Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಹಾತ್ಮಾ ಗಾಂಧಿ ಯಾಕೆ ಸದಾ...

ಮಹಾತ್ಮಾ ಗಾಂಧಿ ಯಾಕೆ ಸದಾ ಪ್ರಸ್ತುತರಾಗುತ್ತಾರೆ?

ಇಂದು ಗಾಂಧಿ ಜಯಂತಿ

ಕೆ.ಸಿ. ಶಂಕರ್, ಚಿಕ್ಕಮಗಳೂರುಕೆ.ಸಿ. ಶಂಕರ್, ಚಿಕ್ಕಮಗಳೂರು2 Oct 2026 9:40 AM IST
share
ಮಹಾತ್ಮಾ ಗಾಂಧಿ ಯಾಕೆ ಸದಾ ಪ್ರಸ್ತುತರಾಗುತ್ತಾರೆ?

ಗಾಂಧೀಜಿಯ ವ್ಯಕ್ತಿತ್ವ ಮತ್ತು ಚಿಂತನೆಗಳನ್ನು ವಿರೂಪಗೊಳಿಸುವ ವ್ಯವಸ್ಥಿತ ಹುನ್ನಾರ ನಿರಂತರವಾಗಿ ಇಂದು ನಮ್ಮ ದೇಶದಲ್ಲಿ ಕೋಮು, ಧರ್ಮಾಂಧ ಮತ್ತು ಭ್ರಷ್ಟ ಶಕ್ತಿಗಳಿಂದ ಆಗುತ್ತಿದೆ. ಇವತ್ತು ಬಹುಮುಖ್ಯವಾಗಿ ಯುವಕರನ್ನು ಈ ಹಿತಾಸಕ್ತಿಗಳು ದಾರಿ ತಪ್ಪಿಸುತ್ತಿವೆ. ಆದ್ದರಿಂದ ಇಂದಿನ ಯುವಕರಲ್ಲಿ ಗಾಂಧಿ ಚಿಂತನೆಯ ಅಧ್ಯಯನ ತುಂಬಾ ಅಗತ್ಯವಿದೆ. ಗಾಂಧೀಜಿ ಮತ್ತು ಗೌತಮ ಬುದ್ಧರು ಭಾರತದ ಎರಡು ಸದೃಢ ಧ್ರುವಶಕ್ತಿಗಳು. ಇವರ ಚಿಂತನೆಗಳು ಕ್ಷೀಣಿಸಿದರೆ ಭಾರತ ಕ್ಷಯಿಸುತ್ತದೆ. ಇಂದು ಜಗತ್ತು ಸಮಸ್ಯೆಗಳಿಗೆ ಗಾಂಧಿ ವಿಚಾರದ ಮೂಲಕ ಪರಿಹಾರವನ್ನು ಹುಡುಕುತ್ತಿದ್ದರೆ ನಾವು ಅವರ ಚಿಂತನೆಯಿಂದ ವಿಮುಖರಾಗುತ್ತಿರುವುದು ದೇಶದ ಭವಿಷ್ಯಕ್ಕೆ ಒಳ್ಳೆಯ ಸಂಕೇತವಲ್ಲ.

