Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಸ್ಯಾಹಾರವೆಂದರೆ ಪರಿಸರ ಪ್ರೇಮವಲ್ಲ;...

ಸಸ್ಯಾಹಾರವೆಂದರೆ ಪರಿಸರ ಪ್ರೇಮವಲ್ಲ; ಜಾತಿ ಪಾರಮ್ಯ

ದೇವದತ್ತ ಪಟ್ಟನಾಯಕ್ದೇವದತ್ತ ಪಟ್ಟನಾಯಕ್24 July 2025 11:06 AM IST
share
ಸಸ್ಯಾಹಾರವೆಂದರೆ ಪರಿಸರ ಪ್ರೇಮವಲ್ಲ; ಜಾತಿ ಪಾರಮ್ಯ
ಇವತ್ತು ಕೂಡ ಯಾರಾದರೂ ಮಾಂಸಾಹಾರವನ್ನು ತ್ಯಜಿಸಿದರೆ ಪ್ರಸಕ್ತ ಸಾಮಾಜಿಕ ವ್ಯವಸ್ಥೆಯಲ್ಲಿ ಅವರು ನೈತಿಕ ಮೇಲುಗೈಯನ್ನು ಪಡೆಯುತ್ತಾರೆ. ಮಾಂಸಾಹಾರವನ್ನು ತ್ಯಜಿಸುವವರು ಕೆಳಜಾತಿಗಳಿಗೆ ಸೇರಿದವರಾಗಿದ್ದರೆ ಅವರು ಒಮ್ಮೆಲೆ ಶುದ್ಧ ಮತ್ತು ಧರ್ಮಬೀರು ಆಗುತ್ತಾರೆ ಹಾಗೂ ಮೇಲ್ಜಾತಿಗೆ ಭಡ್ತಿ ಪಡೆಯುತ್ತಾರೆ. ಇದು ಆಹಾರದ ಪವಾಡ. ಇದು ಸಂಸ್ಕೃತಕರಣ. ಜಾತಿ ಏಣಿಯಲ್ಲಿ ಮೇಲೇರಲು ಇಡುವ ಮೊದಲ ಹೆಜ್ಜೆಯೆಂದರೆ ಜನರು ತಮ್ಮ ಆಹಾರವನ್ನು ಬದಲಾಯಿಸುವುದು.

ಬೌದ್ಧ, ಜೈನ ಮತ್ತು ಹಿಂದೂ ಧರ್ಮಗಳ ಪುರಾಣಗಳಲ್ಲಿ ಒಂದು ಕತೆ ಇದೆ. ಒಂದು ಹದ್ದು ಗುಬ್ಬಚ್ಚಿಯೊಂದನ್ನು ಅಟ್ಟಿಸಿಕೊಂಡು ಹೋಗುತ್ತದೆ. ಒಬ್ಬ ರಾಜ ಗುಬ್ಬಚ್ಚಿಗೆ ರಕ್ಷಣೆ ಕೊಡುತ್ತಾನೆ. ಆಗ, ಗುಬ್ಚಚ್ಚಿಯನ್ನು ತಿನ್ನಬಾರದಾದರೆ ತನಗೆ ಬೇರೆ ಆಹಾರ ನೀಡುವಂತೆ ಹದ್ದು ರಾಜನನ್ನು ಕೇಳುತ್ತದೆ. ಹಾಗಾದರೆ, ಗುಬಚ್ಚಿ ಬದುಕಬೇಕಾದರೆ ಯಾರು ಸಾಯಬೇಕು? ಸಸ್ಯಾಹಾರಿಯೊಂದಕ್ಕೆ ರಾಜನ ರಕ್ಷಣೆ ಪಡೆಯುವ ಅರ್ಹತೆ ಯಾಕಿದೆ ಮತ್ತು ಮಾಂಸಾಹಾರಿಗೆ ಯಾಕಿಲ್ಲ? ಸಸ್ಯಾಹಾರಿಯೊಂದು ಜೀವಿಸಲು ಸಾಧ್ಯವಾಗುವಾಗ ಮಾಂಸಾಹಾರಿಯು ಯಾಕೆ ಹಸಿವಿನಿಂದ ಸಾಯಬೇಕು? ಬಹುಷಃ ಸಾಮ್ರಾಟ ಅಶೋಕನ ಅಹಿಂಸೆಯ ಕಲ್ಪನೆಯನ್ನು ಪ್ರಶ್ನಿಸಲು ಈ ಕತೆಯನ್ನು ಬಳಸಲಾಗಿರಬಹುದು ಎಂಬ ಅಭಿಪ್ರಾಯಗಳಿವೆ. ಆದರೆ ಈ ಕತೆಯ ಉದ್ದೇಶ ಅದಲ್ಲ.

