Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೈಸೂರಿನಲ್ಲಿ ಯದುವೀರ್ ಗೆ ಯಾರು ಮಾದರಿ?

ಮೈಸೂರಿನಲ್ಲಿ ಯದುವೀರ್ ಗೆ ಯಾರು ಮಾದರಿ?

ವಾರ್ತಾಭಾರತಿವಾರ್ತಾಭಾರತಿ8 April 2024 9:06 AM IST
share
ಮೈಸೂರಿನಲ್ಲಿ ಯದುವೀರ್ ಗೆ ಯಾರು ಮಾದರಿ?

ಮಾನ್ಯರೇ,

ಮೈಸೂರಿನ ರಾಜಮನೆತನದ ಪ್ರತಿನಿಧಿ ಶ್ರೀಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರಜಾಪ್ರಭುತ್ವ ವ್ಯವಸ್ಥೆ ಯ ಪ್ರತಿನಿಧಿಯಾಗಲು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದೊಂದು ಆರೋಗ್ಯಕರ ಬೆಳವಣಿಗೆ. ಆದರೆ ಪ್ರಶ್ನೆ ಯಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಮೈಸೂರು ರಾಜ ಪರಂಪರೆಯ ಯಾವ ರಾಜರ ಪ್ರತಿನಿಧಿಯಾಗಲು ಬಯಸುತ್ತಿದ್ದಾರೆ ಎನ್ನುವುದರಲ್ಲಿ.

ನಾಲ್ವಡಿಕೃಷ್ಣರಾಜ ಒಡೆಯರ್ ಗೂ ಹಿಂದೆ ಮೈಸೂರು ಸಂಸ್ಥಾನವನ್ನು ಆಳಿದವರು ಚಿಕ್ಕದೇವರಾಜ ಒಡೆಯರ್. ಈ ಚಿಕ್ಕದೇವರಾಜ ಒಡೆಯರ್ (ಆಳ್ವಿಕೆ 1673 - 1704)

ತನ್ನ ಮಂತ್ರಿ ತಿರುಮಲಯ್ಯಂಗಾರಿಯ ಮಾತು ಕೇಳಿ ಶೈವರನ್ನು, ಸ್ಮಾರ್ತ ಬ್ರಾಹ್ಮಣರನ್ನು ವೈಷ್ಣವರನ್ನಾಗಿ ಮತಾಂತರಿಸಲು ಆಜ್ಞಾಪಿಸುತ್ತಾನೆ. ಮತ್ತು ಹೆಚ್ಚಿನ ತೆರಿಗೆ ವಿಧಿಸುತ್ತಾನೆ.ಈ ಮತಾಂತರ ಮತ್ತು ತೆರಿಗೆ ಹೆಚ್ಚಳವನ್ನು ನಂಜನಗೂಡು ಸುತ್ತಲಿನ ಒಕ್ಕಲಿಗ ಲಿಂಗಾಯತರು ಪ್ರತಿಭಟಿಸುತ್ತಾರೆ.ಈ ಒಕ್ಕಲಿಗ ಲಿಂಗಾಯತ ರೈತರ ಪ್ರತಿಭಟನೆಗೆ ಜಂಗಮ ಗುರುಗಳು ಬೆಂಬಲ ಕೊಡುತ್ತಾರೆ.ಈ ಪ್ರತಿಭಟನೆ ಹತ್ತಿಕ್ಕಲು ಚಿಕ್ಕದೇವರಾಜ ಒಡೆಯರ್ ಜಂಗಮ ಗುರುಗಳನ್ನು ಮಾತುಕತೆಗೆ ಕರೆದು ಪ್ರತ್ಯೇಕ ಮಾತುಕತೆಯ

ನೆಪದಲ್ಲಿ ನಾಲ್ಕುನೂರು ಜಂಗಮರನ್ನೂ ತಲೆ ಕತ್ತರಿಸಿ ಮೊದಲೇ ತೆಗೆಸಿದ್ದ ಗುಂಡಿಗೆ ತುಂಬಿಸುತ್ತಾನೆ.

ಅದೇ ನಾಲ್ವಡಿಕೃಷ್ಣರಾಜ ಒಡೆಯರ್ ,ಭಾರತ ಸ್ವಾತಂತ್ರ್ಯ ಗಳಿಸುವ ಇಪ್ಪತೈದು ವರ್ಷಗಳಿಗೂ ಮೊದಲೇ ಪ್ರಜಾ ಪ್ರತಿನಿಧಿಸಭೆ ಸ್ಥಾಪಿಸಿ ,ಮೇಧಾವಿ ಇಂಜಿನಿಯರ್ ವಿಶ್ವೇಶ್ವರಯ್ಯರ ವಿರೋಧ ಮತ್ತು ಪದವಿ ತ್ಯಾಗವನ್ನೂ ಲೆಕ್ಕಿಸದೆ ಬ್ರಾಹ್ಮಣೇತರರಿಗೆ ಸರಕಾರದ ಆಡಳಿತದಲ್ಲಿ ಮೀಸಲಾತಿ ಜಾರಿ ಮಾಡುತ್ತಾರೆ.ಈಗ ಯದುವೀರರು ಅವರ

ಎರಡೂ ಸಂದರ್ಶನಗಳಲ್ಲಿ ಆರೆಸ್ಸೆಸ್ನ ತತ್ವಗಳು ತಮಗೆ ಒಪ್ಪಿಗೆಯಾಗಿವೆ ಮತ್ತು ಪ್ರಧಾನಿ ನರೇಂದ್ರ ಮೋದಿ ಯವರ ನಾಯಕತ್ವ ಬಹಳ ಶ್ರೇಷ್ಠವಾದುದು. ಆದ್ದರಿಂದ ತಾವು ಬಿಜೆಪಿ ಸೇರಿ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು 2022 ಕ್ಕೆ ರೈತರ ಆದಾಯವನ್ನು ದ್ವಿಗುಣ ಮಾಡುವುದಾಗಿ ಹೇಳಿದ್ದರು ಮತ್ತು

