Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಮಾಜಕ್ಕೆ ಪುನಶ್ಚೇತನ ನೀಡಬೇಕಾದ ಹಬ್ಬಗಳು...

ಸಮಾಜಕ್ಕೆ ಪುನಶ್ಚೇತನ ನೀಡಬೇಕಾದ ಹಬ್ಬಗಳು ಇಂದು ಏನಾಗುತ್ತಿವೆ?

ಡಾ. ಕೆ. ಚಿನ್ನಪ್ಪ ಗೌಡಡಾ. ಕೆ. ಚಿನ್ನಪ್ಪ ಗೌಡ6 July 2025 10:11 AM IST
share
ಸಮಾಜಕ್ಕೆ ಪುನಶ್ಚೇತನ ನೀಡಬೇಕಾದ ಹಬ್ಬಗಳು ಇಂದು ಏನಾಗುತ್ತಿವೆ?
ಅಂತರಂಗ ಬಹಿರಂಗ ಶುದ್ಧಿಯ ಬಗ್ಗೆ ಬಸವಣ್ಣನವರು ಸೊಗಸಾದ ನಿರ್ವಚನವನ್ನು ಮಾಡಿದ್ದಾರೆ. ‘‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ’’. ಈ ಶುದ್ಧಿಯ ಮಾತು ನಮ್ಮ ಖಾಸಗಿ ಮತ್ತು ಸಾರ್ವಜನಿಕ ವಲಯದ ಹಬ್ಬಗಳಿಗೆ ಸರಿಯಾಗಿ ಅನ್ವಯವಾಗುತ್ತದೆ. ಕಳವು ಮಾಡಿದ ದುಡ್ಡಿನಿಂದ ಹಬ್ಬ ಬೇಡ. ಹಿಂಸೆಯ ಕೈಗಳ ದಕ್ಷಿಣೆ ಬೇಡ. ಸುಳ್ಳು ಕತೆಗಳ ಪ್ರವಚನ ಬೇಡ. ಇತರರನ್ನು ದ್ವೇಷಿಸಲು ಹಬ್ಬ ಕಲಿಸುವುದಿಲ್ಲ. ಹಬ್ಬಗಳು ಇರುವುದು ಪ್ರತಿಷ್ಠೆಗಾಗಿ ಅಲ್ಲ. ಕೆಲವರನ್ನು ಅವಮಾನಿಸುವುದು ಹಬ್ಬಗಳ ಉದ್ದೇಶ ಅಲ್ಲ. ಇದುವೇ ಖಾಸಗಿ ಶುದ್ಧಿ ಇದುವೇ ಸಾರ್ವಜನಿಕ ಶುದ್ಧಿ. ಸದ್ಗುಣ, ಸದಾಚಾರ, ಸದ್ಭಾವ, ಸದಾಶಯಗಳ ಜನರ ಜೀವನ ಮೌಲ್ಯ ಮತ್ತು ಸಂಪನ್ನ ಸಮಾಜದ ನೈತಿಕತೆ ಕುಸಿಯದಂತೆ ನಿರಂತರ ಪುನಶ್ಚೇತನ ನೀಡುವುದೇ ಹಬ್ಬಗಳು ಮತ್ತು ಆಚರಣೆಗಳ ಉದ್ದೇಶ.

ನಮ್ಮದು ಹಬ್ಬಗಳ ನಾಡು. ಈ ವರ್ಷದ ಹಬ್ಬಗಳು ಸಾಲುಗಟ್ಟಿ ನಿಂತಿವೆ. ಆಟಿ ತಿಂಗಳು ಕಳೆಯಲಿ. ಹಬ್ಬಗಳದ್ದೇ ಕಾರುಬಾರು. ಚೌತಿ ಗಣೇಶನ ಮೂರ್ತಿಗಳನ್ನು ತಯಾರಿಸುವ ಕೆಲಸ ಆರಂಭ ಆಗಿದೆ. ಆಟಿ ಬಡಿಸುವ ಆಚರಣೆ, ಮನೆಮದ್ದು, ಕಷಾಯ, ತಿಂಡಿತಿನಸು ಹಂಚುವ ಸಮಾರಂಭ ಮನೆಗಳನ್ನು ಬಿಟ್ಟು ನಗರಗಳ ಸಭಾಂಗಣಗಳಲ್ಲಿ ಆಯೋಜನೆಯಾಗಲಿವೆ. ಕೆಲವು ಹಬ್ಬಗಳನ್ನು ಖಾಸಗಿ ವಲಯದಲ್ಲಿ ಅಂದರೆ ಮನೆ ಮತ್ತು ಮನೆಯ ಆವರಣದೊಳಗೆ ಆಚರಿಸಿದರೆ ಇನ್ನು ಕೆಲವು ಹಬ್ಬಗಳನ್ನು ಸಾರ್ವಜನಿಕ ವಲಯದಲ್ಲಿ ಆಚರಿಸುತ್ತೇವೆ. ಕುಟುಂಬದ ಮಟ್ಟದಲ್ಲಿ ಮನೆಯೊಳಗೆ ನಡೆಯುತ್ತಿದ್ದ ಕೆಲವು ಹಬ್ಬಗಳು ಇಂದು ಸಾರ್ವಜನಿಕ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತವೆ. ಹಬ್ಬಗಳು ಧಾರ್ಮಿಕ ಭಾವನೆಯನ್ನು ವೃದ್ಧಿಸಿ ಸಾಮಾಜಿಕ ಸೌಹಾರ್ದವನ್ನು ಉಂಟುಮಾಡುತ್ತವೆ ಎಂಬುದು ಸಾಮಾನ್ಯವಾಗಿ ಎಲ್ಲ ಹಬ್ಬಗಳ ಬಗ್ಗೆ ಜನರು ಹೊಂದಿರುವ ಅಭಿಪ್ರಾಯವಾಗಿದೆ. ನಾಡಿನ ಭಾವೈಕ್ಯದ ದ್ಯೋತಕವಾಗಿ ಚೌತಿ, ಅಷ್ಟಮಿ, ಹೋಲಿ, ದೀಪಾವಳಿ, ಕ್ರಿಸ್ಮಸ್, ಶುಭ ಶುಕ್ರವಾರ, ಈಸ್ಟರ್, ರಮಝಾನ್, ಬಕ್ರೀದ್, ಮಹಾವೀರ, ಬುದ್ಧ, ಬಸವ, ಗುರುನಾನಕ್, ಅಂಬೇಡ್ಕರ್, ಗಾಂಧಿ, ಗುರು ನಾರಾಯಣ, ಶಿವಾಜಿ ಹೀಗೆ ಅನೇಕ ನಾಯಕರ ಜಯಂತ್ಯುತ್ಸವಗಳನ್ನು ಅವುಗಳಿಗೆ ಹಬ್ಬಗಳ ಸ್ವರೂಪವನ್ನು ನೀಡಿ ಆಚರಿಸುತ್ತೇವೆ. ವ್ಯಕ್ತಿ, ಜಾತಿ, ಧರ್ಮಗಳ ಸಂಬಂಧವನ್ನು ಈ ಆಚರಣೆಗಳು ಹೊಂದಿದ್ದರೂ ಅವುಗಳನ್ನು ಮೀರಿದ ಸಾಮರಸ್ಯ ಹಾಗೂ ಭಾವೈಕ್ಯದ ಆಶಯಗಳಿರುವುದನ್ನು ಪ್ರಧಾನವಾಗಿ ಗುರುತಿಸಿ ಅವುಗಳಿಗೆ ಹಬ್ಬಗಳ ಸ್ವರೂಪ ನೀಡಿ ಆಚರಿಸುತ್ತೇವೆ. ಇಂತಹ ಆಚರಣೆಗಳ ಸಂದರ್ಭದಲ್ಲಿ ಕೆಲವೊಮ್ಮೆ ಸಮಸ್ಯೆಗಳು ಉಂಟಾಗುತ್ತವೆ. ಒಂದು ಮುಖ್ಯವಾದ ಸಮಸ್ಯೆ ಈ ಆಚರಣೆಗಳ ಖಾಸಗಿ ಮತ್ತು ಸಾರ್ವಜನಿಕ ವಲಯದ ಕುರಿತಂತೆ ಏಳುವ ಗೊಂದಲಗಳು.

ಖಾಸಗಿ ಮತ್ತು ಸಾರ್ವಜನಿಕ ವಲಯ ಈ ಎರಡು ಪರಿಕಲ್ಪನೆಗಳನ್ನು ಬಹಳ ಸರಳವಾಗಿ ವಿವರಿಸುತ್ತೇನೆ. ಮನೆ ಮತ್ತು ಊರಿನ ದೇವಸ್ಥಾನ ಈ ಎರಡನ್ನಷ್ಟೇ ಇಟ್ಟುಕೊಂಡು ಈ ಪರಿಕಲ್ಪನೆಯನ್ನು ಸ್ಪಷ್ಟಪಡಿಸುತ್ತೇನೆ. ಮನೆ ಒಂದು ಖಾಸಗಿ ವಲಯ. ಮನೆಯ ಆವರಣದೊಳಗಿನ ಲೌಕಿಕ ಮತ್ತು ಧಾರ್ಮಿಕವಾದ, ಒಟ್ಟು ಕುಟುಂಬ ನಿರ್ವಹಣೆಗೆ ಸಂಬಂಧಿಸಿದ ಚಟುವಟಿಕೆಗಳು ಒಂದು ಕುಟುಂಬದ ಖಾಸಗಿ ವಲಯದೊಳಗೆ ಬರುತ್ತವೆ. ಮನೆಯಲ್ಲಿ ಹಬ್ಬಗಳನ್ನು ಆಚರಿಸುವಾಗ ಅತಿಥಿಗಳನ್ನು ಆಮಂತ್ರಿಸುವ ಆಯ್ಕೆ ಆ ಕುಟುಂಬಕ್ಕೆ/ಕುಟುಂಬದ ಯಜಮಾನನಿಗೆ ಸೇರಿದ್ದು. ಮನೆಗೆ ಹಬ್ಬಕ್ಕೆ ಕರೆದಿಲ್ಲ ಎಂದು ತಕರಾರು ಎತ್ತುವಂತಿಲ್ಲ. ಮನೆಯಲ್ಲಿ ಹಬ್ಬ ಹೇಗೆ ಆಚರಿಸಬೇಕು, ಅದರ ಒಟ್ಟು ಸ್ವರೂಪ ನಿರ್ಣಯ ಆ ಕುಟುಂಬಕ್ಕೆ ಸೇರಿದ್ದು. ಮನೆಗೆ ಕರೆದ ಮೇಲೆ ಅತಿಥಿಗಳನ್ನು ಸಜ್ಜನ ನಡವಳಿಕೆಯಿಂದ ಸತ್ಕರಿಸಬೇಕು ಎಂಬುದು ಅಲಿಖಿತ ನಿಯಮ, ಅದು ಕುಟುಂಬದ ಸಂಸ್ಕಾರಕ್ಕೆ ಸೇರಿದ್ದು. ಬಂದವರ ವ್ಯಕ್ತಿ ಘನತೆಗೆ ಚ್ಯುತಿಯಾಗದಂತೆ ಉಪಚರಿಸುವುದು ಕುಟುಂಬದ ವಿವೇಕಕ್ಕೆ ಸಂಬಂಧಿಸಿದ್ದು. ಕೌಟುಂಬಿಕ ಎಲ್ಲೆಗೆ ಹೊಂದಿಕೆಯಾಗುವ ಹಾಡುಗಳನ್ನು, ಧ್ವನಿವರ್ಧಕ ವ್ಯವಸ್ಥೆಯನ್ನು ಮಾಡುವುದುಂಟು. ಮನೆಯ ಹೊರಗೆ ಇರುವ ಆವರಣ ಗೋಡೆಯೊಳಗಿನ ಅಂಗಳ, ಹಿತ್ತಿಲು ಇತ್ಯಾದಿ ಸ್ಥಳಗಳು ಮನೆಯ ವ್ಯಾಪ್ತಿಯೊಳಗೆ ಬರುತ್ತವೆ. ಮನೆಯ ಒಳಗೆ ಮತ್ತು ಹೊರಗೆ ಇವು ಮನೆಯ ಖಾಸಗಿ ವಲಯದಲ್ಲಿ ಬರುತ್ತದೆಯಾದರೂ ಸೂಕ್ಷ್ಮವಾಗಿ ನೋಡಿದರೆ ಮನೆಯೊಳಗೆ ಇರುವ ಸ್ವಾತಂತ್ರ್ಯವು ಅಂಗಳಕ್ಕೆ ಬಂದರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಅಂಗಳ ತನ್ನದು ಎಂದು ಹೇಳಿ ನೆರೆಮನೆಯ ನೆಮ್ಮದಿ ಕೆಡಿಸುವ ಹಾಗೆ ಅಂಗಳವನ್ನು ಬಳಸುವಂತಿಲ್ಲ. ಕೊಳೆತ ಪದಾರ್ಥಗಳನ್ನು ಅಂಗಳದಲ್ಲಿ ರಾಶಿ ಹಾಕುವಂತಿಲ್ಲ. ಪಕ್ಕದ ಮನೆಗೆ ತೊಂದರೆಯಾಗುವ ರೀತಿಯಲ್ಲಿ, ದಾರಿಯಲ್ಲಿ ಹೋಗುವ ನಾಯಿ, ಬೆಕ್ಕುಗಳಿಗೆ ಪ್ರಾಣಿದಯೆಯ ಹೆಸರಿನಲ್ಲಿ ಆಹಾರ ಹಾಕಿ ಸಾಕಿ (ಮತ್ತೆ ಅಟ್ಟಿ) ಆಚೀಚೆ ಮನೆಮಂದಿ ತೊಂದರೆ ಅನುಭವಿಸುವುದಕ್ಕೆ ಕಾರಣವಾಗಬಾರದು. ಇವೆಲ್ಲ ಒಂದು ಕುಟುಂಬದ ನೈತಿಕ ನೆಲೆಗೆ ಸಂಬಂಧಿಸಿದ್ದು. ಊರಿನ ದೇವಸ್ಥಾನದ ವಿಷಯಕ್ಕೆ ಬಂದರೆ ಅದು ಸಾರ್ವಜನಿಕ ವಲಯಕ್ಕೆ ಸೇರಿದ್ದು ಎಂಬುದನ್ನು ಮರೆಯಬಾರದು. ಇಲ್ಲಿ ಪ್ರಜೆಗಳಿಗೆ ಸಂವಿಧಾನ ಕೊಟ್ಟಿರುವ ಹಕ್ಕಿನ ಉಲ್ಲಂಘನೆ ಆಗಬಾರದು. ಜಾತಿ ನೋಡಿ ಪ್ರವೇಶ, ಅಂತಸ್ತು ನೋಡಿ ಮನ್ನಣೆ ಇಂತಹ ತಾರತಮ್ಯ ಮಾಡಬಾರದು. ದೇವಾಲಯದಲ್ಲಿ ನಡೆಯುವ ಉತ್ಸವಗಳಿಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಇರುತ್ತದೆ. ಒಂದು ವಿಶೇಷ ಪೂಜೆ ಅಥವಾ ಊರ ಜಾತ್ರೆ ಇದೆ ಎಂದಿಟ್ಟುಕೊಳ್ಳೋಣ. ಗ್ರಾಮಸ್ಥರಿಂದ ವಂತಿಗೆ ಸಂಗ್ರಹಿಸುತ್ತಾರೆ. ಸಾರ್ವಜನಿಕ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದಾರೆ. ಒಂದು ವರ್ಗಕ್ಕೆ ಮೊದಲು ಭೋಜನ ವ್ಯವಸ್ಥೆ, ಅದು ಒಳಾಂಗಣದಲ್ಲಿ/ಗೋಪುರದ ಜಗಲಿಯಲ್ಲಿ! ಬಾಗಿಲು ಮುಚ್ಚಿ ಒಳಗೆ ಬಾಳೆ ಎಲೆಯಲ್ಲಿ ಅನ್ನ ಸಂತರ್ಪಣೆ. ಉಳಿದವರು ಹೊರಗೆ ಕಾಯಬೇಕು. ಒಂದು ವರ್ಗದ ಊಟ ಆದ ಮೇಲೆ ವಠಾರದ ಹೊರಗೆ ಉಳಿದವರಿಗೆ ಹಾಳೆ ತಟ್ಟೆಯಲ್ಲಿ ಬುಫೆ! ಇಲ್ಲಿಯೇ ಒಂದು ಸಂಗತಿಯನ್ನು ಸ್ಪಷ್ಟ ಪಡಿಸಬೇಕು. ಅರ್ಚಕ/ಪುರೋಹಿತ ವರ್ಗಕ್ಕೆ ದೇವಸ್ಥಾನದ ಸಾರ್ವಜನಿಕ ವಲಯದೊಳಗೆ ಒಂದು ಖಾಸಗಿ ವಲಯ ನಿರ್ಮಾಣ ಮಾಡಿ ಇಂಥದ್ದಕ್ಕೆಲ್ಲ ಅನುಕೂಲ ಕಲ್ಪಿಸಿದರೆ ಧಾರ್ಮಿಕ ಪರಂಪರೆಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳಬಹುದೇನೋ! ಒಳಗೆ ಅನ್ನಸಂತರ್ಪಣೆ ಹೊರಗೆ ಅನ್ನ ವಿತರಣೆ ಮಾಡಿದರೆ ಅದರಿಂದ ಸಾರ್ವಜನಿಕ ವಲಯದ ಘನತೆಗೆ ಕುಂದುಂಟಾಗುತ್ತದೆ ಎಂದು ತಿಳಿಯುವುದಿಲ್ಲ. ಸಾರ್ವಜನಿಕರ ದುಡ್ಡು, ವಂತಿಗೆ ತೆಗೆದುಕೊಂಡ ಮೇಲೆ ಹಬ್ಬದ ನಡವಳಿಕೆಯಲ್ಲಿ ತಾರತಮ್ಯ ಮಾಡಿದರೆ ಅದು ಶೋಭೆ ತರುವ ಕೆಲಸವಲ್ಲ. ಇತ್ತೀಚೆಗಿನ ದಿನಗಳಲ್ಲಿ ಬಹಳ ಸುಧಾರಣೆಯಾಗಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಇಂತಹ ಘಟನೆ ಒಂದು ನಡೆದರೂ ಎಲ್ಲಿ ನಡೆದರೂ ಅದು ಸಮಾಜದ ಘನತೆಯನ್ನು ತಗ್ಗಿಸುವ ವಿದ್ಯಮಾನವೇ ಆಗುತ್ತದೆ. ಸಮಾಜದ ನಿರ್ದಿಷ್ಟ ಸಮುದಾಯಗಳನ್ನು ಸಾರ್ವಜನಿಕ ಹಬ್ಬಗಳು ಅವುಗಳ ವ್ಯಾಪ್ತಿಯೊಳಗೆ ಬರುವ ನಿರ್ದಿಷ್ಟ ಸಮುದಾಯಗಳನ್ನು ಒಂದುಗೂಡಿಸಬೇಕು. ಸಮುದಾಯಗಳ ನಡುವೆ ಮತ್ತು ಸಮುದಾಯಗಳ ಒಳಗೆ ಕಂದಕ ನಿರ್ಮಿಸುವುದಾದರೆ ಅಂತಹ ಹಬ್ಬಗಳು, ಜಾತ್ರೆಗಳು, ಆಚರಣೆಗಳು ನಮಗೆ ಬೇಕಾಗಿಲ್ಲ.

