Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಡಾಲರ್ ಎದುರು ರೂಪಾಯಿ ಇತಿಹಾಸದಲ್ಲಿಯೇ...

ಡಾಲರ್ ಎದುರು ರೂಪಾಯಿ ಇತಿಹಾಸದಲ್ಲಿಯೇ ಅತ್ಯಂತ ಆಘಾತಕಾರಿ ಕುಸಿತ ಕಂಡಿರುವುದೇಕೆ?

ಅಜಿತ್ ಕೆ.ಸಿ.ಅಜಿತ್ ಕೆ.ಸಿ.5 Dec 2025 11:01 AM IST
share
ಡಾಲರ್ ಎದುರು ರೂಪಾಯಿ ಇತಿಹಾಸದಲ್ಲಿಯೇ ಅತ್ಯಂತ ಆಘಾತಕಾರಿ ಕುಸಿತ ಕಂಡಿರುವುದೇಕೆ?

ಡಾಲರ್ ಎದುರು ರೂಪಾಯಿ ಮೌಲ್ಯ 90.2ಕ್ಕೆ ಕುಸಿತ ಕಂಡಿದೆ. ಇದು ಸಾರ್ವಕಾಲಿಕ ಕನಿಷ್ಠ ಮಟ್ಟವಾಗಿದೆ.

ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಿಂದ ಹಣ ಹಿಂಪಡೆಯುವುದು, ಮಾರಾಟ ಮಾಡುವುದು ಮತ್ತು ಭಾರತೀಯ ಹೂಡಿಕೆದಾರರು ಖರೀದಿಸುವುದು ಇದಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.

ರೂಪಾಯಿ ಮೌಲ್ಯ ಕುಸಿತ ಮತ್ತು ವಿದೇಶಿ ಡಾಲರ್ ಒಳಹರಿವಿನ ಕೊರತೆ ಇಲ್ಲಿನ ಕಂಪೆನಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಬಹುತೇಕ ಎಲ್ಲಾ ವಲಯಗಳಲ್ಲಿನ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪೆನಿಗಳು ತೀವ್ರ ಸಂಕಷ್ಟದಲ್ಲಿವೆ ಎಂದು ವರದಿಗಳು ಹೇಳುತ್ತಿವೆ.

1,000 ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪೆನಿಗಳ ಷೇರು ಬೆಲೆಗಳು ಅವುಗಳ ಗರಿಷ್ಠ ಮಟ್ಟದಿಂದ ಶೇ. 20ರಷ್ಟು ಕುಸಿದಿವೆ ಮತ್ತು 440 ಕಂಪೆನಿಗಳ ಷೇರು ಬೆಲೆಗಳು ಶೇ. 50ರಷ್ಟು ಕುಸಿದಿವೆ. ಅನೇಕ ಕಂಪೆನಿಗಳ ಷೇರು ಬೆಲೆಗಳು ಶೇ. 90ರಷ್ಟು ಕುಸಿದಿವೆ. ಮಾರುಕಟ್ಟೆಯ ಲಾಭಗಳು ಈಗ ಅಷ್ಟು ಉತ್ತಮವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾದರೆ, ನಮ್ಮ ಆರ್ಥಿಕತೆ ಸುಳ್ಳಿನ ಸುಳಿಯಲ್ಲಿ ಸಿಲುಕಿದೆಯೇ? ಯಾರೂ ಸತ್ಯವನ್ನು ಹೇಳದಿದ್ದರೆ, ಅದನ್ನು ಹೇಗೆ ಸರಿಪಡಿಸಬಹುದು? ರೂಪಾಯಿ ಮೌಲ್ಯ ಈ ಮಟ್ಟಕ್ಕೆ ಕುಸಿದಿರುವಾಗ, ಇದು ಹೇಗೆ ಪರಿಣಾಮ ಬೀರುತ್ತದೆ?

