Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೇರಳ ಚುನಾವಣಾ ಫಲಿತಾಂಶ ಎಡರಂಗ...

ಕೇರಳ ಚುನಾವಣಾ ಫಲಿತಾಂಶ ಎಡರಂಗ ಕಲಿಯಬೇಕಾದ ಪಾಠ ಏನು?

ಹರೀಶ್ ಎಚ್.ಕೆ.ಹರೀಶ್ ಎಚ್.ಕೆ.9 May 2026 10:00 AM IST
share
ಕೇರಳ ಚುನಾವಣಾ ಫಲಿತಾಂಶ ಎಡರಂಗ ಕಲಿಯಬೇಕಾದ ಪಾಠ ಏನು?

ಮತದಾರರು ಕಮ್ಯುನಿಸ್ಟ್ ಸಿದ್ಧಾಂತವನ್ನು ಪೂರ್ತಿಯಾಗಿ ತಿರಸ್ಕರಿಸಿಲ್ಲ, ಆದರೆ ಆ ಸಿದ್ಧಾಂತದ ಹೆಸರಿನಲ್ಲಿ ನಡೆಯುತ್ತಿದ್ದ ವ್ಯಕ್ತಿ ಆರಾಧನೆಯ ರಾಜಕೀಯ ಮತ್ತು ಸಂವೇದನಾರಹಿತ ಆಡಳಿತವನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆ.

ಎಡರಂಗವು ತನ್ನ ತಪ್ಪುಗಳನ್ನು ಒಪ್ಪಿಕೊಂಡು, ಸಾಮಾನ್ಯ ಜನರೊಂದಿಗೆ ಮತ್ತೆ ಬೆರೆಯುವ ಪ್ರಯತ್ನ ಮಾಡದಿದ್ದರೆ, ಕೇರಳದ ರಾಜಕೀಯ ಭೂಪಟದಲ್ಲಿ ಕೆಂಪು ಬಣ್ಣವು ಮತ್ತಷ್ಟು ಮಂಕಾಗುವ ಅಪಾಯವಿದೆ.

ಕೇರಳ ರಾಜಕಾರಣದಲ್ಲಿ ಐದು ವರ್ಷಕ್ಕೊಮ್ಮೆ ಅಧಿಕಾರ ಬದಲಾಗುವ ಪದ್ಧತಿ ಸಾಮಾನ್ಯ. ಆದರೆ 2026ರ ವಿಧಾನಸಭಾ ಚುನಾವಣಾ ಫಲಿತಾಂಶವು ಎಡರಂಗದ ಪಾಲಿಗೆ ಕೇವಲ ಸೋಲಲ್ಲ, ಅದೊಂದು ಭೀಕರ ಕುಸಿತವಾಗಿ ಕಾಣುತ್ತಿದೆ.

ಕಳೆದ ಬಾರಿ 99 ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರಕಾರ, ಈ ಬಾರಿ ಕೇವಲ 35 ಸ್ಥಾನಗಳಿಗೆ ಕುಸಿದಿರುವುದು ಇಡೀ ದೇಶದ ಗಮನ ಸೆಳೆದಿದೆ.

ಕಳೆದ ಹತ್ತು ವರ್ಷಗಳಿಂದ ಕೇರಳವನ್ನು ಆಳಿದ ಸಿಪಿಎಂ ನೇತೃತ್ವದ ಎಡರಂಗವು ಈ ಪ್ರಮಾಣದಲ್ಲಿ ಧೂಳೀಪಟವಾಗಲು ಕೇವಲ ಆಡಳಿತ ವಿರೋಧಿ ಅಲೆಯೊಂದೇ ಕಾರಣವೇ? ಅಥವಾ ಪಕ್ಷದೊಳಗಿನ ಆಂತರಿಕ ಭಿನ್ನಮತ, ಸೈದ್ಧಾಂತಿಕ ಗೊಂದಲ ಹಾಗೂ ನಾಯಕತ್ವದ ಅತಿಯಾದ ಕೇಂದ್ರೀಕರಣವು ಈ ಪತನಕ್ಕೆ ನಾಂದಿ ಹಾಡಿದೆಯೇ ಎಂಬ ಗಂಭೀರ ಪ್ರಶ್ನೆಗಳು ಈಗ ಎದ್ದಿವೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ಸ್ವಂತ ಕ್ಷೇತ್ರ ಧರ್ಮಡಂನಲ್ಲಿಯೇ ಆರಂಭಿಕ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದು, ಕಮ್ಯುನಿಸ್ಟ್ ಭದ್ರಕೋಟೆಗಳಲ್ಲೇ ಮತದಾರರು ಕೆಂಪು ಬಾವುಟವನ್ನು ಕೈಬಿಟ್ಟಿರುವುದು ಕೇರಳದ ರಾಜಕೀಯ ದಿಕ್ಕು ಬದಲಾಗಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

