Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಉನ್ನತ ಶಿಕ್ಷಣದಲ್ಲಿ ಉತ್ತರ ಪ್ರದೇಶದ...

ಉನ್ನತ ಶಿಕ್ಷಣದಲ್ಲಿ ಉತ್ತರ ಪ್ರದೇಶದ ಉನ್ನತ ಸಾಧನೆ : ಆನಂದಿ ಬೆನ್ ಪಟೇಲ್

ಇಬ್ರಾಹಿಂ ಅಡ್ಕಸ್ಥಳಇಬ್ರಾಹಿಂ ಅಡ್ಕಸ್ಥಳ9 March 2026 7:48 AM IST
share
ಉನ್ನತ ಶಿಕ್ಷಣದಲ್ಲಿ ಉತ್ತರ ಪ್ರದೇಶದ ಉನ್ನತ ಸಾಧನೆ : ಆನಂದಿ ಬೆನ್ ಪಟೇಲ್
ಕರ್ನಾಟಕ-ತ್ರಿಪುರಾ ರಾಜ್ಯದ ಪತ್ರಕರ್ತರೊಂದಿಗೆ ಯುಪಿ ರಾಜ್ಯಪಾಲರ ಸಂವಾದ

ಲಕ್ನೊ, ಮಾ.8: ಉತ್ತರ ಪ್ರದೇಶ ರಾಜ್ಯವು ಕಳೆದ ಏಳು ವರ್ಷಗಳಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

ಲಕ್ನೊದ ‘ಜನ್ ಭವನ’ದಲ್ಲಿ ಕರ್ನಾಟಕ ಮತ್ತು ತ್ರಿಪುರಾ ರಾಜ್ಯದ ಪತ್ರಕರ್ತರೊಂದಿಗೆ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗುಜರಾತ್ ಸಚಿವ ಸಂಪುಟದಲ್ಲಿ ದೀರ್ಘ ಕಾಲ ಸಚಿವರಾಗಿ, ಗುಜರಾತ್‌ನ ಮೊದಲ ಮಹಿಳಾ ಮುಖ್ಯ ಮಂತ್ರಿಯಾಗಿ, ಛತ್ತೀಸ್‌ಗಡ ಮತ್ತು ಮಧ್ಯಪ್ರದೇಶದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿ 2019ರಿಂದ ಉತ್ತರ ಪ್ರದೇಶದ ರಾಜ್ಯಪಾಲರಾಗಿರುವ ಆನಂದಿ ಬೆನ್ ಪಟೇಲ್ ಆಡಳಿತದಲ್ಲಿ ತಮಗಿರುವ ಅಪಾರ ಅನುಭವವನ್ನು ಹಂಚಿಕೊಂಡರು.

ಮೂಲತ: ಓರ್ವ ಶಿಕ್ಷಕಿಯಾಗಿರುವ 84ರ ಹರೆಯದ ಆನಂದಿ ಬೆನ್ ಪಟೇಲ್ ಅವರು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಮಹಿಳಾ ಸಬಲೀಕರಣಕ್ಕೆ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.

ಕೆಜಿಯಿಂದ ಪಿಜಿ ತನಕ ಶಿಕ್ಷಣಕ್ಕೆ ಒತ್ತು: ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ‘ಕೆಜಿಯಿಂದ ಪಿಜಿಯವರೆಗೆ’ ಗಮನ ಹರಿಸಬೇಕಾಗಿದೆ. ರಾಜ್ಯದಲ್ಲಿರುವ 56,000ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳನ್ನು ಉತ್ತಮ ಸಂಪನ್ಮೂಲಗಳೊಂದಿಗೆ ಬಲಪಡಿಸಲಾಗಿದೆ ಎಂದರು. ಶಿಕ್ಷಣದಿಂದ ಮಕ್ಕಳು ವಂಚಿತರಾಗದಂತೆ ನೋಡಿಕೊಳ್ಳಬೇಕಾದರೆ ಅಂಗನವಾಡಿಗಳಲ್ಲಿ ಎಲ್ಲಾ ಮೂರು ವರ್ಷದ ಮಕ್ಕಳು ಮತ್ತು ಒಂದನೇ ತರಗತಿಯಲ್ಲಿ ಆರು ವರ್ಷದ ಮಕ್ಕಳು ದಾಖಲಾಗುವುದನ್ನು ದೃಢಪಡಿಸಬೇಕಾಗಿದೆ ಎಂದರು.

