Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕನ್ನಡಿಗರು ಕರ್ನಾಟಕದಲ್ಲೇ ಏಕೆ...

ಕನ್ನಡಿಗರು ಕರ್ನಾಟಕದಲ್ಲೇ ಏಕೆ ಪರಕೀಯರಾಗುತ್ತಿದ್ದಾರೆ?

ದಮ್ಮಪ್ರಿಯ, ಬೆಂಗಳೂರುದಮ್ಮಪ್ರಿಯ, ಬೆಂಗಳೂರು24 May 2025 11:45 AM IST
share
ಕನ್ನಡಿಗರು ಕರ್ನಾಟಕದಲ್ಲೇ ಏಕೆ ಪರಕೀಯರಾಗುತ್ತಿದ್ದಾರೆ?

ಇತ್ತೀಚೆಗೆ ಕನ್ನಡ ನಾಡಿನಲ್ಲಿ ಇತರೆಡೆಯಿಂದ ಬಂದಂತಹ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಕನ್ನಡ ಭಾಷೆಯ ಬಗ್ಗೆ, ನಾಡಿನ ನೆಲ-ಜಲದ ಬಗ್ಗೆ ನೀಚ -ತುಚ್ಛ ಧೋರಣೆಯನ್ನು ತೋರುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಉತ್ತರದ ರಾಜ್ಯಗಳಿಂದ ಬಂದವರು ‘‘ಇದು ಭಾರತ ದೇಶ ನಾವು ಮಾತನಾಡುವುದೇ ಹಿಂದಿ’’ ಎಂದು ಹೇಳುತ್ತಾ ಹಿಂದಿ ಭಾಷೆಯನ್ನು ಉದ್ದೇಶಪೂರ್ವಕವಾಗಿ ಹೇರುತ್ತಿದ್ದಾರೆ.

ಕರ್ನಾಟಕದಲ್ಲಿ ನಡೆಯುವ ಯಾವುದೇ ಬ್ಯಾಂಕ್ ಮೇಳಗಳಾದರೂ ಕನ್ನಡ ಭಾಷೆಯಲ್ಲಿ ಬ್ಯಾಂಕಿನ ಉನ್ನತ ಅಧಿಕಾರಿಗಳು ಮಾತನಾಡುವುದಿಲ್ಲ. ಕನ್ನಡ ಮಾತನಾಡುವುದನ್ನು ಬಿಟ್ಟು ಅಲ್ಲಿಯೂ ಸಹ ಹಿಂದಿಯಲ್ಲಿ ಮಾತನಾಡುತ್ತಾ ಜನರಿಗೆ ಅರಿವಿಲ್ಲದೆಯೇ ಹಿಂದಿ ಹೇರಿಕೆಯನ್ನು ಮಾಡುತ್ತಿದ್ದಾರೆ.