ಪ್ರತೀ ವರ್ಷ ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಟಿ ಸುವುದಾಗಿ ಹೇಳಿದ್ದರು.ಈ ಎರಡೂ ವಾಗ್ದಾನಗಳನ್ನು ಮುರಿದು ಮೋದಿಯವರು ದೇಶದ ರೈತರು ಮತ್ತು ಯುವ ಸಮುದಾಯದ ಎದುರು ವಚನ ಭ್ರಷ್ಟರಾಗಿದ್ದಾರೆ.ರೈತರ ಪ್ರತಿಭಟನೆಯನ್ನು ಮುರಿಯಲು ಜಗತ್ತು ನಾಚುವ ಅನಾಗರಿಕ ಕುತಂತ್ರದ ಕ್ರೂರ ಕ್ರಮಗಳಿಂದ ವಿಶ್ವ ಸಮುದಾಯದ ಟೀಕೆಗೆ ಗುರಿಯಾಗಿದ್ದಾರೆ.ವಿದ್ಯಾರ್ಥಿ ಚಳವಳಿಯನ್ನು ಹಿಂಸಾತ್ಮಕ ಮಾರ್ಗಗಳಿಂದ ಹತ್ತಿಕ್ಕಿ ಪದವಿಧರ ವಿದ್ಯಾರ್ಥಿಗಳಿಗೆ ಪಕೋಡ ಮಾರುವ ಹೊಸ ಉದ್ಯೋಗದ ದಾರಿ ಹೇಳಿದ್ದಾರೆ. ಮಹಿಳಾ ಕುಸ್ತಿ ಪಟುಗಳು

ಲೈಂಗಿಕ ಕಿರುಕುಳದ ವಿರುದ್ಧ ಮಾಡಿದ ಪ್ರತಿಭಟನೆಗೆ ಕುರುಡಾಗಿ ತಮ್ಮ ಬೇಟಿ ಬಚಾವೋ ಬೇಟಿ ಪಢಾವೋ ಘೋಷಣೆಗೆ ತಾವೇ ಮಣ್ಣು ಎರಚಿದ್ದಾರೆ.

ಈ ಯಾವ ಸಂದರ್ಭಗಳಲ್ಲೂ ಎಲ್ಲೂ ಬಾಯಿ ಬಿಚ್ಚಿ ತಮ್ಮ ಪ್ರತಿರೋಧ, ಪ್ರತಿಕ್ರಿಯೆ ವ್ಯಕ್ತಪಡಿಸಿದ ಉದಾಹರಣೆ ಇಲ್ಲದ ಯದುವೀರರು, ಮೈಸೂರು ರಾಜರು ಆರಂಭಿಸಿದ ಮೊದಲ ಹೆಣ್ಣು ಮಕ್ಕಳಶಾಲೆ ಯನ್ನು ರಾಮಕೃಷ್ಣ ಮಠವು ವಿವೇಕಾನಂದರ ಸ್ಮಾರಕದ ಹೆಸರಲ್ಲಿ ಆಪೋಶನ ತೆಗೆದು ಕೊಂಡಾಗ ತಮಗೂ ಇದಕ್ಕೂ ಯಾವ ಸಂಬಂಧ ಇಲ್ಲದವರಂತೆ ಇದ್ದುದು ಮೈಸೂರು ರಾಜ ಪರಂಪರೆಗೆ ಮಾಡಿದ ದ್ರೋಹವಲ್ಲವೇ ! ?

ಇಂತಹ ಯದುವೀರರನ್ನು ಮೈಸೂರಿನ ಲೋಕಸಭಾ ಕ್ಷೇತ್ರದ ಮತದಾರರು ಯಾಕೆ ತಮ್ಮ ಪ್ರತಿನಿಧಿ ಎಂದು ಆರಿಸಿ ಕಳಿಸಬೇಕು.ಯದುವೀರ್ ಈ ವರೆಗೂ ಪ್ರತಿನಿಧಿಸಿರುವುದು ಜನ ವಿರೋಧಿ ಚಿಕ್ಕದೇವರಾಜರನ್ನು.ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಯಾವ ಆದರ್ಶಗುಣಗಳ ವಾರಸುದಾರ ರಲ್ಲದ ಯದುವೀರ್ ಈಗ ಆಗಲು ಹೊರಟಿರುವುದು ಅದಕ್ಷತ್ತೆೆ ಭ್ರಷ್ಟತೆ ಮತ್ತು ಕ್ರೌರ್ಯದ ಹತ್ತು ವರ್ಷಗಳ ಆಡಳಿತ

ಕೊಟ್ಟಿರುವ ಬಿಜೆಪಿಯ ಪ್ರತಿನಿಧಿಯಾಗಿ, ಚಿಕ್ಕದೇವರಾಜರ್ ಪರಂಪರೆ ಮುಂದುವರಿಸಲು, ನಾಲ್ವಡಿಯವರು ಕಟ್ಟಿದ ಪ್ರಜಾಪ್ರಭುತ್ವ ಪರಂಪರೆಗೆ ಮಸಿ ಬಳಿಯಲು.

| ಉಗ್ರನರಸಿಂಹೇಗೌಡ, ಸರ್ವೋದಯ ಕರ್ನಾಟಕ ಮೈಸೂರು ಜಿಲ್ಲಾ ಅಧ್ಯಕ್ಷ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X