Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪುಸ್ತಕ ಸಾಂಗತ್ಯ
  5. ಸಮಾಜದ ಜಾಢ್ಯಗಳನ್ನು ಚರ್ಚೆಗೊಡ್ಡುವ...

ಸಮಾಜದ ಜಾಢ್ಯಗಳನ್ನು ಚರ್ಚೆಗೊಡ್ಡುವ ‘ತೊಡರುಬಳ್ಳಿ’

ಗಿರೀಶ್ ತಾಳಿಕಟ್ಟೆಗಿರೀಶ್ ತಾಳಿಕಟ್ಟೆ30 Sept 2026 1:41 PM IST
share
ಸಮಾಜದ ಜಾಢ್ಯಗಳನ್ನು ಚರ್ಚೆಗೊಡ್ಡುವ ‘ತೊಡರುಬಳ್ಳಿ’

‘‘ಮೌನದ ಹಿಂದಿನ ಮಾತುಗಳಿಗೆ ಕಿವಿಯಾನಿಸಬೇಕಾದ್ದು ನಿಜವಾದ ಪತ್ರಕರ್ತನ ಕೆಲಸ’’ ಇವು ಅಮೆರಿಕೆಯ ಪತ್ರಕರ್ತೆ ಆಮಿ ಗುಡ್ಮನ್ಳ ಮಾತುಗಳು. ಕಾರ್ಪೊರೇಟ್ ಫಂಡನ್ನು ಧಿಕ್ಕರಿಸಿ, ನೊಂದವರಿಗಾಗಿಯೇ ಮಾಧ್ಯಮ ಸಂಸ್ಥೆ ಕಟ್ಟುತ್ತೇನೆಂದು ಹೊರಟ ಈಕೆ 1996ರಲ್ಲಿ Democracy now! ಎಂಬ ವಿಶಿಷ್ಟ ಸುದ್ದಿ ವೇದಿಕೆಯನ್ನು ಹುಟ್ಟುಹಾಕುತ್ತಾರೆ. ನಿರ್ಲಕ್ಷಿತರ, ದನಿ ಅಡಗಿಸಲ್ಪಟ್ಟವರ ದನಿಯಾಗಿ ಕೆಲಸ ಮಾಡುತ್ತಾರೆ. ಇವತ್ತು ಪ್ರಪಂಚದಾದ್ಯಂತ ೧,೪೦೦ಕ್ಕೂ ಹೆಚ್ಚು ಟಿವಿ ಮತ್ತು ರೇಡಿಯೊ ಸ್ಟೇಷನ್ಗಳಲ್ಲಿ ಕೋ-ಪ್ಲಾಟ್ಫಾರ್ಮ್ ಸೃಷ್ಟಿಸಿ ತಾನಂದುಕೊಂಡ ಪತ್ರಿಕೋದ್ಯಮವನ್ನು ಸಕ್ಸಸ್ಫುಲ್ ಮಾಡೆಲ್ ಆಗಿ ಕಟೆದು ನಿಲ್ಲಿಸಿದ್ದಾರೆ.

ಪತ್ರಕರ್ತರಾದವರ ತುಡಿತ, ಆದ್ಯತೆಗಳು ಏನಾಗಿರಬೇಕು ಅನ್ನುವುದಕ್ಕೆ ಮೇಲಿನ ಆಕೆಯ ಮಾತು ಒಂದರ್ಥದಲ್ಲಿ ದಿಕ್ಸೂಚಿ. ಮೌನ ಕೆಲವೊಮ್ಮೆ ತಾನಾಗಿಯೇ ನೆಲೆಸುತ್ತದೆ. ಆದರೆ ಬಹಳಷ್ಟು ಸಲ ಅದನ್ನು ಹೇರಲಾಗಿರುತ್ತದೆ. ಮಾತಾಡಲು ಸಾವಿರಾರು ನೋವುಗಳಿದ್ದರೂ, ಹೇಳಿಕೊಳ್ಳಲು ನೂರಾರು ಕಥೆಗಳಿದ್ದರೂ ಬಲಾಢ್ಯರು ಹೇರಿದ ಮೌನವನ್ನು ಧರಿಸಿ, ದನಿಕಳೆದುಕೊಂಡು ಮೂಕರಾದವರ ಮೌನಗಳು ಪತ್ರಕರ್ತರ ಆಯ್ಕೆಗಳಾಗಬೇಕು; ಸದ್ದು-ಗದ್ದಲಗಳನ್ನು ವರದಿ ಮಾಡುವುದಷ್ಟೇ ಅವರ ಕೆಲಸವಲ್ಲ ಎನ್ನುವುದು ಆಮಿಯ ಮಾತುಗಳ ತಾತ್ಪರ್ಯ.

