Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಂದೇ ಮಾತರಂ... ತಲ್ಲಣಗೊಳಿಸುವ...

ವಂದೇ ಮಾತರಂ... ತಲ್ಲಣಗೊಳಿಸುವ ವಿಷಯವಾಗುತ್ತಿದೆಯೇ?

ದಿನೇಶ್ ಗುಂಡೂರಾವ್ದಿನೇಶ್ ಗುಂಡೂರಾವ್1 Sept 2026 9:40 AM IST
share
ವಂದೇ ಮಾತರಂ... ತಲ್ಲಣಗೊಳಿಸುವ ವಿಷಯವಾಗುತ್ತಿದೆಯೇ?

ಒಂದು ರಾಷ್ಟ್ರವು ಶಾಶ್ವತವಾಗಿ ಉದ್ವಿಗ್ನತೆಯಿಂದ ಇರಲು ಸಾಧ್ಯವಿಲ್ಲ. ಒಂದೊಮ್ಮೆ ಉದ್ವಿಗ್ನಗೊಂಡರೆ ಶಾಂತಿಯಿಂದ ಇರಲು ಸಾಧ್ಯವಿಲ್ಲ. ಸರಕಾರಿ ಸಂಸ್ಥೆಗಳನ್ನು ಅನುಮಾನದಿಂದ ನೋಡಿದಾಗ, ನಾಗರಿಕರು ವ್ಯವಸ್ಥೆಯಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ತನಿಖಾ ಸಂಸ್ಥೆಗಳನ್ನು ರಾಜಕೀಯ ಅಸ್ತ್ರಗಳಾಗಿ ಬಳಸಿದಾಗ, ಕಾನೂನಿನ ನಿಯಮಗಳು ನರಳುತ್ತದೆ. ಪತ್ರಕರ್ತರು ಪ್ರಶ್ನೆಗಳನ್ನು ಕೇಳುವುದಕ್ಕೇ ಭಯಗೊಂಡಾಗ ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ. ಅಲ್ಪಸಂಖ್ಯಾತರು ಅಸುರಕ್ಷಿತರೆಂದು ಭಾವಿಸಿದಾಗ, ಸಮಾನತೆಯ ಮೌಲ್ಯವೇ ಕ್ಷೀಣಿಸುತ್ತದೆ.

ಜಾಗೃತಿಗೊಳ್ಳಬೇಕಾದ ಅಂಕಿಅಂಶದೊಂದಿಗೆ ಪ್ರಾರಂಭಿಸೋಣ. 2026ರ ‘ವಿಶ್ವ ನೆಮ್ಮದಿ ವರದಿ’ಯಲ್ಲಿ (World Happiness Report) ಭಾರತವು ಜಗತ್ತಿನ 147 ರಾಷ್ಟ್ರಗಳ ಪೈಕಿ 116ನೇ ಸ್ಥಾನದಲ್ಲಿದೆ. ಇದು ಕೇವಲ ಶ್ರೀಮಂತ ಪ್ರಜಾಪ್ರಭುತ್ವ ರಾಷ್ಟ್ರಗಳಿಗಿಂತ ಮಾತ್ರವಲ್ಲದೆ, ಪಾಕಿಸ್ತಾನ ಮತ್ತು ನೇಪಾಳದಂತಹ ನೆರೆಯ ರಾಷ್ಟ್ರಗಳಿಗಿಂತಲೂ ಹಿಂದಿದೆ. ಇದನ್ನು ಅಧ್ಯಯನ ಮಾಡಿ ವರದಿ ಸಿದ್ಧಪಡಿಸಿದ್ದು ಆಕ್ಸ್ ಫರ್ಡ್, ಗ್ಯಾಲಪ್ ಮತ್ತು ವಿಶ್ವಸಂಸ್ಥೆ (UN).

