Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದ್ವಂದ್ವ ವಿದೇಶ ನೀತಿಯಿಂದ ದೇಶಕ್ಕಾದ...

ದ್ವಂದ್ವ ವಿದೇಶ ನೀತಿಯಿಂದ ದೇಶಕ್ಕಾದ ಪರಿಣಾಮವೇನು?

ಉದಯರಾಜ್ ಆಳ್ವಾ, ಕೃಷ್ಣಾಪುರಉದಯರಾಜ್ ಆಳ್ವಾ, ಕೃಷ್ಣಾಪುರ2 July 2025 11:57 AM IST
share
ದ್ವಂದ್ವ ವಿದೇಶ ನೀತಿಯಿಂದ ದೇಶಕ್ಕಾದ ಪರಿಣಾಮವೇನು?

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಕಾಲದಿಂದಲೂ, ಅಂದರೆ ನೆಹರೂ ಕಾಲದಿಂದಲೂ ರಶ್ಯ (ಸೋವಿಯತ್ ಒಕ್ಕೂಟ) ಮತ್ತು ಭಾರತವು ವಿದೇಶ ನೀತಿ ಮತ್ತು ಆರ್ಥಿಕ ನೀತಿಯಲ್ಲಿ ಒಬ್ಬರಿಗೊಬ್ಬರು ಅನ್ಯೋನ್ಯವಾಗಿ ಸಹಕಾರದಿಂದ ಇದ್ದವು. ಆದರೆ ಇತ್ತೀಚಿನ 3-4 ವರ್ಷಗಳಿಂದ ರಶ್ಯದ ಜತೆಗಿನ ಭಾರತದ ಸಂಬಂಧ ಶಿಥಿಲಗೊಂಡಿದೆ. ಇದಕ್ಕೆ ಕಾರಣ ಭಾರತದ ಆಳುವ ಪಕ್ಷದವರು ಕೆಲವು ಗುಜರಾತಿ ಉದ್ಯಮಿಗಳನ್ನು ಮುಂದಿಟ್ಟುಕೊಂಡು ತೋರಿಸುತ್ತಿರುವ ಪಕ್ಕಾ ವ್ಯಾಪಾರಿ ಬುದ್ಧಿ ಮತ್ತು ಸಮಯಸಾಧಕತನ. ಉದಾಹರಣೆಗೆ ಮೂರು ವರ್ಷಗಳ ಹಿಂದೆ ರಶ್ಯವು ನಮ್ಮ ದೇಶಕ್ಕೆ ಶೇ.30 ಡಿಸ್ಕೌಂಟ್‌ನಲ್ಲಿ ಭಾರೀ ಪ್ರಮಾಣದಲ್ಲಿ ಕಚ್ಚಾ ತೈಲ ಒದಗಿಸಿತ್ತು. ಅದು ಭಾರತ ಮತ್ತು ರಶ್ಯ ಸರಕಾರಗಳ ನಡುವಿನ ನೇರ ಒಪ್ಪಂದವಾಗಿತ್ತು. ಈ ಭಾರೀ ಡಿಸ್ಕೌಂಟಿನ ಲಾಭ ಕೊನೆಗೆ ಭಾರತದ ಸಮಸ್ತ ನಾಗರಿಕರಿಗೆ ಸಿಗಬೇಕಿತ್ತು. ಅಂದರೆ ನಾವು ಪೆಟ್ರೋಲ್ ಬಂಕ್‌ನಲ್ಲಿ ನಮ್ಮ ಸ್ಕೂಟರ್‌ಗೆ ಪೆಟ್ರೋಲ್ ತುಂಬಿಸುವಾಗ ನಮಗೆ ಶೇ. 30 ಕಡಿಮೆ ಬಿಲ್ ಆಗಬೇಕಿತ್ತು ಅಲ್ಲವೇ? ಆದರೆ ಮೋದಿ ಸರಕಾರವು ಆ ರಶ್ಯದ ಕಚ್ಚಾ ತೈಲವನ್ನು ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳಿಗೆ ಒದಗಿಸುವ ಬದಲು ಮುಕೇಶ್ ಅಂಬಾನಿಯ ರಿಲಯನ್ಸ್ ರಿಫೈನರಿಗೆ ನೇರವಾಗಿ ಸಾಗಿಸಿತು. ರಶ್ಯದ ಡಿಸ್ಕೌಂಟ್‌ನಲ್ಲಿ ಭಾರತೀಯ ಪೆಟ್ರೋಲ್-ಡೀಸೆಲ್ ಗ್ರಾಹಕರಿಗೆ ಒಂದೇ ಒಂದು ರೂಪಾಯಿಯ ಲಾಭವೂ ಸಿಗಲಿಲ್ಲ!