ಆಕೆಯ ಮಾತು ಪತ್ರಕರ್ತರ ಕರ್ತವ್ಯವನ್ನು ಸ್ಪಷ್ಟಪಡಿಸುವುದರ ಜೊತೆಗೆ, ಈ ಸಮಾಜದಲ್ಲಿ ಅವರಿಗಿರುವ ಹೊಣೆ ಮತ್ತು ಮಹತ್ವವನ್ನೂ ಮನವರಿಕೆ ಮಾಡಿಕೊಡುತ್ತವೆ. ವೈದ್ಯಕೀಯ ಲೋಕದಲ್ಲಿ ಚಿಕಿತ್ಸೆಗಿಂತಲೂ ರೋಗಪತ್ತೆಗೆ ಹೆಚ್ಚು ಮಹತ್ವವಿದೆ. ರೋಗ ಯಾವುದು? ಅದು ಬರಲು ಏನು ಕಾರಣ? ಎಂಬುದನ್ನು ನಿಖರವಾಗಿ ಪತ್ತೆ ಹಚ್ಚಿದರೆ, ರೋಗವನ್ನು ಅರ್ಧ ಗುಣಪಡಿಸಿದಂತೆ. ಇದು ಸಮಾಜದ ಪಿಡುಗುಗಳಿಗೂ ಅನ್ವಯ. ಇಂತಹ ಪಿಡುಗುಗಳನ್ನು ಪತ್ತೆ ಹಚ್ಚಬಲ್ಲ ಸಾಮರ್ಥ್ಯ ಇರುವುದು ಪತ್ರಕರ್ತರಿಗೆ. ವಸಾಹತು ಕಾಲಘಟ್ಟದಲ್ಲಿ ನಮ್ಮ ಸಮಾಜ ನರಳುತ್ತಿದ್ದ ಬಹಳಷ್ಟು ಜಾಢ್ಯಗಳಿಗೆ ಮದ್ದು ಅರೆದ ಮಹಾತ್ಮಾ ಗಾಂಧಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಇಬ್ಬರೂ ತಮ್ಮ ಆ ಕಾರ್ಯಕ್ಕಾಗಿ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡಿದ್ದು ಈ ಸಮಾಜಕ್ಕೆ ಪತ್ರಕರ್ತರ ಮಹತ್ವವನ್ನು ಅರ್ಥ ಮಾಡಿಸುತ್ತದೆ.