ಉನ್ನತ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ರಾಜ್ಯಪಾಲರು ‘ನ್ಯಾಕ್ ಮಂಥನ’, ‘ಶಿಕ್ಷಾ ಮಂಥನ’ ಮತ್ತು ವಿಶ್ವ ವಿಶ್ವವಿದ್ಯಾನಿಲಯ ಶ್ರೇಯಾಂಕಗಳ ಬಗ್ಗೆ ನಡೆಸಿರುವ ಅಂತರ್‌ರಾಷ್ಟ್ರೀಯ ಸಮ್ಮೇಳನಗಳನ್ನು ನಡೆಸಿರುವುದನ್ನು ನೆನಪಿಸಿಕೊಂಡರು. ಶಿಕ್ಷಕರ ಪಾರದರ್ಶಕ ನೇಮಕಾತಿ ಮತ್ತು ಕುಲಪತಿಗಳ ನಿಷ್ಪಕ್ಷಪಾತ ಆಯ್ಕೆಯು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿದೆ ಎಂದರು.

ಹೆಣ್ಣು ಮಕ್ಕಳ ಸಬಲೀಕರಣ: ಮಹಿಳಾ ಸಬಲೀಕರಣಕ್ಕೆ ಸರಕಾರ ಒತ್ತು ನೀಡಬೇಕಾಗಿದೆ. ಸಾಕ್ಷರತೆ ಇರುವ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳ ದಾಖಲಾತಿಗಾಗಿ ‘ನರ್ಮದಾ ಬಾಂಡ್’ ಪ್ರೋತ್ಸಾಹಧನ ಮತ್ತು ಗರ್ಭಿಣಿಯರಿಗೆ ‘ಸುಖಡಿ’ ಎಂಬ ಪೌಷ್ಟಿಕ ಆಹಾರ ವಿತರಿಸುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಗುಜರಾತ್‌ನ ಅನುಭವಗಳನ್ನು ಹಂಚಿಕೊಂಡ ಪಟೇಲ್, ಶಾಲೆಗಳಲ್ಲಿ ಮಕ್ಕಳ ದಾಖಲಾತಿಯನ್ನು ಉತ್ತೇಜಿಸಲು ಅಲ್ಲಿ ಮನೆ-ಮನೆಗೆ ಸಮೀಕ್ಷೆಗಳನ್ನು ನಡೆಸಲಾಗಿತ್ತು. ಮಹಿಳಾ ಸಾಕ್ಷರತಾ ಪ್ರಮಾಣವು ಶೇಕಡಾ 35 ಕ್ಕಿಂತ ಕಡಿಮೆ ಇರುವ ಹಳ್ಳಿಗಳಲ್ಲಿ, ‘ನರ್ಮದಾ ಬಾಂಡ್’ ಯೋಜನೆಯಡಿಯಲ್ಲಿ ಬಾಲಕಿಯರ ದಾಖಲಾತಿಗೆ ಪ್ರೋತ್ಸಾಹ ಧನ ನೀಡಿರುವುದನ್ನು ನೆನಪಿಸಿಕೊಂಡರು.

ಉನ್ನತ ಶಿಕ್ಷಣದ ಪ್ರಗತಿ: ವಿಶ್ವವಿದ್ಯಾನಿಲಯಗಳು ಗ್ರಾಮೀಣ ಸಮುದಾಯಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.

ವಿವಿಯಿಂದ ತಲಾ ಐದು ಗ್ರಾಮಗಳ ದತ್ತು: ವಿಶ್ವವಿದ್ಯಾನಿಲಯಗಳು ತಲಾ ಐದು ಗ್ರಾಮಗಳನ್ನು ದತ್ತು ಪಡೆದಿವೆ, ಅಲ್ಲಿ ಸ್ವಚ್ಛತಾ ಅಭಿಯಾನಗಳು, ತೋಟಗಾರಿಕೆ ಅಭಿಯಾನಗಳು, ಸರಕಾರಿ ಯೋಜನೆಗಳ ಅನುಷ್ಠಾನ, ಸ್ಪರ್ಧೆಗಳು ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ವಿಶ್ವವಿದ್ಯಾನಿಲಯಗಳು ಗ್ರಾಮೀಣ ಸಮುದಾಯಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪರಿಣಾಮಕಾರಿ ಅನುಷ್ಠಾನದೊಂದಿಗೆ ಉನ್ನತ ಶಿಕ್ಷಣದಲ್ಲಿ ಶೇಕಡಾ 50 ರಷ್ಟು ದಾಖಲಾತಿಯ ಗುರಿಯನ್ನು ಸಾಧಿಸಲು ಸಂಘಟಿತ ಪ್ರಯತ್ನ ಅಗತ್ಯ ಎಂದರು.

