Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಇಡೀ ಜಗತ್ತಿಗೇ ಸತ್ಯ ಗೊತ್ತಿದ್ದರೂ,...

ಇಡೀ ಜಗತ್ತಿಗೇ ಸತ್ಯ ಗೊತ್ತಿದ್ದರೂ, ಇಸ್ರೇಲ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿಲ್ಲ ಎಂದು ಏಕೆ ಸುಳ್ಳು ಹೇಳುತ್ತಿದೆ?

ವಾರ್ತಾಭಾರತಿವಾರ್ತಾಭಾರತಿ23 Jun 2025 11:59 AM IST
share
ಇಡೀ ಜಗತ್ತಿಗೇ ಸತ್ಯ ಗೊತ್ತಿದ್ದರೂ, ಇಸ್ರೇಲ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿಲ್ಲ ಎಂದು ಏಕೆ ಸುಳ್ಳು ಹೇಳುತ್ತಿದೆ?
ಶಾಂತಿಯುತ ಬಳಕೆಗೆ ಭರವಸೆ ನೀಡುವಂತೆ ಮತ್ತು ಅಂತರ್‌ರಾಷ್ಟ್ರೀಯ ತಪಾಸಣೆಗೆ ಒಪ್ಪಿಕೊಳ್ಳುವಂತೆ ಅವರು ಇಸ್ರೇಲ್ ಮೇಲೆ ಒತ್ತಡ ಹೇರಿದರು. ಆದರೆ ಅವರು ಒಪ್ಪಂದವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಸಾಧ್ಯವಾಗಲಿಲ್ಲ. ಹಾಗೆ ಮಾಡುವುದರಿಂದ ನೂರಾರು ಫ್ರೆಂಚ್ ಕಂಪೆನಿಗಳು ದಿವಾಳಿಯಾಗುತ್ತಿದ್ದವು ಮತ್ತು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಫ್ರೆಂಚ್ ಕಾರ್ಮಿಕರು ಉದ್ಯೋಗ ಇಲ್ಲದಂತಾಗುತ್ತಿದ್ದರು.

ಭಾಗ- 1

1948ರಲ್ಲಿ ಇಸ್ರೇಲ್ ರಚನೆಯಾದಾಗ, ಅದರ ಮೊದಲ ಪ್ರಧಾನಿ ಡೇವಿಡ್ ಬೆನ್-ಗುರಿಯನ್ ಅವರಿಗೆ ಒಂದು ಆತಂಕವಿತ್ತು. ಅವರು ಆಗಾಗ ರಾತ್ರಿಯಲ್ಲಿ ತನ್ನ ಕಚೇರಿಯಲ್ಲಿ ಎಚ್ಚರವಾಗಿರುತ್ತಿದ್ದರು. ಗೋಡೆಗಳ ಮೇಲಿನ ನಕ್ಷೆಗಳನ್ನು ದಿಟ್ಟಿಸುತ್ತಿದ್ದರು. ಒಂದು ಬದಿಯಲ್ಲಿ ಬೆರಳೆಣಿಕೆಯಷ್ಟು ಯಹೂದಿಗಳ ಹೊಸ ದೇಶವಿತ್ತು ಮತ್ತು ಎಲ್ಲಾ ಕಡೆಗಳಲ್ಲಿ ಬೃಹತ್ ಅರಬ್ ರಾಷ್ಟ್ರಗಳು ಅದನ್ನು ನಾಶಮಾಡಲು ಪಣ ತೊಟ್ಟಿದ್ದವು. ಅವರು ತಮ್ಮ ಸ್ವಂತ ಕಣ್ಣುಗಳಿಂದ ಹತ್ಯಾಕಾಂಡವನ್ನು ನೋಡಿದ್ದರು. ಹೊಸದಾಗಿ ಹುಟ್ಟಿದ ಇಸ್ರೇಲ್ ಹೆಚ್ಚು ಕಾಲ ಬದುಕುಳಿಯುವುದಿಲ್ಲ ಎಂದು ಅವರು ಹೆದರುತ್ತಿದ್ದರು. ಏಕೆಂದರೆ ಇಸ್ರೇಲ್‌ನ ಜನನಕ್ಕೆ ಕಾರಣವಾದ ಇಡೀ ಮಧ್ಯಪ್ರಾಚ್ಯದ ಸಂಕಟಗಳು ಉಳಿದ ಅರಬರು ಎಂದಿಗೂ ಮರೆಯಲಾಗದ ಅನೇಕ ವಿಷಯಗಳಿಗೆ ಕಾರಣವಾಗಿತ್ತು.

