Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರಾಷ್ಟ್ರೀಕೃತ ಬ್ಯಾಂಕುಗಳೇ ಟಾರ್ಗೆಟ್...

ರಾಷ್ಟ್ರೀಕೃತ ಬ್ಯಾಂಕುಗಳೇ ಟಾರ್ಗೆಟ್ ಯಾಕೆ ?

ದಮ್ಮಪ್ರಿಯ, ಬೆಂಗಳೂರುದಮ್ಮಪ್ರಿಯ, ಬೆಂಗಳೂರು2 March 2026 11:24 AM IST
share
ರಾಷ್ಟ್ರೀಕೃತ ಬ್ಯಾಂಕುಗಳೇ ಟಾರ್ಗೆಟ್ ಯಾಕೆ ?

ಇತ್ತೀಚೆಗೆ ದಿನನಿತ್ಯ ಬ್ಯಾಂಕುಗಳಲ್ಲಿ ಅವ್ಯವಹಾರ, ಬ್ಯಾಂಕುಗಳ ದರೋಡೆ ಪ್ರಯತ್ನ, ಬ್ಯಾಂಕ್‌ಗಳ ವಿರುದ್ಧ ಕೇಸು ದಾಖಲುಗಳು, ಬ್ಯಾಂಕುಗಳು ಕೇವಲ ವಿಮೆಗಳ ಮಾರಾಟದಲ್ಲಿ ಗ್ರಾಹಕರನ್ನು ಪೀಡಿಸುತ್ತಿವೆ, ಚಿನ್ನಾಭರಣಗಳ ಮೇಲಿನ ಸಾಲದ ನೆಪದಲ್ಲಿ ಗ್ರಾಹಕರನ್ನು ವಂಚಿಸುತ್ತಿವೆ, ಸೇವಾ ಶುಲ್ಕವೆಂದು ಸಾಕಷ್ಟು ಹಣವನ್ನು ವಸೂಲಿ ಮಾಡಲಾಗುತ್ತಿದೆ, ಹೀಗೆ ಹಲವಾರು ಸುದ್ದಿಗಳು ಮಾಧ್ಯಮಗಳ ಮೂಲಕ ಬಿತ್ತರಿಸುತ್ತಿರುವುದು ನಿಜವಾಗಿಯೂ ಸತ್ಯದ ಮಾತಾಗಿದೆಯೋ ಅಥವಾ ಆರ್‌ಬಿಐ ನಿಯಮದ ಮೂಲಕವೇ ಬ್ಯಾಂಕ್‌ಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿವೆಯೋ ಎನ್ನುವ ಪ್ರಶ್ನೆಗಳು ಗ್ರಾಹಕರನ್ನು ಕಾಡುತ್ತಲಿವೆ. ಆದರೆ ಇವೆಲ್ಲಾ ಸುದ್ದಿಗಳು ಮತ್ತು ಗೊಂದಲಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೇ ಯಾಕೆ ಘಟಿಸುತ್ತಿವೆ? ಇಂತಹ ಸುದ್ದಿಗಳೇ ಯಾಕೆ ಹೆಚ್ಚು ಹೆಚ್ಚಾಗಿ ಮಾಧ್ಯಮಗಳ ಮೂಲಕ ಬಿತ್ತರಿಸಲಾಗುತ್ತಿದೆ? ಹಾಗಾದರೆ ಖಾಸಗಿ ಬ್ಯಾಂಕ್‌ಗಳು ಗ್ರಾಹಕರಿಗೆ ಭದತೆಯನ್ನು ಒದಗಿಸುತ್ತಿವೆಯೇ? ಎಲ್ಲಾ ಉದ್ದಿಮೆದಾರರು ಖಾಸಗಿ ಬ್ಯಾಂಕ್‌ಗಳು ನೀಡುವ ಸೇವೆಗಳಿಂದ ಖುಷಿಯಾಗಿರುವರೆ? ಹಾಗಾದರೆ ಖಾಸಗಿ ಬ್ಯಾಂಕುಗಳು ಏಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡುತ್ತಿರುವ ಆರ್ಥಿಕ ಸವಲತ್ತುಗಳು ಹಾಗೂ ಸಾಲ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾದರೆ ಇವುಗಳಿಂದ ಸಾಮಾನ್ಯ ಗ್ರಾಹಕರಿಗೆ ಆಗುತ್ತಿರುವ ಲಾಭಗಳಾದರೂ ಏನು ಎನ್ನುವ ಪ್ರಶ್ನೆಗಳು ಇವೆಯಲ್ಲವೇ? ರಾಷ್ಟ್ರೀಕೃತ ಬ್ಯಾಂಕುಗಳಿಂದ ಗ್ರಾಹಕರಿಗೆ ನಿಜವಾಗಿಯೂ ಭದ್ರತೆ ಇಲ್ಲವೇ? ಎಂತೆಲ್ಲಾ ಆಲೋಚನೆಗಳು ಗ್ರಾಹಕರ ಮನಸ್ಸಿನಲ್ಲಿ ಹುಟ್ಟುತ್ತಿರುವುದಕ್ಕೆ ಏನು ಕಾರಣ ಎಂದು ತಿಳಿಯಬೇಕಾಗಿದೆ.

