Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಫಾಕ್ ಖಾನ್ ಮಾಡಿರುವ ತಪ್ಪಾದರೂ ಏನು?

ಅಫಾಕ್ ಖಾನ್ ಮಾಡಿರುವ ತಪ್ಪಾದರೂ ಏನು?

ಎ.ಎನ್. ಯಾದವ್ಎ.ಎನ್. ಯಾದವ್23 Dec 2025 11:04 AM IST
share
ಅಫಾಕ್ ಖಾನ್ ಮಾಡಿರುವ ತಪ್ಪಾದರೂ ಏನು?

ಯುಪಿ ಪೊಲೀಸ್ ಇಲಾಖೆಯಲ್ಲಿನ ಒಂದು ಘಟನೆ ಚರ್ಚೆಯಾಗುತ್ತಿದೆ.

ಅದರ ವಿವರಗಳಿಗೆ ಹೋಗುವ ಮೊದಲು, ಯುಪಿ ಪೊಲೀಸರ ಮೂರು ಬಗೆಯ ಚಿತ್ರಣಗಳನ್ನು ಗಮನಿಸಬೇಕು.

ಮೊದಲನೆಯದು, ಸಂಚಾರ ಪೊಲೀಸ್ ಅಧಿಕಾರಿ ಅಫಾಕ್ ಖಾನ್ ಅವರು ಸಂಚಾರ ಜಾಗೃತಿ ವೀಡಿಯೊದಲ್ಲಿ ಹೆಣ್ಣುಮಕ್ಕಳು ಮತ್ತು ರಸ್ತೆ ಸುರಕ್ಷತೆ ಬಗ್ಗೆ ಮಾತನಾಡುವಾಗ ಪ್ರವಾದಿ ಮುಹಮ್ಮದ್ ಅವರನ್ನು ಉಲ್ಲೇಖಿಸಿದರು.

ಎರಡನೆಯದು, ಬಹರಾಯಿಚ್‌ನಲ್ಲಿ ಕಥಾವಾಚಕ ಪುಂಡರೀಕ್ ಗೋಸ್ವಾಮಿಗೆ ಗೌರವ ರಕ್ಷೆ ನೀಡಲಾಯಿತು.

ಮೂರನೆಯದು, ಕಾವಾಡಿಗಳ ಮೇಲೆ ಹೂವುಗಳನ್ನು ಸುರಿಸುವ, ಸ್ತುತಿಗೀತೆ ಹಾಡುತ್ತಿರುವ, ಕಾವಾಡಿಗಳ ಪಾದಗಳಿಗೆ ಮುಲಾಮು ಹಚ್ಚುತ್ತಿರುವ ಮತ್ತು ಹೋಳಿ ಆಡುತ್ತಿರುವ ಪೊಲೀಸರ ಚಿತ್ರ.

ಇವುಗಳಲ್ಲಿ ಅಫಾಕ್ ಖಾನ್ ಪ್ರಕರಣದಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲಾಗಿದೆ.

ಹಾಗಾದರೆ, ಇತರರ ಮೇಲೇಕೆ ಇಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

ಪ್ರವಾದಿ ಮುಹಮ್ಮದ್ ಅವರನ್ನು ಬದುಕನ್ನು ಪ್ರಸ್ತಾವಿಸಿ, ಹೆಣ್ಣುಮಕ್ಕಳನ್ನು ಆಶೀರ್ವಾದ ಎಂದು ಕರೆದದ್ದೇ ಕನೌಜ್ ಸಂಚಾರ ಪೊಲೀಸ್ ಅಧಿಕಾರಿಯ ತಪ್ಪಾಯಿತೆ? ಅಫಾಕ್ ಖಾನ್ ಯಾವುದೇ ನಿಯಮಗಳನ್ನು ಉಲ್ಲಂಘಿಸಿದ್ದಾರೆಯೇ? ಪೊಲೀಸ್ ಅಧಿಕಾರಿಗಳಿಗೆ ಸಾಮಾಜಿಕ ಮಾಧ್ಯಮ ನಿಯಮಗಳು ಯಾವುವು? ಎಂಬಿತ್ಯಾದಿ ಪ್ರಶ್ನೆಗಳೂ ಮೂಡುತ್ತವೆ.