ಆಹಾರದ ಕಲ್ಪನೆಯೊಂದಿಗೆ ಸನಾತನ ಧರ್ಮವು ಆರಂಭವಾಗುತ್ತದೆ. ಬದುಕಬೇಕಾದರೆ ತಿನ್ನಬೇಕು. ತಿನ್ನುವುದೆಂದರೆ ಹಿಂಸೆ. ಅಹಿಂಸಾವಾದಿಯಾಗಬೇಕಾದರೆ ತಿನ್ನುವುದನ್ನು ನಿಲ್ಲಿಸಬೇಕು. ಅಂದರೆ ಉಪವಾಸ ಮಾಡಬೇಕು. ಇದು ಜೈನ ಆಚರಣೆಗಳ ಮೂಲ ತತ್ವವಾಗಿದೆ. ಬುದ್ಧ ಉಪವಾಸ ಮಾಡಿ ಮೂರ್ಛೆ ಹೋದಾಗ, ಸಂತುಲಿತ ಮಾರ್ಗವೊಂದನ್ನು ಅನುಸರಿಸಬೇಕಾದ ಅಗತ್ಯವನ್ನು ಮನಗಂಡರು. ಪ್ರಾಚೀನ ಹಿಂದೂಗಳಲ್ಲಿ ತಿನ್ನುವುದನ್ನು ಸಂತುಲಿತಗೊಳಿಸುವ ನಿಯಮಗಳಿದ್ದವು. ಆದರೆ, ವೇದಾಂತ ಮತ್ತು ಹಿಂದೂ ಧರ್ಮದ ಆಧುನಿಕ ವ್ಯಾಖ್ಯಾನದಲ್ಲಿ ಆಹಾರದ ಈ ಪ್ರಜ್ಞೆ ನಾಪತ್ತೆಯಾಗಿದೆ.

ತಿನ್ನುವುದು ಒಂದು ಅತ್ಯಂತ ಹಿಂಸಾತ್ಮಕ ಪ್ರಕ್ರಿಯೆ. ಹಾಗಾಗಿ, ಬಳಕೆ ಆಧಾರಿತ ಆರ್ಥಿಕತೆಗೆ ದೇಣಿಗೆ ನೀಡುವವರೆಲ್ಲರೂ ಪ್ರಾಥಮಿಕ ನೆಲೆಯಲ್ಲಿ ಹಿಂಸಾತ್ಮಕ ಜನರೇ. ಇದು ವೇದಗಳನ್ನು ಅಧ್ಯಯನ ಮಾಡಿರುವ ಯಾರಿಗಾದರೂ ತಿಳಿದಿರುವ ಸರಳ ವಿಷಯವಾಗಿದೆ. ಎಲ್ಲಾ ರೀತಿಗಳ ಹಸಿವೆಯು-ಬಯಕೆ, ಮಹತ್ವಾಕಾಂಕ್ಷೆ ಅಥವಾ ನಿರೀಕ್ಷೆ-ಆಹಾರವನ್ನು ಕೇಳುತ್ತದೆ ಹಾಗೂ ಸಸ್ಯಗಳು ಮತ್ತು ಪ್ರಾಣಿಗಳನ್ನು ಬೃಹತ್ ಪ್ರಮಾಣದಲ್ಲಿ ಕೊಲ್ಲುವ ಮೂಲಕ ಆಹಾರವನ್ನು ಸೃಷ್ಟಿಸಲಾಗುತ್ತದೆ ಎಂದು ವೇದಗಳು ಹೇಳುತ್ತವೆ.