1969-70 ರಲ್ಲಿ ಅಂದಿನ ಪ್ರಧಾನಿ ಭಾರತೀಯರ ಆರ್ಥಿಕ ಅಭಿವೃದ್ಧಿಗೆ, ಪ್ರತಿಯೊಬ್ಬರಿಗೂ ಸರಕಾರದ ಸವಲತ್ತುಗಳು ಹಾಗೂ ದುಡಿಯುವ ಕೈಗಳಿಗೆ ಉದ್ಯೋಗದ ಭದ್ರತೆಯನ್ನು ನೀಡುವ ಉದ್ದೇಶದಿಂದ ಸುಮಾರು 14 ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು. ಇದರಿಂದ ದೇಶದಲ್ಲಿನ ಯುವಕರು ದೀರ್ಘಾವಧಿಯ ಉದ್ಯೋಗ ಮತ್ತು ಆರ್ಥಿಕತೆಯಲ್ಲಿ ಭದ್ರತೆಯನ್ನು ಕಂಡುಕೊಳ್ಳಲು ಸಾಧ್ಯವಾಯಿತು.

ಪ್ರತಿಯೊಬ್ಬ ನಾಗರಿಕನು ತಮ್ಮ ಆದಾಯದ ಸ್ವಲ್ಪ ಭಾಗವನ್ನು ಬ್ಯಾಂಕಿನಲ್ಲಿ ಹೂಡಿಕೆ ಮಾಡುತ್ತಾ ಜೀವನದ ಭದ್ರತೆಯನ್ನು ಕಂಡುಕೊಳ್ಳುವಂತಾಯಿತು.

