Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಈಗ ರಾಜೀನಾಮೆ ಕೊಡಬೇಕಾದವರು ಯಾರು?

ಈಗ ರಾಜೀನಾಮೆ ಕೊಡಬೇಕಾದವರು ಯಾರು?

ವಿನಯ್ ಕೆ.ವಿನಯ್ ಕೆ.1 Oct 2024 10:52 AM IST
share
ಈಗ ರಾಜೀನಾಮೆ ಕೊಡಬೇಕಾದವರು ಯಾರು?
ಮೈಸೂರಿನ ಮುಡಾ ಎಂಬ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮವನ್ನು ಇಟ್ಟುಕೊಂಡು ಜನಾದೇಶ ಪಡೆದಿರುವ ಮುಖ್ಯಮಂತ್ರಿಯನ್ನೇ ಕೆಳಗಿಳಿಸಲು ಹೊರಟಿದೆ ಬಿಜೆಪಿ. ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂಬುದು ಬಿಜೆಪಿಯ ಒನ್ ಪಾಯಿಂಟ್ ಅಜೆಂಡಾ ಆಗಿದೆ. ಸಿದ್ದರಾಮಯ್ಯ ವಿರುದ್ಧದ ಆರೋಪದ ತನಿಖೆಯೇ ಆಗಿಲ್ಲ, ಈಗಷ್ಟೇ ಎಫ್‌ಐಆರ್ ಆಗಿದೆ. ಆದರೆ ಬಿಜೆಪಿ ಪ್ರಕಾರ ಅವರು ರಾಜೀನಾಮೆ ಕೊಡಬೇಕು. ಹಾಗಾದರೆ ಇಡೀ ದೇಶದಲ್ಲಿ ವರ್ಷಗಟ್ಟಲೆ ನಡೆದಿರುವ ಸಾವಿರಾರು ಕೋಟಿಗಟ್ಟಲೆ ರೂಪಾಯಿಯ ಇಲೆಕ್ಟೊರಲ್ ಬಾಂಡ್ ಹಗರಣದಲ್ಲಿ ಯಾರ್ಯಾರು ರಾಜೀನಾಮೆ ಕೊಡಬೇಕು?

2014ರ ನಂತರ ಈ ದೇಶದಲ್ಲಿ ರಾಜಕೀಯ ಆರ್ಥಿಕತೆಯ ಚಿತ್ರ?ಣವೇ ಬದಲಾಗಿದೆ. ಚುನಾವಣಾ ವೆಚ್ಚ ಮಿತಿ ಮೀರುತ್ತಿರುವುದನ್ನು ಈಚಿನ ವರ್ಷಗಳಲ್ಲಿ ನೋಡುತ್ತಿದ್ದೇವೆ.

ಅದಕ್ಕೂ ಮೊದಲು ಅಬ್ಬಬ್ಬಾ ಎಂದರೆ ಒಂದು ಚುನಾವಣೆಗೆ 10 ಸಾವಿರ ಕೋಟಿ ರೂ. ಖರ್ಚಾಗುತ್ತಿತ್ತು. ಆದರೆ 2014ರಲ್ಲಿ ಎಲ್ಲಾ ದಾಖಲೆ ಬಿದ್ದುಹೋಗುವ ಹಾಗೆ, 60 ಸಾವಿರ ಕೋಟಿ ರೂ. ಗೂ ಹೆಚ್ಚು ಖರ್ಚಾದದ್ದು ಕಂಡುಬಂತು. ಈ 60 ಸಾವಿರ ಕೋಟಿ ರೂ. ಚುನಾವಣಾ ವೆಚ್ಚದ ದಾಖಲೆಯೂ 2019ರ ಚುನಾವಣೆಯಲ್ಲಿ ಮುರಿದುಬಿದ್ದಿತ್ತು. 2019ರಲ್ಲಿ ಚುನಾವಣೆಗೆ ಒಂದು ಲಕ್ಷ ಕೋಟಿ ರೂ.ಯಷ್ಟು ಖರ್ಚಾಯಿತು.

ಸರಕಾರದ ಜೊತೆಗಿರುವ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪೆನಿಗಳು ಏನನ್ನೇ ಬೇಕಾದರೂ ಕೊಡಲು ತಯಾರಿವೆ. ಸರಕಾರ ಮತ್ತು ಕಾರ್ಪೊರೇಟ್ ವಲಯದ ಸಂಬಂಧದ್ದೇ ಒಂದು ದೊಡ್ಡ ರಾಜಕೀಯವಾಗಿಬಿಟ್ಟಿದೆ. ಆದರೆ ಚುನಾವಣೆ ಹಣಕ್ಕಾಗಿ ಸ್ವತಃ ಸರಕಾರವೇ ನೇರ ವಸೂಲಿಗೆ ನಿಂತುಬಿಟ್ಟರೆ ಏನೇನೆಲ್ಲ ಆಗಬಹುದು? ದೇಶದ ಹಣಕಾಸು ಮಂತ್ರಿಯನ್ನು ಬಿಜೆಪಿಗೆ ದೊಡ್ಡ ಮೊತ್ತದ ಹಣ ತರುವ ಕೆಲಸ ಆಗಬೇಕೆಂದು ಹೇಳಿಯೇ ಆ ಹುದ್ದೆಗೆ ನೇಮಿಸಿದ್ದಲ್ಲಿ ಏನಾಗಬಹುದು?

ಸರಕಾರ ತಂದಿದ್ದ ಚುನಾವಣಾ ಬಾಂಡ್ ಯೋಜನೆ ಪಕ್ಷಕ್ಕೆ ಹಣ ಹರಿದುಬರುವುದಕ್ಕೆಂದೇ ತೀರಾ ಸುಲಭದ ದಾರಿಯೂ ಆಗಿಬಿಟ್ಟಿತು. ಬಿಜೆಪಿಗೆ ಚುನಾವಣಾ ಬಾಂಡ್ ಯೋಜನೆ ಮೂಲಕ ಹಣದ ಹೊಳೆಯೇ ಹರಿದುಬಂದಿತ್ತು. ಇತರ ಪಕ್ಷಗಳಿಗೂ ಹಣ ಬಂತಾದರೂ ಅದು ಬಿಜೆಪಿಗೆ ಬಂದುದಕ್ಕೆ ಹೋಲಿಸಿದರೆ ತೀರಾ ದೊಡ್ಡ ಮೊತ್ತವಾಗಿರಲಿಲ್ಲ.

ಕಡೆಗೆ ಆ ಯೋಜನೆಯನ್ನೇ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.

ಆದರೆ ದೇಶದ ಹಣಕಾಸು ಮಂತ್ರಿಯ ವಿರುದ್ಧವೇ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶಿಸಿದ್ದು ಒಂದು ಮಹತ್ವದ ವಿದ್ಯಮಾನ.

ಆಡಳಿತಾರೂಢ ಪಕ್ಷಕ್ಕಾಗಿ ಹಣ ತರಲು ಹಣಕಾಸು ಮಂತ್ರಿಯೇ ಆದೇಶಿಸುತ್ತಿದ್ದರು ಮತ್ತು ಆ ನಿಟ್ಟಿನಲ್ಲಿ ಈ.ಡಿ. ಸಕ್ರಿಯವಾಗಿತ್ತು ಎನ್ನುವುದು ಆಘಾತ ತರುವ ಸಂಗತಿ.

ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂ. ಸುಲಿಗೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳು, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಜೊತೆಗೆ ಈ.ಡಿ. ಅಂದರೆ ಜಾರಿ ನಿರ್ದೇಶನಾಲಯದ ವಿರುದ್ಧವೂ ಶನಿವಾರ ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆದರೆ ಕರ್ನಾಟಕ ಹೈಕೋರ್ಟ್ ಪ್ರಕರಣದ ವಿಚಾರಣೆಗೆ ಸೋಮವಾರ ತಡೆಯಾಜ್ಞೆ ನೀಡಿದೆ.

ಎಫ್‌ಐಆರ್ ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು.

ಅಧಿಕಾರ ದುರುಪಯೋಗಪಡಿಸಿಕೊಂಡು ಚುನಾವಣಾ ಬಾಂಡ್ ಪಡೆದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿತ್ತು.

ನಿರ್ಮಲಾ ಸೀತಾರಾಮನ್ ಮತ್ತಿತರರು ಚುನಾವಣಾ ಬಾಂಡ್‌ಗಳ ಸೋಗಿನಲ್ಲಿ ಸುಲಿಗೆ ದಂಧೆ ನಡೆಸಿದ್ದಾರೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಸಂಘಟನೆಯ (ಜೆಎಸ್‌ಪಿ) ಆದರ್ಶ ಅಯ್ಯರ್ ಎಂಬವರು ದೂರು ದಾಖಲಿಸಿದ್ದರು.

