Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಈ ಬೇಜವಾಬ್ದಾರಿತನಕ್ಕೆ ಹೊಣೆ ಯಾರು?

ಈ ಬೇಜವಾಬ್ದಾರಿತನಕ್ಕೆ ಹೊಣೆ ಯಾರು?

ಎಸ್. ಸುದರ್ಶನ್ಎಸ್. ಸುದರ್ಶನ್20 Feb 2026 12:00 PM IST
share
ಈ ಬೇಜವಾಬ್ದಾರಿತನಕ್ಕೆ ಹೊಣೆ ಯಾರು?

ಎಐ ಶೃಂಗಸಭೆಯಲ್ಲಿ ಅತಿದೊಡ್ಡ ಎಐ ಕಂಪೆನಿಯಾದ Nvidiaಗಿಂತ ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ.

ಶೃಂಗಸಭೆಯಿಂದ ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯವನ್ನು ಹೊರಹಾಕಲಾಗಿದೆ. ಶೃಂಗಸಭೆಯಿಂದ ವಿಶ್ವವಿದ್ಯಾನಿಲಯವನ್ನು ಹೊರಹಾಕಿರುವುದು ರಾಷ್ಟ್ರೀಯತೆಯಲ್ಲಿ ಮುಳುಗಿರುವ ಭಾರತದ ರಾಜಕೀಯಕ್ಕೆ ಮತ್ತು ಅದರ ಸರಕಾರದ ವಿಶ್ವಾಸಾರ್ಹತೆಗೆ ಒಳ್ಳೆಯದಂತೂ ಅಲ್ಲ. ಅದು ನೋವಿನ, ಅವಮಾನಕರ ಮತ್ತು ನಾಚಿಕೆಗೇಡಿನ ಸಂಗತಿ.

ಚೀನಾದ ರೋಬೊ ನಾಯಿಯನ್ನು ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯ ತನ್ನದೆಂದು ಹೇಳಿಕೊಂಡ ನಂತರ ಉಂಟಾದ ವಿವಾದದ ಬಗ್ಗೆ ಪ್ರೊಫೆಸರ್ ನೇಹಾ ಸಿಂಗ್ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡುತ್ತಿದ್ದರು. ಆದರೆ ಪರಿಸ್ಥಿತಿ ವಿಶ್ವವಿದ್ಯಾನಿಲಯದ ಮಳಿಗೆಯನ್ನು ಖಾಲಿ ಮಾಡುವ ಹಂತಕ್ಕೆ ಮುಟ್ಟಿತು.

ಪ್ರಪಂಚದಾದ್ಯಂತದ ಹಲವಾರು ಪ್ರಮುಖ ಪತ್ರಿಕೆಗಳು ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯ ಪ್ರದರ್ಶಿಸಿದ ಎಐ ನಾಯಿಯ ಬಗ್ಗೆ ಚರ್ಚಿಸುತ್ತಿವೆ.

ಇದನ್ನು ಚೀನಾದ ಕಂಪೆನಿ ತಯಾರಿಸಿದೆ ಮತ್ತು ವಿಶ್ವವಿದ್ಯಾನಿಲಯ ರೋಬೋಟ್ ನಾಯಿ ತನ್ನದೆಂದು ಹೇಳಿಕೊಂಡಿಲ್ಲ ಎಂದು ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯ ಹೇಳಿದೆ.

ಎಐ ಶೃಂಗಸಭೆಯ ಬಗ್ಗೆ ವಿಶ್ವಾದ್ಯಂತ ಅಪಖ್ಯಾತಿ ಹಬ್ಬುವಂತಾಗಿದೆ.

ಆದರೆ, ನಿಜವಾಗಿಯೂ ಈಗ ಇರುವ ಪ್ರಶ್ನೆಯೆಂದರೆ, ಇದಕ್ಕೆ ಹೊಣೆ ಅಶ್ವಿನಿ ವೈಷ್ಣವ್ ಅವರೋ ಅಥವಾ ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯವೋ ಎಂಬುದು.