ಬ್ಯಾಂಕುಗಳ ಸ್ಥಾಪನೆಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ ಎಂದರೆ ತಪ್ಪಾಗಲಾರದು. ಕೆನರಾ ಬ್ಯಾಂಕ್, ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಕರ್ನಾಟಕ ಬ್ಯಾಂಕ್ ಹೀಗೆ ಹಲವಾರು ಬ್ಯಾಂಕುಗಳು ಹುಟ್ಟಿದ್ದು ನಮ್ಮ ಕನ್ನಡ ಮಣ್ಣಲ್ಲಿ ಎನ್ನುವ ಹೆಮ್ಮೆ ಕನ್ನಡಿಗರಿಗಿದೆ. ಆದರೆ ಈ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 2014ರ ನಂತರ ಕೆಲವು ಬ್ಯಾಂಕ್‌ಗಳು ಇತರ ಬ್ಯಾಂಕುಗಳೊಡನೆ ವೀಲೀನಗೊಂಡು ಕರ್ನಾಟಕದ ಬ್ಯಾಂಕ್‌ಗಳ ಇತಿಹಾಸವನ್ನು ಅಳಿಸಲಾಯಿತು. ಇನ್ನು ನಮ್ಮ ಜೊತೆಯಲ್ಲಿರುವ ಕನ್ನಡಿಗರ ಹೆಮ್ಮೆಯ ಏಕೈಕ ರಾಷ್ಟ್ರೀಕೃತ ಬ್ಯಾಂಕ್, ಕೆನರಾ ಬ್ಯಾಂಕ್ ಮಾತ್ರ. ಭಾರತದಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣದ ನಂತರ ಎಲ್ಲ ವರ್ಗದ ಜನರಿಗೂ ಉದ್ಯೋಗದಲ್ಲಿ ಸಮಾನತೆ ದೊರೆಯುವ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ದೊರೆಯುತ್ತಿದ್ದಂತೆ ಕಳೆದ 14 ವರ್ಷಗಳ ಭಾರತದ ರಾಜಕೀಯ ಇತಿಹಾಸದಲ್ಲಿ ಸುಮಾರು 33 ರಾಷ್ಟ್ರೀಕೃತ ಸಂಸ್ಥೆಗಳನ್ನು ಖಾಸಗಿಯವರ ಕೈಗೊಪ್ಪಿಸಿ ಉದ್ಯೋಗ ಸೃಷ್ಟಿಯಲ್ಲಿ ಕುಂಠಿತಗೊಳಿಸಿ ನಿರುದ್ಯೋಗ ಸಮಸ್ಯೆಯನ್ನು ಸೃಷ್ಟಿಸಿದಂತಾಯಿತು. ಇದಕ್ಕೆ ಸೂಕ್ತ ನಿದರ್ಶನವೇ ಇತ್ತೀಚೆಗೆ ಯುವಕರು ದೇಶದಾದ್ಯಂತ ಆಡಳಿತ ಸರಕಾರಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗಳು. ಆದರೆ ಮತ್ತೆ ಕೆಲವು ರಾಷ್ಟ್ರೀಕೃತ ಬ್ಯಾಂಕುಗಳನ್ನು ವಿಲೀನಗೊಳಿಸುವ ಮೂಲಕ ಖಾಸಗಿಯವರ ಕೈಗೊಪ್ಪಿಸುವ ಹುನ್ನಾರಗಳು ಸರಕಾರಗಳಿಂದ ನಡೆಯುತ್ತಲೇ ಇವೆ.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನಡೆಯುವ ಸಣ್ಣಪುಟ್ಟ ಸಮಸ್ಯೆಗಳನ್ನು ಮೀಡಿಯಾಗಳ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವೈಭವೀಕರಿಸಿ ಪ್ರಚಾರ ಮಾಡುವ ಇಂದಿನ ಮೀಡಿಯಾಗಳಿಗೆ ದೇಶದ ಬ್ಯಾಂಕುಗಳಿಗೆ ಮೋಸ ಮಾಡಿ ಈ ದೇಶದಿಂದ ಕಾಲು ತೆಗೆದು ವಿದೇಶಗಳಿಗೆ ಪರಾರಿಯಾದ ಆರ್ಥಿಕ ನಯ ವಂಚಕರು ಮಾಡಿದ ಆರ್ಥಿಕ ವಂಚನೆ ಸುಮಾರು 360,000 ಲಕ್ಷ ಕೋಟಿಗಳಿಗೂ ಹೆಚ್ಚಿನದು, ಆದರೂ ಇಂತಹ ವಂಚನೆಗಳು ಯಾವ ಗ್ರಾಹಕರಿಗೂ, ಮಾಧ್ಯಮಗಳಿಗೂ ನಿಜವಾದ ವಂಚನೆಗಳು ಎನಿಸುತ್ತಿಲ್ಲ ಯಾಕೆ? ಇಡೀ ಜಗತ್ತನ್ನೇ ಸುತ್ತುತ್ತಿರುವ ನಮ್ಮ ವಿಶ್ವಗುರುವಿಗೆ, ಈ ನಯವಂಚಕರು ಎಲ್ಲಿ ಅಡಗಿ ಕುಳಿತಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿಲ್ಲವೇ ?