ಸಾರ್ವಜನಿಕ ಹಬ್ಬಗಳಿಗೆ ಸಂಬಂಧಿಸಿದಂತೆ ಇನ್ನೊಂದು ಸಮಸ್ಯೆ ಇದೆ. ಬೇರೆ ಬೇರೆ ಕಾರಣಗಳಿಂದಾಗಿ ಹಬ್ಬಗಳ ಸ್ವರೂಪದಲ್ಲಿ ತೀವ್ರ ಬದಲಾವಣೆಗಳಾಗುತ್ತಿವೆ. ಇದಕ್ಕೆ ಆಂತರಿಕ ಮತ್ತು ಬಾಹ್ಯ ಕಾರಣಗಳಿವೆ. ಖಾಸಗಿ ವಲಯದ ಹಬ್ಬ ಸಾರ್ವಜನಿಕ ವಲಯಕ್ಕೆ ಬಂದಾಗ ಹಬ್ಬಗಳ ಆಚರಣಾತ್ಮಕ ವಿಧಿವಿಧಾನಗಳಲ್ಲಿ ಗಣನೀಯ ಬದಲಾವಣೆಗಳಾಗುತ್ತವೆ. ಹೀಗೆ ಆಗುವ ಬದಲಾವಣೆಗಳನ್ನು ಅರ್ಥೈಸುವ ಕ್ರಮಗಳು ಇವೆ. ಸಾರ್ವಜನಿಕ ಹಬ್ಬಗಳ ಕಾರಣ ಮತ್ತು ಉದ್ದೇಶಗಳನ್ನು ವಿವರಿಸುವಾಗ ಬುದ್ಧಿ ವಿವೇಕ ಇರಬೇಕು. ಹೀಗೆ ಸಮರ್ಥಿಸುವಾಗ ವಿಜ್ಞಾನವನ್ನು ಎಳೆದು ತರುವುದುಂಟು. ಧರ್ಮಕ್ಕೆ ವಿಜ್ಞಾನದ ಆಧಾರ ಕೊಡುವ ಅತ್ಯುತ್ಸಾಹ! ಒಂದು ಘಟನೆ ಹೇಳುತ್ತೇನೆ. ಗದ್ದೆಯ ಬದಿಯ ನಾಗನ ಪೂಜೆ ಇವತ್ತು ನಗರದ ಹಬ್ಬಗಳಾಗಿವೆ. ನಾಗನ ಕಟ್ಟೆಗಳು ಹೆಚ್ಚು ಹೆಚ್ಚು ನಿರ್ಮಾಣಗೊಳ್ಳುತ್ತಿವೆ. ಗ್ರಾಮದ ಕೃಷಿ ಕುಟುಂಬಗಳು ನಾಗಬನಕ್ಕೆ ಹೋಗಿ ಕೆಲವು ಸೀಯಾಳ, ಕೆಲವು ಕುಡ್ತೆ ಹಾಲು ಸುರಿದು ಹೂ ಹಿಂಗಾರ ಇಟ್ಟು ಕೈಮುಗಿದು ಬೆಳೆ, ಜನ, ಜಾನುವಾರುಗಳನ್ನು ಕಾಪಾಡು ಎಂದು ಬೇಡುವ ನಾಗ ಪೂಜೆ ಇವತ್ತು ನಾಗಾರಾಧನೆಯ ಸ್ವರೂಪವನ್ನು ಪಡೆದಿದೆ. ನಾಗ ಕೇಂದ್ರಗಳಲ್ಲಿ ಸಾವಿರಾರು ಜನರು ಸೇರಿ ವಿವಿಧ ಬಗೆಯ ನಾಗ ಪೂಜೆಗಳನ್ನು ನೆರವೇರಿಸುತ್ತಾರೆ. ಎಳನೀರಿನ ರಾಶಿ ರಾಶಿ, ಹಂಡೆ ಹಂಡೆ ಹಾಲು! ಇದು ಭಕ್ತಿಯ ವಿಷಯ, ಭಕ್ತರ ಜಗತ್ತು. ಆಕ್ಷೇಪಿಸುವುದು ಸರಿಯಲ್ಲವೇನೋ. ನನ್ನನ್ನು ಅಚ್ಚರಿಗೊಳಿಸಿದ ಒಂದು ಸಂಗತಿಯನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಕೊಡಪಾನಗಟ್ಟಳೆ ಹಾಲು ಮತ್ತು ಸಾವಿರಾರು ಸೀಯಾಳಗಳ ಅಭಿಷೇಕ ಮಾಡುವುದನ್ನು ಪ್ರಸ್ತಾವಿಸಿ ಒಬ್ಬರು ತಜ್ಞ ಸಂಪನ್ಮೂಲ ವ್ಯಕ್ತಿ ಅದಕ್ಕಿರುವ ವೈಜ್ಞಾನಿಕ ಕಾರಣವನ್ನು ಕೊಟ್ಟು ವಿವರಿಸಲು ತೊಡಗಿದರು. ಸಾವಿರಾರು ಸೀಯಾಳ, ಹಾಲು ಮತ್ತು ನೀರು ಸುರಿಯುವುದರಿಂದ ನೀರಿನ ಒರತೆ ಹೆಚ್ಚಾಗುತ್ತದೆ. ಇದು ರೈನ್ ಹಾರ್ವೆಸ್ಟಿಂಗ್‌ನ ಒಂದು ಅತ್ಯುತ್ತಮ ಮಾದರಿ. ನೀರು ಇಂಗಿಸುವ, ನೀರು ಶೇಖರಣೆ ಮಾಡುವ ಒಂದು ವಿಧಾನ... ಹೀಗೆಲ್ಲ ವಿಜ್ಞಾನದ ಹೆಸರಿನಲ್ಲಿ ವಿವರಿಸಿದರು. ಆಟಿ ಆಚರಣೆ, ನಾಗರ ಪಂಚಮಿ ಹಬ್ಬದ ಬಗ್ಗೆ ಅವರಲ್ಲಿ ಬಹಳ ಮಾಹಿತಿಗಳಿದ್ದುವು ಎಂಬುದು ಬೇರೆ ವಿಚಾರ. ಸಾರ್ವಜನಿಕ ವಲಯದ ಒಂದು ಹಬ್ಬದ ಆಚರಣೆಗಳೆಲ್ಲವನ್ನೂ ಸಮರ್ಥಿಸುವ ಭರದಲ್ಲಿ ಅವರ ಈ ವಿವರಣೆ ನನಗೆ ವಿಚಿತ್ರವಾಗಿ ಕಂಡಿತು. ಹಬ್ಬಗಳ ಆಶಯಗಳಿಗೆ ಹೊಂದಿಕೆಯಾಗದ ಆಚರಣೆಗಳನ್ನು ನಾವು ಬೆಂಬಲಿಸುವ ಅಗತ್ಯವಿಲ್ಲ. ಹಬ್ಬಗಳನ್ನು ವೈಭವೀಕರಿಸುವ ಏಕಮಾತ್ರ ಉದ್ದೇಶದಿಂದ ಮಾಡುವ ಸೇರ್ಪಡೆಗಳ ಬಗ್ಗೆ ಸಾರ್ವಜನಿಕ ಹಬ್ಬಗಳ ಸಂಘಟಕರು ಎಚ್ಚರವಹಿಸಬೇಕಾಗಿದೆ.

