದ್ಧ ದಂಪತಿ: ಚಂದ್ರ ಜಾಧವ್ ಹಾಗೂ ದೇವಿಬಾಯಿ ದಂಪತಿಯ ಪುತ್ರ ಪೂರಣ್ ಜಾಧವ್ ಹಾಗೂ ಸೊಸೆ ರೇಣುಕಾ ಅವರು ಜೀವನ ನಡೆಸುವುದಕ್ಕಾಗಿ ಬೇರೆ ನಗರಗಳಿಗೆ ವಲಸೆ (ಗುಳೆ) ಹೋಗಿ ತಮ್ಮ ಬದುಕು ಸಾಗಿಸುತ್ತಿದ್ದರು. ಗುಳೆ ಹೋದ ಪ್ರದೇಶದಲ್ಲಿ ಏಕಾಏಕಿ ಸೊಸೆ ನಿಧನರಾಗಿದ್ದರಿಂದ ಮಗ ಪೂರಣ್, ತನ್ನ ಮಕ್ಕಳನ್ನು ಕರೆದುಕೊಂಡು ಪಾಲಕರ ಜೊತೆಗೆ ಸೇವಾ ನಾಯಕ ತಾಂಡಾದಲ್ಲಿ ನೆಲೆಸಿದ್ದ. ಬಳಿಕ ಪತ್ನಿ ತೀರಿಹೋದ ಕೆಲ ತಿಂಗಳಲ್ಲೇ ಪೂರಣ್ ಕೂಡ ಮೃತಪಟ್ಟರು. ಹಾಗಾಗಿ ಮೃತಪಟ್ಟ ಮಗ ಸೊಸೆಯ ಮಕ್ಕಳನ್ನು ಸಾಕುವ ಹೊಣೆ ಅಜ್ಜ, ಅಜ್ಜಿಯದಾಗಿದೆ. ಅಜ್ಜಿ ಮಾತ್ರ ಕೂಲಿ ಕೆಲಸ ಮಾಡುತ್ತ ಅಜ್ಜ ಹಾಗೂ ಮೂರು ಮೊಮ್ಮಕ್ಕಳನ್ನು ಸಾಕುತ್ತಿದ್ದಾರೆೆ. ಬೆಳ್ಳಂಬೆಳಗ್ಗೆ 4 ಗಂಟೆಗೆ ಎದ್ದು ಕೂಲಿಗಾಗಿ ಅರಸುತ್ತಾ ಹೋಗುವ ಅಜ್ಜಿ ದೇವಿಬಾಯಿ ಮರಳಿ ಬರುವುದು ಸಂಜೆಯ ಹೊತ್ತಿನಲ್ಲಿ, ಅಲ್ಲಿಯವರೆಗೆ ಮೊಮ್ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಅಜ್ಜನ ಕೆಲಸವಾಗಿದೆ.

8 ವರ್ಷದೊಳಗಿರುವ ಮೂವರು ಮಕ್ಕಳಿಗಿಲ್ಲ ಆಧಾರ್ ಕಾರ್ಡ್:

ಮೃತ ಪೂರಣ್ ಹಾಗೂ ರೇಣುಕಾ ದಂಪತಿಗೆ ಒಂದು ಗಂಡು, ಎರಡು ಹೆಣ್ಣುಮಕ್ಕಳಿವೆ. 8 ವರ್ಷದ ದೀಪಿಕಾ, 5 ವರ್ಷದ ದಿವ್ಯಾ ಹಾಗೂ ಮೂರುವರೆ ವರ್ಷದ ಸಾಯಿರಾಂ ಎಂಬ ಬಾಲಕನಿದ್ದಾನೆ. ಈ ಮೂರೂ ಮಕ್ಕಳಿಗೆ ತಂದೆ ತಾಯಿಯಷ್ಟೇ ಅಲ್ಲದೆ ಗುರುತಿಗಾಗಿ ಇರುವ ‘ಆಧಾರ್ ಕಾರ್ಡ್’ ಕೂಡ ಇಲ್ಲ. ದುಡಿಯುವ ವಯಸ್ಸು ಮೀರಿದರೂ ಅಜ್ಜಿ ನಿತ್ಯವೂ ಮಕ್ಕಳಿಗಾದರೂ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆಯಿದೆ. ಇಂತಹ ಸನ್ನಿವೇಶದಲ್ಲೂ ಅನಾಥ ಮಕ್ಕಳನ್ನು ಸಾಕುವುದು, ಶಿಕ್ಷಣ ಕೊಡಿಸುವುದು ತುಂಬಾ ಕಷ್ಟವಾಗಿದೆ. ಅವರಿಗೆ ಸರಕಾರ, ಸಂಘ ಸಂಸ್ಥೆಗಳು ಸಹಾಯಕ್ಕೆ ಬರಬೇಕು, ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತಿತ್ತರ ದಾಖಲೆಗಳನ್ನು ಸೃಷ್ಟಿಸಿ, ಸರಕಾರದ ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಅರಣ್ಯ ಪ್ರದೇಶದಲ್ಲಿರುವ ಈ ತಾಂಡಕ್ಕೆ ಹೋಗಲು ಚಿಂಚೋಳಿಯಿಂದ ಕೇವಲ 12 ಕಿಮೀ ದೂರವಿದ್ದರೂ ಅಧಿಕಾರಿಗಳು, ಶಾಸಕ, ಸಂಸದರು, ಇಲ್ಲಿನ ಜನರ ಸಮಸ್ಯೆಗಳನ್ನು ಆಲಿಸಲು ಬರುವುದಿಲ್ಲ. ಪಕ್ಕದಲ್ಲಿ ತೆಲಂಗಾಣ ರಾಜ್ಯವಿದೆ, ಗಡಿ ಪ್ರದೇಶದಲ್ಲಿರುವ ಜನರ ಅಭ್ಯುದಯಕ್ಕೆ, ಮಕ್ಕಳ ಶಿಕ್ಷಣಕ್ಕೆ ಸರಕಾರ ಹೆಚ್ಚಿನ ಆಸಕ್ತಿ ತೋರಬೇಕು. ಜನಜೀವನ ಸುಧಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನರೇಶ್ ಜಾಧವ್ ಒತ್ತಾಯಿಸಿದ್ದಾರೆ.

ಒಂದೊತ್ತಿನ ಊಟಕ್ಕೂ ಪರದಾಡುವ ಕುಟುಂಬಕ್ಕೆ ಮಕ್ಕಳನ್ನು ಸಾಕುವುದು ಕಷ್ಟವಾಗಿದೆ, ಸರಕಾರ, ಸಂಘ ಅಥವಾ ಮಕ್ಕಳಿಗೆ ಸಂಬಂಧಪಟ್ಟಂತೆ ಇರುವ ಆಯೋಗ, ಸಂಸ್ಥೆಗಳು ಇತ್ತ ಕಡೆ ಗಮನ ಹರಿಸಬೇಕು, ಅನಾಥ ಮಕ್ಕಳನ್ನು ದತ್ತು ಪಡೆದು ಅವರಿಗೆ ಶಿಕ್ಷಣ, ವಸತಿ, ಇತರ ಸೌಲಭ್ಯಗಳನ್ನು ಒದಗಿಸಬೇಕು.

-ಪ್ರಕಾಶ್ ರಾಠೋಡ್, ಸ್ಥಳೀಯ ಕೂಲಿ ಕಾರ್ಮಿಕ

share
ದಸ್ತಗೀರ ನದಾಫ್ ಯಳಸಂಗಿ
ದಸ್ತಗೀರ ನದಾಫ್ ಯಳಸಂಗಿ
Next Story
X