ಈ ದೇಶದ ರೈತರ ಸಾಲವನ್ನು ಮನ್ನಾ ಮಾಡಿ ಎಂದಾಗ ದೇಶದ ಆರ್ಥಿಕ ಬೆಳವಣಿಗೆಗೆ ಮತ್ತು ಖಜಾನೆಗೆ ಧಕ್ಕೆಯಾಗುತ್ತದೆ. ಸರಕಾರದ ಬೊಕ್ಕಸದಲ್ಲಿ ಹಣವಿಲ್ಲ ಎಂದವರು ಬೃಹತ್ ಉದ್ದಿಮೆದಾರರ ಮತ್ತು ಬಂಡವಾಳಗಾರರ ಸಾಲವನ್ನು ಕಳೆದ 2024-25 ನೇ ಆರ್ಥಿಕ ಸಾಲಿನಲ್ಲಿ ವರ್ಷಕ್ಕೆ 10.60 ಲಕ್ಷ ಕೋಟಿ ಸಾಲ ಮಾಡಿ ವಂಚಿಸಿದ್ದು, ದೇಶದ ಆರ್ಥಿಕತೆಗೆ ಮೋಸ ಎನಿಸಲಿಲ್ಲವೇ? ಅಷ್ಟೇ ಏಕೆ ಸುಮಾರು 1948 ರಿಂದ ಆರ್‌ಬಿಐ ನಲ್ಲಿ ಕೂಡಿಟ್ಟಿದ್ದ ಸುಮಾರು 171 ಸಾವಿರ ಕೋಟಿ ತುರ್ತು ಹಣವನ್ನು ಇಂದಿನ ಸರಕಾರ 2019ರಲ್ಲಿ ಬಳಕೆ ಮಾಡಿಕೊಂಡು, ಅದನ್ನು ಯಾವ ಕಾರಣಕ್ಕೆ ಬಳಸಲಾಗಿದೆಯೆಂದು ಇದುವರೆಗೂ ಆರ್‌ಬಿಐಗೆ ಲೆಕ್ಕವನ್ನು ನೀಡಲಿಲ್ಲ. ಸರಕಾರ ಮಾಡಿರುವ ಇಂತಹ ಆರ್ಥಿಕ ವಂಚನೆಯನ್ನು ಏಕೆ ಬಯಲಿಗೆಳೆಯುತ್ತಿಲ್ಲ? ಸಾಮಾನ್ಯ ಜನರ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ಸರಿಯೇ? ಇದಕ್ಕೆ ಯಾರೂ ಹೊಣೆಗಾರರಲ್ಲ ಎನ್ನುವಂತೆ ಸುಮ್ಮನಿರುವುದು ಮೋಸವಲ್ಲವೇ? ಜಿಎಸ್‌ಟಿ ಹೆಸರಿನಲ್ಲಿ, ಎ ಪಿ ವೈ, ಪಿ ಎಂ ಜೆ ಜೆ ಬಿ ವೈ, ಪಿ ಎಂ ಎಸ್ ಬಿ ವೈ ನೆಪದಲ್ಲಿ ಪ್ರತೀ ವರ್ಷ ಮತ್ತು ಪ್ರತೀ ತಿಂಗಳು ಗ್ರಾಹಕರಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಬ್ಯಾಂಕ್‌ಗಳ ಮೂಲಕವೇ ಪೀಕುತ್ತಿರುವುದು ಮೀಡಿಯಾಗಳ ಪ್ರಕಾರ ಯಾವ ವಂಚನೆಯೂ ಅಲ್ಲ !!

ಎ ಪಿ ವೈ ಸುಮಾರು 20 ರಿಂದ 40 ವರ್ಷಗಳು ಪಾವತಿ ಮಾಡುವ ಯೋಜನೆಯಾಗಿದ್ದು ಕಳೆದ 14 ವರ್ಷಗಳಿಂದ ಒಂದು ರೂಪಾಯಿಯನ್ನು ನೀಡದ ಸರಕಾರ ಇಂದಿಗೂ ಹಣವನ್ನು ಗ್ರಾಹಕರಿಂದ ಪೀಕುತ್ತಲೇ ಇದೆ!