ಹಬ್ಬಕ್ಕೆ ಸಂಬಂಧಿಸಿದಂತೆ ನೋಡಿದರೆ ಖಾಸಗಿ ವಲಯದಲ್ಲಿ ದೊಡ್ಡ ಮೆರವಣಿಗೆ ಇರುವುದಿಲ್ಲ. ಧ್ವನಿವರ್ಧಕದ ಬಳಕೆಯೂ ಕಡಿಮೆ, ಶಬ್ದ ಮಾಲಿನ್ಯವೂ ಕಡಿಮೆ. ಕಿವಿಗಡಗಿಚ್ಚುವ ಶಬ್ದವೂ ಇರುವುದಿಲ್ಲ. ಒಂದು ವೇಳೆ ಅಸಹನೀಯ ಶಬ್ದ ಹಾಡುಗಳ ವ್ಯವಸ್ಥೆಯನ್ನು ಮನೆಯಲ್ಲಿ ಮಾಡಿದರೂ ಅದನ್ನು ಮೆಚ್ಚುವುದು ಕಷ್ಟ. ಸಾರ್ವಜನಿಕ ವಲಯದ ಹಬ್ಬಗಳಲ್ಲಿ ಸಂಘರ್ಷಕ್ಕೆ ಕಾರಣವಾಗುವ ಮತ್ತೊಂದು ಅಂಶವೆಂದರೆ ಶಬ್ದ ನಿಯಂತ್ರಣವಿಲ್ಲದ ಧ್ವನಿವರ್ಧಕ ವ್ಯವಸ್ಥೆ ಮತ್ತು ವಾಹನಗಳನ್ನು ಗಂಟೆಗಟ್ಟಳೆ ರಸ್ತೆಯಲ್ಲಿ ತಡೆದು ಮಾಡುವ ಮೆರವಣಿಗೆಯ ವ್ಯವಸ್ಥೆ. ನಮ್ಮ ಕಿವಿಗಳ ಶಬ್ದ ಸಹನೆಯ ವ್ಯಾಪ್ತಿ 0-130 ಡೆಸಿಬೆಲ್. 0-40 ಕಿವಿಗೆ ನೆಮ್ಮದಿಯ ಅನುಭವ ನೀಡಿದರೆ 40-60 ಗದ್ದಲ, 60-100 ಬಹಳ ಗದ್ದಲ. ಇದರಿಂದ ಹೆಚ್ಚಾದರೆ ಅಸಹನೀಯ. ಡಿಜೆ, ರಾಕ್ ಸಂಗೀತಗಳ ಶಬ್ದ ಪ್ರಮಾಣ 100ಕ್ಕಿಂತ ಹೆಚ್ಚು ಡೆಸಿಬೆಲ್. ಹಬ್ಬಕ್ಕೆ ಮಾತ್ರ ಆಗುವ ಈ ಘನಘೋರ ಶಬ್ದ ಸಂಗೀತವನ್ನು ಮತ್ತು ಮೆರವಣಿಗೆಯನ್ನು ಸಹಿಸಬೇಕು ಎಂಬ ವಾದವನ್ನು ಮಂಡಿಸುವವರಿದ್ದಾರೆ!. ಊರ ಹಬ್ಬ ಎಂದು ವಾರಗಟ್ಟಳೆ ರಾತ್ರಿ ಹಗಲು ಧ್ವನಿವರ್ಧಕ ಕಿರಿಚುತ್ತಿರುತ್ತದೆ. ಸಾರ್ವಜನಿಕವಾದರೂ ಜನಸಂದಣಿಯನ್ನು ನೋಡಿಕೊಂಡು ಮೈಕಿನ ಶಬ್ದ ಮಟ್ಟವನ್ನು ನಿಯಂತ್ರಿಸಬೇಕಾಗುತ್ತದೆ. ದೇವಸ್ಥಾನದ ಹಬ್ಬ ಆಚರಣೆಗಳಲ್ಲಿ ಭಾಗವಹಿಸುವ ಆಸಕ್ತಿ ಉಳ್ಳವರು ಸಾರ್ವಜನಿಕ ವಲಯಕ್ಕೆ ಬರುತ್ತಾರೆ. ಹಾಗೆ ಬಾರದವರೂ ಪರೋಕ್ಷವಾಗಿಯಾದರೂ ಭಾಗವಹಿಸಲೇ ಬೇಕೆಂದು ನಿಂತ ನೆಲವನ್ನೇ ನಡುಗಿಸುವ, ಎದೆಯ ಮೇಲೆ ಒದ್ದಂತೆ, ಮಕ್ಕಳ ಶ್ರವಣೇಂದ್ರಿಯ ಸಮಸ್ಯೆ ಮತ್ತು ಜನರ ಕಿವುಡುತನಕ್ಕೆ ಕಾರಣವಾಗುವ ತಾರಕದಲ್ಲಿ ಕಿರಿಚುವ ಮೈಕ್ ವ್ಯವಸ್ಥೆ ಮಾಡಿದರೆ ಅದು ಸಾರ್ವಜನಿಕ ವಲಯದ ಹಬ್ಬಕ್ಕೆ ಭೂಷಣವಲ್ಲ. ಯಾಕೆ ಇಷ್ಟು