Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ...

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಹೊಣೆ ಯಾರು?

ಅಜಿತ್ ಕೆ.ಸಿ.ಅಜಿತ್ ಕೆ.ಸಿ.8 May 2026 12:01 PM IST
share
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಹೊಣೆ ಯಾರು?

ಬಿಜೆಪಿಯವರು ವಿಜಯೋತ್ಸವ ಆಚರಿಸುವುದನ್ನು ಮರೆತರು. ಸಂಭ್ರಮಾಚರಣೆಗಿಂತ ಹಿಂಸೆಯನ್ನು ಆರಿಸಿಕೊಂಡರು.

ಹಾಗಾದರೆ, ಗೆಲುವನ್ನು ದ್ವೇಷ ಮತ್ತು ಹತಾಶೆಯನ್ನು ಮೀರಿ ನೋಡಲು ಏಕೆ ಇವರಿಗೆ ಸಾಧ್ಯವಾಗುತ್ತಿಲ್ಲ?

ಈ ಗೆಲುವು ನ್ಯಾಯಸಮ್ಮತ, ಕಾನೂನುಬದ್ಧ ಮತ್ತು ಸಾಂವಿಧಾನಿಕ ಅಧಿಕಾರಗಳ ದುರ್ಬಳಕೆ ಆಗಿಲ್ಲ ಎಂದಾದರೆ ಇಷ್ಟು ಹತಾಶೆ ಏಕೆ?

ಬಂಗಾಳವನ್ನು ಬಿಜೆಪಿ ಗೆದ್ದಿದೆ. ಆದರೆ ಅದು ಗೆದ್ದ ಬಂಗಾಳದಲ್ಲಿನ ಹಿಂಸಾಚಾರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಸುತ್ತಿರುವವರು ಯಾರು ಮತ್ತು ಅದನ್ನು ಬೆಂಬಲಿಸುತ್ತಿರುವವರು ಯಾರು ಎಂಬ ಪ್ರಶ್ನೆಯೆದ್ದಿದೆ.

ಲಕ್ಷಾಂತರ ಅರೆಸೈನಿಕ ಪಡೆಗಳು ಇನ್ನೂ ಅಲ್ಲಿ ನಿಯೋಜಿತವಾಗಿದ್ದರೂ, ಈ ಹಿಂಸಾಚಾರ ಹೇಗೆ ನಡೆಯಿತು, ಅದಕ್ಕೆ ಹೇಗೆ ಅವಕಾಶ ಕೊಡಲಾಯಿತು ಎಂದೂ ಕೇಳಬೇಕಾಗಿದೆ.

ಎರಡೂವರೆ ಲಕ್ಷ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದ್ದರೂ, ಬಹಿರಂಗ ಹಿಂಸಾಚಾರ ನಡೆಯುತ್ತಿದೆ.ಅವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ?

ಬಂಗಾಳದಲ್ಲಿನ ಈ ಹಿಂಸಾಚಾರ ಹಿಂದಿನ ರಾಜಕೀಯದ ಮುಂದುವರಿಕೆ ಅಥವಾ ವಿಸ್ತರಣೆಯಲ್ಲ. ಬದಲಿಗೆ, ಇದು ಕಳೆದ ದಶಕದ ದ್ವೇಷಪೂರಿತ ಮತ್ತು ಹಿಂಸಾತ್ಮಕ ರಾಜಕೀಯದ ವಿಸ್ತರಣೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.

ಹಿಂಸಾಚಾರ ಕೇವಲ ಬಿಜೆಪಿ ಮತ್ತು ಟಿಎಂಸಿ ನಡುವಿನದ್ದಲ್ಲ. ಇದು ಕೇವಲ ರಾಜಕೀಯ ಪಕ್ಷಗಳ ನಡುವಿನ ಹಿಂಸಾಚಾರವಲ್ಲ.