ಏಶ್ಯದ ಎಲ್ಲಾ ಕರೆನ್ಸಿಗಳಲ್ಲಿ ರೂಪಾಯಿ ಕೆಟ್ಟ ಸ್ಥಿತಿಯಲ್ಲಿದೆ. ಆದರೆ ಯಾರೂ ಇದರ ಬಗ್ಗೆ ಚರ್ಚಿಸುವುದಿಲ್ಲ.

2014ರ ಮೊದಲು, ರೂಪಾಯಿಯ ದೌರ್ಬಲ್ಯವನ್ನು ರಾಷ್ಟ್ರಕ್ಕೆ ನಷ್ಟ ಎಂದು ಕರೆಯುತ್ತಿದ್ದವರು ಈಗ ಅದನ್ನು ಲಾಭ ಎಂದು ಕರೆಯುತ್ತಿದ್ದಾರೆ.

ರೂಪಾಯಿ ದುರ್ಬಲಗೊಳ್ಳುವುದರಿಂದ ವಿದೇಶಿ ವಿನಿಮಯ ಗಳಿಕೆ ಮತ್ತು ಉದ್ಯೋಗಗಳು ಹೆಚ್ಚಾಗುತ್ತವೆ ಎಂದು, ಈ ಹಿಂದೆ ನೀತಿ ಆಯೋಗದ ಉಪಾಧ್ಯಕ್ಷರಾಗಿದ್ದ ರಾಜೀವ್ ಕುಮಾರ್ ಹೇಳುತ್ತಿದ್ದಾರೆ. ಆದರೆ ಕಳೆದ ಹಲವಾರು ದಿನಗಳಿಂದ, ವಿದೇಶಿ ಹೂಡಿಕೆದಾರರು ಭಾರತದಿಂದ ಡಾಲರ್‌ಗಳನ್ನು ಹಿಂದೆಗೆದುಕೊಳ್ಳುತ್ತಿದ್ದಾರೆ. ಈಗಾಗಲೇ ಸಾವಿರಾರು ಕೋಟಿ ರೂ.ಮೌಲ್ಯದ ಡಾಲರ್‌ಗಳನ್ನು ಹಿಂದೆಗೆದುಕೊಳ್ಳಲಾಗಿದೆ. ಇದನ್ನು ಬಹಿರಂಗಪಡಿಸಿಲ್ಲ.

ವಿದೇಶಿ ಹೂಡಿಕೆದಾರರು ಬಂದಾಗ, ಅದರ ಬಗ್ಗೆ ಬಹಳ ಸಂಭ್ರಮಪಡಲಾಯಿತು. ಈಗ ವಿದೇಶಿ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ ಮತ್ತು ತಮ್ಮ ಹೂಡಿಕೆಗಳಿಂದ ಹಣ ಹಿಂದೆಗೆದುಕೊಳ್ಳುತ್ತಿದ್ದಾರೆ.

ರೂಪಾಯಿ ಕುಸಿತಕ್ಕೆ ಹಲವು ಕಾರಣಗಳಿವೆ.

ವಿಫಲ ಆರ್ಥಿಕ ನೀತಿಗಳು ಮತ್ತು ವಿಫಲ ವಿದೇಶಾಂಗ ನೀತಿಯಲ್ಲದೆ ಅಮೆರಿಕದ ಸುಂಕಗಳು ನಮ್ಮ ಆರ್ಥಿಕತೆಗೆ ವಿನಾಶಕಾರಿ ಹೊಡೆತ ನೀಡಿವೆ. ವ್ಯಾಪಾರ ಒಪ್ಪಂದದ ಕೊರತೆಯಿಂದಾಗಿ ರೂಪಾಯಿ ಮತ್ತಷ್ಟು ದುರ್ಬಲಗೊಂಡಿದೆ.

ಮತ್ತೊಂದು ಪ್ರಮುಖ ಕಾರಣವೆಂದರೆ, ನಿರಂತರವಾಗಿ ಹೆಚ್ಚುತ್ತಿರುವ ಆಮದು ಪ್ರಮಾಣ ಮತ್ತು ನಿರಂತರವಾಗಿ ಹೆಚ್ಚುತ್ತಿರುವ ವ್ಯಾಪಾರ ಕೊರತೆ.

