Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮರಗಳ ಗೋಡೆ ಬರಹ - ಬರದ ಸೂಚನೆ

ಮರಗಳ ಗೋಡೆ ಬರಹ - ಬರದ ಸೂಚನೆ

ಕೆ.ಸಿ. ಶಂಕರ್, ಚಿಕ್ಕಮಗಳೂರುಕೆ.ಸಿ. ಶಂಕರ್, ಚಿಕ್ಕಮಗಳೂರು5 Oct 2026 2:16 PM IST
share
ಮರಗಳ ಗೋಡೆ ಬರಹ - ಬರದ ಸೂಚನೆ

ಹಿಂಗಾರಿನ ಸಮಯಕ್ಕೆ ಹಸಿರೆಲೆಯಿಂದ ಮೈದುಂಬಿ ಹೊಸ ಹರೆಯ ಪಡೆದು ಮುಂಗಾರಿನ ಮೇಘವನ್ನು ಸೆರೆ ಹಿಡಿದು ಮಳೆ ತಂದು ಭೂಮಿಗೆ ತಂಪೆರೆದು ಹೊಸ ಜೀವಕಳೆಯನ್ನು ತರುವುದು ಪ್ರಕೃತಿಯ ವಿಸ್ಮಯ ರೋಮಾಂಚನ.

ಮನುಷ್ಯನು ಮುಂಬರುವ ಪ್ರಾಕೃತಿಕ ಆಪತ್ತನ್ನು ತಿಳಿಯಲು ವಿಜ್ಞಾನ ಮತ್ತು ತಂತ್ರಜ್ಞಾನದ ಮೊರೆಹೋದರೆ, ವೃಕ್ಷ, ಪ್ರಾಣಿ ಮತ್ತು ಕೀಟ ಸಂಕುಲಗಳಲ್ಲಿ ಅವುಗಳ ಮುನ್ಸೂಚನೆಯನ್ನು ಅರಿಯುವ ಸಾಮರ್ಥ್ಯವು ಪ್ರಾಕೃತಿಕವಾಗಿ ಅಂತರ್ಭೂತವಾಗಿರುತ್ತದೆ ಎನ್ನುತ್ತದೆ ವೈಜ್ಞಾನಿಕ ಮತ್ತು ಮಾನವನ ಪಾರಂಪರಿಕ ಜ್ಞಾನ. ಉದಾಹರಣೆಗೆ ಈ ವರ್ಷ ವಿಪರೀತ ನೇರಳೆ ಹಣ್ಣಿನ ಫಸಲು, ಬಿದಿರಿನಲ್ಲಿ ಹೂವು ಮತ್ತು ಅಕ್ಕಿ ಕರಾಳ ಬರಗಾಲದ ಮುನ್ಸೂಚನೆಯೆಂದು ಭಾರತೀಯರ ನಂಬಿಕೆ. ಎರಡು ಪ್ರಾಕೃತಿಕ ವಿದ್ಯಮಾನಗಳು ಈಗ ಸರಿ ಎಂದು ಸಾಕ್ಷೀಕರಿಸಿವೆ.

ಭಾರತದ ಅರಣ್ಯ ಸಂಪತ್ತಿನಲ್ಲಿ ಪತನ ಶೀಲ- ಎಲೆಯನ್ನು ಉದುರಿಸಿಕೊಳ್ಳುವ (deciduous forest ) ವೃಕ್ಷ ರಾಶಿ(65ಶೇ.) ಮತ್ತು ನಿತ್ಯಹರಿದ್ವರ್ಣ (20 ಶೇ.) (ever green forest) ವೃಕ್ಷ ಸಂಪತ್ತು ಪ್ರಮುಖ ಎರಡು ಅರಣ್ಯ ಸಂಪತ್ತುಗಳಾಗಿವೆ.

