Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಗುಜರಾತ್‌ನಲ್ಲೇ ಬಿಜೆಪಿ ಸೋಲಿಸಲು ರಾಹುಲ್...

ಗುಜರಾತ್‌ನಲ್ಲೇ ಬಿಜೆಪಿ ಸೋಲಿಸಲು ರಾಹುಲ್ ಗಾಂಧಿ ಯೋಜನೆಯೇನು?

ವಿನಯ್ ಕೆ.ವಿನಯ್ ಕೆ.9 July 2024 2:33 PM IST
share
ಗುಜರಾತ್‌ನಲ್ಲೇ ಬಿಜೆಪಿ ಸೋಲಿಸಲು ರಾಹುಲ್ ಗಾಂಧಿ ಯೋಜನೆಯೇನು?
ರಾಹುಲ್ ಹೇಳಿರುವುದು ನಿಜವಾಗಬೇಕೆಂದರೆ, ಅದಕ್ಕಾಗಿ ಹಾಕಬೇಕಿರುವ ಶ್ರಮ ಸಣ್ಣದಲ್ಲ. ಅದಕ್ಕಾಗಿ ರೂಪಿಸಬೇಕಿರುವ ರಣತಂತ್ರ ಕೂಡ ಅಸಾಧಾರಣವಾಗಿರಬೇಕಾಗುತ್ತದೆ. ಯಾಕೆಂದರೆ ಈ ದೇಶದ ರಾಜಕಾರಣದಲ್ಲಿ ಧರ್ಮ ಅಥವಾ ಜಾತಿ ಎನ್ನುವುದು ಮತಗಳ ಧ್ರುವೀಕರಣದಲ್ಲಿ ಪಾತ್ರ ವಹಿಸುತ್ತದೆ. ಹೀಗಿರುವಾಗ, ಸರಕಾರವನ್ನು ಬದಲಿಸುವುದಕ್ಕೆ ಹೊಸ ರಾಜಕೀಯ ನಡೆಯ ಅಗತ್ಯ ಕಾಣಿಸುತ್ತಿದೆಯೆ? ಮತ್ತು ಅಂಥದೊಂದು ಹಾದಿಯಲ್ಲಿ ರಾಹುಲ್ ಸಾಗುತ್ತಿದ್ದಾರೆಯೇ?

ಗುಜರಾತ್‌ನ ಅಹಮದಾಬಾದ್‌ನಲ್ಲಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿಯಾದ ಬಳಿಕ ರಾಹುಲ್ ಗಾಂಧಿ ಅಲ್ಲಿಗೆ ಭೇಟಿ ನೀಡಿ ಗುಜರಾತ್‌ನಲ್ಲಿಯೇ ಬಿಜೆಪಿಯನ್ನು ಸೋಲಿಸುವುದಾಗಿ ಮತ್ತೊಮ್ಮೆ ಸವಾಲು ಹಾಕಿದ್ದಾರೆ.

2027ರಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಹೀಗೆ ಚುನಾವಣೆಗೆ ಇನ್ನೂ ಮೂರು ವರ್ಷ ಇರುವಾಗಲೇ ಅವರು ಗುಜರಾತ್‌ನಲ್ಲಿ ಬಿಜೆಪಿಯನ್ನು ಸೋಲಿಸುವ ಮಾತಾಡುತ್ತಿರುವುದು ಗಮನ ಸೆಳೆಯುತ್ತಿದೆ.

ಲೋಕಸಭೆಯಲ್ಲೂ ಈಚೆಗೆ ಅವರು ಈ ಮಾತನ್ನು ಹೇಳಿದ್ದರು. ಅದಾದ ಬಳಿಕ ಮೊನ್ನೆ ಅಹಮದಾಬಾದ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡುವಾಗಲೂ ಈ ವಿಶ್ವಾಸವನ್ನು ಅವರು ಮತ್ತೆ ವ್ಯಕ್ತಪಡಿಸಿದ್ದಾರೆ.

