Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಂತ್ಯ ಸಂಸ್ಕಾರಕ್ಕೆ ಬೇಕಾದ ಸಾಮಗ್ರಿ...

ಅಂತ್ಯ ಸಂಸ್ಕಾರಕ್ಕೆ ಬೇಕಾದ ಸಾಮಗ್ರಿ ಒದಗಿಸುವ ‘ವೈಶ್ಯವಾಣಿ’!

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್1 Oct 2025 10:14 AM IST
share
ಅಂತ್ಯ ಸಂಸ್ಕಾರಕ್ಕೆ ಬೇಕಾದ ಸಾಮಗ್ರಿ ಒದಗಿಸುವ ‘ವೈಶ್ಯವಾಣಿ’!

ಇವರ ದಾರುಣ ಬದುಕನ್ನು ಕಣ್ಣಾರೆ ಕಂಡೆವು. ಅತ್ಯಂತ ಸಣ್ಣ ಜಿಂಕ್ ಶೀಟ್‌ಗಳ ಮನೆಗಳಲ್ಲಿ ಇವರು ವಾಸಿಸುತ್ತಿದ್ದರು. ಬಡತನ, ದಾರಿದ್ರ್ಯ ಕಣ್ಣಿಗೆ ಬಡಿಯುತ್ತಿತ್ತು. ಪೌಷ್ಟಿಕಾಂಶದ ಕೊರತೆಯಿಂದ ಇಲ್ಲಿನ ಜನ ಅತ್ಯಂತ ಪೇಲವರಾಗಿ ಕಾಣುತ್ತಿದ್ದರು. ಅಡುಗೆಮನೆಗಳು ಬಣಗುಡುತ್ತಿದ್ದವು. ಸರಕಾರದ ಯಾವುದೇ ಅಭಿವೃದ್ಧಿ ಕಾರ್ಯಗಳು ಇವರಿಗೆ ತಲುಪಿದಂತೆ ಅನ್ನಿಸಲಿಲ್ಲ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದ ಸಮಯ, ವಯಸ್ಸಾದ ವ್ಯಕ್ತಿಯೊಬ್ಬರು ತೀರಾ ಧಣಿದವರಂತೆ ಬೆವರು ಒರೆಸಿಕೊಳ್ಳುತ್ತಾ ನನ್ನನ್ನು ಕಾಣಲು ಬರುತ್ತಿದ್ದರು. ದೂರದ ಬೆಳಗಾವಿಯಿಂದ ಬರುತ್ತಿದ್ದ ಇವರು ಬಂದಾಗಲೆಲ್ಲ ಒಂದು ಪುಟ್ಟ ಬಾಕ್ಸ್ ಕುಂದ ತರುತ್ತಿದ್ದರು. ನಾನು ‘ಹೀಗೆಲ್ಲ ತರಬೇಡಿ’ ಅಂದರೆ ಸಣ್ಣಗೆ ನಕ್ಕು ಟೇಬಲ್ ಮೇಲಿಟ್ಟು ಹೋಗುತ್ತಿದ್ದರು. ಸುಮಾರು ಇಪ್ಪತ್ತೈದು ಮೂವತ್ತು ವರ್ಷಗಳಿಂದ ಆಯೋಗದ ಎಲ್ಲಾ ಅಧ್ಯಕ್ಷರನ್ನೂ ಹೀಗೇ ಬಂದು ಭೆಟ್ಟಿಯಾಗಿ ಕುಂದ ಕೊಟ್ಟು ತಮ್ಮ ಬೇಡಿಕೆ ಸಲ್ಲಿಸಿ ಹೋಗುತ್ತಿದ್ದ ವಿಷಯವನ್ನು ಅವರೇ ಹೇಳುತ್ತಿದ್ದರು. ನಾನು ಫೈಲ್ ತರಿಸಿ ನೋಡಿದಾಗ ಅವರು ಅಷ್ಟೂ ವರ್ಷ ನೀಡಿದ್ದ ಮನವಿಗಳು ಫೈಲ್‌ನಲ್ಲಿ ಮಲಗಿದ್ದವು!