ಮಹಾತ್ಮಾ ಗಾಂಧೀಜಿಯವರ ಪ್ರಭಾವವೇನು ಎಂದು ಒಮ್ಮೆ ಜಾರ್ಜ್ ಬರ್ನಾಡ್‌ಷಾರವರಿಗೆ ಕೇಳಿದಾಗ, ಹಿಮಾಲಯ ಪರ್ವತದ ಪ್ರಭಾವದ ಬಗ್ಗೆ ಏನು ಹೇಳಲಿ ಎಂದರಂತೆ. ಗಾಂಧೀಜಿಯವರನ್ನು ಓದಿ ಅರ್ಥೈಸುವುದು ಎಂದರೆ ಆರು ಜನ ಕುರುಡರು ಆನೆಯನ್ನು ಮುಟ್ಟಿ ವಿವರಿಸಿದಂತೆ ಆಗುತ್ತದೆ. ವಿಪರ್ಯಾಸವೆಂದರೆ, ಗಾಂಧೀಜಿಯವರ ಬಗ್ಗೆ ಹೆಚ್ಚಿನ ಆಸಕ್ತಿ, ಅಧ್ಯಯನ ಮತ್ತು ಗ್ರಂಥ ರಚನೆಗಳು ವಿದೇಶದಲ್ಲಿಯೇ (ವಿಶೇಷವಾಗಿ ಯುರೋಪ್ ಮತ್ತು ಅಮೆರಿಕ) ಹೆಚ್ಚು, ಭಾರತದಲ್ಲಲ್ಲ. ಗಾಂಧಿ ಅಧ್ಯಯನದ ಶ್ರೇಷ್ಠ ಚಿಂತಕ ಬಿಕ್ಕು ಫಾರೇಕ್ ಹೇಳುವ ಹಾಗೆ ಗಾಂಧೀಜಿಯವರು ಭಾರತೀಯರಿಗಿಂತ ವಿದೇಶೀಯರಿಗೆ ಬಹಳ ಚೆನ್ನಾಗಿ ಅರ್ಥವಾಗುತ್ತಾರೆ. ಗಾಂಧೀಜಿಯವರನ್ನು ನಾವು ಉದಾಸೀನ ಮತ್ತು ನಿರಾಕರಣೆಯಿಂದಲೇ ಹೆಚ್ಚು ಗೌರವಿಸುತ್ತೇವೆ ಹೊರತು, ಅವರ ಪಾಲನೆಯಿಂದಲ್ಲ.

ವಿಶ್ವದಲ್ಲಿ ಇಂದಿಗೂ ಹಲವು ನಾಗರಿಕ ಹಕ್ಕು ಚಳವಳಿಗಳು, ಮಾನವ ಹಕ್ಕು ಚಳವಳಿಗಳು, ಪರಿಸರ ಸಂರಕ್ಷಣಾ ಆಂದೋಲನಗಳು ಮತ್ತು ಸರ್ವಾಧಿಕಾರದ ವಿರುದ್ಧದ ಹೋರಾಟಗಳಲ್ಲಿ ಗಾಂಧೀಜಿಯವರ ತತ್ವ, ಸಿದ್ಧಾಂತಗಳು ಸ್ಫೂರ್ತಿಯ ಶಕ್ತಿಗಳಾಗಿವೆ.

ಅವರು ದಕ್ಷಿಣ ಆಫ್ರಿಕಾದಲ್ಲಿ ಏಶ್ಯದ ಜನರ ಪರ ಆರಂಭಿಸಿದ ಜನಾಂಗೀಯ ಮತ್ತು ವರ್ಣಭೇದ ಶಾಸನ ವಿರುದ್ಧದ ಸಂಘಟನೆ ಮತ್ತು ಅಹಿಂಸಾತ್ಮಕ ಚಳವಳಿಗಳು ಆಗಲೇ ವಿಶ್ವದ ಮಹಾ ಚಿಂತಕರು ಮತ್ತು ಲೇಖಕರುಗಳಾದ ಆದ ಲಿಯೋ ಟಾಲ್ಸ್ ಟಾಯ್, ರೋಮೇನ್ ರೋಲ್ಯಾಂಡ್, ಜಾರ್ಜ್ ಬರ್ನಾಡ್ ಶಾ, ಸಿ.ಎಫ್. ಆಂಡ್ರುರಂತಹವರಿಂದ ಗಮನ ಸೆಳೆದು ಮೆಚ್ಚುಗೆಯನ್ನು ಪಡೆದಿದ್ದವು.

