Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನೇಪಾಳಕ್ಕಿರುವ ಮುಂದಿನ ಹಾದಿ ಯಾವುದು?

ನೇಪಾಳಕ್ಕಿರುವ ಮುಂದಿನ ಹಾದಿ ಯಾವುದು?

ಪಿ.ಎಚ್. ಅರುಣ್ಪಿ.ಎಚ್. ಅರುಣ್11 Sept 2025 10:15 AM IST
share
ನೇಪಾಳಕ್ಕಿರುವ ಮುಂದಿನ ಹಾದಿ ಯಾವುದು?

ಕಠ್ಮಂಡುವಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳನ್ನು ಕೆಲವೇ ಗುಂಡುಗಳ ಮೂಲಕ, ಕೆಲವರನ್ನು ಕೊಲ್ಲುವ ಮೂಲಕ ಕೊನೆಗಾಣಿಸಬಹುದು ಎಂಬ ನೇಪಾಳ ಸರಕಾರದ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗಿದೆ. ಕಡೆಗೆ ಆ ಸರಕಾರವೇ ತಲೆಕೆಳಗಾಗಿದೆ.

ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ರಾಜೀನಾಮೆ ನೀಡಿದ್ದಾರೆ. ಅವರು ದೇಶ ಬಿಟ್ಟು ಪಲಾಯನ ಮಾಡಿರಬಹುದು ಎನ್ನಲಾಗಿದೆ.

ಸಾಮಾಜಿಕ ಮಾಧ್ಯಮ ನಿಷೇಧ ನಿರ್ಧಾರ ವಿರೋಧಿಸಿ ಪ್ರತಿಭಟನೆ ಶುರುವಾಗಿತ್ತಾದರೂ, ಅದಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರ, ಆರ್ಥಿಕ ವೈಫಲ್ಯದ ವಿರುದ್ಧ ಸಿಟ್ಟು ಸ್ಫೋಟಿಸಿತ್ತು.

ಪ್ರತಿಭಟನೆಯನ್ನು ಗುಂಡುಗಳ ಮೂಲಕ ಹತ್ತಿಕ್ಕಲು ನೋಡಿದ್ದೇ ಯಡವಟ್ಟಾಯಿತು. ಅದು 19-20 ಜನರನ್ನು ಬಲಿತೆಗೆದುಕೊಳ್ಳುತ್ತದೆ ಎಂದುಕೊಂಡಿರಲಿಲ್ಲ ಮತ್ತು ಕಡೆಗೆ ಅದು ತನಗೇ ತಿರುಗುಬಾಣ ಆಗುತ್ತದೆ ಎಂಬ ನಿರೀಕ್ಷೆಯೂ ಸರಕಾರಕ್ಕಿರಲಿಲ್ಲ.

ತಮ್ಮ ಮನೆಗಳಿಗೇ ಬೆಂಕಿ ಹಚ್ಚಲಾಗುತ್ತದೆ ಎಂದು ಸರಕಾರದ ಪ್ರಭಾವೀ ಮಂದಿ ಊಹೆ ಕೂಡ ಮಾಡಿರಲಿಲ್ಲ.ಅವರು ಜೀವ ಉಳಿಸಿಕೊಳ್ಳಲು ಹೆಲಿಕಾಪ್ಟರ್ ಏರಿ ಪಲಾಯನ ಮಾಡಬೇಕಾಯಿತು.

ಪ್ರಧಾನಿ ಒಲಿ 24 ಗಂಟೆಗಳಲ್ಲೇ ರಾಜೀನಾಮೆ ನೀಡಬೇಕಾಯಿತು.

ಇಡೀ ರಾಷ್ಟ್ರ ನೇಪಾಳಿ ಯುವಕರೊಂದಿಗೆ ಸೇರಿಕೊಂಡಿತ್ತು. ಅದು ಕೇವಲ ಒಂದು ಪಕ್ಷ ಅಥವಾ ಒಬ್ಬ ನಾಯಕನ ವಿರುದ್ಧದ ಪ್ರತಿಭಟನೆಯಾಗಿರಲಿಲ್ಲ.

ಅದು ಇಡೀ ರಾಜಕೀಯ ಹಾಗೂ ಆಡಳಿತ ವ್ಯವಸ್ಥೆಯ ವಿರುದ್ಧ ನೇಪಾಳದ ಯುವಕರ ಆಕ್ರೋಶ.