ಬೆನ್-ಗುರಿಯನ್ ಸಾಂಪ್ರದಾಯಿಕ ಮಿಲಿಟರಿ ಶಕ್ತಿಯನ್ನು ನಂಬಲಿಲ್ಲ. ಅರಬ್ ರಾಷ್ಟ್ರಗಳು ಯಾವಾಗಲೂ ಸಂಖ್ಯೆಯಲ್ಲಿ ಹೆಚ್ಚಾಗಿರುತ್ತವೆ ಮತ್ತು ಇಂದಲ್ಲದಿದ್ದರೆ ನಾಳೆ ಅವರು ಮತ್ತೆ ದಾಳಿ ಮಾಡುತ್ತಾರೆ ಎಂಬುದು ಅವರಿಗೆ ಗೊತ್ತಿತ್ತು. ಅವರಿಗೆ ಈ ಅಧಿಕಾರದ ಸಮೀಕರಣವನ್ನು ಶಾಶ್ವತವಾಗಿ ಬದಲಾಯಿಸುವ ಅಗತ್ಯವಿತ್ತು. ಶತ್ರುಗಳು ದಾಳಿ ಮಾಡುವ ಬಗ್ಗೆ ಯೋಚಿಸಲು ಸಹ ಬಿಡದ ಖಾತರಿ ಬೇಕಿತ್ತು. ಅವರಿಗೆ ಅಂತಿಮ ಆಯುಧ ಬೇಕಿತ್ತು.

ಮೈಕೆಲ್ ಕಪಿನ್ ತಮ್ಮ ಪುಸ್ತಕ ‘ದಿ ಬಾಂಬ್ ಇನ್ ದಿ ಬೇಸ್‌ಮೆಂಟ್’ನಲ್ಲಿ ಬೆನ್-ಗುರಿಯನ್‌ಗೆ ಪರಮಾಣು ಬಾಂಬ್ ಕೇವಲ ಮಿಲಿಟರಿ ಆಯುಧವಾಗಿರಲಿಲ್ಲ ಎಂದು ಬರೆಯುತ್ತಾರೆ. ಅವರು ಅದನ್ನು ಯಹೂದಿ ಜನರಿಗೆ ಅಸ್ತಿತ್ವದ ವಿಮೆ ಎಂದು ಪರಿಗಣಿಸಿದ್ದರು. ಅಂದರೆ, ಇಸ್ರೇಲ್ ಎಂದಿಗೂ ನಾಶವಾಗುವುದಿಲ್ಲ ಎಂಬ ಭರವಸೆ.

1948ರ ಯುದ್ಧದ ನಂತರ, ಬೆನ್-ಗುರಿಯನ್ ಇಸ್ರೇಲಿ ಸೈನ್ಯದೊಳಗೆ ಒಂದು ರಹಸ್ಯ ವೈಜ್ಞಾನಿಕ ಘಟಕ ಸ್ಥಾಪಿಸಿದರು. ಅದರ ಮೊದಲ ಕೆಲಸವೆಂದರೆ ಮರುಭೂಮಿಯನ್ನು ಸಂಪೂರ್ಣವಾಗಿ ಹುಡುಕುವುದು.