ಇದಕ್ಕೆ ಸಾಕಷ್ಟು ಬ್ಯಾಂಕ್‌ಗಳಿಗೆ ನಮ್ಮ ವಿತ್ತ ಮಂತ್ರಿಯವರ ಇಲಾಖೆಯು ಬಹಳ ಒತ್ತಡ ನೀಡುತ್ತಿದೆ. ಆದರೆ ವಿತ್ತ ಮಂತ್ರಿಯವರು ಇತ್ತೀಚೆಗೆ ನೀಡಿರುವ ಹೇಳಿಕೆ ಗ್ರಾಹಕರಿಂದ ಯಾವ ವಿಮೆಯನ್ನು ಕೇಳಬಾರದು, ಕೇಳಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದಿದ್ದಾರೆ. ಹಾಗಾದರೆ ಪಿ ಎಂ ಜೆ ಜೆ ಬಿ ವೈ, ಪಿ ಎಂ ಎಸ್ ಬಿ ವೈ, ಎ ಪಿ ವೈ ಗಳೆಲ್ಲ ವಿಮೆಗಳಲ್ಲವೇ? ಹಾಗಾದರೆ ಇವುಗಳ ಮುಂದಿನ ಭವಿಷ್ಯವೇನಿರಬಹುದು? ಬ್ಯಾಂಕುಗಳ ಸಣ್ಣ ಪುಟ್ಟ ತಪ್ಪುಗಳನ್ನು ಎತ್ತಿ ಹಿಡಿಯುವ ನಮ್ಮ ಮೀಡಿಯಾಗಳು ಇವುಗಳ ಬಗ್ಗೆ ಯಾಕೆ ಚರ್ಚಿಸುತ್ತಿಲ್ಲಾ ! ಇವುಗಳ ಬಗ್ಗೆ ಯಾಕೆ ಯಾರೂ ಮಾತನಾಡುವುದಿಲ್ಲ ಬದಲಾಗಿ ಈ ನಯಮಂಚನೆಯ ಮೋಸ ಭಾರತದ ಗ್ರಾಹಕರಿಗೆ ಯಾವ ತೊಂದರೆಯನ್ನು ನೀಡುತ್ತಿಲ್ಲ ಎನ್ನುವ ಹಾಗೆಯೇ ತೇಪೆಹಾಕಲಾಗಿದೆ.

ಈ ಮೀಡಿಯಾಗಳ ಪಾಲಿಗೆ ಇದು ನಿಜವಾಗಿಯೂ ಮೋಸ ಎನಿಸುತ್ತಿಲ್ಲವೆ? ಇಂತಹ ಮೋಸಗಳನ್ನು ಬಯಲಿಗೆಳೆಯಲು ಸಾಧ್ಯವಾಗುತ್ತಿಲ್ಲವೇ? ಹಾಗಾದರೆ ಇವರ ನಿಜವಾದ ಉದ್ದೇಶವೇನು? ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಬಹು ದೊಡ್ಡ ಹುನ್ನಾರಗಳು ಇವುಗಳ ಹಿಂದೆ ನಡೆಯುತ್ತಿವೆ ಎನ್ನಬಹುದೇ? ಭಾರತದ ಸಾಮಾನ್ಯ ಗ್ರಾಹಕರು ಮೊದಲು ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಹಾರದಿಂದ ಬೇಸತ್ತು ಖಾಸಗಿ ಬ್ಯಾಂಕ್‌ಗಳ ಕಡೆಗೆ ಮುಖಮಾಡಬೇಕು ಎನ್ನುವುದು ಇವರ ಉದ್ದೇಶವಾಗಿದೆಯೇ? ರಾಷ್ಟ್ರೀಕೃತ ಬ್ಯಾಂಕುಗಳನ್ನು ದೂಷಿಸುವ ಮೂಲಕ ಖಾಸಗಿ ಬ್ಯಾಂಕುಗಳಿಗೆ ಹೆಚ್ಚು ಆದ್ಯತೆ ನೀಡುವುದನ್ನು ಈ ಸರಕಾರಗಳು ತನ್ನ ಗುರಿಯನ್ನಾಗಿಸಿ ಕೊಂಡಿವೆಯೇ?