ಒಲಿ, ಪ್ರಚಂಡ ಮತ್ತು ದೇವುಬಾ ಈ ಮೂವರೂ ನಾಯಕರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂಬುದು ಆ ಆಕ್ರೋಶದ ತೀವ್ರತೆಯನ್ನು ಸೂಚಿಸುತ್ತದೆ.

ನೇಪಾಳದ ರಾಜಕೀಯವನ್ನು ಆಳುತ್ತಿರುವ ಮೂವರು ದೈತ್ಯರು ಇವರು. ಅವರು 30 ವರ್ಷಗಳಿಂದ ನೇಪಾಳವನ್ನು ಆಳಿದ್ದಾರೆ. ಆದರೆ ಇಂದು ನೇಪಾಳದ ಯುವಕರು, ನೀವು ಯಾವುದೇ ಪಕ್ಷದವರಾಗಿರಬಹುದು, ಎಷ್ಟೇ ದೊಡ್ಡ ನಾಯಕರಾಗಿರಬಹುದು, ನಾವು ಹೊಸ ಆರಂಭ ಬಯಸುತ್ತೇವೆ ಎನ್ನುತ್ತಿದ್ದಾರೆ.

ಈ ಕ್ರಾಂತಿಯ ನಂತರ ನೇಪಾಳ ಕೂಡ ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಹಾದಿಯಲ್ಲಿದೆಯೆ?

ನೇಪಾಳದಲ್ಲಿ ರಾಜಪ್ರಭುತ್ವ ಕೊನೆಗೊಂಡು ಹೊಸ ಸಂವಿಧಾನ ಜಾರಿಗೆ ಬಂದು 16 ವರ್ಷಗಳು ಕಳೆದಿವೆ. ಆದರೆ ಸಾಮಾನ್ಯ ನೇಪಾಳಿಗಳ ಜೀವನದಲ್ಲಿ ಇನ್ನೂ ಯಾವುದೇ ಗಮನಾರ್ಹ ಬದಲಾವಣೆಗಳಾಗಿಲ್ಲ.

ಆರ್ಥಿಕ ಬೆಳವಣಿಗೆ ಇನ್ನೂ ತೀರಾ ನಿಧಾನವಾಗಿದೆ. ಔಪಚಾರಿಕ ವಲಯದಲ್ಲಿ ಉದ್ಯೋಗಾವಕಾಶಗಳು ಇಲ್ಲವೇ ಇಲ್ಲ. ಪ್ರತೀ ವರ್ಷ ಸಾವಿರಾರು ಯುವ ನೇಪಾಳಿಗಳು ಉದ್ಯೋಗ ಹುಡುಕಿಕೊಂಡು ದೇಶದಿಂದ ಹೊರಗೆ ಹೋಗಬೇಕಾಗಿದೆ ಮತ್ತು ಅಲ್ಲಿಯೂ ಅನೇಕರಿಗೆ ಸಣ್ಣಪುಟ್ಟ ಉದ್ಯೋಗಗಳು ಮಾತ್ರ ಸಿಗುತ್ತವೆ.

ಇದರ ಜೊತೆಗೆ, ಜನರು ತುಂಬಾ ತೊಂದರೆಯಲ್ಲಿರುವಾಗ, ಸರಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಸಾರ್ವಜನಿಕರೊಂದಿಗಿನ ಅದರ ಸಂಪರ್ಕ ಇಲ್ಲವಾಗಿದೆ. ರಾಜಕೀಯ ನಾಯಕರೆಲ್ಲ ರಾಜರಂತೆ, ಚಕ್ರವರ್ತಿಗಳಂತೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.