ಪ್ರಕರಣದಲ್ಲಿ ನಿರ್ಮಲಾ ಸೀತಾರಾಮನ್ ಆರೋಪಿ ನಂಬರ್ ಒನ್ ಆಗಿದ್ದಾರೆ. ಈ.ಡಿ. ಅಧಿಕಾರಿಗಳು ಎ2, ಕೇಂದ್ರ ಬಿಜೆಪಿ ಪದಾಧಿಕಾರಿಗಳು ಎ3, ನಳಿನ್ ಕುಮಾರ್ ಕಟೀಲು ಎ4, ಬಿ.ವೈ. ವಿಜಯೇಂದ್ರ ಎ5, ರಾಜ್ಯ ಬಿಜೆಪಿ ಪದಾಧಿಕಾರಿಗಳು ಎ6 ಆರೋಪಿಗಳಾಗಿದ್ದಾರೆ.

ಐಪಿಸಿ ಸೆಕ್ಷನ್ 384 (ಸುಲಿಗೆ), 120ಬಿ (ಅಪರಾಧಿಕ ಒಳಸಂಚು), 34ರ (ಸಮಾನ ಉದ್ದೇಶ) ಅಡಿಯಲ್ಲಿ ಕೇಸ್ ದಾಖಲಿಸಲಾಗಿತ್ತು.

ಅಕ್ರಮ ಹಣ ವರ್ಗಾವಣೆ ತಡೆಯಬೇಕಿದ್ದ ಈ.ಡಿ.ಯೇ ಹಣ ವಸೂಲಿಗೋಸ್ಕರ ನಿಂತುಬಿಟ್ಟಿತ್ತು, ಹಣಕಾಸು ಸಚಿವೆಯೇ ಈ ಹಗರಣದಲ್ಲಿ ಶಾಮೀಲಾಗಿದ್ದರು. ಪಕ್ಷದ ಅಧ್ಯಕ್ಷರೂ ಶಾಮೀಲಾಗಿದ್ದರು.

ಪಕ್ಷಕ್ಕಾಗಿ ಹಣವಂತೂ ಬೇಕಿತ್ತು. ಅದು ಎಲ್ಲಿ ಹೇಗೆ ಯಾವ ರೂಪದಲ್ಲಿ ಸಿಗಲಿದೆ? ಈಗ ರಾಜ್ಯದಲ್ಲಿ ಎಫ್‌ಐಆರ್ ಆಗಿರುವುದನ್ನು ನೋಡಿದರೆ, ಚುನಾವಣಾ ಬಾಂಡ್ ಯೋಜನೆಯ ಜಾತಕ ಬಯಲಾದರೆ ಇಡೀ ಸರಕಾರವೇ ಜೈಲು ಸೇರಬೇಕಾಗುವುದೆ?

ಈ ಯೋಜನೆ ಮೂಲಕ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗೆ ಹಣ ವಸೂಲಿ ಅತಿ ಸುಲಭವಾಗಿತ್ತು. ಆದರೆ ‘ನಾ ಖಾವೂಂಗಾ, ನಾ ಖಾನೇ ದೂಂಗಾ’ ಎನ್ನುವ ಮೋದಿಯವರು ಭಾಷಣದಲ್ಲಿ ಮಾತ್ರ ಈಗಲೂ ಬೇರೆ ಪಕ್ಷದವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವುದು ನಿಲ್ಲಿಸುತ್ತಿಲ್ಲ. ಇನ್ನೊಂದು ಕಡೆ ಬೇರೆ ಪಕ್ಷಗಳಿಂದ ಭ್ರಷ್ಟರನ್ನೇ ಅವರು ಹುಡುಕಿ ಹುಡುಕಿ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ.

ಇದೇ ಹೊತ್ತಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

‘‘ಬಿಜೆಪಿ ನಾಯಕರ ವಾದದ ಪ್ರಕಾರ ಈಗ ನಿರ್ಮಲಾ ಸೀತಾರಾಮನ್ ಅವರು ರಾಜೀನಾಮೆ ನೀಡಬೇಕು ಅಲ್ಲವೇ?’’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘‘ಅವರ ರಾಜೀನಾಮೆಗೆ ಬಿಜೆಪಿಯ ನಾಯಕರು ಯಾವಾಗ ಪ್ರತಿಭಟನೆ, ಪಾದಯಾತ್ರೆ ಮಾಡುತ್ತಾರೆ?’’ ಎಂದು ಕೆಣಕಿ ಕೇಳಿದ್ದಾರೆ.