ಬಿಜೆಪಿ ಧ್ವಜಗಳನ್ನು ಹೊತ್ತ ಟಿಎಂಸಿ ಕಾರ್ಯಕರ್ತರೇ ಟಿಎಂಸಿ ಕಚೇರಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಈ ಆರೋಪ ಮಾಡುತ್ತ್ತಿದೆ. ಹಾಗಾದರೆ ಅವರು ತಮ್ಮದೇ ಪಕ್ಷ ಮತ್ತು ನಾಯಕರ ಮೇಲೆ ಟಿಎಂಸಿ ಕಾರ್ಯಕರ್ತರು ಕೋಪಗೊಂಡಿದ್ದಾರೆಯೆ? ಬಿಜೆಪಿ ಗೆದ್ದ ತಕ್ಷಣ ಅವರು ತಮ್ಮದೇ ಪಕ್ಷದ ಕಚೇರಿಗಳನ್ನು ಸುಟ್ಟುಹಾಕಲು ಬಂದರೆ? ಟಿಎಂಸಿ ಅನೇಕ ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡಿದೆ ಎನ್ನಲಾಗುತ್ತಿದೆ.

ಹಿಂಸಾಚಾರದಲ್ಲಿ ಯಾವುದೇ ಬಿಜೆಪಿ ಕಾರ್ಯಕರ್ತರು ತೊಡಗಿದ್ದರೆ, ಅವರನ್ನು ಪಕ್ಷದಿಂದ ಹೊರಹಾಕಲಾಗುವುದು ಎಂದು ಬಿಜೆಪಿ ಹೇಳಿದೆ. ಬಂಗಾಳದಲ್ಲಿ ಹಿಂಸಾಚಾರದ ಸಂಸ್ಕೃತಿ ಕೊನೆಗೊಳಿಸಲು ಬಯಸುತ್ತೇವೆ ಎಂದು ಬಂಗಾಳ ಬಿಜೆಪಿ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ. ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಿ ಮತ್ತು ಬಿಜೆಪಿಯವರೆಂಬುದನ್ನೂ ಲೆಕ್ಕಿಸದೆ ಜನರನ್ನು ಬಂಧಿಸಿ ಎಂದು ಅವರು ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ. ಅಂದರೆ, ಬಿಜೆಪಿ ಕಾರ್ಯಕರ್ತರು ಹಿಂಸಾಚಾರದಲ್ಲಿ ಭಾಗಿಯಾಗಿರಬಹುದು ಎಂದು ಅವರು ನಂಬುತ್ತಾರೆ.

ಮಮತಾ ಬ್ಯಾನರ್ಜಿ ಮತ್ತು ಅವರ ಕುಟುಂಬವನ್ನು ನಿಂದಿಸುವ ಯಾರನ್ನೇ ಆದರೂ ಪಕ್ಷದಿಂದ ಹೊರಹಾಕಲಾಗುವುದು ಎಂದು ಘೋಷಿಸಿದ್ದಾರೆ. ಹಾಗಾದರೆ, ಇಂಥ ಪರಿಸ್ಥಿತಿಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿಗೆ ಒದಗಿಸಲಾದ ಹೆಚ್ಚುವರಿ ಭದ್ರತೆಯನ್ನು ಏಕೆ ತೆಗೆದುಹಾಕಲಾಗುತ್ತಿದೆ?

ತಮ್ಮ ಪಕ್ಷದ ಸದಸ್ಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ದಕ್ಷಿಣ ಬಂಗಾಳದಿಂದ ಉತ್ತರ ಬಂಗಾಳದವರೆಗೆ ಬಿಜೆಪಿ ತನ್ನ ಗೂಂಡಾಗಳ ಮೂಲಕ ಹಿಂಸಾಚಾರದಲ್ಲಿ ತೊಡಗಿದೆ, ಅನೇಕ ಟಿಎಂಸಿ ಕಚೇರಿಗಳನ್ನು ಆಕ್ರಮಿಸಲಾಗಿದೆ ಎಂದು ಅವರು ದೂರಿದ್ದಾರೆ.