ಇಸ್ರೇಲಿ ಭೂವಿಜ್ಞಾನಿಗಳು ತಮ್ಮ ಕೈಯಲ್ಲಿ ಗೀಗರ್ ಕೌಂಟರ್‌ಗಳೊಂದಿಗೆ ಇಸ್ರೇಲ್‌ನ ಮರುಭೂಮಿಯಲ್ಲಿ ಸುತ್ತಾಡಿದರು.

ಯುರೇನಿಯಂನ ದೊಡ್ಡ ನಿಕ್ಷೇಪವೇ ಸಿಗುತ್ತದೆ ಎಂಬ ಭರವಸೆಯೊಂದಿಗೆ ಹೊರಟಿದ್ದ ಅವರಿಗೆ, ಫಾಸ್ಫೇಟ್ ಬಂಡೆಗಳಿಂದ ಯುರೇನಿಯಂನ ಕೆಲ ಸಣ್ಣ ಕಣಗಳಷ್ಟೆ ಸಿಕ್ಕಿದವು.

ಇಸ್ರೇಲ್ ಪರಮಾಣು ಶಕ್ತಿಯಾಗಲು ಬಯಸಿದರೆ, ಅದು ಹೊರಗಿನಿಂದ ಸಹಾಯ ಮತ್ತು ಕಚ್ಚಾ ವಸ್ತುಗಳನ್ನು ಪಡೆಯಬೇಕಾಗುತ್ತದೆ ಎಂಬುದು ಸ್ಪಷ್ಟವಾಯಿತು.

ಈ ಕನಸನ್ನು ನನಸಾಗಿಸಲು, ಬೆನ್-ಗುರಿಯನ್ ತನ್ನ ಅತ್ಯಂತ ವಿಶ್ವಾಸಾರ್ಹ ರಹಸ್ಯ ಸಲಹೆಗಾರರಾದ ಇಬ್ಬರನ್ನು ಆಯ್ಕೆ ಮಾಡಿಕೊಂಡರು.

ಮೊದಲನೆಯದಾಗಿ, ಜರ್ಮನಿಯಲ್ಲಿ ಜನಿಸಿದ ಡಾ. ಆರ್ನ್ ಡೇವಿಡ್ ಬರ್ಗ್‌ಮನ್. ಅವರು ನಾಝಿಗಳಿಂದ ತಪ್ಪಿಸಿಕೊಂಡು ಇಸ್ರೇಲ್‌ಗೆ ಬಂದ ಒಬ್ಬ ಅದ್ಭುತ ರಸಾಯನಶಾಸ್ತ್ರಜ್ಞರಾಗಿದ್ದರು.ಬರ್ಗ್‌ಮನ್ ಕೂಡ ಬೆನ್-ಗುರಿಯನ್‌ರಂತೆಯೇ ಕಾಣುತ್ತಿದ್ದರು. ಇಬ್ಬರದ್ದೂ ಒಂದೇ ರೀತಿಯ ಭಯವಾಗಿತ್ತು ಮತ್ತು ಇಬ್ಬರಲ್ಲೂ ಒಂದೇ ರೀತಿಯ ಉತ್ಸಾಹವಿತ್ತು.

ಬೆನ್-ಗುರಿಯನ್ 1952ರಲ್ಲಿ ಇಸ್ರೇಲ್ ಪರಮಾಣು ಶಕ್ತಿ ಆಯೋಗವನ್ನು (ಐಎಇಸಿ) ಸ್ಥಾಪಿಸಿದಾಗ, ಬರ್ಗ್‌ಮನ್ ಅವರನ್ನು ಅದರ ಮೊದಲ ಅಧ್ಯಕ್ಷರನ್ನಾಗಿ ಮಾಡಲಾಯಿತು.