ಎಲ್ಲಾ ರಾಜಕೀಯ ಪಕ್ಷಗಳಲ್ಲಿ ನಂಬಿಕೆ ಕಳೆದುಹೋದಾಗ, ಆರ್ಥಿಕ ಸ್ಥಿತಿ ಬಿಕ್ಕಟ್ಟಿನಲ್ಲಿದ್ದಾಗ ವ್ಯವಸ್ಥೆಯ ಬಗ್ಗೆ ಹತಾಶೆ ಸಹಜ. ನೇಪಾಳಿ ಯುವಕರು ಕೆಲ ಸಮಯದಿಂದ ಸಾಮಾಜಿಕ ಮಾಧ್ಯಮದಲ್ಲಿ ಈ ಕೋಪ ಮತ್ತು ಹತಾಶೆಯನ್ನು ವ್ಯಕ್ತಪಡಿಸುತ್ತಲೇ ಇದ್ದರು. ರಾಜಕೀಯ ಗಣ್ಯರ ಜೀವನಶೈಲಿ, ಅವರ ಮಕ್ಕಳು, ಅವರ ಐಷಾರಾಮಿ ಜೀವನ ಮತ್ತು ಸಾಮಾನ್ಯ ಜನರ ದೈನಂದಿನ ಸಮಸ್ಯೆಗಳ ಬಗ್ಗೆ ಅವರು ತಲೆಕೆಡಿಸಿಕೊಳ್ಳದಿರುವ ಬಗ್ಗೆ ಹೇಳುತ್ತಲೇ ಇದ್ದರು. ಜನರ ಸಮಸ್ಯೆಗಳಿಂದ ಅವರು ಸಂಪರ್ಕ ಕಡಿತಗೊಂಡಿರುವುದನ್ನು ಎತ್ತಿ ತೋರಿಸುತ್ತಿದ್ದರು.

ವಿರೋಧ ಪಕ್ಷ ಹಾಗೂ ಮಾಧ್ಯಮಗಳು ಎಲ್ಲವನ್ನೂ ವಿಫಲಗೊಳಿಸಿದಾಗ, ಸಾಮಾಜಿಕ ಮಾಧ್ಯಮವು ಸತ್ಯವನ್ನು ತೋರಿಸಲು ಸಹಾಯ ಮಾಡುತ್ತದೆ ಎಂದು ಹಲವು ಬಾರಿ ಕಂಡುಬಂದಿದೆ ಮತ್ತು ನೇಪಾಳದ ಪ್ರಭಾವಿ ಕುಟುಂಬಗಳ ಯುವಕರು ಆಮದು ಮಾಡಿಕೊಂಡ ಕಾರುಗಳ ಬಗ್ಗೆ, ರಜಾದಿನಗಳನ್ನು ವಿದೇಶಗಳಲ್ಲಿ ಕಳೆಯುವುದರ ಬಗ್ಗೆ ಜನರು ಪ್ರಶ್ನೆಗಳನ್ನೆತ್ತುತ್ತಿದ್ದರು. ರಾಜಕಾರಣಿಗಳಿಗೆ ಇಷ್ಟೆಲ್ಲ ಹಣ ಎಲ್ಲಿಂದ ಬರುತ್ತದೆ ಎಂದು ಅಲ್ಲಿನ ಯುವಕರು ಕೇಳತೊಡಗಿದ್ದರು.

ಅವರ ಈ ಅಸಮಾಧಾನ ಆನ್‌ಲೈನ್‌ನಲ್ಲಿ ತೀವ್ರವಾಗಿದ್ದಾಗಲೇ, ಕಳೆದ ವಾರ ನೇಪಾಳ ಸರಕಾರ ಸಾಮಾಜಿಕ ಮಾಧ್ಯಮದ ಮೇಲೆಯೇ ನಿಷೇಧ ಹೇರಿತ್ತು.

ಸೆಪ್ಟಂಬರ್ 4ರಂದು ನೇಪಾಳ ಸರಕಾರ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ರೆಡ್ಡಿಟ್, ಎಕ್ಸ್, ಯೂಟ್ಯೂಬ್‌ನಂಥ 26 ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸಿತು. ಈ ಕಂಪೆನಿಗಳು ಸರಕಾರಿ ಆದೇಶಗಳನ್ನು ಪಾಲಿಸಲು ಮತ್ತು ದೇಶದ ಕಾನೂನನ್ನು ಗೌರವಿಸಲು ಬಹಿರಂಗವಾಗಿ ನಿರಾಕರಿಸಿವೆ ಎಂದು ಸರಕಾರ ಹೇಳಿತು. ಅದಕ್ಕಾಗಿಯೇ ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದಿತು.

ಆದರೆ ವಾಸ್ತವವಾಗಿ, ನೇಪಾಳ ಸರಕಾರ ಸಾಮಾಜಿಕ ಮಾಧ್ಯಮವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿತ್ತು.

