Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಒಳ ಮೀಸಲಾತಿ ಜಾರಿ ಅಡ್ಡಿಪಡಿಸಲು ಅನಗತ್ಯ...

ಒಳ ಮೀಸಲಾತಿ ಜಾರಿ ಅಡ್ಡಿಪಡಿಸಲು ಅನಗತ್ಯ ತಕರಾರುಗಳು

ದಾಸನೂರು ಕೂಸಣ್ಣದಾಸನೂರು ಕೂಸಣ್ಣ7 Aug 2025 3:26 PM IST
share
ಒಳ ಮೀಸಲಾತಿ ಜಾರಿ ಅಡ್ಡಿಪಡಿಸಲು ಅನಗತ್ಯ ತಕರಾರುಗಳು

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ 9.60 ಲಕ್ಷ ಜನರ ಮಾಹಿತಿ ಇಲ್ಲವೆಂದು ದಾಸ್ ಆಯೋಗ ವರದಿ ಶಿಫಾರಸನ್ನು ಒಪ್ಪದಿದ್ದರೆ, ಒಳ ಮೀಸಲಾತಿ ಜಾರಿಗೆ ಅದರ ಬಳಿ ಇರುವ ಪರ್ಯಾಯ ಮಾರ್ಗಗಳನ್ನು ಸಹ ಸ್ಪಷ್ಟವಾಗಿ ರಾಜ್ಯದ ಮುಂದೆ ಮಂಡಿಸಬೇಕು. ನ್ಯಾ.ದಾಸ್ ಆಯೋಗದ ವರದಿ ಯಾವುದೇ ಕತ್ತಲೆಯಲ್ಲಿ ಏಕಾಂಗಿಯಾಗಿ ಕುಳಿತು ಕಟ್ಟಿದ ಮಾಯಾಜಾಲದ ಮಾಹಿತಿಗಳಲ್ಲ. ಅವುಗಳು ಪ್ರಜಾತಾಂತ್ರಿಕ ಸರಕಾರದ ರೀತಿ-ನೀತಿಗಳಡಿ ಸೃಜಿಸಿರುವ ದತ್ತಾಂಶಗಳಾಗಿವೆ. ಪ್ರತಿಯೊಂದು ಉಪಪಂಗಡಗಳು ತಮ್ಮ ಜನಸಂಖ್ಯಾ ಸಾಮರ್ಥ್ಯವನ್ನು ಸ್ವಯಂಭೂ ಸ್ವರೂಪದಲ್ಲಿ ಸಾದರಪಡಿಸಿರುವ ಅಂಕಿ-ಅಂಶಗಳನ್ನು ಆಯೋಗ ಮಾನ್ಯ ಮಾಡಿಲ್ಲ. ಆದರೆ, ಸರಕಾರ ಶಾಸನಬದ್ಧವಾಗಿ ರಚಿಸಿದ ಆಯೋಗವೊಂದು ನೂರಾರು ಕೋಟಿ ರೂ. ವ್ಯಯಿಸಿ ವೈಜ್ಞಾನಿಕ ವಿಧಾನಗಳ ಮೂಲಕ ಕ್ರೋಡೀಕರಿಸಿರುವ ದತ್ತಾಂಶಗಳನ್ನು ಹಗುರವಾಗಿ ನೋಡುವ ಜಾಯಮಾನಕ್ಕೆ ಸರಕಾರ ಮುಂದಾಗಬಾರದು.