ಈ ಪ್ರಕರಣದ ನಿಷ್ಪಕ್ಷ ತನಿಖೆ ನಡೆದರೆ ಪ್ರಧಾನಿ ಮೋದಿ ಅವರೂ ರಾಜೀನಾಮೆ ನೀಡಬೇಕಾಗುತ್ತದೆ. ಜಾಮೀನಿನ ಮೇಲಿರುವ ಕುಮಾರಸ್ವಾಮಿಯವರು ರಾಜೀನಾಮೆ ನೀಡಲಿ. ಬಿಜೆಪಿ ನಾಯಕರ ತರ್ಕದ ಪ್ರಕಾರ ನಿರ್ಮಲಾ ಸೀತಾರಾಮನ್ ಈಗಲೇ ರಾಜೀನಾಮೆ ನೀಡಬೇಕು ಎಂದಿದ್ದಾರೆ.

ಎಫ್‌ಐಆರ್‌ನಲ್ಲಿ ಏನಿದೆ?

1.ರಾಷ್ಟ್ರೀಯ, ಬಹುರಾಷ್ಟ್ರೀಯ ಮತ್ತು ಒಂದಕ್ಕಿಂತ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪೆನಿಗಳ ಎಂ.ಡಿ., ಸಿಇಒಗಳನ್ನು ಚುನಾವಣಾ ದೇಣಿಗೆ ಹೆಸರಿನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್, ಈ.ಡಿ. ಅಧಿಕಾರಿಗಳು, ಜೆ.ಪಿ. ನಡ್ಡಾ, ನಳಿನ್ ಕುಮಾರ್ ಕಟೀಲು, ವಿಜಯೇಂದ್ರ ಹಾಗೂ ಸಾಂವಿಧಾನಿಕ ಹುದ್ದೆಯಲ್ಲಿರುವ ಇತರರು ಸುಲಿಗೆ ಮಾಡಿದ್ದಾರೆ.

2. ಕಾರ್ಪೊರೇಟ್ ಕಂಪೆನಿಗಳಿಂದ ಚುನಾವಣಾ ಬಾಂಡ್ ಮೂಲಕ ಸುಮಾರು 8 ಸಾವಿರ ಕೋಟಿ ರೂ.ಗೂ ಅಧಿಕ ಲಾಭ ಮಾಡಿಕೊಂಡಿದ್ದಾರೆ.

3. ನಿರ್ಮಲಾ ಸೀತಾರಾಮನ್ ಹಲವು ಈ.ಡಿ. ಅಧಿಕಾರಿಗಳ ಮೂಲಕ ವಿವಿಧ ಕಾರ್ಪೊರೇಟ್ ಕಂಪೆನಿಗಳ ಸಿಇಒ, ಎಂ.ಡಿ.ಗಳ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿದ್ದಾರೆ. ಇದರಲ್ಲಿ ನಳಿನ್ ಕುಮಾರ್, ವಿಜಯೇಂದ್ರ ಕೂಡ ಭಾಗಿಯಾಗಿದ್ದಾರೆ. ಬೆದರಿದ ಕಾರ್ಪೊರೇಟ್ ಕಂಪೆನಿಗಳು ಬಹುಕೋಟಿ ಚುನಾವಣಾ ಬಾಂಡ್ ಖರೀದಿಸಿ ಬಿಜೆಪಿಗೆ ದೇಣಿಗೆ ನೀಡಿವೆ. ಬಿಜೆಪಿ ಅದನ್ನೆಲ್ಲ ನಗದಾಗಿ ಪರಿವರ್ತಿಸಿಕೊಂಡಿದೆ.

4. ನಿರ್ಮಲಾ ಸೀತಾರಾಮನ್ ಈ.ಡಿ. ದುರ್ಬಳಕೆ ಮಾಡಿಕೊಂಡು, ಕೋಟ್ಯಂತರ ರೂಪಾಯಿ ಸುಲಿಗೆ ಮಾಡಿ ಬಿಜೆಪಿ ಬೊಕ್ಕಸ ತುಂಬಿಸಿದ್ದಾರೆ.

