Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭಾರತ ಯಥಾರ್ಥ ಜಾತಿ ಜನಗಣತಿಯನ್ನೇಕೆ...

ಭಾರತ ಯಥಾರ್ಥ ಜಾತಿ ಜನಗಣತಿಯನ್ನೇಕೆ ಮಾಡಬೇಕಾಗಿದೆ?

ಕೆ. ಅಶೋಕ್ ವರ್ಧನ್ ಶೆಟ್ಟಿಕೆ. ಅಶೋಕ್ ವರ್ಧನ್ ಶೆಟ್ಟಿಕನ್ನಡಕ್ಕೆ: ಕೆ.ಎನ್. ಲಿಂಗಪ್ಪಕನ್ನಡಕ್ಕೆ: ಕೆ.ಎನ್. ಲಿಂಗಪ್ಪ17 May 2025 12:11 PM IST
share
ಭಾರತ ಯಥಾರ್ಥ ಜಾತಿ ಜನಗಣತಿಯನ್ನೇಕೆ ಮಾಡಬೇಕಾಗಿದೆ?
1951ರಿಂದ ನಡೆದ ಪ್ರತಿಯೊಂದು ಜನಗಣತಿಯಲ್ಲೂ ಸರಕಾರವು ಸುಮಾರು 2,000 ಜಾತಿ ಮತ್ತು ಬುಡಕಟ್ಟು ಜನಾಂಗಗಳನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಅಡಿಯಲ್ಲಿ ಯಶಸ್ವಿಯಾಗಿ ಎಣಿಕೆ ಮಾಡಿದೆ. ಉಳಿದ 4,000ಕ್ಕೂ ಹೆಚ್ಚು ಇತರ ಹಿಂದುಳಿದ ವರ್ಗಗಳು ಮತ್ತು ಮೇಲ್ಜಾತಿಗಳನ್ನು ಎಣಿಸುವುದು ಸಾಧ್ಯ ಮಾತ್ರವಲ್ಲ, ಬಹಳ ಹಿಂದಿನಿಂದಲೂ ಬಾಕಿ ಇದೆ. ವಿಳಂಬವಾದ 2021ರ ಜನಗಣತಿಯು ಈ ದತ್ತಾಂಶದ ಅಂತರವನ್ನು ಅಂತಿಮವಾಗಿ ಮುಕ್ತಾಯ ಮಾಡಲು ಅಪರೂಪದ ಅವಕಾಶವನ್ನು ನೀಡುತ್ತದೆ. ನಿರಾಕರಣೆ ಮತ್ತು ವಿಳಂಬದ ಸಮಯ ಮುಗಿದಿದೆ. ಯಥಾರ್ಥ ಜಾತಿ ಜನಗಣತಿಯನ್ನು ಪಡೆಯುವ ಸಮಯ ಈಗ ಬಂದಿದೆ.

ನರೇಂದ್ರ ಮೋದಿ ಸರಕಾರ ಮುಂದಿನ ಜನಗಣತಿಯಲ್ಲಿ ಜಾತಿಯನ್ನೂ ಗಣತಿ ಮಾಡಲು ತೆಗೆದುಕೊಂಡಿರುವ ನಿರ್ಣಯವು ದಿಟ್ಟ, ಪರಿವರ್ತಿಸುವ ಮತ್ತು ಪ್ರಶಂಸನೀಯವಾದುದಾಗಿದೆ. ಜಾತಿ ಎಣಿಕೆಯು ಅಸ್ಮಿತೆ ರಾಜಕಾರಣದ ಬಂಡವಾಳವಾಗುವುದಿಲ್ಲ. ಇದು ಲಕ್ಷಾಂತರ ಜನ ಬದುಕಿರುವ ವಾಸ್ತವಗಳಿಗೆ ಕನ್ನಡಿಯಾಗಿದೆ. ಇದು ಹೆಚ್ಚು ನ್ಯಾಯಯುತ ಮತ್ತು ಅಂತರ್ಗತ ಭಾರತವನ್ನು ನಿರ್ಮಿಸಲು ಪುರಾವೆ ಆಧಾರಿತ ನೀತಿ ರಚನೆಯತ್ತ ಪ್ರಮುಖ ಹೆಜ್ಜೆಯನ್ನು ಸೂಚಿಸುತ್ತದೆ. ತನ್ನನ್ನು ತಾನು ಅವಲೋಕಿಸಲು ನಿರಾಕರಿಸುವ ರಾಷ್ಟ್ರ ತನ್ನನ್ನು ತಾನೇ ಗುಣಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಶಿಸಲು ಸಾಧ್ಯವಿಲ್ಲ.