ದಕ್ಷಿಣ ಆಫ್ರಿಕಾದ 21 ವರ್ಷದ ಚಳವಳಿಯಲ್ಲಿ ವರ್ಣಭೇದ ಮತ್ತು ಜನಾಂಗೀಯ ತಾರತಮ್ಯ ವಿರುದ್ಧ ಹೋರಾಟದಲ್ಲಿ ಹೊಸ ಚೈತನ್ಯ ಮತ್ತು ಅಹಿಂಸಾ ಅಸ್ತ್ರದ ಬೆಳಕನ್ನು ಕೊಟ್ಟು ಜಗತ್ತಿನ ಮಹಾ ನಾಯಕರಾಗಿ ಹೊರಹೊಮ್ಮಿದರು. ಪ್ರಪಂಚದ ಮೊದಲನೇ ಮಹಾ ಯುದ್ಧದಿಂದ ಹಿಂಸೆ ಮತ್ತು ರಕ್ತದೋಕುಳಿಯಲ್ಲಿ ತೋಯಿಸಿದ್ದ ಜನರಿಗೆ ಗಾಂಧೀಜಿಯವರ ಸತ್ಯ ಮತ್ತು ಅಹಿಂಸಾ ಅಸ್ತ್ರಗಳು ಹೊಸ ಆಶಾಕಿರಣಗಳನ್ನು ಮೂಡಿಸಿದವು. ಇದಕ್ಕೆ ಸಾಕ್ಷಿಯಾದಂತೆ ಆ ಕಾಲಘಟ್ಟದಲ್ಲಿ ಅವರ ಹೋರಾಟವನ್ನು ಕುರಿತು ಜಗತ್ತಿನ ಶ್ರೇಷ್ಠ ಪತ್ರಿಕೆಗಳಾದ ‘ದ ಲಂಡನ್ ಟೈಮ್ಸ್, ನ್ಯೂಯಾರ್ಕ್ ಟೈಮ್ಸ್, ದ ಡೈಲಿ ಮೇಲ್‌ನಂತಹವುಗಳು ವರದಿ ಮಾಡುತ್ತಿದ್ದವು. ಗಾಂಧೀಜಿಯವರ ಈ ನಾಯಕತ್ವದ ಮಹತ್ವವನ್ನು ತಿಳಿದೇ ಅಂದೇ ಸ್ವಾತಂತ್ರ್ಯ ಚಳವಳಿಯ ಮಹಾನಾಯಕರಾದ ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆಯಂತಹವರು ಗಾಂಧೀಜಿಯವರು ಭಾರತಕ್ಕೆ ಬಂದು ಸ್ವಾತಂತ್ರ್ಯ ಚಳವಳಿಯ ಚುಕ್ಕಾಣಿ ಹಿಡಿಯುವ ಆಸೆಯನ್ನು ವ್ಯಕ್ತಪಡಿಸಿದ್ದರು.

ಆನಂತರ ಗಾಂಧೀಜಿಯವರ ತತ್ವ ಸಿದ್ಧಾಂತಗಳು ಮತ್ತು ಆದರ್ಶಗಳು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಯಾಸಿರ್ ಅರಾಫತ್, ನೆಲ್ಸನ್ ಮಂಡೇಲಾ, ಆಂಗ್ ಸ್ಯಾನ್ ಸೂಕಿ, ಅರ್ನೆ ನಾಸ್ (ನಾರ್ವೆಯ ಪರಿಸರ ತಜ್ಞ), ದಲಾಯಿಲಾಮ, ಗುನ್ನರ್ ಮೃದಲ್ (ಅರ್ಥಶಾಸ್ತ್ರಜ್ಞ) ಕೈಲಾಸ್ ಸತ್ಯಾರ್ಥಿ(ಮಕ್ಕಳ ಹಕ್ಕು ಹೋರಾಟಗಾರ) ಅವರಂತಹ ಹಲವು ಹೋರಾಟಗಾರರಿಗೆ, ನೊಬೆಲ್ ಪುರಸ್ಕೃತರಿಗೆ ಸ್ಫೂರ್ತಿದಾಯಕವಾದವು.