ದೊಡ್ಡದಾಗಿ ಮೈಕ್ ಇಡುತ್ತೀರಿ ಎಂದು ಕೇಳಿದರೆ ಸಾಕು, ಹೀಗೆ ಕೇಳಿದ್ದೇ ಜಗಳಕ್ಕೆ ಕಾರಣವಾಗುತ್ತದೆ. ‘‘ಇದು ಸಾರ್ವಜನಿಕ ಕಾರ್ಯಕ್ರಮ, ನಿಮ್ಮ ಮನೆಯದ್ದಲ್ಲ. ಸೌಂಡ್ ಪ್ರಮಾಣ ಎಷ್ಟಿರಬೇಕು ನಮಗೆ ಗೊತ್ತಿದೆ. ನಿಮಗೆ ಕೇಳುವುದಕ್ಕೆ ತೊಂದರೆಯಾದರೆ ಕಿವಿ ಮುಚ್ಚಿಕೊಳ್ಳಿ. ಸಾರ್ವಜನಿಕ ವಲಯದ ಉಸಾಬರಿಗೆ ಬರಬೇಡಿ’’ ಎಂದು ಧಮಕಿಹಾಕಿದ ಪ್ರಸಂಗಗಳನ್ನು ನಾವು ನೋಡುತ್ತೇವೆ. ಜಗಳ ಬೇಡ ಎಂದು ಶಬ್ದದ ಭರಾಟೆಯನ್ನು ಸಹಿಸಿಕೊಂಡು ಅಥವಾ ಮನಸ್ಸಿನೊಳಗೆ ಶಪಿಸುತ್ತಾ ಸುಮ್ಮನಾಗುತ್ತಾರೆ. ವಿನಂತಿ ಮಾಡಿದರೆ ದೌರ್ಬಲ್ಯ ಎಂದು ತಿಳಿಯುತ್ತಾರೆ. ಪ್ರಶ್ನಿಸಿದರೆ ಸಂಘರ್ಷಕ್ಕೆ ಕಾರಣವಾಗಿ ಜಗಳವಾಗುತ್ತದೆ. ಮೈಕಿನ ಶಬ್ದದ ಪ್ರಮಾಣ ಯಾವ ಮಟ್ಟದಲ್ಲಿ ಇರಬೇಕು ಎಂಬ ಜ್ಞಾನ ಕೆಲವು ಮೈಕ್ ನಿರ್ವಾಹಕರಿಗೆ ಇರುವುದಿಲ್ಲ. ಕಿವುಡರಂತೆ ಇರುತ್ತಾರೆ. ಕೆಲವು ಸಂದರ್ಭಗಳಲ್ಲಿ ಯಕ್ಷಗಾನದಲ್ಲಿಯೂ ಇದೇ ಸಮಸ್ಯೆ ಇದೆ. ತೆರೆದ ಬಯಲು, ಮುಚ್ಚಿದ ಸಭಾಂಗಣ, ಸಣ್ಣ ಕೂಟ, ಬೃಹತ್ ಪ್ರೇಕ್ಷಕ ವರ್ಗ ಇಂತಹ ಕಡೆಗಳಲ್ಲಿ ಮಾಡಬೇಕಾದ ಮೈಕ್ ವ್ಯವಸ್ಥೆ ಒಂದೇ ಆಗಿರುವುದಿಲ್ಲ. ಸಾರ್ವಜನಿಕ ಹಬ್ಬಗಳಲ್ಲಿಯೂ ಇದೇ ಸಮಸ್ಯೆ. ಪಿಸುಗುಟ್ಟುವಿಕೆ, ಅಟ್ಟಹಾಸ, ಮಾತು, ಸಂಭಾಷಣೆ, ಹಾಡು, ವಾಹನಗಳ ಶಬ್ದ, ರೆಸ್ಟೋರೆಂಟ್ ಗದ್ದಲ, ಮಗುವಿನ ಅಳು, ಸಂಗೀತ ಕಚೇರಿ, ಸಾಮಾನ್ಯ ಉಸಿರಾಟ, ವಾಸ್ತವ್ಯದ ಜಾಗ, ಕಲ್ಲು ಕೊರೆಯುವ ಯಂತ್ರ, ಮರ ಸೀಳುವ ಯಂತ್ರ ಇತ್ಯಾದಿ ಇತ್ಯಾದಿ ಕಡೆಗಳಲ್ಲಿ ಹೊರಡುವ ಶಬ್ದಗಳ ಪ್ರಮಾಣವನ್ನು ವಿಜ್ಞಾನದಲ್ಲಿ ಅಳೆಯುವ ಕ್ರಮ ಇದೆ (ಡೆಸಿಬೆಲ್). ಕಾರ್ಖಾನೆ, ವಿಮಾನ ನಿಲ್ದಾಣ, ಸುಡುಮದ್ದು ಸುಡುವಾಗ, ರಾಕ್ ಮ್ಯೂಸಿಕ್ ಇಂತಹ ಕಡೆಗಳಲ್ಲಿ ಕಿವಿಗಳನ್ನು ಕಿವಿಪಟ್ಟಿಕೆಗಳಿಂದ ಮುಚ್ಚಿಕೊಳ್ಳುವುದನ್ನು ನೋಡಬಹುದು. ಅತಿಯಾದ ಶಬ್ದವನ್ನು