Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಮೆರಿಕದ ವಿರುದ್ಧ ಭಾರತ ಯಾಕೆ ದಿಟ್ಟತನ...

ಅಮೆರಿಕದ ವಿರುದ್ಧ ಭಾರತ ಯಾಕೆ ದಿಟ್ಟತನ ಪ್ರದರ್ಶಿಸುತ್ತಿಲ್ಲ?

ಪಿ.ಎಚ್. ಅರುಣ್ಪಿ.ಎಚ್. ಅರುಣ್7 Aug 2025 2:36 PM IST
share
ಅಮೆರಿಕದ ವಿರುದ್ಧ ಭಾರತ ಯಾಕೆ ದಿಟ್ಟತನ ಪ್ರದರ್ಶಿಸುತ್ತಿಲ್ಲ?

ಕೊನೆಗೂ ಭಾರತ ಟ್ರಂಪ್ ಬೆದರಿಕೆಗಳಿಗೆ ಪ್ರತಿಕ್ರಿಯಿಸಿದೆ.

ಆದರೆ ಪ್ರತಿಕ್ರಿಯೆಯನ್ನು ಪ್ರಧಾನಿ ಮೋದಿ ನೀಡಲಿಲ್ಲ, ವಿದೇಶಾಂಗ ಸಚಿವರು ಅಥವಾ ಹಣಕಾಸು ಸಚಿವರು ನೀಡಲಿಲ್ಲ. ವಿದೇಶಾಂಗ ಸಚಿವಾಲಯ ಪತ್ರಿಕಾ ಹೇಳಿಕೆ ಮೂಲಕ ಇದನ್ನು ನೀಡಿದೆ. ಆ ಪತ್ರಿಕಾ ಹೇಳಿಕೆಯಲ್ಲಿ ಕೂಡ ಟ್ರಂಪ್ ಹೆಸರು ಇಲ್ಲ.

ಟ್ರಂಪ್ ಭಾರತದ ಬಗ್ಗೆ ಅವಮಾನಕರ ರೀತಿಯಲ್ಲಿ ಏಕೆ ಮಾತನಾಡುತ್ತಿದ್ದಾರೆ, ಹಾಗಿರುವಾಗ ಪ್ರಧಾನಿ ಮೋದಿ, ಟ್ರಂಪ್ ಹೆಸರನ್ನು ಬಳಸಿ ಏಕೆ ಒಂದು ಮಾತನ್ನೂ ಹೇಳುವುದಿಲ್ಲ ಎಂದು ಜನರು ಕೇಳತೊಡಗಿದರು. ಇದರ ಹಿಂದಿನ ಕಾರಣವೇನಿರಬಹುದು ಎಂಬ ಅನುಮಾನಗಳೆದ್ದವು. ಅದಕ್ಕೆ ಪ್ರತಿಕ್ರಿಯೆಯಾಗಿ ಈ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಲೋಕಸಭೆಯಲ್ಲಿ ಕದನ ವಿರಾಮದ ಬಗ್ಗೆ ಟ್ರಂಪ್ ಹೆಸರು ಬಳಸಿ ಮೋದಿ ಮಾತನಾಡಲು ಸಾಧ್ಯವಾಗಲಿಲ್ಲ.

ಟ್ರಂಪ್ ಭಾರತದ ಮೇಲೆ ಶೇ. 25 ಸುಂಕ ವಿಧಿಸುವ ಬಗ್ಗೆ ಮಾತನಾಡಿದರು. ಭಾರತದ ವಿತ್ತೀಯವಲ್ಲದ ನೀತಿಗಳು ಅಸಹ್ಯಕರ ಎಂದು ಟ್ರಂಪ್ ಹೇಳಿದರು. ಪಾಕಿಸ್ತಾನದಿಂದ ಒಂದು ದಿನ ಭಾರತ ತೈಲ ಖರೀದಿಸಬೇಕಾಗುತ್ತದೆ ಎಂದು ಲೇವಡಿ ಮಾಡಿದರು. ಭಾರತದ ಆರ್ಥಿಕತೆಯನ್ನು ಸತ್ತ ಆರ್ಥಿಕತೆ ಎಂದರು.

