Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮತ್ತೆ ಮುಖ್ಯಮಂತ್ರಿ ಗಾದಿಯತ್ತ ಉಮರ್...

ಮತ್ತೆ ಮುಖ್ಯಮಂತ್ರಿ ಗಾದಿಯತ್ತ ಉಮರ್ ಅಬ್ದುಲ್ಲಾ

ಪಿ.ಎಚ್. ಅರುಣ್ಪಿ.ಎಚ್. ಅರುಣ್9 Oct 2024 3:13 PM IST
share
ಮತ್ತೆ ಮುಖ್ಯಮಂತ್ರಿ ಗಾದಿಯತ್ತ ಉಮರ್ ಅಬ್ದುಲ್ಲಾ
ಚುನಾವಣಾ ಪ್ರಚಾರದ ವೇಳೆ ‘‘ನನ್ನ ಟೋಪಿ, ನನ್ನ ಮಾನ ಎಲ್ಲವೂ ನಿಮ್ಮ ಕೈಯಲ್ಲಿದೆ’’ ಎಂದು ಹೇಳಿದ್ದ ಉಮರ್ ಅಬ್ದುಲ್ಲಾ ಅವರ ಪರ ಕಾಶ್ಮೀರದ ಜನರು ನಿಂತುಕೊಂಡಿದ್ದಾರೆ. ‘‘16 ವರ್ಷದ ಬಳಿಕ ನಾನು ನಿಮ್ಮ ಬಳಿ ಬಂದಿದ್ದೇನೆ. ನಾನು ನಿಮ್ಮ ಸೇವಕ, ನಿಮ್ಮ ನೌಕರ, ನಿಮ್ಮ ಶಾಸಕನಾಗಿ ನಿಮ್ಮ ಸೇವೆ ಮಾಡುವ ಮತ್ತೊಂದು ಅವಕಾಶ ನನಗೆ ಕೊಡಿ’’ ಎಂದು ಬೇಡಿಕೊಂಡಿದ್ದ ಉಮರ್ ಅಬ್ದುಲ್ಲಾರ ಮೇಲೆ ಜನ ತಮ್ಮ ವಿಶ್ವಾಸ ಇರಿಸಿದ್ದಾರೆ.

ಲೋಕಸಭೆ ಚುನಾವಣೆ ಹೀನಾಯವಾಗಿ ಸೋತು ಮನೆ ಸೇರಿದ್ದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಮತ್ತೆ ಯಶಸ್ಸು ಕಂಡಿದ್ದಾರೆ. ಮತ್ತೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗುವ ಅವರ ಕನಸು ನನಸಾಗಿದೆ.

ತಿಂಗಳ ಹಿಂದೆ ತಮ್ಮ ರಾಜಕೀಯ ಜೀವನದ ಅತೀ ಹೀನಾಯ ಸೋಲು ಅನುಭವಿಸಿದ್ದ ಉಮರ್ ಅಬ್ದುಲ್ಲಾ ಮತ್ತೆ ಗೆದ್ದು ಬೀಗಿದ್ದಾರೆ.

ಜಮ್ಮು-ಕಾಶ್ಮೀರದ ಮುಂದಿನ ಸಿಎಂ ಉಮರ್ ಅಬ್ದುಲ್ಲಾ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ, ಉಮರ್ ಅವರ ತಂದೆ ಫಾರೂಕ್ ಅಬ್ದುಲ್ಲಾ ಘೋಷಣೆ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫೆರೆನ್ಸ್ - ಕಾಂಗ್ರೆಸ್ ಮೈತ್ರಿ ಸರಳ ಬಹುಮತ ಸಾಧಿಸಿದೆ. ಮೆಹಬೂಬ ಮುಫ್ತಿ ಅವರ ಪಿಡಿಪಿ ಕೇವಲ 3 ಸೀಟುಗಳಲ್ಲಿ ಮತ್ತು ಇತರರು 9 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಸೋತಿದ್ದ ಉಮರ್ ಈಗ ಸ್ಪರ್ಧಿಸಿದ ಎರಡೂ ವಿಧಾನ ಸಭಾ ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಉಮರ್ ಅಬ್ದುಲ್ಲಾ ಗೆದ್ದ ಕ್ಷೇತ್ರಗಳು ಬದ್ಗಾಮ್ ಮತ್ತು ಗಂಡೇರಬಾಲ್.