ಆನ್‌ಲೈನ್ ದ್ವೇಷ, ನಕಲಿ ಸುದ್ದಿ, ಸೈಬರ್ ಅಪರಾಧ ಮತ್ತು ತಪ್ಪು ಮಾಹಿತಿಯಂಥ ನೆಪಗಳನ್ನು ಅದು ಮುಂದೆ ಮಾಡಿತ್ತು. ಸರಕಾರದ ನಿಜವಾದ ಉದ್ದೇಶ, ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ತನ್ನ ರಹಸ್ಯಗಳು ಬಯಲಾಗುತ್ತಿರುವುದನ್ನು ತಡೆಯುವುದಾಗಿತ್ತು.

ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಸಮಯದಲ್ಲಿ, ನೇಪಾಳದ ಸುಪ್ರೀಂ ಕೋರ್ಟ್ ಸಹ ಸರಕಾರಕ್ಕೆ ಔಪಚಾರಿಕ ನೋಂದಣಿ ಇಲ್ಲದೆ ಯಾವುದೇ ಸಾಮಾಜಿಕ ಮಾಧ್ಯಮ ಕಂಪೆನಿಗೆ ನೇಪಾಳದಲ್ಲಿ ಅನುಮತಿ ನೀಡಬಾರದು ಎಂದು ಆದೇಶಿಸಿತ್ತು. ಈ ಆದೇಶ ಉಲ್ಲೇಖಿಸಿ, ನೇಪಾಳ ಸರಕಾರ ಎಲ್ಲಾ ಕಂಪೆನಿಗಳಿಗೆ ನೋಟಿಸ್ ನೀಡಿ, 7 ದಿನಗಳಲ್ಲಿ ನೋಂದಾಯಿಸಲು ಗಡುವು ನೀಡಿತ್ತು. ಇಲ್ಲದಿದ್ದರೆ ನಿಷೇಧಿಸುವುದಾಗಿ ಹೇಳಿತ್ತು.

ಅಮೆರಿಕದ ದೊಡ್ಡ ತಂತ್ರಜ್ಞಾನ ಸಂಸ್ಥೆಗಳು ಈ ಆದೇಶವನ್ನು ನಿರ್ಲಕ್ಷಿಸಿವೆ. ಆ ಬಳಿಕ ಎಲ್ಲಾ 26 ಸಾಮಾಜಿಕ ಮಾಧ್ಯಮ ಸೈಟ್‌ಗಳನ್ನು ನಿರ್ಬಂಧಿಸಲಾಗಿದೆ.

ಈಗಾಗಲೇ ವರ್ಷಗಳಿಂದ ನೇಪಾಳದ ರಾಜಕೀಯ ವ್ಯವಸ್ಥೆಯಿಂದ ನಿರಾಶೆಗೊಂಡಿದ್ದ ಜನರು, ಸರಕಾರದ ಈ ಕ್ರಮವನ್ನು ಒಪ್ಪಲಿಲ್ಲ. ಸಾಮಾಜಿಕ ಮಾಧ್ಯಮದ ಮೂಲಕವೇ ನೇಪಾಳದ ಯುವಕರು ತಮ್ಮ ವ್ಯವಹಾರಗಳನ್ನು ಪ್ರಚಾರ ಮಾಡುತ್ತಾರೆ, ಜಾಹೀರಾತು ನೀಡುತ್ತಾರೆ. ಹಾಗಿರುವಾಗ, ಸರಕಾರದ ಈ ನಿಷೇಧ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಾತ್ರ ಕಸಿದುಕೊಳ್ಳುತ್ತಿರಲಿಲ್ಲ.ಅದು ಒಟ್ಟು ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿತ್ತು ಮತ್ತು ಅದೇ ಸಮಯದಲ್ಲಿ ಆ ನಿರ್ಬಂಧ ಜನರ ಹೊಟ್ಟೆಯ ಮೇಲೆಯೂ ಹೊಡೆಯುತ್ತಿತ್ತು. ಆದ್ದರಿಂದ ಅಸಮಾಧಾನ ಸಹಜವಾಗಿಯೇ ಹೆಚ್ಚಿತು. ಆ ನೆಪದಲ್ಲಿ ಶುರುವಾದ ಪ್ರತಿಭಟನೆ ಕಡೆಗೆ ಸರಕಾರವನ್ನೇ ತೆಗೆಯುವವರೆಗೂ ಹೋಯಿತು.