‘‘ಬಿಜೆಪಿಯವರು ನಮಗೆ ಬೆದರಿಕೆ ಹಾಕಿದ್ದಾರೆ ಮತ್ತು ನಮ್ಮ ಕಚೇರಿಗೆ ಹಾನಿ ಮಾಡಿದ್ದಾರೆ. ನಾವು ಅವರ ಸರಕಾರವನ್ನೇ ತೆಗೆಯಲು ಹೊರಟಿದ್ದೇವೆ’’ ಎಂದು ಆರ್ಭಟಿಸಿದ್ದಾರೆ. ‘‘ಗುಜರಾತ್‌ನಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತದೆ ಮತ್ತು ನರೇಂದ್ರ ಮೋದಿಯನ್ನು ಸೋಲಿಸುತ್ತದೆ.

ಇದನ್ನು ಬರೆದಿಟ್ಟುಕೊಳ್ಳಿ. ನಾವು ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದಂತೆ ಗುಜರಾತ್‌ನಲ್ಲೂ ಸೋಲಿಸುತ್ತೇವೆ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಹಾಗಾದರೆ ರಾಹುಲ್ ರಣನೀತಿ ಏನಿರಬಹುದು?

ಗುಜರಾತ್‌ನಲ್ಲಿ ಬಿಜೆಪಿ ಸತತ 7 ಬಾರಿ ಚುನಾವಣೆ ಗೆದ್ದಿದೆ.

2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ 182ರಲ್ಲಿ 156 ಸೀಟುಗಳನ್ನು ಗೆದ್ದು ಬಿಜೆಪಿ ದಾಖಲೆ ಬರೆದಿದೆ.

1985ರಲ್ಲಿ ಮಾಧವ ಸಿಂಗ್ ಸೋಲಂಕಿ ನಾಯಕತ್ವದಲ್ಲಿ 149 ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್ ದಾಖಲೆಯನ್ನು ಬಿಜೆಪಿ ತನ್ನ ಸತತ 7ನೇ ಸಲದ ಗೆಲುವಿನಲ್ಲಿ ಮುರಿದಿತ್ತು.

ಮುಂದಿನ ಚುನಾವಣೆ ಇನ್ನೂ ಬಹಳ ದೂರವಿದೆ ಮತ್ತು ಆ ಹೊತ್ತಿಗೆ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ದಶಕಗಳೇ ದಾಟಿರುತ್ತವೆ.

ಇದೇ ವೇಳೆ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ತೀರಾ ಕಳಪೆಯಾಗಿತ್ತು ಎಂಬುದೂ ಇಲ್ಲಿ ಗಮನಾರ್ಹ. ಗುಜರಾತ್ ವಿಧಾನಸಭೆಯ 182 ಸೀಟುಗಳ ಪೈಕಿ ಕಾಂಗ್ರೆಸ್ ಗೆದ್ದಿದ್ದು 17 ಸೀಟುಗಳನ್ನು ಮಾತ್ರ. ಗೆದ್ದವರಲ್ಲಿಯೂ 6 ಮಂದಿ ಬಿಜೆಪಿ ಸೇರಿಕೊಂಡುಬಿಟ್ಟಿದ್ದರು.

ಇನ್ನು 2024ರ ಲೋಕಸಭೆ ಚುನಾವಣೆ ಜೊತೆಗೇ ಗುಜರಾತ್ ವಿಧಾನಸಭೆಯ 5 ಸೀಟುಗಳಿಗೆ ಉಪಚುನಾವಣೆ ನಡೆಯಿತು. ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಕಣಕ್ಕಿಳಿದವರು ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿದವರೇ ಆಗಿದ್ದರು. ಅವರಲ್ಲಿ ಒಬ್ಬರಾದ ಅರ್ಜುನ್ ಮೊಡವಾಡಿಯಾ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದವರು. ಗುಜರಾತ್ ವಿಧಾನಸಭೆಯ ವಿಪಕ್ಷ ನಾಯಕರೂ ಆಗಿದ್ದರು.

ಒಂದರ್ಥದಲ್ಲಿ ಬಿಜೆಪಿ ಬೇರೆ ಪಕ್ಷಗಳ ನಾಯಕರನ್ನು ಸೆಳೆದು ಶಾಸಕರನ್ನಾಗಿಸುವ ಫ್ಯಾಕ್ಟರಿಯಂತಾಗಿರುವುದು ಹೊಸದಲ್ಲ ಮತ್ತದು ಗುಜರಾತ್‌ನಲ್ಲಿಯೂ ನಡೆಯುತ್ತಿದೆ.