ಇಷ್ಟಾದರೂ, ಇಲ್ಲಿಯವರೆಗೆ ಪ್ರಧಾನಿ ಮೋದಿ ಅಥವಾ ಯಾವುದೇ ಸಚಿವರು ಟ್ರಂಪ್ ಹೇಳಿಕೆಗೆ ಅವರ ಹೆಸರನ್ನು ತೆಗೆದುಕೊಂಡು ಪ್ರತಿಕ್ರಿಯಿಸಿಲ್ಲ.

ಹಲವು ಅವಮಾನಕರ ಹೇಳಿಕೆಗಳ ಬಗ್ಗೆ ಸರಕಾರ ಮೌನ ವಹಿಸಿದ ನಂತರ, ಆಗಸ್ಟ್ 4ರ ಪತ್ರಿಕಾ ಹೇಳಿಕೆ ಬಿಡುಗಡೆಯಾಗಿದೆ. ಮತ್ತಿದನ್ನು ಟ್ರಂಪ್‌ಗೆ ಸೂಕ್ತ ಉತ್ತರವೆಂದು ಘೋಷಿಸಲಾಗುತ್ತಿರುವಂತೆ ಕಾಣುತ್ತದೆ.

ಜುಲೈ 30ರಂದು ಟ್ರಂಪ್ ರಶ್ಯದಿಂದ ತೈಲ ಖರೀದಿಸುವುದರ ಮೇಲೆ ದಂಡ ವಿಧಿಸುವ ಬಗ್ಗೆ ಮಾತನಾಡಿದಾಗ, ಅದರ ನಂತರ ಭಾರತೀಯ ಕಂಪೆನಿಗಳು ರಶ್ಯದಿಂದ ತೈಲ ಖರೀದಿ ಕಡಿಮೆ ಮಾಡಿವೆ ಎಂಬ ಸುದ್ದಿಯನ್ನು ರಾಯ್ಟರ್ಸ್ ಪ್ರಕಟಿಸಿತು.

ಭಾರತೀಯ ಕಂಪೆನಿಗಳು ಹಾಗೆ ಮಾಡಿಲ್ಲ ಎಂದು ಅದೇ ದಿನ ಅಧಿಕೃತವಾಗಿ ನಿರಾಕರಿಸಬೇಕಾಗಿತ್ತು.

ಆದರೆ ಕೆಲ ದಿನಗಳ ನಂತರ ಸರಕಾರಿ ಮೂಲಗಳು ಎಚ್ಚೆತ್ತುಕೊಂಡು, ಭಾರತ ರಶ್ಯದಿಂದ ತೈಲ ಖರೀದಿ ಕಡಿಮೆ ಮಾಡುವುದಿಲ್ಲ ಎಂದಿದ್ದವು.

‘ಇಂಡಿಯನ್ ಎಕ್ಸ್‌ಪ್ರೆಸ್’ನ ಸುಕಲ್ಪ್ ಶರ್ಮಾ ಅವರ ವರದಿ, ದಂಡ ವಿಧಿಸುವ ಟ್ರಂಪ್ ಬೆದರಿಕೆಗೂ ಬಹಳ ಹಿಂದೆಯೇ, ಭಾರತ ರಶ್ಯದಿಂದ ತೈಲ ಖರೀದಿ ಕಡಿಮೆ ಮಾಡಲು ಪ್ರಾರಂಭಿಸಿತ್ತು ಎಂದು ಹೇಳುತ್ತದೆ.

ಸರಕಾರಿ ತೈಲ ಕಂಪೆನಿಗಳು ತೈಲ ಆಮದು ಕಡಿಮೆ ಮಾಡಿವೆ. ಜುಲೈ ತಿಂಗಳ ಡೇಟಾ ಪ್ರಕಾರ, ಭಾರತ ರಶ್ಯದಿಂದ ದಿನಕ್ಕೆ 16 ಲಕ್ಷ ಬ್ಯಾರೆಲ್‌ಗಳನ್ನು ಆಮದು ಮಾಡಿಕೊಂಡಿದೆ. ಇದು ಜೂನ್‌ಗಿಂತ ಶೇ. 24 ಕಡಿಮೆಯಾಗಿದೆ. ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಶೇ. 23.5 ಕಡಿಮೆ ಆಮದು ಮಾಡಿಕೊಳ್ಳಲಾಗಿದೆ.

ಆದರೆ ಅಮೆರಿಕದಿಂದ ತೈಲ ಆಮದು ಹೆಚ್ಚಾಗಿದೆ. ಜೂನ್‌ಗೆ ಹೋಲಿಸಿದರೆ ಭಾರತ ಜುಲೈನಲ್ಲಿ ಅಮೆರಿಕದಿಂದ ಶೇ. 20 ಹೆಚ್ಚು ತೈಲವನ್ನು ಆಮದು ಮಾಡಿಕೊಂಡಿದೆ.

