Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಏನಿದು ಜೆಫ್ರಿ ಎಪ್ಸ್ಟೀನ್ ಲೈಂಗಿಕ...

ಏನಿದು ಜೆಫ್ರಿ ಎಪ್ಸ್ಟೀನ್ ಲೈಂಗಿಕ ಹಗರಣ?

ಫೈಝ್ ವಿಟ್ಲಫೈಝ್ ವಿಟ್ಲ24 Nov 2025 9:56 AM IST
share
ಏನಿದು  ಜೆಫ್ರಿ ಎಪ್ಸ್ಟೀನ್ ಲೈಂಗಿಕ ಹಗರಣ?
ಅಪ್ರಾಪ್ತ ವಯಸ್ಕರ ವೇಶ್ಯಾವಾಟಿಕೆ, ಮಾನವ ಕಳ್ಳ ಸಾಗಾಟ: ಅಂತರ್‌ರಾಷ್ಟ್ರೀಯ ದಿಗ್ಗಜರೇ ಗ್ರಾಹಕರು?

ಜೆಫ್ರಿ ಎಪ್ಸ್ಟೀನ್ ಲೈಂಗಿಕ ಹಗರಣದ ಕುರಿತಾದ ಕಡತಗಳನ್ನು ಬಹಿರಂಗಗೊಳಿಸುವ ನಿರ್ಣಯಕ್ಕೆ ಅಮೆರಿಕ ಸರಕಾರ ಕಡೆಗೂ ಒಪ್ಪಿಕೊಂಡಿದೆ. ಕಳೆದ ಕೆಲವು ತಿಂಗಳುಗಳಿಂದ ಅಮೆರಿಕ ರಾಜಕಾರಣದಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾದ ಪ್ರಮುಖ ಪ್ರಕರಣವಿದು.

ಎಪ್ಸ್ಟೀನ್ ಲೈಂಗಿಕ ಹಗರಣವು ಅಮೆರಿಕದಲ್ಲಿ ಭಾರೀ ವಿವಾದಕ್ಕೆ ಗುರಿಯಾದ ಪ್ರಕರಣವಾಗಿದ್ದು, ತನಿಖೆಯ ಮುನ್ನವೇ ಪ್ರಮುಖ ಆರೋಪಿಯ ಸಾವು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದವು. ಈ ಹಿನ್ನೆಲೆಯಲ್ಲಿ ಪ್ರಕರಣದ ಸಂಪೂರ್ಣ ವಿವರವನ್ನು ಸಾರ್ವಜನಿಕಗೊಳಿಸಬೇಕೆಂಬ ಒತ್ತಡವು ಟ್ರಂಪ್ ಸರಕಾರದ ಮೇಲೆ ಇತ್ತು. ಹೀಗಾಗಿ, ಕ್ರಿಸ್ಮಸ್‌ಗೆ

ಮುಂಚಿತವಾಗಿ, ಡಿಸೆಂಬರ್ 19 ರಂದು ಬೃಹತ್ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸುವ ಬಗ್ಗೆ ಟ್ರಂಪ್ ಸರಕಾರ ಒಪ್ಪಿಕೊಂಡಿದೆ.

ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಅಪಹರಣ, ಕಳ್ಳಸಾಗಣೆ, ಬಲವಂತವಾಗಿ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಿದ್ದು ಹಾಗೂ ಅವರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಪ್ರಕರಣಗಳು ಈ ಹಗರಣದಲ್ಲಿ ಸೇರಿಕೊಂಡಿದೆ.