ಸ್ವಾತಂತ್ರ್ಯಾನಂತರ, ಭಾರತವು ಸಾಮಾಜಿಕ ನ್ಯಾಯವನ್ನು ಅನು ಸರಿಸುವುದರ ಜೊತೆಗೆ ಜಾತಿಯನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿತು. ಏಕೆಂದರೆ ಎರಡೂ ಗುರಿಗಳು ಮೂಲಭೂತವಾಗಿ ಹೊಂದಿಕೆಯಾಗು ವುದಿಲ್ಲ. ಜನಗಣತಿಯಲ್ಲಿ ಜಾತಿಯನ್ನು ಎಣಿಸಲು ನಿರಾಕರಿಸುವುದು ಜಾತಿ ಕುರುಡುತನದ ನೀತಿಯ ಪರಿಣಾಮ ವಾಗಿದೆ. ಆದರೆ ಶಿಕ್ಷಣ, ಸಾರ್ವಜನಿಕ ಉದ್ಯೋಗ ಮತ್ತು ಚುನಾವಣಾ ಕ್ಷೇತ್ರಗಳಲ್ಲಿ ಮೀಸಲಾತಿಯ ಮೂಲಕ ಸಾಮಾಜಿಕ ನ್ಯಾಯವನ್ನು ಅನುಸರಿಸುವುದನ್ನು ಸಂವಿಧಾನವು ಸ್ಪಷ್ಟವಾಗಿ ಆದೇಶಿಸುತ್ತದೆ- ನಿಖರವಾದ, ವಿಭಜಿತ ಜಾತಿ ದತ್ತಾಂಶ ಅಗತ್ಯವಿರುವ ಕ್ರಮಗಳಾಗಿವೆ. ಸಂವಿಧಾನವು ವರ್ಗ ಎಂಬ ಪದವನ್ನು ಬಳಸುತ್ತಿದ್ದರೂ ಭಾರತದ ಸರ್ವೋಚ್ಚ ನ್ಯಾಯಾಲಯ ಹಿಂದುಳಿದಿರುವಿಕೆಯನ್ನು ಗುರುತಿಸಲು ಜಾತಿಯು ಅಗತ್ಯ ಎಂದು ಪದೇಪದೇ ತೀರ್ಪು ನೀಡಿದೆ ಮತ್ತು ಮೀಸಲಾತಿ ನೀತಿಗಳನ್ನು ಎತ್ತಿ ಹಿಡಿಯಲು ವಿವರವಾದ ಜಾತಿವಾರು ದತ್ತಾಂಶಕ್ಕಾಗಿ ಒತ್ತಾಯಿಸಿದೆ.