ಆರಂಭದಿಂದಲೂ ಈ ಪ್ರತಿಭಟನೆ ಸಾಮಾಜಿಕ ಮಾಧ್ಯಮ ನಿಷೇಧವನ್ನು ವಿರೋಧಿಸುವುದಕ್ಕಿಂತ ಆಚೆಗಿನದ್ದಾಗಿತ್ತು. ಅದು ಎಲ್ಲಾ ಪಕ್ಷಗಳ ವಿರುದ್ಧದ ಚಳವಳಿಯ ರೂಪ ಪಡೆದುಕೊಂಡಿತ್ತು. ಸಂಪೂರ್ಣವಾಗಿ ಭ್ರಷ್ಟಾಚಾರ ವಿರೋಧಿ ಚಳವಳಿಯಾಗಿ ಬದಲಾಗಿತ್ತು.

ಸೆಪ್ಟಂಬರ್ 8ರ ಬೆಳಗ್ಗೆ ಸಾವಿರಾರು ಪ್ರತಿಭಟನಾಕಾರರು ಕಠ್ಮಂಡು, ಪೋಖರಾ, ಚಿತ್ವಾನ್‌ನಂಥ ನಗರಗಳ ಬೀದಿಗಿಳಿದರು. ಅತ್ಯಂತ ತೀವ್ರವಾದ ಪ್ರತಿಭಟನೆಗಳು ಕಠ್ಮಂಡುವಿನಲ್ಲಿ ನಡೆದವು. ಶಾಲಾ ಕಾಲೇಜು ವಿದ್ಯಾರ್ಥಿಗಳು ತಮ್ಮ ಸಮವಸ್ತ್ರದಲ್ಲಿಯೇ ಕೈಯಲ್ಲಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಬ್ರಿಜೇಶ್ವರದ ಕಡೆಗೆ ಮೆರವಣಿಗೆ ಸಾಗಿದಾಗ, ಇದ್ದಕ್ಕಿದ್ದಂತೆ ಪೊಲೀಸರು ಅವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಆದರೆ ಮೆರವಣಿಗೆಯಲ್ಲಿದ್ದವರು ಗಲಭೆ, ಹಿಂಸಾಚಾರ, ಬೆಂಕಿ ಹಚ್ಚುವುದಕ್ಕೆ ಇಳಿದರು. ಹಾಗಾಗಿ ಪೊಲೀಸರು ಗುಂಡು ಹಾರಿಸಬೇಕಾಯಿತು ಎಂದು ಸರಕಾರ ಹೇಳತೊಡಗಿತು. ಅಂತಿಮವಾಗಿ ಕಂಡಲ್ಲಿ ಗುಂಡು ಆದೇಶ ನೀಡಲಾಯಿತು.

ಜನಸಮೂಹಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ಅರ್ಥವಾಗುತ್ತಿರಲಿಲ್ಲ. ಕೆಲವರು ಕೋಪದಿಂದ ಸಂಸತ್ತಿನ ಕಡೆಗೆ ಓಡಿ, ಅದರ ಗೇಟ್ ಅನ್ನು ಮುರಿದು ಒಳಪ್ರವೇಶಿಸಲು ಪ್ರಯತ್ನಿಸಿದರು. ಭದ್ರತಾ ಅಧಿಕಾರಿಗಳೊಂದಿಗೆ ಜಗಳಕ್ಕಿಳಿದರು. ಈ ಅವ್ಯವಸ್ಥೆ ಮತ್ತು ಗೊಂದಲ ಮುಗಿಯುವ ಹೊತ್ತಿಗೆ, 19 ಜನರು ಪ್ರಾಣ ಕಳಕೊಂಡಿದ್ದರು. 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅವರಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಅತ್ಯಂತ ಆಘಾತಕಾರಿ ವಿಷಯವೆಂದರೆ ಪೊಲೀಸರು 12 ವರ್ಷದ ಮಗುವಿಗೂ ಗುಂಡಿಟ್ಟಿದ್ದರು.