ಗಾಂಧೀಜಿಯವರು ಪ್ರತೀ ಮನುಷ್ಯನಲ್ಲೂ ಅಂತಃಕರಣ, ಸಾಕ್ಷಿ ಪ್ರಜ್ಞೆ ಮತ್ತು ಆತ್ಮಸಾಕ್ಷಿ ಅಂತರ್ಭೂತವಾಗಿರುತ್ತದೆ ಎಂದು ನಂಬಿದ್ದರು. ವಾತಾವರಣ ಮತ್ತು ಪರಿಪಾಲನೆಯ ಸ್ವರೂಪದ ಕಾರಣದಿಂದ ಮನುಷ್ಯನು ಮಾನವ ಪಥದಿಂದ ವಂಚಿತನಾಗುತ್ತಾನೆ. ಪರಿವರ್ತನೆ ಜಗದ ನಿಯಮ. ಪರಿವರ್ತನಾ ಸಾಮರ್ಥ್ಯ ಪ್ರತೀ ಮಾನವನಲ್ಲೂ ಇದೆ. ನಾವು ಶತ್ರುವಿನಲ್ಲೂ ಒಳ್ಳೆಯತನವನ್ನು ಕಂಡರೆ ನಮಗೆ ಶತ್ರುಗಳೇ ಇರುವುದಿಲ್ಲ. ಮನುಷ್ಯ ಸಂಬಂಧಗಳು ನಮ್ಮ ವೈಯಕ್ತಿಕ ನಡವಳಿಕೆಯ ಮೇಲೆ ಆಧಾರಿತವಾಗಿರುತ್ತದೆ. ನಾನು ಬದಲಾವಣೆಯಾದರೆ ಜಗತ್ತೇ ಬದಲಾವಣೆಯಾಗುತ್ತದೆ ಎಂದು ನಂಬಿದ್ದರು. ಸರಳತೆಯೇ ಅಧ್ಯಾತ್ಮ ಎಂದು ಜಗತ್ತಿಗೆ ತೋರಿಸಿಕೊಟ್ಟರು. ಅವರದ್ದು ಪ್ರಾಯೋಗಿಕ ಅಧ್ಯಾತ್ಮ ಅಥವಾ ವೇದಾಂತ. ಅಧ್ಯಾತ್ಮ ಎಂದರೆ ಗೊಡ್ಡು ಬೋಧನೆಯಲ್ಲ, ವಾದವಲ್ಲ. ಅದು ನಮ್ಮ ಪ್ರಾಯೋಗಿಕ ಬದುಕಿನಲ್ಲಿ ಸೂಸುವ ಪ್ರಭೆ. ಅವರು ಅಧ್ಯಾತ್ಮ ಚೈತನ್ಯಶಕ್ತಿಯನ್ನು ಅನ್ಯಾಯ ಮತ್ತು ಅಂಧಕಾರದ ವಿರುದ್ಧ ಹೋರಾಟದ ಅಸ್ತ್ರವನ್ನಾಗಿ ಪರಿವರ್ತಿಸಿದ್ದು ಮನುಕುಲದ ಇತಿಹಾಸದಲ್ಲೇ ಒಂದು ಹೊಸ ಮಾರ್ಗಸೂಚಿ.

ನಮ್ಮ ವಿಪರೀತ ಭೋಗ ಲಾಲಸೆಯ ಕಡಿತ ಮತ್ತು ಸಂಪತ್ತಿನ ಹಂಚಿಕೆಯಿಂದ ಮಾತ್ರ ನಾವು ಬಡತನವನ್ನು ನಿರ್ಮೂಲನ ಮಾಡಬಹುದೇ ಹೊರತು, ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನು ಲೂಟಿ ಮಾಡುವುಲ್ಲ ಎಂದು ಪ್ರತಿಪಾದಿಸಿದರು. ಒಬ್ಬನ ಹಸಿವು ಎಲ್ಲರ ಅವಮಾನ, ಅಹಂಕಾರ, ದುರಾಸೆ ಮತ್ತು ಪೈಪೋಟಿಗಳು ದಾರಿದ್ರ್ಯದ ಮೂಲಗಳು. ಆಧುನಿಕ ಯಂತ್ರಾಧಾರಿತ ಉತ್ಪಾದನೆ ಮಾನವನ ಆತ್ಮಹನನ ಮಾಡುತ್ತದೆ ಎಂದು ಪ್ರತಿಪಾದಿಸಿದರು.

ಬ್ರಿಟಿಷ್ ವಸಹಾತುವಿನಿಂದ ಭಾರತವನ್ನು ಮುಕ್ತಿ ಮಾಡುವುದು ಒಂದು ಗುರಿಯಾದರೆ, ದೇಶದ ಆಂತರಿಕ ವಸಹಾತು ಸಂಕೋಲೆಗಳಾದ-ಜಾತಿ, ಕೋಮುವಾದ ಅಸ್ಪಶ್ಯತೆ, ಸ್ತ್ರೀಶೋಷಣೆಗಳಿಂದ ಮುಕ್ತಿಗೊಳಿಸುವುದು ಇನ್ನೊಂದು ದೊಡ್ಡ ಧ್ಯೇಯವಾಗಿತ್ತು. ಈ ಪಿಡುಗುಗಳಿಂದ ಮುಕ್ತಿ ಪಡೆಯದೆ ಮತ್ತು ಹಿಂದೂ-ಮುಸ್ಲಿಮ್ ಸಾಮರಸ್ಯವನ್ನು ಸಾಧಿಸದೆ ಕೇವಲ ರಾಜಕೀಯ ಸ್ವಾತಂತ್ರ್ಯ ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗೆ ಎಂದು ನಂಬಿದ್ದರು.