ತಮ್ಮ 1955ರಲ್ಲಿ ಪ್ರಕಟವಾದ ‘ಭಾಷಾ ರಾಜ್ಯಗಳ ಕುರಿತು ಚಿಂತನೆಗಳು’ ಎಂಬ ಪ್ರಬಂಧದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು 1951ರ ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ಬಿಟ್ಟಿದ್ದನ್ನು ಕ್ಷುಲ್ಲಕ ಬುದ್ಧಿ ಎಂದು ಖಂಡಿಸಿದ್ದರು, ದತ್ತಾಂಶದಲ್ಲಿನ ಗೋಚರತೆ ಅರ್ಥಪೂರ್ಣ ಸೇರ್ಪಡೆಯತ್ತ ಮೊದಲ ಹೆಜ್ಜೆ. ಎಲ್ಲಾ ಪ್ರಮುಖ ಸಾಮಾಜಿಕ ಗುಂಪುಗಳಾದ್ಯಂತ ಜಾತಿ ದತ್ತಾಂಶ ಸಂಗ್ರಹಣೆಯು ಮೀಸಲಾತಿಗಳನ್ನು ನಿರ್ವಹಿಸುವುದಕ್ಕಾಗಿ ಮಾತ್ರವಲ್ಲದೆ, ನೀತಿ ಸಂಬಂಧಿತ ಯೋಜನೆ, ಉದ್ದೇಶಿತ ನೀತಿ ರಚನೆ ಮತ್ತು ಕಾಲಾನಂತರದಲ್ಲಿ ಅಸಮಾನತೆಗಳನ್ನು ಪತ್ತೆಹಚ್ಚಲು ಸಹ ಅತ್ಯಗತ್ಯವಾಗಿದೆ. ಇದನ್ನು ಸಂಗ್ರಹಿಸದೆ ಭಾರತದ ಅನೇಕ ಅಂಚಿನಲ್ಲಿರುವ ಸಮುದಾಯಗಳನ್ನು ಅಧಿಕೃತ ಅಂಕಿ ಅಂಶಗಳಿಂದ ಮರೆಮಾಚಲಾಗಿದೆ. ಸಂಕುಚಿತ ಮನೋಭಾವದ ಗಣ್ಯ ಮೇಲ್ಜಾತಿಗಳು ಮತ್ತು ಪ್ರಬಲ ಇತರ ಹಿಂದುಳಿದ ವರ್ಗಗಳು ಹೊಗೆಯ ಪರದೆಯ ಹಿಂದೆ ಸಂಪತ್ತು, ಅವಕಾಶ ಮತ್ತು ಅಧಿಕಾರದ ಮೇಲೆ ತಮ್ಮ ಹಿಡಿತವನ್ನು ಸ್ಥಾಪಿಸಿವೆ. ಹಿಂದಿರುಗಿ ನೋಡಿದಾಗ ಇದು ಭಾರತದ ಅತ್ಯಂತ ಗಂಭೀರ ನೀತಿ ವೈಫಲ್ಯಗಳಲ್ಲಿ ಒಂದಾಗಿದೆ.

ಕಾನೂನು ಮತ್ತು ಆಡಳಿತಾತ್ಮಕ ಅವಶ್ಯಕತೆ

1951ರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನಷ್ಟೇ ಜನಗಣತಿ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಇತರ ಹಿಂದುಳಿದ ವರ್ಗಗಳನ್ನು ಹೊರಗಿಡಲಾಗಿದೆ. ಆದರೂ ಈ ಮೂರೂ ಗುಂಪುಗಳು ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ ಮೀಸಲಾತಿಗೆ ಸಾಂವಿಧಾನಿಕವಾಗಿ ಅರ್ಹವಾಗಿವೆ. ಇತರ ಹಿಂದುಳಿದ ವರ್ಗಗಳಿಗೆ ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮೀಸಲು ಸ್ಥಾನಗಳಿಲ್ಲ. ಆದರೆ 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳೊಂದಿಗೆ ಪಂಚಾಯತ್‌ಗಳು ಮತ್ತು ಪುರಸಭೆಗಳ ಚುನಾವಣಾ ಕ್ಷೇತ್ರಗಳಲ್ಲಿ ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡ್ಡಾಯಗೊಳಿಸಲಾಗಿದೆ. ಈ ನಿಬಂಧನೆಗಳನ್ನು ಕಾರ್ಯಗತಗೊಳಿಸಲು ಸೂಕ್ಷ್ಮವಾದ ಪ್ರದೇಶವಾರು ಇತರ ಹಿಂದುಳಿದ ವರ್ಗಗಳ ದತ್ತಾಂಶಗಳ ಅಗತ್ಯವಿದೆ. ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ ಮೀಸಲಾತಿಯನ್ನು ಪರಿಚಯಿಸುವುದರೊಂದಿಗೆ (2019) ಎಲ್ಲಾ ಜಾತಿಗಳ ಸಮಗ್ರ ಎಣಿಕೆಗೆ ಈಗ ಕಾನೂನು ಕಡ್ಡಾಯವಾಗಿದೆ.