ಹೀಗಿರುವಾಗ, ತೀರಾ ಕಳಪೆ ಸಾಧನೆ ತೋರಿಸಿರುವ ಕಾಂಗ್ರೆಸನ್ನು ಬಿಜೆಪಿಯನ್ನು ಸೋಲಿಸುವ ಮಟ್ಟಕ್ಕೆ ಕೊಂಡೊಯ್ಯಬೇಕೆಂದರೆ ರಾಜ್ಯದಲ್ಲಿ ಅದರ ಸ್ಥಿತಿಯನ್ನು ಸಂಪೂರ್ಣವಾಗಿ ಸುಧಾರಿಸಬೇಕಾಗುತ್ತದೆ.

ಗೆಲ್ಲಿಸುವ ತಯಾರಿಯ ಮೊದಲ ಹೆಜ್ಜೆಯಾಗಿ, ಬಿಜೆಪಿಗೆ ಹೋಗಿ ಶಾಸಕರಾಗುವ ನಾಯಕರನ್ನು ಬೆಳೆಸಲು ನರ್ಸರಿಯಂತೆ ಕಾಂಗ್ರೆಸ್ ಕೆಲಸ ಮಾಡುವುದನ್ನು ತಡೆಯಬೇಕಾಗಿದೆ.

ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಇತಿಹಾಸ ಆಡಿಕೊಳ್ಳುವ ರೀತಿಯಲ್ಲಿಯೇ ಇದ್ದರೂ, ಕಾಂಗ್ರೆಸ್‌ನ ಬಬ್ಬರ್ ಶೇರ್‌ಗಳು ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂಬ ಆಶಾವಾದವನ್ನು ರಾಹುಲ್ ವ್ಯಕ್ತಪಡಿಸುತ್ತಿರುವುದು ಆ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುವ ಉದ್ದೇಶದ್ದೂ ಆಗಿದೆ. ಆದರೆ ಬಬ್ಬರ್ ಶೇರ್‌ಗಳು ಅಂದರೆ ಹುಲಿಗಳು ಕುರಿಗಳ ಹಾಗೆ ಹೋಗಿ ಬಿಜೆಪಿಯನ್ನು ಸೇರಿಕೊಳ್ಳಬಾರದು ಅಷ್ಟೆ.

ಈಗ ಇರುವುದು, ರಾಹುಲ್ ಗಾಂಧಿಯವರ ನಾಯಕತ್ವ ಇಂಥ ಎಲ್ಲದಕ್ಕೂ ಮದ್ದಾಗಬಲ್ಲುದೆ ಎಂಬ ಪ್ರಶ್ನೆ. ಗುಜರಾತ್‌ನಲ್ಲಿ ಬಿಜೆಪಿಯನ್ನು ಸೋಲಿಸುವ ಅವರ ಸವಾಲಿನ ಹಿನ್ನೆಲೆಯಲ್ಲಿ ಈ ಪ್ರಶ್ನೆ ಕೇಳಿಕೊಳ್ಳಬೇಕಾಗುತ್ತದೆ.

ಹಾಥರಸ್ ದುರಂತದ ಬಗ್ಗೆ ಮೋದಿ ಸಂತಾಪ ಸೂಚಿಸುವುದರಲ್ಲೇ ಇದ್ದಾಗ ರಾಹುಲ್ ಅಲ್ಲಿಗೆ ಭೇಟಿ ನೀಡಿ ಸಂತ್ರಸ್ತರನ್ನು ಮಾತಾಡಿಸಿದ್ದಾಗಿದೆ.

ಮಣಿಪುರದ ಬಗ್ಗೆ ಮೋದಿ ಮಾತನ್ನೇ ಆಡದಿರುವಾಗ, ಈ ಹಿಂದೆ ತೀರಾ ಕಷ್ಟದ ಸ್ಥಿತಿಯಲ್ಲೂ ಮಣಿಪುರಕ್ಕೆ ಹೋಗಿ ಅಲ್ಲಿನ ನೊಂದ ಜನರನ್ನು ಕಂಡು ಮಾತಾಡಿಸಿದ್ದ ರಾಹುಲ್ ಈಗ ಮತ್ತೆ ಅಲ್ಲಿಗೆ ಹೋಗುತ್ತಿದ್ದಾರೆ.