ಐಟಿ ಸಚಿವ ಅಶ್ವಿನಿ ವೈಷ್ಣವ್ ಶೃಂಗಸಭೆಯನ್ನು ಹೊಗಳುವ ರೀಲ್ ಅನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಈ ರೋಬೋಟ್ ನಾಯಿಯೂ ಇತ್ತು. ನಂತರ ಅವರು ತಮ್ಮ ಪೋಸ್ಟ್ ಡಿಲೀಟ್ ಮಾಡಿದರು. ಅವರು ತಮ್ಮ ಟ್ವೀಟ್‌ನಲ್ಲಿ ಅದನ್ನು ಭಾರತದ ಸಾರ್ವಭೌಮತ್ವದ ಸಾಧನೆಗೆ ಲಿಂಕ್ ಮಾಡಿದ್ದರು.

ಇತ್ತೀಚಿನ ದಿನಗಳಲ್ಲಿ, ರಾಷ್ಟ್ರೀಯ ಎಂಬುದರ ಬದಲು ಸಾರ್ವಭೌಮ ಎಂದು ಬಳಸಲಾಗುತ್ತಿದೆ.

ಐಟಿ ಸಚಿವರ ಟ್ವೀಟ್ ಕೆಳಗೆ ಕಮೆಂಟುಗಳು ಬಂದವು. ರೋಬೊ ನಾಯಿ ಚೀನಾದ್ದೆಂಬುದರಿಂದ ಹಿಡಿದು ಅದು ಎಷ್ಟು ಬೆಲೆಗೆ ಸಿಗುತ್ತದೆ ಎನ್ನುವವರೆಗೂ ಮಾಹಿತಿಗಳಿದ್ದವು. ಕಡೆಗೆ, ಸಾರ್ವಭೌಮತ್ವದ ಸಾಧನೆ ಎಂದವರು ಟ್ವೀಟ್ ಡಿಲೀಟ್ ಮಾಡಬೇಕಾಯಿತು.

ಇದು ನಿಜವಾಗಿಯೂ ಮುಜುಗರದ ಸಂಗತಿ. ಜಾಗತಿಕ ಶೃಂಗಸಭೆಯಲ್ಲಿ ಇಂಥದೊಂದು ಭಯಂಕರ ಪ್ರಮಾದ ಆದದ್ದಾದರೂ ಹೇಗೆ?

ಮೋದಿಯವರೇ ಪ್ರಶಸ್ತಿ ನೀಡಿದ್ದ ಕುಲಪತಿಯಿರುವ ವಿಶ್ವವಿದ್ಯಾನಿಲಯದಿಂದಾಗಿ ಎಐ ಶೃಂಗಸಭೆಗೆ ಅವಮಾನವಾಗಿದೆ.

ಈಗ, ಎಐ ಶೃಂಗಸಭೆಯ ಸಂಘಟಕರು ಉತ್ತರ ಕೊಡಬೇಕಾಗಿದೆ.

ಚೀನಾ ತಯಾರಿಸಿದ ಈ ಎಐ ನಾಯಿಯನ್ನು ಖರೀದಿಸಿ, ಭಾರತದ ವಿಶ್ವವಿದ್ಯಾನಿಲಯ ಪ್ರದರ್ಶನ ನೀಡಲು ಯಾರು ಅನುಮತಿ ಕೊಟ್ಟರು? ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯ ಅದು ತಾನು ತಯಾರಿಸಿದ್ದೆಂದು ನಿಜವಾಗಿಯೂ ಹೇಳಿಕೊಂಡಿತ್ತೇ ಎಂಬುದನ್ನು ಸರಕಾರ ವಿವರಿಸಬೇಕಿದೆ.