ಹಿಂಸಾಚಾರದಿಂದ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಪಕ್ಷದ 10 ನಾಯಕರ ತಂಡವನ್ನು ಬ್ಯಾನರ್ಜಿ ರಚಿಸಿದ್ದಾರೆ.

ರಾಜ್ಯ ಮಟ್ಟದ ಆರೆಸ್ಸೆಸ್ ನಾಯಕ ವಿಷ್ಣು ಬಸು, ಹಿಂಸಾಚಾರದಿಂದ ದೂರವಿರಲು ಸಂಘದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಆದರೆ, ಬಂಗಾಳದ ಹಿಂಸಾತ್ಮಕ ಸಂಸ್ಕೃತಿಯ ಹೆಸರಿನಲ್ಲಿ ಈಗಾಗಲೇ ಹಿಂಸೆಗೆ ಜಾಗ ಮಾಡಿಕೊಡಲಾಗಿದೆ ಮತ್ತು ಹಿಂಸಾಚಾರದ ನಂತರ ಅದನ್ನು ನಿಲ್ಲಿಸಲು ಮನವಿ ಮಾಡಲಾಗುತ್ತಿದೆ.

ಕೋಲ್ಕತಾದಲ್ಲಿ 24 ಗಂಟೆಗಳ ಒಳಗೆ ಇಬ್ಬರು ಸಾವನ್ನಪ್ಪಿದರು. ಆದರೆ ಫಲಿತಾಂಶದ ನಂತರದ ಭಾಷಣದಲ್ಲಿ ಮೋದಿ, ಮೊದಲ ಬಾರಿಗೆ ಬಂಗಾಳ ಚುನಾವಣೆಯಲ್ಲಿ ಯಾರೂ ಸಾವನ್ನಪ್ಪಿಲ್ಲ ಎಂದು ಹೇಳಿದರು. ಅವರ ಹೇಳಿಕೆಯ 48 ಗಂಟೆಗಳಲ್ಲಿ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿತು. ನಾಲ್ಕು ಸಾವುಗಳಾದ ವರದಿಗಳು ಬಂದಿವೆ.

ಟಿಎಂಸಿ ಮತಗಟ್ಟೆ ಏಜೆಂಟ್ ವಿಶ್ವಜಿತ್ ಪಟ್ನಾಯಕ್ ಅವರನ್ನು ಕೊಲೆ ಮಾಡಲಾಯಿತು. ಅವರನ್ನು ಬೆನ್ನಟ್ಟಿ ಕೊಲ್ಲಲಾಯಿತು. ಅನೇಕ ಜನರು ಹತ್ತಿರದಲ್ಲಿದ್ದರೂ, ಭಯದಿಂದ ಯಾರೂ ಅವರ ರಕ್ಷಣೆಗೆ ಬರಲಿಲ್ಲ.

ಹೌರಾದ ಬಿಜೆಪಿ ಕಾರ್ಯಕರ್ತ ಜಾಧವ್ ಬಾರ್ ಅವರನ್ನು ಟಿಎಂಸಿ ಕಾರ್ಯಕರ್ತರು ಹೊಡೆದು ಕೊಂದಿದ್ದಾರೆಂದು ಬಿಜೆಪಿ ಆರೋಪ ಮಾಡಿದೆ.

ಬಿಜೆಪಿ ಬೆಂಬಲಿಗರು ಟಿಎಂಸಿ ಬೆಂಬಲಿಗರಿಗೆ ಸೇರಿದ ಒಂಭತ್ತು ಮನೆಗಳನ್ನು ಧ್ವಂಸ ಮಾಡಿದ್ದಾರೆಂದು ಟಿಎಂಸಿ ಶಾಸಕ ಸಮೀರ್ ಪಂಜಾ ಆರೋಪಿಸಿದ್ದು, ಬಿಜೆಪಿ ಇದನ್ನು ನಿರಾಕರಿಸಿದೆ.