ಈ ಹಿಂದಿ ಭಾಷೆಯವರು ಇಡೀ ದೇಶದಾದ್ಯಂತ ತುಂಬಿಕೊಳ್ಳಲು ಮತ್ತು ಕರ್ನಾಟಕದಾದ್ಯಂತ ಪ್ರತೀ ಶಾಖೆಗಳನ್ನು ಅವರಿಸಿಕೊಳ್ಳಲು ಬಹಳ ಮುಖ್ಯವಾದ ಕಾರಣವೇ ಬ್ಯಾಂಕ್ ನಡೆಸುವ ಪರೀಕ್ಷೆಗಳು. ಈ ಪರೀಕ್ಷೆಗಳು ಕೇವಲ ಎರಡೇ ಭಾಷೆಗಳಲ್ಲಿ ನಡೆಸುತ್ತಿರುವುದು. ಒಂದು ಹಿಂದಿ ಮತ್ತೊಂದು ಇಂಗ್ಲಿಷ್. ಹಿಂದಿ ಮಾಧ್ಯಮದಲ್ಲಿ ಸಂಪೂರ್ಣವಾಗಿ ಅಧ್ಯಯನ ಮಾಡಿದ ಉತ್ತರ ಭಾರತದ ವಿದ್ಯಾರ್ಥಿಗಳು ತನ್ನ ಆಡು ಭಾಷೆ ಹಿಂದಿಯಲ್ಲಿ ಸುಗಮವಾಗಿ ಪರೀಕ್ಷೆ ಬರೆಯುತ್ತಾರೆ. ಇವರಿಗೆ ಇಂಗ್ಲಿಷ್ ಜ್ಞಾನವಿಲ್ಲದಿದ್ದರೂ ಹಿಂದಿಯಲ್ಲಿ ಪರೀಕ್ಷೆಯನ್ನು ಬರೆದು ಉತ್ತೀರ್ಣರಾಗುತ್ತಾರೆ. ಆದರೆ ಕನ್ನಡಿಗರು ಹಿಂದಿಯಲ್ಲಿ ಅಥವಾ ಇಂಗ್ಲಿಷ್‌ನಲ್ಲಿಯೇ ಪರೀಕ್ಷೆ ಬರೆಯಬೇಕು. ಇವೆರಡೂ ಭಾಷೆಗಳು ಕನ್ನಡಿಗರ ಪಾಲಿಗೆ ಅನ್ಯ ಭಾಷೆಗಳೇ ಆಗಿರುವುದರಿಂದ ಕನ್ನಡಿಗರಿಗೆ ಬ್ಯಾಂಕ್ ಉದ್ಯೋಗದಲ್ಲಿ ಬಹಳಷ್ಟು ಅನ್ಯಾಯವಾಗುತ್ತಿದೆ. ಒಂದು ವೇಳೆ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾದರೆ, ಅವರನ್ನು ಮೌಖಿಕ ಪರೀಕ್ಷೆ ಮಾಡುವವರು ಹಿಂದಿಯವರೇ ಆಗಿರುತ್ತಾರೆ. ಇವರು ಮೌಕಿಕ ಪರೀಕ್ಷೆಯಲ್ಲಿ ಹಿಂದಿ ಭಾಷೆಯಲ್ಲಿಯೇ ಪ್ರಶ್ನೆಗಳನ್ನು ಕೇಳುವುದರಿಂದ ದಕ್ಷಿಣ ಭಾರತದ ವಿದ್ಯಾರ್ಥಿಗಳು ಬಹುತೇಕ ಅನುತ್ತೀರ್ಣರಾಗುತ್ತಾರೆ. ಉತ್ತರ ಭಾರತದ ಬ್ಯಾಂಕ್ ನೌಕರರು ಇಂಗ್ಲಿಷ್‌ನಲ್ಲಿ ವ್ಯವಹರಿಸುವುದಿರಲಿ ಒಂದು ಕಾಗದ ಪತ್ರವನ್ನು ಇಂಗ್ಲಿಷ್‌ನಲ್ಲಿ ಬರೆಯುವವರು ಕೂಡಾ ಕೇವಲ ಬೆರಳೆಣಿಕೆ ಎಷ್ಟು ಮಾತ್ರ ಜನ ದೊರಕುತ್ತಾರೆ, ಬಹುತೇಕರು ತಮ್ಮ ಎಲ್ಲಾ ವ್ಯವಹಾರಗಳನ್ನು ಇತರ ಮೇಲಧಿಕಾರಿಗಳ ಜೊತೆ ಹಿಂದಿಯಲ್ಲಿಯೇ ವ್ಯವಹರಿಸುತ್ತಾರೆ.

ಅಲ್ಲದೆ ಕರ್ನಾಟಕದಲ್ಲಿ ಕೆಲಸ ಮಾಡಲು ಸಾಕಷ್ಟು ಸ್ಥಳಾವಕಾಶಗಳಿದ್ದರೂ, ಉನ್ನತ ಅಧಿಕಾರಿಗಳು ಬಹುತೇಕರು ಹಿಂದಿಯವರೇ ಆಗಿರುವುದರಿಂದ ಕನ್ನಡಿಗರನ್ನು ಇತರ ರಾಜ್ಯಗಳಿಗೆ ವರ್ಗಾವಣೆ ಮಾಡಿ ಅವರಿಗೆ ಅನುಕೂಲವಾಗಿ ವ್ಯವಹರಿಸುವಂತಹ ಹಿಂದಿ ಭಾಷೆ ಮಾತನಾಡುವವರನ್ನೇ ತಂದು ರಾಜ್ಯದಲ್ಲಿ ವ್ಯವಹರಿಸುವಂತೆ ಮಾಡುತ್ತಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಬದುಕಲು ವರ್ಗಾವಣೆಯಲ್ಲಿ ಕನ್ನಡಿಗರಿಗೆ ಮೋಸ ಮಾಡುತ್ತಿರುವುದು ಬಹುತೇಕ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೂ ತಿಳಿದಿರುವ ಸತ್ಯವಾಗಿದೆ.