ಹನ್ನೆರಡು ವರ್ಷಗಳ ಹಿಂದೆ, ಭಾರತೀಯರಿಗೆ ‘ಅಚ್ಛೇ ದಿನ್’ (ಒಳ್ಳೆಯ ದಿನಗಳು) ಬರುತ್ತದೆ ಎಂಬ ಭರವಸೆ ನೀಡಲಾಗಿತ್ತು. ಇಂದು, ಆ ಭರವಸೆಯು ನಿಶ್ಯಬ್ದವಾಗಿ ಮಾಯವಾಗಿದೆ. ಬದಲಾಗಿ, ‘ವಿಕಸಿತ ಭಾರತ’ಕ್ಕಾಗಿ (Viksit Bharat) 2047ರವರೆಗೆ ಕಾಯುವಂತೆ ನಮಗೆ ಹೇಳಲಾಗುತ್ತಿದೆ.

ಇಂದು ಭಾರತದಲ್ಲಿ ನಾವು ಕಾಣುತ್ತಿರುವುದು ಒಂದು ವಿಚಿತ್ರವಾದ ಹತಾಶೆಯನ್ನು. ಇದು ಕೇವಲ ಜೀವನ ನಿರ್ವಹಣೆ, ಉದ್ಯೋಗ ಹುಡುಕಾಟ, ಬಿಲ್‌ಗಳ ಪಾವತಿ ಅಥವಾ ಭವಿಷ್ಯದ ಚಿಂತೆಯಿಂದ ಉಂಟಾಗುತ್ತಿರುವ ಹತಾಶೆ ಅಲ್ಲ. ಬದಲಾಗಿ, ನಿರಂತರವಾಗಿ ಜನರ ಬದುಕಿನಲ್ಲಿ ಅನವಶ್ಯಕ ಹಸ್ತಕ್ಷೇಪ, ಪ್ರಚೋದನೆ ಮತ್ತು ನಂಬಿಕೆಗಳನ್ನು ಅಸ್ಥಿರಗೊಳಿಸಲು ಪಣತೊಟ್ಟಿರುವಂತೆ ವರ್ತಿಸುತ್ತಿರುವ ಸರಕಾರದ ಅಡಿಯಲ್ಲಿ ಬದುಕುವುದರಿಂದ ಉಂಟಾಗುವ ಹತಾಶೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಹಿಂದೊಮ್ಮೆ ‘ಕನಿಷ್ಠ ಸರಕಾರ, ಗರಿಷ್ಠ ಆಡಳಿತ’ ಎಂಬ ಭರವಸೆ ನೀಡಿದರು. ಒಂದು ದಶಕಕ್ಕೂ ಹೆಚ್ಚು ಸಮಯದ ಆಡಳಿತದ ನಂತರ, ಲಕ್ಷಾಂತರ ಜನರ ಅಭಿಪ್ರಾಯ, ‘ಗರಿಷ್ಠ ಸರಕಾರ’ ಮತ್ತು ಅದರ ಆಡಳಿತದ ಪರಿಣಾಮಗಳಿಗೆ ‘ಕನಿಷ್ಠ ಹೊಣೆಗಾರಿಕೆ’ ಎಂಬಂತಾಗಿದೆ.

ಜವಾಬ್ದಾರಿ ರಹಿತವಾದ ಆಡಳಿತದ ಬಗ್ಗೆ ಹೇಳುವುದಾದರೆ,

ನೋಟು ರದ್ದತಿ ರಾತ್ರೋರಾತ್ರಿ ಘೋಷಣೆಯಾಯಿತು. ತಮ್ಮ ಹಣವನ್ನು ಪಡೆದುಕೊಳ್ಳಲು ನಾಗರಿಕರನ್ನು ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಲಾಯಿತು. ಅದೆಷ್ಟೋ ವ್ಯವಹಾರಗಳು ಹಠಾತ್ ನಗದು ಆಘಾತದಿಂದ ನೆಲಕಚ್ಚಿದವು. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯು ಅನಗತ್ಯವಾಗಿ ಹಳಿತಪ್ಪಿತು. ನಂತರ, ಸರಿಯಾದ ಮುಂದಾಲೋಚನೆ ಇಲ್ಲದೆ, ಜಿಎಸ್‌ಟಿಯ ಅನುಷ್ಠಾನವು ಬಂದಿತು. ಇದರ ಜಾರಿಯಿಂದ ಸಣ್ಣ ವ್ಯಾಪಾರಿಗಳು ಮತ್ತು ವ್ಯವಹಾರಗಳ ಮೇಲೆ ಅಗಾಧ ಹೊರೆ ಹೇರಲಾಯಿತು. ಸಣ್ಣ ವ್ಯಾಪಾರಿಗಳು ಮತ್ತು ವ್ಯವಹಾರಗಳು ಸಮಸ್ಯೆಗಳಾದವು.