ಉತ್ತರ 24 ಪರಗಣದ ನ್ಯೂ ಟೌನ್‌ನಲ್ಲಿ ಬಿಜೆಪಿ ಕಾರ್ಯಕರ್ತ ಮಧುಮಂಡಲ್ ಹತ್ಯೆಯಾಗಿದೆ ಎಂಬ ವರದಿಯಿದೆ. ಬಿರ್ಭೂಮ್‌ನಲ್ಲಿ ಟಿಎಂಸಿ ಬೆಂಬಲಿಗ ಅಬೀರ್ ಶೇಕ್ ಕೂಡ ಕೊಲೆಯಾದ ಬಗ್ಗೆ ವರದಿಯಾಗಿದೆ.

ಹೆಚ್ಚಿನ ದಾಳಿಗಳು ಟಿಎಂಸಿ ಕಚೇರಿಗಳು, ಅದರ ಕಾರ್ಯಕರ್ತರ ಮನೆಗಳು ಮತ್ತು ಅಂಗಡಿಗಳ ಮೇಲೆ ನಡೆದಿವೆ.

ಹಿಂಸಾಚಾರದ ಈ ಸರಣಿ ಕೇವಲ ತಳಮಟ್ಟದ ಕಾರ್ಯಕರ್ತರಿಗೆ ಸೀಮಿತವಾಗದೆ, ಉನ್ನತ ನಾಯಕರ ನಿಕಟವರ್ತಿಗಳಿಗೂ ವ್ಯಾಪಿಸಿದೆ. ಸುವೇಂದು ಅಧಿಕಾರಿಯವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ಭೀಕರ ಹತ್ಯೆ ಇದಕ್ಕೆ ಸಾಕ್ಷಿ. ಮಧ್ಯಮ್‌ಗ್ರಾಮದಲ್ಲಿ ನಡೆದ ಈ ಹತ್ಯೆಯು ಬಿಜೆಪಿಯನ್ನು ತೀವ್ರವಾಗಿ ಕೆರಳಿಸಿದ್ದು, ಇದು ಕೇವಲ ವೈಯಕ್ತಿಕ ದ್ವೇಷವಲ್ಲದೆ ಪ್ರಭಾವಿ ನಾಯಕರನ್ನು ಬೆದರಿಸಲು ನಡೆಸುತ್ತಿರುವ ವ್ಯವಸ್ಥಿತ ಸಂಚು ಎಂದು ಬಿಜೆಪಿ ಆರೋಪಿಸಿದೆ.

ಲಕ್ಷಾಂತರ ಅರೆಸೈನಿಕ ಪಡೆಗಳು ಕಣ್ಗಾವಲು ನಡೆಸುತ್ತಿರುವಾಗಲೇ, ಪ್ರಭಾವಿ ನಾಯಕನ ನಿಕಟವರ್ತಿಯೊಬ್ಬನನ್ನು ಗುರಿಯಾಗಿಸಿ ಹತ್ಯೆ ಮಾಡಿರುವುದು ರಾಜ್ಯದ ಭದ್ರತಾ ವ್ಯವಸ್ಥೆಯ ವೈಫಲ್ಯದ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಇದಲ್ಲದೆ, ಮಮತಾ ಬ್ಯಾನರ್ಜಿಯಂತೆ ಉಡುಗೆ ಧರಿಸಿರುವ ಪುರುಷರು ಮತ್ತು ಮಹಿಳೆಯರ ಕುತ್ತಿಗೆಗೆ ಹಗ್ಗ ಹಾಕಿ ಎಳೆಯುತ್ತಿರುವುದನ್ನು ತೋರಿಸುವ ಹಲವಾರು ವೀಡಿಯೊಗಳು ಬಂದಿವೆ. ಈ ರೀತಿಯ ಹಿಂಸಾತ್ಮಕ ಅಭಿವ್ಯಕ್ತಿಯ ಅರ್ಥವೇನು?

