Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಛತ್ರಿ ಹಿಡಿದ ವೀರ: ವಡಕಿಯಲ್ಲಿ ವಿಜಯನಗರ...

ಛತ್ರಿ ಹಿಡಿದ ವೀರ: ವಡಕಿಯಲ್ಲಿ ವಿಜಯನಗರ ಕಾಲದ ಅಪರೂಪದ ಶಿಲೆ ಪತ್ತೆ

ಹೊನ್ನೂರ ಹುಸೇನ ಬೇಲ್ದಾರ್ಹೊನ್ನೂರ ಹುಸೇನ ಬೇಲ್ದಾರ್22 Nov 2026 7:47 AM IST
share
ಛತ್ರಿ ಹಿಡಿದ ವೀರ: ವಡಕಿಯಲ್ಲಿ ವಿಜಯನಗರ ಕಾಲದ ಅಪರೂಪದ ಶಿಲೆ ಪತ್ತೆ

ಕನಕಗಿರಿ: ತಾಲೂಕಿನ ವಡಕಿ ಗ್ರಾಮದಲ್ಲಿ ಇತಿಹಾಸದ ಮತ್ತೊಂದು ಅಮೂಲ್ಯ ಕುರುಹು ಬೆಳಕಿಗೆ ಬಂದಿದೆ. ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಹಿಂಭಾಗದಲ್ಲಿ ಮಣ್ಣಿನಲ್ಲಿ ಹೂತುಹೋಗಿದ್ದ ಅಪರೂಪದ ಛತ್ರಿ ಹಿಡಿದ ವೀರನ ಶಿಲ್ಪ ಪತ್ತೆಯಾಗಿದೆ.

ಕಲ್ಲಿನಲ್ಲಿ ಕೆತ್ತಿರುವುದೇನು? :

ಇದು ಸಾಮಾನ್ಯ ವೀರಗಲ್ಲಲ್ಲ. ಉಬ್ಬುಶಿಲೆಯಲ್ಲಿ ಒಬ್ಬ ವೀರ ಹಾಗೂ ಆತನ ಇಬ್ಬರು ಪರಿಚಾರಕರನ್ನು ಅತ್ಯಂತ ಸುಂದರವಾಗಿ ಕೆತ್ತಲಾಗಿದೆ. ವೀರನ ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ಬಾಕು ಇದ್ದು, ಯುದ್ಧಕ್ಕೆ ಸನ್ನದ್ಧನಾದ ಭಂಗಿಯಲ್ಲಿ ನಿಂತಿದ್ದಾನೆ.

ವಿಶೇಷವೆಂದರೆ, ವೀರನ ಹಿಂದೆ ನಿಂತಿರುವ ಇಬ್ಬರು ಪರಿಚಾರಕರು ಛತ್ರಿಗಳನ್ನು ಹಿಡಿದಿರುವುದು ಕಂಡುಬರುತ್ತದೆ. ಸಾಮಾನ್ಯವಾಗಿ ಛತ್ರಿ ರಾಜರ ಅಧಿಕಾರ ಮತ್ತು ಗೌರವದ ಸಂಕೇತವಾಗಿತ್ತು. ಆದರೆ ಇಲ್ಲಿ ವೀರನಿಗೆ ಛತ್ರಿ ಹಿಡಿದಿರುವುದು ಈ ಶಿಲೆಯ ವಿಶೇಷತೆಯಾಗಿದೆ.

ವೀರನ ಅಲಂಕಾರವೇ ಸಾಹಸದ ಸಂಕೇತ: ವೀರನ ಚಿತ್ರಣದಲ್ಲಿ ಆತನ ಸ್ಥಾನಮಾನ ಮತ್ತು ಗಾಂಭೀರ್ಯವನ್ನು ಬಿಂಬಿಸುವಂತೆ ತಲೆಯ ಮುಡಿ, ಕೈಗಡಗ, ತೋಳ್ಬಂದಿ, ಕಾಲ್ಗಡಗ, ಕೊರಳ ಹಾರ ಹಾಗೂ ಕಿವಿಯ ಓಲೆಗಳಂತಹ ಆಭರಣಗಳನ್ನು ಕೆತ್ತಲಾಗಿದೆ. ಶಿಲೆಯ ಮೇಲ್ಭಾಗದಲ್ಲಿ ಸೂರ್ಯ ಮತ್ತು ಚಂದ್ರರ ಚಿತ್ರಗಳಿವೆ. ಸೂರ್ಯ-ಚಂದ್ರರು ಇರುವವರೆಗೂ ವೀರನ ಕೀರ್ತಿ ಅಜರಾಮರವಾಗಿರಲಿ ಎಂಬ ಆಶಯವನ್ನು ಇದು ಸೂಚಿಸುತ್ತದೆ. ಈ ಶಿಲೆಯು ರಾಜಮರ್ಯಾದೆ, ಉನ್ನತ ಅಧಿಕಾರ, ಗೌರವ ಹಾಗೂ ವೀರನ ಸ್ಥಾನಮಾನವನ್ನು ಪ್ರತಿಬಿಂಬಿಸುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ವಿಜಯನಗರ ಕಾಲಘಟ್ಟದ ಶಿಲೆ:

ಈ ವೀರಗಲ್ಲು ವಿಜಯನಗರ ಕಾಲಕ್ಕೆ ಸೇರಿದ್ದೆಂದು ಅಂದಾಜಿಸಲಾಗಿದೆ. ಆ ಕಾಲದಲ್ಲಿ ರಾಜಛತ್ರಿಗಳನ್ನು ಅರಸರಿಗೆ ಮಾತ್ರವಲ್ಲದೆ, ಉನ್ನತ ಸ್ಥಾನಮಾನ ಹೊಂದಿದ್ದ ವೀರರಿಗೂ ಅವರ ಸೇವಕರು ಯುದ್ಧರಂಗದಲ್ಲಿ ಹಿಡಿಯುತ್ತಿದ್ದರು ಎಂಬುದಕ್ಕೆ ಈ ಶಿಲೆ ಸಾಕ್ಷಿಯಾಗಿದೆ. ಹೀಗಾಗಿ ಈ ವೀರ ಸಾಮಾನ್ಯ ಸೈನಿಕನಾಗಿರದೆ, ರಾಜನಿಗೆ ಆಪ್ತನಾಗಿದ್ದ ಉನ್ನತ ಸ್ಥಾನಮಾನದ ಯೋಧನಾಗಿರಬಹುದು ಎಂದು ಅಂದಾಜಿಸಲಾಗಿದೆ.

ಶಾಸನದ ನಿಗೂಢ:

ಈ ವೀರಗಲ್ಲಿನ ಮುಂಭಾಗದಲ್ಲಿ, ಅಪ್ರಕಟಿತ ಶಾಸನವೊಂದು ಪತ್ತೆಯಾಗಿದೆ. ಆದರೆ ಅದು ಮಣ್ಣಿನಲ್ಲಿ ಮುಚ್ಚಿಹೋಗಿರುವುದರಿಂದ ಅದರಲ್ಲಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಶಾಸನವನ್ನು ಓದಲು ಸಾಧ್ಯವಾದರೆ ಈ ವೀರ ಯಾರು? ಯಾವ ಯುದ್ಧದಲ್ಲಿ ಮಡಿದಿದ್ದಾನೆ? ಎಂಬುದು ಸೇರಿದಂತೆ ಆತನ ಇತಿಹಾಸದ ಹಲವು ಸಂಗತಿಗಳು ಬೆಳಕಿಗೆ ಬರಬಹುದು.

ಸಂರಕ್ಷಣೆಗೆ ಆಗ್ರಹ:

ವಡಕಿ ಗ್ರಾಮದಲ್ಲಿ ಪತ್ತೆಯಾಗಿರುವ ಈ ಅಪರೂಪದ ವೀರಗಲ್ಲು ಕನಕಗಿರಿ ಭಾಗದ ಶ್ರೀಮಂತ ಇತಿಹಾಸಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಶಿಲೆಯನ್ನು ಕೂಡಲೇ ಸಂರಕ್ಷಿಸಿ, ಅದರಲ್ಲಿರುವ ಶಾಸನವನ್ನು ಓದಿಸಿ ಸಮಗ್ರ ಸಂಶೋಧನೆ ನಡೆಸಬೇಕು ಎಂದು ಇತಿಹಾಸ ಪ್ರೇಮಿಗಳು ಆಗ್ರಹಿಸಿದ್ದಾರೆ.

ವಡಕಿಯಲ್ಲಿ ಪತ್ತೆಯಾಗಿರುವ ಛತ್ರಿ ಹಿಡಿದ ವೀರನ ಶಿಲೆ ಅತ್ಯಂತ ಅಪರೂಪದ್ದು. ವೀರನಿಗೆ ಸೇವಕರು ಛತ್ರಿ ಹಿಡಿದಿರುವುದು ಆತನಿಗೆ ರಾಜನಿಗೆ ಸಮಾನವಾದ ಗೌರವವಿತ್ತು ಎಂಬುದನ್ನು ಸೂಚಿಸುತ್ತದೆ. ಆತ ಸಾಮಾನ್ಯ ಯೋಧನಾಗಿರದೆ, ರಾಜನ ನಂಬಿಕಸ್ಥ ಮಹಾವೀರನಾಗಿದ್ದಿರಬಹುದು. ಶಾಸನವನ್ನು ಓದಿದರೆ ಈ ವೀರನ ಸಂಪೂರ್ಣ ಇತಿಹಾಸ ಬೆಳಕಿಗೆ ಬರಲಿದೆ. ಆದ್ದರಿಂದ ಶಿಲೆಯನ್ನು ಕೂಡಲೇ ಸಂರಕ್ಷಿಸಬೇಕು.

-ಡಾ. ಯಮನೂರ ನಾಯಕ, ಸಂಶೋಧಕ, ಕನಕಗಿರಿ

Tags

Rare StoneVijayanagaraVadaki
share
ಹೊನ್ನೂರ ಹುಸೇನ ಬೇಲ್ದಾರ್
ಹೊನ್ನೂರ ಹುಸೇನ ಬೇಲ್ದಾರ್
Next Story
X