ಬ್ಯಾಂಕುಗಳಲ್ಲಿ ಇದುವರೆಗೂ ನಡೆದಿರುವ ದೊಡ್ಡ ಅನ್ಯಾಯವೇ ನೇಮಕಾತಿಯ ವಿಚಾರದಲ್ಲಿ ಬ್ಯಾಂಕುಗಳು ತೋರುತ್ತಿರುವ ಭಾಷೆಯ ಬಗೆಗಿನ ಮಲತಾಯಿ ಧೋರಣೆಗಳು. ಕನ್ನಡಿಗರು ಒಂದು ವೇಳೆ ನೇಮಕಾತಿಯ ಜಾಗದಲ್ಲಿ ಅಥವಾ ವರ್ಗಾವಣೆ ಮಾಡುವ ಜಾಗದಲ್ಲಿ ಕುಳಿತರೆ ಅವರ ಕಮಿಟಿಯಲ್ಲಿರುವ ಇನ್ನುಳಿದವರೆಲ್ಲರೂ ಹಿಂದಿಯವರೇ ಆಗಿರುತ್ತಾರೆ. ಅಲ್ಲಿಯೂ ಕನ್ನಡದ ಅಧಿಕಾರಿ ನಿರುಪಯುಕ್ತರಾಗಿಬಿಡುವಂತೆ ಮಾಡಿಬಿಡುತ್ತಾರೆ. ಇದಕ್ಕೆ ಸೂಕ್ತ ಸಲಹೆ ಮತ್ತು ಮಾರ್ಗೋಪಾಯವೇ ರಾಜ್ಯವಾರು, ಭಾಷೆಯ ಆಧಾರದ ಮೇಲೆ ಬ್ಯಾಂಕ್ ಪರೀಕ್ಷೆಗಳು ನಡೆಯಬೇಕು, ಇದು ಕನ್ನಡಿಗರ ಒತ್ತಾಸೆಯಾಗಬೇಕು.

ಈಗಾಗಲೇ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನಾಚರಣೆಗೆ ಬ್ಯಾಂಕ್ ಅಧಿಕಾರಿಗಳು ಎಳ್ಳು ನೀರು ಬಿಟ್ಟಾಗಿದೆ. ಕನ್ನಡ ರಾಜ್ಯೋತ್ಸವದ ದಿನದಂದು ಕರ್ನಾಟಕದಲ್ಲಿ ರಜೆ ದಿನವೆಂದು ಗೊತ್ತಿದ್ದರೂ, ಯಾವುದಾದರೂ ಒಂದು ತರಬೇತಿಯನ್ನು ನಡೆಸಲು ದಿನಾಂಕವನ್ನು ನಿಗದಿಪಡಿಸುತ್ತಾರೆ. ಇದರಿಂದ ಇತರ ರಾಜ್ಯಗಳಿಂದ ಬಂದ ಬ್ಯಾಂಕ್ ಅಧಿಕಾರಿಗಳಿಗೆ ಕನ್ನಡ ರಾಜ್ಯೋತ್ಸವದ ಮಹತ್ವದ ಅರಿವು ಕೂಡ ಆಗುವುದಿಲ್ಲ. ಕನ್ನಡದ ಮಹತ್ವದ ದಿನವನ್ನು ಬ್ಯಾಂಕ್ ಅಧಿಕಾರಿಗಳಿಂದ ಮರೆಮಾಚಲಾಗುತ್ತಿದೆ. ಇಂತಹ ಅನ್ಯಾಯಗಳನ್ನು ಕೆಲವೊಮ್ಮೆ ಪ್ರತಿಭಟಿಸಿದಾಗ, ಪ್ರತಿಭಟಿಸಿದ ಕನ್ನಡಿಗನಿಗೆ ಕನ್ನಡಿಗರೇ ಸಿಗದ ಸ್ಥಳಕ್ಕೆ ವರ್ಗಾವಣೆಯನ್ನು ಮಾಡಿಬಿಡುತ್ತಾರೆ. ಇದು ಇಂದಿನ ಬ್ಯಾಂಕುಗಳಲ್ಲಿ ಇರುವಂತಹ ನಾಡಿನ ಭಾಷೆಯ ಬಗೆಗಿನ ದುರಹಂಕಾರದ ನಡೆಯಾಗಿದೆ.