ಮಮತಾ ಬ್ಯಾನರ್ಜಿ ಸೋತರೆ ಅವರು ಹಿಂಸಾಚಾರದಲ್ಲಿ ತೊಡಗುತ್ತಾರೆ ಎಂಬಂತೆ ಬಿಂಬಿಸಲಾಗುತ್ತಿದೆ.

ತುಂಬಾ ಹತಾಶೆ ಇತ್ತು. ಒಂದು ಸಮುದಾಯದ ಬಗ್ಗೆ ತುಂಬಾ ದ್ವೇಷವಿತ್ತು. ರಾಜಕೀಯ ಬದಲಾವಣೆಯ ಕನಸು ಕಾಣಲು ಬಿಜೆಪಿ ಈ ಹತಾಶ ಜನರನ್ನು ಆಧಾರವಾಗಿ ಬಳಸಿಕೊಂಡಿತೆ?

ರಾಜಕೀಯವಾಗಿ ತೊಡಗಿಸಿಕೊಳ್ಳಲು ವಿರೋಧ ಪಕ್ಷದಲ್ಲಿ ಯಾರೂ ಉಳಿದಿಲ್ಲ ಎಂದು ತೋರಿಸಲು ಮೊದಲ ದಿನದಿಂದಲೇ ಹಿಂಸಾಚಾರ ನಡೆಸಲಾಗುತ್ತಿದೆಯೇ? ಅಲ್ಲಿ ಬಿಜೆಪಿ ಮೊದಲ ಬಾರಿಗೆ ಗೆದ್ದಿರುವಾಗ, ಬಂಗಾಳವನ್ನು ಮಾತ್ರವಲ್ಲದೆ ಇಡೀ ದೇಶವನ್ನು ಬೆದರಿಸುವ ಪ್ರಯತ್ನವಾಗುತ್ತಿದೆಯೇ?

ಈ ಹಿಂಸಾಚಾರವನ್ನು ಬಂಗಾಳಕ್ಕೆ ಮಾತ್ರ ಸೀಮಿತವಾಗಿಸದೆ, 2014ರಿಂದ ಬಂಗಾಳದ ಹೊರಗೆ ಬಿಜೆಪಿಯನ್ನು ಬೆಂಬಲಿಸಿ ನಡೆಸುತ್ತಿರುವ ಹಿಂಸಾಚಾರದ ವಿಸ್ತರಣೆಯಾಗಿ ನೋಡಬೇಕು.

ಪಶ್ಚಿಮ ಬಂಗಾಳದಲ್ಲಿನ ಹಿಂಸಾಚಾರ ಕೇವಲ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿಲ್ಲ. ಅಕ್ರಮ ಎಂಬ ಕಾರಣಕ್ಕಾಗಿ ಯಾರೊಬ್ಬರ ಅಂಗಡಿಯ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ.ಅಕ್ರಮದ ಹೆಸರಿನಲ್ಲಿ, ಒಂದು ಸಮುದಾಯದ ಜನರನ್ನು ಗುರಿಯಾಗಿಸಲಾಗುತ್ತದೆಯೇ? ಅಕ್ರಮದ ನೆಪದಲ್ಲಿ ಎಲ್ಲಾ ಅಂಗಡಿಗಳನ್ನು ಗುರಿಯಾಗಿಸಲಾಗುತ್ತದೆಯೇ? ಬುಲ್ಡೋಜರ್ ನ್ಯಾಯದ ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಮರೆಯಲಾಗುತ್ತಿದೆಯೆ?