ಪ್ರಮುಖ ಆರೋಪಿ ಅಮೆರಿಕನ್ ಬ್ಯಾಂಕರ್ ಜೆಫ್ರಿ ಎಪ್ಸ್ಟೀನ್ ದೇಶದ ಮಾಜಿ, ಹಾಲಿ ಅಧ್ಯಕ್ಷರುಗಳೊಂದಿಗಿನ ನಿಕಟ ಸಂಬಂಧ, ಇಂಗ್ಲೆಂಡಿನ ಪ್ರಿನ್ಸ್ ಆಂಡ್ರ್ಯೂ ಜೊತೆಗಿನ ಗೆಳೆತನ ಹಾಗೂ ಇನ್ನೂ ಹಲವು ಗಣ್ಯರೊಂದಿಗಿನ ಒಡನಾಟದ ಕಾರಣಕ್ಕೆ ಈ ಹಗರಣವು ಗಮನ ಸೆಳೆದಿದೆ.

ಜೆಫ್ರಿ ಎಪ್ಸ್ಟೀನ್ ಯಾರು?

1980 ರ ದಶಕದಲ್ಲಿ ಬ್ಯಾಂಕರ್ ಆಗಿ ತೊಡಗಿಸಿಕೊಳ್ಳುವ ಮುನ್ನ ಜೆಫ್ರೀ ಎಪ್ಸ್ಟೀನ್, ಅಮೆರಿಕದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಭೌತಶಾಸ್ತ್ರ ಹಾಗೂ ಗಣಿತ ವಿಷಯವನ್ನು ಬೋಧಿಸುವ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಅಲ್ಲಿ, ಆತನ ವಿದ್ಯಾರ್ಥಿಯೊಬ್ಬನ ಬ್ಯಾಂಕರ್ ತಂದೆಯ ಪರಿಚಯವಾಗಿದ್ದು, ಬಳಿಕ ವಾಲ್ ಸ್ಟ್ರೀಟ್ ನಲ್ಲಿ ಹೂಡಿ.ಕೆ.ದಾರನಾಗಿ ತನ್ನ ವೃತ್ತಿ ಜೀವನವನ್ನು ಬದಲಿಸಿಕೊಂಡಿದ್ದ.

1990 ರ ಹೊತ್ತಿಗೆ ಅಮೆರಿಕದ ಶ್ರೀಮಂತರೊಂದಿಗೆ ತನ್ನ ವ್ಯವಹಾರಗಳನ್ನು ಕುದುರಿಸತೊಡಗಿದ್ದ.

ಸಿಎನ್‌ಎನ್ ವರದಿ ಪ್ರಕಾರ, 90 ರ ದಶಕದಲ್ಲಿ ಆತ ತನ್ನ ಗ್ರಾಹಕರ 1 ಬಿಲಿಯನ್ ಡಾಲರ್ ರಷ್ಟರ ಹೂಡಿ.ಕೆ.ಯನ್ನು ತನ್ನ ಸಂಸ್ಥೆಯ ಮೂಲಕ ನಿಭಾಯಿಸುತ್ತಿದ್ದ.

ಬಳಿಕ, ಕೆರಿಬಿಯನ್ ಪ್ರದೇಶದಲ್ಲಿ ಖಾಸಗಿ ದ್ವೀಪವೂ ಸೇರಿದಂತೆ, ಎಪ್ಸ್ಟೀನ್ ಹಲವಾರು ದೇಶಗಳಲ್ಲಿ ಎಸ್ಟೇಟ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದ. .