ಬರ್ಗ್‌ಮನ್ ಅವರ ಕಚೇರಿ ರಕ್ಷಣಾ ಸಚಿವಾಲಯದೊಳಗಿನ ರಹಸ್ಯ ಸ್ಥಳದಲ್ಲಿತ್ತು ಮತ್ತು ಅವರು ನೇರವಾಗಿ ಬೆನ್-ಗುರಿಯನ್‌ಗೆ ವರದಿ ಮಾಡುತ್ತಿದ್ದರು.

ಇನ್ನೊಬ್ಬ ವ್ಯಕ್ತಿಯ ಹೆಸರು ಶಿಮೊನ್ ಪೆರೆಸ್.

ಕೇವಲ 29ನೇ ವಯಸ್ಸಿನಲ್ಲಿ ಶಿಮೊನ್ ಪೆರೆಸ್ ಅವರನ್ನು ಬೆನ್-ಗುರಿಯನ್ ರಕ್ಷಣಾ ಸಚಿವಾಲಯದ ಮಹಾನಿರ್ದೇಶಕರನ್ನಾಗಿ ಮಾಡಿದರು. ಅದು ಆ ಸಮಯದಲ್ಲಿ ಇಸ್ರೇಲ್‌ನಲ್ಲಿ ಅತ್ಯಂತ ಶಕ್ತಿಶಾಲಿ ಹುದ್ದೆಗಳಲ್ಲಿ ಒಂದಾಗಿತ್ತು.

ಈ ಇಬ್ಬರು ಇಸ್ರೇಲಿ ಪರಮಾಣು ಕಾರ್ಯಕ್ರಮದ ಅಡಿಪಾಯ ಹಾಕಿದರು.

ಮೊದಲು ಅಮೆರಿಕದ ಬಾಗಿಲು ತಟ್ಟಲಾಯಿತು. ಆಗಿನ ಅಮೆರಿಕದ ಅಧ್ಯಕ್ಷ ಡ್ವೈಟ್ ಡಿ ಐಸೆನ್‌ಹೋವರ್ ಅವರು ‘ಆಟಮ್ಸ್ ಫಾರ್ ಪೀಸ್’ ಎಂಬ ಕಾರ್ಯಕ್ರಮ ಪ್ರಾರಂಭಿಸಿದ್ದರು. ಈ ಕಾರ್ಯಕ್ರಮದ ಅಡಿಯಲ್ಲಿ ಇಸ್ರೇಲ್‌ಗೆ ಸಂಶೋಧನಾ ರಿಯಾಕ್ಟರ್ ಸಿಗುತ್ತದೆ ಎಂದು ಇಸ್ರೇಲ್ ಆಶಿಸಿತು.ಆದರೆ ಅಮೆರಿಕ ನಿರಾಕರಿಸಿತು.

ಇಂದು ನಾವು ಇಸ್ರೇಲ್ ಮತ್ತು ಅಮೆರಿಕವನ್ನು ಬಹಳ ಆಪ್ತ ಸ್ನೇಹಿತರು ಎಂದು ಪರಿಗಣಿಸುತ್ತೇವೆ. ಆದರೆ ಅದು ಯಾವಾಗಲೂ ಹೀಗಿರಲಿಲ್ಲ.

ಅಮೆರಿಕ ಇಸ್ರೇಲ್ ಸ್ಥಾಪನೆಯನ್ನು ಬೆಂಬಲಿಸಿ ತ್ತಾದರೂ, ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರ ರೂಪುಗೊಳ್ಳಲು ಕೆಲ ವರ್ಷಗಳೇ ಹಿಡಿದಿದ್ದವು. ಈಗ ಅದು ಬಹಳ ಗಟ್ಟಿಯಾಗಿ ಮುಂದುವರಿದಿದೆ.