ರಶ್ಯದಿಂದ ತೈಲ ಅಗ್ಗವಾಗಿ ಲಭ್ಯವಿರುವಾಗ ಅಲ್ಲಿಂದ ಆಮದು ಏಕೆ ಕಡಿಮೆಯಾಗುತ್ತಿದೆ ಎಂದು ಭಾರತ ಹೇಳಬೇಕು ಅಥವಾ ತೈಲ ಆಮದು ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಬೇಕು.

ರಾಷ್ಟ್ರೀಯ ಹಿತಾಸಕ್ತಿ ಮತ್ತು ಆರ್ಥಿಕ ಭದ್ರತೆ ಗಮನದಲ್ಲಿಟ್ಟುಕೊಂಡು ಭಾರತ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಇರುತ್ತದೆ ಎಂದು ಮೃದುವಾಗಿ ಹೇಳಲಾಗಿದೆ.

ತುರ್ಕಿಯ ವಿರುದ್ಧ ಪ್ರತಿಭಟನೆ ನಡೆಸಿ ರಾಷ್ಟ್ರೀಯತೆ ಪ್ರದರ್ಶಿಸುವುದಾದರೆ, ಚೀನಾ ಮತ್ತು ಅಮೆರಿಕದ ವಿರುದ್ಧ ಅದೇ ರೀತಿಯಲ್ಲಿ ಏಕೆ ಪ್ರತಿಭಟಿಸಲು ಸಾಧ್ಯವಿಲ್ಲ? ಅದರಲ್ಲೇನು ಸಮಸ್ಯೆಯಿದೆ? ಮತ್ತು ಪತ್ರಿಕಾ ಹೇಳಿಕೆ ಮೂಲಕ ಅದನ್ನು ಏಕೆ ಮಾಡುತ್ತಿದ್ದಾರೆ?

ಮೋದಿ ಹಿಂಬಾಲಕರು ಕೂಡ, ವಿಷಯ ತುರ್ಕಿಯಗೆ ಸಂಬಂಧಿಸಿದ್ದರೆ ಬಹಿಷ್ಕಾರ ಹಾಕುತ್ತಿದ್ದರು. ಅಲ್ಲಿಗೆ ಹೋಗುವವರನ್ನು ಅವರು ಖಂಡಿಸುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅವರ ಆರ್ಭಟ ಇರುತ್ತಿತ್ತು. ಆದರೆ ಇಲ್ಲಿ ಅಮೆರಿಕದ ಬಗ್ಗೆ ಅವರು ಏನನ್ನೂ ಹೇಳಲು ಸಾಧ್ಯವಿಲ್ಲ. ಬಹಿಷ್ಕಾರವಂತೂ ದೂರದ ಮಾತಾಯಿತು. ಮೋದಿಯೇ ಕದನ ವಿರಾಮದ ಬಗ್ಗೆ, ಸುಂಕದ ಬಗ್ಗೆ ಏನನ್ನೂ ಹೇಳಲು ಸಾಧ್ಯವಾಗದಿದ್ದಾಗ, ಟ್ರಂಪ್ ಹೆಸರನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದಾಗ, ಹಿಂಬಾಲಕರು ಏನು ಮಾಡಿಯಾರು?

ರಶ್ಯದಿಂದ ತೈಲ ಖರೀದಿಸಿದರೆ ಭಾರತದ ಮೇಲೆ ಸುಂಕ ಹೆಚ್ಚಿಸುವ ಬಗ್ಗೆ ಆಗಸ್ಟ್ 4ರಂದು ಟ್ರಂಪ್ ಮತ್ತೆ ಬೆದರಿಕೆ ಹಾಕಿದ್ದಾರೆ.

ಆಗಲೇ ಪ್ರಧಾನಿ, ಹಣಕಾಸು ಸಚಿವರು, ವಾಣಿಜ್ಯ ಸಚಿವರು ಮತ್ತು ವಿದೇಶಾಂಗ ಸಚಿವರೆಲ್ಲ ಪ್ರತಿಕ್ರಿಯೆ ನೀಡಬೇಕಿತ್ತು. ಆದರೆ ಅದನ್ನು ಬಿಟ್ಟು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಯಿತು. ಇದು ಭಾರತ ಸುಮ್ಮನಿಲ್ಲ ಎಂದು ಜನರಿಗೆ ತೋರಿಸಿಕೊಳ್ಳಲು ಮಾಡಿದಂತಿದೆ.