ನ್ಯೂಯಾರ್ಕ್ ನಗರದಲ್ಲಿ 8,000 ಚದರ ಅಡಿ ವಿಸ್ತೀರ್ಣದ ಮ್ಯಾನ್ಹ್ಯಾಟನ್ ಟೌನ್‌ಹೌಸ್, ಫ್ಲೋರಿಡಾದ ಪಾಮ್ ಬೀಚ್‌ನಲ್ಲಿ ಮ್ಯಾನ್ಷನ್, ಅಮೆರಿಕದ ವರ್ಜಿನ್ ದ್ವೀಪಗಳಲ್ಲಿ ‘ಲಿಟಲ್ ಸೈಂಟ್ ಜೇಮ್ಸ್’ ಹೆಸರಿನ ಒಂದು ಖಾಸಗಿ ದ್ವೀಪ, ನ್ಯೂ ಮೆಕ್ಸಿಕೋದ ಸಾಂಟಾ ಫೆ ಬಳಿಯ 8,000 ಎಕರೆ ಜಮೀನು, ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಬೃಹತ್ ಅಪಾರ್ಟ್ ಮೆಂಟ್, ‘ಲೊಲಿಟಾ ಎಕ್ಸ್ ಪ್ರೆಸ್’ ಎಂಬ ಅಡ್ಡನಾಮವಿರುವ ಬೋಯಿಂಗ್ ವಿಮಾನ ಸೇರಿದಂತೆ ಸುಮಾರು 600 ಮಿಲಿಯನ್ ಡಾಲರ್ ಬೆಲೆ ಬಾಳುವ ಆಸ್ತಿಗಳ ಒಡೆತನವನ್ನು ಎಪ್ಸ್ಟೀನ್ ಹೊಂದಿದ್ದ.

ಅಮೆರಿಕ, ಯುರೋಪಿನ ಹಲವು ನಗರಗಳಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಿಕೊಂಡಿದ್ದ ಎಪ್ಸ್ಟೀನ್‌ಗೆ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಮಾಜಿ ಬ್ರಿಟಿಷ್ ರಾಜಕುಮಾರ ಆಂಡ್ರ್ಯೂ ಮೌಂಟ್‌ಬ್ಯಾಟನ್, ಪ್ರಸಕ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಜಾಗತಿಕ ಪ್ರಭಾವಿ ವ್ಯಕ್ತಿತ್ವಗಳು ಹಾಗೂ ಹಾಲಿವುಡ್ ನ ಅನೇಕ ನಟ-ನಿರ್ದೇಶಕರುಗಳ ಒಡನಾಟ ಕೂಡಾ ಇತ್ತು.

2005ರ ಫ್ಲೋರಿಡಾ ಪ್ರಕರಣ

ಗಣ್ಯಾತಿ ಗಣ್ಯರೊಂದಿಗಿನ ತಿರುಗುತ್ತಿದ್ದ ಎಪ್ಸ್ಟೀನ್ ವಿರುದ್ಧ ಮೊದಲ ಆರೋಪ ಕೇಳಿ ಬರುವುದು 2005 ರಲ್ಲಿ. ಫ್ಲೋರಿಡಾದಲ್ಲಿನ ಆತನ ಪಾಮ್ ಬೀಚ್ ಮ್ಯಾನ್ಷನ್ ನಲ್ಲಿ 14 ವರ್ಷದ ಬಾಲಕಿಯೊಬ್ಬಳನ್ನು ಲೈಂಗಿಕವಾಗಿ ದುರುಪಯೋಗ ಪಡಿಸಿಕೊಂಡ ಪ್ರಕರಣವು ಮೊದಲು ಬೆಳಕಿಗೆ ಬಂದಿತ್ತು.

ಪಾಮ್ ಬೀಚ್ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಳಿಕ, ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ತನಿಖೆಯ ಸಮಯದಲ್ಲಿ, 36ಕ್ಕೂ ಅಧಿಕ ಬಾಲಕಿಯರನ್ನು ಎಪ್ಸ್ಟೀನ್ ಲೈಂಗಿಕವಾಗಿ ದುರುಪಯೋಗಪಡಿಸಿದ್ದು ಬಯಲಾಗಿತ್ತು.

ತನಿಖೆಯ ಪ್ರಕಾರ, ಎಪ್ಸ್ಟೀನ್ ತನ್ನ ಪಾಮ್ ಬೀಚ್ ನಿವಾಸದಲ್ಲಿ ಈ ಅಪರಾಧಗಳನ್ನು ನಡೆಸುತ್ತಿದ್ದನು. ಬಾಲಕಿಯರಿಗೆ ಮಸಾಜ್ ಮಾಡಲು ಹಣದ ಆಮಿಷವೊಡ್ಡಿ ಕರೆಸಿಕೊಂಡು, ಕ್ರಮೇಣ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸುತ್ತಿದ್ದನು. ಆತ ಕೆಲವು ಸಂತ್ರಸ್ತೆಯರಿಗೆ ಇತರ ಹುಡುಗಿಯರನ್ನು ಕರೆತರಲು ಹಣ ನೀಡುತ್ತಿದ್ದನು.