ಒಳ ಮೀಸಲಾತಿ ಜಾರಿಗಾಗಿ ನೂತನ ಸಮೀಕ್ಷೆ ಆರಂಭಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಅವರು ಅಂದು ಮಾತನಾಡುತ್ತಾ, ‘‘ಕಾಂತರಾಜು ವರದಿ, 2011 ಜನಗಣತಿಯಲ್ಲಿ ನಿರ್ದಿಷ್ಟ ದತ್ತಾಂಶಗಳಿಲ್ಲ. ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಸಮುದಾಯಗಳ ಗುರುತಿಸುವಿಕೆಯಲ್ಲಿ ಅನೇಕ ಗೊಂದಲಗಳಿವೆ. ಹಾಗಾಗಿ ಸರಕಾರ 42 ಅಂಶಗಳುಳ್ಳ ಪ್ರಶ್ನಾವಳಿಯನ್ನು ನ್ಯಾಯಾಲಯದ ನಿರ್ದೇಶನದಂತೆ ವಿಶಿಷ್ಟ ಆ್ಯಪ್ ಮೂಲಕ ಸಂಗ್ರಹ ಮಾಡುತ್ತಿದ್ದೇವೆ. ಇದೊಂದು ಚಾರಿತ್ರಿಕ ಸಮೀಕ್ಷೆ’’ಎಂದಿದ್ದರು. ನ್ಯಾಯಮೂರ್ತಿ ಶ್ರೀ ನಾಗಮೋಹನ ದಾಸ್ ಆಯೋಗದ ವರದಿ ಸಲ್ಲಿಕೆಯ ನಂತರ ‘‘ಆಧುನಿಕವಾಗಿ ತಾಂತ್ರಿಕತೆಯನ್ನು ಬಳಸಿಕೊಂಡು ವ್ಯವಸ್ಥಿತವಾದ ವರದಿಯನ್ನು ಸಲ್ಲಿಸಿದ್ದಾರೆ’’ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಭಿಮತಿಸಿದ್ದಾರೆ. ನ್ಯಾಯಮೂರ್ತಿ ನಾಗಮೋಹನ ದಾಸ್ ಯಾವುದೇ ಆಕರ ಮಾಹಿತಿಗಳನ್ನು ಬಹಿರಂಗಪಡಿಸದೆ, ನೇರವಾಗಿ ಪ್ರಯೋಗಾತ್ಮಕವಾಗಿ ಪರಿಶೀಲಿಸಿದ ದತ್ತಾಂಶ ವರದಿ ಸಲ್ಲಿಸಿದ್ದಾರೆ. ಅದರ ಬೆನ್ನ ಹಿಂದೆಯೇ ಟೀಕೆ-ಟಿಪ್ಪಣಿಗಳ ಸುರಿ ಮಳೆ ಆಗುತ್ತಿವೆ. ಸ್ವಾಗತಾರ್ಹವಾಗಿದ್ದರೆ ಸರಕಾರ ಸ್ವೀಕರಿಸಲಿ ಅಥವಾ ಕೈ ಬಿಡಲಿ. ಇದೂ ಸಹ ಅದಕ್ಕಿರುವ ಪರಮಾಧಿಕಾರವಾಗಿದೆ.

ಯೋಜನಾ ಇಲಾಖೆ ನಿರ್ದೇಶಕರಾದ ಡಿ. ಚಂದ್ರಶೇಖರಯ್ಯ ಆಯೋಗದ ಕಾರ್ಯವೈಖರಿ ಕುರಿತು ಬಾಲಿಶವಾಗಿ ಟೀಕೆ ಮಾಡಿದ್ದಾರೆ. ಗೃಹ ಮತ್ತು ಸಮಾಜ ಕಲ್ಯಾಣ ಸಚಿವರುಗಳು ಖುದ್ದಾಗಿ ಸಮೀಕ್ಷೆಯಲ್ಲಿ ಕಂಡಿರುವ ಸತ್ಯಾಸತ್ಯತೆಗಳನ್ನು ಅಣಕ ಮಾಡಿದಂತಾಗಿದೆ. ಈ ಹಿಂದೆ ನ್ಯಾಯಮೂರ್ತಿ ಸದಾಶಿವ ಆಯೋಗ ಸಹ ವೈಜ್ಞಾನಿಕವಾಗಿ ವರದಿ ನೀಡಿಲ್ಲ. ಅದು ತೀರ ಹಳೆಯದಾದ ದತ್ತಾಂಶಗಳೆಂದು ಮೀಸಲಾತಿದಾರರು ಗುಲ್ಲೆಬ್ಬಿಸಿದ್ದರು. ಮಾಧುಸ್ವಾಮಿ ವರದಿಗೂ ಷರಾ ಬರೆಯಲಾಗಿತ್ತು. ಕಾಂಗ್ರೆಸ್ ಪಕ್ಷ 2023ರ ಚುನಾವಣೆ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿಗೆ ಬದ್ಧವೆಂದು ಘೋಷಣೆ ಮಾಡಿದೆ. ಹಿಂದಿನ ಭಾಜಪ ಸರಕಾರ ಸದಾಶಿವ ಆಯೋಗವನ್ನು ರದ್ದುಮಾಡಿತ್ತು. ಅದಾದ ಮೇಲೆ ಸುಪ್ರೀಂ ಕೋರ್ಟ್‌ನ ತೀರ್ಪು ಪ್ರಕಾರ ದಾಸ್ ಆಯೋಗವನ್ನು ವೈಜ್ಞಾನಿಕ ದತ್ತಾಂಶಗಳನ್ನು ಕ್ರೋಡೀಕರಿಸಲು ರಚಿಸಲಾಯಿತು. ಅದು 60 ದಿನಗಳ ಕಾರ್ಯಭಾರ ನಿರ್ವಹಿಸಿ ಬೃಹತ್ ವರದಿ ನೀಡಿದೆ.

ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳೊಳಗೆ ಅನೇಕ ವಿಘಟಿತ ಸಾಮಾಜಿಕ ಸಚಿತ್ರಣಗಳು ಹುದುಗಿವೆ. ಮೈಸೂರು ರಾಜ್ಯದಲ್ಲಿದ್ದ 15 ಉಪ ಜಾತಿಗಳ ಜೊತೆ 1956ರಲ್ಲಿ ಬಾಂಬೆ ಕರ್ನಾಟಕ (24), ಮದ್ರಾಸ್‌ಕರ್ನಾಟಕ (52), ಹೈದರಾಬಾದ್ ಕರ್ನಾಟಕ (32), ಉತ್ತರ ಕನ್ನಡ (01), ದಕ್ಷಿಣ ಕನ್ನಡ (04), ಕೊಡಗು (12) ಮತ್ತು ಕೊಳ್ಳೇಗಾಲ ತಾಲೂಕಿನಿಂದ (02) ಉಪ ಜಾತಿಗಳು ಅಂತಿಮವಾಗಿ ಕ್ರೋಡೀಕರಣವಾಗಿ 101 ಉಪಜಾತಿಗಳಾದವು. ಇವುಗಳ ಪೈಕಿ 97 ಉಪ ಜಾತಿಗಳು ಅಸ್ಪಶ್ಯ ಮೂಲದ ನಿಮ್ನ ಜಾತಿಗಳಾಗಿದ್ದವು. ಉಳಿದ 4 ಸಮುದಾಯಗಳಿಗೆ ಈ ಸಾಮಾಜಿಕತೆಗಳು ಏಕ ಪ್ರಕಾರವಾಗಿರಲಿಲ್ಲ. ಈ ಬಗ್ಗೆ ರಾಷ್ಟ್ರೀಯ ಜನಗಣತಿ ಆಯುಕ್ತರಾಗಿದ್ದ ಜೆ.ಜೆ.ಹಟನ್(1931) ಅಸ್ಪಶ್ಯರಲ್ಲದ ಪರಿಶಿಷ್ಟ ಜಾತಿಗಳನ್ನು ಮೈಸೂರು ಪ್ರಾಂತದಲ್ಲಿ ಹೊರ ಜಾತಿಗಳಲ್ಲವೆಂದು ಉಲ್ಲೇಖಿಸಿದ್ದಾರೆ. 1976-77ರಲ್ಲಿ 101 ಜಾತಿಗಳ ಮೇಲಿದ್ದ ಪ್ರಾದೇಶಿಕ ನಿಬಂಧನೆ ತೆಗೆದಮೇಲೆ ಹೊಲೆಯ-ಮಾದಿಗರ ಜನಸಂಖ್ಯೆ ಸಾಂಸ್ಥಿಕ ಸ್ವರೂಪಗಳು ಗಂಭೀರವಾಗಿ ಬದಲಾಯಿತು. ದಾಸ್ ಆಯೋಗ ಟೀಕಿಸುವವರು ಅಂಶಗಳನ್ನು ಮೊದಲು ಮನನ ಮಾಡಬೇಕಿದೆ.