ಅತ್ತ ಟ್ರಂಪ್‌ಗೂ ಸರಕಾರ ದಿಟ್ಟ ಉತ್ತರ ಕೊಡುತ್ತಿಲ್ಲ. ಇತ್ತ ರಶ್ಯದಿಂದ ಭಾರತಕ್ಕೆ ಅಗ್ಗದ ಬೆಲೆಗೆ ತೈಲ ತರುತ್ತಿರುವಾಗ ಏಕೆ ಜನರು ಈಗಲೂ ಲೀಟರ್ ಪೆಟ್ರೋಲ್‌ಗೆ 100 ರೂ., 95 ರೂ. ಕೊಡಬೇಕಾಗಿದೆ ಎಂಬುದಕ್ಕೂ ಉತ್ತರವಿಲ್ಲ.

ರಶ್ಯದಿಂದ ಆಮದು ಮಾಡಿಕೊಳ್ಳುವ ಕಂಪೆನಿಗಳು ಎಷ್ಟು ಲಾಭ ಗಳಿಸಿದವು ಮತ್ತು ಭಾರತದ ಜನರು ಎಷ್ಟು ನಷ್ಟ ಅನುಭವಿಸಿದರು ಎಂಬುದನ್ನು ಸರಕಾರ ಹೇಳಬೇಕು.

ರಶ್ಯದೊಂದಿಗೆ ಮಾಡಿಕೊಳ್ಳುತ್ತಿರುವ ಒಪ್ಪಂದ ಸಾರ್ವಜನಿಕರ ಪ್ರಯೋಜನಕ್ಕಾಗಿಯೋ ಅಥವಾ ಕಂಪೆನಿಗಳ ಪ್ರಯೋಜನಕ್ಕಾಗಿಯೋ ಎಂಬುದು ಸ್ಪಷ್ಟವಾಗಬೇಕು.

ವಿಪರ್ಯಾಸವೆಂದರೆ, ಭಾರತದ ಜನರು ಸಾರ್ವಜನಿಕರಿಗೆ ಅಗ್ಗದ ಪೆಟ್ರೋಲ್ ನೀಡದ ಕಂಪೆನಿಗಳ ಪರವಾಗಿ ಟ್ರಂಪ್ ಅವರನ್ನು ವಿರೋಧಿಸಬೇಕಾಗಿದೆ.

ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸುತ್ತಿರುವ ತೈಲದ ಬಹುಪಾಲನ್ನು ಭಾರತ ಹೆಚ್ಚಿನ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ ಎಂದೂ ಟ್ರಂಪ್ ಆರೋಪಿಸುತ್ತಿದ್ದಾರೆ.

ರಶ್ಯದ ಯುದ್ಧ ಉಕ್ರೇನ್‌ನಲ್ಲಿ ಜನರ ಸಾವಿಗೆ ಕಾರಣವಾಗಿರುವುದರ ಬಗ್ಗೆ ಭಾರತಕ್ಕೆ ಕಳವಳ ಇಲ್ಲ. ಅದಕ್ಕಾಗಿ ಭಾರತದ ಮೇಲೆ ಸುಂಕವನ್ನು ಮತ್ತಷ್ಟು ಹೆಚ್ಚಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಬೆದರಿಕೆಗೆ ಈಗ ವಿದೇಶಾಂಗ ಸಚಿವಾಲಯ ಹೊರಡಿಸಿದ ಪತ್ರಿಕಾ ಹೇಳಿಕೆ ದಿಟ್ಟ ಉತ್ತರ ಎಂದು ಕೊಚ್ಚಿಕೊಳ್ಳಲಾಗುತ್ತಿದೆ. ತಮಾಷೆಯೆಂದರೆ, ಭಾರತವನ್ನು ಟೀಕಿಸುತ್ತಿರುವ ಅಮೆರಿಕವೇ ಸ್ವತಃ ರಶ್ಯದೊಂದಿಗೆ ವ್ಯವಹಾರ ಮಾಡುತ್ತಿದ್ದರೂ ಭಾರತ ತನ್ನನ್ನು ಸಮರ್ಥಿಸಿಕೊಳ್ಳಲು ಕಷ್ಟಪಡಬೇಕಾಗಿದೆ.