ಪತ್ರಕರ್ತರಾಗಿ ಡಾ. ಎಂ.ಎಸ್. ಮಣಿಯವರು ತಮಗಿರಬಹುದಾದ ಮಿತಿಯಲ್ಲಿ, ಆಮಿ ಗುಡ್ಮನ್ ಹೇಳಿದ ಮಾತಿನಂತೆ ನೊಂದವರ ಮೌನಕ್ಕೆ ಕಿವಿಯಾನಿಸುತ್ತಾ ಬಂದಿರುವುದು ಅವರ ‘ತೊಡರುಬಳ್ಳಿ’ ಕೃತಿ ಓದಿದಾಗ ಮನವರಿಕೆಯಾಗುತ್ತದೆ. ಬಿಡಿ ಲೇಖನಗಳ ಸಂಗ್ರಹವಾದ ಈ ಕೃತಿಯ ಒಟ್ಟಾರೆ ಸಾರಾಂಶವು ಶೋಷಿತರ ತಲ್ಲಣಗಳಿಗೆ ದನಿಯಾಗಿ ಮಿಡಿಯುತ್ತದೆ. ಭಾರತದಂತಹ ಸಂಕೀರ್ಣ ಸಮಾಜದಲ್ಲಿ ಎಲ್ಲವನ್ನೂ ಜಾತಿಯೇ ನಿರ್ಧರಿಸುತ್ತದೆ. ಅದು ಪ್ರತ್ಯಕ್ಷವಾಗಿರಬಹುದು ಅಥವಾ ಪರೋಕ್ಷವಾಗಿಯೂ ಇರಬಹುದು. ಸ್ವತಃ ಹಿಂದುಳಿದ ಸಮುದಾಯದಿಂದ ಬಂದ ಮಣಿಯವರು ಈ ಪ್ರಭಾವ ಮತ್ತು ಪರಿಣಾಮಗಳನ್ನು ಹಾದು ಬಂದಂತವರು. ಹಾಗಾಗಿ ಅವರೊಳಗಿನ ಪತ್ರಕರ್ತ ಸದಾ ಶೋಷಣೆ ಮತ್ತು ಅಸಮಾನತೆಯ ಸಂತ್ರಸ್ತರಿಗೆ ಕಿವಿಯಾನಿಸಲು ಹಾತೊರೆದಿರುವುದು ಇಲ್ಲಿನ ಬರಹಗಳು ಸಾಬೀತು ಮಾಡುತ್ತವೆ. ಸಮಾಜದ ಸರಾಗ ಮುಂಚಲನೆಗೆ ಅಡ್ಡಿಯಾಗುವಂತೆ ಯಾವುದೆಲ್ಲಾ ತೊಡರುಬಳ್ಳಿಗಳಾಗಿ ನಮ್ಮ ಪ್ರಗತಿಯ ಕಾಲುಗಳಿಗೆ ಸುತ್ತಿಕೊಂಡಿವೆಯೋ ಅವುಗಳನ್ನು ಇಲ್ಲಿ ಲೇಖಕರು ವಿಸ್ತೃತ ಚರ್ಚೆಗೊಡ್ಡಿದ್ದಾರೆ.

ತೊಡರುಬಳ್ಳಿ ಶೀರ್ಷಿಕೆಯ ಅಡಿಬರಹ ‘ಸಮಸ್ಯೆಗಳ ಹಾದಿಯಲ್ಲಿ...!’ ಹೆಸರೇ ಹೇಳುವಂತೆ ಆಧುನಿಕ ಕಾಲಘಟ್ಟದಲ್ಲೂ ನಮ್ಮ ಸಮಾಜ ನರಳುತ್ತಿರುವ ಹಲವು ಸಮಸ್ಯೆಗಳ ಮೇಲೆ ಇಲ್ಲಿನ ಬರಹಗಳು ಬೆಳಕು ಚೆಲ್ಲುತ್ತವೆ, ಪರಿಹಾರಕ್ಕಾಗಿ ಪರಿತಪಿಸುತ್ತವೆ. ಸಮಕಾಲೀನ ವಿದ್ಯಮಾನಗಳ ಕುರಿತು, ಮಣಿಯವರು ಪ್ರಜಾಪ್ರಗತಿ ಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದ ಸಂದರ್ಭದಲ್ಲಿ ಬರೆದ ಅಂಕಣ ಬರಹಗಳು ಇವು. ದಿನಂಪ್ರತಿ ಸಾಕಷ್ಟು ವಿದ್ಯಮಾನಗಳು ನಮ್ಮ ಮುಂದೆ ಘಟಿಸುತ್ತವೆ. ವ್ಯಕ್ತಿಯ ಆಲೋಚನೆ ಮತ್ತು ವಿವೇಚನೆಗೆ ತಕ್ಕಂತೆ ಅವುಗಳಲ್ಲಿ ಕೆಲವೊಂದು ಸಂಗತಿಗಳು ಕೆಲವರಿಗೆ ಮುಖ್ಯವೆನಿಸಬಹುದು, ಮತ್ತೆ ಕೆಲವರಿಗೆ ಅವು ಅಮುಖ್ಯವೆನಿಸಿ, ಬೇರೆಯವರಿಗೆ ಅಮುಖ್ಯವೆನಿಸಿದ ಸಂಗತಿಗಳು ಮುಖ್ಯವೆನಿಸಿಕೊಳ್ಳಬಹುದು. ಪತ್ರಕರ್ತನಾಗಿ ತನ್ನ ಕರ್ತವ್ಯ ಏನು? ಮತ್ತು ಎಂತಹ ವಿಚಾರಗಳಿಗೆ ದನಿಯಾಗಬೇಕಾದ್ದು ತನ್ನ ಹೊಣೆಗಾರಿಕೆ ಎಂದು ಅರಿತಿರುವ ಮಣಿಯವರ ಆಯ್ಕೆಗಳು ಕೃತಿಯ ವೈಚಾರಿಕ ತೂಕವನ್ನು ಹೆಚ್ಚಿಸುತ್ತವೆ.