ಈ ಚುನಾವಣೆಯ ಅತ್ಯಂತ ಗಮನಾರ್ಹ ಅಂಶವೆಂದರೆ ಎಡಪಕ್ಷದ ಆಂತರಿಕ ಭಿನ್ನಮತವು ಬೀದಿಗೆ ಬಂದು ಚುನಾವಣಾ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿದ್ದು.

ಸಾಮಾನ್ಯವಾಗಿ ಶಿಸ್ತಿನ ಸಿಪಾಯಿಗಳಂತಿರುವ ಕಮ್ಯುನಿಸ್ಟ್ ಕಾರ್ಯಕರ್ತರು ಈ ಬಾರಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಬಂಡಾಯವೆದ್ದರು.

ಪಯ್ಯನ್ನೂರು ಕ್ಷೇತ್ರವು 1967ರಿಂದಲೂ ಸಿಪಿಎಂನ ಅಭೇದ್ಯ ಕೋಟೆಯಾಗಿತ್ತು. ಆದರೆ ಅಲ್ಲಿ ಪಕ್ಷದಿಂದ ಉಚ್ಚಾಟಿತಗೊಂಡಿದ್ದ ವಿ. ಕುನ್ನಿಕೃಷ್ಣನ್ ಅವರು ಯುಡಿಎಫ್ ಬೆಂಬಲದೊಂದಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದು ಪಕ್ಷಕ್ಕೆ ದೊಡ್ಡ ಮುಖಭಂಗ ತಂದಿದೆ.

ಪಕ್ಷದ ನಿಧಿ ದುರುಪಯೋಗ ಮತ್ತು ನಾಯಕರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಅವರು ನಡೆಸಿದ ಹೋರಾಟವು ಸಾಮಾನ್ಯ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿತ್ತು.

ಪಿಣರಾಯಿ ವಿಜಯನ್ ಅವರ ಆಡಳಿತ ಶೈಲಿಯು 2021ರ ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಆಪ್ತವೆನಿಸಿದರೂ, ಎರಡನೇ ಅವಧಿಯಲ್ಲಿ ಅದು ಜನರೊಂದಿಗೆ ಕಡಿದುಹೋದ ಸಂಪರ್ಕದಂತೆ ಕಂಡಿತು. ಇದಕ್ಕಿಂತಲೂ ಹೆಚ್ಚಾಗಿ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರ ಸಂವಹನ ವೈಖರಿಯು ಪಕ್ಷಕ್ಕೆ ದೊಡ್ಡ ಹಿನ್ನಡೆಯಾಯಿತು.

ಅವರು ಪತ್ರಿಕಾಗೋಷ್ಠಿಗಳಲ್ಲಿ ಬಳಸುತ್ತಿದ್ದ ಭಾಷೆಯು ಸಾರ್ವಜನಿಕರಿಗೆ ಅಥವಾ ಯುವ ಮತದಾರರಿಗೆ ತಲುಪುವ ಬದಲು, ಕೇವಲ ಪಕ್ಷದ ಕಾರ್ಯಕರ್ತರಿಗೆ ಪಾಠ ಮಾಡುವ ಶೈಲಿಯಲ್ಲಿದೆ ಎಂಬ ಟೀಕೆ ವ್ಯಕ್ತವಾಯಿತು.

ಆಡಳಿತದ ಮೇಲಿನ ಅತಿಯಾದ ಆತ್ಮವಿಶ್ವಾಸ ಮತ್ತು ವಿರೋಧ ಪಕ್ಷಗಳ ನಾಯಕರನ್ನು ಲೇವಡಿ ಮಾಡುವ ಧೋರಣೆಯು ಕೇವಲ ಅಹಂಕಾರದ ನಡೆಯಾಗಿ ಕಂಡಿತು.