ಸಿಎಎ-ಎನ್‌ಆರ್‌ಸಿ ವಿವಾದವು ವ್ಯಾಪಕ ಆತಂಕ ಸೃಷ್ಟಿಸಿ, ಜನರು ಪ್ರತಿಭಟನೆಗಳನ್ನು ಮಾಡುವಂತಾಯಿತು. ಜಾರಿಗೆ ತಂದ ಕೃಷಿ ಕಾನೂನುಗಳಿಂದಾಗಿ ಭಾರತದ ಅತಿದೊಡ್ಡ ರೈತ ಹೋರಾಟ ನಡೆಯುವಂತಾಯಿತು. ಎಫ್‌ಸಿಆರ್‌ಎ ನಿಯಮಗಳಲ್ಲಿನ ಬದಲಾವಣೆಗಳ ಮೂಲಕ ವಿದೇಶಿ ನಿಧಿಯ ದುರುಪಯೋಗವನ್ನು ತಡೆಯುವ ಉದ್ದೇಶಿತ ಕಾನೂನು, ಸಹಾಯದ ನಿರೀಕ್ಷೆಯಲ್ಲಿರುವವರಿಗೆ, ಅನಾಥರಿಗೆ, ನಿರ್ಗತಿಕರಿಗೆ ಸಮಸ್ಯೆಯಾಗುವಂತೆ ಇದೆ. ಅರ್ಹರು ಸಿಗಬೇಕಾದ ಸಹಾಯದಿಂದ ವಂಚಿತರಾಗುವ ಅಪಾಯ ಇದೆ. ಸಮಾಜಸೇವೆ ಮಾಡುವ ಸಂಘಸಂಸ್ಥೆಗಳಿಗೂ ಈ ತಿದ್ದುಪಡಿ ಸಮಸ್ಯೆ ಆಗಲಿದೆ.

ಈ.ಡಿ., ಸಿಬಿಐ ಮತ್ತು ಐಟಿಯಂತಹ ಸ್ವತಂತ್ರ ಸಂಸ್ಥೆಗಳು ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡುವ ಮತ್ತು ಉದ್ಯಮಿಗಳನ್ನು ಸರತಿ ಸಾಲಿನಲ್ಲಿ ಸರಕಾರದ ಮುಂದೆ ಮಂಡಿಯೂರುವಂತೆ ಒತ್ತಾಯಿಸುವ ಸಾಧನಗಳಾಗಿ ಬಳಕೆಯಾಯಿತು. ಇತ್ತೀಚೆಗೆ, ಎಸ್‌ಐಆರ್ ಮತ್ತು ಚುನಾವಣಾ ಆಯೋಗದ ಕುರಿತಾದ ವಿವಾದಗಳು ಜನರಲ್ಲಿ ಗೊಂದಲ ಮತ್ತು ವ್ಯವಸ್ಥೆಯ ಕುರಿತು ಅಪನಂಬಿಕೆಯನ್ನು ಉಂಟುಮಾಡಿತು.

ಸಂಸ್ಕೃತಿ, ಭಾಷೆ, ಇತಿಹಾಸ, ಆಹಾರ, ಧರ್ಮ ಮತ್ತು ದೇಶಭಕ್ತಿ ಇವುಗಳನ್ನು ಕೂಡ ನಾಗರಿಕರು ತಮ್ಮನ್ನು ತಾವು ಪದೇಪದೇ ಸಾಬೀತುಪಡಿಸಬೇಕಾದ ವಿಷಯಗಳಾಗುತ್ತಿವೆ. ಇತ್ತೀಚಿನ ಹೊಸ ವಿಷಯ ‘ವಂದೇ ಮಾತರಂ’. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರನ್ನು ಒಂದುಗೂಡಿಸುವ ಗೀತೆಯಾಗಿದ್ದ ವಂದೇ ಮಾತರಂ, ಈಗ ನಿಷ್ಠೆಯ ಪರೀಕ್ಷೆಯಾಗಿ ಮಾರ್ಪಟ್ಟಿದ್ದು ಸಮಸ್ಯೆಗೆ ಕಾರಣವಾಗಿದೆ. ದೇಶದ ಜನರು ಒಬ್ಬರ ಮೇಲೆ ಇನ್ನೊಬ್ಬರು ಕಾದಾಡುವಂತೆ ಮಾಡಿದೆ.