ಭಾರತೀಯ ವಿಶ್ವವಿದ್ಯಾನಿಲಯ ಅದನ್ನು ತಯಾರಿಸಿಲ್ಲ ಎಂದಾದರೆ, ಅದಕ್ಕೆ ಓರಿಯನ್ ಎಂದು ಏಕೆ ಹೆಸರಿಡಲಾಯಿತು? ಈ ಇಡೀ ಬೆಳವಣಿಗೆ ಬಗ್ಗೆ ಎಲ್ಲೆಡೆ ತಿರಸ್ಕಾರ ಮತ್ತು ಖಂಡನೆ ವ್ಯಕ್ತವಾಗಿದೆ.

ಜಾಗತಿಕ ಶೃಂಗಸಭೆಯಿಂದ ಒಂದು ವಿಶ್ವವಿದ್ಯಾನಿಲಯವನ್ನು ಬಹಿರಂಗವಾಗಿಯೇ ಹೊರಹಾಕಲಾಗುತ್ತಿದೆ. ಇದಕ್ಕಿಂತ ಘೋರ ತಮಾಷೆ ಇನ್ನೊಂದಿದೆಯೆ?

ಬುಧವಾರ ಬೆಳಗ್ಗೆ ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ನೇಹಾ ಸಿಂಗ್ ಸ್ಟಾಲ್ ಖಾಲಿ ಮಾಡಲು ಸೂಚಿಸಲಾಗಿದೆ ಎಂಬುದನ್ನು ನಿರಾಕರಿಸುತ್ತಲೇ ಇದ್ದರು. ಸರಕಾರ ಏನನ್ನೂ ಹೇಳಿಲ್ಲ ಎಂದು ಅವರು ಹೇಳಿದ್ದರು. ಆದರೆ ಮಧ್ಯಾಹ್ನದ ಹೊತ್ತಿಗೆ, ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯದ ಮಳಿಗೆ ಖಾಲಿಯಾಗಿತ್ತು.

ರೋಬೋ ನಾಯಿಯನ್ನು ತಾವು ನಿರ್ಮಿಸಿದ್ದೇವೆ ಎಂದು ತಾನೆಂದೂ ಹೇಳಿಕೊಂಡಿಲ್ಲ ಎಂದು ಅವರು ಹೇಳಿದರು.

ಪ್ರೊಫೆಸರ್ ನೇಹಾ ಸಿಂಗ್ ನಿರ್ಮಾಣ ಮತ್ತು ಅಭಿವೃದ್ಧಿ ಪದಗಳನ್ನು ಗೊಂದಲಮಯವಾಗಿ ಬಳಸಿರುವುದರಿಂದ ಹೀಗಾಗಿದೆ ಎಂದು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ನಿತಿನ್ ಕುಮಾರ್ ಗೌರ್ ಸ್ಪಷ್ಟನೆ ನೀಡಿದ್ದಾರೆ.

ಅವರು ಎಐ ಪ್ರಾಧ್ಯಾಪಕಿಯಲ್ಲ. ಅವರು ಸ್ಕೂಲ್ ಆಫ್ ಮ್ಯಾನೇಜ್ಮೆಂಟ್‌ನಲ್ಲಿ ಸಂವಹನ ಪ್ರಾಧ್ಯಾಪಕಿ. ಹಾಗಿದ್ದರೆ, ವಿಶ್ವವಿದ್ಯಾನಿಲಯ ತಾನೇ ಹೇಳಿಕೊಂಡಂತೆ ಎಐನಲ್ಲಿ 350 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರೆ, ಅದು ಎಐ ಪ್ರಾಧ್ಯಾಪಕರನ್ನು ಕಳುಹಿಸಬೇಕಿತ್ತಲ್ಲವೆ? ಮತ್ತು ರೋಬೊಟ್ ತನ್ನದಲ್ಲ ಎಂದು ಸ್ಪಷ್ಟಪಡಿಸಿದ ಮೇಲೆ ನಿರ್ಮಾಣ ಮತ್ತು ಅಭಿವೃದ್ಧಿ ಪದಗಳ ಗೊಂದಲದ ಬಗ್ಗೆ ಏಕೆ ಕಥೆ ಹೇಳಲಾಗುತ್ತಿದೆ?