ಆತನನ್ನು 2006ರ ಜುಲೈನಲ್ಲಿ ಬಂಧಿಸಲಾಯಿತು. ಆದರೆ, 2007-08 ರಲ್ಲಿ ಎಪ್ಸ್ಟೀನ್ ವಕೀಲರು ಅಂದಿನ ಯು.ಎಸ್. ಅಟಾರ್ನಿ ಅಲೆಕ್ಸ್ ಅಕೋಸ್ಟಾ ಅವರ ಕಚೇರಿಯೊಂದಿಗೆ ರಹಸ್ಯವಾಗಿ ಒಪ್ಪಂದವನ್ನು ಮಾಡಿ.ಕೆ.ೂಂಡು ಗಂಭೀರ ಪ್ರಕರಣಗಳಿಂದ ತಪ್ಪಿಸಿಕೊಳ್ಳುವಂತೆ ಮಾಡಿದ್ದರು. ಇದರಿಂದಾಗಿ, ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದ್ದ ಪ್ರಕರಣದಲ್ಲಿ ಆತನಿಗೆ ಕೇವಲ 18 ತಿಂಗಳುಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ಅದರಲ್ಲೂ, ಆತನಿಗೆ ಕಚೇರಿ ಕೆಲಸಕ್ಕಾಗಿ ವಿನಾಯಿತಿಯನ್ನು ನೀಡಲಾಗಿತ್ತು. ಅದರ ಪ್ರಕಾರ ಆತ ಜೈಲು ಶಿಕ್ಷೆಯ ಅವಧಿಯಲ್ಲೇ, ತನ್ನ ಕಚೇರಿ ಕೆಲಸಕ್ಕಾಗಿ ಜೈಲಿನಿಂದ ಹೊರ ಬರಬಹುದಾಗಿತ್ತು. ಈ ಅವಧಿಯಲ್ಲೂ ಆತ ಹಲವಾರು ಹೆಣ್ಣು ಮಕ್ಕಳನ್ನು ಕಳ್ಳಸಾಗಣೆ ಮಾಡಿದ್ದಾನೆ ಹಾಗೂ ವೇಶ್ಯವಾಟಿಕೆಗೆ ಪ್ರಚೋದಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬ ಆರೋಪವೂ ಇದೆ.

ಲೊಲಿಟಾ ಎಕ್ಸ್‌ಪ್ರೆಸ್

ಈತನ ಒಡೆತನದಲ್ಲಿದ್ದ ಖಾಸಗಿ ಬೋಯಿಂಗ್ ವಿಮಾನಕ್ಕೆ ‘ಲೊಲಿಟಾ ಎಕ್ಸ್‌ಪ್ರೆಸ್’ ಎಂಬ ಅಡ್ಡ ಹೆಸರು ಬಂದಿತ್ತು. ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ಇದೇ ವಿಮಾನದ ಮೂಲಕ ಕಳ್ಳ ಸಾಗಣೆ, ಗ್ರಾಹಕರ ಸಾಗಣೆಯನ್ನು ಮಾಡಲಾಗುತ್ತಿತ್ತು ಎಂಬ ಆರೋಪವಿದೆ.