ಅಲ್ಲದೆ ರಾಷ್ಟ್ರೀಕೃತ ಬ್ಯಾಂಕುಗಳನ್ನು ಮತ್ತೆ ಖಾಸಗಿಯವರ ಕೈಗೊಪ್ಪಿಸಿ ಸಾಮಾಜಿಕ ಅಸಮಾನತೆಯನ್ನು ಸೃಷ್ಟಿಸುವ ಮೂಲಕ ದುಡಿಯುವ ಕೈಗಳಿಂದ ಉದ್ಯೋಗವನ್ನು ಕಸಿದುಕೊಂಡು ನಿರುದ್ಯೋಗವನ್ನು ಸೃಷ್ಟಿಸುವುದೇ? ಇಂತಹ ವ್ಯವಸ್ಥೆಯಲ್ಲಿ ಜನಸಾಮಾನ್ಯರು ಒಬ್ಬರನ್ನೊಬ್ಬರು ಕಿತ್ತು ತಿನ್ನುವ ಪರಿಸ್ಥಿತಿಯನ್ನು ನಿರ್ಮಾಣ ಮಾಡುವುದಾಗಿದೆಯೇ? ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಡೆಯುವ ನೇಮಕಾತಿಯಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿ ಮತ್ತು ಧಾರ್ಮಿಕ ಅಲ್ಪ ಸಂಖ್ಯಾತ ಜಾತಿಯ ಜನರ ಉದ್ಯೋಗವನ್ನು ಕಸಿದು ಮತ್ತೆ ಈ ಜನರನ್ನು ಆರ್ಥಿಕ ಸಾಮಾಜಿಕ ಅಸಮಾನತೆಗೆ ತಳ್ಳುವುದೇ ಇಂದಿನ ಸರಕಾರದ ಮೂಲ ಉದ್ದೇಶವಾಗಿದೆಯೇ?

ಈಗಾಗಲೇ ರಾಷ್ಟ್ರೀಕೃತ ಬ್ಯಾಂಕುಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾದ ವಂಚಕರನ್ನು ಬಂಧಿಸುವಲ್ಲಿ ವಿಫಲವಾಗಿರುವ ಸರಕಾರಗಳು ಕರ್ನಾಟಕದ ಲಾಭದಾಯಕವಾದ ವಿಜಯಾ ಬ್ಯಾಂಕನ್ನು ನಷ್ಟ ಹೊಂದಿದ್ದ ಬರೋಡಾ ಬ್ಯಾಂಕಿನೊಡನೆ ವಿಲೀನಗೊಳಿಸಿ ಕರ್ನಾಟಕಕ್ಕೆ ಮೋಸ ಮಾಡಿತು. ಮೈಸೂರು ಮಹಾರಾಜರು ನಿರ್ಮಿಸಿದ್ದ ಒಡೆಯ ಮನೆತನದ ಐತಿಹಾಸಿಕ ಮೈಲುಗಲ್ಲಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಬ್ಯಾಂಕಿನ ಇತಿಹಾಸವನ್ನೇ ಅಳಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಹೆಸರನ್ನು ಮರೆಮಾಚುವಂತೆ ಮಾಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ವಿಲೀನ ಮಾಡಲಾಯಿತು. ಹಾಗೆಯೇ ಕರ್ನಾಟಕದ ಮತ್ತೊಂದು ಶ್ರೇಷ್ಠ ಮತ್ತು ಲಾಭದಾಯಕ ಬ್ಯಾಂಕ್ ಎನಿಸಿದ್ದ ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್ ನೊಡನೆ ವಿಲೀನಗೊಳಿಸಲಾಯಿತು. ಕಾರ್ಪೊರೇಷನ್ ಬ್ಯಾಂಕ್ ಅನ್ನು ಯೂನಿಯನ್ ಬ್ಯಾಂಕಿನೊಡನೆ ವಿಲೀನಗೊಳಿಸಿ ಕರ್ನಾಟಕದಲ್ಲಿ ಹುಟ್ಟಿದ ಎಲ್ಲ ಬ್ಯಾಂಕುಗಳನ್ನು ಇತಿಹಾಸದಲ್ಲಿ ಮರೆಮಾಚಲಾಯಿತು. ಇನ್ನು ಕರ್ನಾಟಕದ ಹೆಸರಿಗೆ ಉಳಿದಿರುವ ಏಕೈಕ ರಾಷ್ಟ್ರೀಕೃತ ಬ್ಯಾಂಕ್, ಕೆನರಾ ಬ್ಯಾಂಕ್ ಇದನ್ನು ಖಾಸಗಿಯವರ ಕೈಗೊಪ್ಪಿಸಿ ಕರ್ನಾಟಕದಲ್ಲಿ ಬ್ಯಾಂಕ್‌ಗಳ ಹೆಸರು ಇಲ್ಲದಂತೆ ಮಾಡುವುದೇ ಇಂದಿನ ಈ ಸಣ್ಣಪುಟ್ಟ ಕಾರಣಗಳನ್ನು ವೈಭವೀಕರಿಸಿ ಪ್ರಚಾರ ಮಾಡುವ ಹುನ್ನಾರ ವಾಗಿರಬಹುದು.