ಪ್ರಧಾನಿ, ಅವರ ಸರಕಾರ, ಕಪಟ ಅರ್ಥಶಾಸ್ತ್ರಜ್ಞರು ಮತ್ತು ಮಡಿಲ ಮಾಧ್ಯಮಗಳು ರೂಪಾಯಿ ದುರ್ಬಲಗೊಳ್ಳುವುದು ನಿಜಕ್ಕೂ ಒಳ್ಳೆಯದೆಂದು ಹೇಳುತ್ತಿರುವುದು ವಿಚಿತ್ರವಾಗಿದೆ. ಇದು ಸಂಪೂರ್ಣವಾಗಿ ಸುಳ್ಳು.

ರೂಪಾಯಿ ಈಗ ಏಶ್ಯದಲ್ಲಿ ಅತ್ಯಂತ ಕಳಪೆ ಮಟ್ಟಕ್ಕೆ ಇಳಿದಿರುವ ಕರೆನ್ಸಿಯಾಗಿದೆ.

2025ರ ಎಪ್ರಿಲ್‌ನಿಂದ ಅಕ್ಟೋಬರ್ ವರೆಗಿನ ಆಮದು ಪ್ರಮಾಣ ಸುಮಾರು 58 ಲಕ್ಷ ಕೋಟಿ ರೂ. ಇದು ಕಳೆದ ವರ್ಷಕ್ಕಿಂತ ಶೇ. 10 ಹೆಚ್ಚಾಗಿದೆ.

ರೂಪಾಯಿಯನ್ನು ಬಲವಾಗಿಡಲು ಆರ್‌ಬಿಐ ಸುಮಾರು 4 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಆದರೆ ಅದು ಯಾವುದೇ ಪರಿಣಾಮ ಬೀರುತ್ತಿಲ್ಲ.

ರೂಪಾಯಿ ದುರ್ಬಲಗೊಳ್ಳುತ್ತಿದೆ ಮತ್ತು ಅದು ಏನೂ ಪರಿಣಾಮ ಬೀರುವುದಿಲ್ಲ ಎಂದು ಭಾವಿಸಿದರೆ ತಪ್ಪು. ರೂಪಾಯಿ ದುರ್ಬಲಗೊಳ್ಳುವುದು ಎಂದರೆ ದೇಶದ ಆಮದು ಬಿಲ್ ಹೆಚ್ಚಾಗುತ್ತದೆ. ನಾವು ವಿದೇಶದಿಂದ ಏನೇ ಖರೀದಿಸಿದರೂ ಅದು ಹೆಚ್ಚು ದುಬಾರಿಯಾಗುತ್ತದೆ ಮತ್ತು ನಾವು ಅವುಗಳಿಗೆ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಭಾರತಕ್ಕೆ ಖರೀದಿಸಿ ತರುವ ಹೆಚ್ಚಿನ ಬೆಲೆಯ ಸರಕುಗಳ ಬೆಲೆಯೂ ಇಲ್ಲಿ ಹೆಚ್ಚಾಗುತ್ತದೆ ಎಂಬುದು ಸ್ಪಷ್ಟ.

ಉದಾಹರಣೆಗೆ, ಕಚ್ಚಾ ತೈಲ. ಇದು ಹೆಚ್ಚು ದುಬಾರಿಯಾದರೆ, ಡೀಸೆಲ್ ಮತ್ತು ಪೆಟ್ರೋಲ್ ಇಲ್ಲಿ ಹೆಚ್ಚು ದುಬಾರಿಯಾಗುತ್ತವೆ.

ಸಾರಿಗೆ ವೆಚ್ಚದ ಅಗತ್ಯವಿರುವ ತರಕಾರಿಗಳು, ಹಣ್ಣುಗಳು ಮತ್ತು ಇತರ ವಸ್ತುಗಳು ಹೆಚ್ಚು ದುಬಾರಿಯಾಗುತ್ತವೆ.