ಅಮೆರಿಕ ನಿರಾಕರಿಸಿದಾಗ, ಬೆನ್-ಗುರಿಯನ್ ಅವರ ಅನುಮಾನಗಳು ನಿಜವಾದವು. ಇಸ್ರೇಲ್ ತನ್ನದೇ ಆದ ಯುದ್ಧ ಎದುರಿಸಬೇಕಾಗುತ್ತದೆ ಎಂದು ಅವರು ಅರ್ಥಮಾಡಿ ಕೊಂಡರು.

ಎಲ್ಲಾ ಕಡೆಯಿಂದ ಬಾಗಿಲುಗಳು ಮುಚ್ಚುತ್ತಿರುವುದನ್ನು ನೋಡಿ, ಇಸ್ರೇಲ್ ಅಂತರ್‌ರಾಷ್ಟ್ರೀಯ ವೇದಿಕೆಯಲ್ಲಿ ಪ್ರತ್ಯೇಕವಾಗುತ್ತಿರುವ ದೇಶದ ಕಡೆಗೆ ತನ್ನ ಕಣ್ಣುಗಳನ್ನು ತಿರುಗಿಸಿತು.

ಆ ದಿನಗಳಲ್ಲಿ ಈಜಿಪ್ಟ್‌ನೊಂದಿಗೆ ದ್ವೇಷ ಸಾಧಿಸಿದ ದೇಶ ಫ್ರಾನ್ಸ್. ಅಮೆರಿಕದ ನಿರಾಕರಣೆಯ ನಂತರ ಇಸ್ರೇಲ್, ಫ್ರಾನ್ಸ್‌ನಿಂದ ಸಹಾಯ ಕೋರಿತು. ಆ ಸಮಯದಲ್ಲಿ ಫ್ರಾನ್ಸ್ ಗಾಯಗೊಂಡ ಸಿಂಹದಂತಿತ್ತು.

1956ರ ಸೂಯೆಜ್ ಬಿಕ್ಕಟ್ಟು ಎಲ್ಲವನ್ನೂ ಬದಲಾಯಿಸಿತ್ತು. ಈಜಿಪ್ಟ್ ಅಧ್ಯಕ್ಷ ಜಮಾಲ್ ಅಬ್ದ್ದುಲ್ ನಾಸಿರ್ ಸೂಯೆಜ್ ಕಾಲುವೆ ವಶಪಡಿಸಿಕೊಂಡು ಅದನ್ನು ರಾಷ್ಟ್ರೀಕರಣಗೊಳಿಸಿದಾಗ ಪರಿಸ್ಥಿತಿ ಬದಲಾಗಿತ್ತು.

ಫ್ರಾನ್ಸ್ ಮತ್ತು ಬ್ರಿಟನ್ ಇಸ್ರೇಲ್ ಜೊತೆಗೆ ಸೇರಿ ಈಜಿಪ್ಟ್ ಮೇಲೆ ದಾಳಿ ಮಾಡಲು ರಹಸ್ಯ ಯೋಜನೆ ರೂಪಿಸಿದವು. ಈ ಸಭೆ ಪ್ಯಾರಿಸ್ ಬಳಿಯ ಸೆವ್ರೆಸ್ ಎಂಬ ಪಟ್ಟಣದಲ್ಲಿ ನಡೆಯಿತು.

ಫ್ರಾನ್ಸ್ ಮತ್ತು ಇಸ್ರೇಲ್ ನಡುವೆ ರಕ್ತ ಸಂಬಂಧ ಕುದುರಿದ್ದು ಈ ಸಭೆಯಲ್ಲಿ ಎಂಬುದು ‘ದಿ ಸ್ಯಾಮ್ಸನ್ ಆಪ್ಷನ್’ ಎಂಬ ಪುಸ್ತಕದಲ್ಲಿ ಉಲ್ಲೇಖಗೊಂಡಿದೆ.