ರಶ್ಯದ ಲೇಖಕ ವ್ಲಾಡಿಮಿರ್ ನಬಕೋವ್ (Vladimir Nabokov) 1955 ರಲ್ಲಿ ಬರೆದ ಲೊಲಿಟಾ (Lolita) ಎಂಬ ವಿವಾದಾತ್ಮಕ ಕಾದಂಬರಿಯಿಂದ ಪ್ರೇರಣೆ ಪಡೆದು ಈ ಅಡ್ಡ ಹೆಸರನ್ನು ನಾಮಕರಣ ಮಾಡಲಾಗಿದೆ. ವಯಸ್ಕ ವ್ಯಕ್ತಿಯೊಬ್ಬ 12 ರ ಬಾಲಕಿಯೊಬ್ಬಳಲ್ಲಿ ಲೈಂಗಿಕ ಆಕರ್ಷಣೆ ಹೊಂದುವುದು ಈ ಕಾದಂಬರಿಯ ವಸ್ತು. ಈ ಕಥೆಯನ್ನು ಆಧರಿಸಿ ಹಾಲಿವುಡ್ ನಲ್ಲಿ ಲೊಲಿಟಾ ಎಂಬ ಚಿತ್ರವೂ ತೆರೆ ಕಂಡಿತ್ತು.

ಎಪ್ಸ್ಟೀನ್‌ನ ಒಡೆತನದ ಖಾಸಗಿ ದ್ವೀಪಗಳಿಗೆ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ಇದೇ ವಿಮಾನದ ಮೂಲಕ ಕರೆ ತರಲಾಗುತ್ತಿತ್ತು.

ಹಾಗಾಗಿಯೇ, ಈ ವಿಮಾನವು ‘ಲೊಲಿಟಾ ಎಕ್ಸ್‌ಪ್ರೆಸ್’ ಎಂದು ಕುಖ್ಯಾತಿಗೊಂಡಿತ್ತು. ಈ ವಿಮಾನದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಪ್ರಯಾಣಿಸಿದ್ದಾರೆ ಎನ್ನುವುದು ಇನ್ನೊಂದು ಗುರುತರ ಆರೋಪ.

ಎರಡನೇ ಬಾರಿ ಬಂಧನ

2008 ರಲ್ಲಿ ನಡೆದ ರಹಸ್ಯ ಒಪ್ಪಂದವು ಮುಂದೆ 2017ರಲ್ಲಿ ಮಿಯಾಮಿ ಹೆರಾಲ್ಡ್ ಪತ್ರಿಕೆಯಲ್ಲಿ ಪತ್ರಕರ್ತೆ ಜೂಲಿ ಕೆ. ಬ್ರೌನ್ ಅವರು ತನಿಖಾ ವರದಿ ಪ್ರಕಟಿಸುವ ವರೆಗೆ ಗುಪ್ತವಾಗಿಯೇ ಇತ್ತು. ಈ ವರದಿ ಪ್ರಕಟವಾದ ಬಳಿಕ ಹಗರಣವು ರಾಷ್ಟ್ರೀಯ ಗಮನವನ್ನು ಸೆಳೆದಿತ್ತು.

ಪ್ರಕರಣದ ಗುಪ್ತ ಒಪ್ಪಂದಗಳು ಬೆಳಕಿಗೆ ಬರುತ್ತಿದ್ದಂತೆ ಅಮೆರಿಕದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾದವು. ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ, 2019 ಜುಲೈನಲ್ಲಿ ಎಪ್ಸ್ಟೀನ್ ನನ್ನು ಮತ್ತೆ ಬಂಧಿಸಲಾಯಿತು. ಈ ಬಾರಿ ಅಂತರ್‌ರಾಷ್ಟ್ರೀಯ ಗಮನವು ಈ ಪ್ರಕರಣದ ಮೇಲಿದ್ದವು.