ರಶ್ಯದಿಂದ ಅಗ್ಗದ ತೈಲ ಆಮದಿನಿಂದ ಭಾರತೀಯ ಗ್ರಾಹಕರಿಗೆ ಲಾಭವಾಗಿಲ್ಲ ಎಂದಾದರೆ, ಭಾರತ ಸರಕಾರ ಏಕೆ ತನ್ನ ಗ್ರಾಹಕರ ನೆಪ ಮಾಡುತ್ತಿದೆ?

ಪೆಟ್ರೋಲ್ ಮೇಲೆ ವಿಧಿಸಲಾದ ಅಬಕಾರಿ ಸುಂಕದಿಂದ ಸರಕಾರದ ಖಜಾನೆ ತುಂಬುತ್ತಿದೆ ಮತ್ತು ಸಾಮಾನ್ಯ ಜನರ ಜೇಬು ಖಾಲಿಯಾಗುತ್ತಿದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಲಾದ ಅಬಕಾರಿ ಸುಂಕ ಮತ್ತಿತರ ತೆರಿಗೆಗಳ ಬಗ್ಗೆ ಲೋಕಸಭೆಯಲ್ಲಿ ಇದೇ ವರ್ಷ ಮಾರ್ಚ್‌ನಲ್ಲಿ ಪೆಟ್ರೋಲಿಯಂ ರಾಜ್ಯ ಸಚಿವ ಸುರೇಶ್ ಗೋಪಿ ವಿವರ ಕೊಟ್ಟಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಲಾದ ತೆರಿಗೆಯಿಂದ 2019-20ರಲ್ಲಿ 5,55,370 ಕೋಟಿ ರೂ.ಗಳಿಗೂ ಹೆಚ್ಚು ಸಂಗ್ರಹವಾಗಿದೆ.

2020-21 ರಲ್ಲಿ 6,72,719 ಕೋಟಿ ರೂ.ಗಳಿಗೂ ಹೆಚ್ಚು ಸಂಗ್ರಹವಾಗಿದೆ.

2021-22ರಲ್ಲಿ ಸುಮಾರು 7,74,425 ಕೋಟಿ ರೂ., 2022-23ರಲ್ಲಿ ಸುಮಾರು 7.5 ಲಕ್ಷ ಕೋಟಿ ರೂ., 2023-24ರಲ್ಲಿ 7 ಕೋಟಿ 51 ಲಕ್ಷ 156 ಕೋಟಿ ರೂ. ಸಂಗ್ರಹಿಸಲಾಗಿದೆ.

ಪೆಟ್ರೋಲ್‌ನಿಂದಾಗಿ ವಸ್ತುಗಳ ಬೆಲೆಗಳು ಹೆಚ್ಚಾದವು.ಹಣದುಬ್ಬರದಿಂದಾಗಿ ಭಾರತದ ಜನರ ಸ್ಥಿತಿ ಗಳಿಕೆಯಿಂದ ಉಳಿತಾಯದವರೆಗೆ ತುಂಬಾ ಕೆಟ್ಟದಾಗಿದೆ. ಈ ವಿಷಯ ತಿಳಿದಿರುವವರು ಶೇ. 25ರಿಂದ 50 ಅಗ್ಗದ ತೈಲ ಆಮದು ಮಾಡಿಕೊಂಡ ನಂತರವೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ ಎಂದು ಹೇಳುತ್ತಾರೆ.

ಫೆಬ್ರವರಿ 2022ರಲ್ಲಿ, ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 109.98 ರೂ. ಆಗಿತ್ತು. ಈಗಲೂ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 103.50 ರೂ. ಇದೆ. ಆದ್ದರಿಂದ ಭಾರತ ಸರಕಾರ ಯಾರಿಗಾಗಿ ಹೋರಾಟ ನಡೆಸುತ್ತಿದೆ ಎಂದು ಸ್ಪಷ್ಟಪಡಿಸಬೇಕು. ಅದು ಜನರಿಗಾಗಿ ಹೋರಾಡುತ್ತಿದ್ದರೆ, ಸಾರ್ವಜನಿಕರಿಗೆ ಏಕೆ ಪ್ರಯೋಜನವಾಗಲಿಲ್ಲ?

ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇತ್ ಅವರು,

ಭಾರತ ಸರಕಾರ ರಶ್ಯದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ 2,37,000 ಕೋಟಿ ರೂ. ಉಳಿಸಿದ್ದರೆ, ಭಾರತದ ಜನರಿಗೆ ಅದರ ಲಾಭ ಏಕೆ ಸಿಗಲಿಲ್ಲ ಎಂದು ಕೇಳಿದ್ದಾರೆ.

ಟ್ರಂಪ್ ಆದರೂ ವಿಶ್ವದ 17 ಔಷಧ ಕಂಪೆನಿಗಳ ಸಿಇಒಗಳಿಗೆ ಅಮೆರಿಕದಲ್ಲಿ ಔಷಧಿಗಳ ಬೆಲೆ ಕಡಿಮೆ ಮಾಡುವಂತೆ ಪತ್ರ ಬರೆದಿದ್ದಾರೆ. ಇದರಿಂದ ಅವರ ನಾಗರಿಕರ ಮೇಲಿನ ಹೊರೆ ಕಡಿಮೆಯಾಗುತ್ತದೆ. ಟ್ರಂಪ್ ಔಷಧ ಕಂಪೆನಿಗಳಿಗೆ 60 ದಿನಗಳ ಕಾಲಾವಕಾಶ ನೀಡಿದ್ದಾರೆ.

ಆದರೆ ಭಾರತದಲ್ಲಿ ಸರಕಾರವೇ ಕಂಪೆನಿಗಳನ್ನು ಸಮರ್ಥಿಸಿಕೊಳ್ಳುತ್ತಿದೆ ಮತ್ತು ಸಾರ್ವಜನಿಕರು ಈಗಲೂ ಲೀಟರ್ ಪೆಟ್ರೋಲ್‌ಗೆ 95ರಿಂದ 100ರೂ. ವರೆಗೆ ತೆರಬೇಕಾಗಿದೆ.

ಅಮೆರಿಕ ಮತ್ತು ಯುರೋಪ್ ಕೂಡ ರಶ್ಯದೊಂದಿಗೆ ವ್ಯವಹಾರ ಮಾಡುತ್ತಿವೆ ಎಂದು ಭಾರತ ಪತ್ರಿಕಾ ಟಿಪ್ಪಣಿಯಲ್ಲಿ ಸ್ಪಷ್ಟಪಡಿಸಿದೆ.

ವಾಸ್ತವವಾಗಿ, ಯುರೋಪಿಯನ್ ಒಕ್ಕೂಟ ರಶ್ಯದೊಂದಿಗೆ ಭಾರತಕ್ಕಿಂತಲೂ ಹೆಚ್ಚಿನ ವ್ಯವಹಾರ ಮಾಡುತ್ತಿದೆ.

ಯುರೋಪಿಯನ್ ಒಕ್ಕೂಟ ಮತ್ತು ಅಮೆರಿಕ ರಶ್ಯದಿಂದ ರಸಗೊಬ್ಬರಗಳು, ಗಣಿಗಾರಿಕೆ ಉತ್ಪನ್ನಗಳು, ರಾಸಾಯನಿಕಗಳು, ಕಬ್ಬಿಣ, ಉಕ್ಕು, ಸಾರಿಗೆ ಉಪಕರಣ ಗಳು ಇತ್ಯಾದಿಗಳನ್ನು ಆಮದು ಮಾಡಿಕೊಳ್ಳುತ್ತಿವೆ.

ರಶ್ಯದಿಂದ ತೈಲ ಆಮದು ಮಾಡಿಕೊಳ್ಳುವ ಕಾರಣ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಭಾರತವನ್ನು ಗುರಿಯಾಗಿಸಿಕೊಂಡಿವೆ.

ಉಕ್ರೇನ್‌ನೊಂದಿಗೆ ಯುದ್ಧ ಪ್ರಾರಂಭವಾದಾಗ ಮತ್ತು ಸಾಂಪ್ರದಾಯಿಕ ಸರಬರಾಜುಗಳು ಯುರೋಪ್ ಕಡೆಗೆ ಹೋಗತೊಡಗಿದಾಗ, ಭಾರತ ರಶ್ಯದಿಂದ ತೈಲ ತೆಗೆದುಕೊಳ್ಳಲು ಪ್ರಾರಂಭಿಸಬೇಕಾಯಿತು.