ಭಾರತದ ಮೀಸಲಾತಿ ನೀತಿಯು ಪ್ರಸ್ತುತ ಸ್ಪಷ್ಟ ನಿರ್ವಾತ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಪ್ರಬಲ ಜಾತಿ ಗುಂಪುಗಳ ಅನಿಯಂತ್ರಿತ ಬೇಡಿಕೆ ಮತ್ತು ಸರಕಾರಗಳ ರಾಜಕೀಯ ಅನುಕೂಲಕರ ನಿರ್ಧಾರಗಳಿಗೆ ಗುರಿಯಾಗುವಂತೆ ಮಾಡುತ್ತದೆ. ವಿಶ್ವಾಸಾರ್ಹ ಜಾತಿ ದತ್ತಾಂಶಗಳೊಂದಿಗೆ ಮರಾಠರು, ಪಾಟಿದಾರರು, ಜಾಟರು ಮತ್ತು ಇತರರ ಬೇಡಿಕೆಗಳನ್ನು ಪಾರದರ್ಶಕವಾಗಿ ಮತ್ತು ಅರ್ಹತೆಯ ಆಧಾರದ ಮೇಲೆ ನಿರ್ಣಯಿಸಬಹುದು. ನಮ್ಮಲ್ಲಿರುವ ಸೀಮಿತ ದತ್ತಾಂಶವೂ ಆಳವಾದ ಅಸಮಾನತೆಗಳನ್ನು ಬಹಿರಂಗಪಡಿಸುತ್ತದೆ. ಭಾರತ ಸರಕಾರವು ನ್ಯಾಯಮೂರ್ತಿ ಜಿ. ರೋಹಿಣಿ ಆಯೋಗಕ್ಕೆ ಸಲ್ಲಿಸಿದ ಸಲ್ಲಿಕೆಗಳ ಪ್ರಕಾರ ಕೇವಲ 10 ಹಿಂದುಳಿದ ಜಾತಿಗಳು ಇತರ ಹಿಂದುಳಿದ ಜಾತಿಗಳಿಗೆ ಮೀಸಲಾಗಿರುವ ಎಲ್ಲಾ ಸಾರ್ವಜನಿಕ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಶೇ. 25ರಷ್ಟನ್ನು ಬಾಚಿಕೊಳ್ಳುತ್ತವೆ. ಆದರೆ, ಇತರ ಹಿಂದುಳಿದ ವರ್ಗಗಳ ಜಾತಿಗಳಲ್ಲಿ ಕಾಲು ಭಾಗವು ಶೇ. 97ರಷ್ಟು ಪ್ರಯೋಜನಗಳನ್ನು ಪಡೆದು ಕೊಳ್ಳುತ್ತವೆ. ಆಘಾತಕಾರಿ ಎಂದರೆ ಶೇ. 38ರಷ್ಟು ಇತರ ಹಿಂದುಳಿದ ವರ್ಗಗಳ ಜಾತಿಗಳು ಕೇವಲ ಶೇ. 3ರಷ್ಟು ಪ್ರಯೋಜನಗಳನ್ನು ಪಡೆದಿವೆ ಮತ್ತು ಶೇ. 37ರಷ್ಟು ಜನರು ಏನೂ ಸಿಗದೇ ವಂಚಿತರಾಗಿದ್ದಾರೆ.

ಆದ್ದರಿಂದ, ಜಾತಿ ಎಣಿಕೆಯು ಆಡಳಿತಾತ್ಮಕ ಕಡ್ಡಾಯವೂ ಆಗಿದೆ-ಸಾಮಾಜಿಕ ಗುಂಪುಗಳಲ್ಲಿ ತರ್ಕಬದ್ಧ ಉಪ- ವರ್ಗೀಕರಣವನ್ನು ಸಮರ್ಥಗೊಳಿಸಲು ಮತ್ತು ಕೆನೆ ಪದರದ ಹೆಚ್ಚು ಖಚಿತವಾದ ಲಕ್ಷಣವನ್ನು ಅಂಗೀಕರಿಸಲು ಗಣ್ಯರ ಆಕ್ರಮಣಿಕೆಯನ್ನು ತಡೆಗಟ್ಟಬೇಕು.

ಜಾತಿ ದತ್ತಾಂಶ ಸಂಗ್ರಹವು ದಶವಾರ್ಷಿಕ ಜನಗಣತಿಯ ನಿರೀಕ್ಷೆಗೂ ಮೀರಿ ಹೋಗಬೇಕು. ಆವರ್ತಿಸುವ ಎಲ್ಲಾ ಸರಕಾರಿ ಸಮೀಕ್ಷೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜೊತೆಗೆ ಇತರ ಹಿಂದುಳಿದ ವರ್ಗಗಳು ಮತ್ತು ಮೇಲ್ಜಾತಿಗಳನ್ನೂ ಗಣತಿ ಮಾಡಬೇಕು. ಅಪೂರ್ಣ ಎಣಿಕೆಯ ಯುಗವು ಕೊನೆಗೊಳ್ಳಬೇಕು.

