Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಉಳ್ಳಾಲ ತಾಲೂಕು: ಮಳೆಗೆ ಒಟ್ಟು ಐವರು...

ಉಳ್ಳಾಲ ತಾಲೂಕು: ಮಳೆಗೆ ಒಟ್ಟು ಐವರು ಮೃತ್ಯು, 185 ಮನೆಗಳಿಗೆ ಹಾನಿ

ಬಶೀರ್ ಕಲ್ಕಟ್ಟಬಶೀರ್ ಕಲ್ಕಟ್ಟ25 Aug 2024 1:38 PM IST
share
ಉಳ್ಳಾಲ ತಾಲೂಕು: ಮಳೆಗೆ ಒಟ್ಟು ಐವರು ಮೃತ್ಯು, 185 ಮನೆಗಳಿಗೆ ಹಾನಿ

ಉಳ್ಳಾಲ: ಈ ಬಾರಿ ಸುರಿದ ಬಾರೀ ಮಳೆಗೆ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಅಪಾರ ಹಾನಿ ಸಂಭವಿಸಿದೆ. ಬಹಳಷ್ಟು ಕುಟುಂಬಗಳು ಸ್ಥಳಾಂತರ ಆಗಿದ್ದು, ತಹಶೀಲ್ದಾರ್ ಪುಟ್ಟ ರಾಜು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ವ್ಯವಸ್ಥೆ ಮಾಡಿದ್ದಾರೆ.

ವಿಪರೀತ ಮಳೆಗೆ ಐದು ಜೀವ ಹಾನಿಯಾ ಗಿದೆ. ನದಿಯ ಪ್ರವಾಹದಿಂದ ಹಲವು ಮನೆಗಳು ಜಲಾವೃತಗೊಂಡರೆ, ಕಡಲ್ಕೊರೆತ ಭೀತಿಯಿಂದ ಏಳು ಕುಟುಂಬಗಳು ಸ್ಥಳಾಂತರ ಗೊಂಡಿವೆ.

ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ 17 ಗ್ರಾಮಗಳು, ಒಂದು ನಗರ ಸಭೆ, ಒಂದು ಪುರಸಭೆ, ಒಂದು ಪಪಂ ಕಾರ್ಯಾಚರಿಸುತ್ತಿದೆ.

ಈ ಬಾರಿ ಸುರಿದ ಭಾರೀ ಮಳೆಗೆ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ತಹಶೀಲ್ದಾರ್ ಅವರ ಪ್ರಾಥಮಿಕ ವರದಿ ಪ್ರಕಾರ ಒಟ್ಟು 185 ಮನೆಗಳಿಗೆ ಹಾನಿಯಾಗಿದೆ. ತಾಲೂಕಿನ 17 ಗ್ರಾಮಗಳ ಪೈಕಿ ಮುನ್ನೂರು ಗ್ರಾಮದಲ್ಲಿ ಅತ್ಯಧಿಕ ಅಂದರೆ, 25 ಮನೆಗಳಿಗೆ ಹಾನಿಯಾಗಿದೆ.

ಈ ಗ್ರಾಮದ ಮದನಿನಗರದಲ್ಲಿ ಮನೆಯ ತಡೆಗೋಡೆ ಜರಿದು ಇನ್ನೊಂದು ಮನೆಯ ಮೇಲೆ ಬಿದ್ದ ಪರಿಣಾಮ ಆ ಮನೆಯ ಕೊಠಡಿಯಲ್ಲಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಹರೇಕಳದಲ್ಲಿ ಶಾಲಾ ಗೇಟ್ ಬಿದ್ದು ವಿದ್ಯಾರ್ಥಿಯೊಬ್ಬಳು ಮೃತಪಟ್ಟಿದ್ದಾರೆೆ.

ಜಿಲ್ಲಾಧಿಕಾರಿ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಮಂಜೂರು ಮಾಡಿದ್ದು, ಈ ಮೊತ್ತ ವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಮುನ್ನೂರು ಗ್ರಾಮ ವ್ಯಾಪ್ತಿಯು ನಗರ ಪ್ರದೇಶವಾಗಿ ಬೆಳೆದಿದ್ದು, ಇಲ್ಲಿ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲ. ಇಕ್ಕಟ್ಟಿನಲ್ಲಿ ಮನೆಗಳು ತುಂಬಿವೆ. ಬಡ ಕುಟುಂಬಗಳು ಜಾಸ್ತಿ ಇಲ್ಲಿವೆ. ಏರು, ತಗ್ಗು ಪ್ರದೇಶಗಳಲ್ಲಿ ಮನೆಗಳು ಇರುವ ಕಾರಣ ಈ ಗ್ರಾಮದಲ್ಲಿ ಹೆಚ್ಚು ಹಾನಿ ಸಂಭವಿಸುತ್ತದೆ ಎಂಬ ಅಭಿಪ್ರಾಯ ಕೂಡಾ ಸ್ಥಳೀಯರಿಂದ ವ್ಯಕ್ತವಾಗಿದೆ.