ಹಣದುಬ್ಬರ ಹೆಚ್ಚಾದಾಗ, ಆರ್‌ಬಿಐ ಬಡ್ಡಿದರಗಳನ್ನು ಹೆಚ್ಚಿಸುತ್ತದೆ.ಇದರಿಂದ ನಮ್ಮ ಸಾಲದ ಇಎಂಐ ಹೆಚ್ಚಾಗುತ್ತದೆ.

ಅಲ್ಲದೆ, ವಿದೇಶ ಪ್ರಯಾಣ, ಆಹಾರ, ಶಿಕ್ಷಣ ಎಲ್ಲವೂ ದುಬಾರಿಯಾಗುತ್ತದೆ. ಹಾಗಿರುವಾಗ, ರೂಪಾಯಿ ಕುಸಿಯುತ್ತಲೇ ಇದ್ದರೂ ನಾವು ಸಂತೋಷವಾಗಿರುತ್ತೇವೆ ಎಂಬ ಭ್ರಮೆಯಲ್ಲಿ ತಳ್ಳಲಾಗುತ್ತಿದೆಯೆ?

ರೂಪಾಯಿ ಕುಸಿತ ಮೋದಿಯವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಆದರೆ ಅದು ಖಂಡಿತವಾಗಿಯೂ ಜನರ ಮೇಲೆ ಪರಿಣಾಮ ಬೀರುತ್ತದೆ.

ಆದರೆ ಯುಪಿಎ ಅವಧಿಯಲ್ಲಿ ರೂಪಾಯಿ ಐವತ್ತೈದು, ಅರುವತ್ತು ರೂಪಾಯಿ ಆದಾಗ ಸರಕಾರವನ್ನು ಹಿಗ್ಗಾಮುಗ್ಗಾ ಝಾಡಿಸುತ್ತಿದ್ದವರು ಈಗ ನಾಪತ್ತೆಯಾಗಿದ್ದಾರೆ. ಕನಿಷ್ಠ ರೂಪಾಯಿ ಇಷ್ಟೊಂದು ಕುಸಿಯುತ್ತಿರುವುದು ಯಾಕೆ ಎಂಬ ಪ್ರಶ್ನೆಯನ್ನೂ ಅವರು ಕೇಳುತ್ತಿಲ್ಲ

ಯುವಕರಿಗೆ ಉದ್ಯೋಗಗಳು ಸಿಗುವುದು ಹಾಗಿರಲಿ, ಇಲ್ಲಿ ಇಂಟರ್ನ್‌ಶಿಪ್‌ಗಳ ಬಗ್ಗೆಯೇ ಬಿಕ್ಕಟ್ಟು ಇದೆ. ಪಿಎಂ ಇಂಟರ್ನ್‌ಶಿಪ್ ಯೋಜನೆ ವಿಫಲವಾಗಿದೆ ಎಂಬುದು ಹಳೇ ವಿಷಯ.

ಈ ಯೋಜನೆಯನ್ನು ಫೆಬ್ರವರಿ 2024-25ರ ಬಜೆಟ್ ಸಮಯದಲ್ಲಿ ಘೋಷಿಸಲಾಯಿತು. ಅದ್ಭುತ ಯೋಜನೆ. ಮೋದಿ ಮಾತ್ರ ಇಂತಹ ಯೋಜನೆಯನ್ನು ತರಬಲ್ಲರು ಎಂದೆಲ್ಲ ಹೇಳಲಾಗಿತ್ತು. ಟಾಪ್ 500 ಕಂಪೆನಿಗಳಿಗೆ ಈ ಯೋಜನೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎನ್ನಲಾಗಿತ್ತು. 5 ವರ್ಷಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಒದಗಿಸುವುದು ಯೋಜನೆಯ ಗುರಿಯಾಗಿತ್ತು. ಇದರರ್ಥ ಒಂದು ವರ್ಷದಲ್ಲಿ 20 ಲಕ್ಷ ಯುವಕರಿಗೆ ತರಬೇತಿ ನೀಡುವುದು.