ಆ ಸಮಯದಲ್ಲಿ ಇಸ್ರೇಲ್‌ನ ಕಟ್ಟಾ ಬೆಂಬಲಿಗರಾಗಿದ್ದ ರಕ್ಷಣಾ ಸಚಿವ ಮೌರಿಸ್ ಬೇಜೆಸ್ ಮನೋರಿ ಅವರಂತಹ ನಾಯಕರೊಂದಿಗೆ ಪೆರೆಸ್ ಸ್ನೇಹ ಬೆಳೆಸಿಕೊಂಡರು. ಪೆರೆಸ್ ಕೇವಲ ನಾಯಕರನ್ನು ಭೇಟಿಯಾಗಲಿಲ್ಲ. ಅವರು ಡಸೊನಂತಹ ವಾಯುಯಾನ ಕಂಪೆನಿಗಳ ಮಾಲಕರು ಮತ್ತು ಸ್ಯಾನ್ ಗೋಬೈನ್‌ನಂತಹ ಕಂಪೆನಿಗಳ ಮುಖ್ಯಸ್ಥರೊಂದಿಗೂ ಸ್ನೇಹ ಬೆಳೆಸುತ್ತಿದ್ದರು.

ಪರಮಾಣು ಕಾರ್ಯಕ್ರಮಕ್ಕೆ ಫ್ರಾನ್ಸ್‌ನ ಸಂಪೂರ್ಣ ಕೈಗಾರಿಕಾ ಶಕ್ತಿಯ ಬೆಂಬಲ ಬೇಕಾಗುತ್ತದೆ ಎಂದು ಅವರಿಗೆ ತಿಳಿದಿತ್ತು.

ಈ ಪಂದ್ಯದಲ್ಲಿ ಫ್ರಾನ್ಸ್‌ನ ಕಡೆಯ ಪ್ರಮುಖ ಆಟಗಾರರು ಪ್ರಧಾನಿ ಗಯ್ ಮೊಲ್ಲೆಟ್ ಮತ್ತು ರಕ್ಷಣಾ ಸಚಿವ ಬಾಜ್ ಮನೋರಿ. ಇಬ್ಬರೂ ಇಸ್ರೇಲ್ ಅನ್ನು ಬೆಂಬಲಿಸಲು ತಮ್ಮದೇ ಸರಕಾರವನ್ನು ಕತ್ತಲೆಯಲ್ಲಿಟ್ಟರು.

ಆ ಅವಧಿಯಲ್ಲಿ ಅರಬ್ ದೇಶಗಳ ಬೆಂಬಲಿಗ ಎಂದು ಪರಿಗಣಿಸಲ್ಪಟ್ಟಿದ್ದರಿಂದ ಫ್ರೆಂಚ್ ವಿದೇಶಾಂಗ ಸಚಿವಾಲಯಕ್ಕೆ ಈ ಒಪ್ಪಂದದ ಸುಳಿವು ನೀಡಿರಲಿಲ್ಲ ಎಂದು ಹೇಳಲಾಗುತ್ತದೆ. ಅಕ್ಟೋಬರ್ 1957ರಲ್ಲಿ ಸರಣಿ ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು ಎನ್ನಲಾಗುತ್ತದೆ.

ಒಪ್ಪಂದದಲ್ಲಿ, ಫ್ರಾನ್ಸ್ ಇಸ್ರೇಲ್‌ಗೆ 24 ಮೆಗಾವ್ಯಾಟ್ ಪರಮಾಣು ರಿಯಾಕ್ಟರ್ ನೀಡಲು ಒಪ್ಪಿಕೊಂಡಿತು. ಇದು ಸಂಶೋಧನೆ ದೃಷ್ಟಿಯಿಂದ ದೊಡ್ಡ ರಿಯಾಕ್ಟರ್ ಆಗಿದೆ.

ಇದರೊಂದಿಗೆ, ಪ್ಲುಟೋನಿಯಂ ಮರುಸಂಸ್ಕರಣಾ ಘಟಕದ ಸಂಪೂರ್ಣ ನೀಲನಕ್ಷೆ ಮತ್ತು ತಂತ್ರಜ್ಞಾನವನ್ನು ಸಹ ಅವರಿಗೆ ಹಸ್ತಾಂತರಿಸಲಾಯಿತು.