ಎಐ ಶೃಂಗಸಭೆಗೆ ಕೇವಲ ಒಂದು ವಾರದ ಮೊದಲು, ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯ ಈ ರೋಬೊಟ್ ಅನ್ನು ಪ್ರಚಾರ ಮಾಡಲು ಪ್ರಾರಂಭಿಸಿತು.

ಆದರೆ ಅದು ಚೀನೀ ರೋಬೊಟ್ ಎಂಬುದನ್ನು ಹೇಳಲಿಲ್ಲ.

ರೋಬೊಟ್‌ನ ದೇಹದ ಮೇಲೆ ಯುನಿಟ್ರಿ ಎಂಬ ಹೆಸರಿದ್ದರೂ, ಅದನ್ನು ಓರಿಯನ್ ಎಂದು ಹೊಸ ಹೆಸರಲ್ಲಿ ಪರಿಚಯಿಸಲಾಯಿತು.

ಚೀನಾಕ್ಕೆ ಈ ರೋಬೊ ನಾಯಿ ಯುನಿಟ್ರಿ ಹಳೆಯ ವಿಷಯವಾಗಿದೆ.ಅದು ಎರಡು ವರ್ಷಗಳ ಹಿಂದೆಯೇ ಇದನ್ನು ನಿರ್ಮಿಸಿ ಮಾರಾಟ ಮಾಡುತ್ತಿದೆ. ಆದರೆ ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯ ಇದನ್ನು ಭವಿಷ್ಯತ್ತಿನ ಬೆರಗು ಎಂಬಂತೆ ಹೇಳಿಕೊಂಡಿತ್ತು.

ಭಾರತೀಯ ವಿಶ್ವವಿದ್ಯಾನಿಲಯ ತನ್ನ ಸ್ಟಾಲ್‌ನಲ್ಲಿ ಚೀನಾ ಕಂಪೆನಿ ತಯಾರಿಸಿದ ಎಐ ನಾಯಿಯನ್ನು ಏಕೆ ಪ್ರದರ್ಶಿಸಿತು ಎಂಬುದು ಈಗ ಪ್ರಶ್ನೆ. ಅದರ ಹೆಸರಿನಲ್ಲಿ ಹೊಸ ಆವಿಷ್ಕಾರದ ಪೋಸ್ಟರ್‌ಗಳನ್ನು ಏಕೆ ಹಾಕಲಾಯಿತು?

ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯ ಎಐನಲ್ಲಿ 350 ಕೋಟಿ ರೂ. ಹೂಡಿಕೆ ಮಾಡಿ ಕೆಲಸ ಮಾಡುತ್ತಿದೆ ಎಂದಾದರೆ, ಚೀನಾದಿಂದ ಎಐ ನಾಯಿಯನ್ನು ಖರೀದಿಸುವುದು ಪ್ರಯೋಗಾಲಯಕ್ಕೆ ಒಳ್ಳೆಯದು.ಆದರೆ ಅದನ್ನು ಎಐ ಶೃಂಗಸಭೆಗೆ ತಂದು ಪ್ರದರ್ಶಿಸಬಾರದಿತ್ತು.

ರಾಹುಲ್ ಗಾಂಧಿ ಇದರ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಭಾರತದ ಪ್ರತಿಭೆ ಮತ್ತು ದತ್ತಾಂಶವನ್ನು ಪ್ರದರ್ಶಿಸಬೇಕಿತ್ತು. ಆದರೆ ಇದನ್ನು ಸಾರ್ವಜನಿಕ ಸಂಪರ್ಕ ಪ್ರದರ್ಶನವನ್ನಾಗಿ ಪರಿವರ್ತಿಸಲಾಗಿದೆ. ಭಾರತದ ದತ್ತಾಂಶವನ್ನು ಮಾರಾಟ ಮಾಡಲಾಗುತ್ತಿದೆ. ಚೀನಾದ ಸರಕುಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ರಾಹುಲ್ ಹೇಳಿದ್ದಾರೆ.