ಆ ಸಮಯದಲ್ಲಿ ಅಮೆರಿಕ ಕೂಡ ಭಾರತವನ್ನು ಹಾಗೆ ಮಾಡಲು ಪ್ರೋತ್ಸಾಹಿಸಿತ್ತು ಎಂದು ಪತ್ರಿಕಾ ಹೇಳಿಕೆಯಲ್ಲಿ ಬರೆಯಲಾಗಿದೆ. ಆದರೆ ಈ ಉತ್ತರ ಸಾಕಾಗಿದೆಯೇ?

ರಶ್ಯ ಅಧ್ಯಕ್ಷ ಪುಟಿನ್ ಟ್ರಂಪ್‌ಗೆ ಪ್ರತಿಕ್ರಿಯಿಸಲು ಹಿಂಜರಿಯುವುದಿಲ್ಲ. ಪುಟಿನ್ ಸ್ವತಃ ಮುಂದೆ ಬಂದು ಪ್ರತಿಕ್ರಿಯಿಸಿದರು. ಅವರು ಪತ್ರಿಕಾ ಟಿಪ್ಪಣಿ ನೀಡಲಿಲ್ಲ.ಹಾಗಾದರೆ, ಪ್ರಧಾನಿ ಮೋದಿ ಅದೇ ರೀತಿ ಮಾಡಲು ಸಾಧ್ಯವಿಲ್ಲವೇ?

ಉಕ್ರೇನ್ ಜೊತೆಗಿನ ಯುದ್ಧ ನಿಲ್ಲಿಸುವಂತೆ ಟ್ರಂಪ್ ಪುಟಿನ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಪುಟಿನ್ ಅವರ ಒತ್ತಡಕ್ಕೆ ಮಣಿಯುತ್ತಿಲ್ಲ. ಆದ್ದರಿಂದ ಟ್ರಂಪ್ ತೈಲ ಖರೀದಿ ಹೆಸರಿನಲ್ಲಿ ಭಾರತದ ಮೇಲೆ ಒತ್ತಡ ಹೇರುತ್ತಿದ್ದಾರೆ.

ಭಾರತ ರಶ್ಯದಿಂದ ತೈಲ ಖರೀದಿಸಬಾರದು ಎಂದು ಟ್ರಂಪ್ ಬಯಸುತ್ತಾರೆ. ಅದು ಅಮೆರಿಕದಿಂದ ಖರೀದಿಸಬೇಕು ಎಂಬುದು ಅವರ ಉದ್ದೇಶ.

ಆದರೆ, ಪ್ರಧಾನಿ ಮೋದಿ ಲೋಕಸಭೆಯಲ್ಲಿ ಇದಕ್ಕೆ ಉತ್ತರಿಸುತ್ತಿಲ್ಲ. ಅವರು ಟ್ರಂಪ್ ಹೆಸರನ್ನು ಹೇಳಲು ಸಾಧ್ಯವಾಗುತ್ತಿಲ್ಲ.

ಇದೇ ಟ್ರಂಪ್ ಕೆನಡಾದ ವಿವಿಧ ಪ್ರಾಂತಗಳಿಗೆ ಬೆದರಿಕೆ ಹಾಕುತ್ತಿದ್ದರು. ಆದರೆ ಕೆನಡಾದ ಎಲ್ಲಾ ಪ್ರಾಂತಗಳು ಬಹಿರಂಗವಾಗಿಯೇ ಪ್ರತಿವಾದ ಮಂಡಿಸಿದವು.

ತಮ್ಮ ಅಂಗಡಿಗಳಲ್ಲಿ ಅಮೆರಿಕನ್ ಮದ್ಯ ಮಾರಾಟಕ್ಕೆ ಅವಕಾಶ ಕೊಡುವುದಿಲ್ಲ ಎಂದು ಅವು ಸ್ಪಷ್ಟವಾಗಿ ಹೇಳಿದವು.

ಒಂದು ತಿಂಗಳೊಳಗೆ ಕೆನಡಾದಲ್ಲಿ ಅಮೆರಿಕನ್ ಮದ್ಯ ಮಾರಾಟ ಶೇ. 66ರಷ್ಟು ಕುಸಿಯಿತು.

ಒಂಟಾರಿಯೊ ಅಮೆರಿಕನ್ ಮದ್ಯಕ್ಕೆ ದೊಡ್ಡ ಮಾರುಕಟ್ಟೆಯಾಗಿದೆ. ಅಲ್ಲಿ ಅಮೆರಿಕನ್ ಮದ್ಯದ ಮಾರಾಟದಲ್ಲಿ ಶೇ. 80 ಕುಸಿತ ಕಂಡುಬಂದಿದೆ.