ಈ ಕ್ರೌರ್ಯ ಮತ್ತು ರಕ್ತಪಾತದ ನಂತರ ಇಡೀ ಪ್ರತಿಭಟನೆ ಬೇರೆಯದೇ ಬಣ್ಣ ಪಡೆದುಕೊಂಡಿತು. ಕೋಪ ನೇರವಾಗಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ವಿರುದ್ಧ ತಿರುಗಿತ್ತು. ಒಂದೇ ದಿನದಲ್ಲಿ 19 ಜನರನ್ನು ಕೊಂದ ಸರಕಾರವನ್ನು ಕ್ಷಮಿಸಲು ಸಾಧ್ಯವಿಲ್ಲ ಎಂಬ ಆಕ್ರೋಶ ವ್ಯಕ್ತವಾಯಿತು.

ಜನರ ಕೋಪ ಹೆಚ್ಚುತ್ತಿರುವುದನ್ನು ನೋಡಿ, ಗೃಹ ಸಚಿವರು ಸಂಜೆಯ ಹೊತ್ತಿಗೆ ಮೊದಲು ರಾಜೀನಾಮೆ ನೀಡಿದರು.

ರಾತ್ರಿಯ ಹೊತ್ತಿಗೆ, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ನಿಷೇಧವನ್ನು ಸಹ ತೆಗೆದುಹಾಕಲಾಯಿತು. ಆದರೆ ಆಗಲೇ ತುಂಬಾ ತಡವಾಗಿತ್ತು.

ಇಲ್ಲಿಯವರೆಗೆ ಅನೇಕ ಚಳವಳಿಗಳನ್ನು ಕಂಡ ನೇಪಾಳ, ಒಂದೇ ದಿನದಲ್ಲಿ ಇಷ್ಟು ದೊಡ್ಡ ಹತ್ಯಾಕಾಂಡವನ್ನು ಕಂಡಿರಲಿಲ್ಲ. ತಡರಾತ್ರಿಯ ಹೊತ್ತಿಗೆ ಪ್ರಧಾನಿ ಒಲಿ ಸ್ವತಃ ಹೇಳಿಕೆ ನೀಡಿ, ನಾವು ಪ್ರತಿಭಟನಾಕಾರರ ವಿರುದ್ಧ ಇಲ್ಲ ಎಂದರು. ಆದರೆ ಪ್ರತಿಭಟನಾಕಾರರು ಪ್ರಧಾನಿಯ ರಾಜೀನಾಮೆ ಕೇಳತೊಡಗಿದ್ದರು. ನೇಪಾಳವನ್ನು ಮುನ್ನಡೆಸಲು ಒಲಿ ಅನರ್ಹ ಎನ್ನಲಾಯಿತು.

ಮಂಗಳವಾರವೂ ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಕಠ್ಮಂಡುವಿನ ಬೀದಿಗಳಿಗೆ ಬಂದರು. ಕರ್ಫ್ಯೂ ವಿಧಿಸಿದರೂ ಜನರ ಅಲೆ ನಿಲ್ಲುತ್ತಿರಲಿಲ್ಲ.

ಗೃಹ ಸಚಿವರ ನಂತರ ಮತ್ತೊಬ್ಬ ಕ್ಯಾಬಿನೆಟ್ ಸಚಿವ ರಾಮನಾಥ್ ಅಧಿಕಾರಿ ಕೂಡ ರಾಜೀನಾಮೆ ನೀಡಿದರು. ಆದರೆ ಜನರ ಕೋಪ ಪ್ರಧಾನಿ ಒಲಿ ವಿರುದ್ಧವಿತ್ತು. ಅದಕ್ಕಾಗಿಯೇ ನೇಪಾಳದ ಕ್ಯಾಬಿನೆಟ್ ಸದಸ್ಯರ ಮನೆಗಳ ಮೇಲೆ ದಾಳಿ ಶುರುವಾಯಿತು. ಸಚಿವರ ಮನೆಗಳನ್ನು ಧ್ವಂಸಗೊಳಿಸಲಾಯಿತು.