ರಿಲಯನ್ಸ್‌ನವರು ಆ ರಶ್ಯದ ಕಚ್ಚಾತೈಲವನ್ನು ಸಂಸ್ಕರಿಸಿ ಅದರ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರ್ಣ ಬೆಲೆಗೆ ಯೂರೋಪಿಯನ್ ದೇಶಗಳಿಗೆ ಮಾರಾಟ ಮಾಡಿ ತಮ್ಮ ನಿಯಮಿತ ಲಾಭದೊಂದಿಗೆ ರಶ್ಯ ಕೊಟ್ಟಿದ್ದ ಶೇ. 30 ಡಿಸ್ಕೌಂಟಿನ ಮೊತ್ತವಾದ ಬಿಲಿಯನ್ ಗಟ್ಟಲೆ ಡಾಲರ್‌ಗಳನ್ನೂ ತನ್ನ ಜೇಬಿಗಿಳಿಸಿತು. ಇದರ ಅರ್ಥ ಭಾರತೀಯ ಜನತೆಗೆಂದು ರಶ್ಯ ಕೊಟ್ಟಿದ್ದ ಶೇ. 30 ಡಿಸ್ಕೌಂಟ್ ಕೊನೆಗೆ ಹೋಗಿದ್ದು ಅಂಬಾನಿಯ ಕಂಪೆನಿಗೆ ಎನ್ನಲಾಗುತ್ತಿದೆ. (ಭಾರತದ ವಿರೋಧ ಪಕ್ಷಗಳು ಇಂತಹ ದೊಡ್ಡ ಮೋಸದ ಬಗ್ಗೆ ಒಂದೇ ಒಂದಕ್ಷರ ಆಕ್ಷೇಪವನ್ನೂ ಎತ್ತದಿರುವುದು ದೊಡ್ಡ ತಪ್ಪು) ಭಾರತದ ಸಾಮಾನ್ಯ ಜನರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಶ್ಯ ಕೊಟ್ಟಿದ್ದ ಡಿಸ್ಕೌಂಟನ್ನು ಭಾರತದ ಮೋದಿ ಸರಕಾರ ಒಬ್ಬ ದೊಡ್ಡ ಖಾಸಗಿ ಉದ್ಯಮಿಗೆ ಕೊಟ್ಟಿದ್ದು ಕಂಡು ರಶ್ಯ ಸರಕಾರ ತೀವ್ರ ಅಸಮಾಧಾನಗೊಂಡಿತ್ತು. ಹಾಗಾಗಿ ರಶ್ಯವು ಭಾರತದ ಕಚ್ಚಾ ತೈಲ ಖರೀದಿಯ ಮೇಲೆ ಶೇ. 30 ಡಿಸ್ಕೌಂಟನ್ನು ಕೊಡುವುದನ್ನೇ ನಿಲ್ಲಿಸಿಬಿಟ್ಟಿತು. ಭಾರತದ ಸರಕಾರಿ ಸ್ವಾಮಿತ್ವದ ರಿಫೈನರಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಒಎನ್‌ಜಿಸಿ ಇವುಗಳನ್ನು ಮೊದಲಿನಿಂದಲೂ ಮೋದಿ ಸರಕಾರ ನಿರ್ಲಕ್ಷಿಸಿತ್ತು.

ಮೇಲಾಗಿ ಎರಡು ವರ್ಷಗಳಿಂದ ನಡೆಯುತ್ತಿರುವ ರಶ್ಯ-ಉಕ್ರೇನ್ ಯುದ್ಧದ ಕುರಿತೂ ಭಾರತ ಸರಕಾರದ ವಿದೇಶ ನೀತಿಯಲ್ಲಿಯೂ ಯಾವುದೇ ಸ್ಪಷ್ಟತೆ ಇರದಿದ್ದರಿಂದ ರಶ್ಯ-ಉಕ್ರೇನ್ ಎರಡೂ ದೇಶಗಳು ಅಸಮಾಧಾನಗೊಂಡಿದ್ದವು. ಅದರಿಂದಾಗಿ ನಮ್ಮ ಕಾಶ್ಮೀರದ ಪಹಲ್ಗಾಮ್‌ನಲ್ಲಿ ವಿದೇಶಿ ಉಗ್ರರು ನಡೆಸಿದ ಘೋರ ಮಾರಣಹೋಮ ಮತ್ತು ಅದಕ್ಕೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರದ ವಿಷಯದಲ್ಲಿ ರಶ್ಯ ತಟಸ್ಥವಾಗಿ ಉಳಿಯಿತು. ಇತ್ತೀಚೆಗೆ ಚೀನಾದಲ್ಲಿ ನಡೆದ ಹತ್ತು ರಾಷ್ಟ್ರಗಳ ರಕ್ಷಣಾ ಸಚಿವರುಗಳ ಎಸ್‌ಸಿಒ ಮೀಟಿಂಗ್‌ನಲ್ಲಿಯೂ ರಶ್ಯ ಉಳಿದ ಎಂಟು ರಾಷ್ಟ್ರಗಳ ಜತೆ ನಿಂತಿದ್ದರಿಂದ ಭಾರತ ಒಬ್ಬಂಟಿಯಾಯಿತು. ಆಪರೇಷನ್ ಸಿಂಧೂರದ ಕದನ ವಿರಾಮದ ನಂತರ ರಶ್ಯ ದೇಶವು ಪಾಕಿಸ್ತಾನಕ್ಕೆ ದೊಡ್ಡ ಮಟ್ಟದ ಆರ್ಥಿಕ ಸಹಾಯ ಮತ್ತು ತಾಂತ್ರಿಕ ನೆರವು ಒದಗಿಸಿ ಪಾಕ್‌ನಲ್ಲಿ ಬಂದ್ ಬಿದ್ದಿದ್ದ ಕೆಲವು ದೊಡ್ಡ ಉಕ್ಕಿನ ಕಾರ್ಖಾನೆಗಳನ್ನು ಮರುಸ್ಥಾಪಿಸಲು ಒಪ್ಪಂದ ಮಾಡಿಕೊಂಡಿತು.