ಇವೆಲ್ಲವೂ ಜನರ ದನಿಯಾಗುವ ವಿಪಕ್ಷದ ಉತ್ಸಾಹ ಮತ್ತು ದೃಢತೆಯನ್ನು ಖಂಡಿತವಾಗಿಯೂ ಸೂಚಿಸುವ ಸಂಗತಿಗಳೇ ಆಗಿವೆ.

ಹತ್ತು ವರ್ಷಗಳಿಂದ ವಿಪಕ್ಷದ ಅಸ್ತಿತ್ವವೇ ಇಲ್ಲದಂತೆ ಮಾಡಲಾಗಿತ್ತು. ಹಾಗೆ ಜನರ ಪರ ದನಿಯೇ ಸಂತ್ತಿನೊಳಗೆ ಇಲ್ಲದಿರುವ ಹೊತ್ತಿನಲ್ಲಿ, ಜನರ ಹೋರಾಟಗಳನ್ನು ದಮನಿಸುವ ಕೆಲಸವೂ ಸರಕಾರದಿಂದ ಸತತವಾಗಿ ನಡೆದಿತ್ತು. ಆದರೀಗ ರಾಹುಲ್ ವಿಪಕ್ಷ ನಾಯಕರಾಗುತ್ತಿದ್ದಂತೆ, ಪ್ರತೀ ವಿಷಯವನ್ನೂ ಎತ್ತಿ ಮಾತಾಡುವ ಮೂಲಕ ಜನರ ದನಿ ಸಂಸತ್ತಿನಲ್ಲಿ ಮೊಳಗುವಂತಾಗಿದೆ. ಪ್ರತೀ ಹಂತದಲ್ಲೂ ಸರಕಾರವನ್ನು ಹಿಡಿದು ನಿಲ್ಲಿಸಿ ಕೇಳುವ ಪ್ರತಿಶಕ್ತಿ ಜನರ ಪರವಾಗಿ ಸಂಸತ್ತಿನಲ್ಲಿ ಇರುವಂತಾಗಿದೆ.

ಗಮನಿಸಬೇಕಿರುವುದೇನೆಂದರೆ, ಪ್ರಧಾನಿಯಾಗಿ ಮತ್ತೆ ಮೋದಿಯನ್ನು ಜನರು ಬಯಸಿರಲಿಲ್ಲ ಎಂಬುದು. ಅವರ ನಿರೀಕ್ಷೆ ರಾಹುಲ್ ಅವರ ಕಡೆಗಿತ್ತು.

ಅದಾಗದೇ ಹೋದರೂ, ಬಿಜೆಪಿಯ ಅಹಂಕಾರವನ್ನು ಮುರಿದಿರುವ ಕಾಂಗ್ರೆಸ್, ತಾನು ಏನು ಮಾಡಿದರೂ ನಡೆಯುತ್ತದೆ ಎಂದು ಬಿಜೆಪಿ ಮನಬಂದಂತೆ ಆಡಲಾರದ ಹಾಗೆ ಈಗ ಎದುರು ನಿಂತಿದೆ. ಗುಜರಾತ್ ವಿಚಾರವಾಗಿ ಈಗ ರಾಹುಲ್ ಮಾತಾಡಿರುವುದು ಕೂಡ ಬಿಜೆಪಿಗೆ ಸವಾಲಾಗುತ್ತಲೇ ಸಾಗುವ ಕಾಂಗ್ರೆಸ್ ನಡೆಯ ಭಾಗವೇ ಆಗಿರುವಂತಿದೆ.