ಮಾರ್ಚ್‌ನಲ್ಲಿ ಟ್ರಂಪ್ ಸುಂಕ ವಿಧಿಸಿದಾಗ, ಒಂಟಾರಿಯೊದ ಮೇಯರ್ ಅಮೆರಿಕದ ಮೂರು ರಾಜ್ಯಗಳಿಗೆ ಸರಬರಾಜಾಗುವ ವಿದ್ಯುತ್ ಮೇಲಿನ ಸರ್‌ಚಾರ್ಜ್ ಅನ್ನು ಶೇ. 25 ಹೆಚ್ಚಿಸಿದರು. ಅಮೆರಿಕಕ್ಕೆ ವಿದ್ಯುತ್ ಸರಬರಾಜು ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇವೆ ಎಂದು ಅವರು ಹೇಳಿದರು.

ಆದರೆ ಭಾರತದ ಪತ್ರಿಕಾ ಹೇಳಿಕೆಯಲ್ಲಿ ಇಂಥ ಯಾವ ದಿಟ್ಟತನವೂ ಇಲ್ಲ.

ಯಾವುದೇ ಸಂದರ್ಭದಲ್ಲೂ ಭಾರತ ರಶ್ಯದಿಂದ ತೈಲ ಖರೀದಿ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೆ ಅದು ದಿಟ್ಟ ಉತ್ತರವಾಗಿರುತ್ತಿತ್ತು.

ಕಡೇಪಕ್ಷ, ರಶ್ಯ ಭಾರತದ ಸಾಂಪ್ರದಾಯಿಕ ಮಿತ್ರದೇಶವಾಗಿದೆ ಎಂದಾದರೂ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಬೇಕಿತ್ತು.

ಟ್ರಂಪ್ ಬ್ರೆಝಿಲ್ ಮೇಲೆ ಶೇ. 50 ಸುಂಕ ವಿಧಿಸಿದರು. ಇದರ ಬಗ್ಗೆ ಬ್ರೆಝಿಲ್ ಅಧ್ಯಕ್ಷರು ‘‘ಅಮೆರಿಕದಿಂದಾಗಿ ಬ್ರೆಜಿಲ್‌ನಲ್ಲಿ ದಂಗೆಗೆ ಕಾರಣವಾಯಿತು ಎಂಬುದನ್ನು ನಾವು ಎಂದಿಗೂ ಮರೆಯುವುದಿಲ್ಲ’’ ಎಂದು ಹೇಳಿದರು. ತಾವು ಡಾಲರ್‌ಗೆ ತಲೆಬಾಗುವುದಿಲ್ಲ ಮತ್ತು ಇತರ ಕರೆನ್ಸಿಗಳಲ್ಲಿ ವ್ಯಾಪಾರಕ್ಕಾಗಿ ದಾರಿ ಮುಕ್ತವಾಗಿಡಲು ಬಯಸುವುದಾಗಿ ಅವರು ಬಹಿರಂಗವಾಗಿ ಹೇಳಿದರು.

ಆದರೆ ಭಾರತ ಹೀಗೆ ಹೇಳುತ್ತಿಲ್ಲ.

ಬ್ರೆಝಿಲ್ ಟ್ರಂಪ್‌ರ ಒತ್ತಡಕ್ಕೆ ಒಳಗಾಗಲಿಲ್ಲ. ಚೀನಾ ಮಣಿಯಲಿಲ್ಲ. ಕೆನಡಾದ ಪ್ರಾಂತಗಳು ಅಮೆರಿಕಕ್ಕೆ ದಿಟ್ಟ ಉತ್ತರ ಕೊಟ್ಟವು. ಆದರೆ ಭಾರತ ಮಾತ್ರ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡುತ್ತಿದೆ.

ಮತ್ತದನ್ನು ಶಕ್ತಿಶಾಲಿ ಉತ್ತರ ಎಂದು ಮಡಿಲ ಮೀಡಿಯಾಗಳು ಹೆಡ್‌ಲೈನ್ ಆಗಿಸುವ ಕಸರತ್ತು ಮಾಡುತ್ತಿವೆ.

share
ಪಿ.ಎಚ್. ಅರುಣ್
ಪಿ.ಎಚ್. ಅರುಣ್
Next Story
X