Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಡವರ ಕೈಗೆಟುಕದ ಉನ್ನತ ಶಿಕ್ಷಣ

ಬಡವರ ಕೈಗೆಟುಕದ ಉನ್ನತ ಶಿಕ್ಷಣ

ಕೆ.ಎಸ್. ನಾಗರಾಜ್ಕೆ.ಎಸ್. ನಾಗರಾಜ್9 July 2024 12:49 PM IST
share
ಬಡವರ ಕೈಗೆಟುಕದ ಉನ್ನತ ಶಿಕ್ಷಣ

ದೇಶದಲ್ಲಿ ಶಿಕ್ಷಣ ಎಂಬುದು ಬಡವರು ಮತ್ತು ಮಧ್ಯಮ ವರ್ಗದವರ ಪಾಲಿಗೆ ಕಬ್ಬಿಣದ ಕಡಲೆಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳು ಪಾವತಿಸಬೇಕಾಗಿರುವ ಶುಲ್ಕದ ಮೊತ್ತ ಏರಿಕೆಯಾಗುತ್ತಿದೆ.

ಈಗ ದೇಶದಲ್ಲಿ ಒಂದನೇ ತರಗತಿಯಿಂದ ಹಿಡಿದು ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ, ಇವುಗಳಿಗೆ ಪ್ರತ್ಯೇಕ ಪಾಠದ ವ್ಯವಸ್ಥೆಯ ಜೊತೆಗೆ ಕೆಲವರು ಪ್ರತಿಷ್ಠಿತ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶವನ್ನು ಕೊಡಿಸುತ್ತಿದ್ದಾರೆ. ವಿಶೇಷವಾಗಿ ಈಗ ಎಸೆಸೆಲ್ಸಿ ಮತ್ತು ಪಿಯುಸಿ ತರಗತಿಗಳ ಮಕ್ಕಳಿಗೂ ವಿಶೇಷವಾದಂತಹ ತರಬೇತಿ ನೀಡುತ್ತೇವೆ ಎಂದು ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ಕೋಚಿಂಗ್ ಸೆಂಟರ್‌ಗಳು ಪಡೆದುಕೊಳ್ಳುತ್ತಿವೆೆ. ಹಣ ಇರುವವರು ಇಂತಹ ಕೋಚಿಂಗ್ ಸೆಂಟರ್‌ಗಳಿಗೆ ಯಾವುದೇ ಆತಂಕವಿಲ್ಲದೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ಮಕ್ಕಳು ಕೂಡಾ ಹಿಂದೆ ಬೀಳಬಾರದೆಂದು ಸಾಲ ಮಾಡಿಯಾದರೂ ವಿಶೇಷ ತರಬೇತಿಯನ್ನು ಕೊಡಿಸುತ್ತಾರೆ. ಆದರೆ ಇವೆಲ್ಲವೂ ಕೈಗೆಟುಕದ ಗ್ರಾಮೀಣ ಪ್ರದೇಶದ ಮಕ್ಕಳು ಕೂಡಾ ಸ್ವಂತ ಪ್ರತಿಭೆಯಿಂದ ಸಾಕಷ್ಟು ಶೈಕ್ಷಣಿಕ ಸಾಧನೆ ಮಾಡುತ್ತಿರುವುದನ್ನು ಗಮನಿಸಬೇಕಾಗಿದೆ.

ದೇಶದೆಲ್ಲೆಡೆ ಕಾರ್ಯಾಚರಿಸುತ್ತಿರುವ ಕೋಚಿಂಗ್ ಸೆಂಟರ್‌ಗಳು ಸುಮಾರು ನಾಲ್ಕು ಕೋಟಿ ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಳ್ಳುತ್ತವೆ. ಪ್ರತೀ ವರ್ಷ ಇವುಗಳು 24,000 ಕೋಟಿ ರೂಪಾಯಿಗಳ ಆದಾಯವನ್ನು ಪಡೆಯುತ್ತಿವೆ. ಒಟ್ಟಾರೆಯಾಗಿ 58,000 ಕೋಟಿ ರೂಪಾಯಿಗಳ ವಹಿವಾಟು ಇವುಗಳಿಂದ ನಡೆಯುತ್ತಿದೆ. 2028ರ ವೇಳೆಗೆ ಕೋಚಿಂಗ್ ಸೆಂಟರ್‌ಗಳ ಒಟ್ಟಾರೆ ಒಂದು ಲಕ್ಷದ ಹದಿಮೂರು ಸಾವಿರ ಕೋಟಿ ರೂಪಾಯಿಗಳ ತನಕ ಮುಟ್ಟಬಹುದೆಂಬ ಅಂದಾಜಿದೆ.