ಚುನಾವಣಾ ಪ್ರಚಾರದ ವೇಳೆ ‘‘ನನ್ನ ಟೋಪಿ, ನನ್ನ ಮಾನ ಎಲ್ಲವೂ ನಿಮ್ಮ ಕೈಯಲ್ಲಿದೆ’’ ಎಂದು ಹೇಳಿದ್ದ ಉಮರ್ ಅಬ್ದುಲ್ಲಾ ಅವರ ಪರ ಕಾಶ್ಮೀರದ ಜನರು ನಿಂತುಕೊಂಡಿದ್ದಾರೆ.

‘‘16 ವರ್ಷದ ಬಳಿಕ ನಾನು ನಿಮ್ಮ ಬಳಿ ಬಂದಿದ್ದೇನೆ. ನಾನು ನಿಮ್ಮ ಸೇವಕ, ನಿಮ್ಮ ನೌಕರ, ನಿಮ್ಮ ಶಾಸಕನಾಗಿ ನಿಮ್ಮ ಸೇವೆ ಮಾಡುವ ಮತ್ತೊಂದು ಅವಕಾಶ ನನಗೆ ಕೊಡಿ’’ ಎಂದು ಬೇಡಿಕೊಂಡಿದ್ದ ಉಮರ್ ಅಬ್ದುಲ್ಲಾರ ಮೇಲೆ ಜನ ತಮ್ಮ ವಿಶ್ವಾಸ ಇರಿಸಿದ್ದಾರೆ.

ಅಬ್ದುಲ್ಲಾ ಕುಟುಂಬಕ್ಕೆ ಮೂರು ತಲೆಮಾರುಗಳಿಂದ ಗಂದೇರ್ಬಾಲ್ ಕ್ಷೇತ್ರ ಭದ್ರಕೋಟೆಯಾಗಿದೆ. ಎನ್‌ಸಿ ಸಂಸ್ಥಾಪಕ ಶೇಕ್ ಮುಹಮ್ಮದ್ ಅಬ್ದುಲ್ಲಾ ಅವರು 1977ರಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದ್ದರು. ನಂತರ ಅವರ ಮಗ ಫಾರೂಕ್ ಅಬ್ದುಲ್ಲಾ ಅವರು 1983, 1987 ಮತ್ತು 1996ರಲ್ಲಿ ಜಯಗಳಿಸಿದರು. ನಂತರ ಉಮರ್ ಅಬ್ದುಲ್ಲಾ ಅವರು 2008ರಲ್ಲಿ ಇದೇ ಕ್ಷೇತ್ರದಿಂದ ಗೆದ್ದಿದ್ದರು.

ಬುದ್ಗಾಮ್‌ನಲ್ಲಿ ಉಮರ್ ಅಬ್ದುಲ್ಲಾ ಅವರು ಪಿಡಿಪಿಯ ಅಗಾ ಸೈಯದ್ ಮುಂತಝೀರ್ ಮೆಹದಿ ಮತ್ತು ಅವಾಮಿ ನ್ಯಾಷನಲ್ ಕಾನ್ಫರೆನ್ಸ್‌ನ ಅಗಾ ಸೈಯದ್ ಅಹ್ಮದ್ ಮೂಸ್ವಿ ಸೇರಿದಂತೆ 7 ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫೆರೆನ್ಸ್ ಮೈತ್ರಿ ಯಶಸ್ಸು ಕಂಡಿದೆ. ಕಾಶ್ಮೀರದ ಜನರ ನಡುವೆ ರಾಹುಲ್ ಗಾಂಧಿಗೆ ಭಾರೀ ಜನಪ್ರಿಯತೆ ಇದೆ ಎಂಬ ಮಾತು ನಿಜ ಎಂದು ಸಾಬೀತಾಗಿದೆ. ‘ಭಾರತ ಜೋಡೊ ಯಾತ್ರೆ’ಯ ಸಮಾರೋಪವನ್ನೂ ರಾಹುಲ್ ಗಾಂಧಿ ಶ್ರೀನಗರದಲ್ಲೇ ಮಾಡಿದ್ದು ಅದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತ್ತು. ಆಮೇಲೆಯೂ ರಾಹುಲ್ ಗಾಂಧಿ ಕಾಶ್ಮೀರಕ್ಕೆ ಹೋದಾಗಲೆಲ್ಲ ಅವರಿಗೆ ಭಾರೀ ಜನ ಬೆಂಬಲ ವ್ಯಕ್ತವಾಗುತ್ತಿತ್ತು.