ಪ್ರಧಾನಿ ಮತ್ತು ರಾಷ್ಟ್ರಾಧ್ಯಕ್ಷರ ಮನೆಗಳನ್ನು ಸಹ ಅವರು ಬಿಡಲಿಲ್ಲ. ಮಾಜಿ ಪ್ರಧಾನಿ ಝಾಲನಾಥ್ ಕನಾಲ್ ಅವರ ಮನೆಗೆ ನುಗ್ಗಿದ ಪ್ರತಿಭಟನಾಕಾರರು ಅವರ ಪತ್ನಿ ರಾಜ್ಯಲಕ್ಷ್ಮಿ ಚಿತ್ರಕಾರ್‌ರನ್ನು ಅಲ್ಲೇ ಕೂಡಿ ಹಾಕಿ ಮನೆಗೆ ಬೆಂಕಿ ಹಚ್ಚಿಬಿಟ್ಟರು. ಆಕೆ ಪ್ರಾಣ ಕಳೆದುಕೊಂಡರು ಎಂದು ವರದಿಯಾಗಿದೆ. ಕೊನೆಗೆ ಪ್ರಧಾನಿ ರಾಜೀನಾಮೆ ಕೊಡಬೇಕಾಯಿತು.

ಈ ರಾಜಕೀಯ ನಿರ್ವಾತದ ಹಿನ್ನೆಲೆಯಲ್ಲಿ, ನೇಪಾಳ ಸೇನೆಯು ಜವಾಬ್ದಾರಿ ವಹಿಸಿಕೊಂಡಿದೆ.

ರಾಷ್ಟ್ರೀಯ ಸ್ವಾತಂತ್ರ್ಯ, ಸಾರ್ವಭೌಮತೆ ಮತ್ತು ನೇಪಾಳದ ಜನರ ಭದ್ರತೆಯನ್ನು ಕಾಪಾಡುವ ಸಾಂವಿಧಾನಿಕ ಜವಾಬ್ದಾರಿಯನ್ನು ಹೊರಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಎಂದು ಸೇನೆ ಹೇಳಿದೆ.

ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡಲು, ವಿಶೇಷವಾಗಿ ಯುವಜನರು ಸಹಾಯ ಮಾಡಬೇಕೆಂದು ಸೇನೆಯು ಮನವಿ ಮಾಡಿದೆ.

ಒಲಿಯವರ ಖಾಸಗಿ ನಿವಾಸ ಸುಟ್ಟುಹೋಗಿದ್ದು, ಅನೇಕ ಪ್ರಮುಖ ರಾಜಕಾರಣಿಗಳ ಮನೆಗಳಿಗೂ ಬೆಂಕಿ ಹಚ್ಚಲಾಗಿದೆ. ಸರಕಾರದ ಪ್ರಮುಖ ಕಚೇರಿಗಳನ್ನು ಹೊಂದಿರುವ ಸಿಂಘಾ ದರ್ಬಾರ್ ಸಂಕೀರ್ಣದಲ್ಲಿ ಉಂಟಾದ ಬೆಂಕಿಯಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.

ಕಠ್ಮಂಡು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಬೆಂಕಿಯ ಕೆನ್ನಾಲಿಗೆ ಹಬ್ಬಿದ ಪರಿಣಾಮವಾಗಿ, ವಿಮಾನಯಾನವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಭದ್ರತಾ ಪಡೆಗಳು ರಾಜಧಾನಿ ಮತ್ತು ಪ್ರಮುಖ ನಗರಗಳಲ್ಲಿ ನಿಯಂತ್ರಣ ಸಾಧಿಸಲು ಹರಸಾಹಸ ಪಡುತ್ತಿದ್ದರೂ, ಮಂಗಳವಾರ ರಾತ್ರಿಯವರೆಗೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರಲಿಲ್ಲ ಎಂದು ತಿಳಿದು ಬಂದಿದೆ

ನೇಪಾಳವಾಗಲಿ ಅಥವಾ ಪ್ರಪಂಚದ ಯಾವುದೇ ದೇಶವಾಗಲಿ, ಹೊಸ ಪೀಳಿಗೆಯ ಆಕಾಂಕ್ಷೆಗಳನ್ನು ದಮನಿಸಲು ನೋಡಿದರೆ, ಒಂದು ದಿನ ಆ ಹೊಸ ಪೀಳಿಗೆ ಸಿಡಿಯುತ್ತದೆ.