ಕೋಚಿಂಗ್ ಸೆಂಟರ್‌ಗಳಿಗೆ ಲಗಾಮು ಹಾಕದಿದ್ದರೆ ಶಾಲೆ ಮತ್ತು ಕಾಲೇಜುಗಳಲ್ಲಿ ನಡೆಯುವಂತಹ ಪಾಠಗಳಿಗಿಂತ ಮಕ್ಕಳು ಕೋಚಿಂಗ್ ಸೆಂಟರ್‌ಗಳ ತರಗತಿಗಳಿಗೇ ಹೆಚ್ಚಿನ ಮಹತ್ವವನ್ನು ನೀಡುವ ಕಾರಣ ಶಾಲಾ ಮತ್ತು ಕಾಲೇಜುಗಳಲ್ಲಿ ಪಾಠ ಮಾಡುವವರಿಗೆ ಬೆಲೆಯೇ ಇಲ್ಲದಂತಾಗುತ್ತದೆ. ಕೋಚಿಂಗ್ ಸೆಂಟರ್‌ಗಳ ಹಾವಳಿಯಿಂದ ಹಲವಾರು ರೀತಿಯ ಅನಾಹುತಗಳು ಅದರಲ್ಲೂ ವಿಶೇಷವಾಗಿ ಪರೀಕ್ಷೆಗಳ ವಿಚಾರದಲ್ಲಿ ನಡೆಯುತ್ತಿರುವುದು ಪ್ರತೀ ಸಂದರ್ಭದಲ್ಲಿ ಬಹಿರಂಗವಾಗುತ್ತಿದೆ.

ಇನ್ನು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿಗಳಿಗೆ ಸಿಇಟಿ ಹಾಗೂ ನೀಟ್ ಪ್ರವೇಶ ಪರೀಕ್ಷೆಗಳಲ್ಲಿ ಆಯ್ಕೆಯಾದವರು ಸಹ ಪಾವತಿಸಬೇಕಾಗಿರುವ ಶುಲ್ಕದ ಮೊತ್ತ ಹೆಚ್ಚಾಗುತ್ತಿದೆ. ಮೆರಿಟ್ ಇಲ್ಲದವರಿಗೆ ಇಂಜಿನಿಯರಿಂಗ್ ಪದವಿಯನ್ನು ಪಡೆಯಲು ಸುಮಾರು 10 ಲಕ್ಷ ರೂ.ತನಕ ಶುಲ್ಕವನ್ನು ಪಾವತಿಸಬೇಕಾಗಿದೆ. ಇನ್ನು ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶವನ್ನು ಪಡೆಯಲು ಕೋಟಿಗಟ್ಟಲೆ ಹಣ ವೆಚ್ಚವಾಗುತ್ತದೆ. ಈ ರೀತಿಯಲ್ಲಿ ಹಣ ಕೊಟ್ಟು ಪದವಿಗಳನ್ನು ಪಡೆದವರಿಂದ ಸೇವೆಯನ್ನು ನಿರೀಕ್ಷಿಸುವುದಾದರೂ ಹೇಗೆ? ಸಹಜವಾಗಿಯೇ ಅವರು ಬಂಡವಾಳವನ್ನು ಹಿಂದೆಗೆದುಕೊಳ್ಳುವ ರೀತಿಯಲ್ಲಿ ತಮ್ಮ ವೃತ್ತಿಯನ್ನು ವ್ಯಾಪಾರಿ ಮನೋಭಾವದಿಂದ ನೋಡುತ್ತಾರೆ.

ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ಈಗ ಶುಲ್ಕದ ಮೊತ್ತ ರೂ. 3,75,000ಗಳಿಗೆ ಏರಿಕೆಯಾಗಿದೆ. ಇವು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಾಸಾದಂತಹ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತಿರುವುದು. ಈ ಮೊದಲು ಹತ್ತು ವರ್ಷದ ಹಿಂದೆ ಇದ್ದಂತಹ ಶುಲ್ಕಕ್ಕೂ ಇವತ್ತಿಗೂ ಹಲವಾರು ಪಟ್ಟು ಏರಿಕೆಯಾಗಿದೆ.