ಮೀಸಲಾತಿಯ ಮಹತ್ವವನ್ನು ಮನಗಾಣದಿರುವ ಸಮಾಜಕ್ಕಾಗಿ ಮರುಗುತ್ತಲೇ, ಭಕ್ತಿ ಪರಾಕಾಷ್ಠೆಯ ಕಾಲ್ತುಳಿತಕ್ಕೆ ಸಿಲುಕಿ ಸತ್ತ ಜನರ ತಿಳಿವಳಿಕೆಯ ಬಗ್ಗೆ ದಿಗಿಲುಗೊಳ್ಳುತ್ತಾರೆ. ಕ್ಲಿನಿಕಲ್ ಟ್ರಯಲ್ ಹೆಸರಿನಲ್ಲಿ ಬಡ ರೋಗಿಗಳನ್ನು ಪ್ರಯೋಗದ ಬಲಿಪಶುಗಳಾಗಿಸುವ ಲಾಭಕೋರ ವೈದ್ಯಕೀಯ ಜಗತ್ತಿನ ಮೋಸದಾಟವನ್ನು ತೆರೆದಿಡುತ್ತಲೇ, ವೈವಾಹಿಕ ಜೀವನದಲ್ಲಿ ಹೆಣ್ಣು ಈಡಾಗುವ ಅತ್ಯಾಚಾರದ ಪಿಡುಗನ್ನು ಚರ್ಚಿಸುತ್ತಾರೆ. ಸ್ವಂತ ಸೂರು ಎನ್ನುವ ಮೂಲಭೂತ ಸೌಲಭ್ಯವನ್ನು ಒದಗಿಸದೆ ಬಡವರ ಬದುಕುಗಳನ್ನು ಬೀದಿಗೆ ತಂದು ನಿಲ್ಲಿಸಿದ ಸರಕಾರಿ ನೀತಿಗಳನ್ನು ಟೀಕಿಸುವ ಮಣಿಯವರು, ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಬದುಕುಗಳಿಗೆ ತಂಪೆರೆದ ನೀತಿಗಳ ಬಗ್ಗೆ ಮೆಚ್ಚಿವಿಶ್ಲೇಷಿಸುತ್ತಾರೆ. ಕಾರ್ಲ್ ಮಾರ್ಕ್ಸ್ ಕ್ರಾಂತಿಯನ್ನು ಬಣ್ಣಿಸುತ್ತಲೇ, ನ್ಯಾಯಾಂಗವನ್ನೂ ಆವರಿಸಿರುವ ಜಾತೀಯತೆಯನ್ನು ತೂಗಿಬಿಡುವ ಇಲ್ಲಿನ ಲೇಖನಗಳು ಸಂವಿಧಾನ, ಸಮಾನತೆಯ ಆಶಯ, ಸಾವಿನ ಅಧ್ಯಾತ್ಮವನ್ನೂ ನಮ್ಮ ಮುಂದಿಡುತ್ತವೆ.