ಅದೇ ರೀತಿ ತಳಿಪರಂಬದಲ್ಲಿ ಎಂ.ವಿ. ಗೋವಿಂದನ್ ಅವರ ಪತ್ನಿ ಪಿ.ಕೆ. ಶ್ಯಾಮಲಾ ಅವರಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಟಿ.ಕೆ. ಗೋವಿಂದನ್ ಅವರು ಪಕ್ಷದಿಂದ ಹೊರಬಂದು ಜಯಗಳಿಸಿದ್ದಾರೆ. ಇದು ಸಿಪಿಎಂ ಪಕ್ಷದಲ್ಲಿ ಕುಟುಂಬ ರಾಜಕಾರಣ ಮತ್ತು ಗುಂಪುಗಾರಿಕೆ ಮನೆಮಾಡಿರುವುದನ್ನು ಸಾಬೀತುಪಡಿಸಿದೆ.

ಅಂಬಲಪುಳದಲ್ಲಿ ಹಿರಿಯ ನಾಯಕ ಜಿ. ಸುಧಾಕರನ್ ಅವರ ಅಸಮಾಧಾನ ಮತ್ತು ಪಕ್ಷದೊಳಗಿನ ಮೂಲೆಗುಂಪು ಪ್ರಕ್ರಿಯೆಯು ಹಳೆಯ ತಲೆಮಾರಿನ ಕಾರ್ಯಕರ್ತರಲ್ಲಿ ಬೇಸರ ತರಿಸಿತು.

ಈ ಎಲ್ಲಾ ಬಂಡಾಯಗಳು ಒಂದು ಸಂದೇಶವನ್ನು ಸ್ಪಷ್ಟಪಡಿಸಿವೆ; ಅದೇನೆಂದರೆ, ಸಿಪಿಎಂ ತನ್ನ ಸಾಂಪ್ರದಾಯಿಕ ಸಂಘಟನಾ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ ಮತ್ತು ಚರ್ಚೆಗಿಂತ ಶಿಸ್ತಿನ ಹೆಸರಿನಲ್ಲಿ ಕೆಲವರ ಆದೇಶಗಳನ್ನು ಹೇರುತ್ತಿದೆ ಎಂಬ ಭಾವನೆ ಬಲವಾಗಿದೆ.

ಇದು ಕೇವಲ ಚುನಾವಣೆ ಸೋಲಲ್ಲ, ಬದಲಿಗೆ ಸಿಪಿಎಂನ ಅತ್ಯಂತ ಪ್ರಬಲ ಸಂಘಟನಾ ವ್ಯವಸ್ಥೆಯೇ ಕುಸಿದಿರುವುದರ ಸಂಕೇತವಾಗಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಅರ್ಧ ಡಝನ್‌ಗಿಂತಲೂ ಹೆಚ್ಚು ಎಡಪಕ್ಷದ ಶಾಸಕರು ಮತ್ತು ಪ್ರಮುಖ ನಾಯಕರು ಪಕ್ಷದ ಶಿಸ್ತನ್ನು ಮೀರಿ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಬಂಡಾಯವೆದ್ದರು.

ಪಯ್ಯನ್ನೂರು ಮತ್ತು ತಳಿಪರಂಬದಂತಹ ಕೋಟೆಗಳಲ್ಲಿ ಬಿದ್ದ ಬಿರುಕುಗಳು ಕೇವಲ ಅಭ್ಯರ್ಥಿಗಳ ವೈಯಕ್ತಿಕ ವಿರೋಧವಲ್ಲ, ಬದಲಿಗೆ ಪಕ್ಷದ ನಾಯಕತ್ವವು ತಳಮಟ್ಟದ ಕಾರ್ಯಕರ್ತರ ಧ್ವನಿಯನ್ನು ಆಲಿಸಲು ವಿಫಲವಾಗಿದೆ ಎಂಬುದಕ್ಕೆ ಸಾಕ್ಷಿ.

ಸೈದ್ಧಾಂತಿಕವಾಗಿ ನೋಡಿದಾಗ ಎಡರಂಗವು ಈ ಬಾರಿ ಒಂದು ರೀತಿಯ ಅಸ್ಪಷ್ಟತೆಗೆ ಸಿಲುಕಿಕೊಂಡಂತೆ ಕಂಡಿತು.