2011ರ ಜನಗಣತಿಯಲ್ಲಿ ಪರಿಶಿಷ್ಟ ಜಾತಿಯ 23.66 ಕುಟುಂಬಗಳಲ್ಲಿ 1,04,74,992 ಜನರಿದ್ದರು. ದಾಸ್ ಆಯೋಗ ತಂತ್ರಜ್ಞರ ತಂಡದಿಂದ ಪಡೆದ ಅಂದಾಜಿನಲ್ಲಿ 1,16,67,040 (2025) ಜನರಾಗಿದ್ದರು. ಆಯೋಗದ ಸಮೀಕ್ಷೆಯ ಅಂತಿಮ ಫಲಿತಾಂಶದಂತೆ 27,24,768 ಕುಟುಂಬಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶ ಒಳಗೊಂಡಂತೆ ಗುರುತಿಸಿದೆ. ಸದರಿ ಕುಟುಂಬಗಳಲ್ಲಿ 1,07,01,982 ಜನರನ್ನು ಸಮೀಕ್ಷೆಯ ಮೂಲಕ ಗಣಿಸಲಾಗಿದೆ. ಆಯೋಗದ ಅಂದಾಜಿನ ಜನಸಂಖ್ಯೆಯಲ್ಲಿ ಶೇ.92ರಷ್ಟು ಜನರನ್ನು ಮುಟ್ಟಿರುವುದು ಯಶೋಗಾಥೆಯಂತೆ ಕಾಣುತ್ತಿದೆ. ಈ ಸಮೀಕ್ಷೆಯ ಕಕ್ಷೆಯೊಳಗೆ ಬಾರದ ಕುಟುಂಬಗಳು 3,58,695. ಅವರ ಜನಸಂಖ್ಯೆ 9,65,058 (ಶೇ.8). ಇದರಲ್ಲಿ ಯಾವ ಸಮುದಾಯದವರು ಎಷ್ಟಿದ್ದಾರೆಂದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ.

ಸಮೀಕ್ಷೆಯನ್ನು ಮಾದಿಗ ಅಥವಾ ಬೇರೆ ಸಮುದಾಯಗಳ ನೇತೃತ್ವದಲ್ಲಿ ನಡೆಸಿಲ್ಲ. ಇದರ ನೇರ ಹೊಣೆಗಾರಿಕೆಯನ್ನು ಅಪರ ಮುಖ್ಯ ಕಾರ್ಯದರ್ಶಿ (ಅಭಿವೃದ್ಧಿ) ಅವರಿಗೆ ನೀಡಲಾಗಿತ್ತು. ಸಮೀಕ್ಷೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗಳು ನಿರ್ವಹಿಸಿವೆ. ಮಾಹಿತಿಗಳನ್ನು ಕೈ ಬರಹ ಮೂಲಕ ಕ್ರೋಡೀಕರಣ ಮಾಡದೆ, ಇ-ಆಡಳಿತ ಸಿದ್ಧಪಡಿಸಿದ ಮಾದರಿ ತಂತ್ರಜ್ಞಾನದ ಮೂಲಕ ಸಂಗ್ರಹ ಮಾಡಲಾಗಿದೆ. ಮಾಹಿತಿ ಸಂಗ್ರಹ ಸರಕಾರದ ಹೊಣೆಗಾರಿಕೆಯೇ ಹೊರತು ಆಯೋಗಕ್ಕೆ ಸಂಬಂಧಿಸಿದ ಕರ್ತವ್ಯಗಳಲ್ಲ. ಸರಕಾರ ಅದಕ್ಕೆ ನೀಡಿರುವ ಅಂಕಿ-ಅಂಶಗಳನ್ನು ವಿಶ್ಲೇಷಣೆ ಮಾಡಿ ವರದಿ ನೀಡಿದೆ. ಈ ಆಯೋಗದಲ್ಲಿ ಯಾವುದೇ ಎಡಗೈ ಅಥವಾ ಬಲಗೈ ಸಮುದಾಯದವರನ್ನಾಗಲಿ, ಇತರರನ್ನಾಗಲಿ ಭಾಗೀದಾರರನ್ನಾಗಿ ಸರಕಾರ ಮಾಡಲಿಲ್ಲ. ಅದರೊಳಗಿದ್ದ ಬಲಗೈ ಸಮುದಾಯ ಅಧಿಕಾರಿಗಳು ಸಕ್ಷಮ ಪ್ರಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂದಮೇಲೆ ಬಲಗೈ ಸಮುದಾಯಕ್ಕೆ ಅಥವಾ ಇನ್ಯಾವುದೇ ಸಮುದಾಯಕ್ಕೆ ಅನ್ಯಾಯವಾಗಿದೆ ಎನ್ನುವುದು ತಪ್ಪು. ಯಾವುದೇ ಮಾರ್ಜಾಲ ನ್ಯಾಯದ ಅಂಕಿ-ಅಂಶಗಳಡಿ ಆಯೋಗ ದತ್ತಾಂಶಗಳನ್ನು ಅನುಮೋದಿಸಿಲ್ಲ ಅಥವಾ ವ್ಯಕ್ತಿ ಅಥವಾ ಆತನ ಸಮುದಾಯ ನೀಡಿದ ದತ್ತಾಂಶವನ್ನು ಸಹ ಮಾನ್ಯ ಮಾಡಿಲ್ಲ. ಆಯೋಗ ಸರಕಾರದ ಪ್ರಾಧಿಕಾರದಿಂದ ಒದಗಿಸಿರುವ ಅಂಕಿ-ಅಂಶಗಳ ಆಧಾರದಡಿ ಉಪ ಜಾತಿಗಳ ಹಿಂದುಳಿದಿರುವಿಕೆಯನ್ನು ಗುರುತಿಸಿ ವರ್ಗೀಕರಿಸಿದೆ. ಅದರ ವರದಿ ಸಾರ್ವಜನಿಕವಾಗಿ ಹೊರಬಂದ ಮೇಲಷ್ಟೇ ಯಾವ ಸಮುದಾಯಗಳು ಮೀಸಲಾತಿ ಜಾಸ್ತಿ ಅನುಭವಿಸಿವೆ ಅಥವಾ ಕಡಿಮೆ ಅನುಭವಿಸಿವೆ ಎಂದು ತಿಳಿಯುತ್ತದೆ. ಆಯೋಗದ ವರದಿ ಅವಲೋಕನ ಮಾಡದೆ ಯಾರಾದರೂ ಅಭಿಮತಿಸಿದರೆ, ಅವುಗಳು ‘‘ಸಮುದ್ರದ ಆಳ ಅರಿಯದೆ ನೀಡುವವರ ವ್ಯಾಖ್ಯಾನದಂತಿರುತ್ತವೆ’’

ಮೈಸೂರಿನ ಉರಿಲಿಂಗಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಗಳು 9.60 ಲಕ್ಷ ಜನರು ಸಮೀಕ್ಷೆಗೆ ದಾಖಲಾಗಿಲ್ಲವೆಂದು ಆತಂಕ ವ್ಯಕ್ತಪಡಿಸಿದ್ದಾರೆ. ಯಾವಾಗಲೂ ಜನಗಣತಿ ಮತ್ತು ಸಮೀಕ್ಷೆಗಳ ನಡುವಿನ ವೈಜ್ಞಾನಿಕ ನೆಲೆಗಳು ಭಿನ್ನವಾಗಿ ಧ್ವನಿಸುತ್ತವೆ. ಜನಗಣತಿಯಲ್ಲಿ ಸೃಜಿಸುವ ಮಾಹಿತಿಗಳಂತೆ ಇತರ ಯಾವುದೇ ಸಮೀಕ್ಷೆಗಳಿಂದ ಸಿಗಲು ಸಾಧ್ಯವಿಲ್ಲ. ಸಮೀಕ್ಷೆಗಳನ್ನು ಯಾವಾಗಲೂ ಸಂಭವನೀಯ ಪ್ರಾತಿನಿಧಿಕ ಉತ್ತರಗಳಾಗಿ ಸರಕಾರದ ನಿರ್ಧಾರ ಕೈಗೊಳ್ಳುವಾಗ ನೀತಿ ನಿರೂಪಕರು ಅವುಗಳನ್ನು ಪ್ರಾತಿನಿಧಿಕ ಸಂಕೇತಗಳಂತೆ ಪರಿಗಣಿಸು ತ್ತಾ ಬಂದಿದ್ದಾರೆ. ಅದೇ ಮಾದರಿಯಲ್ಲಿ ದಾಸ್ ಆಯೋಗ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಿರುವುದು ಗೋಚರವಾಗುತ್ತಿದೆ. ಈ ಆಯೋಗ ವರದಿ ವೈಜ್ಞಾನಿಕ ಅಲ್ಲದಿದ್ದರೆ ಇನ್ಯಾವುದಿದೆ ಘನ ವೈಜ್ಞಾನಿಕವಾಗಿ ದತ್ತಾಂಶಗಳನ್ನು ಸಾದರಪಡಿಸುವ ಮೇರು ವರದಿ?