ಉಳಿದಂತೆ ಅಂಬ್ಲಮೊಗರುನಲ್ಲಿ 7, ಇರಾ-13, ಕಿನ್ಯ 6, ಕುರ್ನಾಡು 1, ಕೈರಂಗಳ -3, ಕೊಣಾಜೆ 16, ತಲಪಾಡಿ 4, ನರಿಂಗಾನ 3, ಪಜೀರು 11, ಪಾವೂರು 4, ಬಾಳೆಪುಣಿ 6, ಬೆಳ್ಮ 9, ಬೋಳಿಯಾರು 3, ಮಂಜನಾಡಿ 12, ಸಜಿಪನಡು 11, ಹರೇಕಳ 21 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ 32 ಮನೆಗಳಿಗೆ ತೀವ್ರ, 73 ಮನೆಗಳು ಭಾಗಶಃ, 9 ಮನೆಗಳು ಸಂಪೂರ್ಣ ಹಾನಿಯಾಗಿದೆ.

ಈ ಬಾರಿ ಹಾನಿಯಿಂದ ಆಗಿರುವ ಅಂದಾಜು ನಷ್ಟದ ಬದಲಾಗಿ ಹಾನಿಯಾದ ಪ್ರಮಾಣದ ಮೇಲೆ ಸರಕಾರ ಪರಿಹಾರ ನೀಡಲು ನಿರ್ಧರಿಸಿದೆ. ಮನೆ ಹಾನಿ ಬಗೆ ಗ್ರಾಮಕರಣಿಕ ಹಾಗೂ ಇಂಜಿನಿಯರ್ ಲೆಕ್ಕಾಚಾರ ಪರಿಗಣಿಸಿ ಹಾನಿ ಪ್ರಮಾಣ ಲೆಕ್ಕಾಚಾರ ಮಾಡಿ ಪರಿಹಾರ ನೀಡಲಿದೆ.

ಅತೀ ಸಣ್ಣ ಹಾಗೂ ಮಧ್ಯಮ ಪ್ರಮಾನದಲ್ಲಿ ಹಾನಿಯಾದ ಮನೆಗಳಿಗೆ ಸರಕಾರ 6,500 ರೂ., ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಹೆಚ್ಚುವರಿಯಾಗಿ 23,500 ರೂ. ಸೇರಿ ಒಟ್ಟು 30 ಸಾವಿರ ನಗದು, ಹೆಚ್ಚು ಪ್ರಮಾಣದಲ್ಲಿ ಹಾನಿಯಾದ ಮನೆಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ರೂ.6,500 ರಾಜ್ಯ ಸರಕಾರದಿಂದ ಹೆಚ್ಚುವರಿ ಆಗಿ ರೂ. 43,500 ಸೇರಿ ಒಟ್ಟು 50,000 ರೂ., ತೀವ್ರ ಹಾನಿಯಾದ ಮನೆಗಳಿಗೆ 1,20,000 ರೂ., ಸಂಪೂರ್ಣ ಹಾನಿಯಾದ ಮನೆಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 1,20,000 ರಾಜ್ಯ ಸರಕಾರದಿಂದ 1,20,000 ಸೇರಿ 2,40,000 ರೂ. ಪರಿಹಾರ ಘೋಷಣೆ ಆಗಿದೆ.

ಬಹಳಷ್ಟು ಮನೆಗಳಿಗೆ ಪರಿಹಾರ ತಲುಪಿಸುವ ಕಾರ್ಯ ತಾಲೂಕು ಕಚೇರಿ ವತಿಯಿಂದ ನಡೆಯುತ್ತಿದೆ. ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಹಾನಿಯಾದ ಮನೆಗಳ ಪೈಕಿ 82 ಮನೆಗಳಿಗೆ ಒಟ್ಟು 74,27,000 ಪರಿಹಾರ ಈಗಾಗಲೇ ಮಂಜೂರು ಮಾಡಲಾಗಿದೆ.