ಇಲ್ಲಿ ವಿಶ್ವವಿದ್ಯಾನಿಲಯ ಪ್ರೊಫೆಸರ್ ನೇಹಾ ಸಿಂಗ್‌ಗೆ ತಪ್ಪು ಮಾಹಿತಿ ನೀಡಿತ್ತೇ ಎಂಬ ಪ್ರಶ್ನೆಯೂ ಇದೆ. ವಿಶ್ವವಿದ್ಯಾನಿಲಯ ಈ ಶೃಂಗಸಭೆಯ ಸಂಘಟಕರಿಗೂ ತಪ್ಪು ಮಾಹಿತಿ ನೀಡಿದೆಯೇ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ಇದರಿಂದ ನೇಹಾ ಸಿಂಗ್ ಅವರ ಸಾಮಾಜಿಕ ಮತ್ತು ವೃತ್ತಿಪರ ಖ್ಯಾತಿಗೆ ತೀವ್ರ ಹಾನಿಯಾಗಿದೆ ಎಂಬುದು ಸ್ಪಷ್ಟ. ಅವರನ್ನು ಈ ಪರಿಸ್ಥಿತಿಗೆ ತಂದವರು ಯಾರು? ಸ್ಪಷ್ಟವಾಗಿ, ಇದು ವಿಶ್ವವಿದ್ಯಾನಿಲಯ ಮತ್ತು ಸಂಘಟಕರ ನಿರ್ಲಕ್ಷ್ಯ.

ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯದ ಬೋಧಕರು ಕೂಡ ನೇಹಾ ಸಿಂಗ್ ಪರವಾಗಿ ನಿಲ್ಲಲು ಧೈರ್ಯ ಮಾಡುತ್ತಿಲ್ಲ.

ವಿಶ್ವವಿದ್ಯಾನಿಲಯ ಅವರನ್ನು ಕೆಲಸದಿಂದ ತೆಗೆದುಹಾಕುತ್ತದೆಯೇ? ಅವರಿಗೆ ಬೇರೆ ಹುದ್ದೆ ಸಿಗುವುದು ಕಷ್ಟವಾಗುತ್ತದೆಯೇ? ಈ ಎಲ್ಲ ಪ್ರಶ್ನೆಗಳೂ ಇವೆ.

ಒಂದು ರೀತಿಯಲ್ಲಿ, ವಿಶ್ವವಿದ್ಯಾನಿಲಯ ನೇಹಾ ಸಿಂಗ್ ಅವರನ್ನು ಮುಜುಗರಕ್ಕೀಡು ಮಾಡುತ್ತಿದೆ.

ಎಐ ಶೃಂಗಸಭೆಯನ್ನು ವರದಿ ಮಾಡುತ್ತಿರುವ ವಿಧಾನ, ಭಾರತವನ್ನು ವಿಶ್ವನಾಯಕನನ್ನಾಗಿ ಮಾಡುವ ಹೆಸರಿನಲ್ಲಿ ಎಷ್ಟು ವಂಚನೆ ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಪತ್ರಕರ್ತ ರವೀಶ್ ಕುಮಾರ್ ಹೇಳುತ್ತಾರೆ.

ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯವನ್ನು ಶೃಂಗಸಭೆಯಿಂದ ಹೊರಹಾಕಲಾಗಿದೆಯೇ ಇಲ್ಲವೇ ಎಂಬುದರ ಬಗೆಗೂ ಅಸ್ಪಷ್ಟ ವರದಿಗಳಿದ್ದುದರ ಬಗ್ಗೆ ಅವರು ಉಲ್ಲೇಖಿಸುತ್ತಾರೆ.