ಈ ಘಟನೆಗಳೆಲ್ಲಾ ರಶ್ಯ ಸರಕಾರವು ಭಾರತದ ಈಗಿನ ಬಲಪಂಥಿಯ ಸರಕಾರದಿಂದ ಭ್ರಮನಿರಸನ ಹೊಂದಿದೆ ಎಂಬುದಕ್ಕೆ ಪುರಾವೆ ಆಗಿದೆ. ಇರಾನ್-ಇಸ್ರೇಲ್ ಯುದ್ಧದಲ್ಲಿಯೂ ಕದನ ವಿರಾಮದ ನಂತರ ಇರಾನ್ ದೇಶದ ಪರಮೋಚ್ಚ ನಾಯಕರು ಭಾರತದ ಜನತೆಗೆ ಧನ್ಯವಾದ ಅರ್ಪಿಸಿದರೇ ಹೊರತು ಭಾರತ ಸರಕಾರದ ಕುರಿತು ಒಂದಕ್ಷರ ಮಾತಾಡಲಿಲ್ಲ. ಇದು ಭಾರತದ ಬಲಪಂಥಿಯ ಸರಕಾರದ ಇಸ್ರೇಲ್ ಪರ ನೀತಿಯಿಂದಾಗಿ ಇರಾನ್ ಕೂಡಾ ಅಸಂತುಷ್ಟಗೊಂಡಿದೆ ಎಂಬುದಕ್ಕೆ ಸಾಕ್ಷಿ. ಇರಾನ್‌ನ ಚಾಬಹಾರ್ ಬಂದರು ಭಾರತದ ಕೈತಪ್ಪಿ ಅದು ಚೀನಾ ಪಾಲಾಗುತ್ತಿರುವಂತೆ ಕಾಣುತ್ತಿದೆ.

ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಿಂದ ಇರಾನಿಗೆ ರಫ್ತು ಆಗಲು ಸಿದ್ಧವಾಗಿದ್ದ ‘ಒಂದು ಲಕ್ಷ ಟನ್ ಬಾಸ್ಮತಿ ಅಕ್ಕಿ’ ಈಗ ಇರಾನ್-ಇಸ್ರೇಲ್ ಯುದ್ಧದಿಂದಾಗಿ ತಡೆ ಹಿಡಿಯಲಾಗಿದೆ. ಒಂದು ವೇಳೆ ಈ ಅಕ್ಕಿಯನ್ನು ಇರಾನ್ ನಿರಾಕರಿಸಿದರೆ ಭಾರತದ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳ ಲಕ್ಷಾಂತರ ರೈತರು ಸಂಪೂರ್ಣ ದಿವಾಳಿಯಾಗುತ್ತಾರೆ. ಅದು ನಮ್ಮ ದೇಶದ ಗ್ರಾಮೀಣ ಆರ್ಥಿಕತೆಗೆ ಬಹುದೊಡ್ಡ ಹೊಡೆತ ಕೊಡಬಹುದು. ಒಟ್ಟಾರೆ ಭಾರತದ ಮೋದಿ ಸರಕಾರದ ದ್ವಂದ್ವ ವಿದೇಶ ನೀತಿಯಿಂದಾಗಿ ಭಾರತದ ಹಳೆಯ ಮಿತ್ರರೆಲ್ಲಾ ದೂರ ಸರಿಯುತ್ತಿದ್ದಾರೆ, ಆ ಸನ್ನಿವೇಶದಲ್ಲಿ ‘‘ಐ ಸ್ಟಾಂಡ್ ವಿತ್ ಇಸ್ರೇಲ್’’ ಎಂದು ವಾಟ್ಸ್ ಆ್ಯಪ್‌ನಲ್ಲಿ ಅರಚುತ್ತಾ ನೆಟ್ಟಗೆ ನಿಂತುಕೊಳ್ಳಲೂ ಶಕ್ತಿ ಇಲ್ಲದ ಅರೆಸಾಕ್ಷರ ಕೇಸರಿ ಟ್ರೋಲರ್‌ಗಳು ಪಂಜಾಬಿನ ರೈತರಿಗೆ ಯಾವ ರೀತಿ ಸಹಾಯ ಮಾಡಬಲ್ಲರು?

share
ಉದಯರಾಜ್ ಆಳ್ವಾ, ಕೃಷ್ಣಾಪುರ
ಉದಯರಾಜ್ ಆಳ್ವಾ, ಕೃಷ್ಣಾಪುರ
Next Story
X