ಬಿಜೆಪಿ ಜಮ್ಮುವಿನಲ್ಲಿ ಯಶಸ್ಸು ಕಂಡರೂ ಕಾಶ್ಮೀರಿ ಕಣಿವೆಯಲ್ಲಿ ಮತ್ತೆ ನಿರಾಶೆಯನ್ನು ಎದುರಿಸಬೇಕಾಗಿ ಬಂದಿದೆ. ಆರ್ಟಿಕಲ್ 370 ರದ್ದತಿಯನ್ನು ಕಾಶ್ಮೀರಿ ಜನತೆ ಒಪ್ಪಿಕೊಂಡಿಲ್ಲ ಎಂದು ಚುನಾವಣಾ ಫಲಿತಾಂಶದಿಂದ ತೋರುತ್ತಿದೆ. ಫಾರೂಕ್ ಅಬ್ದುಲ್ಲಾ ಇದನ್ನೇ ಹೇಳಿದ್ದಾರೆ.

ಜಮ್ಮು-ಕಾಶ್ಮೀರದ ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟ ಮುನ್ನಡೆ ಪಡೆಯುತ್ತಿದ್ದಂತೆ ಮಾಧ್ಯಮದೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, ‘‘ಜನರು ತಮ್ಮ ಜನಾದೇಶವನ್ನು ನೀಡಿದ್ದಾರೆ, ಅವರು 2019ರ ಆಗಸ್ಟ್ 5ರಂದು ತೆಗೆದುಕೊಂಡ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ಅವರು ಸಾಬೀತುಪಡಿಸಿದ್ದಾರೆ’’ ಎಂದು ಹೇಳಿದ್ದಾರೆ.

ಇದೆ ವೇಳೆ ಉಮರ್ ಅಬ್ದುಲ್ಲಾ ವಿರುದ್ಧ ಬಾರಾಮುಲ್ಲಾ ದಿಂದ ಲೋಕಸಭಾ ಚುನಾವಣೆ ಗೆದ್ದಿದ್ದ ಶೇಕ್ ಅಬ್ದುಲ್ ರಶೀದ್ ಅಲಿಯಾಸ್ ಇಂಜಿನಿಯರ್ ರಶೀದ್ ಪಕ್ಷಕ್ಕೆ ಭಾರೀ ನಿರಾಶೆಯಾಗಿದೆ.