ಪ್ರಕೃತಿಯನ್ನು ಬಳಸಿಕೊಳ್ಳುವ ಮೂಲಕ ಸಂಸ್ಕೃತಿ ಸ್ಥಾಪನೆಯಾಗುತ್ತದೆ. ಇದನ್ನು ಇಂದ್ರಪ್ರಸ್ಥ ನಗರವನ್ನು ನಿರ್ಮಿಸಿದಾಗ ಪಾಂಡವರು ಅರಿತುಕೊಂಡರು. ನಗರ ನಿರ್ಮಾಣಕ್ಕಾಗಿ ಅವರು ಖಾಂಡವ ವನವನ್ನು ಸುಡಬೇಕಾಯಿತು ಹಾಗೂ ಆ ಮೂಲಕ ಅದರಲ್ಲಿರುವ ಎಲ್ಲಾ ಸಸ್ಯಗಳನ್ನು ಮತ್ತು ಅದರಲ್ಲಿ ವಾಸಿಸುತ್ತಿದ್ದ ಎಲ್ಲಾ ಪ್ರಾಣಿಗಳು ಮತ್ತು ನಾಗಗಳನ್ನು ಕೊಲ್ಲಬೇಕಾಯಿತು. ಅರಣ್ಯವನ್ನು ಸುಡುವ ಮೂಲಕ ಬೆಂಕಿಯ ದೇವತೆ ಅಗ್ನಿಗೆ ಆಹಾರ ನೀಡಲಾಯಿತು. ಅದಕ್ಕಾಗಿ ಅಗ್ನಿ ದೇವತೆ ಪಾಂಡವರನ್ನು ಹರಸಿತು. ಆದರೆ, ನಾಗಗಳು ಈ ಪ್ರಕ್ರಿಯೆಯ ಬಲಿಪಶುವಾದರು. ಅವರು ಸುಟ್ಟು ಹೋದರು. ಅವರು ಪಾಂಡವರನ್ನು ಶಪಿಸಿದರು.

ಭಾರತದಲ್ಲಿ, ಬಳಕೆ ಆರ್ಥಿಕತೆಯನ್ನು ನಿಯಂತ್ರಿಸುತ್ತಿರುವ ಮತ್ತು ದೇಶದ ಎಲ್ಲಾ ಮೂಲಸೌಕರ್ಯ ಯೋಜನೆಗಳು ಗುತ್ತಿಗೆಗಳನ್ನು ಪಡೆಯುವ ಅತ್ಯಂತ ಶ್ರೀಮಂತ ಹಾಗೂ ಪ್ರಭಾವಿ ಜನರು ಕಟ್ಟುನಿಟ್ಟಿನ ಶಾಖಾಹಾರಿಗಳು. ಇದು ಅಹಿಂಸೆಯ ಭ್ರಮೆಯನ್ನು ಸೃಷ್ಟಿಸುತ್ತದೆ. ಯಾಕೆಂದರೆ, ಸಸ್ಯಗಳಿಗೆ ಜೀವವಿಲ್ಲ ಅಥವಾ ಸಸ್ಯಗಳು ನೋವು ಅನುಭವಿಸುವುದಿಲ್ಲ ಎಂಬುದಾಗಿ ಜನರಿಗೆ ಪದೇ ಪದೇ ಹೇಳಲಾಗುತ್ತಿದೆ. ಆದರೆ, ಇದು ವೈಜ್ಞಾನಿಕವಾಗಿ ಸತ್ಯವಲ್ಲ.

ವೇದಗಳಲ್ಲಿಯೂ, ಉದಾಹರಣೆಗೆ ‘ಶತಪಥ ಬ್ರಾಹ್ಮಣ’ದಲ್ಲಿ, ಭೃಗು ಋಷಿಯು ಮಾನವರು ತಿಂದಿರುವ ಸಸ್ಯಗಳ ಮೌನ ಆಕ್ರಂದನಗಳಿಗೆ ಸ್ಪಂದಿಸುವುದನ್ನು ತೋರಿಸುವ ಕತೆಗಳಿವೆ. ಮರಗಳು ರಕ್ತ ಸುರಿಸಲಾರವು, ಆದರೆ ಅವುಗಳು ಅಳುತ್ತವೆ. ನಾವು ಮರಗಳ ಆಕ್ರಂದನವನ್ನು ಕೇಳಲಾರೆವು. ಆದರೆ ಈ ಬದುಕಿನಲ್ಲಿ ಮರಗಳನ್ನು ತಿನ್ನುವ ಪ್ರತಿಯೊಬ್ಬರನ್ನೂ ಮುಂದಿನ ಜನ್ಮದಲ್ಲಿ ಮರಗಳು ತಿನ್ನುತ್ತವೆ.