ಆದರೆ ರಾಹುಲ್ ಹೇಳಿರುವುದು ನಿಜವಾಗಬೇಕೆಂದರೆ, ಅದಕ್ಕಾಗಿ ಹಾಕಬೇಕಿರುವ ಶ್ರಮ ಸಣ್ಣದಲ್ಲ. ಅದಕ್ಕಾಗಿ ರೂಪಿಸಬೇಕಿರುವ ರಣತಂತ್ರ ಕೂಡ ಅಸಾಧಾರಣವಾಗಿರಬೇಕಾಗುತ್ತದೆ. ಯಾಕೆಂದರೆ ಈ ದೇಶದ ರಾಜಕಾರಣದಲ್ಲಿ ಧರ್ಮ ಅಥವಾ ಜಾತಿ ಎನ್ನುವುದು ಮತಗಳ ಧ್ರುವೀಕರಣದಲ್ಲಿ ಪಾತ್ರ ವಹಿಸುತ್ತದೆ. ಹೀಗಿರುವಾಗ, ಸರಕಾರವನ್ನು ಬದಲಿಸುವುದಕ್ಕೆ ಹೊಸ ರಾಜಕೀಯ ನಡೆಯ ಅಗತ್ಯ ಕಾಣಿಸುತ್ತಿದೆಯೆ? ಮತ್ತು ಅಂಥದೊಂದು ಹಾದಿಯಲ್ಲಿ ರಾಹುಲ್ ಸಾಗುತ್ತಿದ್ದಾರೆಯೇ? ಅವರು ಕಾರ್ಮಿಕರ ಜೊತೆ ಬೆರೆತು ಕಷ್ಟ ಆಲಿಸುವುದರಲ್ಲಿ, ಹಾಥರಸ್ ಸಂತ್ರಸ್ತರ ನೋವಿಗೆ ಸ್ಪಂದಿಸುತ್ತಿರುವುದರಲ್ಲಿ ಆ ನಡೆ ಕಾಣುತ್ತಿದೆಯೇ?

ಗುಜರಾತಿನಲ್ಲಿ ಮಾತ್ರವಲ್ಲ, ಬಹುತೇಕ ರಾಜ್ಯಗಳಲ್ಲಿ ಹೇಗೆಲ್ಲ ಬಿಜೆಪಿಯ ವಿರುದ್ಧ ಪಕ್ಷವನ್ನು ಮರುಸಂಘಟಿಸುವ ಅಗತ್ಯವಿದೆ ಮತ್ತು ಆ ಸವಾಲನ್ನು ರಾಹುಲ್ ಹೇಗೆ ನಿಭಾಯಿಸುತ್ತಾರೆ?

ಅದಕ್ಕಾಗಿ ಬೇಕಿರುವುದು ದಿಟ್ಟತನ ಮತ್ತು ದೂರದೃಷ್ಟಿ. ಪಕ್ಷವನ್ನು ಮರುಸಂಘಟಿಸುವ ವಿಚಾರದಲ್ಲಿ ರಾಹುಲ್ ಅವರು ಕುದುರೆಗಳ ಉದಾಹರಣೆ ಕೊಟ್ಟು ಮಾತಾಡಿರುವುದು ಕೂಡ ಇದೇ ಹಿನ್ನೆಲೆಯಲ್ಲಿ.

‘‘ರೇಸ್ ಕುದುರೆಗಳು ಮತ್ತು ಮದುವೆ ಕುದುರೆಗಳ ಜಾಗ ಅದಲು ಬದಲಾಗದಂತೆ ನೋಡಿಕೊಳ್ಳಬೇಕಾಗಿರುವ ಜರೂರು ಗುಜರಾತಿನಲ್ಲಿ ಬಹಳ ಇದೆ’’ ಎಂದಿದ್ದಾರೆ ಅವರು.

ಆದರೆ ಇಲ್ಲಿಗೆ ಸಂಘಟನೆಯ ಸವಾಲೇನೂ ಮುಗಿದುಬಿಡುವುದಿಲ್ಲ.

ಜಾತಿ ಧ್ರುವೀಕರಣ ಮತ್ತು ಸಾಂಪ್ರದಾಯಿಕ ಧ್ರುವೀಕರಣದ ಮೇಲೆ ದೇಶದ ರಾಜಕೀಯ ಬಹಳಷ್ಟು ಮಟ್ಟಿಗೆ ಆಧರಿಸಿದೆ ಎಂಬುದು ವಾಸ್ತವ.

ಇದನ್ನು ದಾಟಿ ಕಾಂಗ್ರೆಸ್ ಕೊಂಚ ಮುಂದೆ ಸಾಗಿದೆ ಎಂಬಂತೆ ಕಾಣಿಸುತ್ತಿದೆ. ಆದರೆ, ತನ್ನ ಈಗಿನ ಯಶಸ್ಸನ್ನು ಉಳಿಸಿ ಹೆಚ್ಚಿಸಲು ಅದು ನಿರಂತರ ಕಾರ್ಯಯೋಜನೆಯಲ್ಲಿ ತೊಡಗಿರಬೇಕಿದೆ ಮತ್ತು ಶ್ರಮ ವಹಿಸಬೇಕಿದೆ.

share
ವಿನಯ್ ಕೆ.
ವಿನಯ್ ಕೆ.
Next Story
X