5. ಸ್ಟರ್ಲೈಟ್ ಮತ್ತು ವೇದಾಂತ ಕಂಪೆನಿಗಳ ಮುಖ್ಯಸ್ಥ ಅನಿಲ್ ಅಗರ್ವಾಲ್ ಮೇಲೆ ಈ.ಡಿ. ಹಲವು ಬಾರಿ ದಾಳಿ ಮಾಡಿತ್ತು. ಇದರಿಂದ ಅಗರ್ವಾಲ್, 2019ರ ಎಪ್ರಿಲ್‌ನಿಂದ 2022ರ ಆಗಸ್ಟ್ ಹಾಗೂ 2023ರ ನವೆಂಬರ್‌ನಲ್ಲಿ ಒಟ್ಟು 230.15 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿದ್ದಾರೆ.

6. ಹಾಗೆಯೇ ಅರಬಿಂದೊ ಫಾರ್ಮಾ ಮೇಲೆಯೂ ದಾಳಿ ನಡೆಸಿದ್ದ ಈ.ಡಿ., ದಾಖಲೆಗಳನ್ನು ಜಪ್ತಿ ಮಾಡಿತ್ತು. ಬೆದರಿದ್ದ ಅರಬಿಂದೊ ಫಾರ್ಮಾ 2023ರ ಜನವರಿ 5 ಮತ್ತು ನವೆಂಬರ್ 8, 2022ರ ಜುಲೈ 2 ಮತ್ತು ನವೆಂಬರ್ 15ರಂದು ಒಟ್ಟು 49.5 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿದೆ.

ಇಲ್ಲಿ ವಸೂಲಿ ಮಾಡುವುದು ಸರಕಾರದ ಕೆಲಸದ್ದೇ ಒಂದು ಭಾಗದಂತಿದೆ.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ‘‘ಚುನಾವಣಾ ಬಾಂಡ್ ಮೂಲಕ ಬೆದರಿಸುವುದನ್ನು ನಾವು ಸಂಸತ್ತಿನಲ್ಲಿಯೇ ಪ್ರಸ್ತಾಪಿಸಿದ್ದೆವು. ಚುನಾವಣೆಗೂ ಮೊದಲಿಂದಲೇ ಇದರ ವಿರುದ್ಧ ಹೋರಾಟ ನಡೆದಿತ್ತು’’ ಎಂದಿದ್ದಾರೆ.

ದೇಣಿಗೆ ಕೊಡಿ, ನಿಮ್ಮ ವಿರುದ್ದ ಕಾರ್ಯಾಚರಣೆ ನಡೆಯುವುದಿಲ್ಲ, ಇಲ್ಲದಿದ್ದರೆ ಕಾರ್ಯಾಚರಣೆ ನಡೆಯುತ್ತದೆ ಎಂಬ ಬೆದರಿಕೆ ತಂತ್ರ ನಡೆದುಬಂದಿತ್ತು. ಆದರೆ ಇದನ್ನೆಲ್ಲ ಪ್ರಶ್ನೆ ಮಾಡಿದರೆ ಅದನ್ನು ದೇಶವಿರೋಧಿ ಎನ್ನಲಾಗುತ್ತಿದೆೆ. ರಾಹುಲ್ ಗಾಂಧಿಯವರ ಮೇಲೆ ನಿರಂತರ ದಾಳಿ ಈ ಹಿನ್ನೆಲೆಯಲ್ಲಿ ನಡೆದೇ ಇದೆ.

ಇದು ಚುನಾವಣಾ ಬಾಂಡ್ ಯೋಜನೆಯಲ್ಲ, ಎಕ್ಸ್ಟಾರ್ಷನ್ ಬಿಜೆಪಿ ಸ್ಕೀಮ್, ಅಂದರೆ ವಸೂಲಿ ಸ್ಕೀಮ್ ಎಂದು ಕಾಂಗ್ರೆಸ್ ಹೇಳಿದೆ.

ವಸೂಲಿ ಮಾಡುವುದು ತಾಕತ್ತಿನ ಪ್ರಶ್ನೆಯಾಗಿರುವಾಗ ಅಲ್ಲಿ ಸಾಂವಿಧಾನಿಕ ಮೌಲ್ಯ ಮತ್ತು ಪ್ರಜಾಪ್ರಭುತ್ವದ ಕಡೆಗಣನೆಯೇ ಆಗಿದೆ.