ದಕ್ಷಿಣ ಭಾರತದ ತಮಿಳು ನಾಡು, ಕೇರಳ, ಪುದುಚೇರಿ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ 1936ರಲ್ಲಿ ಪರಿಶಿಷ್ಟ ಜಾತಿಗಳಾಗಿದ್ದವರ ಉಪಜಾತಿಗಳಿಗೆ ಸಾಂವಿಧಾನಿಕ ಮನ್ನಣೆ ಸಿಕ್ಕಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಅತಿ ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಟ ಪಂಗಡಗಳಾಗುವ ಸಾಮಾಜಿಕ ಗುಣವಿಶೇಷಣಗಳಿರುವವರು ತುಂಬಿದ್ದಾರೆ. ಅವುಗಳಿಂದಾಗಿ ಎಡಗೈ-ಬಲಗೈ ಸಮುದಾಯಗಳು ಅಧಿಕ ಮೀಸಲಾತಿಗಾಗಿ 30 ವರ್ಷಗಳಿಂದಲೂ ಕೆಸರು ಎರಚಾಡುತ್ತಿವೆ. ಈ ಸಮಸ್ಯೆ ಸದ್ಯಕ್ಕಂತೂ ರಾಜ್ಯದ ಸಾಮಾಜಿಕ ಹಿತದೃಷ್ಟಿಯಿಂದ ಬಗೆಹರಿಯಲೇ ಬೇಕಿದೆ. ಈಗ ವಾಸ್ತವಿಕ ನೆಲೆಗಟ್ಟಿನಡಿ ನ್ಯಾ. ದಾಸ್ ಆಯೋಗದ ಶಿಫಾರಸು ಅನುಷ್ಠಾನ ಆಗದಿದ್ದರೆ ನೊಂದು ಬೆಂದಿರುವವರ ಆಕ್ರೋಶದ ನಡಿಗೆಗಳು ಮತ್ತಷ್ಟು ಕಂಪಿಸಿ ಸರಕಾರ ಮತ್ತು ಸಮಾಜದ ಮುಂದೆ ಮುಗಿಲಿಗೆ ರಾಚುವಷ್ಟು ಮೇಳೈಸುತ್ತಿರುತ್ತವೆ. ಅದು ರಾಜ್ಯದ ಅಭಿವೃದ್ಧಿಗೆ ಎಲ್ಲಿಲ್ಲದ ಮಾರಕವಾಗುತ್ತದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ 9.60 ಲಕ್ಷ ಜನರ ಮಾಹಿತಿ ಇಲ್ಲವೆಂದು ದಾಸ್ ಆಯೋಗ ವರದಿ ಶಿಫಾರಸನ್ನು ಒಪ್ಪದಿದ್ದರೆ, ಒಳ ಮೀಸಲಾತಿ ಜಾರಿಗೆ ಅದರ ಬಳಿ ಇರುವ ಪರ್ಯಾಯ ಮಾರ್ಗಗಳನ್ನು ಸಹ ಸ್ಪಷ್ಟವಾಗಿ ರಾಜ್ಯದ ಮುಂದೆ ಮಂಡಿಸಬೇಕು. ನ್ಯಾ.