ಐಐಎಂಗಳಲ್ಲಿ ಈ ಮೊದಲು ಮೂರುವರೆ ಲಕ್ಷ ರೂಪಾಯಿಗಳಿದ್ದ ಶುಲ್ಕದ ಮೊತ್ತ 13 ಲಕ್ಷದಿಂದ 15 ಲಕ್ಷದ ತನಕ ಮುಟ್ಟಿರುತ್ತದೆ. ಶುಲ್ಕದ ಜೊತೆಗೆ ಹಾಸ್ಟೆಲ್ ಫೀಸ್, ಊಟ ಮತ್ತು ಇತರ ಖರ್ಚುಗಳ ಲೆಕ್ಕದಲ್ಲಿ ಮತ್ತಷ್ಟು ಹಣ ತೆರಬೇಕಾಗಿದೆ. ಹಿಗಾಗಿ ಇಲ್ಲಿಯೂ ಬಡವರ ಮನೆಯ ಮಕ್ಕಳು ಪ್ರವೇಶ ಪಡೆದು ಶುಲ್ಕ ಪಾವತಿಸುವುದು ಅಸಾಧ್ಯದ ಮಾತು.

ಬೇರೆ ಬೇರೆ ವಿಚಾರಗಳಿಗಾಗಿ ಮತ್ತು ಪ್ರಚಾರಗಳಿಗಾಗಿ ಹಲವಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಸರಕಾರಗಳು ಶಿಕ್ಷಣ ಶುಲ್ಕವನ್ನು ಪ್ರತೀ ವರ್ಷವೂ ಹೆಚ್ಚಿಸುವುದು ಎಷ್ಟರಮಟ್ಟಿಗೆ ಸರಿ?. ಉನ್ನತ ಶಿಕ್ಷಣ ಮತ್ತು ಸಂಶೋಧನೆ ದೇಶದ ಮಾನವ ಸಂಪನ್ಮೂಲದ ಅಭಿವೃದ್ಧಿಗೆ ರಹದಾರಿಯಾಗಿರುತ್ತದೆ. ಇಲ್ಲಿ ಸರಕಾರಗಳು ಗಂಭೀರವಾಗಿ ಚಿಂತಿಸದೆ ಹೋದರೆ ಉನ್ನತ ಶಿಕ್ಷಣ ಎಂಬುದು ಉಳ್ಳವರ ಪಾಲಾಗುತ್ತದೆ ಇಲ್ಲದವರ ಪಾಲಿಗೆ ಕಬ್ಬಿಣದ ಕಡಲೆಯಾಗುತ್ತದೆ.

ಬೇಸರದ ಸಂಗತಿ ಏನೆಂದರೆ ಪ್ರತಿಭೆಯ ಹೆಸರಲ್ಲಿ ಸರಕಾರದ ಸವಲತ್ತು, ರಿಯಾಯಿತಿಯನ್ನು ಪಡೆದುಕೊಂಡು ಶಿಕ್ಷಣ ಪಡೆದ ಬಹಳಷ್ಟು ಶ್ರೀಮಂತ ವಿದ್ಯಾರ್ಥಿಗಳು ವಿದೇಶಗಳಿಗೆ ಪಲಾಯನ ಮಾಡಿ ಅಲ್ಲಿಯೇ ನೆಲೆಸಿ ಆ ದೇಶಗಳ ಉದ್ಧಾರ ಮಾಡುತ್ತಾರೆ. ಇಂತಹವರು ನಮ್ಮ ದೇಶದ ಪ್ರಗತಿಗೆ ಮತ್ತು ನಮ್ಮ ದೇಶದ ಜನರ ಅಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತಿಲ್ಲ.

ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ತನಕ ಶುಲ್ಕದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿರುವುದು ಶಿಕ್ಷಣವೂ ಸಹ ಆರ್ಥಿಕವಾಗಿ ದುರ್ಬಲರಾದವರ ಪಾಲಿಗೆ ಕನ್ನಡಿ ಒಳಗಿನ ಗಂಟಾಗಿದೆ.

share
ಕೆ.ಎಸ್. ನಾಗರಾಜ್
ಕೆ.ಎಸ್. ನಾಗರಾಜ್
Next Story
X