ಲಾರ್ಡ್ ಕರ್ಜನ್ ಮತ್ತು ಲಾರ್ಡ್ ಮಿಂಟೋ ಅವರು, ಜನರು ಏನು ತಿನ್ನುತ್ತಾರೆ, ಧರಿಸುತ್ತಾರೆ ಅಥವಾ ಇತಿಹಾಸದ ಯಾವ ಆವೃತ್ತಿಯನ್ನು ನಂಬುತ್ತಾರೆ ಎನ್ನುವುದರ ಮೇಲೆ ಜನರ ನಿಷ್ಠೆ ಪರೀಕ್ಷಿಸುತ್ತಿದ್ದರು. ಈಗ ಪುನಃ ಅಂಥದ್ದೇ ವಾತಾವರಣ ಸೃಷ್ಟಿಯಾಗಿದೆ. ಬ್ರಿಟಿಷ್ ಆಡಳಿತದ ಪುನರಾವರ್ತನೆಯಂತೆ ಭಾಸವಾಗುತ್ತದೆ ಎನ್ನುವುದು ದೇಶದ ನಾಗರಿಕರ ಅನಿಸಿಕೆಯಾಗುತ್ತಿದೆ.

ಸರಕಾರದ ಕರ್ತವ್ಯವೆಂದರೆ ದೇಶದ ಜನತೆಗೆ ಸ್ಥಿರತೆಯನ್ನು ಒದಗಿಸುವ ಮೂಲಕ ಅನಿಶ್ಚಿತತೆಯನ್ನು ದೂರಮಾಡುವುದು. ಆದರೆ ಈಗ, ನಾಗರಿಕರು ಪದೇ ಪದೇ ಹೊಸ ನಿಯಮಗಳು, ದಾಖಲೆಗಳಿಗಾಗಿ ಬೇಡಿಕೆಗಳು, ರಾಜಕೀಯ ಯುದ್ಧಗಳು ಮತ್ತು ಹಲವಾರು ಆತಂಕಗಳನ್ನು ಎದುರಿಸಬೇಕಾಗುತ್ತಿದೆ.

ಇದಕ್ಕೆ ಕಾರಣ, ದೇಶದ ಆಡಳಿತ ನಡೆಸುವ ಸರಕಾರ ಜನರು ನಿರಂತರವಾಗಿ ಒತ್ತಡ ಮತ್ತು ವಿಚಲಿತರಾಗಿಯೇ ಇರಬೇಕೆಂದು ಬಯಸುತ್ತದೆ. ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ. ನಿರುದ್ಯೋಗ, ಹಣದುಬ್ಬರ, ರೂಪಾಯಿ ಕುಸಿತ, ವ್ಯಾಪಾರ ಕೊರತೆ, ಬಂಡವಾಳ ಹೂಡಿಕೆ ಮತ್ತು ಜಾಗತಿಕ ಸ್ಥಾನಮಾನ ದುರ್ಬಲಗೊಳ್ಳುವುದನ್ನು ಮುಚ್ಚಿಡಬೇಕಾದ ಅನಿವಾರ್ಯತೆ ಇದೆ. ಜನರಿಗೆ ಧಾರಾಳವಾಗಿ ಘೋಷಣೆಗಳನ್ನು ನೀಡಲಾಗುತ್ತಿದೆ. ಉದಾ - ‘ಮೇಕ್ ಇನ್ ಇಂಡಿಯಾ’, ‘ವಿಕಸಿತ ಭಾರತ್’, ‘ಅಮೃತ್ ಕಾಲ್’, ‘ಆತ್ಮ ನಿರ್ಭರ’.