ಯುಎಸ್ ನಿರಾಕರಿಸಿದಾಗ ಫ್ರಾನ್ಸ್ ಏಕೆ ಅಂತಹ ದೊಡ್ಡ ಅಪಾಯವನ್ನು ತೆಗೆದುಕೊಂಡಿತು?

ಇದಕ್ಕೆ ಹಲವು ಕಾರಣಗಳಿದ್ದವು.

ಮೊದಲನೆಯದಾಗಿ, ಇದು ಈಜಿಪ್ಟ್‌ನ ನಾಸಿರ್ ವಿರುದ್ಧದ ಕಾರ್ಯತಂತ್ರದ ಮೈತ್ರಿಯಾಗಿತ್ತು. ಎರಡನೆಯದಾಗಿ, ಸೂಯೆಜ್‌ನಲ್ಲಿ ಅಮೆರಿಕದಿಂದ ದ್ರೋಹಕ್ಕೆ ಸೇಡು ತೀರಿಸಿಕೊಳ್ಳಲು ಇದು ಒಂದು ಮಾರ್ಗವಾಗಿತ್ತು. ಮೂರನೆಯದಾಗಿ, ಅಲ್ಜೀರಿಯಾದಲ್ಲಿ ನಡೆಯುತ್ತಿದ್ದ ಯುದ್ಧದಲ್ಲಿ ಬಲಿಷ್ಠ ಇಸ್ರೇಲ್ ಬಹುಶಃ ಸಹಾಯ ಮಾಡುತ್ತದೆ ಎಂದು ಫ್ರಾನ್ಸ್ ಆಶಿಸಿತ್ತು ಮತ್ತು ನಾಲ್ಕನೆಯದಾಗಿ, ಅದು ಲಾಭದಾಯಕ ಒಪ್ಪಂದವಾಗಿತ್ತು.

ಇಸ್ರೇಲ್ ಎಲ್ಲದಕ್ಕೂ ಹಣ ನೀಡುತ್ತಿತ್ತು. ಇದಕ್ಕಾಗಿ ಪ್ರಪಂಚದಾದ್ಯಂತದ ಯಹೂದಿ ಸಮುದಾಯ ನೀಡಿದ ದೇಣಿಗೆಗಳಿಂದ ಹಣ ಬರುತ್ತಿತ್ತು. ಎಲ್ಲವೂ ಯೋಜನೆಯ ಪ್ರಕಾರ ನಡೆಯುತ್ತಿತ್ತು.

ಆದರೆ 1958ರಲ್ಲಿ ಫ್ರೆಂಚ್ ರಾಜಕೀಯದಲ್ಲಿ ಬಿರುಗಾಳಿ ಎದ್ದಿತು. ಎರಡನೇ ಮಹಾಯುದ್ಧದ ಸಮಯದಲ್ಲಿ, ನಾಝಿಗಳು ಫ್ರಾನ್ಸ್ ಅನ್ನು ಆಕ್ರಮಿಸಿಕೊಡಾಗ ಜನರಲ್ ಚಾರ್ಲ್ ಡಿ ಗೌಲ್ ಫ್ರೆಂಚ್ ಪ್ರತಿರೋಧದ ಆಧಿಪತ್ಯ ವಹಿಸಿಕೊಂಡಿದ್ದರು. ನಂತರ ಅವರು ಅಧ್ಯಕ್ಷರಾದರು. ಅವರು 1958ರಲ್ಲಿ ಮತ್ತೆ ಅಧಿಕಾರಕ್ಕೆ ಮರಳಿದರು.