ಶಬರಿಮಲೆ ವಿವಾದದ ಸಮಯದಲ್ಲಿ ಆರಂಭದಲ್ಲಿ ಸಂವಿಧಾನಾತ್ಮಕ ನಿಲುವನ್ನು ತಳೆದಿದ್ದ ಸರಕಾರ, ನಂತರದ ದಿನಗಳಲ್ಲಿ ಮತಗಳ ನಷ್ಟದ ಭೀತಿಯಿಂದ ಮೃದು ಧೋರಣೆ ತಳೆಯಲು ಮುಂದಾಯಿತು. ಇದು ಅತ್ತ ಕಟ್ಟುನಿಟ್ಟಿನ ಭಕ್ತರನ್ನೂ ಗೆಲ್ಲಲಾಗದೆ, ಇತ್ತ ಜಾತ್ಯತೀತ ನಿಲುವಿನ ಬೆಂಬಲಿಗರನ್ನೂ ಅತಂತ್ರ ಸ್ಥಿತಿಗೆ ತಳ್ಳಿತು.

ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಪ್ರತಿಯಾಗಿ ಎಡಪಕ್ಷಗಳು ‘ಅಯ್ಯಪ್ಪ ಸಂಗಮಂ’ನಂತಹ ಕಾರ್ಯಕ್ರಮಗಳಿಗೆ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ವೇದಿಕೆ ಕಲ್ಪಿಸಿದ್ದು ಮತ್ತು ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್ ಅವರಂತಹ ನಾಯಕರ ಸಂದೇಶಗಳನ್ನು ಅಧಿಕೃತ ಕಾರ್ಯಕ್ರಮಗಳಲ್ಲಿ ಓದಿದ್ದು ಅಲ್ಪಸಂಖ್ಯಾತರಲ್ಲಿ ಮತ್ತು ತೀವ್ರಗಾಮಿ ಎಡಪಂಥೀಯ ಚಿಂತಕರಲ್ಲಿ ಆತಂಕ ಮೂಡಿಸಿತು.

ವೆಳ್ಳಾಪಳ್ಳಿ ನಟೇಶನ್ ಅಂತಹ ಕೋಮುವಾದಿ ಹೇಳಿಕೆ ನೀಡುವ ನಾಯಕರೊಂದಿಗೆ ಪಿಣರಾಯಿ ವಿಜಯನ್ ಅವರು ಹಂಚಿಕೊಂಡ ಆತ್ಮೀಯತೆಯು ಎಲ್‌ಡಿಎಫ್‌ನ ಜಾತ್ಯತೀತ ಮುಖವಾಡಕ್ಕೆ ಕೊಡಲಿ ಪೆಟ್ಟು ನೀಡಿತು.

ಇದರಿಂದಾಗಿ 2021ರಲ್ಲಿ ಎಡರಂಗಕ್ಕೆ ಬೆಂಬಲ ನೀಡಿದ್ದ ಅಲ್ಪಸಂಖ್ಯಾತರ ಮತಗಳ ಒಂದು ದೊಡ್ಡ ವರ್ಗವು ಈ ಬಾರಿ ಮತ್ತೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕಡೆಗೆ ವಾಲಿತು.

ಎಡರಂಗವು ಬಹುಸಂಖ್ಯಾತ ಮತಗಳ ಕ್ರೋಡೀಕರಣಕ್ಕಾಗಿ ಅಳವಡಿಸಿಕೊಂಡ ಮುಸ್ಲಿಮ್ ವಿರೋಧಿ ನಿರೂಪಣೆಗಳು ಅಂತಿಮವಾಗಿ ಅವರಿಗೇ ಮುಳುವಾದವು.

‘ಕಾಫಿರ್’ ಸ್ಕ್ರೀನ್‌ಶಾಟ್ ವಿವಾದ ಅಥವಾ ಮುಸ್ಲಿಮ್ ಸಮುದಾಯದ ಎನ್‌ಜಿಒಗಳನ್ನು ಗುರಿಯಾಗಿಸಿ ನಡೆಸಿದ ಟೀಕೆಗಳು ಹಿಂದೂ ಮತ್ತು ಕ್ರಿಶ್ಚಿಯನ್ ಮತಗಳನ್ನು ಸೆಳೆಯುವ ತಂತ್ರವಾಗಿತ್ತು. ಆದರೆ, ಈ ರೀತಿಯ ಸೈದ್ಧಾಂತಿಕ ರಾಜಿ ಅಥವಾ ಅಸ್ಪಷ್ಟತೆಯಿಂದಾಗಿ ಎಡಪಕ್ಷಗಳು ತನ್ನ ಸಾಂಪ್ರದಾಯಿಕ ಅಲ್ಪಸಂಖ್ಯಾತ ಮತಬ್ಯಾಂಕ್ ಅನ್ನು ಕಳೆದುಕೊಂಡವು.