ವೈಫಲ್ಯ ಮತ್ತು ಯಶಸ್ಸಿನಿಂದ ಕಲಿಯುವುದು

2010ರಲ್ಲಿ ಸಂಸತ್ತು 2011ರ ಜನಗಣತಿಯಲ್ಲಿ, ಜಾತಿಯನ್ನೂ ಎಣಿಸಲು ಸರ್ವಾನುಮತದಿಂದ ನಿರ್ಣಯ ತೆಗೆದುಕೊಂಡಿತು. 1931ರ ಜನಗಣತಿಯಲ್ಲಿ 4,147 ಜಾತಿಗಳು ದಾಖಲಾಗಿದ್ದವು (ಆಗ ಶೋಷಿತ ವರ್ಗಗಳೆಂದು ಕರೆಯುತ್ತಿದ್ದವುಗಳನ್ನು ಹೊರತುಪಡಿಸಿ). ಭಾರತದ ಮಾನವ ಶಾಸ್ತ್ರೀಯ ಸಮೀಕ್ಷೆಯು 6,325 ಜಾತಿಗಳನ್ನು ಗುರುತಿಸಿದೆ. ಆದರೆ ಎರಡನೇ ಅವಧಿಯ ಯುಪಿಎ ಸರಕಾರವು ನಡೆಸಿದ 2011ರ ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ (ಎಸ್‌ಇಸಿಸಿ) ಸಫಲಗೊಳ್ಳಲಿಲ್ಲ.

ಏನು ತಪ್ಪಾಯಿತು? ಮೊದಲನೆಯದಾಗಿ, ಎಸ್‌ಇಸಿಸಿ 2011 ಅನ್ನು 1948ರ ಜನಗಣತಿ ಕಾಯ್ದೆಯ ಕಾನೂನು ಪ್ರಾಧಿಕಾರದ ಅಡಿಯಲ್ಲಿ ನಡೆಸಲಾಗಿಲ್ಲ. ಇದನ್ನು ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಸಚಿವಾಲಯಗಳ ಮೂಲಕ ನಡೆಸಲಾಯಿತು. ತೊಡಕಿನ ಸಾಮಾಜಿಕ ಮಾನವ ಶಾಸ್ತ್ರೀಯ ಸಮೀಕ್ಷೆಯನ್ನು ನಿರ್ವಹಿಸಲು ಯಾವುದೇ ಪರಿಣತಿಯನ್ನು ಯಾರೂ ಹೊಂದಿರಲಿಲ್ಲ. ಮೂರನೆಯದಾಗಿ, ಜಾತಿಯ ಬಗ್ಗೆ ಅದರ ಮಿತಿ ಇರದ ಪ್ರಶ್ನೆಗಳು ಗೊಂದಲವನ್ನು ಸೃಷ್ಟಿಸಿದವು. ತರಬೇತಿ ಪಡೆಯದ ಗಣತಿದಾರರು ಜಾತಿಗಳು, ಉಪಜಾತಿಗಳು ಗೋತ್ರಗಳು, ಕುಲದ ಹೆಸರುಗಳು, ಉಪನಾಮಗಳು ಮತ್ತು ವಿಶಾಲ ಜಾತಿ ಗುಂಪುಗಳನ್ನು ಒಟ್ಟುಗೂಡಿಸಿದ್ದರು. ಇದರ ಫಲಿತಾಂಶವು ಅಸ್ತವ್ಯಸ್ತವಾಗಿರುವ, ಬಳಸಲಾಗದ ದತ್ತಾಂಶಗಳ ಜೋಡಣೆಯಾಗಿತ್ತು. ಅದು ನಿರುಪಯುಕ್ತಗೊಳಿಸುವುದೇ ಅಥವಾ ಅಸಮರ್ಥತೆಯೇ ಯಾವುದೇ ಇರಲಿ ಒಂದು ಐತಿಹಾಸಿಕ ಅವಕಾಶವನ್ನು ವ್ಯರ್ಥ ಮಾಡಲಾಯಿತು.