ಪರಸ್ಪರ ದ್ವೇಷವನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ. ದೂರದರ್ಶನ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಧಾರ್ಮಿಕ ನಿಂದನೆಯನ್ನು ಹೆಚ್ಚಿಸಲಾಗುತ್ತಿದೆ. ಟ್ರೋಲ್ ಪಡೆಗಳು ಬೆದರಿಸುತ್ತವೆ ಮತ್ತು ಅವಮಾನಿಸುತ್ತವೆ. ಗುಂಪು ಹಲ್ಲೆಗಳು ನಮ್ಮ ಆತ್ಮಸಾಕ್ಷಿಯನ್ನು ಆಘಾತಗೊಳಿಸುತ್ತವೆ. ಬುಲ್ಡೋಜರ್‌ಗಳು ತ್ವರಿತ ಶಿಕ್ಷೆಯ ಸಾಧನಗಳಾಗಿ ಬಳಕೆಯಾಗುತ್ತಿವೆ. ಇದು ಕಾನೂನಿನ ನಿಯಮದ ಬಗ್ಗೆ ಆಳವಾದ ಪ್ರಶ್ನೆಗಳನ್ನು ಜನರಲ್ಲಿ ಹುಟ್ಟುಹಾಕುತ್ತದೆ.

ಒಂದು ರಾಷ್ಟ್ರವು ಶಾಶ್ವತವಾಗಿ ಉದ್ವಿಗ್ನತೆಯಿಂದ ಇರಲು ಸಾಧ್ಯವಿಲ್ಲ. ಒಂದೊಮ್ಮೆ ಉದ್ವಿಗ್ನಗೊಂಡರೆ ಶಾಂತಿಯಿಂದ ಇರಲು ಸಾಧ್ಯವಿಲ್ಲ. ಸರಕಾರಿ ಸಂಸ್ಥೆಗಳನ್ನು ಅನುಮಾನದಿಂದ ನೋಡಿದಾಗ, ನಾಗರಿಕರು ವ್ಯವಸ್ಥೆಯಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ತನಿಖಾ ಸಂಸ್ಥೆಗಳನ್ನು ರಾಜಕೀಯ ಅಸ್ತ್ರಗಳಾಗಿ ಬಳಸಿದಾಗ, ಕಾನೂನಿನ ನಿಯಮಗಳು ನರಳುತ್ತದೆ. ಪತ್ರಕರ್ತರು ಪ್ರಶ್ನೆಗಳನ್ನು ಕೇಳುವುದಕ್ಕೇ ಭಯಗೊಂಡಾಗ ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ. ಅಲ್ಪಸಂಖ್ಯಾತರು ಅಸುರಕ್ಷಿತರೆಂದು ಭಾವಿಸಿದಾಗ, ಸಮಾನತೆಯ ಮೌಲ್ಯವೇ ಕ್ಷೀಣಿಸುತ್ತದೆ. ರಾಜಕೀಯ ಶಕ್ತಿಯು ಸಮಾಜವನ್ನು ಉದ್ರೇಕಗೊಳಿಸುವುದರ ಮೇಲೆ ಗಮನಕೊಟ್ಟಾಗ, ಆಕ್ರೋಶ, ಹಠವೇ ಆಡಳಿತದ ಸಾಧನವಾಗುತ್ತದೆ. ಇತ್ತೀಚೆಗೆ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯಲ್ಲಿ ಇದಕ್ಕೊಂದು ಉದಾಹರಣೆ.