ವಿಪರ್ಯಾಸವೆಂದರೆ, ಎಡರಂಗವು ಸೃಷ್ಟಿಸಿದ ಈ ಕೋಮುವಾದಿ ವಾತಾವರಣದ ಅಂತಿಮ ಲಾಭವು ಅವರ ಪೆಟ್ಟಿಗೆಗೆ ಸೇರುವ ಬದಲು ಬಿಜೆಪಿಯ ಪೆಟ್ಟಿಗೆಗೆ ಸೇರಿತು.

ಆಡಳಿತಾತ್ಮಕವಾಗಿ ಸರಕಾರವು ಪ್ರಗತಿಯನ್ನು ಸಾಧಿಸಿದೆ ಎಂದು ಅಂಕಿ-ಅಂಶಗಳು ಹೇಳುತ್ತಿದ್ದರೂ, ಜನರ ನಡುವಿನ ಸಂಪರ್ಕ ಮತ್ತು ಸಹಾನುಭೂತಿಯಲ್ಲಿ ಸರಕಾರ ಸೋತಿದೆ.

2024ರ ವಯನಾಡು ಭೂಕುಸಿತದ ನಂತರದ ಪುನರ್ವಸತಿ ಕಾರ್ಯಕ್ರಮಗಳನ್ನು ಸರಕಾರವು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿಕೊಂಡಿತು. ಆದರೆ ವಾಸ್ತವದಲ್ಲಿ ಸಂತ್ರಸ್ತರಿಗೆ ನೀಡಲಾದ ಮನೆಗಳ ಗುಣಮಟ್ಟ ಮತ್ತು ವಿಳಂಬವಾದ ಹಸ್ತಾಂತರವು ಜನರ ಆಕ್ರೋಶಕ್ಕೆ ಕಾರಣವಾಯಿತು.

ಸರಕಾರವು ತನ್ನ ಪ್ರಚಾರಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಡೆಸಿದ ‘ನವ ಕೇರಳ ಸದಾಸ್’ ಕಾರ್ಯಕ್ರಮವು ಜನರ ಸಮಸ್ಯೆಗಳನ್ನು ಆಲಿಸುವ ಬದಲು ಸರಕಾರದ ವೈಭವೀಕರಣದಂತೆ ಕಂಡಿತು.

ಅಲ್ಲಿ ಬಳಸಲಾದ ಐಷಾರಾಮಿ ಬಸ್ ಮತ್ತು ಪ್ರತಿಭಟನೆ ನಡೆಸಿದವರ ಮೇಲೆ ನಡೆದ ಹಲ್ಲೆಗಳು ಸರಕಾರದ ಮೇಲಿದ್ದ ವಿಶ್ವಾಸವನ್ನು ಕುಂದಿಸಿದವು.

ಕೆ.ಕೆ. ಶೈಲಜಾರಂತಹ ದಕ್ಷ ಸಚಿವರನ್ನು ಸಂಪುಟದಿಂದ ಕೈಬಿಟ್ಟಿದ್ದು ಮತ್ತು ಪಿಣರಾಯಿ ವಿಜಯನ್ ಅವರ ಸುತ್ತಲೇ ಅಧಿಕಾರ ಕೇಂದ್ರೀಕೃತವಾಗಿದ್ದು ಜನರಲ್ಲಿ ‘ಅಹಂಕಾರಿ ಆಡಳಿತ’ದ ಬಿಂಬವನ್ನು ಮೂಡಿಸಿತು.

ಮಾಧ್ಯಮಗಳ ವಿರುದ್ಧ ಹೂಡಲಾದ ಕೇಸುಗಳು ಮತ್ತು ಪತ್ರಕರ್ತರನ್ನು ನಡೆಸಿಕೊಂಡ ರೀತಿ ಕೂಡ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂಬ ಆರೋಪವನ್ನು ಪುಷ್ಟೀಕರಿಸಿದವು.