ಸಂಕುಚಿತ ರಾಷ್ಟ್ರೀಯತೆಯು ವಿಶ್ವಶಾಂತಿಗೆ ಮಾರಕ. ಆಧುನಿಕ ರಾಷ್ಟ್ರ-ರಾಜ್ಯ ವ್ಯವಸ್ಥೆಯು ಯುದ್ಧ, ಹಿಂಸೆ, ಸ್ಪರ್ಧೆಯ ಮೇಲೆ ಆಧಾರಿತವಾಗಿದೆ. ಈ ವ್ಯವಸ್ಥೆಯು ಪ್ರಪಂಚದಲ್ಲಿ ಸ್ಥಿರ ಕ್ಷೋಭೆಯನ್ನು ಸೃಷ್ಟಿಸುತ್ತದೆ. ಅವರ ರಾಷ್ಟ್ರೀಯತೆಯು ‘ವಸುಧೈವ ಕುಟುಂಬಕಂ’, ‘ಮನುಜ ಕುಲ ತಾನೊಂದೇ ವಲಂ’ ಎಂಬ ಸಿದ್ಧಾಂತದ ನೆಲೆಯಲ್ಲಿದೆ.

ಗಾಂಧೀಜಿಯವರು ಸಾಮೂಹಿಕ ಉತ್ಪಾದನಾ ವ್ಯವಸ್ಥೆಯು (mass production) ಆರ್ಥಿಕ ಅಸಮಾನತೆಗೆ ಕಾರಣ ಎಂದಿದ್ದರು. ಅವರು ಅದರ ಬದಲು ಸಮೂಹದಿಂದ ಉತ್ಪಾದನಾ (production by masses) ವ್ಯವಸ್ಥೆಯು ಎಲ್ಲರಿಗೂ ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಬಲ್ಲದು ಎಂದು ಪ್ರತಿಪಾದಿಸಿದರು. ಇದನ್ನು ಚಿಕ್ಕ ಮತ್ತು ಗುಡಿ ಕೈಗಾರಿಕೆಗಳ ವರ್ಧನೆಯಿಂದ ಸಾಧಿಸಬಹುದು ಎಂದಿದ್ದರು. ಸಾಮೂಹಿಕ ಉತ್ಪಾದನೆಯು ಭೂಮಿಯ ಸಂಪತ್ತನ್ನು ವಿಕೃತವಾಗಿ ಶೋಷಣೆ ಮಾಡಿ, ಪರಿಸರ ವಿನಾಶಕ್ಕೆ ನಾಂದಿ ಹಾಡುತ್ತದೆ ಎಂದು ಅಂದೇ ಊಹಿಸಿದ್ದರು. ಅದು ಇಂದು ಸತ್ಯವಾಗಿದೆ.

ಗಾಂಧೀಜಿಯವರ ಶೈಕ್ಷಣಿಕ ಚಿಂತನೆಗಳು ಒಂದು ಸಮಗ್ರ ಮತ್ತು ವೈಜ್ಞಾನಿಕ ಚಿಂತನೆ. ಸಾಮಾಜಿಕ ಮತ್ತು ಆರ್ಥಿಕ ಸಾವಲಂಬನೆ, ಸಮಾನತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ನಿಜವಾಗಿಯೂ ಬುನಾದಿಯಾಗಿದೆ. ನೈತಾಲೀಮ್ ಶಿಕ್ಷಣ ವ್ಯವಸ್ಥೆಯಲ್ಲಿ 3R (ಓದು, ಬರಹ ಮತ್ತು ಲೆಕ್ಕ)ಗಳ ಸಿದ್ಧಿ ಪಡೆಯುವುದರ ಬದಲು 3H (ಬುದ್ಧಿ, ಹೃದಯವಂತಿಕೆ ಮತ್ತು ಕೌಶಲತೆ)ಗಳ ಸಿದ್ಧಿ ಪಡೆಯುವುದಾಗಿದೆ. ಮಾತೃಭಾಷಾ ಶಿಕ್ಷಣದಿಂದ ಮಾತ್ರ ಪರಿಪೂರ್ಣ ಶಿಕ್ಷಣ ಸಾಧ್ಯತೆ ಎಂದು ನಂಬಿದ್ದರು. ಇಂಗ್ಲಿಷ್ ಶಿಕ್ಷಣ ಭಾರತವನ್ನು ಸಾಂಸ್ಕೃತಿಕವಾಗಿ ಮತ್ತು ಬೌದ್ಧಿಕವಾಗಿ ದಿವಾಳಿ ಮಾಡುತ್ತದೆ ಎಂದು ನಂಬಿದ್ದರು. ಭಾರತದಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆಯ ಅಧೋೀಗತಿಗೆ ಗಾಂಧೀಜಿಯವರ ಶಿಕ್ಷಣ ಚಿಂತನೆಗಳನ್ನು ಕಡೆಗಣಿಸಿದ್ದೇ ಕಾರಣವಾಗಿದೆ.