ಇದಕ್ಕೆ ವ್ಯತಿರಿಕ್ತವಾಗಿ ಬಿಹಾರದ ಜಾತಿ ಸಮೀಕ್ಷೆಯಲ್ಲಿ ಗಣತಿದಾರರಿಗೆ ರಾಜ್ಯಕ್ಕೆ ಅನ್ವಯಿಸುವ ಹಾಗೆ ನಿರ್ದಿಷ್ಟ 214 ಜಾತಿಗಳ ಪಟ್ಟಿಯನ್ನು ನೀಡಲಾಯಿತು ಮತ್ತು ಇತರ ಜಾತಿಗಳಿಗೆ 215 ಆಯ್ಕೆಗಳನ್ನು ನೀಡಲಾಯಿತು. ಸಮೀಕ್ಷೆಯನ್ನು ಉತ್ತಮವಾಗಿ ಯೋಜಿಸಲಾಯಿತು ಮತ್ತು ಉತ್ತಮವಾಗಿ ಕಾರ್ಯಗತಗೊಳಿಸಲಾಯಿತು. ವಿಶ್ವಾಸಾರ್ಹ ಜಾತಿ ಎಣಿಕೆ ಸಂಪೂರ್ಣವಾಗಿ ಕಾರ್ಯಸಾಧ್ಯವಾಗಿದೆ.

ಯಶಸ್ವಿ ಜಾತಿ-ಜನಗಣತಿಗೆ ನೀಲನಕ್ಷೆ

2011ರ ವಿಫಲ ಘಟನೆಗಳು ಪುನರಾವರ್ತನೆ ಆಗುವುದನ್ನು ತಪ್ಪಿಸಲು ಏನು ಮಾಡಬೇಕೆಂಬುದು ಇಲ್ಲಿದೆ.

ಮೊದಲನೆಯದಾಗಿ ಕಾನೂನು ಬೆಂಬಲ ಅಗತ್ಯ-ಜಾತಿ ಎಣಿಕೆಯನ್ನು ಸ್ಪಷ್ಟವಾಗಿ ಕಡ್ಡಾಯ ಗೊಳಿಸಲು ಮತ್ತು ರಾಜಕೀಯ ಕಾರ್ಯ ಸೂಚಿಗಳಿಂದ ಪ್ರಕ್ರಿಯೆಯನ್ನು ರೂಪಿಸಲು 1948ರ ಜನಗಣತಿ ಕಾಯ್ದೆಗೆ ತಿದ್ದುಪಡಿ ತರುವುದು.

ಎರಡನೆಯದಾಗಿ, ಸರಿಯಾದ ಸಂಸ್ಥೆ- ಈ ಕಾರ್ಯವನ್ನು ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಗೆ ಮಾತ್ರ ವಹಿಸಬೇಕು. ಆದರೆ ಪರಿಣತಿಯ ಕೊರತೆ ಇರುವ ಸಚಿವಾಲಯಗಳಿಗಲ್ಲ.

ಮೂರನೆಯದಾಗಿ, ಪ್ರಾಮಾಣೀಕೃತ ಪ್ರಶ್ನಾವಳಿಗಳು- ಉಪಜಾತಿ (ಅಲಿಯಾಸ್ ಸೇರಿದಂತೆ), ವಿಶಾಲವಾದ ಜಾತಿ ಗುಂಪು ಮತ್ತು ಜಾತಿ ಸಂಬಂಧಿತ ಉಪನಾಮ (ಐಚ್ಛಿಕ)ಗಳನ್ನು ಒಳಗೊಂಡ ಡ್ರಾಪ್‌ಡೌನ್ ಮೆನುಗಳೊಂದಿಗೆ ಮುಚ್ಚಿದ- ಆಯ್ಕೆಯ ಪ್ರಶ್ನೆಗಳನ್ನು ಬಳಸಿ, ರಾವ್, ನಾಯಕ್, ಸಿಂಗ್ ಅಥವಾ ಭಂಡಾರಿಯಂತಹ ಕೆಲವು ಜಾತಿ ಹೆಸರುಗಳು ಬಹು ಸಮುದಾಯಗಳನ್ನು ವ್ಯಾಪಿಸಿರುವುದರಿಂದ ‘ಜಾತಿ’ಯನ್ನು ಮಾತ್ರ ಆಯ್ಕೆಯಾಗಿ ಹೊಂದಿರುವುದು ದೋಷಗಳಿಗೆ ಕಾರಣವಾಗಬಹುದು. ನಕಲು ಅಥವಾ ಶಬ್ದಾರ್ಥದ ಗೊಂದಲವನ್ನು ತಪ್ಪಿಸಲು ವಿಶಿಷ್ಟ ಡಿಜಿಟಲ್ ಕೋಡ್‌ಗಳನ್ನು ನಿಯೋಜಿಸಿ (ಉದಾಹರಣೆ: ಅಯ್ಯರ್, ಐಯ್ಯರ್ ಅನ್ನು ಒಂದೇ ಕೋಡ್‌ನಲ್ಲಿ ಗುಂಪು ಮಾಡಬಹುದು).