ಮೈಸೂರಿನ ಮುಡಾ ಎಂಬ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮವನ್ನು ಇಟ್ಟುಕೊಂಡು ಜನಾದೇಶ ಪಡೆದಿರುವ ಮುಖ್ಯಮಂತ್ರಿಯನ್ನೇ ಕೆಳಗಿಳಿಸಲು ಹೊರಟಿದೆ ಬಿಜೆಪಿ. ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂಬುದು ಬಿಜೆಪಿಯ ಒನ್ ಪಾಯಿಂಟ್ ಅಜೆಂಡಾ ಆಗಿದೆ. ಸಿದ್ದರಾಮಯ್ಯ ವಿರುದ್ಧದ ಆರೋಪದ ತನಿಖೆಯೇ ಆಗಿಲ್ಲ, ಈಗಷ್ಟೇ ಎಫ್‌ಐಆರ್ ಆಗಿದೆ. ಆದರೆ ಬಿಜೆಪಿ ಪ್ರಕಾರ ಅವರು ರಾಜೀನಾಮೆ ಕೊಡಬೇಕು. ಹಾಗಾದರೆ ಇಡೀ ದೇಶದಲ್ಲಿ ವರ್ಷಗಟ್ಟಲೆ ನಡೆದಿರುವ ಸಾವಿರಾರು ಕೋಟಿಗಟ್ಟಲೆ ರೂಪಾಯಿಯ ಇಲೆಕ್ಟೊರಲ್ ಬಾಂಡ್ ಹಗರಣದಲ್ಲಿ ಯಾರ್ಯಾರು ರಾಜೀನಾಮೆ ಕೊಡಬೇಕು?

ಈಗ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಹಾಲಿ ಮಾಜಿ ರಾಜ್ಯಾಧ್ಯಕ್ಷರು ಹಾಗೂ ಈ.ಡಿ. ವಿರುದ್ಧ ಎಫ್‌ಐಆರ್ ಆಗಿದೆ. ಅದೂ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ, ಸ್ವತಃ ಸುಪ್ರೀಂ ಕೋರ್ಟ್ ಅಸಾಂವಿಧಾನಿಕ, ಅಕ್ರಮ ಎಂದು ಹೇಳಿರುವ ಹಗರಣದಲ್ಲಿ.

ಬಿಜೆಪಿ ವಾದದ ಪ್ರಕಾರವೇ ಅವರೆಲ್ಲರೂ ಒಂದು ಕ್ಷಣವೂ ತಡಮಾಡದೆ ರಾಜೀನಾಮೆ ಕೊಡಬೇಡವೇ?

ಇನ್ನು ನಿರ್ಮಲಾ ಸೀತಾರಾಮನ್ ಯಾವುದಾದರೂ ಕೆಲಸವನ್ನು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಅಣತಿಯಿಲ್ಲದೆ ಮಾಡಿದ್ದಿದೆಯೇ?

ಹಾಗಾದರೆ ಇಷ್ಟು ದೊಡ್ಡ ಹಗರಣದಲ್ಲಿ ಭಾಗಿಯಾಗುವಾಗ ನಿರ್ಮಲಾಗೆ ಪ್ರಧಾನಿ ಹಾಗೂ ಗೃಹ ಸಚಿವರ ಅನುಮತಿ, ಆಶೀರ್ವಾದ ಇಲ್ಲದೇ ಇರಲು ಸಾಧ್ಯವೇ? ಬಿಜೆಪಿಯಲ್ಲಿ, ಈ.ಡಿ.ಯಲ್ಲಿ ಪ್ರಧಾನಿ, ಗ್ರಹ ಸಚಿವರ ಅನುಮತಿಯಿಲ್ಲದೆ ಏನಾದರೂ ನಡೆಯಲು ಸಾಧ್ಯವೇ? ನಿರ್ಮಲಾ, ಬಿಜೆಪಿ ಹಾಗೂ ಈ.ಡಿ. ವಿರುದ್ಧದ ಆರೋಪಗಳಿಗೆ ಪ್ರಧಾನಿ ಹಾಗೂ ಗೃಹ ಸಚಿವರೂ ಅಷ್ಟೇ ಜವಾಬ್ದಾರರಲ್ಲವೇ? ಹಾಗಾದರೆ ಅವರಿಗೆ ತಮ್ಮ ಸ್ಥಾನದಲ್ಲಿ ಉಳಿಯುವ ಅಧಿಕಾರ ಇದೆಯೇ?

ಈ ಪ್ರಶ್ನೆಗಳಿಗೆ ಉತ್ತರಿಸುವ ಸ್ಥಿತಿಯಲ್ಲಿ ಬಿಜೆಪಿ ಇದೆಯೇ?.

share
ವಿನಯ್ ಕೆ.
ವಿನಯ್ ಕೆ.
Next Story
X