ಅವರ ಹೆಸರು ಸುರೂಂದ್ರ ಶಾಂತರಾಮ ಅನಾಗೋಲಕರ, ಅವರ ಜಾತಿ ಹೆಸರು ವೈಶ್ಯವಾಣಿ. ಜಾತಿಯ ಹೆಸರು ವೈಶ್ಯವಾಣಿ ಎಂದು ಇದ್ದದ್ದರಿಂದ ಇವರು ಆರ್ಯವೈಶ್ಯ ಸಮುದಾಯದ ಉಪಜಾತಿಯವರಿಬಹುದೆಂದು ತಮಗೆ ತಾವೇ ತೀರ್ಮಾನಿಸಿ ಹಿಂದಿನ ಎಲ್ಲಾ ಆಯೋಗಗಳು ಇವರನ್ನು ಕೇಳಿಸಿಕೊಳ್ಳಲು ಹೋಗಿರಲಿಲ್ಲ. ನಾನೂ ಇದನ್ನೇ ಮಾಡಿದ್ದೆ. ಅವರು ಒಂದು ನಿಮಿಷ ಕೇಳಿಸಿಕೊಳ್ಳುವಂತೆ ಅತ್ಯಂತ ದೀನರಾಗಿ ಕೇಳಿಕೊಂಡರು. ಅಷ್ಟು ದೂರದಿಂದ ಆ ವಯಸ್ಸಾದವರಿಗೆ ಕನಿಷ್ಠ ತೃಪ್ತಿಯಾಗಲಿ ಎಂದು ಕೇಳಿಸಿಕೊಳ್ಳತೊಡಗಿದೆ.

ವೈಶ್ಯವಾಣಿಯ ಕುಲವೃತ್ತಿ ಅಂತ್ಯಸಂಸ್ಕಾರಕ್ಕೆ ಬೇಕಾದ ಸಾಮಗ್ರಿಗಳನ್ನು ಮಾರುವುದು! ಯಾರದ್ದಾದರೂ ಸಾವಾದರೆ ಇವರ ಮನೆಯಲ್ಲಿ ತುತ್ತು.. ಇಲ್ಲದಿದ್ದಲ್ಲಿ ಇಲ್ಲ..!! ನಾನು ಒಂದು ಕ್ಷಣ ದಂಗುಬಡಿದು ಹೋದೆ. ಇಷ್ಟೂ ವರ್ಷಗಳ ಕಾಲ ಇವರನ್ನು ಕೇಳಿಸಿಕೊಳ್ಳದ ಆಯೋಗಗಳ ಕುರಿತು ಬೇಸರ ಮತ್ತು ಅದೇ ಸಾಲಿನಲ್ಲಿದ್ದ ನನ್ನ ಬಗ್ಗೆ ನನಗೇ ಗಿಲ್ಟ್ ಕಾಡತೊಡಗಿತು. ಬೇರೆಲ್ಲ ಕೆಲಸಗಳನ್ನು ಬದಿಗಿಟ್ಟು ವೈಶ್ಯವಾಣಿ ಸಮುದಾಯದವರನ್ನು ತಕ್ಷಣ ಸಾರ್ವಜನಿಕ ವಿಚಾರಣೆಗೆ ಆಹ್ವಾನಿಸಿ ಅವರ ಅಳಲನ್ನು ಕೇಳಿಸಿಕೊಂಡೆ. ಅವರ ಬದುಕಿನ ಸ್ಥಿತಿಗತಿ ನೋಡಲು ಬೆಳಗಾವಿಗೆ ನಮ್ಮ ಆಯೋಗ ಹೊರಟಿತು. ವೈಶ್ಯವಾಣಿ ಸಮುದಾಯ ನೆಲೆಸಿರುವ ಸಮಾದೇವಿ ಗಲ್ಲಿಗೆ ಹೋದೆವು. ಇವರ ದಾರುಣ ಬದುಕನ್ನು ಕಣ್ಣಾರೆ ಕಂಡೆವು. ಅತ್ಯಂತ ಸಣ್ಣ ಜಿಂಕ್ ಶೀಟ್‌ಗಳ ಮನೆಗಳಲ್ಲಿ ಇವರು ವಾಸಿಸುತ್ತಿದ್ದರು. ಬಡತನ, ದಾರಿದ್ರ್ಯ ಕಣ್ಣಿಗೆ ಬಡಿಯುತ್ತಿತ್ತು. ಪೌಷ್ಟಿಕಾಂಶದ ಕೊರತೆಯಿಂದ ಇಲ್ಲಿನ ಜನ ಅತ್ಯಂತ ಪೇಲವರಾಗಿ ಕಾಣುತ್ತಿದ್ದರು. ಅಡುಗೆಮನೆಗಳು ಬಣಗುಡುತ್ತಿದ್ದವು. ಸರಕಾರದ ಯಾವುದೇ ಅಭಿವೃದ್ಧಿ ಕಾರ್ಯಗಳು ಇವರಿಗೆ ತಲುಪಿದಂತೆ ಅನ್ನಿಸಲಿಲ್ಲ.