ಈಗಾಗಲೇ ಮಾಯಾನಗರಿ ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಪ್ರತೀ ಅಂಗಡಿಗಳು ಮಾರ್ವಾಡಿಗಳ, ಗುಜರಾತಿಗಳ ಪಾಲಾಗಿವೆ. ಕಬ್ಬಿಣ, ಸಿಮೆಂಟ್, ಬಟ್ಟೆ, ಒಡವೆ, ಹಾರ್ಡ್ ವೇರ್ ಶಾಪುಗಳು ಇತ್ಯಾದಿ ಎಲ್ಲವೂ ಹಿಂದಿಮಯವಾಗಿವೆ. ಇನ್ನುಳಿದ ಐಟಿ ಬಿಟಿ ಕಂಪೆನಿಗಳು ಸಹ ಆಂಧ್ರ, ತೆಲಂಗಾಣ, ತಮಿಳುನಾಡು, ಗುಜರಾತ್, ಬಿಹಾರಿಗಳ ಪಾಲಾಗಿದ್ದು ಅಲ್ಲಿಯೂ ಕನ್ನಡಿಗರಿಗೆ ಸ್ಥಳವಿಲ್ಲದಂತಾಗಿದೆ. ಈ ಐಟಿ ಬಿಟಿ ಕಂಪೆನಿಗಳು ಸಂಪಾದಿಸುವ ಹಣವನ್ನು ದೋಚಲು ನಮ್ಮ ರಿಯಲ್ ಎಸ್ಟೇಟ್ ಮುಖವಾಡಗಳು ಅವರಿಗೆ ಪೂರಕವಾದಂತೆ ಫ್ಲ್ಯಾಟ್‌ಗಳನ್ನು ಮಾರಿ ಅಂತಹವರನ್ನು ಮೂಲ ಕನ್ನಡಿಗರಿಗಿಂತಲೂ ಚೆನ್ನಾಗಿ ನಡೆಸಿಕೊಳ್ಳುತ್ತಿರುವುದು ಕನ್ನಡಿಗರಿಗೆ ಬಹುದೊಡ್ಡ ಹೊಡೆತವಾಗಿದೆ. ಕೇವಲ ಬಾಯಿ ಮಾತಿಗೆ ಕನ್ನಡ ಸಂಘವನ್ನು ಕಟ್ಟಿ ಕನ್ನಡ ರಾಜ್ಯೋತ್ಸವದ ದಿನದಂದು ಕನ್ನಡ ತಾಯಿಯ ಭಾವಚಿತ್ರವನ್ನು ಇಟ್ಟು ಪೂಜೆ ಮಾಡಿ ಇನ್ನುಳಿದ ದಿನವೆಲ್ಲವನ್ನೂ ಕನ್ನಡೇತರ ದಿನವನ್ನಾಗಿ ಬೆಂಗಳೂರಿನಲ್ಲಿ ಜಾರಿ ಮಾಡಲಾಗುತ್ತಿದೆ. ಕನ್ನಡ ನಾಡಿನಲ್ಲಿ ಕನ್ನಡೇತರರದ್ದೇ ದರ್ಬಾರು ಎನ್ನುವಂತಾಗಿದೆ.