ಕನೌಜ್‌ನ ಟ್ರಾಫಿಕ್ ಸಬ್ ಇನ್‌ಸ್ಪೆಕ್ಟರ್ ಅಫಾಕ್ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 9 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳು ಮತ್ತು ಯೂಟ್ಯೂಬ್‌ನಲ್ಲಿ ಸುಮಾರು 85 ಸಾವಿರ ಚಂದಾದಾರರು ಇದ್ದಾರೆ.

ಅವರು ಸಂಚಾರ ಜಾಗೃತಿ ಕುರಿತು ನೂರಾರು ವೀಡಿಯೊಗಳನ್ನು ಮಾಡಿದ್ದಾರೆ.ಆದರೆ ಒಂದು ವೀಡಿಯೊ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಫಾಕ್ ಖಾನ್ ಸಮವಸ್ತ್ರದಲ್ಲಿ ಧಾರ್ಮಿಕವಾಗಿ ಮಾತಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಅವರು ಹೇಳಿದ್ದಾದರೂ ಏನು?

‘‘ಹಿಂದೆ ಅರಬ್ ದೇಶಗಳಲ್ಲಿ ಒಂದು ಕುಟುಂಬದಲ್ಲಿ ಹೆಣ್ಣುಮಗು ಜನಿಸಿದರೆ ಜೀವಂತವಾಗಿ ಸಮಾಧಿ ಮಾಡಲಾಗುತ್ತಿತ್ತು. ಮದುವೆಯನ್ನು ಅವಮಾನವೆಂದು ಪರಿಗಣಿಸಲಾಗಿತ್ತು. ಆದರೆ ಪ್ರವಾದಿ ಮುಹಮ್ಮದ್ ಇದನ್ನು ವಿರೋಧಿಸಿದರು ಮತ್ತು ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಿದರು. ಹೆಣ್ಣುಮಗಳು ಜನಿಸಿದ ಪ್ರತಿಯೊಂದು ಮನೆಯ ಮೇಲೆಯೂ ದೇವರ ಆಶೀರ್ವಾದ ಇರುತ್ತದೆ’’ ಎಂದು ಅವರು ಹೇಳಿದರು.

‘‘ಹೆಣ್ಣುಮಗಳಿಲ್ಲದ ಪೋಷಕರೆಂದರೆ, ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿದಂತೆ’’ ಎಂದು ಅವರು ಹೋಲಿಸಿದರು.

ಹೀಗೆ ಅವರು ಹೆಣ್ಣುಮಕ್ಕಳ ಮಹತ್ವವನ್ನು ವಿವರಿಸುತ್ತಲೇ, ಹೆಣ್ಣುಮಕ್ಕಳು ಹೆಲ್ಮೆಟ್ ಧರಿಸುವ ಬಗ್ಗೆ ತಮ್ಮ ತಂದೆಗೆ ಹೇಗೆ ಅರಿವು ಮೂಡಿಸಬಹುದು ಎಂಬುದರ ಕುರಿತು ಮಾತನಾಡಿದರು.

ಇದು ಹಿಂದೂ ಸಂಘಟನೆಯ ಸದಸ್ಯರನ್ನು ಕೆರಳಿಸಿತು ಮತ್ತು ಅವರು ಎಸ್‌ಪಿಗೆ ದೂರು ನೀಡಿದ್ದಾರೆ. ಕನೌಜ್‌ನ ಹೆಚ್ಚುವರಿ ಎಸ್‌ಪಿ ಈ ವಿಷಯದ ತನಿಖೆ ಮಾಡುತ್ತಿದ್ದಾರೆ.

ಸಂಚಾರ ನಿಯಮಗಳು ಮತ್ತು ರಸ್ತೆ ಸುರಕ್ಷತೆಯನ್ನು ವಿವರಿಸಲು ಇದೇ ಅಫಾಕ್ ಖಾನ್ ಅವರು ಯಮನ ಪಾತ್ರವನ್ನು ಕೂಡ ಹಿಂದಿನ ವೀಡಿಯೊಗಳಲ್ಲಿ ಬಳಸಿದ್ದಾರೆ.