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಆರ್ಥಿಕವಾಗಿ, ಅತ್ಯಂತ ಹಿಂದುಳಿದಿರುವ ವೈಶ್ಯವಾಣಿ ಸಮುದಾಯ ಬೆಳಗಾವಿ ಅಲ್ಲದೆ ಇನ್ನೂ ಒಂದಷ್ಟು ಪ್ರದೇಶಗಳಲ್ಲಿ ಇರುವುದರ ಬಗ್ಗೆ ನಮ್ಮ ಗಮನಕ್ಕೆ ಬಂತು. ಉಡುಪಿ ತಾಲೂಕಿನ ಮಣಿಪಾಲ, ಪೆರ್ಡೂರು, ಕೊಕ್ಕರ್ಣೆ, ಪುತ್ತೂರು ಮತ್ತು ಉಡುಪಿ, ಕುಂದಾಪುರ ತಾಲೂಕಿನ ಕೋಟೇಶ್ವರ, ಶಂಕರನಾರಾಯಣ, ಬೈಂದೂರು, ಉಪ್ಪುಂದ ಗುಡ್ಡಾಮಣಿ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಸುರತ್ಕಲ್, ಮೂಡುಬಿದಿರೆ, ಬೆಳಗಾವಿ ಜಿಲ್ಲೆಯ ಖಾನಾಪುರ, ಬೈಲಹೊಂಗಲ, ಸವದತ್ತಿ ಹಾಗೂ ಉತ್ತರ ಕನ್ನಡದ ಭಟ್ಕಳ, ಹೊನ್ನಾವರ, ಕುಮುಟ, ಕಾರವಾರ, ದಾಂಡೇಲಿ, ಯಲ್ಲಾಪುರ, ಜೊಯಿಡಾ, ಧಾರವಾಡ ಜಿಲ್ಲೆಯ ಕಲಘಟಗಿ, ಹುಬ್ಬಳ್ಳಿ, ಹಾನಗಲ್ ಮುಂತಾದೆಡೆ ವಿರಳವಾಗಿ ಇದ್ದಾರೆ. ವೈಶ್ಯವಾಣಿ ಸಮಾಜವನ್ನು ವೈಶ್ಯಮರಾಠಿ, ಹಿಂದೂ ವೈಶ್ಯ, ನಾರ್ವೇಕರ್, ಹಿಂದೂ ವಾಣಿ, ಕೊಂಕಣಿ ವಾಣಿ, ಕೊಂಕಣಿ ವೈಶ್ಯ, ಬೊಕಳೆ ಮುಂತಾಗಿ ಕರೆಯುತ್ತಾರೆ. ಇವರ ಗೋತ್ರಗಳನ್ನು ಗಮನಿಸಿದಾಗ ಬ್ರಾಹ್ಮಣರಿಗೆ ಹತ್ತಿರವಾದ ಶಾಂಡಿಲ್ಯ, ಕಶ್ಯಪ, ವತ್ಸ, ದೈವಜ್ಞ ಬ್ರಾಹ್ಮಣ, ವಿಶ್ವಕರ್ಮರೊಂದಿಗೆ ಮುಸ್ಲಿಮ್, ಮರಾಠಾ, ಕ್ರಿಶ್ಚಿಯನ್‌ರೊಂದಿಗೂ ತಮ್ಮದು ಸಮಾನ ಜಾತಿ ಎಂದು ಹೇಳಿಕೊಳ್ಳುತ್ತಾರೆ.