ದಾಸ್ ಆಯೋಗದ ವರದಿ ಯಾವುದೇ ಕತ್ತಲೆಯಲ್ಲಿ ಏಕಾಂಗಿಯಾಗಿ ಕುಳಿತು ಕಟ್ಟಿದ ಮಾಯಾಜಾಲದ ಮಾಹಿತಿಗಳಲ್ಲ. ಅವುಗಳು ಪ್ರಜಾತಾಂತ್ರಿಕ ಸರಕಾರದ ರೀತಿ-ನೀತಿಗಳಡಿ ಸೃಜಿಸಿರುವ ದತ್ತಾಂಶಗಳಾಗಿವೆ. ಪ್ರತಿಯೊಂದು ಉಪಪಂಗಡಗಳು ತಮ್ಮ ಜನಸಂಖ್ಯಾ ಸಾಮರ್ಥ್ಯವನ್ನು ಸ್ವಯಂಭೂ ಸ್ವರೂಪದಲ್ಲಿ ಸಾದರಪಡಿಸಿರುವ ಅಂಕಿ-ಅಂಶಗಳನ್ನು ಆಯೋಗ ಮಾನ್ಯ ಮಾಡಿಲ್ಲ. ಆದರೆ, ಸರಕಾರ ಶಾಸನಬದ್ಧವಾಗಿ ರಚಿಸಿದ ಆಯೋಗವೊಂದು ನೂರಾರು ಕೋಟಿ ರೂ. ವ್ಯಯಿಸಿ ವೈಜ್ಞಾನಿಕ ವಿಧಾನಗಳ ಮೂಲಕ ಕ್ರೋಡೀಕರಿಸಿರುವ ದತ್ತಾಂಶಗಳನ್ನು ಹಗುರವಾಗಿ ನೋಡುವ ಜಾಯಮಾನಕ್ಕೆ ಸರಕಾರ ಮುಂದಾಗಬಾರದು.

ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಸಮುದಾ ಯಗಳ ನಾಮಪದವನ್ನು ಕೈಬಿಡಲು ಒಪ್ಪದವರು ಸಮೀಕ್ಷೆಯಲ್ಲಿ ದಾಖಲಾಗಿದ್ದಾರೆ ಎಂದರೆ ಅವರ ಹಿತಾಸಕ್ತಿ ಕಾಪಾಡುವುದು ಆಯೋಗದ ಸಾಂವಿಧಾನ ಕರ್ತವ್ಯ ಕೂಡ ಆಗಿತ್ತು. ಅದನ್ನು ನಿರ್ವಂಚನೆಯಿಂದ ನಿಭಾಯಿಸಿದೆ. ಒಂದುವೇಳೆ, ಈ ಪ್ರಾದೇಶಿಕ ನೂತನ ಜನರಿಕ್ ಪದಗಳನ್ನು ಸಾರಾಸಗಟಾಗಿ ತಿರಸ್ಕರಿಸಿ, ತಮ್ಮ ತಮ್ಮ ಮೂಲ ಜಾತಿಗಳನ್ನೇ ದಾಖಲಿಸಿದ್ದರೆ ಬೇರೊಂದು ಸ್ವರೂಪದ ಸಾಮಾಜಿಕ ಸಚಿತ್ರಣ ಬರುತ್ತಿತ್ತು. ಆಯೋಗ ಎಲ್ಲಾ ಬಗೆಯ ಮುಕ್ತ ಅವಕಾಶಗಳನ್ನು ನೀಡಿತ್ತು. ದಂಡವಿಡಿದು ಸಮೀಕ್ಷೆ ಮಾಡಿಸುವ ಪರಮಾಧಿಕಾರ ಯಾವುದೇ ಆಯೋಗಕ್ಕೂ ಇಲ್ಲ ಅಥವಾ ಸರಕಾರಕ್ಕೂ ಇಲ್ಲ. ಈ ವಿಚಾರ ವ್ಯಕ್ತಿ ಮತ್ತು ಆತನ ಸಮುದಾಯಗಳು ಹೊಂದಿರುವ ಐಚ್ಛಿಕ ಅಥವಾ ಆಯ್ಕೆ ವಿಚಾರಗಳಾಗಿವೆ. ಅಂತಹ ಜನರನ್ನು ಅಥವಾ ಅದೇ ಮಾದರಿಯ ವಿಷಯಗಳನ್ನು ಮುಂದಿಟ್ಟು ನಾಗಮೋಹನ್ ದಾಸ್ ಆಯೋಗ ವನ್ನು ಟೀಕಿಸುವುದರಲ್ಲಿ ಯಾವುದೇ ತಾತ್ವಿಕತೆ ಇರದು.

share
ದಾಸನೂರು ಕೂಸಣ್ಣ
ದಾಸನೂರು ಕೂಸಣ್ಣ
Next Story
X