ಆದರೆ ಮೊದಲ ವರ್ಷದಲ್ಲಿ ಎಷ್ಟು ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಪಡೆದರು?

ಟಿಎಂಸಿ ಸಂಸದೆ ಸಯಾನಿ ಘೋಷ್ ಭಾರತ ಸರಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವನ್ನು ಕೇಳಿದಾಗ, ಒಂದು ವರ್ಷದಲ್ಲಿ 1.25 ಲಕ್ಷ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಗುರಿಯಿದ್ದು, ಅಕ್ಟೋಬರ್ 3, 2024ರಂದು ಪೈಲಟ್ ಯೋಜನೆ ಪ್ರಾರಂಭಿಸಲಾಗಿದೆ ಎಂಬ ಉತ್ತರ ಬಂದಿತ್ತು. ಸರಕಾರ ಇದಕ್ಕಾಗಿ ರೂ. 73 ಕೋಟಿಗೂ ಹೆಚ್ಚು ಖರ್ಚು ಮಾಡಿದೆ. ಈ 73 ಕೋಟಿಯಲ್ಲಿ 16 ಕೋಟಿಗೂ ಹೆಚ್ಚು ಜಾಹೀರಾತಿಗಾಗಿ ಖರ್ಚಾಗಿದೆ.

ಆದರೆ ಪಿಎಂ ಇಂಟರ್ನ್‌ಶಿಪ್ ಯೋಜನೆ ವಿಫಲವಾಗಿದೆ ಅಥವಾ ನಿಷ್ಪ್ರಯೋಜಕವಾಗಿದೆ ಮತ್ತು ಅದು ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಹೇಳಲಾಗುತ್ತಿಲ್ಲ.

4,566 ವಿದ್ಯಾರ್ಥಿಗಳು ತಮ್ಮ ಇಂಟರ್ನ್‌ಶಿಪ್‌ಗಳನ್ನು ಮಧ್ಯದಲ್ಲಿಯೇ ಬಿಟ್ಟಿದ್ದಾರೆ.

1 ಕೋಟಿಗೂ ಹೆಚ್ಚು ಜನರಿಗೆ ಇಂಟರ್ನ್‌ಶಿಪ್ ನೀಡುವ ಭರವಸೆ ನೀಡಿದ ಈ ಯೋಜನೆ 100 ಉದ್ಯೋಗಗಳನ್ನು ಸಹ ಒದಗಿಸಿಲ್ಲ. ಹಾಗಾದರೆ ಉದ್ಯೋಗಗಳು ಏಕೆ ಸೃಷ್ಟಿಯಾಗುತ್ತಿಲ್ಲ?

2021ರಿಂದ 2025ರ ನಡುವಿನ ಐದು ವರ್ಷಗಳಲ್ಲಿ, 100 ಬಿಲಿಯನ್ ಡಾಲರ್ ಐಪಿಒಗಳನ್ನು ಸಂಗ್ರಹಿಸಲಾಗಿದೆ ಎಂದು ಪರಿಣಿತರು ಹೇಳುತ್ತಾರೆ.

ಭಾರತೀಯ ಮಾರುಕಟ್ಟೆಯಲ್ಲಿ ಎಷ್ಟೆಲ್ಲ ಹಣವಿದೆ? ಆರ್ಥಿಕತೆ ಎಷ್ಟು ಪ್ರಬಲವಾಗಿದೆ? ಎಂದೆಲ್ಲ ದೊಡ್ಡದಾಗಿ ಹೇಳಿಕೊಳ್ಳುವುದು ನಡೆಯುತ್ತದೆ.ಆದರೆ ಈ ಗದ್ದಲದಲ್ಲಿ, ಐಪಿಒ ಒಳಗೆ ಮಾರಾಟಕ್ಕೆ ಇರುವ ಕೊಡುಗೆ ಏನೆಂದು ಹೇಳಲಾಗುತ್ತಿಲ್ಲ.