1884ರ ಮುಂಬೈ ಗೆಜೆಟಿಯರ್‌ನಲ್ಲಿ ವೈಶ್ಯವಾಣಿ ಸಮಾಜದ ಬಗ್ಗೆ ವಿಸ್ತೃತವಾದ ಪ್ರಕಟಣೆ ಇದೆ. ಇದರ ಪ್ರಕಾರ ಈ ಸಮುದಾಯ ಗೋವಾದಲ್ಲೂ ಇದೆ. ಹದಿನಾರನೇ ಶತಮಾನದಲ್ಲಿ ಪೋರ್ಚುಗೀಸರ ದಬ್ಬಾಳಿಕೆಯಿಂದ ಈ ಸಮುದಾಯವು ಕರ್ನಾಟಕಕ್ಕೂ ಪ್ರಯಾಣ ಬೆಳೆಸಿ ವಾಸ್ತವ್ಯ ಹೂಡಿದಂತೆ ಅನಿಸುತ್ತದೆ. ಇವರನ್ನು ಗೋವಾದಲ್ಲಿ ಪಾಪೇಕರ್ ವಾನೀಸ್ ಮತ್ತು ಕೊಂಕಣಿ ಮರಾಠಾ ಎಂದು ಕರೆಯುತ್ತಾರೆ.

ವೈಶ್ಯವಾಣಿ ಸಮುದಾಯದ ಭಾಷೆ ಕನ್ನಡವಾದರೂ ಅವರು ಮರಾಠಿ, ಕೊಂಕಣಿಯನ್ನೂ ಮಾತನಾಡುತ್ತಾರೆ. ಇವರ ಸಾಮಾನ್ಯ ಆಹಾರ ಮೀನು ಮತ್ತು ಅನ್ನ. ಅವರು ಅಂತ್ಯಕ್ರಿಯೆಗೆ ಬೇಕಾದ ಸಾಮಾನು ಮಾರುವುದರೊಂದಿಗೆ ಚಕ್ಕುಲಿ, ನಿಪ್ಪಟ್ಟನ್ನು ಮನೆಯಲ್ಲೇ ಮಾಡಿ ಮಾರುತ್ತಾರೆ.

ಶೃಂಗೇರಿ ಮಠದ ಮುಖ್ಯಸ್ಥರು ಈ ಜನಾಂಗದ ಧಾರ್ಮಿಕ ಗುರುಗಳು ಎಂದು ಹೇಳಿಕೊಳ್ಳುತ್ತಾರೆ. ಚಿತ್ಪಾವನ, ಕರ್ಜಡ, ದೇಶಸ್ಥ, ಹವ್ಯಕ, ಜ್ಯೋಷಿ ಬ್ರಾಹ್ಮಣರನ್ನೇ ಇವರು ತಮ್ಮ ಕುಟುಂಬದ ಪುರೋಹಿತರನ್ನಾಗಿ ನಿಯೋಜಿಸಿಕೊಳ್ಳುತ್ತಾರೆ. ವೈದಿಕತೆ ಇವರ ಮೇಲೆ ಅಪಾರವಾಗಿ ಪ್ರಭಾವ ಬೀರಿದಂತೆ ಅನಿಸುತ್ತದೆ.