ಹಲಸು, ಮಾವು, ನೇರಳೆ ಮತ್ತು ಶ್ರೀಗಂಧದಂತಹ ನಿತ್ಯ ಹರಿದ್ವರ್ಣ ಮರಗಳು ನಿಧಾನವಾಗಿ ಸ್ವಲ್ಪವೇ ಪ್ರಮಾಣದಲ್ಲಿ ಎಲೆಗಳನ್ನು ಉದುರಿಸಿಕೊಂಡು ವರ್ಷವೆಲ್ಲ ಹಸಿರು ಮೊಗೆಯುತ್ತಿರುತ್ತವೆ. ಅತ್ತಿ, ಹೆಬ್ಬೇವು ಮಹಾಗನಿ, ಹೊಂಗೆಯಂತಹ ಪತನಶೀಲ ವೃಕ್ಷಗಳು ಮುಂಬರುವ ಕಡುಬೇಸಗೆಯಲ್ಲಿ ನೀರಾವಿಯನ್ನು ತಡೆಯುವ ದೃಷ್ಟಿಯಿಂದ ಚಳಿಗಾಲದಲ್ಲಿ, ಡಿಸೆಂಬರ್- ಮಾರ್ಚ್ ನಡುವೆ ಸಂಪೂರ್ಣವಾಗಿ ಎಲೆಯನ್ನು ಉದುರಿಸಿಕೊಂಡು ನೆಲದ ಮೇಲೆ ಹರಡಿ ಕೊಂಡು ಅಸ್ಥಿಪಂಜರದಂತೆ ಬೋಳು ಬೋಳಾಗಿ ಬೆತ್ತಲೆ ಸೌಂದರ್ಯದಿಂದ ಕಂಗೊಳಿಸುತ್ತವೆ!

ಹಿಂಗಾರಿನ ಸಮಯಕ್ಕೆ ಹಸಿರೆಲೆಯಿಂದ ಮೈದುಂಬಿ ಹೊಸ ಹರೆಯ ಪಡೆದು ಮುಂಗಾರಿನ ಮೇಘವನ್ನು ಸೆರೆ ಹಿಡಿದು ಮಳೆ ತಂದು ಭೂಮಿಗೆ ತಂಪೆರೆದು ಹೊಸ ಜೀವಕಳೆಯನ್ನು ತರುವುದು ಪ್ರಕೃತಿಯ ವಿಸ್ಮಯ ರೋಮಾಂಚನ.

ಆದರೆ ಈ ವರ್ಷ ಸೂಪರ್ ಎಲ್ನಿನೊ ಪರಿಣಾಮವಾಗಿ ಮಾಯವಾದ ಮಾನ್ಸೂನ್ ನಿಂದಾಗಿ ಭಯಾನಕ ಬರಗಾಲದ ಛಾಯೆ ಆವರಿಸಿಕೊಂಡಿದೆ. ಬರಗಾಲದಿಂದ ತತ್ತರಿಸಿರುವ ವೃಕ್ಷ ಸಂಕುಲವು ಸುಮಾರು ಐದು ತಿಂಗಳ ಮೊದಲೇ, ಮುಂಗಾರು ಮಾನ್ಸೂನ್ (Retreating Monsoon - ಸೆಪ್ಟಂಬರ್- ಅಕ್ಟೋಬರ್) ಸಮಯದಲ್ಲೇ ಎಲೆಗಳನ್ನು ಉದುರಿಸಿಕೊಂಡು ಬೋಳಾಗುತ್ತಿರುವುದು ಪ್ರಕೃತಿ ನೀಡಿರುವ ಮುಂಬರುವ ಭಯಾನಕ ಬರಗಾಲದ ಮುನ್ಸೂಚನೆ (climatic emergency).