ಇದು ಕೇವಲ ಆಹಾರದ ಬಗ್ಗೆ ಮಾತ್ರವಲ್ಲ. ಓರ್ವ ‘ಶುದ್ಧ’ ಸಸ್ಯಾಹಾರಿ ವೈಭವೋಪೇತ ಜೀವನ ವಿಧಾನಗಳನ್ನು ಅನುಸರಿಸುವಾಗ ಸಸ್ಯಗಳು ಮತ್ತು ಪ್ರಾಣಿಗಳ ವಿರುದ್ಧ ಬೃಹತ್ ಪ್ರಮಾಣದಲ್ಲಿ ಹಿಂಸಾಚಾರ ನಡೆಸುತ್ತಾನೆ. ಅವರ ಅರಮನೆಗಳು, ವಿಮಾನಗಳು, ಖಾಸಗಿ ವಿಮಾನಗಳು, ಐಷಾರಾಮಿ ಕಾರುಗಳು, ಯಾಟ್‌ಗಳು, ವೈಭವದ ಸಂತೋಷಕೂಟಗಳು, ಭವ್ಯ ಮದುವೆಗಳು, ಕೊನೆಯಿಲ್ಲದ ಉತ್ಸವಗಳು, ನಿರಂತರ ಪ್ರವಾಸೋದ್ಯಮಗಳು ಸಸ್ಯ ಮತ್ತು ಪ್ರಾಣಿ ಸಂಕುಲಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸುತ್ತವೆ.

ಪ್ರಾಣಿಗಳಿಗೆ ಆಶ್ರಯ ನೀಡಲು ಮೃಗಾಲಯಗಳನ್ನು ಕಟ್ಟಿದ್ದೇವೆ, ಹಾಗಾಗಿ ತಾವು ದಯಾಳುಗಳು ಎಂಬುದಾಗಿ ಅವರು ಹೊರಗೆ ತೋರ್ಪಡಿಸಿಕೊಳ್ಳುತ್ತಾರೆ ಮತ್ತು ಅದೇ ಭ್ರಮೆಯಲ್ಲಿ ಬದುಕುತ್ತಾರೆ. ಆದರೆ ಅವೇ ಪ್ರಾಣಿಗಳು ತಮ್ಮ ಕೈಗಾರಿಕೆಗಳಿಂದಾಗಿ ನೆಲೆ ಕಳೆದುಕೊಂಡವುಗಳು ಮತ್ತು ತಮ್ಮ ಕೈಗಾರಿಕೆಗಳು ಅವುಗಳ ನೈಜ ವಾಸಸ್ಥಾನವನ್ನು ನಾಶಪಡಿಸಿವೆ ಎನ್ನುವುದನ್ನು ಅವರು ಮರೆಮಾಚುತ್ತಾರೆ.

ಸಸ್ಯಾಹಾರಿಗಳು ಹಿಂಸೆಯಲ್ಲಿ ಪರಸ್ಪರರ ವಿರುದ್ಧ ಸ್ಪರ್ಧಿಸುತ್ತಾರೆ. ವಿವಿಧ ರೀತಿಯ ಸಸ್ಯಾಹಾರಿಗಳಿದ್ದಾರೆ-ಮೊಟ್ಟೆ ತಿನ್ನುವವರು, ಯಾಕೆಂದರೆ ಅದರಲ್ಲಿ ಹಕ್ಕಿಗಳನ್ನು ಕೊಲ್ಲುವುದು ಒಳಗೊಂಡಿಲ್ಲ; ಬೇರು ತರಕಾರಿಗಳನ್ನು ತಿನ್ನದವರು, ಆದರೆ ಅವರು ಭೂಮಿಯ ಒಳಗೆ ಬೆಳೆಯುವ ಅಣಬೆಗಳು ಅಥವಾ ನೆಲಕಡಲೆಯನ್ನು ಬೇರು ತರಕಾರಿಗಳು ಎಂಬುದಾಗಿ ಪರಿಗಣಿಸುವುದಿಲ್ಲ; ಶುಂಠಿ ಮತ್ತು ಬೆಳ್ಳುಳ್ಳಿ ತಿನ್ನದವರು; ಮತ್ತು ಹಾಲಿನ ಉತ್ಪನ್ನಗಳನ್ನು ತಿನ್ನದವರು, ಯಾಕೆಂದರೆ ಹಸುಗಳನ್ನು ಹಿಂಸಾತ್ಮಕವಾಗಿ ಸಾಕಲಾಗುತ್ತದೆ ಮತ್ತು ಅವುಗಳಿಗೆ ಬಲವಂತದಿಂದ ಗರ್ಭಧಾರಣೆ ಮಾಡಿಸಲಾಗುತ್ತದೆ ಎಂಬುದಾಗಿ ಅವರು ಭಾವಿಸುತ್ತಾರೆ. ಇಲ್ಲಿ ಸಸ್ಯಾಹಾರಿಗಳ ನಡುವೆ ಹಿಂಸಾತ್ಮಕ ಪರಸ್ಪರ ಮೇಲಾಟವಿದೆ.