1985ರಲ್ಲಿ ಪ್ರಕಟವಾದ ಉತ್ತರ ಕನ್ನಡ ಗೆಜೆಟಿಯರ್ ಪ್ರಕಾರ ವೈಶ್ಯವಾಣಿ ಎಂಬುದು ಕೊಂಕಣಿ ವೈಶ್ಯರ ಒಂದು ಉಪಪಂಗಡವೆಂದೂ, ಮೈಸೂರು ಪ್ರದೇಶದ ವೈಶ್ಯರಿಗಿಂತ ಭಿನ್ನವಾದ ಇವರದು ಸಾಂಪ್ರದಾಯಕ ವೃತ್ತಿ ವ್ಯಾಪಾರವೇ ಆಗಿದೆ, ಇವರಲ್ಲಿ ಅತ್ಯಂತ ಕೆಳವರ್ಗದವರು ಅಥವಾ ಒಂದು ನಿರ್ದಿಷ್ಟ ಗುಂಪು ಅಂತ್ಯಕ್ರಿಯೆಗೆ ಬೇಕಾದ ಸಾಮಾನು ಮಾರುವವರಾಗಿಬಹುದು. ಈ ಹಿನ್ನೆಲೆಯಲ್ಲಿ ಇವರನ್ನು ಅತಿಹಿಂದುಳಿದವರು ಎಂದು ಪರಿಗಣಿಸಲಾರದು, ಆದರೆ ನಿಶ್ಚಿತವಾಗಿ ಇವರು ಹಿಂದುಳಿದವರೇ ಆಗಿದ್ದಾರೆ. ಸುಮಾರು 15,000ದಿಂದ 20,000 ಜನಸಂಖ್ಯೆ ಇರಬಹುದಾದ ಈ ಸಮುದಾಯದ ಪ್ರದೇಶಗಳಿಗೆ ಹೋದಾಗ ಇವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀರಾ ವಂಚಿತರಾಗಿದ್ದಾರೆ ಎಂಬುದು ಮನದಟ್ಟಾಗುತ್ತದೆ. ಇವರ ಕುಲವೃತ್ತಿಯಾದ ಅಂತ್ಯಕ್ರಿಯೆಗೆ ಬೇಕಾದ ಸಾಮಾನು ಮಾರುವ ಕಾರಣದಿಂದಾಗಿ ಇವರು ಅತ್ಯಂತ ಕೀಳರಿಮೆಯನ್ನು ಅನುಭವಿಸುತ್ತಿದ್ದಾರೆ. ಈ ಸಮುದಾಯದವರು ಯವುದೇ ಸರಕಾರಿ ಸವಲತ್ತುಗಳನ್ನು ಪಡಕೊಂಡಂತಿಲ್ಲ. ಇವರಿಗೆ ಇವರ ಕುಲವೃತ್ತಿ ದಿನನಿತ್ಯ ಸಿಗುವುದು ಕಷ್ಟಸಾಧ್ಯವಾದ್ದರಿಂದ ಮಿಕ್ಕ ಸಮಯದಲ್ಲಿ ಬೀದಿಬೀದಿ ಸುತ್ತಿ ಚಕ್ಕುಲಿ, ನಿಪ್ಪಟ್ಟು, ಮಿಠಾಯಿ ಮಾರುತ್ತಾರೆ.

ಈ ಎಲ್ಲಾ ಹಿನ್ನೆಲೆಯನ್ನು ಪರಿಶೀಲಿಸಿ ವೈಶ್ಯವಾಣಿ ಸಮುದಾಯವನ್ನು ಪ್ರವರ್ಗ 3(ಬಿ) ಗೆ ಸೇರಿಸಲು ನಮ್ಮ ಆಯೋಗ ಶಿಫಾರಸು ಮಾಡಿ ಹದಿನೈದು ವರ್ಷವಾಯಿತು. ಆದರೆ ಯಾವುದೇ ಸರಕಾರ ಈ ಶಿಫಾರಸನ್ನು ಕನಿಷ್ಠ ನೋಡುವ ಪ್ರಯತ್ನವನ್ನೂ ಮಾಡಿಲ್ಲ.

share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X