ಕನ್ನಡ ನಾಡಿನ ಪ್ರತಿಷ್ಠಿತ ಬ್ಯಾಂಕುಗಳು ಎನಿಸಿಕೊಂಡಿದ್ದ ಹಲವು ಬ್ಯಾಂಕುಗಳನ್ನು ಈಗಾಗಲೇ ಉತ್ತರದ ಬ್ಯಾಂಕುಗಳು ತಮ್ಮ ತೆಕ್ಕೆಗೆ ತೆಗೆದುಕೊಂಡಿವೆ. ಇನ್ನು ಸಾಮಾನ್ಯ ಕನ್ನಡಿಗರಿಗೆ ಉಳಿದಿರುವುದೊಂದೇ ಕೆನರಾ ಬ್ಯಾಂಕ್. ಈಗಾಗಲೇ ಇಲ್ಲಿಯೂ ಬಹುತೇಕ ಹಿಂದಿ ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದು ಕನ್ನಡಿಗರು ಭಾಷೆಯ ಬಗ್ಗೆ, ನಾಡು ನುಡಿಯ ಬಗ್ಗೆ ಮಾತನಾಡಿದ್ದೇ ಆದರೆ ಅವರನ್ನು ಹೀಯಾಳಿಸುವ ಹೊರಗಿನ ರಾಜ್ಯಗಳಿಗೆ ವರ್ಗಾವಣೆ ಮಾಡುವ ಪರಿಸ್ಥಿತಿ ಮುಂದುವರಿದಿದೆ.

ಈ ಸಮಸ್ಯೆಗೆ ಪರಿಹಾರವೆಂದರೆ ಆಯಾ ರಾಜ್ಯದ ಅಭ್ಯರ್ಥಿಗಳು ಆಯಾ ರಾಜ್ಯದ ಭಾಷೆಯಲ್ಲಿಯೇ ಪರೀಕ್ಷೆ ಬರೆದರೆ ಇಂತಹ ಸೊಕ್ಕಿದ ಹಿಂದಿಯವರ ಅಟ್ಟಹಾಸವನ್ನು ಮಟ್ಟಹಾಕಬಹುದು. ಕನ್ನಡಿಗರು ಕನ್ನಡ ನಾಡಿನಲ್ಲಿ ಬ್ಯಾಂಕ್ ಉದ್ಯೋಗವನ್ನು ಮಾಡುವಂತಾಗಬಹುದು. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ, ಭಾಷಾ ಪ್ರಾಧಿಕಾರ, ಸಾಹಿತ್ಯ ಪರಿಷತ್, ಕನ್ನಡ ಪರ ಸಂಘಟನೆಗಳು ಎಲ್ಲರೂ ಮುಂಚೂಣಿಯಲ್ಲಿ ನಿಲ್ಲಬೇಕಿದೆ. ಪ್ರತೀ ಶಾಖೆಯಲ್ಲಿಯೂ ಕನ್ನಡ ಭಾಷೆ ಗೊತ್ತಿರುವ, ಕನ್ನಡದಲ್ಲಿಯೇ ವ್ಯವಹರಿಸುವ ಶಾಖಾ ವ್ಯವಸ್ಥಾಪಕರನ್ನು ನೇಮಿಸುವಂತೆ ಒತ್ತಾಯ ಮಾಡಬೇಕಾಗಿದೆ. ಭಾಷೆಯ ಗಂಧವೇ ತಿಳಿಯದ ಯಾರೋ ಒಬ್ಬ ಅಧಿಕಾರಿಯನ್ನು ಬೈದು ಒಂದೆರಡು ಪದಗಳನ್ನು ಬಾಯಿ ಪಾಠ ಮಾಡಿಸಿ ಸಮಾಧಾನ ಪಟ್ಟುಕೊಳ್ಳುವ ಕನ್ನಡಿಗರ ಮನಸ್ಸು ಕನ್ನಡಕ್ಕಾಗಿಯೇ ಮಿಡಿಯುವಂತಾಗಲಿ.

share
ದಮ್ಮಪ್ರಿಯ, ಬೆಂಗಳೂರು
ದಮ್ಮಪ್ರಿಯ, ಬೆಂಗಳೂರು
Next Story
X