ಮಹಿಳೆಯರ ಆರೋಗ್ಯ ಸುಧಾರಣೆಗೆ ಕ್ರಮ: ಮಹಿಳೆಯರ ಆರೋಗ್ಯ ಸುಧಾರಣೆಗೆ ಕಾರ್ಯಗತಗೊಳಿಸಲಾದ ಯೋಜನೆಗಳ ಬಗ್ಗೆ ವಿವರಿಸಿದ ರಾಜ್ಯಪಾಲೆ ಆನಂದ್ ಬೆನ್ ಅವರು ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ರಾಜ್ಯ ಸರಕಾರವು ಉಚಿತ ಲಸಿಕೆ ಅಭಿಯಾನವನ್ನು ನಡೆಸುತ್ತಿದೆ . ಈ ಅಭಿಯಾನದಡಿಯಲ್ಲಿ, ಇಲ್ಲಿಯವರೆಗೆ ಸುಮಾರು 50,000 ಮಹಿಳೆಯರಿಗೆ ಲಸಿಕೆ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ಮಹಿಳೆ ಸಾಮರ್ಥ್ಯವನ್ನು ಗುರುತಿಸಿದಾಗ ‘ನಾರಾಯಣಿ’: ಮಹಿಳೆಯು ಸ್ವಯಂ ಪ್ರೇರಣೆಯ ಸ್ವರೂಪ ಆಗಿದ್ದಾಳೆ. ಆಕೆ ತನ್ನ ಸಾಮರ್ಥ್ಯವನ್ನು ಗುರುತಿಸಿದಾಗ ‘ನಾರಾಯಣಿ’ ಆಗುತ್ತಾಳೆ. ಮಹಿಳೆಯರಿಗೆ ಉನ್ನತ ಶಿಕ್ಷಣ ಮತ್ತು ಜಾಗೃತಿಯು ಬಾಲ್ಯವಿವಾಹ ಮತ್ತು ವರದಕ್ಷಿಣೆ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳಿಗೆ ಪರಿಣಾಮಕಾರಿ ಪರಿಹಾರವಾಗಿದೆ ಎಂದು ರಾಜ್ಯಪಾಲರು ನುಡಿದರು.

ಈ ಸಂದರ್ಭದಲ್ಲಿ, ಪಟೇಲ್ ಜನಭವನ ಪ್ರಕಟಿಸಿದ ಹಮಾರಾ ರಾಜ್ ಭವನ, ರಾಜ್ ಭವನ್ ಬ್ಯಾಂಡ್, ಟಿಬಿ ಮುಕ್ತ್ ಭಾರತ್, ಅಂಗನವಾಡಿ ಮೇರಿ ಆತ್ಮ, ಚುನೌತಿಯಾನ್ ಮುಝೆ ಪಸಂದ್ ಹೈ, ಲೋಕಿತ್ ಕೆ ಮುಖರ್ ಸ್ವರ್ ಮತ್ತು ಪರಿವರ್ತನ್ ಕಿ ಸುಗಂಧ್ ಸೇರಿದಂತೆ ವಿವಿಧ ಪುಸ್ತಕಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ಸ್ಮರಣಿಕೆಯಾಗಿ ನೀಡಿದರು.

ರಾಜ್ಯಪಾಲರ ವಿಶೇಷ ಅಧಿಕಾರಿ(ಶಿಕ್ಷಣ) ಡಾ. ಪಂಕಜ್ ಎಲ್. ಜಾನಿ, ಪಿಐಬಿಯ ಗುವಾಹಟಿಯ ಎಡಿಜಿಪಿ ಕೃಪಾ ಶಂಕರ್ ಯಾದವ್, ಲಕ್ನೊದ ನಿರ್ದೇಶಕ ದಿಲೀಪ್ ಕುಮಾರ್ ಶುಕ್ಲಾ, ಬೆಂಗಳೂರು ಕೇಂದ್ರದ ಸಹಾಯಕ ನಿರ್ದೇಶಕಿ ಕರಿಶ್ಮಾ ಪಂತ್ ಉಪಸ್ಥಿತರಿದ್ದರು.

ರಾಜ್ಯದ ಸಾಧನೆಯ ಹೈಲೈಟ್ಸ್

ಮೊದಲ ಬಾರಿ ಕ್ಯುಎಸ್ ವಿಶ್ವ ರ್ಯಾಂಕಿಂಗ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡ 7 ವಿವಿ

ನ್ಯಾಕ್‌ನಲ್ಲಿ 17 ವಿವಿಗಳಿಗೆ ಎ ಗ್ರೇಡ್, 9 ವಿವಿಗಳಿಗೆ ಎ +, 5 ವಿವಿಗಳಿಗೆ ಎ++ ಸ್ಥಾನ

ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಕೆಜಿಯಿಂದ ಪಿಜಿ ತನಕ ಗಮನ

ಕೋವಿಡ್ ಲಾಕ್ ಡೌನ್ ಸಮಯದಲ್ಲಿ ದೊರೆತ ಅವಕಾಶದಲ್ಲಿ ವಿವಿಗಳ ಮೂಲಸೌಕರ್ಯಗಳ ಸುಧಾರಣೆಗೆ ದಿಟ್ಟ ಕ್ರಮ.

ಕುಶಲಕರ್ಮಿಗಳಿಗೂ ಡಿ.ಲಿಟ್ ಪಡೆಯುವ ಅವಕಾಶ

share
ಇಬ್ರಾಹಿಂ ಅಡ್ಕಸ್ಥಳ
ಇಬ್ರಾಹಿಂ ಅಡ್ಕಸ್ಥಳ
Next Story
X