ಹಿಂದೂ ಧರ್ಮದಲ್ಲಿ ಯಮ ಸಾವಿನ ದೇವರು ಮತ್ತು ಆ ವೀಡಿಯೊ ವಿಚಾರವಾಗಿ ಅಫಾಕ್ ಖಾನ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಧಾರ್ಮಿಕ ತೀರ್ಥಯಾತ್ರೆಗಳಿಗೆ ಹೋಗುವ ಭಕ್ತರೊಂದಿಗೆ ಅಫಾಕ್ ಖಾನ್ ರಸ್ತೆ ಸುರಕ್ಷತೆ ಬಗ್ಗೆ ಮಾತನಾಡುವ ಇತರ ರೀತಿಯ ವೀಡಿಯೊಗಳಿವೆ.

ಅಫಾಕ್ ಖಾನ್ ಅವರು ಸಾಮಾಜಿಕ ಮಾಧ್ಯಮ ನೀತಿಗಳನ್ನು ಉಲ್ಲಂಘಿಸುತ್ತಿದ್ದರೆ, ಪೊಲೀಸರು ಮೊದಲೇ ಏಕೆ ಕ್ರಮ ಕೈಗೊಳ್ಳಲಿಲ್ಲ?

ಕನೌಜ್ ಪೊಲೀಸರು ಸಾಮಾಜಿಕ ಮಾಧ್ಯಮ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಶಿಕ್ಷಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಹಾಗಾದರೆ, ಈಗ ಯಾವ ನಿಯಮಗಳನ್ನು ಅಫಾಕ್ ಖಾನ್ ಉಲ್ಲಂಘಿಸಿದರು?

ಸಮವಸ್ತ್ರ ಧರಿಸಿದ ಅಧಿಕಾರಿ ಸಾಮಾಜಿಕ ಮಾಧ್ಯಮ ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣ ಇದು ಎಂದು ಅವರ ಹಿರಿಯ ಅಧಿಕಾರಿಗಳು ಹೇಳುತ್ತಿರುವ ಬಗ್ಗೆ ಕ್ವಿಂಟ್ ವರದಿ ಹೇಳುತ್ತಿದೆ.

ತನಿಖೆ ನಡೆಯುತ್ತಿರುವುದರಿಂದ, ಸ್ವತಃ ಅಫಾಕ್ ಖಾನ್ ಈ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದಿರುವುದಾಗಿಯೂ ವರದಿ ಹೇಳಿದೆ.

ಆದರೆ ತಾನು ಯಾವಾಗಲೂ ಸೌಹಾರ್ದದ ಬಗ್ಗೆ ಮಾತನಾಡುತ್ತೇನೆ. ಸಂಚಾರ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು ತನ್ನ ಗುರಿ. ಪ್ರತೀ ವರ್ಷ ಲಕ್ಷಾಂತರ ಜನರು ರಸ್ತೆ ಅಪಘಾತಗಳಲ್ಲಿ ಸಾಯುತ್ತಾರೆ. ನಾವು ಅದನ್ನು ಬಗೆಹರಿಸಬೇಕಾಗಿದೆ ಎಂದಿರುವ ಅಫಾಕ್ ಖಾನ್, ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳು ಮತ್ತು ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಅಭಿಯಾನಗಳ ಬಗ್ಗೆಯೂ ಅವರು ಹೇಳಿದ್ದಾರೆ. ಹೆಣ್ಣುಮಕ್ಕಳಿರುವ ಮನೆ ಸ್ವರ್ಗ ಎಂದು ಅವರು ಹೇಳಿದ್ದಾರೆ. ಹಾಗಿರುವಾಗ, ಅಫಾಕ್ ಖಾನ್ ವಿರುದ್ಧ ಕ್ರಮ ಏಕೆ?

ಉತ್ತರ ಪ್ರದೇಶದ ಮಾಜಿ ಡಿಜಿಪಿ ಡಾ. ವಿಕ್ರಮ್ ಸಿಂಗ್ ಅವರ ಹೇಳಿಕೆಯನ್ನು ಕ್ವಿಂಟ್ ವರದಿ ಉಲ್ಲೇಖಿಸಿದೆ. ಅವರು, ಅಫಾಕ್ ಖಾನ್ ಅವರನ್ನು ಏಕೆ ಸಸ್ಪೆಂಡ್ ಮಾಡಲಾಗಿದೆ ಎಂದು ತಿಳಿದುಕೊಳ್ಳಬೇಕಿದೆ ಎಂದಿದ್ದಾರೆ.