ತಂತ್ರಜ್ಞಾನ ಮತ್ತು ಆಧುನಿಕತೆ ಭರಾಟೆಯಿಂದ ಧರ್ಮಾಂಧತೆ, ಅಹಿಂಸೆ ಮತ್ತು ಆಸಹಿಷ್ಣುತೆ ಬೆಳೆಯುತ್ತಿರುವುದು ಕಾಲತತ್ವದ ವಿಡಂಬನೆ. ಧಾರ್ಮಿಕ ಸಹಿಷ್ಣುತೆ ಮತ್ತು ಸೋದರತೆಯಿಂದ ಮಾತ್ರ ಸುಸ್ಥಿರ ಶಾಂತಿಯನ್ನು ಸ್ಥಾಪಿಸಲು ಸಾಧ್ಯ. ಗಾಂಧೀಜಿಯವರು ಜಾತಿ, ಧರ್ಮ ಮತ್ತು ವರ್ಗಗಳ ಪರದೆಗಳ ಸಂಕೋಲೆಯನ್ನು ಕಳಚಿಕೊಂಡ ಸ್ಥಿತಪ್ರಜ್ಞರು. ಜಗತ್ತಿನಲ್ಲಿ ಇಂದು ನಡೆಯುತ್ತಿರುವ ಯುದ್ಧ, ರಕ್ತಪಾತ, ಅಹಿಂಸೆಗಳಿಗೆ ಧರ್ಮಾಂಧತೆ ಮತ್ತು ಧಾರ್ಮಿಕ ಸಂಘರ್ಷಗಳೇ ಕಾರಣೀಭೂತವಾಗಿದೆ. ಈ ಶಾಪಗಳಿಂದ ಮುಕ್ತಿ ಪಡೆಯಲು ಗಾಂಧೀಜಿಯವರ ಚಿಂತನೆಯು ನಿಜವಾಗಲೂ ಸಂಜೀವಿನಿಯಾಗಿದೆ.

ಮಾನವನು ಪ್ರಕೃತಿಯ ಅಂಗ ಎಂಬುದನ್ನು ಮರೆತು, ಅಭಿವೃದ್ಧಿಯ ಹೆಸರಿನಲ್ಲಿ ಭೂಮಿಯನ್ನು ಬಗೆದು ವಿರೂಪಗೊಳಿಸಿರುವ ಪರಿಣಾಮವಾಗಿ ಬರಗಾಲ ಮತ್ತು ಹವಾಮಾನ ವೈಪರೀತ್ಯಗಳಿಂದ ಮನು ಕುಲವೇ ಅಳಿವಿನ ಅಂಚನ್ನು ತಲುಪಿದಂತೆ ಭಾಸವಾಗುತ್ತದೆ. ಆದ್ದರಿಂದ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವುದರಲ್ಲಿ ಗಾಂಧೀಜಿಯ ತತ್ವಗಳು ನಿಜವಾಗಿಯೂ ಸಂಜೀವಿನಿ ಆಗಬಲ್ಲದು ಎಂದು ನಾವು ಮನಗಾಣಬೇಕು.