ಮಳೆಯ ಕೊರತೆಯಿಂದಾಗಿ ಭೂಮಿಯು ತೇವವನ್ನು ಬೇಗ ಕಳೆದುಕೊಂಡು ಬರಡಾಗುತ್ತಿರುವುದರಿಂದ, ನೀರಿನ ಕೊರತೆಯನ್ನು ಕಂಡು, ಮುಂದಿನ ನೀರಿನ ಕೊರತೆಯ ಆಪತ್ತನ್ನು ನೀಗಿಸಲು ಮುಂಜಾಗ್ರತವಾಗಿ ಈ ಪ್ರಾಕೃತಿಕ ತುರ್ತು ಪರಿಸ್ಥಿತಿಯನ್ನು (climatic emergency) ಎದುರಿಸಲು ವೃಕ್ಷಗಳು ಕಂಡುಕೊಂಡಿರುವ ಬದುಕುಳಿಯುವ ತಂತ್ರಗಾರಿಕೆ (survival strategy) ಯಾಗಿದೆ. ಅವುಗಳು ಈಗಾಗಲೇ ತಮ್ಮ ಎಲೆಯನ್ನು ಉದುರಿಸಿಕೊಂಡು ತಮ್ಮ ಬುಡದ ಸುತ್ತಲೂ ಮಲ್ಚಿಂಗ್ (mulching) ಮಾಡಿ.ಕೆ.ೂಂಡು ಭೂಮಿಯ ತೇವಾಂಶವನ್ನು ಕಾದುಕೊಂಡು ಮಣ್ಣಿನ ಮತ್ತು ಸೂಕ್ಷ್ಮಾಣು ಜೀವಿಗಳನ್ನು (soil microbes ) ಕಾಪಾಡಿಕೊಳ್ಳುವ ಮುಂಜಾಗ್ರತ ವಿವೇಕವು ಪ್ರಾಕೃತಿಕ ವಿಸ್ಮಯ.

ಮರಗಳು ಸೂಚಿಸಿರುವ ಈ ಮುನ್ಸೂಚನೆಯು ಪಶು ಪಕ್ಷಿ ಪ್ರಾಣಿ ಮತ್ತು ಮಾನವರಿಗೆ ನೀರು ಮತ್ತು ಆಹಾರದ ಕೊರತೆಯ ಅಪಾಯವನ್ನು ಸೂಚಿಸುತ್ತದೆ. ಮರಗಳು ಬಹುತೇಕ ಪಕ್ಷಿ, ಪ್ರಾಣಿಗಳು ಮತ್ತು ಕೀಟ ಸಂಕುಲಗಳಿಗೆ ಗೂಡು ಕಟ್ಟುವ ಮತ್ತು ಬದುಕಿನ ತಾಣವಾದ್ದರಿಂದ, ಬೋಳಾದ ಮರವು ಅವುಗಳಿಗೆ ಸಂರಕ್ಷಣೆ ಕೊಡಲು ಆಗದು. ಇದು ಮನುಷ್ಯರಲ್ಲಿ ಆಹಾರ, ಆರೋಗ್ಯ ಮತ್ತು ಆರ್ಥಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮಗಳನ್ನು ಬೀರುವ ಸಂಕೇತವಾಗಿದೆ.

ಈ ವೃಕ್ಷಗಳು ಕೊಡುವ ಪ್ರಾಕೃತಿಕ ತುರ್ತು ಪರಿಸ್ಥಿತಿಯ ಮುನ್ಸೂಚನೆಯಿಂದ ನಾವೇನು ಕಲಿಯಬೇಕು? ಈ ಮರಗಳು ನೈಸರ್ಗಿಕ ಪೂರ್ವಭಾವಿ ಎಚ್ಚರಿಕೆ ವ್ಯವಸ್ಥೆಯ(Early warning system) ಉಪಗ್ರಹಗಳಂತೆ ಮನುಷ್ಯರಿಗೆ ಬರಗಾಲ ಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಯಾವ ಮುಂಜಾಗ್ರತೆಯನ್ನು ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡುತ್ತವೆ !