ಭಾರತದಲ್ಲಿ, ಐತಿಹಾಸಿಕವಾಗಿ ಬೌದ್ಧರು ಮತ್ತು ಜೈನರು ಮಾಂಸಾಹಾರ ಪದ್ಧತಿಗಳಿಗಾಗಿ ಬ್ರಾಹ್ಮಣರನ್ನು ಹೀಯಾಳಿಸಿದ್ದಾರೆ. ಬ್ರಾಹ್ಮಣರು ಕ್ರೂರಿಗಳು ಹಾಗೂ ಬೌದ್ಧರು ಮತ್ತು ಜೈನರು ದಯಾಳುಗಳು ಎಂಬುದಾಗಿ ಅವರು ವಾದಿಸುತ್ತಿದ್ದರು. ಸಮಯ ಉರುಳುತ್ತಿದ್ದಂತೆ, ಈ ವ್ಯಾಖ್ಯಾನದ ಶಕ್ತಿಯನ್ನು ಬ್ರಾಹ್ಮಣರು ಅರಿತುಕೊಂಡರು ಮತ್ತು ಅವರು ಸಸ್ಯಾಹಾರಿಗಳಾದರು.

ಇದಾದ ಬಳಿಕ, ಹಲವು ಬೌದ್ಧರು ಮತ್ತು ಜೈನರು ಬ್ರಾಹ್ಮಣ ಧರ್ಮಕ್ಕೆ ಮರಳಿದರು ಹಾಗೂ ಈ ಅಭ್ಯಾಸ (ಸಸ್ಯಾಹಾರ)ವು ಪವಾಡ ಸದೃಶ ಬೆಳವಣಿಗೆಗಳಿಗೆ ಕಾರಣವಾಗುವಂತೆ ನೋಡಿಕೊಂಡರು. ಹಾಗಾಗಿ, ಇವತ್ತು ಕೂಡ ಯಾರಾದರೂ ಮಾಂಸಾಹಾರವನ್ನು ತ್ಯಜಿಸಿದರೆ ಪ್ರಸಕ್ತ ಸಾಮಾಜಿಕ ವ್ಯವಸ್ಥೆಯಲ್ಲಿ ಅವರು ನೈತಿಕ ಮೇಲುಗೈಯನ್ನು ಪಡೆಯುತ್ತಾರೆ. ಮಾಂಸಾಹಾರವನ್ನು ತ್ಯಜಿಸುವವರು ಕೆಳಜಾತಿಗಳಿಗೆ ಸೇರಿದವರಾಗಿದ್ದರೆ ಅವರು ಒಮ್ಮೆಲೆ ಶುದ್ಧ ಮತ್ತು ಧರ್ಮಬೀರು ಆಗುತ್ತಾರೆ ಹಾಗೂ ಮೇಲ್ಜಾತಿಗೆ ಭಡ್ತಿ ಪಡೆಯುತ್ತಾರೆ. ಇದು ಆಹಾರದ ಪವಾಡ. ಇದು ಸಂಸ್ಕೃತಕರಣ. ಜಾತಿ ಏಣಿಯಲ್ಲಿ ಮೇಲೇರಲು ಇಡುವ ಮೊದಲ ಹೆಜ್ಜೆಯೆಂದರೆ ಜನರು ತಮ್ಮ ಆಹಾರವನ್ನು ಬದಲಾಯಿಸುವುದು.