ಲಿಯೋ ಟಾಲ್ಸ್‌ಟಾಯ್‌ರಂತೆ ಗಾಂಧೀಜಿಯವರಿಗೂ ನೊಬೆಲ್ ಪ್ರಶಸ್ತಿ ಸಿಗಲಿಲ್ಲ. ಆದರೆ ಗಾಂಧೀಜಿಯಿಂದ ಪ್ರೇರಿತರಾಗಿ ಅವರನ್ನೇ ಆದರ್ಶವನ್ನಾಗಿ ಇಟ್ಟುಕೊಂಡ ರೋಮೇನ್ ರೋಲ್ಯಾಂಡ್, ರವೀಂದ್ರನಾಥ ಟಾಗೋರ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಯಾಸಿರ್ ಅರಾಫತ್, ಗುನ್ನರ್ ಮೈರ್ಡಲ್, ನೆಲ್ಸನ್ ಮಂಡೇಲಾ, ದಲಾಯಿಲಾಮ, ಆಡೋಲ್ಫ್ ಪೆರ್ವೇಝ್ ಎಸ್ಕ್ವಿವೆಲ್, ಅಂಗ್ ಸ್ಯಾಂಗ್ ಸೂಕಿ ಮುಂತಾದವರಿಗೆ ನೊಬೆಲ್ ಪ್ರಶಸ್ತಿ ಬಂದಿರುವುದನ್ನು ಗಮನಿಸಿದರೆ, ಮಹಾತ್ಮಾ ಗಾಂಧೀಜಿಯವರಿಗೆ ಎಷ್ಟು ನೊಬೆಲ್ ಪ್ರಶಸ್ತಿ ಕೊಡಬಹುದು ಎಂದು ಅರಿವಾಗುತ್ತದೆ.

ಗಾಂಧೀಜಿಯ ವ್ಯಕ್ತಿತ್ವ ಮತ್ತು ಚಿಂತನೆಗಳನ್ನು ವಿರೂಪಗೊಳಿಸುವ ವ್ಯವಸ್ಥಿತ ಹುನ್ನಾರ ನಿರಂತರವಾಗಿ ಇಂದು ನಮ್ಮ ದೇಶದಲ್ಲಿ ಕೋಮು, ಧರ್ಮಾಂಧ ಮತ್ತು ಭ್ರಷ್ಟ ಶಕ್ತಿಗಳಿಂದ ಆಗುತ್ತಿದೆ. ಇವತ್ತು ಬಹುಮುಖ್ಯವಾಗಿ ಯುವಕರನ್ನು ಈ ಹಿತಾಸಕ್ತಿಗಳು ದಾರಿ ತಪ್ಪಿಸುತ್ತಿವೆ. ಆದ್ದರಿಂದ ಇಂದಿನ ಯುವಕರಲ್ಲಿ ಗಾಂಧಿ ಚಿಂತನೆಯ ಅಧ್ಯಯನ ತುಂಬಾ ಅಗತ್ಯವಿದೆ. ಗಾಂಧೀಜಿ ಮತ್ತು ಗೌತಮ ಬುದ್ಧರು ಭಾರತದ ಎರಡು ಸದೃಢ ಧ್ರುವಶಕ್ತಿಗಳು. ಇವರ ಚಿಂತನೆಗಳು ಕ್ಷೀಣಿಸಿದರೆ ಭಾರತ ಕ್ಷಯಿಸುತ್ತದೆ. ಇಂದು ಜಗತ್ತು ಸಮಸ್ಯೆಗಳಿಗೆ ಗಾಂಧಿ ವಿಚಾರದ ಮೂಲಕ ಪರಿಹಾರವನ್ನು ಹುಡುಕುತ್ತಿದ್ದರೆ ನಾವು ಅವರ ಚಿಂತನೆಯಿಂದ ವಿಮುಖರಾಗುತ್ತಿರುವುದು ದೇಶದ ಭವಿಷ್ಯಕ್ಕೆ ಒಳ್ಳೆಯ ಸಂಕೇತವಲ್ಲ.

Tags

Mahatma GandhiGandhi jayanthicommunal
share
ಕೆ.ಸಿ. ಶಂಕರ್, ಚಿಕ್ಕಮಗಳೂರು
ಕೆ.ಸಿ. ಶಂಕರ್, ಚಿಕ್ಕಮಗಳೂರು
Next Story
X