ನಾಲ್ಕನೆಯದಾಗಿ, ರಾಜ್ಯ ನಿರ್ದಿಷ್ಟಪಡಿಸಿದ ಜಾತಿ ಪಟ್ಟಿಗಳು- ರಾಜ್ಯ ಸರಕಾರಗಳು, ಸಮಾಜಶಾಸ್ತ್ರಜ್ಞರು ಮತ್ತು ಸಮುದಾಯ ನಾಯಕರೊಂದಿಗೆ ಸಮಾಲೋಚಿಸಿ ಕರಡು ಪಟ್ಟಿಗಳನ್ನು ಅಭಿವೃದ್ಧಿಪಡಿಸಿ ಅವುಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿ ಮತ್ತು ಅಂತಿಮಗೊಳಿಸುವ ಮೊದಲು ಸಾರ್ವಜನಿಕ ಪ್ರತಿಕ್ರಿಯೆಯನ್ನು ಆಹ್ವಾನಿಸಿ, ಹಾಗೆಯೇ ಪ್ರಶ್ನಾವಳಿ ವಿನ್ಯಾಸಕ್ಕೂ ಇದೇ ರೀತಿಯ ಭಾಗವಹಿಸುವಿಕೆಯ ವಿಧಾನವನ್ನು ಬಳಸಬೇಕು.

ಐದನೆಯದಾಗಿ, ಗಣತಿದಾರರ ತರಬೇತಿ-ಸ್ಪಷ್ಟವಾಗಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳನ್ನು, ಸ್ಥಳೀಯ ಜಾತಿ ಸೂಕ್ಷ್ಮ ವ್ಯತ್ಯಾಸಗಳ ಕುರಿತ ಮಾರ್ಗದರ್ಶನ ಗಳೊಂದಿಗೆ ನಿರ್ದಿಷ್ಟ-ಪ್ರದೇಶವಾರು ಅಧಿವೇಶನಗಳ ತರಬೇತಿಯನ್ನು ಅಣಕು ಉದಾಹರಣೆಗಳ ಸಹಿತ ನೀಡಬೇಕು.

ಆರನೆಯದಾಗಿ, ಡಿಜಿಟಲ್ ಪರಿಕರಗಳು- ಗಣತಿದಾರರನ್ನು ಮೌಲ್ಯೀಕರಿಸಿದ ಜಾತಿ ಪಟ್ಟಿಗಳೊಂದಿಗೆ ಮುಂಚಿತವಾಗಿ ಭರ್ತಿ ಮಾಡಲಾದ, ಕೈಯಲ್ಲಿ ಹಿಡಿದುಕೊಳ್ಳುವ ಸಾಧನಗಳನ್ನು ಒದಗಿಸಿ ಸಜ್ಜುಗೊಳಿಸಬೇಕು. ಮಾನವ ದೋಷಗಳನ್ನು ಕಡಿಮೆ ಮಾಡಲು, ಪೂರ್ವಭಾವಿ ಆಯ್ಕೆಗಳ ದತ್ತಾಂಶಗಳನ್ನಷ್ಟೇ ನಮೂದು ಮಾಡಲು ನಿರ್ಬಂಧಿಸಬೇಕು.