ವಿಕಸಿತ್ ಭಾರತ್ ಯಾತ್ರೆಯು 2024ರ ಚುನಾವಣೆಯ ಸಂದರ್ಭದಲ್ಲಿ ಏಕೆ ಪ್ರಾರಂಭವಾಯಿತು ಯೋಚಿಸಬೇಕಲ್ಲವೇ ? ಭಾರತದ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಚುನಾವಣಾ ಪ್ರಚಾರಕರನ್ನಾಗಿ ಬಳಸಿಕೊಂಡು, ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಇದಕ್ಕೆ ತಗಲುವ ಸುಮಾರು 10 ಸಾವಿರ ಕೋಟಿಗಳಿಗೂ ಹೆಚ್ಚು ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ಯಾವ ಮಾಧ್ಯಮಗಳಿಗೂ ತಿಳಿಯಲಿಲ್ಲವೇ? ಕೆಲವೊಮ್ಮೆ ಕೇಂದ್ರ ಮಂತ್ರಿಗಳು (ವಿತ್ತ ಮಂತ್ರಿ ಹಾಗೂ ಗ್ರಾಮೀಣ ಅಭಿವೃದ್ಧಿ ಮಂತ್ರಿ) ತಾವು ತಮ್ಮ ಪಕ್ಷಗಳ ಪ್ರಚಾರಕ್ಕೆ ಬರುವಾಗಲು, ಸರಕಾರದ ಯೋಜನೆಗಳ ನೆಪವೊಡ್ಡಿ ಬ್ಯಾಂಕ್‌ಗಳ (ಗ್ರಾಹಕರ) ಹಣವನ್ನು ಅವರ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿರುವುದು ನಿಜವಾಗಿಯೂ ಭಾರತೀಯರಿಗೆ, ಗ್ರಾಹಕ ವರ್ಗಕ್ಕೆ ಮಾಡುತ್ತಿರುವ ಮೋಸವಲ್ಲವೇ ?

ಬಂಧುಗಳೇ ನಮ್ಮ ನಾಡಿನ ಬ್ಯಾಂಕ್ ನಮ್ಮ ಹೆಮ್ಮೆ, ಒಂದೆರಡು ತಪ್ಪುಗಳಾಗಿವೆಯೆಂದು ಇಡೀ ಬ್ಯಾಂಕನ್ನೇ ಸರಿಯಿಲ್ಲವೆಂದು ದೂಷಿಸುವುದು ಯಾವ ನ್ಯಾಯ!

Tags

Public sectorBank
share
ದಮ್ಮಪ್ರಿಯ, ಬೆಂಗಳೂರು
ದಮ್ಮಪ್ರಿಯ, ಬೆಂಗಳೂರು
Next Story
X