ಎಪ್ಸ್ಟೀನ್ ನ ಗ್ರಾಹಕರಲ್ಲಿ ಹಲವು ದೇಶಗಳ ರಾಜಕಾರಣಿಗಳು, ಉದ್ಯಮಿಗಳು ಇದ್ದರು. ವಿಚಾರಣೆಯಿಂದ ಹಲವು ಗಣ್ಯರ ನಿಜಬಣ್ಣ ಬಯಲಾಗುವುದೆಂಬ ನಿರೀಕ್ಷೆಯಿತ್ತು. ಆದರೆ, ಇನ್ನೇನು ವಿಚಾರಣೆ ಆರಂಭವಾಗಬೇಕು ಅನ್ನುವಷ್ಟರ ಹೊತ್ತಿಗೆ ನ್ಯೂಯಾರ್ಕ್ ಜೈಲಿನಲ್ಲಿ ಎಪ್ಸ್ಟೀನ್ ಸಾವನ್ನಪ್ಪಿದ್ದ. ಅಧಿಕಾರಿಗಳು ಇದೊಂದು ಆತ್ಮಹತ್ಯೆ ಎಂದು ಪ್ರಕರಣವನ್ನು ಮುಗಿಸಿ ಹಾಕಿದ್ದರು. ಆ ಮೂಲಕ ಪ್ರಭಾವಿ ವ್ಯಕ್ತಿಗಳು ಕಟೆಕಟೆ ಏರುವ ಸಂಭಾವ್ಯ ಅವಕಾಶವು ಇಲ್ಲವಾಗಿತ್ತು.

2021ರಲ್ಲಿ, ಮ್ಯಾನ್ಹ್ಯಾಟನ್‌ನಲ್ಲಿರುವ ಫೆಡರಲ್ ನ್ಯಾಯಾಲಯವು, ಎಪ್ಸ್ಟೀನ್‌ನ ದೀರ್ಘಕಾಲದ ಗೆಳತಿ ಗಿಸ್ಲೇನ್ ಮ್ಯಾಕ್ಸ್ವೆಲ್ ಎಂಬಾಕೆಯನ್ನುಲೈಂಗಿಕ ಕಳ್ಳಸಾಗಣೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿತು. ಹಾಗೂ ವೇಶ್ಯಾವಾಟಿಕೆಗೆ ಅಪ್ರಾಪ್ತ ವಯಸ್ಸಿನವರನ್ನು ನೇಮಿಸಿಕೊಳ್ಳಲು ಸಹಾಯ ಮಾಡಿದ್ದಕ್ಕಾಗಿ ಆಕೆಗೆ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು.

ಎಪ್ಸ್ಟೀನ್ ಫೈಲ್ ಬಿಡುಗಡೆಗೆ ಆಗ್ರಹ

ಎಪ್ಸ್ಟೀನ್ ಸಾವಿನ ಕುರಿತು ಹಲವರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತವಾಗಿ ಎಪ್ಸ್ಟೀನ್‌ನ ಹತ್ಯೆ ಮಾಡಲಾಗಿದೆ ಎಂದು ಹಲವರು ನಂಬಿದ್ದಾರೆ. ಹಾಗಾಗಿ, ಎಪ್ಸ್ಟೀನ್ ಲೈಂಗಿಕ ಹಗರಣದ ಸಂಪೂರ್ಣ ಕಡತವನ್ನು ಬಿಡುಗಡೆಗೊಳಿಸಬೇಕೆಂಬ ಕೂಗು ಅಮೆರಿಕದಲ್ಲಿ ಬಹು ಕಾಲದಿಂದ ಕೇಳಿ ಬರುತ್ತಿದೆ. ವರದಿಯನ್ನು ಬಿಡುಗಡೆಗೊಳಿಸುತ್ತೇವೆ ಎಂದು ಟ್ರಂಪ್ ಸರಕಾರವೂ ಘೋಷಿಸಿದೆ.