ವಿಪರೀತ ಮಳೆಯಿಂದಾಗಿ ಪಾವೂರು ಗ್ರಾಮದ ಇನೋಳಿ, ಪಾವೂರು ಪ್ರದೇಶದಲ್ಲಿ ಮನೆಗಳು ಜಲಾವೃತಗೊಂಡು, ಇಲ್ಲಿನ ನಿವಾಸಿಗಳು ದೋಣಿ ಮೂಲಕ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಇನೋಳಿಯಲ್ಲಿ 15, ಪಾವೂರು ಉಳಿಯದಲ್ಲಿ 33, ಪಾವೂರು ದೋಟ, ಅಜರುಳಿಯದಲ್ಲಿ ಒಟ್ಟು 40 ಮನೆಗಳು ಇವೆ. ಈ ಮನೆಗಳು ನದಿ ತೀರ ಪ್ರದೇಶದಲ್ಲಿ ಇದ್ದು, ಮಳೆಗಾಲದಲ್ಲಿ ಈ ಮನೆಗಳ ಸುರಕ್ಷತೆ ದೃಷ್ಟಿಯಿಂದ ತಡೆಗೋಡೆ ನಿರ್ಮಾಣ ಆಗಬೇಕು ಎಂಬ ಬೇಡಿಕೆ ಕೂಡ ವ್ಯಕ್ತವಾಗಿದೆ.

ಉಳ್ಳಾಲ ನಗರ ಸಭೆ ವ್ಯಾಪ್ತಿಯಲ್ಲಿ 17 ಮನೆಗಳಿಗೆ ಹಾನಿಯಾಗಿದೆ. ನಾಲ್ಕು ಮನೆಗಳಿಗೆ ತೀವ್ರ ಹಾಗೂ ಆರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಉಳಿದ ಮನೆಗಳಿಗೆ ಸಾಮಾನ್ಯ ಮಟ್ಟದ ಹಾನಿಯಾಗಿದ್ದು, ಒಟ್ಟು ಅಂದಾಜು 42.35 ಲಕ್ಷ ರೂ ಹಾನಿಯಾಗಿದೆ.

ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಕಡಲ್ಕೊರೆತ ತೀವ್ರ ಗೊಂಡ ಕಾರಣ ಏಳು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಬಟ್ಟಪ್ಪಾಡಿ ನಿವಾಸಿಗಳಾದ ಭೀಪಾತುಮ್ಮ, ಅಲಿಮಮ್ಮ, ಅಬೂಬಕರ್, ಸೌಧ, ನೆಫೀಸ, ಪೆರಿಬೈಲ್ ನಿವಾಸಿ ಯೋಗೀಶ್, ಜೈನಾಬಿ ಅವರ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಎರಡು ಮನೆಗಳು ಬಿರುಕು ಬಿಟ್ಟಿವೆ. ನಾಲ್ಕು ಮನೆಗಳ ಮೇಲ್ಛಾವಣಿ ಕುಸಿದು ಹಾನಿಯಾ ಗಿದ್ದು, ಒಂದು ಮನೆಯ ಮೇಲ್ಛಾವಣಿ ಕುಸಿದು ಸಂಪೂರ್ಣ ಹಾನಿಯಾಗಿದೆ.

ಮಳೆಗಾಲದಲ್ಲಿ ಹಾನಿಯಾದ ಮನೆಗಳ ಬಗ್ಗೆ ಪರಿಶೀಲನೆ ನಡೆಸಿ ಹಾನಿಯಾದ ಪ್ರಮಾಣಕ್ಕೆ ಅನುಸಾರವಾಗಿ ಪರಿಹಾರ ವ್ಯವಸ್ಥೆ ಮಾಡಲಾಗಿದೆ. ಬಹಳಷ್ಟು ಹಾನಿಯಾದ ಮನೆಗಳಿಗೆ ಪರಿಹಾರ ನೀಡಲಾಗಿದೆ. ಪರಿಹಾರ ಸಿಗದ ಮನೆಗಳಿಗೆ ಶೀಘ್ರ ವ್ಯವಸ್ಥೆ ಮಾಡಲಾಗುತ್ತದೆ. ಕೃತಕ ನೆರೆಯಿಂದ ಜಲಾವೃತಗೊಂಡ ಪಾವೂರು ಗ್ರಾಮ ವ್ಯಾಪ್ತಿಯ ಪ್ರದೇಶಗಳ ಮನೆಗಳ ಸುರಕ್ಷಿತ ದೃಷ್ಟಿಯಿಂದ ಪ್ರವಾಹ ತಡೆಗಟ್ಟಲು ತಡೆಗೋಡೆ ಕಾಮಗಾರಿ ಆಗಬೇಕು.

-ಪುಟ್ಟರಾಜು, ತಹಶೀಲ್ದಾರ್ ಉಳ್ಳಾಲ

share
ಬಶೀರ್ ಕಲ್ಕಟ್ಟ
ಬಶೀರ್ ಕಲ್ಕಟ್ಟ
Next Story
X