ದೀರ್ಘ ಕಾಲ ಕೇಳುವುದು ಕೂಡ ಅಪಾಯಕಾರಿ. ಅತಿ ಹೆಚ್ಚಿನ ಮಟ್ಟದ ಶಬ್ದ ಕಿವುಡುತನಕ್ಕೆ ಕಾರಣವಾಗುತ್ತದೆ. ಎಷ್ಟು ದೂರದಿಂದ ಎಷ್ಟು ಡೆಸಿಬೆಲ್ ಶಬ್ದವನ್ನು ಕೇಳುತ್ತೀರಿ ಎಂಬುದು ಕೂಡ ಮುಖ್ಯ. ಹೀಗೆ ಅತಿಯಾದ ಶಬ್ದ ಉಂಟಾದರೆ ಅದನ್ನು ಶಬ್ದ ಮಾಲಿನ್ಯ ಎಂದೇ ಪರಿಗಣಿಸಲಾಗಿದೆ. ಜನರ ಸ್ವಾಸ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಅತಿ ಪ್ರಮಾಣದ ಶಬ್ದದ ಬಗ್ಗೆ ಸಾರ್ವಜನಿಕ ಸಮಾರಂಭಗಳಲ್ಲಿ ಸೂಕ್ತ ಗಮನ ಹರಿಸುವ ಅಗತ್ಯವಿದೆ. ಸಾಮಾಜಿಕ ಸ್ವಾಸ್ಥ್ಯ ಎಂಬ ಆಶಯ ಹೊತ್ತು ನಡೆಯುವ ಹಬ್ಬಗಳು ಅದಕ್ಕೆ ಪ್ರೇರಕವಾಗಬೇಕೇ ಹೊರತು ಮಾರಕವಾಗಬಾರದು. ಸಾರ್ವಜನಿಕ ವಲಯದ ಕಾರ್ಯಕರ್ತರು ಇಂತಹ ವಿಷಯಗಳಲ್ಲಿ ಹೆಚ್ಚು ಸಂವೇದನಾ ಶೀಲರಾಗಿರಬೇಕಾದುದು ಅಗತ್ಯ.

ಅಂತರಂಗ ಬಹಿರಂಗ ಶುದ್ಧಿಯ ಬಗ್ಗೆ ಬಸವಣ್ಣನವರು ಸೊಗಸಾದ ನಿರ್ವಚನವನ್ನು ಮಾಡಿದ್ದಾರೆ. ‘‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ’’. ಈ ಶುದ್ಧಿಯ ಮಾತು ನಮ್ಮ ಖಾಸಗಿ ಮತ್ತು ಸಾರ್ವಜನಿಕ ವಲಯದ ಹಬ್ಬಗಳಿಗೆ ಸರಿಯಾಗಿ ಅನ್ವಯವಾಗುತ್ತದೆ. ಕಳವು ಮಾಡಿದ ದುಡ್ಡಿನಿಂದ ಹಬ್ಬ ಬೇಡ. ಹಿಂಸೆಯ ಕೈಗಳ ದಕ್ಷಿಣೆ ಬೇಡ. ಸುಳ್ಳು ಕತೆಗಳ ಪ್ರವಚನ ಬೇಡ. ಇತರರನ್ನು ದ್ವೇಷಿಸಲು ಹಬ್ಬ ಕಲಿಸುವುದಿಲ್ಲ. ಹಬ್ಬಗಳು ಇರುವುದು ಪ್ರತಿಷ್ಠೆಗಾಗಿ ಅಲ್ಲ. ಕೆಲವರನ್ನು ಅವಮಾನಿಸುವುದು ಹಬ್ಬಗಳ ಉದ್ದೇಶ ಅಲ್ಲ. ಇದುವೇ ಖಾಸಗಿ ಶುದ್ಧಿ ಇದುವೇ ಸಾರ್ವಜನಿಕ ಶುದ್ಧಿ. ಸದ್ಗುಣ, ಸದಾಚಾರ, ಸದ್ಭಾವ, ಸದಾಶಯಗಳ ಜನರ ಜೀವನ ಮೌಲ್ಯ ಮತ್ತು ಸಂಪನ್ನ ಸಮಾಜದ ನೈತಿಕತೆ ಕುಸಿಯದಂತೆ ನಿರಂತರ ಪುನಶ್ಚೇತನ ನೀಡುವುದೇ ಹಬ್ಬಗಳು ಮತ್ತು ಆಚರಣೆಗಳ ಉದ್ದೇಶ.

share
ಡಾ. ಕೆ. ಚಿನ್ನಪ್ಪ ಗೌಡ
ಡಾ. ಕೆ. ಚಿನ್ನಪ್ಪ ಗೌಡ
Next Story
X