ಇದರರ್ಥ ಎಲ್ಲವನ್ನೂ ಮುಚ್ಚಿಡಲಾಗುತ್ತಿದೆ. ಯಾರಿಗೂ ಏನನ್ನೂ ಹೇಳಲಾಗುತ್ತಿಲ್ಲ.

ಇನ್ನೊಂದೆಡೆ, ಶೃಂಗಸಭೆಯೊಳಗಿನ ಅವ್ಯವಸ್ಥೆಯ ಬಗ್ಗೆಯೂ ಸಿಕ್ಕಾಪಟ್ಟೆ ದೂರುಗಳಿವೆ. ದೊಡ್ಡ ಮೊತ್ತದ ಹಣ ನೀಡಿ ಮಳಿಗೆ ಇಟ್ಟಿರುವ ಕಂಪೆನಿಗಳು ತಮ್ಮ ಸರಕುಗಳು ಸುರಕ್ಷಿತವಾಗಿಲ್ಲ ಎಂದು ದೂರಿದ್ದಾರೆ. ಅವರು ಜನಸಂದಣಿಯಲ್ಲಿ ತಮ್ಮ ನಿರ್ದಿಷ್ಟ ಗ್ರಾಹಕರನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ಇಂಟರ್ನೆಟ್ ಸ್ಥಿರವಾಗಿಲ್ಲ, ಆದ್ದರಿಂದ ಲೈವ್ ಡೆಮೊಗಳು ಸಾಧ್ಯವಾಗುತ್ತಿಲ್ಲ. ವಿಐಪಿ ದಟ್ಟಣೆ ತುಂಬಾ ಹೆಚ್ಚಾಗಿದ್ದು ಅದು ನಿರಂತರವಾಗಿ ಅಡ್ಡಿಯಾಗುತ್ತಿದೆ. ಜನರು ಪ್ರವೇಶಿಸಲು ಅಥವಾ ನಿರ್ಗಮಿಸಲು ಸಾಧ್ಯವಿಲ್ಲ.

ನೋಂದಣಿಯನ್ನು ಮುಂಚಿತವಾಗಿ ಮಾಡಲಾಗಿರು ವುದರಿಂದ, ಎಷ್ಟು ಜನರು ಹಾಜರಾಗುತ್ತಾರೆಂದು ತಿಳಿದಿರುತ್ತದೆ. ಹಾಗಿರುವಾಗಲೂ, ಏಕೆ ಈ ಅವ್ಯವಸ್ಥೆ ಎಂಬ ಪ್ರಶ್ನೆಯಿದೆ.

ಮೊದಲ ದಿನದಿಂದಲೇ ಶುರುವಾದ ಈ ಅವ್ಯವಸ್ಥೆ, ಈಗ ಚೀನಾ ರೋಬೊವನ್ನು ಭಾರತದ ಸಾಧನೆ ಎಂದು ತೋರಿಸುವಂಥ ದೊಡ್ಡ ಪ್ರಮಾದದವರೆಗೂ ತಿರುಗಿತು.

ಈಗ ಎಲ್ಲದಕ್ಕೂ ಪ್ರೊಫೆಸರ್ ನೇಹಾ ಸಿಂಗ್ ಅವರನ್ನು ದೂಷಿಸಲಾಗುತ್ತಿದ್ದರೆ, ಅಲ್ಲಿಗೆ ಎಲ್ಲವೂ, ಎಲ್ಲರ ಹೊಣೆಗಾರಿಕೆಯೂ ಮುಗಿದಂತಾಯಿತೆ?

ಚೀನಾ ರೋಬೊವನ್ನು ಭಾರತದ ಸಾರ್ವಭೌಮತೆಗೆ ಲಿಂಕ್ ಮಾಡಿದ್ದ ಈ ದೇಶದ ಐಟಿ ಸಚಿವರು ಏನು ಉತ್ತರ ಕೊಡುತ್ತಾರೆ?

Tags

irresponsibility
share
ಎಸ್. ಸುದರ್ಶನ್
ಎಸ್. ಸುದರ್ಶನ್
Next Story
X