ಕೆಲವೊಮ್ಮೆ ಸರಕಾರ ಅಕ್ರಮದ ನೆಪದಲ್ಲಿ ಆರೋಪಿಗಳ ಮನೆಗಳನ್ನು ಗುರಿಯಾಗಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಮನೆ ಅಥವಾ ಅಂಗಡಿ ಅಕ್ರಮವಾಗಿದ್ದರೂ, ಅವರಿಗೆ 15 ದಿನಗಳ ನೋಟಿಸ್ ನೀಡಬೇಕು. ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ರಾಜ್ಯ ತೆರವು ಕಾರ್ಯಾಚರಣೆ ಪ್ರಾರಂಭಿಸಬಹುದು. ಸಂಪೂರ್ಣ ಪ್ರಕ್ರಿಯೆಯ ವೀಡಿಯೊ ಚಿತ್ರೀಕರಣ ಮಾಡಬೇಕಾಗುತ್ತದೆ. ಕಾನೂನು ಪ್ರಕ್ರಿಯೆಯ ಹೊರತಾಗಿ ಯಾರಾದರೂ ಯಾರೊಬ್ಬರ ಮನೆಯನ್ನು ಕೆಡವಿದರೆ, ಕುಟುಂಬಕ್ಕೆ ಪರಿಹಾರ ನೀಡಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅಧಿಕಾರಿಗಳು ಹಾಗೆ ಮಾಡಿದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುತ್ತದೆ. ಅವರು ತಮ್ಮ ಜೇಬಿನಿಂದ ಹಣ ಪಾವತಿಸಬೇಕಾಗುತ್ತದೆ.

ಆದರೆ ಜನಸಮೂಹದಲ್ಲಿ ಈ ಆದೇಶಗಳ ಬಗ್ಗೆ ಭಯ ಏಕೆ ಇಲ್ಲ? ಏಕೆಂದರೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಅವರಿಗೆ ತಿಳಿದಿದೆ.

ಯಾವುದೇ ಮೆರವಣಿಗೆಯಲ್ಲಿ ಜೆಸಿಬಿಗಳನ್ನು ಬಳಸಲಾಗುವುದಿಲ್ಲ ಎಂದು ಕೋಲ್ಕತಾ ಪೊಲೀಸ್ ಆಯುಕ್ತರು ಹೇಳಿದ್ದಾರೆ. ರ್ಯಾಲಿಗೆ ಜೆಸಿಬಿ ಬಾಡಿಗೆಗೆ ಪಡೆದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಜೆಸಿಬಿ ಮಾಲಕರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಹಲವು ವೀಡಿಯೊಗಳಲ್ಲಿ ಕಂಡಿರುವಂತೆ, ಜೆಸಿಬಿ ಯಂತ್ರಗಳನ್ನು ಒದಗಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ?

ಆ ವೀಡಿಯೊಗಳನ್ನು ನೋಡಿದ ನಂತರ ಕೆಲವರು, ಇದು ಅವರು ಬಯಸುವ ರಾಜಕೀಯವೆ ಮತ್ತು ಅವರು ಹೇಳುವ ಬದಲಾವಣೆಯೇ ಎಂದು ಆಶ್ಚರ್ಯ ಪಡುತ್ತಾರೆ.

ಕೆಲವು ಜನರು ಒಟ್ಟುಗೂಡಿದರೆ, ಅವರು ತಮ್ಮದೇ ಆದ ಸರಕಾರ ಬಂದಿದೆ ಎಂಬ ಧೈರ್ಯದಲ್ಲಿ ಯಾರದೋ ಅಂಗಡಿಯನ್ನು ಸುಡುತ್ತಾರೆ. ಬೀದಿಗಳಲ್ಲಿ ವಿರೋಧ ಪಕ್ಷದ ಕಾರ್ಯಕರ್ತರನ್ನು ಬೆನ್ನಟ್ಟಿ ಹೊಡೆಯುತ್ತಾರೆ, ಅವರನ್ನು ಕೊಲ್ಲುತ್ತಾರೆ. ಅವರ ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿ ಆಕ್ರಮಿಸುತ್ತಾರೆ.