ಗಣರಾಜ್ಯವನ್ನು ದೇಶದಲ್ಲಿ ಸ್ಥಾಪಿಸಿದ ಹಿರಿಯರಿಗೆ ಮುಂದಾಲೋಚನೆಯಿತ್ತು. ಅದಕ್ಕಾಗಿಯೇ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ತಳಹದಿಯ ಮೇಲೆ ಭಾರತದ ಪರಿಕಲ್ಪನೆಯನ್ನು ರೂಪಿಸಲಾಯಿತು. ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆಗಳಲ್ಲಿ ಗೆಲ್ಲುವುದಲ್ಲ. ಬದಲಾಗಿ, ಗೆದ್ದವರ ಅಧಿಕಾರವನ್ನು ನಿಯಂತ್ರಣಗೊಳಿಸುವುದು ಅದರ ಭಾಗವಾಗಿದೆ. ದೇಶಭಕ್ತಿ ಎಂದರೆ ಆಡಳಿತದಲ್ಲಿರುವ ಸರಕಾರಕ್ಕೆ ಕುರುಡಾಗಿ ವಿಧೇಯರಾಗಿರುವುದಲ್ಲ. ನಮ್ಮನ್ನು ಆಳುವವರನ್ನು ಸದಾ ಪ್ರಶ್ನಿಸುವುದೇ ದೇಶಭಕ್ತಿಯ ಅತ್ಯುನ್ನತ ರೂಪವಾಗಿರುತ್ತದೆ.

ದೇಶದ ಜನರು ತಮ್ಮನ್ನು ತಾವು ಒಂದು ಸರಳ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾದ ಸಮಯವಿದು. ‘‘ನನ್ನ ದೇಶವು ಹೆಚ್ಚು ಸಂತೋಷದಾಯಕವಾದ, ಸ್ವತಂತ್ರ ಮತ್ತು ಶಾಂತಿಯುತ ತಾಣವಾಗುತ್ತಿದೆಯೇ ಅಥವಾ ಹೆಚ್ಚು ಆತಂಕ, ಹತಾಶೆ, ಉದ್ರಿಕ್ತ ಭಾವನೆ ಮತ್ತು ವಿಭಜನೆಗೆ ಒಳಗಾಗುತ್ತಿದೆಯೇ?’’ ಈ ಪ್ರಶ್ನೆಯು ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿಯವರಿಗಿಂತಲೂ ದೊಡ್ಡದು. ಇದು ಬಿಜೆಪಿ ಅಥವಾ ಕಾಂಗ್ರೆಸ್‌ಗಿಂತಲೂ ಮಿಗಿಲಾದುದು. ಭಾರತಕ್ಕೆ ಶಾಂತಿ, ಸಹಾನುಭೂತಿ ಮತ್ತು ನಾವು ನಂಬಬಹುದಾದ ಸಂಸ್ಥೆಗಳ ಅಗತ್ಯವಿದೆ. ನಮ್ಮ ಮನೆ, ಗುರುತು, ನಂಬಿಕೆ ಮತ್ತು ಪರಸ್ಪರರೊಂದಿಗಿನ ಸಂಬಂಧಗಳಲ್ಲಿ ನಿರಂತರವಾಗಿ ಹಸ್ತಕ್ಷೇಪ ಮಾಡದೆ ಆಡಳಿತ ನಡೆಸುವ ಸರಕಾರದ ಅಗತ್ಯ ಈಗ ಭಾರತಕ್ಕಿದೆ.

ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಅರಿತುಕೊಳ್ಳಲು ಮತ್ತು ನಮಗೆ ಯಾವ ರೀತಿಯ ದೇಶ ಬೇಕು ಎಂಬುದನ್ನು ನಿರ್ಧರಿಸಲು ನಾಗರಿಕರಿಗೆ ಇದೀಗ ಸೂಕ್ತ ಸಮಯ. ಎಲ್ಲರಿಗೂ ತನ್ನ ಹೃದಯದಲ್ಲಿ ಸ್ಥಾನ ನೀಡುವ ಭಾರತ ನಮಗೆ ಬೇಕು. ಅಂತಹ ಭಾರತಕ್ಕಾಗಿ ಹೋರಾಡುವುದು ಖಂಡಿತವಾಗಿಯೂ ಅರ್ಥಪೂರ್ಣವಾದ ಕೆಲಸ. ಬನ್ನಿ ಸಮಾನತೆಯ ಸಮಾಜ, ದೇಶವನ್ನು ಕಟ್ಟೋಣ.

Tags

Vande Mataram
share
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್

ಶಾಸಕರು, ಗಾಂಧಿನಗರ, ಮಾಜಿ ಕೆಪಿಸಿಸಿ ಅಧ್ಯಕ್ಷರು, ಮಾಜಿ ಸಚಿವರು

Next Story
X