ಈ ಕಡತಗಳಲ್ಲಿ ಸ್ಥಗಿತಗೊಂಡ ಫ್ಲೋರಿಡಾ ತನಿಖೆ, ಮ್ಯಾನ್ಹ್ಯಾಟನ್ ತನಿಖೆಗಳು ಮತ್ತು ನ್ಯಾಯಾಂಗ ಇಲಾಖೆಯ ವಿಚಾರಣೆಯ ವಿವರಗಳು ಇವೆ. ಎಫ್‌ಬಿಐ ಏಜೆಂಟ್‌ಗಳು ಬರೆದ ಟಿಪ್ಪಣಿಗಳು ಮತ್ತು ವರದಿಗಳು, ಸಾಕ್ಷಿಗಳ ಸಂದರ್ಶನಗಳ ಪ್ರತಿಲಿಪಿಗಳು, ಛಾಯಾಚಿತ್ರಗಳು, ವೀಡಿಯೊಗಳು ಮತ್ತು ಇತರ ಪುರಾವೆಗಳು, ಎಪ್ಸ್ಟೀನ್‌ನ ಶವಪರೀಕ್ಷೆ ವರದಿ, ವಿಮಾನದ ದಾಖಲೆಗಳು, ಪ್ರಯಾಣ ದಾಖಲೆಗಳು ಇರಬಹುದೆಂದು ನಿರೀಕ್ಷಿಸಲಾಗಿದೆ. ಅದೇ ವೇಳೆ, ಅಪ್ರಾಪ್ತ ವಯಸ್ಕರ ಹಾಗೂ ಸಂತ್ರಸ್ತರ ಖಾಸಗಿ ವಿವರಗಳು, ಗೌಪ್ಯವಾಗಿಯೇ ಇಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟ್ರಂಪ್ ಜೊತೆಗಿನ ಸಂಬಂಧ

2002 ರಲ್ಲಿ ಎಪ್ಸ್ಟೀನ್ ಹಗರಣಗಳು ಇನ್ನೂ ಬೆಳಕಿಗೆ ಬಂದಿರಲಿಲ್ಲ. ಆ ಸಂದರ್ಭದಲ್ಲಿ ಈತನ ಕುರಿತು ಟ್ರಂಪ್ ಮೆಚ್ಚುಗೆಯ ಹೇಳಿಕೆ ನೀಡಿದ್ದು ಸದ್ಯ ಮುನ್ನೆಲೆಗೆ ಬಂದು ಚರ್ಚೆಯಲ್ಲಿದೆ. ಆದರೆ, ದಶಕಗಳಿಂದ ತನಗೆ ಎಪ್ಸ್ಟೀನ್ ಜೊತೆ ಯಾವುದೇ ಸಂಪರ್ಕವಿಲ್ಲವೆಂದು ಟ್ರಂಪ್ ಹೇಳಿಕೊಂಡಿದ್ದಾರೆ.

ಆದರೆ, 2008 ರಲ್ಲಿ ಎಪ್ಸ್ಟೀನ್ ಪರವಾಗಿ ಗುಪ್ತ ಒಪ್ಪಂದ ಮಾಡಿ.ಕೆ.ೂಂಡಿದ್ದ ಆಗಿನ ಅಟಾರ್ನಿ ಜನರಲ್ ಆಗಿದ್ದ ಅಲೆಕ್ಸ್ ಅಕೋಸ್ಟಾರನ್ನು 2017 ರಲ್ಲಿ ಆಗಿನ ಟ್ರಂಪ್ ಸರಕಾರವು ಕಾರ್ಮಿಕ ಕಾರ್ಯದರ್ಶಿ ಹುದ್ದೆಗೆ ನೇಮಿಸಿಕೊಂಡಿತ್ತು. ನಂತರ ಎಪ್ಸ್ಟೀನ್ ಪ್ರಕರಣದಲ್ಲಿ ಅವರ ಹಿಂದಿನ ಪಾತ್ರ ಮತ್ತು ರಹಸ್ಯ ಒಪ್ಪಂದದ ಕುರಿತು ಸಾರ್ವಜನಿಕ ಮತ್ತು ರಾಜಕೀಯ ಒತ್ತಡ ಹೆಚ್ಚಿದ ಕಾರಣ, ಅಲೆಕ್ಸ್ ಅಕೋಸ್ಟಾ ಅವರು ತಮ್ಮ ಕಾರ್ಮಿಕ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

share
ಫೈಝ್ ವಿಟ್ಲ
ಫೈಝ್ ವಿಟ್ಲ
Next Story
X