ಒಂದು ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾನೆ ಮತ್ತು ಒಂಟಿ ಮಹಿಳೆಗೆ ಬೆದರಿಕೆ ಹಾಕಲಾಗುತ್ತಿದೆ.

ಧಾರ್ಮಿಕ ಘೋಷಣೆಗಳನ್ನು ಬೆದರಿಸುವ ಸಾಧನವಾಗಿ ಬಳಸಲಾಗುತ್ತಿದೆ.

ಕಾಂಗ್ರೆಸ್ ಮಾಧ್ಯಮ ವಕ್ತಾರೆ ಸುಪ್ರಿಯಾ ಶ್ರೀನೇತ್ ಈ ವೀಡಿಯೊ ಶೇರ್ ಮಾಡಿದ್ದಾರೆ.

ಇಂಥ ಎಲ್ಲಾ ವೀಡಿಯೊಗಳು ಹಿಂಸೆ ಮತ್ತು ಅಧಿಕಾರದ ನಡುವಿನ ಸಂಬಂಧ ಎಂಥದು ಎಂಬುದನ್ನು ತೋರಿಸುತ್ತವೆ ಮತ್ತು ಅಂಥ ಜನರ ಹಿಂಸೆಯ ಬಯಕೆಗೆ ಪೊಲೀಸರು ಬೆಂಬಲವಾಗಿ ಅಥವಾ ಶರಣಾಗಿ ನಿಲ್ಲುತ್ತಾರೆ. ಒಬ್ಬ ವ್ಯಕ್ತಿ ಮುಸ್ಲಿಮ್ ಎಂದಾದರೆ, ಅವನ ಅಂಗಡಿಯನ್ನು ಕೆಡವಬಹುದು ಎನ್ನುವ ಮಟ್ಟಿಗೆ ಇವರ ಅಧಿಕಾರದ ಪ್ರದರ್ಶನ ಮುಂದುವರಿದಿದೆ.

ಬಿಜೆಪಿಯವರು ವಿಜಯೋತ್ಸವ ಆಚರಿಸುವುದನ್ನು ಮರೆತರು. ಸಂಭ್ರಮಾಚರಣೆಗಿಂತ ಹಿಂಸೆಯನ್ನು ಆರಿಸಿಕೊಂಡರು.

ಹಾಗಾದರೆ, ಗೆಲುವನ್ನು ದ್ವೇಷ ಮತ್ತು ಹತಾಶೆಯನ್ನು ಮೀರಿ ನೋಡಲು ಏಕೆ ಇವರಿಗೆ ಸಾಧ್ಯವಾಗುತ್ತಿಲ್ಲ?

ಈ ಗೆಲುವು ನ್ಯಾಯಸಮ್ಮತ, ಕಾನೂನುಬದ್ಧ ಮತ್ತು ಸಾಂವಿಧಾನಿಕ ಅಧಿಕಾರಗಳ ದುರ್ಬಳಕೆ ಆಗಿಲ್ಲ ಎಂದಾದರೆ ಇಷ್ಟು ಹತಾಶೆ ಏಕೆ?

ಬಂಗಾಳವನ್ನು ಬಿಜೆಪಿ ಗೆದ್ದಿದೆ. ಆದರೆ ಅದು ಗೆದ್ದ ಬಂಗಾಳದಲ್ಲಿನ ಹಿಂಸಾಚಾರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಯಥಾಪ್ರಕಾರ, ಇವು ಕೂಡ ಉತ್ತರ ಸಿಗದ ಪ್ರಶ್ನೆಗಳೇ ಆಗಿ ಉಳಿಯಲಿವೆ.

Tags

responsibleWest Bengal
share
ಅಜಿತ್ ಕೆ.ಸಿ.
ಅಜಿತ್ ಕೆ.ಸಿ.
Next Story
X