ಏಳನೆಯದಾಗಿ, ಪ್ರತಿನಿಧಿ ಸಿಬ್ಬಂದಿ ನೇಮಕಾತಿ-

ದತ್ತಾಂಶ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಸಮುದಾಯಗಳಿಗೆ ಸೇರಿದ ಗಣತಿದಾರರನ್ನು ಯಾವುದೇ ಹಿತಾಸಕ್ತಿ ಸಂಘರ್ಷವಿಲ್ಲದ ಪ್ರದೇಶಗಳಿಗೆ ನಿಯೋಜಿಸಬೇಕು.

ಎಂಟನೆಯದಾಗಿ, ಸ್ವತಂತ್ರ ಮೇಲ್ವಿಚಾರಣೆ- ಮಾದರಿಗಳನ್ನು ಲೆಕ್ಕಪರಿಶೋಧಿಸಲು ಮತ್ತು ದತ್ತಾಂಶ ಸಮಗ್ರತೆಯನ್ನು ಮೇಲ್ವಿಚಾರಣೆ ಮಾಡಲು ಜಿಲ್ಲಾಮಟ್ಟದ ಸಮಿತಿಗಳನ್ನು ಸ್ಥಾಪಿಸಬೇಕು.

ಒಂಭತ್ತನೆಯದಾಗಿ, ಪೈಲಟ್ ಪರೀಕ್ಷೆ- ರಾಷ್ಟ್ರ ವ್ಯಾಪಿ ಜಾರಿಗೆ ಬರುವ ಮೊದಲು ವಿಧಾನವನ್ನು ಪರಿಷ್ಕರಿಸಲು ತಮಿಳುನಾಡು, ಗುಜರಾತ್, ಉತ್ತರಪ್ರದೇಶ ಮತ್ತು ಅಸ್ಸಾಮಿನಂತಹ ವಿವಿಧ ರಾಜ್ಯಗಳಲ್ಲಿ ಪ್ರಯೋಗಗಳನ್ನು ನಡೆಸಬೇಕು.

1951ರಿಂದ ನಡೆದ ಪ್ರತಿಯೊಂದು ಜನಗಣತಿಯಲ್ಲೂ ಸರಕಾರವು ಸುಮಾರು 2,000 ಜಾತಿ ಮತ್ತು ಬುಡಕಟ್ಟು ಜನಾಂಗಗಳನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಅಡಿಯಲ್ಲಿ ಯಶಸ್ವಿಯಾಗಿ ಎಣಿಕೆ ಮಾಡಿದೆ. ಉಳಿದ 4,000ಕ್ಕೂ ಹೆಚ್ಚು ಇತರ ಹಿಂದುಳಿದ ವರ್ಗಗಳು ಮತ್ತು ಮೇಲ್ಜಾತಿಗಳನ್ನು ಎಣಿಸುವುದು ಸಾಧ್ಯ ಮಾತ್ರವಲ್ಲ, ಬಹಳ ಹಿಂದಿನಿಂದಲೂ ಬಾಕಿ ಇದೆ. ವಿಳಂಬವಾದ 2021ರ ಜನಗಣತಿಯು ಈ ದತ್ತಾಂಶದ ಅಂತರವನ್ನು ಅಂತಿಮವಾಗಿ ಮುಕ್ತಾಯ ಮಾಡಲು ಅಪರೂಪದ ಅವಕಾಶವನ್ನು ನೀಡುತ್ತದೆ. ನಿರಾಕರಣೆ ಮತ್ತು ವಿಳಂಬದ ಸಮಯ ಮುಗಿದಿದೆ. ಯಥಾರ್ಥ ಜಾತಿ ಜನಗಣತಿಯನ್ನು ಪಡೆಯುವ ಸಮಯ ಈಗ ಬಂದಿದೆ.

-ಕೃಪೆ: ದಿ ಹಿಂದೂ

share
ಕೆ. ಅಶೋಕ್ ವರ್ಧನ್ ಶೆಟ್ಟಿ
ಕೆ. ಅಶೋಕ್ ವರ್ಧನ್ ಶೆಟ್ಟಿ
ಕನ್ನಡಕ್ಕೆ: ಕೆ.ಎನ್. ಲಿಂಗಪ್ಪ
ಕನ್ನಡಕ್ಕೆ: ಕೆ.ಎನ್. ಲಿಂಗಪ್ಪ
Next Story
X