ತಮ್ಮ ಷೇರುಗಳನ್ನು ಮಾರಾಟ ಮಾಡುವ ಮೂಲಕ ಅದರ ಪ್ರಮೋಟರ್‌ಗಳು ಎಷ್ಟು ಗಳಿಸಿದರು ಮತ್ತು ಆ ಹಣ ಎಲ್ಲಿಗೆ ಹೋಯಿತು? ಎಂಬ ಪ್ರಶ್ನೆಗೆ ಉತ್ತರವಿಲ್ಲ.

ಪ್ರಮೋಟರ್‌ಗಳು ಸ್ವತಃ ಹೂಡಿಕೆ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.ಅವರು ತಮ್ಮ ಕಂಪೆನಿ ಮತ್ತು ಷೇರುಗಳ ಮೌಲ್ಯಮಾಪನದ ಲಾಭ ಪಡೆದುಕೊಂಡು ಷೇರುಗಳನ್ನು ಮಾರಾಟ ಮಾಡಿ ಹೊರಟು ಹೋಗುತ್ತಿದ್ದಾರೆ.

ಹಾಗಾದರೆ ಅವರಿಗೆ ಭಾರತೀಯ ಮಾರುಕಟ್ಟೆಯಲ್ಲಿ ನಂಬಿಕೆ ಇಲ್ಲವೇ?

ಪರಿಣಿತರು ಹೇಳುವ ಪ್ರಕಾರ, ಐಪಿಒಗಳ ಮೂಲಕ ಸಂಗ್ರಹಿಸಿದ ಹಣದ ಶೇ. 60 ಖಂಡಿತವಾಗಿಯೂ ಕಂಪೆನಿಗಳಿಗೆ ಹೋಯಿತು. ಆದರೆ ಆ ಹಣದಲ್ಲಿ ಕೇವಲ ಶೇ. 15 ಮಾತ್ರ ಹೊಸ ಸ್ಥಾವರಗಳು ಅಥವಾ ಯಂತ್ರೋಪಕರಣಗಳನ್ನು ಸ್ಥಾಪಿಸಲು ಬಳಸಲಾಯಿತು.

ಈ ಹಣದಿಂದ ಸ್ಥಾವರಗಳು ಮತ್ತು ಕಾರ್ಖಾನೆಗಳು ಸ್ಥಾಪಿಸಲಾಗುತ್ತಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅದಿಲ್ಲವೆಂದಾದರೆ, ಉದ್ಯೋಗಗಳು ಹೇಗೆ ಸೃಷ್ಟಿಯಾಗುತ್ತವೆ?

ಆದರೆ ಎರಡು ದಶಕಗಳ ಹಿಂದೆ, ಐಪಿಒಗಳ ಮೂಲಕ ಸಂಗ್ರಹಿಸಿದ ಹಣದ ಹೆಚ್ಚಿನ ಭಾಗವನ್ನು ಸ್ಥಾವರಗಳು ಮತ್ತು ಕಾರ್ಖಾನೆಗಳನ್ನು ಸ್ಥಾಪಿಸಲು ಖರ್ಚು ಮಾಡಲಾಗಿತ್ತು. ಈಗ, ಅದು ಆಗುತ್ತಿಲ್ಲ, ಆದ್ದರಿಂದ ಉದ್ಯೋಗಗಳನ್ನು ಪಡೆಯಲು ಸಾಧ್ಯವಿಲ್ಲ.

ಮೋದಿ ಸರಕಾರವೇ ಲೋಕಸಭೆಯಲ್ಲಿ ಕೊಟ್ಟ ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಕಂಪೆನಿಗಳು ಮುಚ್ಚಲ್ಪಟ್ಟಿವೆ. ಮುಚ್ಚುವ ಕಂಪೆನಿಗಳಲ್ಲಿ ಕೆಲಸ ಮಾಡಿದ ಜನರು ಎಲ್ಲಿಗೆ ಹೋಗುತ್ತಾರೆ?