ಸಮವಸ್ತ್ರದಲ್ಲಿರುವಾಗ ನಮ್ಮ ದೇವರು, ದೇವತೆಗಳ ಬಗ್ಗೆ ಮಾತನಾಡುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಾಗೆ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು. ಆದರೆ ಹಾಗೆ ಮಾಡಿದರೂ, ಅದೇನೂ ಅಪರಾಧವಲ್ಲ. ಅವರು ಯಾವುದೇ ಅಪರಾಧ ಮಾಡಿಲ್ಲ, ಅವರು ಯಾವುದೇ ಅಶಿಸ್ತಿನ ನಡವಳಿಕೆ ತೋರಿಸಿಲ್ಲ. ಕೌನ್ಸೆಲಿಂಗ್ ಸಾಕಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಈಗ ಪ್ರಶ್ನೆಯೆಂದರೆ, ಅಫಾಕ್ ಖಾನ್ ಸಾಮಾಜಿಕ ಮಾಧ್ಯಮ ನೀತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆಯೇ ಎನ್ನುವುದು.

ಯುಪಿ ಪೊಲೀಸ್ ಸಾಮಾಜಿಕ ಮಾಧ್ಯಮ ನೀತಿ 2023 ಅನ್ನು ಗಮನಿಸಿದರೆ, ಪೊಲೀಸ್ ಸಿಬ್ಬಂದಿ ಸಾರ್ವಜನಿಕ ಸೇವೆಯಲ್ಲಿ ಅಥವಾ ಸಾರ್ವಜನಿಕರಿಗೆ ಸಹಾಯ ಮಾಡುವ ಯಾವುದೇ ಕೆಲಸವನ್ನು ತಮ್ಮ ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಮಾಡಬಹುದು ಮತ್ತು ಹಂಚಿಕೊಳ್ಳಬಹುದು ಎಂದು ಅದರಲ್ಲಿ ಹೇಳಲಾಗಿದೆ.

ಪೊಲೀಸ್ ಸಿಬ್ಬಂದಿ ತಮ್ಮ ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಸರಕಾರದ ಮೇಲೆ ಪ್ರಭಾವ ಬೀರದೆ ಶ್ಲಾಘನೀಯ ಪೊಲೀಸ್ ಕೆಲಸಕ್ಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ಮರುಟ್ವೀಟ್ ಮಾಡಬಹುದು, ಮರುಹಂಚಿಕೊಳ್ಳಬಹುದು, ಲೈಕ್ ಮಾಡಬಹುದು ಮತ್ತು ಕಮೆಂಟ್ ಮಾಡಬಹುದು ಎಂದು ಸಾಮಾಜಿಕ ಮಾಧ್ಯಮ ನೀತಿ ಹೇಳುತ್ತದೆ ಎಂದು ವರದಿ ಉಲ್ಲೇಖಿಸಿದೆ. ಹಾಗಿರುವಾಗ, ಅಫಾಕ್ ಖಾನ್ ಯಾವ ನಿಯಮ ಉಲ್ಲಂಘಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಒಂದುವೇಳೆ ಅವರು ಸಾಮಾಜಿಕ ಮಾಧ್ಯಮ ನೀತಿಯನ್ನು ಉಲ್ಲಂಘಿಸಿದ್ದಾರೆ ಎಂದೇ ಭಾವಿಸಿದರೂ, ಭಾರತದಲ್ಲಿ ಅನೇಕ ಪೊಲೀಸ್ ಅಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ರೀಲ್‌ಗಳ ಮೂಲಕ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಗಮನ ಸೆಳೆಯುತ್ತಾರೆ.

ಕ್ವಿಂಟ್ ವರದಿ ಪ್ರಕಾರ, ಉತ್ತರ ಪ್ರದೇಶದಲ್ಲಿಯೇ ಬಲ್ಲಿಯಾ ಟ್ರಾಫಿಕ್ ಪೊಲೀಸ್ ಅಧಿಕಾರಿ ರುದ್ರ ಪ್ರತಾಪ್ ಮಾಲ್ ಅವರ ಯೂಟ್ಯೂಬ್ ಚಾನೆಲ್‌ಗೆ 40 ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದಾರೆ. ನೂರಾರು ಜಾಗೃತಿ ವೀಡಿಯೊಗಳನ್ನು ಅವರು ಹಾಕಿದ್ದಾರೆ. ಡಿಎಸ್‌ಪಿ ಸಂತೋಷ್ ಪಟೇಲ್ ಸುಮಾರು 35 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಪಿ.ಕೆ. ಮಸ್ತ್ ಎಂಬವರು ಸುಮಾರು 24 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ವಿವೇಕಾನಂದ ತಿವಾರಿ ಸುಮಾರು 85 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಈ ಎಲ್ಲಾ ಪೊಲೀಸ್ ಅಧಿಕಾರಿಗಳು ತಮ್ಮ ಕೆಲಸದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಳ್ಳುತ್ತಾರೆ. ಅವರು ತುಂಬಾ ಸಕ್ರಿಯರಾಗಿದ್ದಾರೆ. ಹಾಗಾದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆಯೇ?