ಈ ಮರಗಳ ಸಂರಕ್ಷಣೆಯು, ಕನಿಷ್ಠ ಈ ಕರಾಳ ಬರಗಾಲದ ಛಾಯೆ ಮಾಸುವವರೆಗೂ ನಮ್ಮ ಹೊಣೆ. ಮರಗಳು ಬೇಗ ಎಲೆಯನ್ನು ಉದುರಿಸಿಕೊಳ್ಳುವುದರಿಂದ ಭೂಮಿಯ ಮೇಲ್ಮೆ ತೀಕ್ಷ್ಣ ಸೂರ್ಯ ತಾಪಕ್ಕೆ ತೆರೆಯುವುದರಿಂದ ( exposure) ಭೂಮಿ ಬೇಗ ಶುಷ್ಕವನ್ನು ಕಳೆದುಕೊಳ್ಳುತ್ತದೆ. ಇದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಜೀವಿಗಳಾದ ಎರೆಹುಳಗಳು ಮತ್ತು ಮೈಕ್ರೋಬ್ಗಳು ಬೇಗ ನಾಶವಾಗುತ್ತವೆ. ಕಾಡ್ಗಿಚ್ಚಿನ ಸಂಭವ ತೀವ್ರವಾಗುತ್ತದೆ. ಆದ್ದರಿಂದ ಮರಗಳ ಬಟ್ಟೆಯನ್ನು ಮಲ್ಚಿಂಗ್ ಮಾಡಬೇಕು. ಮರಗಸೆಗಳನ್ನು ಮಾಡುವುದನ್ನು ನಿಲ್ಲಿಸಬೇಕು. ಗೃಹ ತ್ಯಾಜ್ಯ ನೀರನ್ನು ಆದಷ್ಟು ಶಾಲಾ ಕಾಲೇಜು ಉದ್ಯಾನವನಗಳ ಮರಗಳಿಗೆ ಹಾಯಿಸಬೇಕು.

ಮಿತವಾದ ಮತ್ತು ಪ್ರಜ್ಞಾಪೂರ್ವಕ ( mindful usage usage) ನೀರಿನ ಬಳಕೆ ಎಲ್ಲಾ ಹಂತದಲ್ಲೂ ಆಗಬೇಕು. ಐಷಾರಾಮಿ/ ಮನೋರಂಜನ ಸೌಕರ್ಯಗಳಿಗೆ ನೀರಿನ ಬಳಕೆ - ಲಾನ್, ಈಜುಕೊಳ, ಕಾರಂಜಿಗಳು, ಗಾಲ್ಫ್ ಮೈದಾನಗಳಿಗೆ ನೀರಿನ ಬಳಕೆಯ ಸಂಪೂರ್ಣ ಕಡಿತವಾಗಬೇಕು. ಗ್ರಾಮೀಣ ಕೆರೆ, ಬಾವಿಗಳಿಂದ ಶುಂಠಿಯಂತಹ ವಾಣಿಜ್ಯ ಬೆಳೆಗಳಿಗೆ ಪಂಪ್ಸೆಟ್ಗಳ ಮೂಲಕ ನೀರಿನ ಕಳ್ಳತನಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪಶು, ಪಕ್ಷಿ, ಪ್ರಾಣಿ, ಜಾನುವಾರುಗಳು ಕುಡಿಯುವ ನೀರಿನಿಂದ ವಂಚಿತವಾಗುತ್ತವೆ ಮತ್ತು ನೀರಿನ ಮೂಲದ ಜಲಚರಗಳು ಸಾಯುತ್ತವೆ. ಕರಾಳ ಬರಗಾಲದ ಹಿನ್ನೆಲೆಯಲ್ಲಿ ನೀರಿನ ಮಿತ ಬಳಕೆಯ ಜನಜಾಗೃತಿಯಾಗಬೇಕು. ತುಂಬಾ ವಿವೇಕ ಮತ್ತು ಜಾಗ್ರತೆಯಿಂದ ಈ ಕರಾಳ ಬರಗಾಲದಿಂದ ರಕ್ಷಿಸಿಕೊಂಡು ಪಾರಾಗಬೇಕು.

Tags

Tree
share
ಕೆ.ಸಿ. ಶಂಕರ್, ಚಿಕ್ಕಮಗಳೂರು
ಕೆ.ಸಿ. ಶಂಕರ್, ಚಿಕ್ಕಮಗಳೂರು
Next Story
X