2 ಲಕ್ಷಕ್ಕೂ ಹೆಚ್ಚು ಕಂಪೆನಿಗಳನ್ನು ಮುಚ್ಚಿವೆಯೆಂದರೆ, ಕೋಟ್ಯಂತರ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿರಬೇಕು.

ಹೀಗೆಲ್ಲ ಇರುವಾಗ ಸರಕಾರ ಗಮನವನ್ನು ಬೇರೆಡೆಗೆ ಸೆಳೆಯುವ ಕೆಲಸವನ್ನು ತಪ್ಪದೆ ಮಾಡುತ್ತದೆ. ಹಾಗೆ ಗಮನ ಬೇರೆಡೆಗೆ ಸೆಳೆಯುವುದರ ಭಾಗವಾಗಿ, ರಾಜ್ಯಪಾಲರುಗಳ ನಿವಾಸಗಳನ್ನು ‘ಲೋಕ ಭವನ’ ಎಂದು ಮರುನಾಮಕರಣ ಮಾಡಲಾಯಿತು. ಅದರಿಂದ ಏನು ಬದಲಾಯಿತು, ಜನರಿಗೆ ಏನು ಉಪಯೋಗವಾಯಿತು ಎಂಬುದು ಯಾರಿಗೂ ತಿಳಿದಿಲ್ಲ. ಈಗ, ಪಿಎಂಒ ಸಂಕೀರ್ಣಕ್ಕೆ ‘ಸೇವಾ ತೀರ್ಥ’ ಎಂದು ಹೆಸರಿಡಲಾಗುವುದು ಎಂಬ ಹೊಸ ಸುದ್ದಿ ಬಂದಿದೆ.

ಇದನ್ನೇ ಸರಕಾರ ಮಾಡಿಕೊಂಡು ಕೂತರೆ, ಈ ಸರಕಾರ ಬರಲು ಮತ ಹಾಕಿದ, ಘೋಷಣೆ ಕೂಗಿದ, ಕಾರ್ಯಕರ್ತರಾಗಿ ದುಡಿದ ಕೋಟ್ಯಂತರ ನಿರುದ್ಯೋಗಿ ಉದ್ಯೋಗಾಕಾಂಕ್ಷಿಗಳ ಕಥೆಯೇನು?

ಅವರು ಫಾರಂಗಳನ್ನು ಭರ್ತಿ ಮಾಡುವುದು, ಕನಸು ಕಾಣುವುದು,

ಪರೀಕ್ಷೆಗಳಿಗಾಗಿ ಕಾಯುವುದು, ಪರೀಕ್ಷೆ ಬರೆಯುವುದು, ಉದ್ಯೋಗಕ್ಕಾಗಿ ಕಾಯುವುದು, ವಿವಿಧ ಕಂಪೆನಿಗಳಿಗೆ ರೆಸ್ಯೂಮ್‌ಗಳನ್ನು ಸಲ್ಲಿಸುವುದು ಇಷ್ಟರಲ್ಲೇ ಬದುಕು ಕಳೆಯಬೇಕೆ?

ಜನರು ತಮ್ಮ ಮೆದುಳನ್ನೇ ಬಳಸದಿರುವಾಗ, ಡಾಲರ್ ಎದುರು ರೂಪಾಯಿ 90ಕ್ಕೂ ಮೀರಿ ಕುಸಿದರೂ ಬಹಳ ಚೆಂದ ಕಾಣುತ್ತಿದೆ. ಅದನ್ನೂ ರೂಪಾಯಿ ಶತಕದ ಕಡೆಗೆ ದಾಪುಗಾಲು ಎಂದು ಸಂಭ್ರಮಿಸುವುದನ್ನೂ ಕಾಣುವ ಸಾಧ್ಯತೆ ಇರಬಹುದಲ್ಲವೇ?

share
ಅಜಿತ್ ಕೆ.ಸಿ.
ಅಜಿತ್ ಕೆ.ಸಿ.
Next Story
X