ಧಾರ್ಮಿಕ ನಾಯಕ ಅಥವಾ ಧಾರ್ಮಿಕ ಬೋಧನೆಗಳ ಮೂಲಕ ಜಾಗೃತಿ ಮೂಡಿಸುವುದು ಅಪರಾಧವಾಗಿದ್ದರೆ, ಪೊಲೀಸರು ಬಹರಾಯಿಚ್‌ನಲ್ಲಿ ಕಥಾವಾಚಕ ಪುಂಡರೀಕ್ ಗೋಸ್ವಾಮಿಗೆ ಏಕೆ ಸೆಲ್ಯೂಟ್ ಮಾಡುತ್ತಿದ್ದಾರೆಂದು ಯುಪಿ ಪೊಲೀಸರು ವಿವರಿಸಬೇಕು.

ಕಾವಾಡಿ ಯಾತ್ರಿಕರ ಮೇಲೆ ಹೂವುಗಳನ್ನು ಸುರಿಸುವುದು ಮತ್ತು ಹೋಳಿ ಬಣ್ಣಗಳನ್ನು ಲೇಪಿಸುವುದು ಮತ್ತು ಸಮವಸ್ತ್ರದಲ್ಲಿ ಭಜನೆಗಳನ್ನು ಹಾಡುವುದು ಸೇರಿದಂತೆ ವಿವಿಧ ಚಟುವಟಿಕೆಗಳಿಗಾಗಿ ಎಷ್ಟು ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗಿದೆ?

ದೇಶಾದ್ಯಂತ ಅನೇಕ ಪೊಲೀಸ್ ಠಾಣೆಗಳಲ್ಲಿ ದೇವಾಲಯಗಳಿವೆ. ಹಾಗಾದರೆ, ಪೊಲೀಸ್ ಅಧಿಕಾರಿಗಳು ಅಲ್ಲಿಗೆ ಹೋಗುವುದಿಲ್ಲವೇ?

2019ರಲ್ಲಿ ಬರೇಲಿ ಜಿಲ್ಲೆಯ ಭಮೋರಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಜಾವೇದ್ ಖಾನ್ ಶಿವ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಆ ಸಮಯದಲ್ಲಿ, ಜಾವೇದ್ ಖಾನ್ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಅವರನ್ನು ಹೊಗಳಲಾಯಿತು.

ಪೊಲೀಸರು ಪಕ್ಷಪಾತದಿಂದಲ್ಲ, ನ್ಯಾಯದಿಂದ ವರ್ತಿಸಬೇಕು. ಸಾಮಾನ್ಯ ಜನರು ಎಲ್ಲಾ ಧರ್ಮಗಳು, ಸಮಾಜಗಳು, ವರ್ಗಗಳು ಮತ್ತು ಜಾತಿಗಳನ್ನು ಒಂದೇ ಕಣ್ಣಿನಿಂದ ನೋಡಬೇಕು. ನಿಷ್ಠೆ, ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತದ ಪ್ರತಿಜ್ಞೆಯನ್ನು ಅವರು ನೆನಪಿಡಬೇಕು.

ಹಾಗಾದರೆ, ಇದೆಲ್ಲವೂ ಸರಿ ಎನ್ನುವುದಾದರೆ, ಈಗ ಅಫಾಕ್ ಖಾನ್ ಮಾಡಿರುವ ತಪ್ಪೇನು?

ಯುಪಿ ಪೊಲೀಸರು ಅಫಾಕ್ ಖಾನ್ ವಿರುದ್ಧದ ಕ್ರಮವನ್ನು ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ?

share
ಎ.ಎನ್. ಯಾದವ್
ಎ.ಎನ್. ಯಾದವ್
Next Story
X