ಪತ್ರಕರ್ತನ ಪ್ರಾಮುಖ್ಯವನ್ನು ತೂಗಲು ನಮಗೆ ಗದ್ಯ ನಿರೂಪಣೆಯ ಕುಶಲಗಾರಿಕೆ ಅಥವಾ ನಿಪುಣತೆಗಿಂತಲೂ ಆತ ಯಾವ ಸಂಗತಿಗಳನ್ನು ಆಯ್ಕೆ ಮಾಡಿಕೊಳ್ಳಲು ಹಾತೊರೆದಿದ್ದಾನೆ ಮತ್ತು ಅವುಗಳನ್ನು ಸಮಾಜಮುಖಿಯಾಗಿ ಹೇಗೆ ದುಡಿಸಿಕೊಂಡಿದ್ದಾನೆ ಎನ್ನುವುದು ಮಾಪನಗಳಾಗಬೇಕು. ಸೊಗಸಾದ ಮತ್ತು ರುಚಿಯಾದ ವಿಷಕ್ಕಿಂತ, ಕಹಿಯಾದ ಔಷಧಿ ನಮ್ಮ ಆರೋಗ್ಯಕ್ಕೆ ಹೇಗೆ ಒಳ್ಳೆಯದೋ, ಹಾಗೆ ನಿರೂಪಣೆಯ ಕುಸುರಿಗಿಂತ ಒಟ್ಟಾರೆ ಆಶಯದ ತುಡಿತ ಮುಖ್ಯವಾಗಬೇಕು. ಖ್ಯಾತ ಪತ್ರಕರ್ತ ಪಿ. ಲಂಕೇಶ್ ಅವರ ಟೀಕೆ ಟಿಪ್ಪಣಿ ಸಂಗ್ರಹಗಳು ಕೇವಲ ತಮ್ಮ ನಿರೂಪಣಾ ಕುಸುರಿತನದ ಕಾರಣಕ್ಕೆ ಮಾತ್ರ ಉಪಯುಕ್ತತೆಯನ್ನು ಸಂಪಾದಿಸಿಕೊಂಡಿಲ್ಲ; ತನ್ನ ಆಶಯದ ಉತ್ಕೃಷ್ಟತೆಯಿಂದಾಗಿಯೂ ಪ್ರತೀ ಹೊಸ ಪತ್ರಕರ್ತನ ಪಾಲಿಗೆ ಅತ್ಯುಪಯುಕ್ತ ಪಠ್ಯ ಎನಿಸಿಕೊಂಡಿವೆ. ಈ ನಿಟ್ಟಿನಿಂದ ನೋಡಿದಾಗ, ಎಂ.ಎಸ್. ಮಣಿಯವರ ತೊಡರುಬಳ್ಳಿ ಕೃತಿ ಕೂಡಾ ಒಂದು ಉತ್ತಮ ವೈಚಾರಿಕ ಆಕರ ಎನ್ನಬಹುದು. ಅವರ ಅಧ್ಯಯನಶೀಲತೆ ಮತ್ತು ಪ್ರಸ್ತುತಪಡಿಸುವ ನಿಖರ ಅಂಕಿಅಂಶಗಳು ನಮಗೆ ಅಪಾರ ಸರಕನ್ನು ಒದಗಿಸುತ್ತವೆ ಮತ್ತು ಆ ಮೂಲಕ ವಿಚಾರಗ್ರಹಿಕೆಯ ವ್ಯಾಪ್ತಿಯನ್ನು ವಿಸ್ತರಿಸುತ್ತವೆ. ಗಂಭೀರ, ವಿಚಾರಶೀಲ ಓದುಗರಿಗೆ ಒಂದು ಅತ್ಯುತ್ತಮ ಕೃತಿ ಈ ತೊಡರುಬಳ್ಳಿ.

Tags

Society
share
ಗಿರೀಶ್ ತಾಳಿಕಟ್ಟೆ
ಗಿರೀಶ್ ತಾಳಿಕಟ್ಟೆ
Next Story
X