ಈ ರಹಸ್ಯ ಪರಮಾಣು ಒಪ್ಪಂದದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಾಗ ಅವರು ಕೋಪಗೊಂಡರು. ಪೆರೆಸ್ ಮತ್ತು ಅವರ ಫ್ರೆಂಚ್ ಸ್ನೇಹಿತರು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿದರು.

ಚಾರ್ಲ್ ಡಿ ಗೌಲ್ ಸಂಪೂರ್ಣ ನಿಯಂತ್ರಣ ತೆಗೆದುಕೊಳ್ಳುವ ಮೊದಲು ರಿಯಾಕ್ಟರ್ ಮತ್ತು ಸ್ಥಾವರದ ಹೆಚ್ಚಿನ ಪ್ರಮುಖ ಭಾಗಗಳು ಮತ್ತು ದಾಖಲೆಗಳನ್ನು ಇಸ್ರೇಲ್‌ಗೆ ತಲುಪಿಸುವುದು ಅವರ ಗುರಿಯಾಗಿತ್ತು.

ಹಡಗುಗಳನ್ನು ತುಂಬಿಸಿ, ನೀಲನಕ್ಷೆಗಳನ್ನು ರಾಜತಾಂತ್ರಿಕ ಚೀಲಗಳಲ್ಲಿ ತುಂಬಿಸಿ, ಕಸ್ಟಮ್ಸ್ ತಪಾಸಣೆಯಿಂದ ತಪ್ಪಿಸಿಕೊಳ್ಳಲು ತಂತ್ರ ಹೂಡಲಾಯಿತು.

ಚಾರ್ಲ್ ಡಿ ಗೌಲ್ ಒಪ್ಪಂದ ನಿಲ್ಲಿಸಲು ಪ್ರಯತ್ನಿಸಿದರು.

ಶಾಂತಿಯುತ ಬಳಕೆಗೆ ಭರವಸೆ ನೀಡುವಂತೆ ಮತ್ತು ಅಂತರ್‌ರಾಷ್ಟ್ರೀಯ ತಪಾಸಣೆಗೆ ಒಪ್ಪಿಕೊಳ್ಳುವಂತೆ ಅವರು ಇಸ್ರೇಲ್ ಮೇಲೆ ಒತ್ತಡ ಹೇರಿದರು. ಆದರೆ ಅವರು ಒಪ್ಪಂದವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಸಾಧ್ಯವಾಗಲಿಲ್ಲ. ಹಾಗೆ ಮಾಡುವುದರಿಂದ ನೂರಾರು ಫ್ರೆಂಚ್ ಕಂಪೆನಿಗಳು ದಿವಾಳಿಯಾಗುತ್ತಿದ್ದವು ಮತ್ತು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಫ್ರೆಂಚ್ ಕಾರ್ಮಿಕರು ಉದ್ಯೋಗ ಇಲ್ಲದಂತಾಗುತ್ತಿದ್ದರು.

ಅವರು ಬ್ರೇಕ್ ಹಾಕಲು ಬಯಸಿದರಾದರೂ ಆ ಹೊತ್ತಿಗೆ ಬಹಳ ತಡವಾಗಿತ್ತು. ರಿಯಾಕ್ಟರ್‌ನ ಭಾಗಗಳು ಇಸ್ರೇಲ್‌ನ ಮರುಭೂಮಿಯನ್ನು ತಲುಪಿದ್ದವು ಮತ್ತು ಬಾಂಬ್ ತಯಾರಿಸುವ ತಂತ್ರಜ್ಞಾನ ಇಸ್ರೇಲಿ ವಿಜ್ಞಾನಿಗಳ ಮೇಜಿನ ಮೇಲೆ ಇತ್ತು.

Khabargaon ಯೂಟ್ಯೂಬ್ ಚಾಲೆನ್‌ನ ನಿಖಿಲ್ ವಾತ್ ಅವರ ಅಲಿಫ್ ಲೈಲಾ

ಕಾರ್ಯಕ್ರಮ ಆಧಾರಿತ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X