ಈ ಚುನಾವಣೆಯ ಮತ್ತೊಂದು ಪ್ರಮುಖ ಅಂಶವೆಂದರೆ ಬಿಜೆಪಿಯ ಪ್ರವೇಶ. ಬಿಜೆಪಿ ಈ ಬಾರಿ ಮೂರು ಸ್ಥಾನಗಳನ್ನು ಗೆದ್ದಿರುವುದು ಕೇರಳದ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

ಎಡಪಕ್ಷಗಳು ಸೈದ್ಧಾಂತಿಕವಾಗಿ ಮೌನಕ್ಕೆ ಶರಣಾದಾಗ ಅಥವಾ ತಂತ್ರಗಾರಿಕೆಯ ಹೆಸರಿನಲ್ಲಿ ಕೋಮುವಾದದ ಜೊತೆ ಆಟವಾಡಿದಾಗ ಬಿಜೆಪಿಗೆ ತನ್ನ ನೆಲೆ ವಿಸ್ತರಿಸಲು ಅವಕಾಶ ಸಿಕ್ಕಿತು.

ತಿರುವನಂತಪುರ ಜಿಲ್ಲೆಯ ಎರಡು ಕ್ಷೇತ್ರಗಳು ಮತ್ತು ಚಾತ್ತನ್ನೂರಿನಲ್ಲಿ ಕೇಸರಿ ಧ್ವಜ ಹಾರಾಡಿರುವುದು ಬಿಜೆಪಿಗೆ ಎಂದೂ ಅವಕಾಶ ಕೊಡದ ಕೇರಳದ ‘ಜಾತ್ಯತೀತ ಕೋಟೆ’ ಈಗ ಕೊನೆಯಾಗುತ್ತಿದೆ ಎಂಬುದರ ಸೂಚನೆಯಾಗಿದೆ.

2026ರ ಕೇರಳದ ತೀರ್ಪು ಕೇವಲ ಒಂದು ರಾಜಕೀಯ ಬದಲಾವಣೆಯಲ್ಲ, ಅದು ಆಡಳಿತದ ಧೋರಣೆಯ ವಿರುದ್ಧದ ಗಟ್ಟಿ ದನಿಯಾಗಿದೆ.

ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದೆ.

ಸಿಪಿಎಂ ಕೇವಲ 26 ಸ್ಥಾನಗಳಿಗೆ ಸೀಮಿತವಾಗಿರುವುದು ಆ ಪಕ್ಷಕ್ಕೆ ತನ್ನ ಕಾರ್ಯಶೈಲಿಯನ್ನು ಆಮೂಲಾಗ್ರವಾಗಿ ಬದಲಿಸಿಕೊಳ್ಳಲು ನೀಡಿದ ಅಂತಿಮ ಎಚ್ಚರಿಕೆಯಾಗಿದೆ.

ಮತದಾರರು ಕಮ್ಯುನಿಸ್ಟ್ ಸಿದ್ಧಾಂತವನ್ನು ಪೂರ್ತಿಯಾಗಿ ತಿರಸ್ಕರಿಸಿಲ್ಲ, ಆದರೆ ಆ ಸಿದ್ಧಾಂತದ ಹೆಸರಿನಲ್ಲಿ ನಡೆಯುತ್ತಿದ್ದ ವ್ಯಕ್ತಿ ಆರಾಧನೆಯ ರಾಜಕೀಯ ಮತ್ತು ಸಂವೇದನಾರಹಿತ ಆಡಳಿತವನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆ.

ಎಡರಂಗವು ತನ್ನ ತಪ್ಪುಗಳನ್ನು ಒಪ್ಪಿಕೊಂಡು, ಸಾಮಾನ್ಯ ಜನರೊಂದಿಗೆ ಮತ್ತೆ ಬೆರೆಯುವ ಪ್ರಯತ್ನ ಮಾಡದಿದ್ದರೆ, ಕೇರಳದ ರಾಜಕೀಯ ಭೂಪಟದಲ್ಲಿ ಕೆಂಪು ಬಣ್ಣವು ಮತ್ತಷ್ಟು ಮಂಕಾಗುವ ಅಪಾಯವಿದೆ.

ಈ ಗೆಲುವಿನ ಮೂಲಕ ಕಾಂಗ್ರೆಸ್ ಕೇರಳದಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಂಡಿದ್ದರೆ, ಎಡಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿವೆ.

Tags

lessonsKerala Election Results
share
ಹರೀಶ್ ಎಚ್.ಕೆ.
ಹರೀಶ್ ಎಚ್.ಕೆ.
Next Story
X