‘‘ಬಾರಾಮುಲ್ಲಾದಲ್ಲಿ ಇಂಜಿನಿಯರ್ ರಶೀದ್ ಗೆದ್ದರೂ ಅಲ್ಲಿನ ಜನರಿಗೆ ಸಂಸದ ಸಿಗುವುದಿಲ್ಲ, ಅವರು ಜೈಲ್ಲಲ್ಲಿ ಇರುತ್ತಾರೆ ಹಾಗಾಗಿ ಜನರಿಗೆ ಜನಪ್ರತಿನಿಧಿ ಇಲ್ಲದಂತಾಗುತ್ತದೆ’’ ಎಂದು ಉಮರ್ ಅಬ್ದುಲ್ಲಾ ತಾನು ಸೋತ ಬಳಿಕ ಹೇಳಿದ್ದರು. ಅದನ್ನು ಜನ ಅರ್ಥಮಾಡಿಕೊಂಡ ಹಾಗೆ ಕಾಣುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೈಲಿನಿಂದಲೇ ಸ್ಪರ್ಧಿಸಿ ಎರಡು ಲಕ್ಷ ಮತಗಳ ಅಂತರದಿಂದ ಉಮರ್ ಅಬ್ದುಲ್ಲಾ ಅವರನ್ನು ಸೋಲಿಸಿದ್ದ ಇಂಜಿನಿಯರ್ ರಶೀದ್ ಈ ಬಾರಿ ಚುನಾವಣಾ ಪ್ರಚಾರಕ್ಕಾಗಿಯೇ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರೂ ಯಾವುದೇ ಪ್ರಭಾವ ಬೀರುವುದರಲ್ಲಿ ವಿಫಲರಾಗಿದ್ದಾರೆ. ರಶೀದ್ ಜಾಮೀನು ಬಿಡುಗಡೆ ಬಿಜೆಪಿಗೆ ಲಾಭವುಂಟು ಮಾಡುವ ಉದ್ದೇಶ ಹೊಂದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪವನ್ನು ಕಾಶ್ಮೀರಿ ಜನತೆ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಸಾಮಾನ್ಯವಾಗಿ ಜಾಮೀನು ಸಿಗದ ಯುಎಪಿಎ ಅಡಿಯಲ್ಲಿ ಬಂಧಿತ ವ್ಯಕ್ತಿಗೆ ಚುನಾವಣಾ ಪ್ರಚಾರಕ್ಕಾಗಿ ಯಾಕೆ ಜಾಮೀನು ನೀಡಲಾಗಿದೆ ಎಂಬ ಪ್ರಶ್ನೆಯನ್ನು ಕಾಶ್ಮೀರಿ ಜನತೆ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ 14 ವಿಧಾನ ಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದ ಇಂಜಿನಿಯರ್ ರಶೀದ್ ಅವರ ಅವಾಮಿ ಇತ್ತ್ತಿಹಾದ್ ಪಾರ್ಟಿ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಸೀಟ್ ಗೆಲ್ಲುವುದರಲ್ಲಿ ಯಶಸ್ಸು ಕಂಡಿಲ್ಲ.

ಉಮರ್ ಅಬ್ದುಲ್ಲಾ ಜನರ ನಡುವೆ ಬಹಳ ಬೆರೆಯುವ ಸರಳ ವ್ಯಕ್ತಿತ್ವದ ರಾಜಕಾರಣಿಯಲ್ಲ. ಕಾಶ್ಮೀರದಲ್ಲಿ ಹಾಗೆ ಬೆರೆಯುವುದು ಸುಲಭವೂ ಅಲ್ಲ. ಆದರೂ ಉಮರ್ ಅಬ್ದುಲ್ಲಾ ಹಾಗೂ ಅವರ ತಂದೆ ಜನಸಾಮಾನ್ಯರ ಕೈಗೆ ಸಿಗದೆ ಅರಮನೆಯಲ್ಲಿದ್ದೇ ರಾಜಕಾರಣ ಮಾಡಿಕೊಂಡು ಅಧಿಕಾರ ಅನುಭವಿಸಿಕೊಂಡು ಬಂದವರು ಎಂಬ ಇಮೇಜ್ ಹೊಂದಿದ್ದಾರೆ.

ಈ ಬಾರಿ ಅದಕ್ಕಾಗಿಯೇ ಉಮರ್ ಜನರೆದುರು ಹೋಗುವಾಗ ತೀರಾ ವಿನೀತರಾಗಿ ನನಗೊಂದು ಅವಕಾಶ ಕೊಡಿ, ನನ್ನ ಗೌರವ ನಿಮ್ಮ ಕೈಯಲ್ಲಿದೆ ಎಂದೇ ಬೇಡಿಕೊಂಡಿದ್ದರು. ಅದನ್ನು ಜನ ಸ್ವೀಕರಿಸಿದ್ದಾರೆ. ಅವರಿಗೆ ಮತ್ತೊಂದು ಅವಕಾಶ ಕೊಟ್ಟಿದ್ದಾರೆ. ಈ ಅವಕಾಶದಲ್ಲಿ ಅವರೆಷ್ಟು ಜನಪರವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕು

share
ಪಿ.ಎಚ್. ಅರುಣ್
ಪಿ.ಎಚ್. ಅರುಣ್
Next Story
X