ತಮ್ಮ ಬಗ್ಗೆ ಸದ್ಭಾವನೆ ಬೆಳೆಸಿಕೊಳ್ಳಲು ಜನರಿಗೆ ಆಹಾರ ಪವಾಡ ಬೇಕಾಗಿದೆ. ಯಾಕೆಂದರೆ ಅದು ಅತ್ಯಂತ ಆಲಸ್ಯದಿಂದ ಕೂಡಿದ ಅಧ್ಯಾತ್ಮ ಮಾದರಿಯಾಗಿದೆ. ಜನರು ಒಳ್ಳೆಯ ಮಾನವರಾಗಬೇಕಾಗಿಲ್ಲ, ಜನರು ದಯಾಶೀಲರಾಗಬೇಕಾಗಿಲ್ಲ, ಅವರು ಸೂಕ್ತ ಆಹಾರವನ್ನು ತಿಂದರಾಯಿತು. ಆಗ ಅವರ ಸುತ್ತ ಇರುವ ಎಲ್ಲವೂ ಬದಲಾಗುತ್ತವೆ.

ಕಳೆದ 70 ವರ್ಷಗಳ ಅವಧಿಯಲ್ಲಿ ವೈಜ್ಞಾನಿಕ ವಿಧಾನದಲ್ಲಿ ಎಲ್ಲಾ ಶಿಕ್ಷಣವನ್ನು ಪಡೆದ ಬಳಿಕ, ನಮ್ಮ ಸುತ್ತ ಸಸ್ಯಾಹಾರಿ ಭಯೋತ್ಪಾದನೆ ಹರಡಿರುವುದು ವಿಪರ್ಯಾಸವಾಗಿದೆ. ಇದಕ್ಕೂ ಪರಿಸರ ರಕ್ಷಣೆಗೂ ಸಂಬಂಧವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಲ್ಲಿ ಇರುವುದು ಎಲ್ಲವೂ ಜಾತಿಗೆ ಸಂಬಂಧಿಸಿದ್ದು. ಜಾತಿ ಪಾರಮ್ಯವನ್ನು ಸ್ಥಾಪಿಸುವುದು. ವೈಶ್ಯ ಸಮುದಾಯಗಳು ಮತ್ತು ಅವರ ಪುರೋಹಿತರ ಪ್ರಾಬಲ್ಯವನ್ನು ಸ್ಥಾಪಿಸುವುದು. ಈ ವೈಶ್ಯ ಸಮುದಾಯಗಳು ಮತ್ತು ಅವರ ಪುರೋಹಿತರು ಎಲ್ಲಾ ಸಂಪನ್ಮೂಲಗಳ ಮೇಲೆ ನಿಯಂತ್ರಣವನ್ನು ಸಾಧಿಸಿದ್ದಾರೆ, ಬೃಹತ್ ಪ್ರಮಾಣದಲ್ಲಿ ಪ್ರಕೃತಿಯನ್ನು ಸ್ವಾಹಾ ಮಾಡುತ್ತಿದ್ದಾರೆ, ಆದರೆ ಸಸ್ಯಾಹಾರವನ್ನು ತಿನ್ನುವ ಮೂಲಕ ಮಾತ್ರ ತಾವು ಅಹಿಂಸಾವಾದಿಗಳು ಎಂಬುದಾಗಿ ನಟಿಸುತ್ತಿದ್ದಾರೆ. ಅಹಿಂಸಾವಾದಿಯಾಗಿರುವುದು ಎಂದರೆ ದುರಾಸೆಯಿಲ್ಲ ಎಂದು ಅರ್ಥವಲ್ಲ ಎನ್ನುವುದನ್ನು ನಾವು ಮರೆತಿದ್ದೇವೆ.

ಕೃಪೆ: newindianexpress.com

share
ದೇವದತ್ತ ಪಟ್ಟನಾಯಕ್
ದೇವದತ್ತ ಪಟ್ಟನಾಯಕ್
Next Story
X