ಎಂಥ ವ್ಯವಸ್ಥೆಯಿದ್ದರೂ ಆಗ ಬಿಕ್ಕಟ್ಟಿನಲ್ಲಿ ಸಿಲುಕುತ್ತದೆ.

ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಅನುಭವದಿಂದ ಕಲಿಯಲು ಮತ್ತು ಪರಿಸ್ಥಿತಿ ಇನ್ನಷ್ಟು ಹದಗೆಡುವ ಮೊದಲು ರಾಜಿ ಮಾಡಿಕೊಳ್ಳಲು, ಅದಕ್ಕೂ ಮೊದಲು ಒಂದು ಒಪ್ಪಂದಕ್ಕೆ ಬರಲು ನೇಪಾಳಕ್ಕೆ ಅವಕಾಶವಿದೆ. ಇದರಿಂದ ನೇಪಾಳ ಹೊಸ ಹಾದಿಯನ್ನು ಪ್ರಾರಂಭಿಸಬಹುದು.

ಈಗ ತಜ್ಞರು, ವಿದೇಶಿ ಶಕ್ತಿಗಳು ಈ ಬೆಳವಣಿಗೆಯಲ್ಲಿ ಭಾಗಿಯಾಗಿರಬಹುದೆ ಎಂಬುದರ ಕುರಿತು ಯೋಚಿಸುತ್ತಿದ್ದಾರೆ.

ಆದರೆ ರಾಜಕೀಯ ನಾಯಕತ್ವವೇ ದೇಶವನ್ನು ಮಾರಾಟ ಮಾಡಿದಾಗ, ಯಾವುದೇ ವಿದೇಶಿ ಶಕ್ತಿಯ ಅಗತ್ಯವಿಲ್ಲ.

ಸೆಪ್ಟಂಬರ್ 19, ನೇಪಾಳ 10 ವರ್ಷಗಳ ಹಿಂದೆ ತನ್ನ ಹೊಸ ಸಂವಿಧಾನವನ್ನು ಅಂಗೀಕರಿಸಿದ ದಿನ. ರಾಜಪ್ರಭುತ್ವದ ಬದಲು ಸಂಸದೀಯ ಗಣರಾಜ್ಯವಾದ ದಿನ. ಆ ವೇಳೆಗೆ ಎಲ್ಲಾ ಪಕ್ಷಗಳು ತಮ್ಮ ತಪ್ಪುಗಳನ್ನು ಒಪ್ಪಿಕೊಂಡರೆ, ತಮ್ಮ ಭ್ರಷ್ಟಾಚಾರವನ್ನು ಒಪ್ಪಿಕೊಂಡರೆ ಮತ್ತು ಪಾರದರ್ಶಕ ತನಿಖೆಗೆ ಅವಕಾಶ ಮಾಡಿಕೊಟ್ಟರೆ, ನೇಪಾಳ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಬಹುದು.

ಅಂತಿಮವಾಗಿ, ಇದು ಆ ದೊಡ್ಡ ರಾಜಕೀಯ ನಾಯಕರ ಕೈಯಲ್ಲಿದೆ. ಅವರು ನೇಪಾಳವನ್ನು ಇನ್ನಷ್ಟು ಸುಡುವುದನ್ನು ನೋಡಲು ಬಯಸುತ್ತಾರೆಯೇ? ಅಥವಾ ಅವರು ಒಟ್ಟಾಗಿ, ತಮ್ಮ ದುರಾಸೆಯನ್ನು ತ್ಯಜಿಸಿ ಮುಂದಿನ ಪೀಳಿಗೆಗೆ ಅಧಿಕಾರ ಕೊಡಲು ಬಯಸುತ್ತಾರೆಯೇ?

ಈ ಪ್ರಕ್ರಿಯೆ ಸುಲಭವಾಗಿ ಆಗಿಬಿಡುವುದಿಲ್ಲ.

ಆದರೆ ಇಷ್ಟು ವರ್ಷಗಳಿಂದ ಇದ್ದ ಕೆಟ್ಟ ಸ್ಥಿತಿಗಿಂತ ಖಂಡಿತ ಉತ್ತಮವಾಗುವ ಸಾಧ್ಯತೆಯಿದೆ.

share
ಪಿ.ಎಚ್. ಅರುಣ್
ಪಿ.ಎಚ್. ಅರುಣ್
Next Story
X